CM ಆಗಿ ಎಲ್ಲಾ 33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ ಎಂದ ಡಿಕೆಶಿ – Kannada News | CM Dk Shivakumar Talks after Inauguration of Newly installed 33 Spillway Gates at Tungabhadra Dam
ಕೊಪ್ಪಳ, (ಜೂನ್ 25): ಮುನಿರಾಬಾದ್ನಲ್ಲಿರುವ ತುಂಗಾಭದ್ರಾ ಜಲಾಶಯದ 33 ಗೇಟ್ಗಳನ್ನು ಬದಲಾಯಿಸಿ ಹೊಸ ಗೇಟ್ಗಳನ್ ಅಳವಡಿಸಲಾಗಿದ್ದು, ಇಂದು ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಸೇರಿಕೊಂಡು ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ನಾವು ಇವತ್ತು ತುಂಗಭದ್ರಾ ಜಲಾಶಯ ಕಾಪಾಡಿದ್ದೇವೆ.ಹೀಗಾಗಿ ಇವತ್ತು ನಮಗೆ ಹೆಮ್ಮೆಯ ದಿನ, ನಾನು ಅತ್ಯಂತ ಖುಷಿಯಾಗಿದ್ದೇನೆ. 19ನೇ ಗೇಟ್ ಕೊಚ್ಚಿಕೊಂಡು ಹೋದಾಗ ನನಗೆ ಕರೆ ಮಾಡಿದ್ದರು. ಅಂದು ಬೆಳಗ್ಗೆ 8.30ಕ್ಕೆ ಡ್ಯಾಂ ಬಳಿ ಬಂದು ಪರಿಶೀಲನೆ ಮಾಡಿದ್ದೆ. ದಿಟ್ಟ…