2026ರ ಮೇ 10ರಿಂದ 16ರವರೆಗೆ ಎರಡನೇ ವಾರದಲ್ಲಿ ಎಲ್ಲ ಗ್ರಹರು ರಾಹು ಮತ್ತು ಕೇತುವಿನಿಂದ ಬಂಧಿಸಲ್ಪಟ್ಟಿದ್ದಾರೆ. ಹಾಗಾಗಿ ಕಾರ್ಯದಲ್ಲಿ ಪೂರ್ಣ ಯಶಸ್ಸು ಸಿಗದೇ ಹೋಗಬಹುದು. ಫಲದಲ್ಲಿ ಹಿನ್ನಡೆಯಾದರೂ ಪ್ರಯತ್ನ ಸಾಗುತ್ತಿರಲಿ.
ಮೇಷ:
ಈ ವಾರ ನಿಮಗೆ ಹೊಸ ಹುರುಪು ಇರಲಿದೆ. ವೃತ್ತಿಯಲ್ಲಿ ಭಡ್ತಿಯ ಯೋಗವಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಎಚ್ಚರವಿರಲಿ. ಹಣಕಾಸಿನ ಹರಿವು ಉತ್ತಮವಾಗಿದ್ದು, ಹಳೆಯ ಸಾಲಗಳಿಂದ ಮುಕ್ತಿ ಪಡೆಯುವಿರಿ. ಸಂಗಾತಿಯೊಂದಿಗೆ ಮಧುರ ಸಮಯ ಕಳೆಯುವಿರಿ.
ವೃಷಭ:
ನಿಮ್ಮ ತಾಳ್ಮೆಯೇ ನಿಮ್ಮ ಶಕ್ತಿ. ಕೆಲಸದಲ್ಲಿ ಒತ್ತಡವಿದ್ದರೂ ಯಶಸ್ಸು ನಿಮ್ಮದಾಗಲಿದೆ. ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಈ ವಾರ ಸಕಾಲ. ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗುವ ಸಾಧ್ಯತೆಯಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ಉಳಿತಾಯದತ್ತ ಗಮನಹರಿಸಿ.
ಮಿಥುನ:
ನಿಮಗೆ ಮಾತು ಬೆಳ್ಳಿ, ಮೌನ ಬಂಗಾರ ಎಂಬುದು ನೆನಪಿರಲಿ. ವಿವಾದಗಳಿಂದ ದೂರವಿರಿ. ಉದ್ಯೋಗದಲ್ಲಿ ವರ್ಗಾವಣೆಯ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಏಕಾಗ್ರತೆ ಅಗತ್ಯ. ಪ್ರೀತಿಪಾತ್ರರಿಂದ ಅನಿರೀಕ್ಷಿತ ಉಡುಗೊರೆ ಲಭಿಸಲಿದೆ. ದೈಹಿಕ ವ್ಯಾಯಾಮದತ್ತ ಆಸಕ್ತಿ ತೋರುವಿರಿ.
ಕರ್ಕಾಟಕ:
ನಿಮ್ಮ ಭಾವನೆಗಳ ಮೇಲೆ ಹತೋಟಿಯಿರಲಿ. ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರದಲ್ಲಿ ಲಾಭದಾಯಕ ಒಪ್ಪಂದಗಳು ಕೈಗೂಡಲಿವೆ. ದೂರದ ಪ್ರಯಾಣದಿಂದ ಲಾಭವಿದೆ. ಹೊಸ ಸ್ನೇಹಿತರ ಪರಿಚಯವಾಗಲಿದ್ದು, ನಿಮ್ಮ ಕಾರ್ಯಗಳಿಗೆ ಅವರಿಂದ ಬೆಂಬಲ ಸಿಗಲಿದೆ.
ಸಿಂಹ:
ನಿಮ್ಮ ಆತ್ಮವಿಶ್ವಾಸ ಉತ್ತುಂಗದಲ್ಲಿರುತ್ತದೆ. ಕಚೇರಿಯಲ್ಲಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿವೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಗಳಾಗುವಿರಿ. ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಲಿದೆ. ವಾರದ ಅಂತ್ಯಕ್ಕೆ ಶುಭ ಸುದ್ದಿ ಕೇಳುವಿರಿ.
ಕನ್ಯಾ :
ಯೋಜನೆಗಳ ಅನುಷ್ಠಾನಕ್ಕೆ ಮುನ್ನಡೆಯುವಿರಿ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಿರಿ. ಚರ್ಮದ ಸಮಸ್ಯೆಗಳ ಬಗ್ಗೆ ಜಾಗ್ರತೆಯಿರಲಿ. ಕ್ರಿಯಾತ್ಮಕ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುವಿರಿ.
ತುಲಾ:
ನಿಮಗೆ ಬದುಕಿನಲ್ಲಿ ಸಮತೋಲನ ಕಾಯ್ದುಕೊಳ್ಳಲಾಗದು. ಸಂಗಾತಿಯ ಬೆಂಬಲದಿಂದ ಕಷ್ಟಗಳು ದೂರವಾಗಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹೊಸ ವಾಹನ ಖರೀದಿಸುವ ಯೋಗವಿದೆ. ಮನಸ್ಸಿಗೆ ಶಾಂತಿ ನೀಡುವ ಪ್ರವಾಸ ಕೈಗೊಳ್ಳಿ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಮನ್ನಣೆ ಸಿಗಲಿದೆ.
ವೃಶ್ಚಿಕ:
ರಹಸ್ಯ ಶತ್ರುಗಳ ಬಗ್ಗೆ ಜಾಗರೂಕರಾಗಿರಿ. ಕೆಲಸದಲ್ಲಿ ಅಡೆತಡೆಗಳು ಎದುರಾದರೂ ನಿಮ್ಮ ಧೈರ್ಯದಿಂದ ಜಯಿಸುವಿರಿ. ದೈಹಿಕ ಶ್ರಮ ಹೆಚ್ಚಾಗಬಹುದು. ಹಠಮಾರಿತನ ಬಿಟ್ಟು ಹೊಂದಾಣಿಕೆಯಿಂದ ನಡೆಯಿರಿ. ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸು ಹಗುರವಾಗಲಿದೆ. ಶಿವನ ಆರಾಧನೆ ಮಾಡಿ.
ಧನುಸ್ಸು:
ಭಾಗ್ಯೋದಯದವಾಗಲಿದೆ. ಕೈಗೆತ್ತಿಕೊಂಡ ಕೆಲಸಗಳು ಸುಸೂತ್ರವಾಗಿ ನೆರವೇರುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಲಿವೆ. ದೂರದ ಸಂಬಂಧಿಕರಿಂದ ಸಹಾಯ ದೊರೆಯಲಿದೆ. ಆರೋಗ್ಯ ಸುಧಾರಿಸಲಿದ್ದು, ಉತ್ಸಾಹದಿಂದ ಕೆಲಸ ಮಾಡುವಿರಿ.
ಮಕರ:
ಕೆಲಸದ ಹೊರೆ ಹೆಚ್ಚಾಗಲಿದೆ, ವಿಶ್ರಾಂತಿಗೆ ಸಮಯ ಮೀಸಲಿಡಿ. ಭೂಮಿ ಸಂಬಂಧಿತ ವ್ಯವಹಾರಗಳಲ್ಲಿ ಜಾಗ್ರತೆಯಿರಲಿ. ಮಕ್ಕಳ ಸಾಧನೆಯಿಂದ ಹೆಮ್ಮೆ ಪಡುವಿರಿ. ನಿಮ್ಮ ಮೃದು ಸ್ವಭಾವದಿಂದ ಎಲ್ಲರ ಮನ ಗೆಲ್ಲುವಿರಿ. ವಾರದ ಮಧ್ಯಭಾಗದಲ್ಲಿ ಆರ್ಥಿಕವಾಗಿ ಸ್ವಲ್ಪ ಬಿಕ್ಕಟ್ಟು ಎದುರಾಗಬಹುದು.
ಕುಂಭ :
ಹೊಸ ಆಲೋಚನೆಗಳು ಫಲ ನೀಡಲಿವೆ. ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಿರಿ. ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಪ್ರೇಮ ಜೀವನದಲ್ಲಿ ಸುಧಾರಣೆ ಕಂಡುಬರಲಿದೆ. ಆರೋಗ್ಯದಲ್ಲಿ ಚೇತರಿಕೆ ಇರಲಿದೆ.
ಮೀನ:
ಕನಸುಗಳು ನನಸಾಗುವ ಸಮಯ. ಅನಿರೀಕ್ಷಿತ ಧನಲಾಭದ ಯೋಗವಿದೆ. ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ವಿದೇಶ ಪ್ರಯಾಣದ ಆಸೆ ಈಡೇರಬಹುದು. ನಿಮ್ಮ ಕ್ರಿಯಾಶೀಲತೆಗೆ ಸೂಕ್ತ ವೇದಿಕೆ ದೊರೆಯಲಿದೆ. ಶಿಸ್ತಿನ ಜೀವನಶೈಲಿಯನ್ನು ರೂಢಿಸಿಕೊಳ್ಳಿ. ದಾನಧರ್ಮಗಳಲ್ಲಿ ಆಸಕ್ತಿ ತೋರುವಿರಿ.
– ಲೋಹಿತ ಹೆಬ್ಬಾರ್