ಫ್ಯಾನ್ಸ್ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ: ಹುಟ್ಟುಹಬ್ಬಕ್ಕೂ ಮುನ್ನ ಯಶ್ ಸಂದೇಶ – Kannada News | Toxic movie star Yash says he is not meeting his fans on birthday on 2026 Jan 8

ನಟ ರಾಕಿಂಗ್ ಯಶ್ ಅವರಿಗೆ ಜನವರಿ 8ರಂದು ಹುಟ್ಟುಹಬ್ಬದ (Yash Birthday) ಸಂಭ್ರಮ. ಆದರೆ ಈ ಬಾರಿ ಕೂಡ ಅವರು ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಲು ಸಾಧ್ಯವಾಗುತ್ತಿಲ್ಲ. ಒಂದು ದಿನ ಮೊದಲೇ ಅವರು ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ‘ನನ್ನ ಪ್ರೀತಿಯ ಅಭಿಮಾನಿಗಳೇ, ನಿಜ ಹೇಳಬೇಕೆಂದರೆ, ಕಳೆದ ಕೆಲವು ವರ್ಷಗಳಿಂದ ನೀವು ನನ್ನನ್ನು ಭೇಟಿಯಾಗಲು ಎಷ್ಟು ಕಾಯುತ್ತಿದ್ದೀರಿ ಎಂದು ನನಗೆ ಚೆನ್ನಾಗಿ ತಿಳಿದಿದೆ. ನನ್ನನ್ನು ನಂಬಿರಿ, ನಿಮ್ಮೆಲ್ಲರನ್ನೂ ನೋಡಲು ನಾನು ಅಷ್ಟೇ ಹಾತೊರೆಯುತ್ತಿದ್ದೆ’ ಎಂದು ಯಶ್ (Yash) ಅವರು ಬರಹ ಆರಂಭಿಸಿದ್ದಾರೆ.

‘ಈ ವರ್ಷ ನನ್ನ ಹುಟ್ಟುಹಬ್ಬದಂದು ನಿಮ್ಮನ್ನು ಭೇಟಿಯಾಗಲು ನಾನು ನಿಜವಾಗಿಯೂ ಬಯಸಿದ್ದೆ. ಆದರೆ 2026ರ ಮಾರ್ಚ್ 19ರಂದು ನಿಮಗಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಸಲುವಾಗಿ ನಾನು ಈ ಚಿತ್ರದ ಕೆಲಸಗಳಲ್ಲಿ ಸಂಪೂರ್ಣವಾಗಿ ಮಗ್ನನಾಗಿದ್ದೇನೆ. ಈ ಕಾರಣದಿಂದಾಗಿ ನಾನು ಈಗ ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗುವುದಿಲ್ಲ’ ಎಂದು ಯಶ್ ಹೇಳಿದ್ದಾರೆ.

‘ನಾವು ಈಗ ಭೇಟಿಯಾಗಲು ಸಾಧ್ಯವಾಗದಿದ್ದರೂ, ನಾವು ಶೀಘ್ರದಲ್ಲೇ ಇನ್ನೂ ದೊಡ್ಡ ರೀತಿಯಲ್ಲಿ ಭೇಟಿಯಾಗುತ್ತೇವೆ ಎಂದು ಭರವಸೆ ನೀಡುತ್ತೇನೆ. ಈ ಮಧ್ಯೆ, ನಿಮ್ಮೆಲ್ಲರ ಶುಭಾಶಯಗಳನ್ನು ನಾನು ವೈಯಕ್ತಿಕವಾಗಿ ಪರಿಶೀಲಿಸುತ್ತೇನೆ ಮತ್ತು ನೀವು ಕಳುಹಿಸುವ ಪ್ರೀತಿಯನ್ನು ಸ್ವೀಕರಿಸುವೆ’ ಎಂದು ಯಶ್ ಅವರು ಇನ್​ಸ್ಟಾಗ್ರಾಮ್ ಸ್ಟೋರಿ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ಯಶ್ ಅವರು ‘ಕೆಜಿಎಫ್: ಚಾಪ್ಟರ್ 2’ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದರು. ಅವರಿಗೆ ಈಗ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಭಾರಿ ಬಜೆಟ್​​ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಯಶ್ ಜನ್ಮದಿನದ ಪ್ರಯುಕ್ತ ಈ ಚಿತ್ರತಂಡದಿಂದ ಅಪ್​ಡೇಟ್ ಸಿಗಲಿದೆ. ಅದಕ್ಕಾಗಿ ಕಾತರ ಹೆಚ್ಚಾಗಿದೆ.

ಇದನ್ನೂ ಓದಿ: ‘ರಾಕಿಂಗ್ ಸ್ಟಾರ್’ ಯಶ್ ಹುಟ್ಟುಹಬ್ಬಕ್ಕೆ ರಾಜ್ಯಾದ್ಯಂತ ರಾರಾಜಿಸುತ್ತಿರುವ ಬಿಲ್​ಬೋರ್ಡ್​

ಗೀತು ಮೋಹನ್​ದಾಸ್ ಅವರು ‘ಟಾಕ್ಸಿಕ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಯಶ್ ಜೊತೆ ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ, ನಯನತಾರಾ, ಕಿಯಾರಾ ಅಡ್ವಾಣಿ ಮುಂತಾದವರು ನಟಿಸುತ್ತಿದ್ದಾರೆ. ನಟಿಯರ ಫಸ್ಟ್ ಲುಕ್ ಪೋಸ್ಟರ್​​ಗಳು ಈಗಾಗಲೇ ಬಿಡುಗಡೆ ಆಗಿವೆ. ಈಗ ಯಶ್ ಪಾತ್ರದ ಬಗ್ಗೆ ತಿಳಿಯಲು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು ಪಬ್​​ನಲ್ಲಿ ಮಹಿಳೆಯ ಸೊಂಟದ ಕೆಳಗೆ ಹೊಡೆದ ವ್ಯಕ್ತಿ, ಮುಂದೇನಾಯಿತು ನೋಡಿ? – Kannada News | Bengaluru Pub Harassment: Female Technician Assaulted, Justice Denied

ಬೆಂಗಳೂರು, ಜ.7: ಬೆಂಗಳೂರಿನ ಪಬ್​​ನಲ್ಲಿ ಮಹಿಳಾ ಪೈರೋ ಟೆಕ್ನಿಷಿಯನ್ ಮೇಲೆ ಲೈಂಗಿಕ ಕಿರುಕುಳ ನಡೆದಿದೆ (Bengaluru pub harassment). ಹೊಸ ವರ್ಷದ ವೇಳೆ ಈ ಘಟನೆ ನಡೆದಿದೆ. ಇದೀಗ ಈ ಸುದ್ದಿ ಭಾರೀ ತಡವಾಗಿ ಬೆಳಕಿಗೆ ಬಂದಿದೆ. ಮಹಿಳಾ ಪೈರೋ ಟೆಕ್ನಿಷಿಯನ್​​​ ಜತೆಗೆ ಗ್ರಾಹಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪಬ್​​ಗೆ ಬಂದಿದ್ದ ಗ್ರಾಹಕ ಮಹಿಳೆಯ ಸೊಂಟದ ಕೆಳಗೆ ಹೊಡೆದಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಪಬ್​​ ಸಿಬ್ಬಂದಿ ಹಾಗೂ ಬೌನ್ಸರ್​​​ಗೆ​​​​​​ ಹೇಳಿದ್ರೂ, ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ. ರಾತ್ರಿ 10:15 ರ ಸುಮಾರಿಗೆ ಈ ಘಟನೆ ನಡೆದಿದ್ದು, ವೇದಿಕೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ನಾಗರಾಜು ಎಂಬ ವ್ಯಕ್ತಿ ತನ್ನ ಸೊಂಟದ ಕೆಳಗೆ ಹೊಡೆದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಆ ವ್ಯಕ್ತಿಯ ಅನುಚಿತ ಸ್ಪರ್ಶವನ್ನು ನೋಡಿದ ಆಕೆಯ ಸ್ನೇಹಿತೆಯರು ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಆ ಮಹಿಳೆ ಕೂಡ ಹೊಡೆದಿದ್ದಾಳೆ ಎಂದು ಹೇಳಲಾಗಿದೆ. ಆ ವ್ಯಕ್ತಿಯೂ ಅಲ್ಲಿಂದ ಓಡಿ ಹೋಗಲು ಮುಂದಾಗಿದ್ದ, ತಕ್ಷಣ ಮಹಿಳೆ ಜತೆಗಿದ್ದ ಇತರ ಮಹಿಳೆಯರು ಹಿಡಿದು ಥಳಿಸಿದ್ದಾರೆ. ನಂತರ ಬೌನ್ಸರ್​​ಗಳನ್ನು ಕರೆದಿದ್ದಾರೆ. ಆದರೆ ಅವರು ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ. ಇನ್ನು ಆತನ ಜತೆಗೆ ಬಂದು ಸ್ನೇಹಿತ ಮಹಿಳೆಯರಿಗೆ ಬೆದರಿಕೆ ಹಾಕಿದ್ದಾನೆ. ಪಬ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮತ್ತು ಬೌನ್ಸರ್‌ಗಳು ಸಹಾಯ ಕೇಳಿದ್ರೂ, ಘಟನಾ ಸ್ಥಳಕ್ಕೆ ತಡವಾಗಿ ಬಂದಿದ್ದಾರೆ.

ಇದನ್ನೂ ಓದಿ: ಹೆಣ್ಣು ತಾಯಿಯಾಗುವುದು ದುರ್ಬಲತೆಯೇ? 30 ಲಕ್ಷ ರೂ. ಸಂಬಳದ ಉದ್ಯೋಗ ನಿರಾಕರಿಸಿದ ಬೆಂಗಳೂರಿನ ಮಹಿಳೆ

ಈ ಬಗ್ಗೆ ಪಬ್​​​​ ಆಡಳಿತ ಮಂಡಳಿಗೆ ಹೇಳಿದ್ದಾರೆ “ನಮಗೆ ನ್ಯಾಯ ನೀಡಬೇಕು ಎಂದು ಕೇಳಿಕೊಂಡೆವು, ಆದರೆ ಅವರು ಆ ವ್ಯಕ್ತಿಯಿಂದ ಕ್ಷಮೆ ಕೇಳಿಸಿ, ಸಮಸ್ಯೆಯನ್ನು ಇತ್ಯರ್ಥಪಡಿಸಲು ಪ್ರಯತ್ನಿಸಿದ್ದಾರೆ. ಆಡಳಿತ ಮಂಡಳಿಯ ಪ್ರತಿಕ್ರಿಯೆ ತುಂಬಾ ಭಯಾನಕವಾಗಿತ್ತು ಎಂದು ಹೇಳಿದ್ದಾರೆ. ನಂತರ ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಶಂಕಿತನನ್ನು ಜೀವನ್ ಭೀಮಾ ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಈ ವೇಳೆ ಪೊಲೀಸ್​​ ಠಾಣೆಗೆ ನಾವು ಪಬ್​​​​ನಲ್ಲಿ ಧರಿಸಿದ ಬಟ್ಟೆಯಲ್ಲೇ ಹೋಗಿದ್ದೇವು, ಜಾಕೆಟ್​​ ಹಾಕಿಕೊಳ್ಳುವಂತೆ ಪೊಲೀಸರು ಹೇಳುತ್ತಿದ್ದರು, ಆದರೆ ನಮ್ಮ ಬಳಿ ಜಾಕೆಟ್​ ಇರಲಿಲ್ಲ. ನಂತರ ಸ್ಥಳೀಯ ಭಾಷೆಯಲ್ಲಿ ದೂರು ಬರೆದುಕೊಂಡುವಂತೆ ಹೇಳಿದ್ರು, ಆದರೆ ಬರೆಯಲು ಗೊತ್ತಿಲ್ಲ ಎಂದು ಹೇಳಿದೆ. ನಂತರ ಅವರೇ ಬರೆದುಕೊಟ್ಟರು. ಈ ವೇಳೆ ಆ ವ್ಯಕ್ತಿ ಕೂಡ ತನ್ನ ವಕೀಲರನ್ನು ಕರೆಸಿ, ನಮ್ಮ ಮೇಲೆ ದೂರು ನೀಡಿದ್ದಾನೆ. ನಂತರ ನಿರಂತರ ಕೋಟ್​​, ಪೊಲೀಸ್​​​​​​ ಠಾಣೆ ಎಂದು ಹೋಗುತ್ತಿದ್ದೇವೆ. ಕೊನೆಗೆ ನಾವು ಕರ್ನಾಟಕದವರಲ್ಲ ಎಂದು ಕೇಸ್​​ ವಾಪಸ್ಸು ಪಡೆದ್ದೇವು ಎಂದು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:26 pm, Wed, 7 January 26

Source link

ಗ್ಯಾರಂಟಿ ಯೋಜನೆಯಿಂದ ಕೈದಿಗಳ ಸಂಬಳಕ್ಕೂ ಕುತ್ತು, 10 ತಿಂಗಳಿಂದ ಕೂಲಿ ಹಣ ಸಿಕ್ಕಿಲ್ಲ – Kannada News | Government Fails to Pay Wages to Hindalga Jail Inmates for Ten Months

ಬೆಳಗಾವಿ, ಜ.7: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ 200ಕ್ಕೂ ಹೆಚ್ಚು ಕೈದಿಗಳಿಗೆ ಕಳೆದ 10 ತಿಂಗಳಿಂದ ಕೂಲಿ ಹಣ ಸಿಕ್ಕಿಲ್ಲ. ಸರ್ಕಾರವು ದಿನಗೂಲಿಯಾಗಿ 524 ರೂಪಾಯಿ ನಿಗದಿಪಡಿಸಿದ್ದು, ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳು ಜೈಲಿನೊಳಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವೇತನವು ಕೈದಿಗಳ ಕುಟುಂಬಗಳಿಗೆ ಆರ್ಥಿಕ ಸಹಾಯವಾಗುತ್ತದೆ ಮತ್ತು ಅವರ ದೈನಂದಿನ ಅವಶ್ಯಕತೆಗಳನ್ನು ಪೂರೈಸಲು ನೆರವಾಗುತ್ತದೆ. ಸದ್ಯ ಬೆಳಗಾವಿ ಜೈಲಿನಲ್ಲಿ ಮಾತ್ರ ಮೂರು ಕೋಟಿ ರೂಪಾಯಿಗೂ ಹೆಚ್ಚು ಕೂಲಿ ಹಣ ಬಾಕಿ ಉಳಿದಿದೆ. ಹಿಂಡಲಗಾ ಜೈಲು ಮಾತ್ರವಲ್ಲದೆ ರಾಜ್ಯದ ಇತರೆ ಜೈಲುಗಳಲ್ಲಿಯೂ ಇಂತಹದೇ ಸಮಸ್ಯೆ ಇದೆ ಎಂದು ವರದಿಯಾಗಿದೆ. ಸರ್ಕಾರಿ ಗ್ಯಾರಂಟಿ ಯೋಜನೆಗಳ ಹೊರೆಯಿಂದಾಗಿ ಈ ವೇತನ ಪಾವತಿಯಲ್ಲಿ ವಿಳಂಬವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಕೈದಿಗಳು ಮತ್ತು ಜೈಲು ಅಧಿಕಾರಿಗಳು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದರೂ, ಹಣ ಬಿಡುಗಡೆಯಾಗಿಲ್ಲ. ಆದಷ್ಟು ಬೇಗ ಹಣ ಬಿಡುಗಡೆ ಮಾಡುವಂತೆ ಕೈದಿಗಳು ಮನವಿ ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪುರುಷರನ್ನು ನಾಯಿಗೆ ಹೋಲಿಸಿದರೇ ರಮ್ಯಾ: ನಟಿ ಹೇಳಿದ್ದೇನು? – Kannada News | Ramya on Stray Dogs and SC Ruling: Did She Compared Men to Dogs Full Details

ರಮ್ಯಾ (Ramya), ಕನ್ನಡ ಚಿತ್ರರಂಗದ ಸ್ಟಾರ್ ನಟಿ ಎನಿಸಿಕೊಂಡಿದ್ದವರು. ರಾಜಕೀಯಕ್ಕೆ ಸಿನಿಮಾಗಳಿಗೆ ವಿರಾಮ ಇರಿಸಿದ ರಮ್ಯಾ, ಈಗ ಸಕ್ರಿಯ ರಾಜಕೀಯದಿಂದಲೂ ದೂರಾಗಿದ್ದಾರೆ. ಸಿನಿಮಾಗಳಿಗೆ ಮರು ಪ್ರವೇಶ ಮಾಡುವ ಪ್ರಯತ್ನದಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಸಹ ಪ್ರಾರಂಭಿಸಿದ್ದಾರೆ. ಸಕ್ರಿಯ ರಾಜಕಾರಣಕ್ಕೆ ದೂರಾದರೂ ಸಹ ಸಾಮಾಜಿಕ ವಿಷಯಗಳಿಗೆ ಪ್ರತಿಕ್ರಿಯೆಗಳನ್ನು ನೀಡುತ್ತಾ ಸಕ್ರಿಯವಾಗಿದ್ದಾರೆ. ಪ್ರಾಣಿ ಪ್ರಿಯೆ ಆಗಿರುವ ರಮ್ಯಾ, ಪ್ರಾಣಿಗಳ ಹಕ್ಕು ರಕ್ಷಣೆ, ವಿಶೇಷವಾಗಿ ಶ್ವಾನಗಳ ವಿಷಯದಲ್ಲಿ ವಿಶೇಷ ಕಾಳಜಿವಹಿಸುತ್ತಾರೆ. ಮೂಕಜೀವಿಗಳ ಪರವಾಗಿ ಅಗತ್ಯವಾದಾಗೆಲ್ಲ ದನಿ ಎತ್ತುತ್ತಾ ಬಂದಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ಕುರಿತಾಗಿ ಆದೇಶವೊಂದನ್ನು ಹೊರಡಿಸಿತ್ತು, ಬೀದಿ ನಾಯಿಗಳನ್ನು ಆಶ್ರಯ ತಾಣಗಳಲ್ಲಿ ಇಡುವಂತೆ ಸೂಚಿಸಿತ್ತು. ಇದರ ವಿರುದ್ಧ ರಮ್ಯಾ ಸೇರಿದಂತೆ ದೇಶದಾದ್ಯಂತ ಶ್ವಾನಪ್ರಿಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಸಹ ಮಾಡಿದ್ದರು. ಬಳಿಕ ಇತ್ತೀಚೆಗೆ ಮತ್ತೆ ಇದೇ ವಿಷಯವಾಗಿ ನಡೆದ ವಿಚಾರಣೆ ವೇಳೆ, ಬೀದಿ ನಾಯಿಗಳನ್ನು ಅವುಗಳ ವರ್ತನೆಯ ಆಧಾರದ ಮೇಲೆ ವಿಂಗಡಿಸಲು ಸಾಧ್ಯವಿಲ್ಲ. ‘ಬೀದಿ ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ, ಈ ನಾಯಿ ಕಚ್ಚಬಹುದು, ಈ ನಾಯಿ ಕಚ್ಚುವುದಿಲ್ಲ ಎಂದು ಕಂಡು ಹಿಡಿಯುವುದು ಅಸಾಧ್ಯ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಆ ಮೂಲಕ ಎಲ್ಲ ನಾಯಿಗಳನ್ನು ಆಶ್ರಯ ತಾಣಗಳಲ್ಲಿ ಇಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ:43ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ನಟಿ ರಮ್ಯಾ

ಸುಪ್ರೀಂಕೋರ್ಟ್​​ನ ಈ ಅಭಿಪ್ರಾಯಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನಟಿ ರಮ್ಯಾ, ಸುಪ್ರೀಂನ ಹೇಳಿಕೆಗೆ ವಿರುದ್ಧವಾಗಿ, ‘ಪುರುಷರ ಮನಸ್ಸನ್ನು ಓದುವುದು ಕಷ್ಟ, ಅವರು ಯಾವಾಗ ರೇಪ್ ಮಾಡುತ್ತಾರೊ, ಯಾವಾಗ ಕೊಲೆ ಮಾಡುತ್ತಾರೊ ಗೊತ್ತಾಗುವುದಿಲ್ಲ, ಹಾಗಾಗಿ ಎಲ್ಲ ಪುರುಷರನ್ನು ಜೈಲಿನಲ್ಲಿ ಇರಿಸಿಬಿಡಿ(!?)’ ಎಂದಿದ್ದಾರೆ. ಆ ಮೂಲಕ ಕಚ್ಚುವ ನಾಯಿಗಳು, ಸೌಮ್ಯ ನಾಯಿಗಳ ವರ್ಗೀಕರಣ ಕಷ್ಟವೆಂದು ಎಲ್ಲ ನಾಯಿಗಳನ್ನು ಆಶ್ರಯ ತಾಣಗಳಲ್ಲಿ ಇಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

ಇನ್​​ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ರಮ್ಯಾ, ಸುಪ್ರೀಂಕೋರ್ಟ್​​ನಲ್ಲಿ ಬೀದಿನಾಯಿಗಳ ಹಕ್ಕಿನ ಪರವಾಗಿ ವಾದಿಸುತ್ತಿರುವ ಮಾಜಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ವಾದವನ್ನು ಕೊಂಡಾಡಿದ್ದಾರೆ. ನಾಯಿಗಳನ್ನು ಆಶ್ರಯ ತಾಣಗಳಲ್ಲಿ ಇಡುವುದರ ವಿರುದ್ಧ ವಾದಿಸಿರುವ ಕೆಕೆ ವೇಣುಗೋಪಾಲ್ ‘ಭಾರತದಲ್ಲಿ 5.25 ಕೋಟಿ ನಾಯಿಗಳಿವೆ. ಅವುಗಳನ್ನು ಆಶ್ರಯ ತಾಣದಲ್ಲಿ ಇಡಲು ದೇಶದಾದ್ಯಂತ 77347 ಆಶ್ರಯ ತಾಣಗಳು ಬೇಕಾಗುತ್ತವೆ. (ಪ್ರತಿ ಆಶ್ರಯ ತಾಣದಲ್ಲಿ 200 ನಾಯಿಗಳು). ಪ್ರತಿ ನಾಯಿಗೆ ಆಹಾರ ನೀಡಲು ದಿನಕ್ಕೆ 40 ರೂಪಾಯಿ ಬೇಕಾಗುತ್ತದೆ ಎಂದಾದರೆ ಅಷ್ಟು ನಾಯಿಗಳನ್ನು ಸಾಕಲು ಪ್ರತಿ ದಿನ ಆಹಾರದ ವೆಚ್ಚವೇ 200 ಕೋಟಿಗೂ ಹೆಚ್ಚು ಹಣ ಬೇಕಾಗುತ್ತದೆ. ಈಗ ದೇಶದಲ್ಲಿ ಇರುವ ಲಕ್ಷಾಂತರ ಶಾಲೆಗಳಲ್ಲಿಯೇ ಸರಿಯಾದ ಸೌಕರ್ಯ ಇಲ್ಲ ಹೀಗಿರುವಾಗ ನಾಯಿಗಳಿಗೆ ಆಶ್ರಯ ತಾಣ ನಿರ್ಮಿಸಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಳಗಾವಿಯ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ, ಮೂವರು ಕಾರ್ಮಿಕರ ಸಾವು, 5 ಮಂದಿಗೆ ಗಾಯ – Kannada News | Three Dies Several Injured in boiler explosion at sugar factory in belagavi

ಬೆಳಗಾವಿ, (ಜನವರಿ 07): ಸಕ್ಕರೆ ಕಾರ್ಖಾನೆಯಲ್ಲಿ (Sugar Factory) ಬಾಯ್ಲರ್ ಸ್ಫೋಟಗೊಂಡ (Boiler Blast) ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಕಾರ್ಮಿಕರಿಗೆ ಗಂಭೀರ ಗಾಯಗೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿಯಲ್ಲಿ ನಡೆದಿದೆ. ಅಕ್ಷಯ ತೋಪಡೆ(45), ದೀಪಕ್ ಮುನವಳ್ಳಿ(31), ಸುದರ್ಶನ ಬನೋಶಿ(25) ಮೃತ ದುರ್ದೈವಿಗಳು.

ಗ್ರಾಮದ ಹೊರವಲಯದಲ್ಲಿರುವ ವಿಕ್ರಮ ಇನಾಮದಾರ್‌ ಎನ್ನುವರಿಗೆ ಸೇರಿದ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿಈ ದುರಂತ ಸಂಭವಿಸಿದ್ದು, ಗಂಭೀರ ಗಾಯಗೊಂಡವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿರುವ ಐವರು ಜನರನ್ನು ಝೀರೋ ಟ್ರಾಫಿಕ್‌ನಲ್ಲಿಯೇ ಬೈಲಹೊಂಗಲದಿಂದ ಬೆಳಗಾವಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಸಚಿವೆ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ: ಬಸವಂತನ ಜೀವ ಉಳಿಸಿದ ಐಪಿಎಸ್ ಅಧಿಕಾರಿ

ಕಾರ್ಖಾನೆಯ ನಂಬರ್ 1 ಕಂಪಾರ್ಟಮೆಂಟ್ ನಲ್ಲಿ ವಾಲ್ ರಿಪೇರಿ ಮಾಡೋ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿರುವುದು ದೃಢಪಟ್ಟಿದೆ. ಸದ್ಯ ಆಸ್ಪತ್ರೆಗೆ ಬೆಳಗಾವಿ ಎಸ್ಪಿ ಕೆ.ರಾಮರಾಜನ್, ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಇನ್ನು ಘಟನೆ ಸಂಬಂಧ ಬೆಳಗಾವಿಯಲ್ಲಿ ಎಸ್ಪಿ ಕೆ ರಾಮರಾಜನ್ ಪ್ರತಿಕ್ರಿಯಿಸಿದ್ದು, ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಘಟನೆ ಸಂಭವಿಸಿದೆ. 8 ಜನರಿಗೆ ಬಿಸಿ ಪದಾರ್ಥ (ಮಳ್ಳಿ) ಮೈ ಮೇಲೆ ಬಿದ್ದು ಗಾಯವಾಗಿದೆ. ಒಬ್ಬರನ್ನು ಬೈಲಹೊಂಗಲ ಆಸ್ಪತ್ರೆಗೆ ರವಾನಿಸಿದ್ದು, ಇನ್ನುಳಿದವರನ್ನು ಬೆಳಗಾವಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಝೀರೋ ಟ್ರಾಫಿಕ್‌ನಲ್ಲಿ ಗಾಯಾಳುಗಳನ್ನು ಶಿಫ್ಟ್ ಮಾಡಲಾಗಿದೆ. ದೂರು ಆಧರಿಸಿ ತನಿಖೆ ಮಾಡುತ್ತೇವೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸರ್ಕಾರಿ ಬಸ್​ಗಳ ದುಸ್ಥಿತಿಯನ್ನು ಬಯಲು ಮಾಡಿದ ಟಿವಿ9, ತುಕ್ಕು ಹಿಡಿದ ಬಸ್ಸಿನಲ್ಲಿ ಅಪಾಯಕಾರಿ ಪ್ರಯಾಣ – Kannada News | Bagalkotes Dakota Buses: Passengers Endure Daily Hardship in Dilapidated Government Transport

ಬಾಗಲಕೋಟೆ, ಜ.7: ಟಿವಿ9 ರಿಯಾಲಿಟಿ ಚೆಕ್ ಮೂಲಕ ಬಾಗಲಕೋಟೆಯಲ್ಲಿ ಸರ್ಕಾರಿ ಬಸ್​ಗಳ ದುಸ್ಥಿತಿಯು ಬೆಳಕಿಗೆ ಬಂದಿದೆ. ಡಕೋಟಾ ಬಸ್ ಎಂದು ಕರೆಯಲ್ಪಡುವ ಹಳೆಯ ಮತ್ತು ಕಿತ್ತುಹೋದ ಬಸ್​ಗಳಲ್ಲಿ ಪ್ರಯಾಣಿಕರು ಪ್ರತಿದಿನ ಸಂಕಟ ಅನುಭವಿಸುತ್ತಿದ್ದಾರೆ. ಮೆಟ್ಟಿಲುಗಳು ಮುರಿದು, ಬಸ್​ನ ಟಾಪ್ ಹಾರುವ ಸ್ಥಿತಿಯಲ್ಲಿ, ಲೈಟ್​ಗಳು ಕಾರ್ಯನಿರ್ವಹಿಸದೆ, ತುಕ್ಕು ಹಿಡಿದ ಬಸ್‌ಗಳು ಅಪಾಯಕಾರಿ ಪ್ರಯಾಣಕ್ಕೆ ಕಾರಣವಾಗಿವೆ. ಒಂದು ಬಸ್ 14 ವರ್ಷ 10 ತಿಂಗಳು ಹಳೆಯದಾಗಿದ್ದು, ಅದರ ವೈರಿಂಗ್ ಸಹ ಹೊರಬಿದ್ದಿರುವ ದೃಶ್ಯ ಕಂಡುಬಂದಿದೆ. ಸಾರಿಗೆ ಇಲಾಖೆಗೆ ಉತ್ತಮ ಹೆಸರಿದ್ದರೂ, ಬಾಗಲಕೋಟೆಯ ನವನಗರ ಬಸ್ ನಿಲ್ದಾಣದಲ್ಲಿರುವ ಬಸ್​ಗಳ ಸ್ಥಿತಿ ಚಿಂತಾಜನಕವಾಗಿದೆ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ಬಸ್​ಗಳಲ್ಲಿ ಮಹಿಳೆಯರ ದಟ್ಟಣೆ ಹೆಚ್ಚಿದ್ದು, 50-60 ಜನರ ಸಾಮರ್ಥ್ಯದ ಬಸ್​ಗಳಲ್ಲಿ ನೂರಾರು ಮಂದಿ ಪ್ರಯಾಣಿಸುತ್ತಿದ್ದಾರೆ. ಇದರಿಂದ ಸುರಕ್ಷತೆಗೆ ಧಕ್ಕೆಯಾಗುತ್ತಿದೆ ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವರಿಗೆ ಹಳೆಯ ಬಸ್​ಗಳನ್ನು ಬದಲಾಯಿಸಿ ಹೊಸ, ಸುರಕ್ಷಿತ ಬಸ್​ಗಳನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ. ಇದು ಪ್ರಯಾಣಿಕರ ಜೀವದ ಸುರಕ್ಷತೆಯ ವಿಷಯ ಎಂದು ಅವರು ಒತ್ತಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Cap d’Agde: ಈ ನಗರದಲ್ಲಿ ಬಟ್ಟೆ ಧರಿಸಿ ಹೊರ ಬಂದರೆ ಬೀಳುತ್ತೆ ಭಾರೀ ದಂಡ – Kannada News | Cap d’Agde: World’s Most Famous no cloth Village; Checkout more details here

ಈ ಒಂದು ನಗರಕ್ಕೆ ನೀವು ಟ್ರಿಪ್​​ ಹೋಗಲು ಯೋಚಿಸುತ್ತಿದ್ದರೆ, ನೀವು ಬಟ್ಟೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹೌದು ಉಟ್ಟ ಬಟ್ಟೆಯಲ್ಲಿ ನೀವಿಲ್ಲಿಗೆ ಹೋಗಿ ದಿನಗಟ್ಟಲೆ ತಂಗಿ ಬರಬಹುದು. ಯಾಕೆಂದ್ರೆ ಈ ನಗರದಲ್ಲಿ ಎಲ್ಲೆಂದರಲ್ಲಿ ನಿಮಗೆ ಬೆತ್ತಲೆಯಾಗಿ ತಿರುಗಾಡುವ ಸ್ವಾತಂತ್ರ್ಯವಿದೆ. ಇಂತಹ ವಿಚಿತ್ರ ಸಂಸ್ಕೃತಿಯನ್ನು ಹೊಂದಿರುವ ಸ್ಥಳವೇ ಫ್ರಾನ್ಸ್‌ನ ಕ್ಯಾಪ್ ಡಿ’ಅಗ್ಡೆ (Cap d’Agde) ನಗರ. ಇದು ಫ್ರಾನ್ಸ್‌ನ ದಕ್ಷಿಣ ಭಾಗದಲ್ಲಿರುವ ಮೆಡಿಟರೇನಿಯನ್ ಕರಾವಳಿಯಲ್ಲಿರುವ ಇದು ಒಂದು ಸುಂದರ ನಗರ. ಈ ನಗರ ವಿಶ್ವದ  ಏಕೈಕ ನಗ್ನ ನಗರವಾಗಿದ್ದು, ಬೆತ್ತಲೆಯಾಗಿ ತಮ್ಮ ಪ್ರವಾಸವನ್ನು ಆನಂದಿಸಲೆಂದೇ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ತಾಣ ಹನಿಮೂನ್ ಪಾಯಿಂಟ್​ ಎಂದೇ ಪ್ರಸಿದ್ಧವಾಗಿದೆ.

ಸುಂದರವಾದ ಕಡಲತೀರಗಳಿಗೆ ಹೆಸರುವಾಸಿಯಾದ ಈ ನಗರದಲ್ಲಿ ಜನರಿಗೆ ಬಟ್ಟೆ ಇಲ್ಲದೆ ಸುತ್ತಾಡುವ ಸ್ವಾತಂತ್ರ್ಯವಿದೆ. ಪ್ರವಾಸಿಗರು ರೆಸ್ಟೋರೆಂಟ್‌ಗಳು ಮತ್ತು ಸೂಪರ್‌ಮಾರ್ಕೆಟ್‌ಗಳಲ್ಲಿ ಬಟ್ಟೆ ಇಲ್ಲದೆಯೇ ತಿರುಗಾಡಬಹುದು. ಒಂದು ಅಂದಾಜಿನ ಪ್ರಕಾರ, ಪ್ರತಿ ವರ್ಷ 50 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬೇಸಿಗೆಯಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಹೆಚ್ಚಿನವರು ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಇಟಲಿ, ಅಮೆರಿಕ, ಡೆನ್ಮಾರ್ಕ್ ಮತ್ತು ಕೆನಡಾದವರು ಎಂದು ವರದಿಯಾಗಿದೆ.

ಇದನ್ನೂ ಓದಿ: ಭಾರತೀಯ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸಿ ಅನುಭವ ಬಿಚ್ಚಿಟ್ಟ ವಿದೇಶಿಗ

ಬಟ್ಟೆ ಧರಿಸಿ ಹೊರ ಬಂದರೆ ಬೀಳುತ್ತೆ ಭಾರೀ ದಂಡ:
ಈ ತಾಣದಲ್ಲಿ ಬಟ್ಟೆ ಧರಿಸಲು ಅವಕಾಶವಿದೆ.ಆದರೆ ಇಲ್ಲಿ ಬಟ್ಟೆ ಧರಿಸುವುದಕ್ಕೂ ನೇಕೆಡ್‌ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ನೀವು ಬಟ್ಟೆ ಧರಿಸಿ ಈ ಸಮುದ್ರ ದಂಡೆಗೆ ಹೋಗಲು ಬಯಸಿದ್ದಲ್ಲಿ ದುಡ್ಡು ಕಟ್ಟಿ ನೀವು ಇಲ್ಲಿ ಬಟ್ಟೆ ಧರಿಸಿ ಸುತ್ತಾಡಬಹುದು. ಆದರೆ ಬಟ್ಟೆ ಧರಿಸುವವರ ಸಂಖ್ಯೆ ಇಲ್ಲಿ ತೀರಾ ಕಡಿಮೆ. ಇದಲ್ಲದೇ ಇಲ್ಲಿ ಮತ್ತೊಂದು ನಿಯಮವಿದೆ. ಇಲ್ಲಿಗೆ ಬಂದ ಜೋಡಿ ಸಾವರ್ಜನಿಕ ಪ್ರದೇಶಗಳಲ್ಲಿ ಅಸಭ್ಯವಾಗಿ ವರ್ತಿಸಿದರೆ ಅಂದರೆ ಸುಮಾರು 12,860 ಪೌಂಡ್‌ ಅಂದರೆ ಭಾರತದ ಕರೆನ್ಸಿ ಪ್ರಕಾರ ಸುಮಾರು 12 ಲಕ್ಷ ರೂಪಾಯಿಗಳ ದಂಡವನ್ನು ಕಟ್ಟಬೇಕಾಗುತ್ತದೆ. ಇದಲ್ಲದೆ, ಈ ನಗರದಲ್ಲಿ ಫೋಟೋಗ್ರಫಿಗೂ ಕೂಡ ಅವಕಾಶವಿಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರಲಿದೆ ಹೊಸ ಆದಾಯ ತೆರಿಗೆ ಕಾಯ್ದೆ; ಬಜೆಟ್​ನಲ್ಲಿ ಘೋಷಣೆ, ಏ. 1ರಿಂದ ಜಾರಿ – Kannada News | New Income Tax law come into effect from 2026 April 1st, here are few highlights

ನವದೆಹಲಿ, ಜನವರಿ 7: ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತಂದಿರುವ ಮತ್ತು ತರುತ್ತಿರುವ ಸರ್ಕಾರ ಇದೀಗ ಆದಾಯ ತೆರಿಗೆ (Income Tax) ವಿಭಾಗದಲ್ಲಿ ಗುರುತರ ಬದಲಾವಣೆ ತರಲು ಹೊರಟಿದೆ. 1961ರ ಇನ್ಕಮ್ ಟ್ಯಾಕ್ಸ್ ಕಾಯ್ದೆ ಬದಲು ಹೊಸ ಕಾಯ್ದೆಯನ್ನು ಜಾರಿಗೆ ತರಲಿದೆ. ಆರು ದಶಕದಲ್ಲೇ ಇದು ಭಾರತದ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಆಗುತ್ತಿರುವ ಬಹುದೊಡ್ಡ ಬದಲಾವಣೆ ಎನ್ನಲಾಗಿದೆ.

ಫೆಬ್ರುವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಹೊಸ ಆದಾಯ ತೆರಿಗೆ ಜಾರಿಗೆ ತರಲಾಗುವುದನ್ನು ಘೋಷಿಸಲಿದ್ದಾರೆ. ಹೊಸ ಕಾಯ್ದೆಯ ಮುಖ್ಯಾಂಶಗಳನ್ನೂ ಅವರು ಬಹಿರಂಗಪಡಿಸಬಹುದು. ವರದಿಗಳ ಪ್ರಕಾರ, ಹೊಸ ಐಟಿ ಕಾಯ್ದೆಯು 2026ರ ಏಪ್ರಿಲ್ 1ರಿಂದ ಜಾರಿಗೆ ಬರಬಹುದು.

ಇದನ್ನೂ ಓದಿ: ಇಂಡಿಯಾ ರೇಟಿಂಗ್ಸ್ ಪ್ರಕಾರ ಮುಂದಿನ ವರ್ಷ ಭಾರತದ ಜಿಡಿಪಿ ಬೆಳವಣಿಗೆ ಶೇ. 6.9

ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಏನಿರಬಹುದು?

ಈಗಿರುವ 1961ರ ಆದಾಯ ತೆರಿಗೆ ಕಾಯ್ದೆಗೆ ಹೋಲಿಸಿದರೆ ಹೊಸ ಆದಾಯ ತೆರಿಗೆ ಕಾಯ್ದೆ ಹೆಚ್ಚು ಸರಳವಾಗಿರುತ್ತದೆ. ಇದರ ನಿಯಮಗಳು ಸರಳವಾಗಿದ್ದು, ಸಾಮಾನ್ಯ ತೆರಿಗೆ ಪಾವತಿದಾರರಿಗೆ ಸ್ಪಷ್ಟವಾಗಿ ಅರ್ಥವಾಗುವಂತಿರುತ್ತವೆ ಎಂದು ಹೇಳಲಾಗುತ್ತಿದೆ. ಹಳೆಯದಲ್ಲಿ ಇರುವ 819 ಸೆಕ್ಷನ್ ಸಂಖ್ಯೆಯನ್ನು 536ಕ್ಕೆ ಇಳಿಸಲಾಗಿದೆ. 47 ಚಾಪ್ಟರ್​ಗಳನ್ನು 23ಕ್ಕೆ ಇಳಿಸಲಾಗಿದೆ.

ಹೊಸ ಕಾಯ್ದೆಯಲ್ಲಿ ಮತ್ತೊಂದು ಮುಖ್ಯ ಅಂಶ ಎಂದರೆ, ಟ್ಯಾಕ್ಸ್ ಸಿಸ್ಟಂನಲ್ಲಿ ತಂತ್ರಜ್ಞಾನ ಅಳವಡಿಕೆ ಹೆಚ್ಚು ಗಾಢವಾಗಿರಲಿದೆ. ಭೌತಿಕ ದಾಖಲೆಗಳ ಗೋಜಲುಗಳನ್ನು ಕಡಿಮೆ ಮಾಡಲಾಗುತ್ತದೆ. ಅಂದರೆ, ಪ್ರೀ ಫಿಲ್ಡ್ ರಿಟರ್ನ್​ಗಳು, ಎಐಎಸ್, ಟಿಐಎಸ್ ಸ್ಟೇಟ್ಮೆಂಟ್​ಗಳು ಇತ್ಯಾದಿ ಬಳಕೆ ಹೆಚ್ಚುವಂತೆ ಮಾಡಬಹುದು. ಈ ಆಟೊಮೇಟೆಡ್ ವ್ಯವಸ್ಥೆಯಿಂದ ಟಿಡಿಎಸ್ ಮತ್ತು ಟಿಸಿಎಸ್ ಹೊಂದಿಕೆಯಲ್ಲಿರುವ ದೋಷಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: 50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು?

12 ಲಕ್ಷ ರೂವರೆಗೆ ತೆರಿಗೆ ವಿನಾಯಿತಿ ಕೊಟ್ಟಿರುವುದು ಮುಂದುವರಿಯುತ್ತದಾ?

ಕಳೆದ ಬಾರಿಯ ಬಜೆಟ್​ನಲ್ಲಿ ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. 75,000 ರೂ ಟ್ಯಾಕ್ಸ್ ಡಿಡಕ್ಷನ್ ಸೇರಿಸಿದರೆ 12,75,000 ರೂ ಒಳಗಿನ ಆದಾಯ ಇರುವವರಿಗೆ ಟ್ಯಾಕ್ಸ್ ಬಾಧ್ಯತೆ ಇರುವುದಿಲ್ಲ. ಈಗ ಹೊಸ ಇನ್ಕಮ್ ಟ್ಯಾಕ್ಸ್ ಕಾಯ್ದೆ ಜಾರಿಗೆ ಬಂದರೆ ಈ ಟ್ಯಾಕ್ಸ್ ವಿನಾಯಿತಿ ಕ್ರಮಕ್ಕೆ ಸಂಚಕಾರವೇನೂ ಆಗದು. ಅದೆಲ್ಲವೂ ತನ್ನಂತಾನೇ ಮುಂದುವರಿಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಪಲ್ಲವಿ ಅನುಪಲ್ಲವಿ’ ಚಿತ್ರಕ್ಕೆ 43 ವರ್ಷ; ಮತ್ತೆ ಕನ್ನಡ ಚಿತ್ರರಂಗದಲ್ಲಿ ಅನಿಲ್ ಕಪೂರ್? – Kannada News | 43 Years of Pallavi Anupallavi Actor Anil Kapoor wants to do Kannada Cinema again

ನಟ ಅನಿಲ್ ಕಪೂರ್ (Anil Kapoor) ಅವರು ಬಾಲಿವುಡ್​​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹೀರೋ ಆಗಿ ಮಾತ್ರವಲ್ಲದೇ ಪೋಷಕ ಪಾತ್ರಗಳ ಮೂಲಕವೂ ಅವರು ಜನಮನ ಗೆದ್ದಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ನಾಲ್ಕೂವರೆ ದಶಕಗಳ ಅನುಭವ ಇದೆ. ಹಿಂದಿ ಚಿತ್ರರಂಗದಲ್ಲಿ ಹೀರೋ ಆಗಿ ಮಿಂಚುವುದಕ್ಕೂ ಮುನ್ನ ಅವರು ತೆಲುಗು ಮತ್ತು ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಅನಿಲ್ ಕಪೂರ್ ಅವರು ಅಭಿನಯಿಸಿದ ಏಕೈಕ ಕನ್ನಡ ಸಿನಿಮಾ ‘ಪಲ್ಲವಿ ಅನುಪಲ್ಲವಿ’ (Pallavi Anupallavi) ತೆರೆಕಂಡು ಈಗ 43 ವರ್ಷಗಳು ಕಳೆದಿವೆ. ಅದನ್ನು ಈಗ ಅನಿಲ್ ಕಪೂರ್ ನೆನಪು ಮಾಡಿಕೊಂಡಿದ್ದಾರೆ.

ಮಣಿರತ್ನಂ ನಿರ್ದೇಶನ ಮಾಡಿದ್ದ ‘ಪಲ್ಲವಿ ಅನುಪಲ್ಲವಿ’ ಸಿನಿಮಾ 1983ರ ಜನವರಿ 7ರಂದು ಬಿಡುಗಡೆ ಆಗಿತ್ತು. ಅನಿಲ್ ಕಪೂರ್ ಅವರು ಹೀರೋ ಆಗಿ ನಟಿಸಿದ್ದರು. ಇಳೆಯರಾಜ ಸಂಗೀತ ನೀಡಿದ ಹಾಡುಗಳು ಸೂಪರ್ ಹಿಟ್ ಆದವು. ಇಂದಿಗೂ ಸಿನಿಪ್ರಿಯರಿಗೆ ‘ಪಲ್ಲವಿ ಅನುಪಲ್ಲವಿ’ ಸಿನಿಮಾದ ಹಾಡುಗಳು ಫೇವರಿಟ್ ಆಗಿವೆ. ‘ಓ ಪ್ರೇಮಿ ಓ ಪ್ರೇಮಿ’ ಹಾಡಿನ ತುಣುಕನ್ನು ಅನಿಲ್ ಕಪೂರ್ ಅವರು ಇಂದು (ಜನವರಿ 7) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘43 ವರ್ಷಗಳ ಹಿಂದೆ ನಾನು ಕನ್ನಡ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಟ್ಟೆ. ಅಂದಿನಿಂದ ಇಂದಿನ ತನಕ, ಕನ್ನಡ ಸಿನಿಮಾ ಬೆಳೆದ ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಮರು ವ್ಯಾಖ್ಯಾನಿಸುತ್ತಿರುವುದನ್ನು ನೋಡಿದರೆ ಅಚ್ಚರಿ ಆಗುತ್ತದೆ’ ಎಂದು ಅನಿಲ್ ಕಪೂರ್ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಈಗಿನ ಸಾಧಕರಿಗೂ ಅನಿಲ್ ಕಪೂರ್ ಸಲಾಂ ಎಂದಿದ್​ದಾರೆ. ‘ಕನ್ನಡ ಚಿತ್ರರಂಗವನ್ನು ಮೇಲಕ್ಕೆ ತೆಗೆದುಕೊಂಡು ಹೋಗಿದ್ದಕ್ಕಾಗಿ ಯಶ್, ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಹಾಗೂ ಕಾಂತಾರ, ಕೆಜಿಎಫ್ ತಂಡಗಳಿಗೆ ನಾನು ಸೆಲ್ಯೂಟ್ ಎನ್ನುತ್ತೇನೆ. ಈ ಅದ್ಭುತ ಚಿತ್ರರಂಗದ ಜೊತೆ ನನ್ನ ಕೊನೆಯ ಒಡನಾಟ ಇದಲ್ಲ ಎಂದು ಭಾವಿಸುತ್ತೇನೆ’ ಎಂದು ಅನಿಲ್ ಕಪೂರ್ ಹೇಳಿದ್ದಾರೆ.

ಇದನ್ನೂ ಓದಿ: ನಟ ಅನಿಲ್ ಕಪೂರ್​ಗೆ ‘ಪಲ್ಲವಿ ಅನುಪಲ್ಲವಿ’ ಆಫರ್ ಸಿಕ್ಕಿದ್ದು ಹೇಗೆ? ಇಲ್ಲಿದೆ ವಿವರ

ಈ ಮೂಲಕ ಮತ್ತೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಲು ಅನಿಲ್ ಕಪೂರ್ ಅವರು ಉತ್ಸಾಹ ತೋರಿಸಿದ್ದಾರೆ. ಈಗಾಗಲೇ ‘ಟಾಕ್ಸಿಕ್’ ಸಿನಿಮಾದಲ್ಲಿ ಅನಿಲ್ ಕಪೂರ್ ನಟಿಸಿರಬಹುದು ಎಂದು ಕೆಲಸ ಅಭಿಮಾನಿಗಳು ಊಹಿಸಿದ್ದಾರೆ. ಪ್ರಶಾಂತ್ ನೀಲ್ ಅವರ ‘ಡ್ರ್ಯಾಗನ್’ ಸಿನಿಮಾದಲ್ಲಿ ಅನಿಲ್ ಕೂಡ ಕೂಡ ಇರಬಹುದು ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಇದೆಲ್ಲವೂ ಬರೀ ಊಹೆಗಳಷ್ಟೇ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಧಾನಿ ಮೋದಿಗೆ ಕರೆ ಮಾಡಿದ ಇಸ್ರೇಲ್ ಪಿಎಂ ನೆತನ್ಯಾಹು; ಗಾಜಾ ಶಾಂತಿ ಯೋಜನೆ ಕುರಿತು ಚರ್ಚೆ – Kannada News | Israeli PM Benjamin Netanyahu Calls PM Modi Discuss Strategic Partnership and Gaza Peace Plan Status

ನವದೆಹಲಿ, ಜನವರಿ 7: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೂರವಾಣಿ ಕರೆ ಮಾಡಿದ್ದರು. ಫೋನ್​ನಲ್ಲಿ ತಮ್ಮ ಗೆಳೆಯ ನೆತನ್ಯಾಹು ಜೊತೆ ಮಾತನಾಡಿದ ಮೋದಿ (PM Modi) ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. “ಇಬ್ಬರು ನಾಯಕರು ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಎರಡೂ ದೇಶಗಳ ಜನರಿಗೆ ಶಾಂತಿ ಮತ್ತು ಸಮೃದ್ಧಿಯನ್ನು ಹಾರೈಸಿದರು” ಎಂದು ಪ್ರಧಾನ ಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ. ಗಾಜಾ ಶಾಂತಿ ಯೋಜನೆಯ ಅನುಷ್ಠಾನದ ಕುರಿತು ನೆತನ್ಯಾಹು ಪ್ರಧಾನ ಮಂತ್ರಿ ಮೋದಿಗೆ ವಿವರಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.

ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಿದರು. ಎಕ್ಸ್​ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪವನ್ನು ಹೆಚ್ಚಿನ ದೃಢನಿಶ್ಚಯದಿಂದ ಪುನರುಚ್ಚರಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಫೋನ್; ಭಯೋತ್ಪಾದನೆ, ಗಾಜಾ ಶಾಂತಿ ಯೋಜನೆಯ ಬಗ್ಗೆ ಚರ್ಚೆ

“ನನ್ನ ಸ್ನೇಹಿತರಾದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದಕ್ಕೆ, ಅವರಿಗೆ ಮತ್ತು ಇಸ್ರೇಲ್ ಜನರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿ ಸಂತೋಷವಾಗಿದೆ. ಮುಂಬರುವ ವರ್ಷದಲ್ಲಿ ಭಾರತ-ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ನಾವು ಚರ್ಚಿಸಿದ್ದೇವೆ” ಎಂದು ನರೇಂದ್ರ ಮೋದಿ ಹೇಳಿದರು.

“ನಾವು ಪ್ರಾದೇಶಿಕ ಪರಿಸ್ಥಿತಿಯ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ಇನ್ನೂ ಹೆಚ್ಚಿನ ದೃಢನಿಶ್ಚಯದಿಂದ ಭಯೋತ್ಪಾದನೆಯನ್ನು ಎದುರಿಸಲು ನಮ್ಮ ದೃಢಸಂಕಲ್ಪವನ್ನು ಪುನರುಚ್ಚರಿಸಿದ್ದೇವೆ” ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಇದು ಬುದ್ಧನ ಉದಾತ್ತ ಚಿಂತನೆಗೆ ಸಾಕ್ಷಿ: ಪವಿತ್ರ ಪಿಪ್ರಹ್ವಾ ಅವಶೇಷಗಳ ಪ್ರದರ್ಶನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

2026ರಲ್ಲಿ ಭಾರತ ಮತ್ತು ಇಸ್ರೇಲ್ ನಾಯಕರ ನಡುವಿನ ಮೊದಲ ನೇರ ಸಂಭಾಷಣೆ ಇದಾಗಿದೆ. ಕಳೆದ ವರ್ಷ ಡಿಸೆಂಬರ್ 11ರಂದು ಪ್ರಧಾನಿ ಮೋದಿ ಅವರಿಗೆ ಬೆಂಜಮಿನ್ ನೆತನ್ಯಾಹು ಅವರಿಂದ ದೂರವಾಣಿ ಕರೆ ಬಂದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version