ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ಗಿದೆ ಭಾರತದ ನಂಟು; ಇವರೂ ಕೂಡ ಸಾಯಿ ಬಾಬಾ ಭಕ್ತೆ! – Kannada News | Venezuela’s Interim President Delcy Rodriguez is a worshiper of Sri Sathya Sai Baba
ನವದೆಹಲಿ, ಜನವರಿ 6: ಅಮೆರಿಕದ ವಶದಲ್ಲಿರುವ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಬದಲಾಗಿ ವೆನೆಜುವೆಲಾದ (Venezuela) ಉಪಾಧ್ಯಕ್ಷೆ ಮತ್ತು ತೈಲ ಸಚಿವೆ ಡೆಲ್ಸಿ ರೊಡ್ರಿಗಸ್ ಅಲ್ಲಿನ ಮಧ್ಯಂತರ ಸರ್ಕಾರದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ವಿಶೇಷವೆಂದರೆ ಡೆಲ್ಸಿಗೂ ಭಾರತದ ನಂಟಿದೆ. ಮಡುರೋ ಅವರಂತೆಯೇ ಡೆಲ್ಸಿ ಕೂಡ ಪುಟ್ಟಪರ್ತಿ ಸತ್ಯ ಸಾಯಿ ಬಾಬಾ ಭಕ್ತೆ. ಅವರು ಆಗಾಗ ಭಾರತಕ್ಕೆ ಆಗಮಿಸುತ್ತಿರುತ್ತಾರೆ. ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಿದ ಡೆಲ್ಸಿ ರೊಡ್ರಿಗಸ್ ಆಂಧ್ರಪ್ರದೇಶದಲ್ಲಿರುವ ಸತ್ಯಸಾಯಿ ಬಾಬಾ ಅವರ ಪ್ರಶಾಂತಿ ನಿಲಯಂ ಆಶ್ರಮಕ್ಕೆ…