Headlines

ಅಮೆರಿಕದ ಟ್ರಂಪ್ ಟವರ್​​ನಲ್ಲಿ ಅನುಮಾನಾಸ್ಪದ ಬಾಕ್ಸ್​ ಪತ್ತೆ – Kannada News | Security Scare at Trump Tower After Suspicious Package Alert

ವಾಷಿಂಗ್ಟನ್, ಮಾರ್ಚ್​ 03: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಯುದ್ಧ ಘೋಷಿಸಿದ್ದಾರೆ. ಅಮೆರಿಕ ಸೇನೆಯು ಹಲವಾರು ದಿನಗಳಿಂದ ಇರಾನ್ ಮೇಲೆ ಭಾರೀ ಬಾಂಬ್ ದಾಳಿ ನಡೆಸುತ್ತಿದೆ. ಆದಾಗ್ಯೂ, ಈ ಯುದ್ಧದ ಮಧ್ಯೆ, ಟ್ರಂಪ್‌ಗೆ ಸಂಬಂಧಿಸಿದ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ.ಮಾಹಿತಿಯ ಪ್ರಕಾರ, ಅಮೆರಿಕದ ಮ್ಯಾನ್‌ಹ್ಯಾಟನ್‌ನಲ್ಲಿರುವ ಟ್ರಂಪ್ ಟವರ್‌ನಲ್ಲಿ ಅನುಮಾನಾಸ್ಪದ ಬಾಕ್ಸ್​​ ಪತ್ತೆಯಾಗಿದೆ. ಟ್ರಂಪ್ ಟವರ್‌ನಿಂದ ಸೀಕ್ರೆಟ್ ಸರ್ವಿಸ್ ಈ ಪ್ಯಾಕ್ ಅನ್ನು ವಶಪಡಿಸಿಕೊಂಡಿದೆ. ಸೋಮವಾರ ಮಧ್ಯಾಹ್ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಪ್ರಸಿದ್ಧ ಟ್ರಂಪ್ ಟವರ್‌ನ ಮೇಲ್ ಕೋಣೆಯಲ್ಲಿ ಅನುಮಾನಾಸ್ಪದ…

Read More

ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ: ಸ್ಪೆಷಲ್ ವಿಡಿಯೋ ಹಂಚಿಕೊಂಡ ವಿಜಯ್ ದೇವರಕೊಂಡ

ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇಂದು (ಏಪ್ರಿಲ್ 5) 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿಯ ಹುಟ್ಟುಹಬ್ಬ ರಶ್ಮಿಕಾ ಪಾಲಿಗೆ ಅತ್ಯಂತ ವಿಶೇಷವಾಗಿದೆ. ಏಕೆಂದರೆ ನಟ ವಿಜಯ್ ದೇವರಕೊಂಡ ಅವರೊಂದಿಗೆ ವಿವಾಹವಾದ ನಂತರ ಆಚರಿಸಿಕೊಳ್ಳುತ್ತಿರುವ ಮೊದಲ ಜನ್ಮದಿನ ಇದಾಗಿದೆ. ಈ ದಿನದಂದು ಪತಿ ವಿಜಯ್ ದೇವರಕೊಂಡ (Vijay Deverakonda) ಅವರು ‘ರಣಬಾಲಿ’ ಸಿನಿಮಾದ ಮೇಕಿಂಗ್ ವಿಡಿಯೋ ಹಂಚಿಕೊಳ್ಳುವ ಮೂಲಕ ರಶ್ಮಿಕಾಗೆ ಶುಭ ಕೋರಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಮತ್ತು ರಶ್ಮಿಕಾ ಜೋಡಿಯಾಗಿ…

Read More

IPL​ 2026 ಆರಂಭಕ್ಕೂ ಮುನ್ನವೇ RCBಗೆ ಆಘಾತ ನೀಡಿದ ಮುಂಬೈ ಇಂಡಿಯನ್ಸ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯುವುದು ಎಲ್ಲಿ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಲು ಇನ್ನೂ ಕೆಲ ದಿನಗಳವರೆಗೆ ಕಾಯಬೇಕಾಗಿ ಬರಬಹುದು. ಏಕೆಂದರೆ ಆರ್​ಸಿಬಿ ಫ್ರಾಂಚೈಸಿ ಬೆಂಗಳೂರಿನಿಂದ ಹೊರ ನಡೆಯಲು ತೆರೆಮರೆಯ ಪ್ರಯತ್ನ ಮುಂದುವರೆಸಿದ್ದಾರೆ. ಅದರಂತೆ ಐಪಿಎಲ್ 2026ರ ಸೀಸನ್‌ಗಾಗಿ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಅನ್ನು ತನ್ನ ತವರು ಮೈದಾನವಾಗಿ ಬಳಸಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲ್ಯಾನ್ ರೂಪಿಸಿತ್ತು. ಆದರೆ ಆರ್​ಸಿಬಿಯ ಈ ಮನವಿಯನ್ನು…

Read More

ನನಗಿಂತ ಕೆಟ್ಟವರು ಯಾರೂ ಇರುವುದಿಲ್ಲ; ಬಂಗಾಳದಲ್ಲಿ ಹಿಂಸಾಚಾರ ನಡೆಸುವವರಿಗೆ ಸಿಎಂ ಸುವೇಂದು ಅಧಿಕಾರಿ ಎಚ್ಚರಿಕೆ – Kannada News | West Bengal CM Suvendu Adhikaris tough warning on violence and vandalism in state

ಕೊಲ್ಕತ್ತಾ, ಜೂನ್ 12: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ಉಂಟಾದ ಭಾರಿ ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಕೃತ್ಯಗಳ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಸುವೇಂದು ಅಧಿಕಾರಿ (Suvendu Adhikari) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ದುಷ್ಕರ್ಮಿಗಳಿಗೆ ಅತ್ಯಂತ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ. ‘ಬಂಗಾಳದಲ್ಲೂ ಕಾಶ್ಮೀರದಂತೆ ಕಲ್ಲು ತೂರಾಟ ಅಂತ್ಯವಾಗಲಿದೆ’ ಎಂದು ಹಿಂಸಾಚಾರ ನಡೆಸುವವರಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಂಗಾಳದಲ್ಲಿ ನಡೆದ…

Read More

ಜೀ ಕನ್ನಡದಲ್ಲಿ ಪ್ರಸಾರ ಕಾಣಲಿದೆ ‘ಲ್ಯಾಂಡ್ ಲಾರ್ಡ್​’ ಸಿನಿಮಾ; ಇಲ್ಲಿದೆ ವಿವರ – Kannada News | Zee Kannada Premieres Blockbuster ‘Landlord’ Movie: Duniya Vijay, Rachita Ram and Raj B. Shetty

ಧಾರಾವಾಹಿ ಹಾಗೂ ರಿಯಾಲಿಟಿ ಶೋ ಪ್ರಸಾರ ಮಾಡುವ ಮೂಲಕ ಜೀ ಕನ್ನಡ ವಾಹಿನಿ ಕಿರುತೆರೆ ವೀಕ್ಷಕರ ಮನ ಗೆದ್ದಿದೆ. ಈಗ ಜೀ ಕನ್ನಡದಲ್ಲಿ (Zee Kannada) ಕನ್ನಡದ ಬ್ಲಾಕ್​​ಬಸ್ಟರ್ ಸಿನಿಮಾ ‘ಲ್ಯಾಂಡ್ ಲಾರ್ಡ್ ಪ್ರಸಾರ ಕಾಣುತ್ತಿದೆ. ಶನಿವಾರ (ಮೇ 22) ಸಂಜೆ 4 ಗಂಟೆಗೆ ಸಿನಿಮಾ ಪ್ರಸಾರ ಕಾಣಲಿದೆ. ಥಿಯೇಟರ್ ಹಾಗೂ ಒಟಿಟಿಯಲ್ಲಿ ಮಿಸ್ ಮಾಡಿಕೊಂಡವರು ಟಿವಿಯಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದಾಗಿದೆ. ‘ಲ್ಯಾಂಡ್ ಲಾರ್ಡ್’ ಸಿನಿಮಾದಲ್ಲಿ 80ರ ದಶಕದ ಕಥೆ ಇದೆ. ಈ ಸಿನಿಮಾ, ಶೋಷಣೆ, ಸಾಮಾಜಿಕ…

Read More

ಟಿಸಿಎಸ್ ಪ್ರಕರಣ: ತನಿಖೆ ತೀವ್ರ, ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ – Kannada News | TCS Nashik Probe: Conversion Attempts & Sexual Harassment Claims Lead to WFH, NIA

ಮುಂಬೈ, ಏಪ್ರಿಲ್ 16: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಚೇರಿಯಲ್ಲಿ ಕೇಳಿಬಂದಿರುವ ಮತಾಂತರ ಪ್ರಯತ್ನ ಹಾಗೂ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳು ಈಗ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿವೆ. ಪ್ರಕರಣದ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನೌಕರರಿಗೆ ವರ್ಕ್ ಫ್ರಮ್ ಹೋಮ್ (WFH) ಸೂಚಿಸಲಾಗಿದೆ. ನಾಸಿಕ್ ಪೊಲೀಸರು ತನಿಖೆ ವಿಸ್ತರಿಸುತ್ತಿದ್ದು, ಎನ್​ಐಎ, ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ಹಾಗೂ ರಾಜ್ಯ ಗುಪ್ತಚರ ಘಟಕಗಳ ಸಹಾಯ ಪಡೆಯುತ್ತಿದ್ದಾರೆ. ಏನಿದು ಟಿಸಿಎಸ್ ಪ್ರಕರಣ? ನಾಸಿಕ್‌ನ ಟಿಸಿಎಸ್…

Read More

ಕೊನೆಗೂ ಎಚ್ಚೆತ್ತ ಸರ್ಕಾರ: ತುಮಕೂರಿನ ಸಿದ್ಧಗಂಗಾ ಮಠಕ್ಕೆ ಎದುರಾಗಿದ್ದ ನೀರಿನ ಆತಂಕ ದೂರ – Kannada News | Tumakuru: water crisis facing Siddaganga Mutt has been resolved; KIADB Clears BESCOM Dues

ತುಮಕೂರು, ಜನವರಿ 29: ಪಂಪ್ ಹೌಸ್​ನ ವಿದ್ಯುತ್ ಬಿಲ್ (Electricity bill) ಪಾವತಿಸದ ಪರಿಣಾಮ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರಿನ ಸಂಪರ್ಕವನ್ನು ಕೆಐಎಡಿಬಿ ಅಧಿಕಾರಿಗಳು ಕಡಿತಗೊಳಿಸಿದ್ದರು. ಹೀಗಾಗಿ ಸಿದ್ಧಗಂಗಾ ಮಠಕ್ಕೆ ನೀರಿನ (Water) ಸಮಸ್ಯೆ ಆಗುವ ಆತಂಕ ಎದುರಾಗಿತ್ತು. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಚರ್ಚೆ, ಟೀಕೆ ನಡೆದಿತ್ತು. ಟಿವಿ9 ವರದಿ ಕೂಡ ಮಾಡಿತ್ತು. ಇದೀಗ ವರದಿ ಬೆನ್ನಲ್ಲೇ ಬಾಕಿ ಉಳಿದಿದ್ದ ಸುಮಾರು 1.96 ಕೋಟಿ ರೂ ಹಣವನ್ನು ಬೆಸ್ಕಾಂಗೆ ಕೆಐಎಡಿಬಿ ಪಾವತಿಸಿದೆ. ಆ…

Read More

‘ಧುರಂಧರ್ 2’ ಪೇಡ್​ ಪ್ರೀಮಿಯರ್ ಶೋ ಕ್ಯಾನ್ಸಲ್; ಕೊನೆ ಕ್ಷಣದಲ್ಲಿ ತೊಂದರೆ

‘ಧುರಂಧರ್ 2’ ಸಿನಿಮಾಗೆ (Dhurandhar 2 ) ಕೊನೆಯ ಕ್ಷಣದಲ್ಲಿ ತೊಂದರೆ ಎದುರಾಗಿದೆ. ಸಿನಿಮಾದ ಕೆಲವು ದೃಶ್ಯಗಳಿಗೆ ಕತ್ತರಿ ಹಾಗೂ ಬದಲಾವಣೆ ಮಾಡಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಇದರಿಂದ ಕನ್ನಡ, ತೆಲುಗು ಸೇರಿದಂತೆ ಮೊದಲಾದ ಭಾಷೆಗಳಲ್ಲಿ ಸಿನಿಮಾ ಇಂದು ಪ್​ರೀಮೀಯರ್ ಆಗೋದು ಅನುಮಾನ ಎಂದು ಹೇಳಲಾಗುತ್ತಿದೆ. ಇದರಿಂದ ಕನ್ನಡ, ತೆಲುಗು ವರ್ಷನ್ ಬುಕ್ ಮಾಡಿದವರಿಗೆ ಬೇಸರ ಆಗಿದೆ. ಈಗಾಗಲೇ ಬೆಂಗಳೂರಲ್ಲಿ ಕನ್ನಡ ವರ್ಷನ್ ಪ್ರೀಮಿಯರ್​​ ಶೋಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಮಾರ್ಚ್ 17ರಂದು ‘ಧುರಂಧರ್ 2’ ಚಿತ್ರಕ್ಕೆ ಪ್ರಮಾಣ…

Read More

Video: ಅಬ್ಬಾ ! ಒಂದು ಎಕರೆ ತೆಂಗಿನ ತೋಟದಲ್ಲಿ 28 ಲಕ್ಷ ರೂ ಗಳಿಸಬಹುದಂತೆ; ಹೇಗೆ? ಇಲ್ಲಿದೆ ವಿಡಿಯೋ – Kannada News | One can earn Rs 28 lakh from one acre of coconut plantation, Video goes viral

ಇತ್ತೀಚೆಗಿನ ದಿನಗಳಲ್ಲಿ ಕೃಷಿಯತ್ತ (agriculture) ಮುಖ ಮಾಡುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಅದಲ್ಲದೇ ಆಧುನಿಕ ಕೃಷಿಯಲ್ಲಿ ಟ್ರಾಕ್ಟರ್‌ಗಳು, ಡ್ರೋನ್‌ಗಳು, ಸ್ಮಾರ್ಟ್ ನೀರಾವರಿ, ಮತ್ತು ಜೈವಿಕ ತಂತ್ರಜ್ಞಾನದಂತಹ ಆಧುನಿಕ ಪರಿಕರಗಳ ಬಳಕೆಯ ಮೂಲಕ ಇಳುವರಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ ಕೃಷಿಯಲ್ಲಿ ಆಸಕ್ತಿ ಇದ್ದು, ತೆಂಗಿನ ತೋಟ ಮಾಡಬೇಕೆಂದು ಕೊಂಡವರು ಈ ವಿಧಾನ ಅನುಸರಿಸಿದ್ರೆ 28 ಲಕ್ಷ ರೂ ಆದಾಯ ಬರೋದು ಗ್ಯಾರಂಟಿಯಂತೆ. ಈ ಕುರಿತಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೈತ ಪ್ರಗತಿ (Raita Pragati) ಹೆಸರಿನ…

Read More

ರಾಮನಗರದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದ ಮುಸ್ಲಿಂ ಶಾಸಕ, ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು – Kannada News | Congress Muslim MLA Iqbal Hussain performs Pooja to Sriram During ramotsav at ramanagara

ರಾಮನಗರ, (ಜನವರಿ 15): ರೇಷ್ಮೆನಗರಿ ರಾಮನಗರದಲ್ಲಿ (Ramanagara( ನಾಲ್ಕು ದಿನ ರಾಮೋತ್ಸವ (ramotsav) ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಅಂಗವಾಗಿ ಇಂದು (ಜನವರಿ 15( ಮಕರ ಸಂಕ್ರಾಂತಿ ದಿನದಂದು ಶ್ರೀ ರಾಮತಾರಕ ಜಪ‌ ಯಜ್ಞ ‌ಪೂಜೆ ಮಾಡಲಾಗಿದೆ. ಅಚ್ಚರಿ ಅಂದ್ರೆ ಈ ಪೂಜೆಯಲ್ಲಿ ಮುಸ್ಲಿಂ ಶಾಸಕ ಇಕ್ಬಾಲ್ ಹುಸೇನ್ (Congress MLA Iqbal Hussain) ಪಾಲ್ಗೊಂಡಿದ್ದು, ರಾಮನಿಗೆ ಪೂಜೆ ಸಲ್ಲಿಸಿ ಗಮನಸೆಳೆದಿದ್ದಾರೆ. ಇನ್ನು ಈ ಬಗ್ಗೆ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಇತಿಹಾಸದ ಪುಟದಲ್ಲಿ ಬರೆಯುವ ರಾಮೋತ್ಸವ…

Read More