Headlines

Viral: ವ್ಯವಹಾರ ಶುದ್ಧವಾಗಿರಲಿ; ಸಾಲ ಕೇಳುವವರಿಗೆ ಅಂಗಡಿ ಮುಂಭಾಗ ಬೋರ್ಡ್ ಹಾಕಿ ಎಚ್ಚರಿಕೆ ಕೊಟ್ಟ ಮಾಲೀಕ

ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಮಾತಿದೆ. ಹಣದ ವಿಚಾರ ಬಂದ್ರೆ ಅತ್ಯಾಪ್ತರು ಸಹ ದೂರವಾಗಿ ಬಿಡ್ತಾರೆ. ಹೀಗಾಗಿ ವ್ಯಾಪಾರಸ್ಥರು ಹಾಗೂ ಅಂಗಡಿ ಮಾಲೀಕರು (shop owner) ವ್ಯವಹಾರ ವಿಷ್ಯದಲ್ಲಿ ಕಟ್ಟುನಿಟ್ಟಾಗಿ ಇರೋದನ್ನು ನೀವು ನೋಡಿರುತ್ತೀರಿ. ಅಷ್ಟೇ ಅಲ್ಲ, ಸಾಲ ಕೇಳಿ ಸ್ನೇಹ (Friendship) ಕಳೆದುಕೊಳ್ಳಬೇಡಿ ಅನ್ನೋದನ್ನು ದೊಡ್ಡ ಅಕ್ಷರದಲ್ಲಿ ಅಂಗಡಿಗಳಲ್ಲಿ ಬರೆದಿರುತ್ತಾರೆ. ಇದೀಗ ಇಂತಹದ್ದೇ ಅಂಗಡಿ ಮುಂಭಾಗದಲ್ಲಿನ  ಬೋರ್ಡ್‌ ಪೋಟೋ ವೈರಲ್‌ ಆಗಿದೆ. ಈ ಬೋರ್ಡ್‌ನಲ್ಲಿ ಸಾಲ ಕೇಳುವವರಿಗೆ  ಅಂಗಡಿ ಮಾಲೀಕ ಖಡಕ್…

Read More

ಬೆಂಗಳೂರಿನಲ್ಲಿ ನಕಲಿ ಕಾಲ್ ಸೆಂಟರ್ ಮೇಲೆ ಪೊಲೀಸರ ದಾಳಿ: ಷೇರು ಮಾರುಕಟ್ಟೆ ಹೆಸರಲ್ಲಿ ವಂಚಿಸುತ್ತಿದ್ದ ಇಬ್ಬರ ಬಂಧನ! – Kannada News | Jayanagar Stock Market Fraud: High Returns Scam Call Center Busted by Cyber Police

ಬೆಂಗಳೂರು, ಫೆ.24: ಸ್ಟಾಕ್ ಮಾರ್ಕೆಟ್‌ನಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಸಾರ್ವಜನಿಕರ ಹಣಕ್ಕೆ ಕನ್ನ ಹಾಕುತ್ತಿದ್ದ ಹೈಟೆಕ್ ವಂಚಕರ ಜಾಲವನ್ನು ಕರ್ನಾಟಕ ಸೈಬರ್ ಕಮಾಂಡ್ ಪತ್ತೆಹಚ್ಚಿದೆ. ಜಯನಗರದಲ್ಲಿ ಕಾಲ್ ಸೆಂಟರ್ ರೂಪದಲ್ಲಿ (stock market scam) ಕಾರ್ಯನಿರ್ವಹಿಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಜಯನಗರದ 9ನೇ ಬ್ಲಾಕ್‌ನ ಅಂಜನಾದ್ರಿ ಅವೆನ್ಯೂನಲ್ಲಿರುವ ‘ಮಲ್ಟಿವೇವ್ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂಸ್ಥೆಯು ಹೊರರಾಜ್ಯದ…

Read More

ಇದೇ ಮಾದರಿಯ ಕ್ಯಾಚ್ ಅಂದು ನಾಟ್​​ ಔಟ್, ಇಂದು ಔಟ್; ಇದೆಂತಹ ನ್ಯಾಯ? – Kannada News | Rajat Patidar’s Controversial Catch Sparks Debate – Starc’s Not Out vs Today’s Out

ಗುಜರಾತ್ ಟೈಟನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಆರ್​​​ಸಿಬಿ ಕ್ಯಾಪ್ಟನ್ ರಜತ್ ಪಟಿದಾರ್ ಅವರ ಕ್ಯಾಚ್ ಈಗ ಚರ್ಚೆಯ ಕೇಂದ್ರ ಬಿಂದು ಆಗಿದೆ. ಕೆಲವರು ಇದನ್ನು ನಾಟೌಟ್​ ಎಂದರೆ ಇನ್ನೂ ಕೆಲವರು ಔಟ್ ಎನ್ನುತ್ತಿದ್ದಾರೆ. ಹೀಗಿರುವಾಗಲೇ ಈ ಮೊದಲು ಮಿಚೆಲ್ ಸ್ಟಾರ್ಕ್​ ಅವರು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇದೇ ಮಾದರಿಯ ಕ್ಯಾಚ್ ಹಿಡಿದಿದ್ದರು. ಇದನ್ನು ನಾಟೌಟ್ ಎಂದು ಕೊಡಲಾಗಿತ್ತು. ಆದರೆ, ಇದೇ ಮಾದರಿಯ ಕ್ಯಾಚ್​​ ಅನ್ನು ಔಟ್ ಎಂದು ಕೊಡಲಾಗಿದೆ. ರಜತ್ ಪಟಿದಾರ್ ಅವರು ಸಿಕ್ಸ್…

Read More

ರಘು ಮೇಲಿನ ಎಮೋಷನ್: ‘ಟಿಕೆಟ್ ಟು ಟಾಪ್ 6’ ಆಟ ಬಿಟ್ಟುಕೊಟ್ಟ ರಕ್ಷಿತಾ ಶೆಟ್ಟಿ – Kannada News | Rakshitha Shetty quits during Ticket to Top 6 task in Bigg Boss Kannada Season 12

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಈಗ ಅಂತಿಮ ಹಂತದ ಹಣಾಹಣಿಗೆ ಸ್ಪರ್ಧೆ ಏರ್ಪಟ್ಟಿದೆ. ಹಾಗಾಗಿ ಎಲ್ಲರ ನಡುವೆ ಪೈಪೋಟಿ ಜಾಸ್ತಿ ಆಗಿದೆ. ಈ ವಾರ ‘ಟಿಕೆಟ್ ಟು ಟಾಪ್ 6’ ಟಾಸ್ಕ್ ನಡೆಯುತ್ತಿದೆ. ಅಂದರೆ, ಅಂತಿಮ 6 ಮಂದಿಯ ನಡುವೆ ನಡೆಯಲಿರುವ ಸ್ಪರ್ಧೆಗೆ ಯಾರು ಅರ್ಹರು ಎಂಬುದನ್ನು ನಿರ್ಧರಿಸಲು ಟಾಸ್ಕ್ ನೀಡಲಾಗುತ್ತಿದೆ. ಈ ಆಟದಲ್ಲಿ ಈಗಾಗಲೇ ಧ್ರುವಂತ್ ವಿರುದ್ಧ ಸೋತು ಗಿಲ್ಲಿ ನಟ ಅವರು ಔಟ್ ಆಗಿದ್ದಾರೆ….

Read More

VIDEO: ಅದ್ಭುತ ಕ್ಯಾಚ್ ಹಿಡಿದ ಪ್ರೇಕ್ಷಕನಿಗೆ ಸಿಕ್ತು 20 ಸಾವಿರ ರೂ..! – Kannada News | Unbelievable catch in tape ball cricket

ಪಂದ್ಯ ವೀಕ್ಷಿಸಲು ಹೋಗಿ ಅದ್ಭುತ ಕ್ಯಾಚ್ ಹಿಡಿದು ಪ್ರೇಕ್ಷಕನೋರ್ವ 20 ಸಾವಿರ ರೂ. ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. ಇಂತಹದೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಪಾಕಿಸ್ತಾನದ ಟೇಪ್​ ​​ಬಾಲ್ ಚಾಂಪಿಯನ್​ಶಿಪ್ ಟೂರ್ನಿ. ಈ ಪಂದ್ಯದಲ್ಲಿ ಮುಲ್ತಾನ್ ಹಾಗೂ ಸಿಯಾಕೋಟ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ಪರ ವಿಕ್ಕಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪ್ರದರ್ಶನದೊಂದಿಗೆ ಬಾರಿಸಿದ ಸಿಕ್ಸರ್​ವೊಂದು ಪ್ರೇಕ್ಷಕರಿದ್ದ ಗ್ಯಾಲರಿಗೆ ಸಾಗಿತ್ತು. ಈ ವೇಳೆ ವ್ಯಕ್ತಿಯೋರ್ವ ಓಡಿ ಬಂದು ಚೆಂಡು ಹಿಡಿದಿದ್ದಾರೆ. ಓಡಿ ಬಂದ ರಭಸಕ್ಕೆ ನಿಯಂತ್ರಣ…

Read More

ಸಿಎಸ್​​ಕೆಗೆ ಬಂದ ಹೀನಾಯ ಸ್ಥಿತಿ ನೋಡಿ ಭಾವುಕರಾದ ಜಡೇಜಾ

ಸಿಎಸ್​​ಕೆ ಕಳೆದ ವರ್ಷ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಈ ಬಾರಿ ಹಾಗಾಗಬಾರದು ಎಂದು ಅವರು ಅಂದುಕೊಂಡಿದ್ದರು. ಆದರೆ, ಹಾಗಾಗಿಲ್ಲ. ಮೊದಲ ಪಂದ್ಯದಲ್ಲೇ ಸಿಎಸ್​​ಕೆ ಹೀನಾಯವಾಗಿ ಸೋತಿದೆ. ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ 60 ರನ್​​​ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಕ್ಯಾಮೆರಾ ಜಡೇಜಾ ಕಡೆ ತಿರುಗಿತು. ಆಗ ಅವರು ಭಾವುಕರಾದಂತೆ ಕಂಡುಬಂತು. ಈ ವಿಡಿಯೋ ವೈರಲ್ ಆಗಿದೆ. ಜಡೇಜಾ ಕಳೆದ ಬಾರಿ ಸಿಎಸ್​​​ಕೆ ಅಲ್ಲಿದ್ದರು. ಅವರನ್ನು ನಂತರ ಆರ್​​ಆರ್​​ಗೆ ಕಳುಹಿಸಲಾಯಿತು. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ…

Read More

ಬೇಸಿಗೆ ರಜೆಯಲ್ಲಿ ಮಕ್ಕಳ ಮೇಲೆ ನಿಗಾ ಇರಲಿ! ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಕುಣಿಕೆ ಬಿಗಿದು ಬಾಲಕಿ ಸಾವು – Kannada News | Shivamogga Child Death: 9 Year Old Dies in Tragic Swing Accident in summer holidays

ಶಿವಮೊಗ್ಗ, ಏಪ್ರಿಲ್ 24: ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಕುಣಿಕೆ ಬಿಗಿದು 9 ವರ್ಷದ ಬಾಲಕಿ ಸಾವನ್ನಪ್ಪಿರುವ ದುರ್ಘಟನೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ಸಂಭವಿಸಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಬಾಲಕಿಯನ್ನು ಶಿವಮೊಗ್ಗ (Shivamogga) ನಗರದ ವಿದ್ಯಾನಗರ ನಿವಾಸಿ ಪ್ರಣಮ್ಯ ಎಂದು ಗುರುತಿಸಲಾಗಿದೆ. ಘಟನೆಯಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದ್ದು, ಪಾಲಕರ ಆಕ್ರಂದನ ಮನಕಲಕುವಂತಿದೆ. ಕೋಣೆ ಬಾಗಿಲು ಹಾಕಿಕೊಂಡು ಜೋಕಾಲಿ ಆಡುತ್ತಿದ್ದ ಬಾಲಕಿ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ…

Read More

ಕೊನೆಗೂ ಗೆದ್ದ ಸಲ್ಮಾನ್ ಖಾನ್? ‘ಮಾತೃಭೂಮಿ’ ಚಿತ್ರಕ್ಕೆ ಭರ್ಜರಿ ಪಾಸಿಟಿವ್ ವಿಮರ್ಶೆ

ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಅದೆಷ್ಟು ಸೋಲುಗಳನ್ನು ಕಂಡರೋ. ಬಹುಶಃ ಅವರಿಗೂ ಅದರ ಲೆಕ್ಕ ತಪ್ಪಿ ಹೋಗಿರಬಹುದು. ಒಂದು ಕಾಲದಲ್ಲಿ ಬಾಲಿವುಡ್​​ನಲ್ಲಿ ದೊಡ್ಡ ಮಟ್ಟದಲ್ಲಿ ಪಾರುಪತ್ಯ ನಡೆಸಿದ್ದ ಅವರು, ಈಗ ಗೆಲ್ಲಲು ಹಾತೊರೆಯುತ್ತಿದ್ದಾರೆ. ಈಗ ಸಲ್ಮಾನ್ ಖಾನ್ ಅವರು ‘ಮಾತೃಭೂಮಿ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಾಣುವ ನಿರೀಕ್ಷೆಯಲ್ಲಿ ಇದ್ದಾರೆ. ಹೀಗಿರುವಾಗಲೇ ಸಿನಿಮಾಗೆ ಪಾಸಿಟಿವ್ ವಿಮರ್ಶೆ ಸಿಕ್ಕಿದೆ. ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್​’ ಅನ್ನೋದು ಸಿನಿಮಾದ ಹೆಸರು. ಈ ಚಿತ್ರವನ್ನು ಅಪೂರ್ವ ಲಖಿಯಾ ಅವರು…

Read More

ಭಾರತದಲ್ಲಿ ಹಸಿರು ಹೈಡ್ರೋಜನ್ ಬೆಲೆ ದಾಖಲೆಯ ಮಟ್ಟಕ್ಕೆ ಇಳಿಕೆ; ಮುಂಬೈನಲ್ಲಿ ಪ್ರಲ್ಹಾದ್ ಜೋಶಿ ಹೇಳಿಕೆ – Kannada News | Union Minister Pralhad Joshi Addressed at the Mumbai Climate Week

ಮುಂಬೈ, ಫೆಬ್ರವರಿ 17: ಭಾರತದಲ್ಲಿ ಹಸಿರು ಹೈಡ್ರೋಜನ್ ಬೆಲೆ ಐತಿಹಾಸಿಕ ಮಟ್ಟಕ್ಕೆ ಇಳಿಕೆ ಕಂಡಿದೆ. 279 ರೂ. ದರದೊಂದಿಗೆ ಭಾರತ ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ಹೊಸ ಜಾಗತಿಕ ಮಾನದಂಡ ಸ್ಥಾಪಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಘೋಷಿಸಿದ್ದಾರೆ. ಮುಂಬೈಯಲ್ಲಿ ಇಂದು ಆಯೋಜಿಸಿದ್ದ “ಹವಾಮಾನ ಸಪ್ತಾಹ 2026” ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಹಸಿರು ಹೈಡ್ರೋಜನ್ ಬೆಲೆ ಪ್ರತಿ ಕೆಜಿಗೆ 279 ರೂ….

Read More

ಮೌಂಟ್ ಎವರೆಸ್ಟ್ ಏರಿದ ಬೆಂಗಳೂರಿನ ಪರ್ವತಾರೋಹಿಗಳು: ಕೆಎಂಎ 60ನೇ ವರ್ಷಾಚರಣೆ ಪ್ರಯುಕ್ತ ಸಾಧನೆ – Kannada News | Bengaluru Duo Scales Mount Everest: Santhosh Devarajappa and Dr Chinmayee Thrishulamurthy Conquered World’s Highest Peak

ಮೌಂಟ್ ಎವರೆಸ್ಟ್ ತುತ್ತತುದಿಯಲ್ಲಿ ಡಾ. ಚಿನ್ಮಯಿ ತ್ರಿಶೂಲಮೂರ್ತಿ, ಸಂತೋಷ್ ದೇವರಾಜಪ್ಪ ಸಂಭ್ರಮದ ಕ್ಷಣImage Credit source: The New Indian Express ಬೆಂಗಳೂರು, ಮೇ 25: ಕರ್ನಾಟಕ (Karnataka) ಪರ್ವತಾರೋಹಣ ಸಂಸ್ಥೆಯ (KMA) 60ನೇ ವಾರ್ಷಿಕೋತ್ಸವದ ಸಂಭ್ರಮದ ಸಂದರ್ಭದಲ್ಲಿ ಬೆಂಗಳೂರಿನ ಇಬ್ಬರು ಸಾಹಸಿಗಳು ಜಗತ್ತಿನ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಏರಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬೆಂಗಳೂರು ಮೂಲದ 40 ವರ್ಷದ ಉದ್ಯಮಿ ಸಂತೋಷ್ ದೇವರಾಜಪ್ಪ ಮತ್ತು 45 ವರ್ಷದ ನೇತ್ರ ತಜ್ಞೆ (Ophthalmologist) ಡಾ….

Read More