ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ಗಾಳಿ ಬೀಸಿದಂತೆ ಹೆಚ್ಚಾಗುತ್ತಿರುವ ಬೆಂಕಿಯ ಜ್ವಾಲೆ – Kannada News | Chikkamagaluru: Forest Fire Breaks Out in Forest Area Near Sakharayapattana

ಚಿಕ್ಕಮಗಳೂರು, ಜನವರಿ 05: ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಗುಡ್ಡ ಪ್ರದೇಶದಲ್ಲಿ ನಿರಂತರ ಗಾಳಿಯಿಂದಾಗಿ ಬೆಂಕಿ ವ್ಯಾಪಕವಾಗಿ ಹರಡುತ್ತಿದೆ. ಸದ್ಯ ಸ್ಥಳಿಯರ ಸಹಕಾರದಿಂದ ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ: ಅಸಲಿಗೆ ಆಗಿದ್ದೇನು? – Kannada News | A Drunken father kills 29 year old son after clash at home chikkamagalur

ಚಿಕ್ಕಮಗಳೂರು (ಜನವರಿ.05) ಅಪ್ಪ ಮಗನಿಂದ ಪ್ರತಿ ದಿನ ಮನೆಯಲ್ಲಿ ಜಗಳ. ಕುಡಿದು ಬರುತ್ತಿದ್ದ ಅಪ್ಪನ ನಿಯಂತ್ರಿಸಲು ಮಗ ಹೊರಟಿದ್ದರೆ, ಮಗನ ಮೇಲೆ ಸವಾರಿ ಮಾಡುವುದು ಅಪ್ಪನ ಪ್ರತಿನಿತ್ಯದ ಕೆಲಸವಾಗಿತ್ತು. ಹೀಗೆ ಕುಡಿದ ಬಂದ ತಂದೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ. ಕುಡಿದ ಮತ್ತಿನಲ್ಲಿ ತಂದೆ ತನ್ನ ಮಗನನ್ನೇ ಹತ್ಯೆಗೈದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ನಡೆದಿದ್ದು, ರಮೇಶ್ ಅಚಾರ್ ಕುಟುಂಬ ಛಿದ್ರವಾಗಿದೆ. ಇದ್ದ ಒಬ್ಬ ಮಗ 29 ವರ್ಷದ ಪ್ರದೀಪ್ ಆಚಾರ್ ಬಲಿಯಾಗಿದ್ದಾನೆ. ಇತ್ತ ರಮೇಶ್ ಆಚಾರ್ ಪತ್ನಿ ಇವರಿಬ್ಬರ ಸುದೀರ್ಘ ಜಗಳದಿಂದ ಬೇಸತ್ತು ಮನೆ ಬಿಟ್ಟು ಹೋಗಿ ವರ್ಷಗಳು ಉರುಳಿದೆ. ಒಂದು ಸುಂದರ ಕುಟುಂಬ ಇದೀಗ ಛಿದ್ರವಾಗಿದ್ದು ಮಾತ್ರವಲ್ಲ ಮಗು ಮಸಣ ಸೇರಿದರೆ, ಅಪ್ಪ ಜೈಲು ಸೇರಿದ್ದಾನೆ.

ಇದನ್ನೂ ಓದಿ: ಹುಟ್ಟಿಸಿದ ಮಗನ ಬಲಿ ಪಡೆದ ತಂದೆ: ಅಪ್ಪನ ಚಟಕ್ಕೆ ಹೋಯ್ತು ಪುತ್ರನ ಪ್ರಾಣಪಕ್ಷಿ 

ಕ್ಷುಲಕ ಕಾರಣಕ್ಕೆ ಕುಡಿದು ಪದ ಪದೇ ಅಪ್ಪ ಮಗನ ಗಲಾಟೆ ನಡೆಯುತ್ತಿತ್ತು. ಇವರ ಗಲಾಟೆ ಬಿಡಿಸುವಾಗ ಪತ್ನಿಗೂ ಎರಡೇಟು ಸಿಗುತ್ತಿತ್ತು. ಬುದ್ದಿ ಹೇಳಿದರೂ ಕೇಳಲಿಲ್ಲ, ಗದರಿಸಿದರೂ ಆಗಲಿಲ್ಲ. ಹೀಗಾಗಿ ಅಪ್ಪ ಮಗನ ಸಹವಾಸವೇ ಸಾಕು ಎಂದು ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ. ಇತ್ತ ಹಲವು ತಿಂಗಳಿಂದ ಅಪ್ಪ ಮಗ ಇಬ್ಬರೇ ಮನೆಯಲ್ಲಿ ವಾಸವಿದ್ದರು. ಆದರೆ ಜಗಳ ಹಾಗೇ ಮುಂದುವರಿದಿತ್ತು.

Source link

ಭಕ್ತಿ, ಜನಸಂಖ್ಯೆ, ದಾಸೋಹದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ

Source link

ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಹತ್ಯೆ; 3 ವಾರಗಳಲ್ಲಿ ಅಲ್ಪಸಂಖ್ಯಾತರ ಮೇಲೆ 5ನೇ ದಾಳಿ – Kannada News | Another Hindu Man Killed In Bangladesh 5th Attack in three weeks

ಢಾಕಾ, ಜನವರಿ 5: ಬಾಂಗ್ಲಾದೇಶದಲ್ಲಿ ಇಂದು ಮತ್ತೊಬ್ಬ ಹಿಂದೂ ವ್ಯಕ್ತಿಯ ಗುಂಡಿನ ದಾಳಿ ನಡೆದಿದ್ದು, ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ಅಲ್ಲಿ ನಡೆದ ಅಶಾಂತಿಯ ಬಳಿಕ ಬಾಂಗ್ಲಾದೇಶದಲ್ಲಿ (Bangladesh) ನಡೆದ 5ನೇ ಘಟನೆ ಇದಾಗಿದೆ. ಮೃತ ವ್ಯಕ್ತಿಯನ್ನು ರಾಣಾ ಪ್ರತಾಪ್ ಬೈರಾಗಿ ಎಂದು ಗುರುತಿಸಲಾಗಿದ್ದು, ಇಂದು ಮಧ್ಯಾಹ್ನ ಜೆಸ್ಸೋರ್ ಜಿಲ್ಲೆಯ ಕೊಪಾಲಿಯಾ ಬಜಾರ್‌ನಲ್ಲಿ ಕೆಲವು ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಬೈರಾಗಿ ಅರುವಾ ಗ್ರಾಮದ ನಿವಾಸಿಯಾಗಿದ್ದು ಶಾಲೆಯಲ್ಲಿ ಪಾಠ ಹೇಳಿಕೊಡುತ್ತಿದ್ದರು. ಅವರು ಮಾರುಕಟ್ಟೆಯಲ್ಲಿದ್ದಾಗ ಕೆಲವು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಘಟನೆಯ ನಂತರ, ದಾಳಿಕೋರರು ಓಡಿಹೋದರು. ಹಲ್ಲೆಯಿಂದಾಗಿ ಬೈರಾಗಿ ಸ್ಥಳದಲ್ಲೇ ಸಾವನ್ನಪ್ಪಿದರು.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ

ಬೈರಾಗಿಯ ಹತ್ಯೆ ಬಾಂಗ್ಲಾದೇಶದಲ್ಲಿ ನಡೆದ ಐದನೇ ಘಟನೆಯಾಗಿದ್ದು, ಮೊದಲನೆಯದಾಗಿ, ಡಿಸೆಂಬರ್ 18ರಂದು ಮೈಮೆನ್ಸಿಂಗ್‌ನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯ ಕೆಲಸಗಾರ ದೀಪು ಚಂದ್ರ ದಾಸ್ ಅವರನ್ನು ಗುಂಪೊಂದು ಹಲ್ಲೆ ನಡೆಸಿ ಥಳಿಸಿ ಕೊಂದಿತ್ತು. ಈ ಘಟನೆಯ 6 ದಿನಗಳ ನಂತರ ಪಂಗ್ಶಾ ಉಪಜಿಲ್ಲಾದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿ ಅಮೃತ್ ಮೊಂಡಲ್ ಅವರನ್ನು ದೇವರ ದೂಷಣೆಯ ಆರೋಪದ ಮೇಲೆ ಗುಂಪು ಥಳಿಸಿ ಕೊಂದಿತ್ತು.

ಬಳಿಕ, ಬಜೇಂದ್ರ ಬಿಸ್ವಾಸ್ ಅವರನ್ನು ಮೈಮೆನ್ಸಿಂಗ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಈ ತಿಂಗಳ ಆರಂಭದಲ್ಲಿ ಕೆಲಸದಿಂದ ಹಿಂತಿರುಗುತ್ತಿದ್ದ 50 ವರ್ಷದ ಹಿಂದೂ ಉದ್ಯಮಿ ಖೋಕೋನ್ ದಾಸ್ ಅವರ ಮೇಲೂ ಗುಂಪೊಂದು ಹಲ್ಲೆ ನಡೆಸಿ ಬೆಂಕಿ ಹಚ್ಚಿತು. ಕೆಲವು ದಿನಗಳ ಕಾಲ ಜೀವನ್ಮರಣದ ಹೋರಾಟ ನಡೆಸಿದ ನಂತರ ಅವರು ಶನಿವಾರ (ಜನವರಿ 3) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು

ಕಳೆದ ತಿಂಗಳು, ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿತ್ತು. ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಅವರು ನೆರೆಯ ದೇಶದಲ್ಲಿ ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರದ ಅಡಿಯಲ್ಲಿ ಅಲ್ಪಸಂಖ್ಯಾತರ ಮೇಲೆ 2,900ಕ್ಕೂ ಹೆಚ್ಚು ದಾಳಿ ಘಟನೆಗಳು ವರದಿಯಾಗಿವೆ ಎಂದು ಹೇಳಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಅಬ್ಬಬ್ಬಾ ಏನ್ ಜನ ಗುರು! ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ – Kannada News | Full Crowd In Koppal Gavisiddheshwar Rathotsav video caught In Drone Camera

ಕೊಪ್ಪಳ, (ಜನವರಿ 05): ಭಕ್ತ ಸಾಗರದ ನಡುವೆ ಭವ್ಯ ರಥೋತ್ಸವಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ತಲೆ ಎತ್ತಿ ನಿಂತಿರುವ ಭಕ್ತರ ಸಮೂಹ. ಇರುವೆ ಸಾಲಿನಂತೆ ಸಾಗುತ್ತಿರುವ ಜನರ ದಂಡು.ಇದು ಕೊಪ್ಪಳದ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಕಂಡುಬಂದ ದೃಶ್ಯ. ಹೌದು..ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ (Koppal Gavisiddheshwar Rathotsav) ಇಂದು ಅದ್ದೂರಿಯಾಗಿ ನೆರವೇರಿತು. ನಮ್ಮ ಹೆಮ್ಮೆಯ ಕೊಪ್ಪಳ ಮೂಲದವರೇ ಆದ, ಸದ್ಯ ಮೇಘಾಲಯ ರಾಜ್ಯಪಾಲರಾಗಿರುವ ಗೌರವಾನ್ವಿತ ಹೆಚ್.ಸಿ. ವಿಜಯಶಂಕರ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದ್ದು, ಲಕ್ಷಾಂತರ ಭಕ್ತರ ಹರ್ಷೋದ್ಗಾರ, ಮೈಸೂರುಪಾಕ್-ಪ್ರಸಾದದ ಘಮಲು ಹಾಗೂ ಅಜ್ಜನ ದರ್ಶನಕ್ಕಾಗಿ ಜನಸಾಗರವೇ ಹರಿದುಬಂದಿದೆ. ಇನ್ನು ಕೊಪ್ಪಳ ಅಜ್ಜನ ಜಾತ್ರೆ ಡ್ರೋಣ್ ದೃಶ್ಯ ನೋಡಿದರೆ ಎಲ್ಲಿ ನೋಡಿದರೂ ಜನ. ನೀವೂ ಒಂದು ಸಲ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ರಾಕಿಂಗ್ ಸ್ಟಾರ್’ ಯಶ್ ಹುಟ್ಟುಹಬ್ಬಕ್ಕೆ ರಾಜ್ಯಾದ್ಯಂತ ರಾರಾಜಿಸುತ್ತಿರುವ ಬಿಲ್​ಬೋರ್ಡ್​

Source link

ಆಗಷ್ಟೇ ಹುಟ್ಟಿದ ಮಗುವನ್ನು ಕಸದ ತೊಟ್ಟಿಗೆ ಎಸೆದ ತಾಯಿ! – Kannada News | Woman Thrown Baby to Hospital Dustbin after the delivery in tamil nadu shocking news

ಚೆನ್ನೈ, ಜನವರಿ 5: ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯ ತಿರುಚೆಂದೂರಿನ ಯುವತಿಯೊಬ್ಬಳು ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದ (Delivery) ಕೆಲವೇ ಗಂಟೆಗಳಲ್ಲಿ ಯುವತಿಯೊಬ್ಬಳು ತನ್ನ ಮಗುವನ್ನು ಕಸದ ತೊಟ್ಟಿಗೆ ಎಸೆದಿದ್ದಾಳೆ. ಕಸದ ತೊಟ್ಟಿಯಲ್ಲಿ ಮಗು ಸಿಕ್ಕ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಮಗು ಜನಿಸಿದ ಕೆಲವೇ ಗಂಟೆಗಳಲ್ಲಿ ನವಜಾತ ಶಿಶುವನ್ನು ಎಸೆಯಲಾಗಿದೆ.

ಆ ಯುವತಿಗೆ ಯುವಕನೊಬ್ಬನ ಜೊತೆ ನಿಶ್ಚಿತಾರ್ಥವಾಗಿತ್ತು. ಆದರೆ ಆತನೊಂದಿಗಿನ ನಿಕಟ ಸಂಬಂಧದಿಂದಾಗಿ ಆಕೆ ಗರ್ಭಿಣಿಯಾದಳು ಎಂದು ತಿಳಿದುಬಂದಿದೆ. ಆ ಯುವತಿ ಮತ್ತು ಆಕೆ ಮದುವೆಯಾಗಬೇಕಿದ್ದ ಯುವಕ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಅಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಳು. ಮದುವೆಗೂ ಮೊದಲೇ ತಾವು ಅಪ್ಪ-ಅಮ್ಮ ಆದ ವಿಷಯ ಗೊತ್ತಾದರೆ ಮನೆಯವರು ಸುಮ್ಮನಿರುವುದಿಲ್ಲ ಎಂಬ ಕಾರಣಕ್ಕೆ ಅವರಿಬ್ಬರೂ ಸೇರಿಯೇ ಯಾರಿಗೂ ತಿಳಿಯದಂತೆ ಆ ಮಗುವನ್ನು ಕಸದ ತೊಟ್ಟಿಗೆ ಎಸೆದಿದ್ದಾರೆ.

ಇದನ್ನೂ ಓದಿ: ಹೆತ್ತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿ ಗರ್ಭಿಣಿ ಮಾಡಿದ ಅಪ್ಪನಿಗೆ ಗಲ್ಲು ಶಿಕ್ಷೆ!

ಈ ವಿಷಯಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಆಡಳಿತ ಮಂಡಳಿ ನೀಡಿದ ಮಾಹಿತಿಯ ಪ್ರಕಾರ, ಈ ಘಟನೆ ನಡೆದ ಸ್ಥಳಕ್ಕೆ ತೆರಳಿ ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಮಗುವನ್ನು ಕಾಪಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ತಿರುಚೆಂಡೂರು ತಾಲ್ಲೂಕು ಪೊಲೀಸರು ಯುವತಿ ಮತ್ತು ಆಕೆ ಮದುವೆಯಾಗಲಿರುವ ಯುವಕನನ್ನು ಬಂಧಿಸಿ ತೀವ್ರ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಆರೋಗ್ಯ ಸಮಸ್ಯೆ ನಿಮಗಿದ್ದು ರಾತ್ರಿ ಹಾಲು ಕುಡಿಯುತ್ತಿದ್ದರೆ ನೀವು ತುಂಬಾ ಅಪಾಯದಲ್ಲಿದ್ದೀರಿ ಎಂದರ್ಥ! – Kannada News | Drinking Milk at Night: Risks & Precautions

ಹಾಲು (Milk) ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪ್ರತಿದಿನ ಹಾಲು ಕುಡಿಯುತ್ತಾರೆ. ದಿನನಿತ್ಯ ಒಂದು ಲೋಟ ಹಾಲು ಕುಡಿಯುವುದರಿಂದ ದೇಹಕ್ಕೆ ಅನೇಕ ರೀತಿಯ ಪೋಷಕಾಂಶಗಳು ದೊರೆಯುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದರಲ್ಲಿಯೂ ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಆಯಾಸವನ್ನು ಕಡಿಮೆ ಮಾಡುತ್ತದೆ. ಬೆಳಿಗ್ಗೆ ಅಥವಾ ಸಂಜೆ ಹಾಲು ಕುಡಿಯುವುದು ಪ್ರಯೋಜನಕಾರಿ. ಆದರೆ ಕೆಲವರಿಗೆ ಹಾಲು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳನ್ನು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಇದು ಕೆಲವರಿಗೆ ಆಶ್ಚರ್ಯ ಹುಟ್ಟಿಸಿದರೂ ಕೂಡ ಸತ್ಯ. ಹಾಗಾದ್ರೆ ಇದು ಯಾರಿಗೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

ಹಾಲಿನ ಸೇವನೆ ಯಾರಿಗೆ ಒಳ್ಳೆಯದಲ್ಲ?

ಲ್ಯಾಕ್ಟೋಸ್ ಅಲರ್ಜಿಯಿಂದಾಗಿ ಹಾಲು ಸೇವನೆ ಮಾಡುವುದು ಕೆಲವರ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ, ಬೊಜ್ಜಿನ ಸಮಸ್ಯೆ ಎಲ್ಲರಲ್ಲಿಯೂ ಹೆಚ್ಚಾಗುತ್ತಿದ್ದು ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ರಾತ್ರಿ ಮಲಗುವಾಗ ಹಾಲು ಕುಡಿಯಬಾರದು. ಏಕೆಂದರೆ ಹಾಲಿನಲ್ಲಿರುವ ಕೊಬ್ಬು ಮತ್ತು ಕ್ಯಾಲೊರಿಗಳನ್ನು ದೇಹ ಹೀರಿಕೊಂಡು, ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಈಗಾಗಲೇ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಸಮಯದಲ್ಲಿ ಹಾಲು ಕುಡಿಯುವುದನ್ನು ಆದಷ್ಟು ತಪ್ಪಿಸುವುದು ಒಳ್ಳೆಯದು.

ಇದನ್ನೂ ಓದಿ: ಮೊಟ್ಟೆ ತಿಂದ್ರೆ ಕೆಮ್ಮು ಕಡಿಮೆಯಾಗುತ್ತದೆಯೇ? ಇಲ್ಲಿದೆ ಅಚ್ಚರಿ ಮಾಹಿತಿ

ಅಷ್ಟೇ ಅಲ್ಲ, ಸೈನಸ್ ಮತ್ತು ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ರಾತ್ರಿ ಹಾಲು ಕುಡಿಯಬಾರದು. ಏಕೆಂದರೆ ಈ ಅಭ್ಯಾಸ ಲೋಳೆಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಟೈಪ್ 2 ಮಧುಮೇಹ ಇರುವವರು ಹಾಲಿನ ಸೇವನೆಯ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು. ಅದಕ್ಕಾಗಿಯೇ ಮಧುಮೇಹ ರೋಗಿಗಳು ರಾತ್ರಿಯಲ್ಲಿ ಹಾಲು ಕುಡಿಯದಂತೆ ವೈದ್ಯರು ಸಲಹೆ ನೀಡುತ್ತಾರೆ. ಹಾಲಿನಲ್ಲಿರುವ ಲ್ಯಾಕ್ಟೋಸ್ ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇನ್ನು ಗ್ಯಾಸ್, ಅಜೀರ್ಣ ಅಥವಾ ಆಮ್ಲೀಯತೆಯಿಂದ ಬಳಲುತ್ತಿರುವವರು ರಾತ್ರಿಯಲ್ಲಿ ಹಾಲು ಕುಡಿಯಬಾರದು, ಏಕೆಂದರೆ ಇದು ಈ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KSRTC ಪ್ರಯಾಣಿಕರಿಗೆ ಹೊಸ ವರ್ಷದ ಗುಡ್​ ನ್ಯೂಸ್: ಬಸ್‌ ಟಿಕೆಟ್‌ ದರದಲ್ಲಿ ಭಾರೀ ಡಿಸ್ಕೌಂಟ್ – Kannada News | KSRTC Announces 5 to 15 Percent bus fare discounts on these routes from bengaluru

ಬೆಂಗಳೂರು, (ಜನವರಿ 05): ಹೊಸ ವರ್ಷಕ್ಕೆ (New Year 2026)  ಬಸ್‌ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. KSRTC ಬಸ್‌ ನಲ್ಲಿ ನಾಲ್ಕು ಅಥವಾ ಹೆಚ್ಚಿನ ಪ್ರಯಾಣಿಕರು ಮುಂಗಡ ಬುಕ್ಕಿಂಗ್ ಮಾಡಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ಹಾಗೂ ಒಂದು ಕಡೆ ಹಾಗೂ ಎರಡು ಕಡೆಯ ಪ್ರಯಾಣದ ಬುಕ್ಕಿಂಗ್ ಒಟ್ಟಿಗೆ ಮಾಡಿದದರೆ, ಪ್ರಯಾಣ ದರಕ್ಕೆ ಶೇಕಡ 10ರಷ್ಟು ರಿಯಾಯಿತಿ ನೀಡಲಾಗಿದೆ.​​ ಇನ್ನು ಎಲ್ಲಾ ರೀತಿಯ KSRTC ಬಸ್‌ಗಳಲ್ಲಿ  ಪ್ರಯಾಣಿಕರ ಅನುಕೂಲಕ್ಕಾಗಿ ಶೇ.10 ರಿಂದ ಶೇ. 15ರ ವರೆಗೆ ಪ್ರಯಾಣದರಗಳನ್ನು ಇಳಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಇದು ಇಂದಿನಿಂದ (ಜನವರಿ 5) ಜಾರಿಗೆ ಬಂದಿದೆ.

ಇನ್ನು ಕೆಲವು ಆಯ್ದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಪ್ರತಿಷ್ಠಿತ ಸಾರಿಗೆಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಮಾದರಿಯ ಸಾರಿಗೆಗಳ ಪ್ರಯಾಣ ದರಗಳಲ್ಲಿ ಶೇಕಡ 5 ರಿಂದ 15% ರವರೆಗೆ ರಿಯಾಯಿತಿ ನೀಡಲಾಗಿದೆ.

ಇದನ್ನೂ ಓದಿ: ಈ ಯೋಜನೆಗೆ ಕೇಂದ್ರದ ಅನುಮೋದನೆ ಸಿಕ್ಕರೆ ಬೆಂಗಳೂರಿನಿಂದ ಪುಣೆಗೆ ತಲುಪಲು 7 ಗಂಟೆ ಸಾಕು

ಈ ಮಾರ್ಗದ ಬಸ್ ಟಿಕೆಟ್‌ ದರದಲ್ಲಿ ಡಿಸ್ಕೌಂಟ್

ಬೆಂಗಳೂರು-ಮಂಗಳೂರು, ಬೆಂಗಳೂರು-ಕುಂದಾಪುರ, ಬೆಂಗಳೂರು-ಉಡುಪಿ, ಬೆಂಗಳೂರು-ಧರ್ಮಸ್ಥಳ, ಬೆಂಗಳೂರು-ಕುಕ್ಕೆಸುಬ್ರಮಣ್ಯ, ಬೆಂಗಳೂರು-ಪುತ್ತೂರು, ಬೆಂಗಳೂರು-ಮಡಿಕೇರಿ/ವಿರಾಜಪೇಟೆ. ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ/ಸಾಗರ, ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್/ಸಿಕಂದರಾಬಾದ್, ಬೆಂಗಳೂರು-ತಿರುಪತಿ, ಬೆಂಗಳೂರು-ಮಂತ್ರಾಲಯ, ಬೆಂಗಳೂರು-ಪೂನಾ/ಮುಂಬೈ, ಬೆಂಗಳೂರು-ವಿಜಯವಾಡ, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ಮದುರೈ, ಬೆಂಗಳೂರು-ಕೋಯಿಮತ್ತೂರು, ಬೆಂಗಳೂರು-ತಿಶ್ರೂರು.

ಅಂತರಾಜ್ಯ ಬಸ್‌ ಪ್ರಯಾಣ ದರದಲ್ಲಿ ರಿಯಾಯಿತಿ

ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್/ಸಿಕಂದರಾಬಾದ್, ಬೆಂಗಳೂರು-ತಿರುಪತಿ, ಬೆಂಗಳೂರು-ಮಂತ್ರಾಲಯ, ಬೆಂಗಳೂರು-ಪುಣೆ/ಮುಂಬೈ, ಬೆಂಗಳೂರು-ವಿಜಯವಾಡ, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ಮದುರೈ, ಬೆಂಗಳೂರು-ಕೋಯಿಮತ್ತೂರು, ಬೆಂಗಳೂರು-ತಿಶ್ರೂರು ಇನ್ನು ಕೆಲವು ಆಯ್ದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಎಸಿ ಸ್ಲೀಪರ್ ಮಾದರಿಯ ಬಸ್‌ಗಳ ಟಿಕೆಟ್ ದರದಲ್ಲಿ (ಶೇಕಡ 5 ರಿಂದ 15 ರಿಯಾಯಿತಿ) ಭರ್ಜರಿ ರಿಯಾಯಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ksrtc.in ಪಡೆಯಬಹುದಾಗಿದೆ.

ಟಿಕೆಟ್ ದರ ಎಷ್ಟು ರಿಯಾಯಿತಿ?

  • ಬೆಂಗಳೂರು-ಮುಂಬೈ ಬಸ್ ಟಿಕೆಟ್ ದರ: ಮೊದಲು 2500ರೂ., ಈಗ 2000 ರೂಪಾಯಿ.
  •  ಬೆಂಗಳೂರು- ಪುಣೆ ಬಸ್ ಟಿಕೆಟ್ ದರ: ಮೊದಲು 2300 ರೂ., ಈಗ 1700 ರೂಪಾಯಿ.
  •  ಬೆಂಗಳೂರು-ಮುರಡೇಶ್ವರ ಟಿಕೆಟ್ ದರ: ಅಂಬಾರಿ ಉತ್ಸವ ಕ್ರಮವಾಗಿ 1900 ರೂ. ಸದ್ಯ 1700 ರೂಪಾಯಿ, ಅಂಬಾರಿ ಡ್ರೀಮ್ ಬಸ್ 1800 ರೂ. ಈಗ 1500 ರೂಪಾಯಿ.
  • ಬೆಂಗಳೂರು-ಉಡುಪಿ/ಮಣಿಪಾಲ: ಅಂಬಾರಿ ಉತ್ಸವ ಬಸ್‌- ಮೊದಲು 1620 ರೂ, ಈಗ 1450ರೂ, ಅಂಬಾರಿ ಡ್ರೀಮ್ ಬಸ್ ಕ್ರಮವಾಗಿ 1560 ರೂ. 1300 ರೂ, ಐರಾವತ 2.0 ಬಸ್ 1440 ರೂ. ಈಗ 1260, ಐರಾವರ ಕ್ಲಬ್ ಕ್ಲಾಸ್ 1270 ರೂ. ಇದೀಗ 1060 ರೂಪಾಯಿ ಆಗಿದೆ.
  •  ಬೆಂಗಳೂರು-ದಾವಣಗೆರೆ ಬಸ್ ಐರಾವತ ಬಸ್ ಟಿಕೆಟ್ ಬೆಲೆ ಮೊದಲು 740 ರೂ. ಈಗ 700 ರೂಪಾಯಿ.
  • ಬೆಂಗಳೂರು ಏರ್‌ಪೋರ್ಟ್‌- ದಾವಣಗೆರೆ ಫ್ಲೈ ಬಸ್ ಪ್ರಯಾಣದ ದರ 1250 ರೂಪಾಯಿ ನಿಗದಿಪಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಾಲ್ಕು ಅಥವಾ ಹೆಚ್ಚಿನ ಪ್ರಯಾಣಿಕರು ಮುಂಗಡ ಬುಕ್ಕಿಂಗ್ ಮಾಡಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ಹಾಗೂ ಒಂದು ಕಡೆ ಹಾಗೂ ಎರಡು ಕಡೆಯ ಪ್ರಯಾಣದ ಬುಕ್ಕಿಂಗ್ ಒಟ್ಟಿಗೆ ಮಾಡಿದದರೆ, ಪ್ರಯಾಣ ದರಕ್ಕೆ ಶೇಕಡ 10ರಷ್ಟು ರಿಯಾಯಿತಿ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:19 pm, Mon, 5 January 26

Source link

ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ – Kannada News | Spandana Somanna says Gilli Nata and Dhanush may enter Bigg Boss Kannada Season 12 finale

ಇನ್ನೇನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋ ಫಿನಾಲೆ ಬರಲಿದೆ. ಈಗ 8 ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಸ್ಪಂದನಾ ಸೋಮಣ್ಣ ಅವರು ಕಳೆದ ವಾರ ಎಲಿಮಿನೇಟ್ ಆದರು. ಈಗ ಗಿಲ್ಲಿ ನಟ (Gilli Nata), ಧ್ರುವಂತ್, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಮ್ಯೂಟೆಂಟ್ ರಘು, ರಾಶಿಕಾ ಶೆಟ್ಟಿ, ಧನುಷ್ ಹಾಗೂ ಕಾವ್ಯ ಶೈವ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಯಾರು ಫಿನಾಲೆಗೆ ಬರಬಹುದು ಎಂಬ ಪ್ರಶ್ನೆಗೆ ಸ್ಪಂದನಾ ಸೋಮಣ್ಣ ಅವರು ಉತ್ತರ ನೀಡಿದ್ದಾರೆ. ‘ಕಾಕ್ರೋಚ್ ಸುಧಿ ಅವರು ಫಿನಾಲೆಗೆ ಬರಬಹುದು ಎಂದು ಆರಂಭದಲ್ಲಿ ಅನಿಸಿತ್ತು. ಯಾಕೆಂದರೆ ಅವರಿಗೆ ಸಿನಿಮಾ ಹಿನ್ನೆಲೆ ಇತ್ತು, ಫ್ಯಾನ್ ಫಾಲೋಯಿಂಗ್ ಇತ್ತು. ಆದರೆ ಈಗ ಧನು ಕ್ಯಾಪ್ಷನ್ ಆಗಿರುವುದರಿಂದ ಅವನು ಫಸ್ಟ್ ಫೈನಲಿಸ್ಟ್ ಆಗಿರುತ್ತಾನೆ ಎನಿಸುತ್ತದೆ. ಗಿಲ್ಲಿ ಫಿನಾಲೆಗೆ ಬರುತ್ತಾನೆ’ ಎಂದು ಸ್ಪಂದನಾ (Spandana Somanna) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version