ಆರತಿ ಎತ್ತಿದ ಮಹಿಳೆಯರಿಗೆ ಗರಿಗರಿ ನೋಟ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಮೇ,23: ಆನೇಕಲ್‌ನಲ್ಲಿ ದೇಶದ 2ನೇ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಮಾರಂಭ ವಿಜೃಂಭಣೆಯಿಂದ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದಾಗ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಅಪಾರ ಸಂಖ್ಯೆಯ ಜನರು ನೆರೆದಿದ್ದರು. ಈ ಹೊಸ ಕ್ರಿಕೆಟ್ ಸ್ಟೇಡಿಯಂ ಬೆಂಗಳೂರಿನ ಕ್ರೀಡಾ ಲೋಕಕ್ಕೆ ಒಂದು ದೊಡ್ಡ ಮೈಲಿಗಲ್ಲು ಆಗಲಿದೆ. ಇದು ಚಿನ್ನಸ್ವಾಮಿ ಸ್ಟೇಡಿಯಂ ನಂತರ ಮತ್ತೊಂದು ಪ್ರಮುಖ ಕ್ರಿಕೆಟ್ ಅಖಾಡವಾಗಿ ಹೊರಹೊಮ್ಮಲಿದೆ. ಕಾರ್ಯಕ್ರಮದ ನಿಮಿತ್ತ…