ಅಗತ್ಯ ಇದ್ದರೆ ಮಾತ್ರ ಎಲ್ಪಿಜಿ ಸಿಲಿಂಡರ್ ಬುಕ್ ಮಾಡಿ: ಇಂಡಿಯನ್ ಆಯಿಲ್ ಮನವಿ
ನವದೆಹಲಿ, ಮಾರ್ಚ್ 17: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಎಲ್ಪಿಜಿ ಸರಬರಾಜು (LPG) ಕ್ಷೀಣಿಸಿದೆ. ಬಹಳ ಜನರು ಎಲ್ಪಿಜಿ ಸಿಲಿಂಡರ್ ಬುಕ್ ಮಾಡಲು ಆಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಸಿಲಿಂಡರ್ ದರವೂ ಹೆಚ್ಚಿದೆ. ಬುಕಿಂಗ್ ಆದರೂ ಡೆಲಿವರಿ ವಿಳಂಬವಾಗಿ ಆಗುತ್ತಿದೆ. ಇದರಿಂದ ಜನರು ಭವಿಷ್ಯದಲ್ಲಿ ಎಲ್ಪಿಜಿಗೆ ಮತ್ತಷ್ಟು ತತ್ವಾರ ಬರುವ ನಿರೀಕ್ಷೆಯಲ್ಲಿ ಅನಗತ್ಯವಾಗಿದ್ದರೂ ಎಲ್ಪಿಜಿ ಬುಕಿಂಗ್ ಮಾಡಲು ಮುಗಿಬೀಳುತ್ತಿದ್ದಾರೆ. ಇದೇ ವೇಳೆ ಇಂಡಿಯನ್ ಆಯಿಲ್ ಸಂಸ್ಥೆ ಅಡ್ವೈಸರಿ ಹೊರಡಿಸಿದ್ದು, ಜನರು ಅಗತ್ಯ ಇಲ್ಲದಿದ್ದರೂ ಎಲ್ಪಿಜಿ ಬುಕಿಂಗ್ ಮಾಡದಿರಲು ವಿನಂತಿಸಿದೆ. ‘ದೇಶಾದ್ಯಂತ…