Headlines

ಕಾವೇರಿ ನೀರು ವಿವಾದ ನಡುವೆಯೂ ತಮಿಳುನಾಡು ಸಿಎಂ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ! – Kannada News | Cauvery Row: Preparations Underway at Vidhana Soudha Ahead of Tamil Nadu CM Joseph Vijay’s Proposed Bengaluru Visit

ಬೆಂಗಳೂರು, ಜುಲೈ 29: ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಆಗಸ್ಟ್ 3 ರಂದು ಬೆಂಗಳೂರಿಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಅವರನ್ನು ಸ್ವಾಗತಿಸಲು ಸಿದ್ಧತೆಗಳು ನಡೆಯುತ್ತಿವೆ. ಕಾವೇರಿ ನದಿ ನೀರು ಹಂಚಿಕೆ ಕುರಿತು ಚರ್ಚಿಸಲು ವಿಧಾನಸೌಧದಲ್ಲಿ ಮಹತ್ವದ ಸಭೆ ಆಯೋಜಿಸಲಾಗಿದೆ. ಈ ಸಭೆಗೆ ಮೊದಲು, ವಿಧಾನಸೌಧದ ಸಭಾಂಗಣ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಸಿದ್ಧತೆಗಳು ನಡೆಯುತ್ತಿವೆ. ಸಿಎಂ ವಿಜಯ್ ಆಗಮಿಸುವ ಮಾರ್ಗದಲ್ಲಿ ಸುಣ್ಣ-ಬಣ್ಣ ಬಳಿಯುವ ಕೆಲಸ, ಸಭಾಂಗಣದಲ್ಲಿ ಆಸನ ವ್ಯವಸ್ಥೆ ಮತ್ತು ನವೀಕರಣ ಕಾರ್ಯ…

Read More

ಮೊಬೈಲ್‌ನಲ್ಲೇ ವಿದ್ಯುತ್ ಬಿಲ್ ಪಾವತಿಸುವುದು ಹೇಗೆ?: ಸರಳ ಮತ್ತು ಸುಲಭ ವಿಧಾನ – Kannada News | Pay Electricity Bill Online in Karnataka: Quick Mobile Payment via UPI Apps

ಬೆಂಗಳೂರು, ಜು.29: ವಿದ್ಯುತ್ ಬಿಲ್ (Electricity Bill) ಪಾವತಿಸಲು ಉದ್ದನೆಯ ಸಾಲಿನಲ್ಲಿ ನಿಲ್ಲುವ ಕಾಲ ಈಗ ಮುಗಿದಿದೆ. ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಕೇವಲ ಒಂದೆರಡು ನಿಮಿಷಗಳಲ್ಲಿ, ಅತ್ಯಂತ ಸುರಕ್ಷಿತವಾಗಿ ಹಾಗೂ ಸುಲಭವಾಗಿ ಮನೆಬಾಗಿಲಿನಲ್ಲೇ ಕರೆಂಟ್ ಬಿಲ್ ಪಾವತಿಸಬಹುದು. ಇದರ ಜತೆಗೆ ಗೃಹ ಜ್ಯೋತಿ ಫಲಾನುಭವಿಗಳಿಗೆ ಜುಲೈ ತಿಂಗಳಿನಲ್ಲಿ ಯಾವುದೇ ಫಿಸಿಕಲ್ (ಕಾಗದದ) ವಿದ್ಯುತ್ ಬಿಲ್‌ಗಳನ್ನು ವಿತರಿಸಲಾಗುವುದಿಲ್ಲ. ಮೊಬೈಲ್​ ಮೂಲಕ ಪಾವತಿಸಬೇಕಾಗುತ್ತದೆ. ಅದಕ್ಕಾಗಿ ಫೋನ್​ ಮೂಲಕ ಬಿಲ್ ಪಾವತಿ ಮಾಡಬಹುದು. ಕರ್ನಾಟಕದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ (BESCOM,…

Read More

ಗುರು ಪೂರ್ಣಿಮೆ ಶುಭಾಶಯ ಕೋರಿದ ಪ್ರಧಾನಿ ಮೋದಿ: ಸಂಸ್ಕೃತ ಸುಭಾಷಿತ ಹಂಚಿಕೊಂಡ ಪ್ರಧಾನಿ – Kannada News | PM Modi Extends Guru Purnima Greetings With Timeless Sanskrit Verse on Teachers

ನವದೆಹಲಿ, ಜುಲೈ 29: ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ದೇಶದ ಸಮಸ್ತ ಜನತೆಗೆ ಶುಭ ಹಾರೈಸಿದ್ದಾರೆ. ಗುರುಗಳು ಕೇವಲ ಅಕ್ಷರ ಜ್ಞಾನವನ್ನು ನೀಡುವುದು ಮಾತ್ರವಲ್ಲದೆ, ತಮ್ಮ ಶಿಷ್ಯರಲ್ಲಿ ಸಕಾರಾತ್ಮಕ ಶಕ್ತಿ ತುಂಬಿ, ಉದಾತ್ತ ಚಿಂತನೆ ಮತ್ತು ಮೌಲ್ಯಗಳ ಮೂಲಕ ಅವರನ್ನು ನೈಜ ವ್ಯಕ್ತಿಗಳನ್ನಾಗಿ ರೂಪಿಸುತ್ತಾರೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಗುರುಗಳು ತೋರಿದ ಉನ್ನತ ಆದರ್ಶಗಳು ಹಾಗೂ ಮಾರ್ಗದರ್ಶನವನ್ನು ಪ್ರತಿಯೊಬ್ಬರೂ ತಮ್ಮ ಜೀವನದ ದಿಕ್ಸೂಚಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಕರೆ…

Read More

August 2026 Rule Changes: ಆಗಸ್ಟ್ 1 ರಿಂದ ಜಾರಿಗೆ ಬರಲಿವೆ 5 ಹೊಸ ನಿಯಮಗಳು: ಎಲ್‌ಪಿಜಿ ದರ,ತತ್ಕಾಲ್ ಬುಕಿಂಗ್ ಮತ್ತು ಬ್ಯಾಂಕಿಂಗ್‌ ಮೇಲೆ ಭಾರಿ ಪ್ರಭಾವ – Kannada News | August 2026 Rule Changes: 5 New Laws Affecting LPG, Banking and Tatkal Bookings

ನವದೆಹಲಿ,ಜುಲೈ 29: ಭಾರತದಾದ್ಯಂತ ಹಣಕಾಸು, ಸಾರಿಗೆ ಮತ್ತು ಅಂಚೆ(Post) ಸೇವೆಗಳಲ್ಲಿ 5 ಪ್ರಮುಖ ಬದಲಾವಣೆಗಳು ಆಗಸ್ಟ್​ 1, 2026ರಿಂದ ಜಾರಿಗೆ ಬರಲಿವೆ. ಪ್ರತಿ ತಿಂಗಳ ಆರಂಭದಲ್ಲಿ ಹಲವು ಆರ್ಥಿಕ ನಿಯಮಗಳು ಬದಲಾಗುವಂತೆ, ಆಗಸ್ಟ್ 1 ರಿಂದ ದೇಶಾದ್ಯಂತ 5 ಪ್ರಮುಖ ಬದಲಾವಣೆಗಳಾಗಲಿವೆ. ಅಡುಗೆ ಅನಿಲ (LPG) ದರ, ರೈಲ್ವೆ ತತ್ಕಾಲ್ ಬುಕಿಂಗ್, ಬ್ಯಾಂಕಿಂಗ್ ನಿಯಮಗಳು ಹಾಗೂ ಅಂಚೆ ಶುಲ್ಕಗಳಲ್ಲಿನ ಈ ಬದಲಾವಣೆಗಳು ಸಾರ್ವಜನಿಕರ ದಿನನಿತ್ಯದ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿವೆ. ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್…

Read More

‘ಗೃಹ ಜ್ಯೋತಿ’ ಯೋಜನೆಯ ಫಲಾನುಭವಿಗಳೇ ಗಮನಿಸಿ: ಜುಲೈ ತಿಂಗಳಲ್ಲಿ ಫಿಸಿಕಲ್ ಕರೆಂಟ್ ಬಿಲ್ ಇಲ್ಲ – Kannada News | Gruha Jyothi Impact: BESCOM’s New July Billing Average Usage, No Paper Bill

ಬೆಂಗಳೂರು,ಜು.29: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯ ಗೃಹ ಬಳಕೆದಾರರಿಗೆ ಪ್ರಸಕ್ತ ಜುಲೈ ತಿಂಗಳಿನಲ್ಲಿ ಯಾವುದೇ ಫಿಸಿಕಲ್ (ಕಾಗದದ) ವಿದ್ಯುತ್ ಬಿಲ್‌ಗಳನ್ನು ವಿತರಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದಕ್ಕೆ ಬದಲಾಗಿ, ಗ್ರಾಹಕರ ಕಳೆದ ಮೂರು ತಿಂಗಳ ವಿದ್ಯುತ್ ಬಳಕೆಯ ಸರಾಸರಿಯನ್ನು ಲೆಕ್ಕ ಹಾಕಿ, ಎಸ್‌ಎಂಎಸ್ (SMS) ಅಥವಾ ಇ-ಮೇಲ್ ಮೂಲಕ ಬಿಲ್ ಮೊತ್ತವನ್ನು ಕಳುಹಿಸಲಾಗುವುದು. ಕಾಂಗ್ರೆಸ್ ಸರ್ಕಾರದ ‘ಪಂಚ ಗ್ಯಾರಂಟಿ’ಗಳಲ್ಲಿ ಒಂದಾದ, 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ‘ಗೃಹ ಜ್ಯೋತಿ’ ಯೋಜನೆಯ ಫಲಾನುಭವಿಗಳ ವಿವರಗಳನ್ನು…

Read More

ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು – Kannada News | Harish Raj accept Romantic Star Title, Bhagyalaxmi Serial Impact

ಸಿನಿಮಾ ಹಾಗೂ ಕಿರುತೆರೆ ನಟ ಹರೀಶ್ ರಾಜ್ ಅವರಿಗೆ ಇತ್ತೀಚೆಗೆ ರೊಮ್ಯಾಂಟಿಕ್ ಸ್ಟಾರ್ ಎಂಬ ಹೊಸ ಬಿರುದು ಲಭಿಸಿದೆ. ನಟಿ ಅಭಿನಯ ಅವರು ಈ ಟೈಟಲ್ ಅನ್ನು ನೀಡಿದ್ದು, ಹರೀಶ್ ರಾಜ್ ಅವರು ಈ ಬಿರುದನ್ನು ಸ್ವೀಕರಿಸಿದ್ದಾರೆ. ಭಾಗ್ಯಲಕ್ಷ್ಮಿ ಧಾರಾವಾಹಿಯ ಆದಿಶ್ವರ್ ಕಾಮತ್ ಪಾತ್ರದ ಮೂಲಕ ಹರೀಶ್ ರಾಜ್ ಅವರು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಈ ಪಾತ್ರದಲ್ಲಿ ನೇರ ರೊಮ್ಯಾನ್ಸ್ ಇಲ್ಲದಿದ್ದರೂ, ಅವರ ಮತ್ತು ಸಹ-ನಟಿಯ ನಡುವಿನ ಪ್ರಬುದ್ಧ ಪ್ರೇಮಕಥೆ ವೀಕ್ಷಕರಿಗೆ ಅರ್ಥವಾಗಿತ್ತು. ‘40 ವರ್ಷಗಳ ನಂತರದ…

Read More

ISRO Recruitment 2026: ಇಸ್ರೋದಲ್ಲಿ ಬಂಪರ್ ನೇಮಕಾತಿ; ಅರ್ಹತೆ, ವೇತನ ಮತ್ತು ಅರ್ಜಿ ವಿವರ ಇಲ್ಲಿದೆ – Kannada News | Isro recruitment 2026 apply online for 244 assistant udc and stenographer posts check eligibility and salary details

ಇಸ್ರೋದಲ್ಲಿ ಬಂಪರ್ ನೇಮಕಾತಿ Image Credit source: Getty Images ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿರುವ ವಿವಿಧ ಕೇಂದ್ರಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಖಾಲಿ ಇರುವ ಪೇ ಮ್ಯಾಟ್ರಿಕ್ಸ್ ಲೆವೆಲ್-4 ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ದೇಶದ ಪ್ರಮುಖ ಬಾಹ್ಯಾಕಾಶ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಹಾಗೂ ಗೌರವಾನ್ವಿತ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಜುಲೈ 27 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅರ್ಹ…

Read More

ಟೀಮ್ ಇಂಡಿಯಾಗೆ ಹೊಸ ಫೀಲ್ಡಿಂಗ್ ಕೋಚ್ ನೇಮಕ! – Kannada News | Subhadeep Ghosh Replaces T Dilip as Team India’s Fielding Coach

ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಫೀಲ್ಡಿಂಗ್ ಕೋಚ್ ಆಗಿ ಸುಭದೀಪ್ ಘೋಷ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಫೀಲ್ಡಿಂಗ್ ಕೋಚ್ ಆಗಿದ್ದ ಟಿ. ದಿಲೀಪ್ ಅವರ ಒಪ್ಪಂದವನ್ನು ನವೀಕರಿಸದಿರಲು ಬಿಸಿಸಿಐ ನಿರ್ಧರಿಸಿದ ಬೆನ್ನಲ್ಲೇ, ಅವರ ಸ್ಥಾನಕ್ಕೆ ಸುಭದೀಪ್ ಅವರನ್ನು ಕ್ಷೇತ್ರರಕ್ಷಣಾ ತರಬೇತುದಾರರನ್ನಾಗಿ ನೇಮಿಸಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಡಿ ಹೊಸ ಕೋಚಿಂಗ್ ಸಿಬ್ಬಂದಿ ಭಾರತ ತಂಡವನ್ನು ಮುನ್ನಡೆಸಲಿದ್ದು, ಮುಂಬರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಸುಭದೀಪ್ ಘೋಷ್ ಅವರ ಪಾಲಿಗೆ…

Read More

ಕಾವೇರಿ ನೀರು ಹಂಚಿಕೆ ವಿವಾದ: ರೈತರ ಪ್ರತಿಭಟನೆ ತೀವ್ರ, ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ – Kannada News | Cauvery Water Dispute: Karnataka Minister Ramalinga Reddy Calls Emergency Meeting Amid Farmers’ Protest

ಬೆಂಗಳೂರು, ಜುಲೈ 29: ಕಾವೇರಿ ನೀರು ಹಂಚಿಕೆ ವಿವಾದ ತೀವ್ರಗೊಂಡಿದ್ದು, ರೈತರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಅವರು ತುರ್ತು ಸಭೆ ಕರೆದಿದ್ದಾರೆ. ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಲಿರುವ ಸಚಿವರು, ಕಾವೇರಿ ವಿಚಾರದಲ್ಲಿ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ. ಇದೇ ವೇಳೆ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಾವೇರಿ ಕಾನೂನು ಹೋರಾಟದ ಸಂಬಂಧ ದೆಹಲಿಯಲ್ಲಿ ವಕೀಲರೊಂದಿಗೆ ಸಭೆ ನಡೆಸಲಿದ್ದಾರೆ. ಹಿರಿಯ ನ್ಯಾಯವಾದಿ ಮೋಹನ್ ಕಾತರಕಿ ಸೇರಿದಂತೆ ತಜ್ಞರೊಂದಿಗೆ ಅವರು ಮಾತುಕತೆ…

Read More

ಸಿಜೆಪಿ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್, ಎಕ್ಸ್​ ಖಾತೆಗಳಿಗೆ ದೆಹಲಿ ಪೊಲೀಸರಿಂದ ನೋಟಿಸ್ – Kannada News | Delhi Police Issue Notices Over Alleged Offensive Social Media Posts During Protest

ನವದೆಹಲಿ, ಜುಲೈ 29: ದೆಹಲಿಯ ಜಂತರ್​ ಮಂತರ್ ಮತ್ತು ಇತರೆಡೆ ನಡೆದ ಸಿಜೆಪಿ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಸಂಸದ್ ಚಲೋ ಮೆರವಣಿಗೆಯ ಹಿಂಸಾಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ನಿಂದನೀಯ, ಆಕ್ಷೇಪಾರ್ಹ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಕ್ಕಾಗಿ ದೆಹಲಿ ಪೊಲೀಸರು ಹಲವು ಸಾಮಾಜಿಕ ಖಾತೆಗಳಿಗೆ ನೋಟಿಸ್ ನೀಡಿದ್ದಾರೆ. ಕೆಲವು ಪ್ರಮುಖ ಸುದ್ದಿ ಪೋರ್ಟಲ್‌ಗಳ ಖಾತೆಗಳು ಹಾಗೂ ನಿಂದನೀಯ ಭಾಷೆ ಬಳಸಿದ ಬಳಕೆದಾರರ ವಿವರಗಳನ್ನು ಒದಗಿಸುವಂತೆ ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣ ‘ಎಕ್ಸ್’ಗೆ ಸೂಚನೆ…

Read More