ಕೋಲಾರದಲ್ಲಿ ಪಿಂಚಣಿ ಹಣಕ್ಕೂ ಪರದಾಟ: ನಿತ್ಯ ಅಲೆದು ಅಲೆದು ಕಂಗಾಲಾದ ವೃದ್ಧರು, ಅಂಗವಿಕಲ ಪಿಂಚಣಿದಾರರು
ಕೋಲಾರ, ಏಪ್ರಿಲ್ 08: ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ (pension) ಇವೆಲ್ಲವೂ ಸರ್ಕಾರ ಮನೆ ಬಾಗಿಲಿಗೆ ತಲುಪಬೇಕಾದ ಯೋಜನೆಗಳು. ಆ ಹಣವನ್ನೇ ನಂಬಿ ಹಿರಿಯ ಜೀವಗಳು ಬದುಕುತ್ತಿವೆ. ಆದರೆ ತಮ್ಮ ಹಣಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಡುಬಿಸಿಲಿನಲ್ಲಿ ಅಂಚೆ ಕಚೇರಿ ಬಳಿ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಅಷ್ಟೇ ಅಲ್ಲದೆ ಕಮಿಷನ್ ಕೊಟ್ಟರು ಹಣ ಮಾತ್ರ ಸರಿಯಾದ ಸಮಯಕ್ಕೆ ಸಿಗದಿರುವುದು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಎಲ್ಲಾ ರೀತಿಯ ಪಿಂಚಣಿದಾರರಿಗೆ ಮನೆ ಬಾಗಿಲಿಗೆ ಪಿಂಚಣಿ ಹಣ ತಿಂಗಳ ಒಳಗಾಗಿ…