Sade Sati: ಶನಿವಾರ ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರದೇ? ಪದ್ಮ ಪುರಾಣದ ರಹಸ್ಯ ಮತ್ತು ಸಾಡೇ ಸಾತಿಯ ನಿಯಮ ಇಲ್ಲಿದೆ – Kannada News | Shani Dev and Sade Sati: Why Applying Oil on Head on Saturday is Forbidden

ಹಿಂದೂ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿವಾರವನ್ನು ಶನಿ ದೇವರಿಗೆ ಅತ್ಯಂತ ಪ್ರಿಯವಾದ ದಿನವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಕರ್ಮಗಳಿಗೆ ತಕ್ಕಂತೆ ಫಲ ನೀಡುವ ಶನಿದೇವನನ್ನು “ನ್ಯಾಯಾಧಿಪತಿ” ಎಂದೂ ಕರೆಯಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಶನಿಯು ಅತ್ಯಂತ ಮಂದಗತಿಯ ಗ್ರಹವಾಗಿದ್ದು, ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಸುಮಾರು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಶನಿ ದೋಷ, ಧೈಯಾ ಅಥವಾ ಸಾಡೇ ಸಾತಿಯ ಪ್ರಭಾವದಿಂದ ಮುಕ್ತಿ ಪಡೆಯಲು ಶನಿವಾರದಂದು ವಿಶೇಷ ಪೂಜೆ, ಉಪವಾಸ ಮತ್ತು ದಾನ-ಧರ್ಮಗಳನ್ನು ಮಾಡಲಾಗುತ್ತದೆ.

ಪದ್ಮ ಪುರಾಣದ ಶಾಸ್ರ್ತೀಯ ನಿಯಮಗಳು:

ಧಾರ್ಮಿಕ ಗ್ರಂಥವಾದ ಪದ್ಮ ಪುರಾಣದ ಉತ್ತರಖಂಡದ 33 ಮತ್ತು 34ನೇ ಅಧ್ಯಾಯಗಳಲ್ಲಿ ಶನಿ ದೇವರನ್ನು ಪೂಜಿಸುವ ಮತ್ತು ಆರಾಧಿಸುವ ವಿಧಿವಿಧಾನಗಳನ್ನು ಅತ್ಯಂತ ವಿವರವಾಗಿ ಉಲ್ಲೇಖಿಸಲಾಗಿದೆ. ಶನಿವಾರದ ಪೂಜೆಯ ಸಮಯದಲ್ಲಿ ಶನಿ ದೇವರಿಗೆ ಎಣ್ಣೆ, ಕಪ್ಪು ಎಳ್ಳು ಮತ್ತು ಇತರ ಪವಿತ್ರ ದ್ರವ್ಯಗಳನ್ನು ಅರ್ಪಿಸುವುದು ಅತ್ಯಂತ ಶುಭಪ್ರದ. ಆದಾಗ್ಯೂ, ಈ ಪೂಜಾ ಆಚರಣೆಗಳಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ, ಅದರಲ್ಲಿ ಮುಖ್ಯವಾಗಿ ಶನಿವಾರದಂದು ಸ್ವಂತ ತಲೆಗೆ ಎಣ್ಣೆ ಹಚ್ಚಿಕೊಳ್ಳುವುದು ಸಂಪೂರ್ಣವಾಗಿ ನಿಷಿದ್ಧವಾಗಿದೆ.

ಸಾಡೇ ಸಾತಿಯ ಅವಧಿಯಲ್ಲಿ ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರದಿರುವುದಕ್ಕೆ ಕಾರಣಗಳು:

ಶನಿಯ ಸಾಡೇ ಸಾತಿ ಅಥವಾ ಧೈಯಾದ ಪ್ರಭಾವದಲ್ಲಿರುವವರು ಶನಿವಾರದಂದು ತಲೆಗೆ ಎಣ್ಣೆ ಹಚ್ಚಿಕೊಳ್ಳುವುದನ್ನು ತಪ್ಪಿಸಬೇಕು. ಶನಿ ದೇವರಿಗೆ ಅರ್ಪಿಸುವ ಸಾಸಿವೆ ಅಥವಾ ಎಳ್ಳೆಣ್ಣೆಯನ್ನು ಅಂದು ಸ್ವಂತ ದೇಹಸೌಂದರ್ಯಕ್ಕೆ ಅಥವಾ ಬಳಕೆಗೆ ಉಪಯೋಗಿಸಬಾರದು ಎಂಬುದು ಶಾಸ್ತ್ರೀಯ ನಿಯಮ. ಸಾಡೇ ಸಾತಿ ಅವಧಿಯಲ್ಲಿ ಜಾತಕದಲ್ಲಿ ಶನಿಯ ಪ್ರಭಾವ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಶನಿವಾರ ತಲೆಗೆ ಎಣ್ಣೆ ಹಚ್ಚಿಕೊಂಡರೆ ಮಾನಸಿಕ ಒತ್ತಡ ಹೆಚ್ಚಾಗುವುದು, ಕೈಗೊಂಡ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುವುದು ಮತ್ತು ನಿರೀಕ್ಷಿತ ಧನಾಗಮನಕ್ಕೆ ತೊಂದರೆಯಾಗಿ ಆರ್ಥಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಈ ವಿಶೇಷ ಪರಿಸ್ಥಿತಿಯಲ್ಲಿರುವವರು ಶನಿವಾರ ಎಣ್ಣೆ ಬಳಸಬಾರದು:

ಕೆಲವು ನಿರ್ದಿಷ್ಟ ರಾಶಿ ಮತ್ತು ಜಾತಕದ ಪರಿಸ್ಥಿತಿಯಲ್ಲಿರುವವರು ಶನಿವಾರ ತಲೆಗೆ ಎಣ್ಣೆ ಹಚ್ಚುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಪ್ರಸ್ತುತ ಸಾಡೇ ಸಾತಿಯ ವಿವಿಧ ಹಂತಗಳನ್ನು ಎದುರಿಸುತ್ತಿರುವ ಮೇಷ, ಮೀನ ಮತ್ತು ಕುಂಭ ರಾಶಿಯವರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರ ಜೊತೆಗೆ, ಶನಿಯ ಮಹಾದಶಾ ಅಥವಾ ಏಳನೇ ದಿನದ ಅಧಿಪತಿಯಾದ ಸೂರ್ಯನ ಬಲವಾದ ಪ್ರಭಾವದಲ್ಲಿ ಜನಿಸಿದವರು ಕೂಡ ಎಚ್ಚರ ವಹಿಸಬೇಕು. ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಶನಿಯನ್ನು ತಂದೆ-ಮಗನೆಂದು ಪರಿಗಣಿಸಿದರೂ ಅವರನ್ನು ಪರಸ್ಪರ ಶತ್ರುಗಳೆಂದು ಕರೆಯಲಾಗುತ್ತದೆ, ಆದ್ದರಿಂದ ಶನಿಯ ಪ್ರಭಾವಕ್ಕೆ ವಿರುದ್ಧವಾದ ಕ್ರಿಯೆಗಳನ್ನು ಅಂದು ಮಾಡಬಾರದು.

ಶನಿ ದೋಷ ನಿವಾರಣೆ ಮತ್ತು ಪರಿಹಾರ ಮಾರ್ಗಗಳು:

ಶನಿ ದೋಷದ ಪ್ರಭಾವವನ್ನು ಕಡಿಮೆ ಮಾಡಲು ಶನಿವಾರದಂದು ಎಣ್ಣೆ, ಕಪ್ಪು ಎಳ್ಳು, ಉದ್ದಿನ ಬೇಳೆ ಮತ್ತು ಕಬ್ಬಿಣದ ವಸ್ತುಗಳನ್ನು ದಾನ ಮಾಡುವ ಪರಿಪಾಠವಿದೆ. ಹೀಗೆ ದಾನ ಧರ್ಮದಲ್ಲಿ ತೊಡಗಿಕೊಳ್ಳುವವರು ಅಂದು ಅವರ ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರದು. ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅಭಿಷೇಕವಾಗಿ ಅರ್ಪಿಸಿ, ಅಗತ್ಯವಿರುವ ಬಡವರಿಗೆ ದಾನ ಮಾಡುವುದು ಶನಿಯ ಕೃಪೆಗೆ ಪಾತ್ರರಾಗಲು ಅತ್ಯುತ್ತಮ ಮಾರ್ಗವಾಗಿದೆ. ಬಾಹ್ಯ ಆಚರಣೆಗಳ ಜೊತೆಗೆ, ಸದಾಚಾರದಿಂದ ಜೀವಿಸುವುದು ಮತ್ತು ಇತರರಿಗೆ ಹಾನಿ ಮಾಡದಿರುವುದೇ ಶನಿದೇವನ ನಿಜವಾದ ಕೃಪೆಯನ್ನು ತರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

59 ಎಸೆತಗಳಲ್ಲಿ ಪಂದ್ಯ ಮುಗಿಸಿದ ‘ಸೂಪರ್ ಜೈಂಟ್ಸ್​’

ದಿ ಹಂಡ್ರೆಡ್ ಲೀಗ್ ಮಹಿಳಾ ಟೂರ್ನಿಯ ಮೂರನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡ ಗೆಲುವಿನ ಖಾತೆ ತೆರೆದಿದೆ. ಲಂಡನ್​ನ ಲಾರ್ಡ್ಸ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಲಂಡನ್ ಸ್ಪಿರಿಟ್ ಮಹಿಳಾ ತಂಡ ಹಾಗೂ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡದ ನಾಯಕ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ 4 ರನ್​ಗಳಿಸಿ ಔಟಾದರೆ, ಆ್ಯಮಿ ಜೋನ್ಸ್ (0) ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೇರಿ ಕೆಲ್ಲಿ ಕಲೆಹಾಕಿದ್ದು ಕೇವಲ 1 ರನ್ ಮಾತ್ರ.

ಆ ಬಳಿಕ ಬಂದ ಮರಿಝನ್ನೆ ಕಪ್ 17 ರನ್​ ಗಳಿಸಿದರೆ, ಷಾರ್ಲೆಟ್ ಡೀನ್ 14 ರನ್​ ಬಾರಿಸಿದರು. ಈ ಮೂಲಕ ಲಂಡನ್ ಸ್ಪಿರಿಟ್ ತಂಡವು 91 ಎಸೆತಗಳಲ್ಲಿ ಕೇವಲ 80 ರನ್​ಗಳಿಸಿ ಆಲೌಟ್ ಆಯಿತು.

81 ರನ್​ಗಳ ಸುಲಭ ಗುರಿ:

ಕೇವಲ 81 ರನ್​ಗಳ ಗುರಿ ಪಡೆದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್  ತಂಡಕ್ಕೆ ಸ್ಮೃತಿ ಮಂಧಾನ ಹಾಗೂ ಮೆಗ್ ಲ್ಯಾನಿಂಗ್ ಉತ್ತಮ ಆರಂಭ ಒದಗಿಸಿದ್ದರು. ಆದರೆ 17 ರನ್​ಗಳಿಸಿದ್ದ ವೇಳೆ ಭರ್ಜರಿ ಹೊಡೆತಕ್ಕೆ ಮುಂದಾಗಿ ಸ್ಮೃತಿ ಕ್ಯಾಚ್ ನೀಡಿದರು. ಇನ್ನು ಮೆಗ್ ಲ್ಯಾನಿಂಗ್ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಪೈಜ್ ಸ್ಕೋಲ್ಫೀಲ್ಡ್ ಹಾಗೂ ರಿಚಾ ಘೋಷ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಪೈಜ್ ಸ್ಕೋಲ್ಫೀಲ್ಡ್ 15 ಎಸೆತಗಳಲ್ಲಿ 22 ರನ್ ಬಾರಿಸಿದರೆ, ರಿಚಾ 5 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್​ನೊಂದಿಗೆ 15 ರನ್ ಚಚ್ಚಿದರು. ಈ ಮೂಲಕ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವು ಕೇವಲ 59 ಎಸೆತಗಳಲ್ಲಿ 86 ರನ್ ಬಾರಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪಡೆ ದಿ ಹಂಡ್ರೆಡ್ ಲೀಗ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ.

ಲಂಡನ್ ಸ್ಪಿರಿಟ್ ಪ್ಲೇಯಿಂಗ್ 11: ಗ್ರೇಸ್ ಹ್ಯಾರಿಸ್ , ಆ್ಯಮಿ ಜೋನ್ಸ್ (ವಿಕೆಟ್ ಕೀಪರ್) ಮೇರಿ ಕೆಲ್ಲಿ , ಮರಿಝನ್ನೆ ಕಪ್ , ನಾಡಿನ್ ಡಿ ಕ್ಲರ್ಕ್ , ಡಿಯಾಂಡ್ರಾ ಡಾಟಿನ್ , ಚಾರಿಸ್ ಪಾವೆಲಿ , ಷಾರ್ಲೆಟ್ ಡೀನ್ (ನಾಯಕಿ) , ಕೇಟೀ ಜಾರ್ಜ್ , ಜೋಸಿ ಗ್ರೋವ್ಸ್ , ಹನ್ನಾ ರೈನಿ.

ಇದನ್ನೂ ಓದಿ: ಏಷ್ಯನ್ ಗೇಮ್ಸ್​ನಲ್ಲಿ ಟೀಮ್ ಇಂಡಿಯಾ ಎದುರಾಳಿ ಯಾರು?

ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11:  ಮೆಗ್ ಲ್ಯಾನಿಂಗ್ (ನಾಯಕಿ) , ಸ್ಮೃತಿ ಮಂಧಾನ , ಗ್ರೇಸ್ ಸ್ಕ್ರಿವೆನ್ಸ್ , ಪೈಜ್ ಸ್ಕೋಲ್ಫೀಲ್ಡ್ , ರಿಚಾ ಘೋಷ್ (ವಿಕೆಟ್ ಕೀಪರ್ ), ಮ್ಯಾಡಿ ವಿಲಿಯರ್ಸ್ , ಕ್ಯಾಥರಿನ್ ಬ್ರೈಸ್ , ಮೈಟ್ಲಾನ್ ಬ್ರೌನ್ , ರಿಯಾನಾ ಮ್ಯಾಕ್‌ಡೊನಾಲ್ಡ್-ಗೇ , ಸೋಫಿ ಎಕ್ಲೆಸ್ಟೋನ್ , ಗ್ರೇಸ್ ಬ್ಯಾಲಿಂಗರ್.

 

Source link

Chaturmasa: ಚಾತುರ್ಮಾಸದ ವೈಜ್ಞಾನಿಕ ರಹಸ್ಯ;ನಾಲ್ಕು ತಿಂಗಳ ಶಿಸ್ತು ನಮ್ಮ ಭವಿಷ್ಯವನ್ನು ಹೇಗೆ ಬದಲಾಯಿಸುತ್ತದೆ? – Kannada News | Chaturmasya: Sanatana Dharma’s Spiritual Journey for Destiny Transformation

ಸನಾತನ ಧರ್ಮದ ಪವಿತ್ರ ಪಂಚಾಂಗದಲ್ಲಿ ಚಾತುರ್ಮಾಸಕ್ಕೆ ಅತ್ಯಂತ ವಿಶೇಷವಾದ ಸ್ಥಾನವಿದೆ. ಆಷಾಢ ಶುಕ್ಲ ಏಕಾದಶಿಯಿಂದ (ದೇವಶಯನಿ ಏಕಾದಶಿ) ಪ್ರಾರಂಭವಾಗಿ ಕಾರ್ತಿಕ ಶುಕ್ಲ ಏಕಾದಶಿಯವರೆಗೆ (ಪ್ರಬೋಧಿನಿ ಏಕಾದಶಿ) ಸಾಗುವ ಈ ನಾಲ್ಕು ತಿಂಗಳ ಅವಧಿಯು ಕೇವಲ ದಿನಗಳನ್ನು ಎಣಿಸುವ ಸಮಯವಲ್ಲ, ಬದಲಿಗೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನನ್ನು ತಾನು ಆಂತರಿಕವಾಗಿ ಬದಲಾಯಿಸಿಕೊಳ್ಳಲು ಸಿಗುವ ಮಹತ್ತರವಾದ ಆಧ್ಯಾತ್ಮಿಕ ಅವಕಾಶ.

ಈ ನಾಲ್ಕು ತಿಂಗಳ ದೀಕ್ಷೆಯು ನಿಜವಾಗಿಯೂ ಮನುಷ್ಯನ ಹಣೆಬರಹವನ್ನು ಬದಲಾಯಿಸುತ್ತದೆಯೇ ಅಥವಾ ನಮ್ಮ ದಿನನಿತ್ಯದ ಅಭ್ಯಾಸಗಳನ್ನು ಮಾತ್ರ ತಿದ್ದುತ್ತದೆಯೇ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಆಧ್ಯಾತ್ಮಿಕ ಮತ್ತು ಮಾನಸಿಕ ವಿಜ್ಞಾನದ ಸಮ್ಮಿಲನದಲ್ಲಿದೆ.

ಯೋಗನಿದ್ರೆಯ ರಹಸ್ಯ:

ಚಾತುರ್ಮಾಸ್ಯದ ಅವಧಿಯಲ್ಲಿ ಶ್ರೀ ಮಹಾವಿಷ್ಣುವು ಯೋಗನಿದ್ರೆಗೆ ಜಾರುತ್ತಾನೆ ಎಂಬ ಪ್ರತೀತಿಯಿದೆ. ಯೋಗನಿದ್ರೆ ಎಂದರೆ ನಾವು ಸಾಮಾನ್ಯವಾಗಿ ಮಲಗುವ ನಿದ್ರೆಯಲ್ಲ, ಬದಲಿಗೆ ಬಾಹ್ಯ ಪ್ರಪಂಚದ ಗೊಂದಲಗಳಿಂದ ಸಂಪೂರ್ಣವಾಗಿ ಮುಕ್ತಿ ಪಡೆದು ಜಾಗೃತ ಅರಿವನ್ನು ಒಳಮುಖವಾಗಿ ತಿರುಗಿಸುವ ಪರಮ ಸ್ಥಿತಿ. ಈ ರೂಪಕವು ನಮಗೆ ಅತ್ಯಂತ ಪ್ರಮುಖವಾದ ಜೀವನಪಾಠವನ್ನು ಕಲಿಸುತ್ತದೆ. ವರ್ಷ ಪೂರ್ತಿ ಲೌಕಿಕ ಓಟ, ಖ್ಯಾತಿ ಹಾಗೂ ಭೌತಿಕ ವಸ್ತುವಿಷಯಗಳ ಹಿಂದೆ ಬೀಳುವ ನಾವು, ಈ ನಾಲ್ಕು ತಿಂಗಳುಗಳ ಕಾಲ ಆ ಬಾಹ್ಯ ಓಟಕ್ಕೆ ಸ್ವಲ್ಪ ವಿರಾಮ ನೀಡಿ, ನಮ್ಮ ಮಾನಸಿಕ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಒಟ್ಟುಗೂಡಿಸಿಕೊಳ್ಳಬೇಕು.

ಬಲಿ ಚಕ್ರವರ್ತಿಯ ಕಥೆ ಮತ್ತು ನಿಜನಂಬಿಕೆಯ ಲಕ್ಷ್ಮಿ ತತ್ವ:

ಈ ನಾಲ್ಕು ತಿಂಗಳ ಅವಧಿಯಲ್ಲಿ ಗಣೇಶ ಚತುರ್ಥಿ, ನವರಾತ್ರಿ, ಕೃಷ್ಣಾಷ್ಟಮಿ ಮತ್ತು ದೀಪಾವಳಿಯಂತಹ ಸಾಲು ಸಾಲು ಪವಿತ್ರ ಹಬ್ಬಗಳು ಬರುತ್ತವೆ. ಇವು ಲೌಕಿಕ ಭೋಗಗಳಲ್ಲಿ ಮುಳುಗೇಳಲು ಇರುವ ದಿನಗಳಲ್ಲ, ಬದಲಿಗೆ ಭೌತಿಕ ವಸ್ತುಗಳ ಮೇಲೆ ಅವಲಂಬಿತವಾಗದೆ ಸ್ವತಂತ್ರ ಹಾಗೂ ಶಾಂತಿಯುತ ಜೀವನ ನಡೆಸುವುದನ್ನು ಕಲಿಯುವ ಸಮಯ.

ವಾಮನ ಮತ್ತು ಬಲಿ ಚಕ್ರವರ್ತಿಯ ಕಥೆಯು ಇದನ್ನೇ ಪ್ರತಿಪಾದಿಸುತ್ತದೆ. ಎಷ್ಟೇ ಸಂಪತ್ತು, ಶೌರ್ಯವಿದ್ದರೂ ಅಹಂಕಾರವಿದ್ದರೆ ದೈವತ್ವ ಲಭಿಸುವುದಿಲ್ಲ. ನಿಜವಾದ ಲಕ್ಷ್ಮಿದೇವಿಯು ಕೇವಲ ಹಣದಲ್ಲಿ ವಾಸಿಸುವುದಿಲ್ಲ; ಬದಲಿಗೆ ಸ್ವಚ್ಛತೆ, ಕುಟುಂಬದ ಶಾಂತಿ, ಆಹಾರದಲ್ಲಿ ನಿಯಮಿತತೆ ಮತ್ತು ಸದಾಚಾರ ಇರುವ ಮನೆಯಲ್ಲಷ್ಟೇ ನಿರಂತರವಾಗಿ ನೆಲೆಸುತ್ತಾಳೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಈ ದೀಕ್ಷೆಯು ನಮ್ಮ ಹಣೆಬರಹವನ್ನು ಹೇಗೆ ಬದಲಾಯಿಸುತ್ತದೆ?

ನಾಲ್ಕು ತಿಂಗಳು ಶಿಸ್ತುಬದ್ಧವಾಗಿ ಒಂದು ದೀಕ್ಷೆಯನ್ನು ಪಾಲಿಸಿದಾಗ ನಮ್ಮ ಮೆದುಳು ಮತ್ತು ಮನಸ್ಸಿನಲ್ಲಿ ಅದ್ಭುತವಾದ ಸುಧಾರಣೆಗಳು ಸಂಭವಿಸುತ್ತವೆ:

  • ಹೊಸ ನರಮಾರ್ಗಗಳ ರಚನೆ (Neuroplasticity): ಸತತ ನಾಲ್ಕು ತಿಂಗಳ ಅಭ್ಯಾಸದಿಂದ ಮೆದುಳಿನಲ್ಲಿ ಹೊಸ ಶಿಸ್ತಿನ ಮಾರ್ಗಗಳು ರೂಪುಗೊಂಡು, ಒಳ್ಳೆಯ ಅಭ್ಯಾಸಗಳು ಸ್ವಭಾವವಾಗುತ್ತವೆ.
  • ಆತ್ಮಾವಲೋಕನ ಮತ್ತು ಸಂಯಮ: ಆಸೆ ಅಥವಾ ಕೋಪ ಬಂದ ತಕ್ಷಣ ಪ್ರತಿಕ್ರಿಯಿಸದೆ, ಒಮ್ಮೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ತಾಳ್ಮೆ ಮನಸ್ಸಿಗೆ ಸಿಗುತ್ತದೆ.
  • ನಿರ್ಧಾರಗಳ ಸುಧಾರಣೆಯಿಂದ ಭವಿಷ್ಯದ ಬದಲಾವಣೆ: ನಿಮ್ಮ ಅಭ್ಯಾಸಗಳು ಬದಲಾದಾಗ, ನೀವು ತೆಗೆದುಕೊಳ್ಳುವ ದಿನನಿತ್ಯದ ನಿರ್ಧಾರಗಳು ಸರಿಯಾಗುತ್ತವೆ. ಸರಿಯಾದ ನಿರ್ಧಾರಗಳು ಅಂತಿಮವಾಗಿ ನಿಮ್ಮ ಜೀವನದ ಹಾದಿಯನ್ನು ಮತ್ತು ಹಣೆಬರಹವನ್ನು ಬದಲಾಯಿಸುತ್ತವೆ.

ದಿನಕ್ಕೆ ಹತ್ತು ನಿಮಿಷಗಳ ಮೌನ, ಸುಳ್ಳು ಹೇಳದಿರುವುದು, ಸತ್ಯವನ್ನು ಮಾತನಾಡುವುದು ಅಥವಾ ದಿನಕ್ಕೆ ಒಂದು ಸಣ್ಣ ದಾನದಂತಹ ಯಾವುದೇ ಸರಳ ವ್ರತವನ್ನು ಸ್ವೀಕರಿಸಿದರೂ, ಈ ಚಾತುರ್ಮಾಸ್ಯವು ನಿಮ್ಮ ಜೀವನದಲ್ಲಿ ಮಹತ್ತರವಾದ ಬದಲಾವಣೆಯನ್ನು ತರಬಲ್ಲದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Power Cut: ಬೆಂಗಳೂರಿನ ಹಲವೆಡೆ ಇಂದು, ನಾಳೆ ವಿದ್ಯುತ್ ವ್ಯತ್ಯಯ: ನಿಮ್ಮ ಏರಿಯಾದಲ್ಲೂ ಕರೆಂಟ್ ಇರಲ್ವಾ? ಇಲ್ಲಿದೆ ವಿವರ! – Kannada News | Bengaluru Power Cut: Electricity Supply Interrupted in Major Areas Today

ಬೆಂಗಳೂರು, ಜುಲೈ 25: ಬೆಸ್ಕಾಂ (BESCOM) ವ್ಯಾಪ್ತಿಯ ಪ್ರಮುಖ ನಾಲ್ಕು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳು ನಡೆಯುತ್ತಿರುವುದರಿಂದ, ಜುಲೈ 25 ಮತ್ತು 26 ರಂದು ನಗರದ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 66/11 ಕೆ.ವಿ ಎಸ್‌ಆರ್‌ಟಿ, ವಿಕ್ಟೋರಿಯಾ, ಬ್ಯಾಡರಹಳ್ಳಿ ಹಾಗೂ ತಾವರೆಕೆರೆ ವಿದ್ಯುತ್ ಕೇಂದ್ರಗಳ ವ್ಯಾಪ್ತಿಯಲ್ಲಿ ಈ ವಿದ್ಯುತ್ ಸ್ಥಗಿತಗೊಳ್ಳಲಿದೆ.

ಇಂದು (ಜುಲೈ 25) ವಿದ್ಯುತ್ ವ್ಯತ್ಯಯವಾಗಲಿರುವ ಪ್ರಮುಖ ಪ್ರದೇಶಗಳು

  • ವಿಕೆಟೋರಿಯಾ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿ: ಸಿಟಿ ಮಾರ್ಕೆಟ್, ಅವಿನ್ಯೂ ರಸ್ತೆ, ಬಿ.ವಿ.ಕೆ ಅಯ್ಯಂಗಾರ್ ರಸ್ತೆ, ಆರ್‌ಟಿ ಸ್ಟ್ರೀಟ್, ಸಿಟಿ ಸ್ಟ್ರೀಟ್, ಚಿಕ್ಕಪೇಟೆ, ನಗರ್ಥಪೇಟೆ, ಎಸ್.ಪಿ. ರಸ್ತೆ, ಟೌನ್ ಹಾಲ್, ಜೆ.ಸಿ. ರಸ್ತೆ, ಮಿನರ್ವಾ ಸರ್ಕಲ್, ಕೆ.ಜಿ. ರಸ್ತೆ, ಗಾಂಧಿನಗರ, ಮೈಸೂರು ರಸ್ತೆ, ಪೊಲೀಸ್ ವಸತಿಗೃಹ, ಗೋರಿಪಾಳ್ಯ, ಬಿನ್ನಿಪೇಟೆ, ನ್ಯೂ ತರಗುಪೇಟೆ, ಚಾಮರಾಜಪೇಟೆ, ಎ.ಎಂ. ರಸ್ತೆ, ಕಲಾಲಿಪಾಳ್ಯ, ವಿಕ್ಟೋರಿಯಾ ಆಸ್ಪತ್ರೆ, ಕಿಮ್ಸ್ ಮತ್ತು ಸುತ್ತಮುತ್ತಲಿನ ಭಾಗಗಳು.
  • ಎಸ್‌ಆರ್‌ಟಿ ಹಾಗೂ ಇತರ ವ್ಯಾಪ್ತಿಯ ಪ್ರದೇಶಗಳು: ನ್ಯೂ ಕೆ.ಹೆಚ್.ಬಿ ಕಾಲೋನಿ, ಬಂಡೇಮಠ, ಕೆ.ಎಸ್.ಆರ್‌ಟಿ, ಕೆ.ಹೆಚ್.ಬಿ, ಅರುಂಧತಿನಗರ, ಶೀರ್ಕೆ, ಹೊಯ್ಸಳ ಸರ್ಕಲ್, ಸಚ್ಚಿದಾನಂದನಗರ, ವಲೇಗರಹಳ್ಳಿ, ಚಿಕ್ಕನಹಳ್ಳಿ, ಸರ್.ಎಂ.ವಿ. ಲೇಔಟ್, ಜ್ಞಾನಭಾರತಿ ಲೇಔಟ್, ಕೋಡಿಗೇಹಳ್ಳಿ, ಕೆನ್ನಹಳ್ಳಿ, ಸೀಗೇಹಳ್ಳಿ, ಬಿಎಎಮ್‌ಎಲ್ ಲೇಔಟ್, ಮಾಗಡಿ ಮೇನ್ ರೋಡ್, ಅಂಜನಾನಗರ, ಅಂಬೇಡ್ಕರ್ ನಗರ, ಮಾರುತಿನಗರ, ಚೊಕ್ಕಸಂದ್ರ, ನಗದೆವನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಬ್ಯಾಡರಹಳ್ಳಿ ಹಾಗೂ ತಾವರೆಕೆರೆ ಭಾಗದಲ್ಲೂ ಕರೆಂಟ್ ಇರಲ್ಲ

  • ತಾವರೆಕೆರೆ ವ್ಯಾಪ್ತಿ: ತಾವರೆಕೆರೆ, ಜಟ್ಟಿಕಾವಲು, ಚನ್ನೇನಹಳ್ಳಿ, ಯರಪ್ಪ ಇಂಡಸ್ಟ್ರಿಯಲ್ ಏರಿಯಾ, ಗಿಡ್ಡದಪಾಳ್ಯ, ಹುನಗನಹಟ್ಟಿ, ಗಾಣಕಲ್ ಇಂಡಸ್ಟ್ರಿಯಲ್ ಏರಿಯಾ, ಬಸವನಪಾಳ್ಯ, ವಟೂರು, ಮೆಟಿಪಾಳ್ಯ ಹಾಗೂ ಗಂಗೇನಹಳ್ಳಿ.
  • ಬ್ಯಾಡರಹಳ್ಳಿ ವ್ಯಾಪ್ತಿ: ಬ್ಯಾಡರಹಳ್ಳಿ, ಅಂಜನಾನಗರ, ಬಿಎಎಮ್‌ಎಲ್ ಲೇಔಟ್, ಗಿಡ್ಡದಕೋನೇನಹಳ್ಳಿ, ಮುದ್ದಿನಪಾಳ್ಯ, ಹೆಗ್ಗಡದೇವನಪುರ, ಭವಾನಿ ಲೇಔಟ್, ಬಾಲಾಜಿ ಲೇಔಟ್, ಹೆಗ್ಗನಹಳ್ಳಿ, ತುಂಗಾನಗರ, ಕೆಂಪೇಗೌಡನಗರ, ಹೊಸಹಳ್ಳಿ, ಸುಂಕದಕಟ್ಟೆ ಇಂಡಸ್ಟ್ರಿಯಲ್ ಏರಿಯಾ, ನಾಗರಹೊಳೆನಗರ ಹಾಗೂ ಸಂಜೀವಿನಿ ನಗರ. ಸಾರ್ವಜನಿಕರು ಹಾಗೂ ಗ್ರಾಹಕರು ಮುನ್ನೆಚ್ಚರಿಕೆಯಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಬೆಸ್ಕಾಂ ವಿನಂತಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏಷ್ಯನ್ ಗೇಮ್ಸ್​ನಲ್ಲಿ ಟೀಮ್ ಇಂಡಿಯಾ ಎದುರಾಳಿ ಯಾರು? – Kannada News | Asian Games 2026: Team India Schedule

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಪ್ರತಿಷ್ಠಿತ 2026ರ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಪಂದ್ಯಾವಳಿಯ ಅಧಿಕೃತ ಡ್ರಾ ಮತ್ತು ವೇಳಾಪಟ್ಟಿ ಪ್ರಕಟವಾಗಿದೆ. ಅಗ್ರ ಶ್ರೇಯಾಂಕದ ಬಲದೊಂದಿಗೆ ಭಾರತದ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳು ನೇರವಾಗಿ ಕ್ವಾರ್ಟರ್‌ಫೈನಲ್ ಹಂತಕ್ಕೆ ಪ್ರವೇಶ ಪಡೆದಿವೆ.

ಐಸಿಸಿ ಟಿ20 ಶ್ರೇಯಾಂಕದ ಆಧಾರದ ಮೇಲೆ ಭಾರತದ ಉಭಯ ತಂಡಗಳಿಗೆ ಈ ವಿಶೇಷ ಸ್ಥಾನ ಲಭಿಸಿದೆ. ಮಹಿಳಾ ವಿಭಾಗದಲ್ಲಿ ಭಾರತಕ್ಕೆ ಎದುರಾಳಿ ಯಾರು ಎಂಬುದು ಖಚಿತವಾಗಿದ್ದರೆ, ಪುರುಷರ ವಿಭಾಗದಲ್ಲಿ ಅರ್ಹತಾ ಸುತ್ತಿನ ಬಳಿಕ ಎದುರಾಳಿ ನಿರ್ಧಾರವಾಗಲಿದೆ.

ಅರ್ಹತಾ ಸುತ್ತಿನ ಸವಾಲು:

ಶ್ರೇಯಸ್ ಅಯ್ಯರ್ ನೇತೃತ್ವದ ಭಾರತೀಯ ಪುರುಷರ ತಂಡಕ್ಕೂ ನೇರ ಕ್ವಾರ್ಟರ್‌ಫೈನಲ್ ಟಿಕೆಟ್ ಸಿಕ್ಕಿದೆ. ಆದರೆ, ಭಾರತದ ಎದುರಾಳಿ ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಪ್ರಾಥಮಿಕ ಸುತ್ತಿನ ಗುಂಪು ಹಂತದಿಂದ ಅಗ್ರಸ್ಥಾನ ಪಡೆದು ಅರ್ಹತೆ ಪಡೆಯುವ ಯಾವುದಾದರೊಂದು ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತಕ್ಕೆ ಎದುರಾಳಿಯಾಗಲಿದೆ.

ಎದುರಾಳಿ ಯಾಕೆ ನಿರ್ಧಾರವಾಗಿಲ್ಲ?

ಭಾರತೀಯ ಪುರುಷರ ಕ್ರಿಕೆಟ್ ತಂಡದ ಎದುರಾಳಿಯ ಜಾಗದಲ್ಲಿ TBD (To Be Decided – ಇನ್ನು ನಿರ್ಧಾರವಾಗಬೇಕಿದೆ) ಎಂದು ನೀಡಲು ಮುಖ್ಯ ಕಾರಣ ಟೂರ್ನಿಯ ಫಾರ್ಮ್ಯಾಟ್ ಮತ್ತು ಅರ್ಹತಾ ಸುತ್ತಿನ ಪಂದ್ಯಗಳು ಇನ್ನೂ ಮುಗಿಯದೇ ಇರುವುದು.

  • ನೇರ ಪ್ರವೇಶ: ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ ಭಾರತ ಅತ್ಯುತ್ತಮ ಸ್ಥಾನದಲ್ಲಿರುವ ಕಾರಣ, ಭಾರತ ತಂಡಕ್ಕೆ ಟೂರ್ನಿಯ ಆರಂಭಿಕ ಪಂದ್ಯಗಳನ್ನು ಆಡುವ ಅಗತ್ಯವಿಲ್ಲ. ತಂಡವು ನೇರವಾಗಿ ಕ್ವಾರ್ಟರ್‌ಫೈನಲ್  ಹಂತಕ್ಕೆ ಅರ್ಹತೆ ಪಡೆದಿದೆ.
  • ಅರ್ಹತಾ ಸುತ್ತಿನ ಪಂದ್ಯಗಳು: ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಇತರ ಕೆಳ ಕ್ರಮಾಂಕದ ತಂಡಗಳಾದ ಅಫ್ಘಾನಿಸ್ತಾನ್, ನೇಪಾಳ, ಜಪಾನ್, ಹಾಂಗ್ ಕಾಂಗ್, ಮಲೇಷ್ಯಾ ಮತ್ತು ಒಮಾನ್ ತಂಡಗಳು ಮೊದಲು ಪ್ರಾಥಮಿಕ ಸುತ್ತಿನ ಪಂದ್ಯಗಳನ್ನು ಆಡಲಿದೆ.
  • ಭಾರತದ ಎದುರಾಳಿ: ಈ ಪ್ರಾಥಮಿಕ ಸುತ್ತಿನ ಪಂದ್ಯಗಳು ಮುಗಿದು, ಅದರಲ್ಲಿ ಯಾವ ತಂಡ ಅಗ್ರಸ್ಥಾನ ಪಡೆದು ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯುತ್ತದೆಯೋ, ಆ ತಂಡವು ಭಾರತದ ವಿರುದ್ಧ ಆಡಲಿದೆ.

ಅಂದರೆ ಇಲ್ಲಿ ಟೀಮ್ ಇಂಡಿಯಾಗೆ ಅಫ್ಘಾನಿಸ್ತಾನ್, ನೇಪಾಳ, ಜಪಾನ್, ಹಾಂಗ್ ಕಾಂಗ್, ಮಲೇಷ್ಯಾ ಮತ್ತು ಒಮಾನ್ ತಂಡಗಳಲ್ಲಿ ಯಾವುದಾದರೊಂದು ತಂಡ ಎದುರಾಳಿಯಾಗಿ ಸಿಗಲಿದೆ. ಈ ಪಂದ್ಯದಲ್ಲಿ ಗೆದ್ದರೆ ಟೀಮ್ ಇಂಡಿಯಾ ಸೆಮಿಫೈನಲ್​ಗೇರಲಿದೆ. ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಎದುರಿಸುವ ಸಾಧ್ಯತೆ ಹೆಚ್ಚಿದೆ.

ಇಂಡೊ-ಪಾಕ್ ಕದನ:

ಈ ಬಾರಿಯ ಏಷ್ಯನ್ ಗೇಮ್ಸ್ ಗ್ರೂಪ್​ಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳನ್ನು ವಿರುದ್ಧ ಬದಿಗಳಲ್ಲಿ ಇರಿಸಲಾಗಿದ್ದು, ಉಭಯ ತಂಡಗಳು ತಮ್ಮ ಕ್ವಾರ್ಟರ್‌ಫೈನಲ್ ಗೆದ್ದರೆ ಸೆಮಿಫೈನಲ್ ಹಂತದಲ್ಲೇ ಮುಖಾಮುಖಿಯಾಗಲಿವೆ. ಇಲ್ಲಾ ಫೈನಲ್​ನಲ್ಲಿ ಎದುರು ಬದುರು ಆಗಲಿದೆ.

ಒಂದು ವೇಳೆ ಪಾಕಿಸ್ತಾನ್ ತಂಡವು ಸೆಮಿಫೈನಲ್ ತಲುಪಲು ವಿಫಲವಾದರೆ, ಆ ಬದಿಯಿಂದ ಕ್ವಾರ್ಟರ್‌ಫೈನಲ್ ಗೆದ್ದು ಬರುವ ಅರ್ಹತಾ ಸುತ್ತಿನ ಬಲಿಷ್ಠ ತಂಡಗಳಲ್ಲಿ ಒಂದಾದ ಶ್ರೀಲಂಕಾ ಅಥವಾ ಅಫ್ಘಾನಿಸ್ತಾನ್ ತಂಡವು ಭಾರತಕ್ಕೆ ಎದುರಾಳಿಯಾಗಿ ಸಿಗಬಹುದು.

ಕೇವಲ 3 ಪಂದ್ಯಗಳು:

2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಚಿನ್ನದ ಪದಕ ಗೆಲ್ಲಬೇಕಾದರೆ ಒಟ್ಟು 3 ಪಂದ್ಯಗಳನ್ನು ಆಡಬೇಕಾಗುತ್ತದೆ. ಅಂದರೆ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಮೂಲಕ ಟೀಮ್ ಇಂಡಿಯಾ ಚಿನ್ನದ ಪದಕಕ್ಕೆ ಕೊರೊಳೊಡ್ಡಬಹುದು.

ಏಷ್ಯನ್ ಗೇಮ್ಸ್ ಪ್ರಾಥಮಿಕ ಹಂತದ​ ಗ್ರೂಪ್:

  • ಗ್ರೂಪ್ A:
  • ಅಫ್ಘಾನಿಸ್ತಾನ್
  • ನೇಪಾಳ
  • ಜಪಾನ್
  • ಗ್ರೂಪ್ B:
  • ಒಮಾನ್
  • ಹಾಂಗ್ ಕಾಂಗ್
  • ಮಲೇಷ್ಯಾ

ಭಾರತ ತಂಡದ ವೇಳಾಪಟ್ಟಿ:

ಪಂದ್ಯದ ಹಂತ ದಿನಾಂಕ ಎದುರಾಳಿ ತಂಡ
ಕ್ವಾರ್ಟರ್‌ಫೈನಲ್ ಸೆಪ್ಟೆಂಬರ್ 28 ಅರ್ಹತಾ ಸುತ್ತಿನಿಂದ ಬರುವ ತಂಡ
ಸೆಮಿಫೈನಲ್ ಸೆಪ್ಟೆಂಬರ್ 30 / ಅಕ್ಟೋಬರ್ 1 ಪಾಕಿಸ್ತಾನ್ (ಉಭಯ ತಂಡಗಳು ಕ್ವಾರ್ಟರ್ ಫೈನಲ್ ಗೆದ್ದರೆ)
ಫೈನಲ್ / ಕಂಚಿನ ಪದಕದ ಪಂದ್ಯ ಅಕ್ಟೋಬರ್ 1 / ಅಕ್ಟೋಬರ್ 3 ನಿರ್ಧಾರವಾಗಬೇಕಿದೆ (ಸೆಮಿಫೈನಲ್​ನಲ್ಲಿ ಭಾರತ ಗೆದ್ದರೆ)

2023ರ ಚೀನಾದ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು. ರುತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ತಂಡ ಮತ್ತು ಅಫ್ಘಾನಿಸ್ತಾನ್ ನಡುವಿನ ಫೈನಲ್ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.

ಇದನ್ನೂ ಓದಿ: 18 ತಂಡಗಳು… ಹೀಗಿರಲಿದೆ ಏಷ್ಯನ್ ಗೇಮ್ಸ್​ ಟಿ20 ಟೂರ್ನಿ

ಆದರೆ, ಐಸಿಸಿ ರ್ಯಾಂಕಿಂಗ್‌ನಲ್ಲಿ ಭಾರತ ಅಗ್ರ ಶ್ರೇಯಾಂಕ ಹೊಂದಿದ್ದ ಕಾರಣ ನಿಯಮದ ಪ್ರಕಾರ ಟೀಮ್ ಇಂಡಿಯಾಗೆ ಚಿನ್ನದ ಪದಕ ನೀಡಲಾಯಿತು. ಈ ಬಾರಿ ಕೂಡ ಟೀಮ್ ಇಂಡಿಯಾ ಚಿನ್ನದ ಪದಕ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

Source link

‘ಡೀಲ್ ಮಾಡಲು ಯಾರಾದರೂ 26 ದಿನ ಹಸಿವಿನಿಂದ ಇರುತ್ತಾರಾ?’: ಟೀಕಿಸಿದವರಿಗೆ ಖಡಕ್​​ ಉತ್ತರ ನೀಡಿದ ಸೋನಂ ವಾಂಗ್ಚುಕ್ – Kannada News | Ladakh Activist Sonam Wangchuk: ICU and Response to Fast Ending Controversy

ದೆಹಲಿ, ಜು.25: ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಪರೀಕ್ಷಾ ಅಕ್ರಮ ವಿರೋಧಿ ಹೋರಾಟಕ್ಕೆ ಬೆಂಬಲಿಸಿ ನಡೆಸುತ್ತಿದ್ದ 26 ದಿನಗಳ ಸತತ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ ಬೆನ್ನಲ್ಲೇ, ಲಡಾಖ್‌ನ ಪ್ರಖ್ಯಾತ ಪರಿಸರ ಮತ್ತು ಶಿಕ್ಷಣ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ತಮ್ಮ ಬೆಂಬಲಿಗರು ಹಾಗೂ ವಿಮರ್ಶಕರನ್ನು ಉದ್ದೇಶಿಸಿ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ವೀಡಿಯೊ ಸಂದೇಶ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಅವರನ್ನು ಮನವೋಲಿ ಅವರ ಸತ್ಯಾಗ್ರಹವನ್ನು ಕೊನೆಗೊಳಿಸಿದಕ್ಕೆ ಇದೀಗ ಭಾರೀ ಟೀಕೆಗಳು ಬರುತ್ತಿದೆ. ಇದಕ್ಕೆ ವಾಂಗ್ಚುಕ್ ಅವರು ಸರಿಯಾಗಿ ಉತ್ತರ ನೀಡಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಿಂದ ಆಸ್ಪತ್ರೆಯ ಐಸಿಯು ವಾರ್ಡ್‌ಗೆ ದಾಖಲಾಗಿದ್ದ ವಾಂಗ್ಚುಕ್ ಅವರು, 26 ದಿನಗಳ ಸುದೀರ್ಘ ಹಸಿವಿನ ನಂತರವೂ ನಾನು ನನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಬೇಕೇ? ಎಂದು ಪ್ರಶ್ನಿಸಿದ್ದಾರೆ. ಆಸ್ಪತ್ರೆಯ ಹಾಸಿಗೆಯಿಂದಲೇ ರೆಕಾರ್ಡ್ ಮಾಡಿದ 22 ನಿಮಿಷಗಳ ವೀಡಿಯೊದಲ್ಲಿ ಮಾತನಾಡಿದ ಅವರು “ಸ್ವಲ್ಪ ಬೇಸರ, ಆಶ್ಚರ್ಯ ಹಾಗೂ ಕೋಪದಿಂದ ಈ ವೀಡಿಯೊ ಮಾಡುತ್ತಿದ್ದೇನೆ. 26 ದಿನಗಳ ಹಸಿವಿನಿಂದಾಗಿ ದೇಹದ ಸ್ನಾಯುಗಳು ಕ್ಷೀಣಿಸಿವೆ, ಸುಮಾರು 11 ಕೆಜಿ ತೂಕ ಕಡಿಮೆಯಾಗಿದೆ ಮತ್ತು ಅಂಗಾಂಗಗಳಿಗೆ ತೀವ್ರ ಹಾನಿಯಾಗಿದೆ” ಎಂದು ನೋವು ತೋಡಿಕೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಕೇಂದ್ರ ಸಚಿವರಾದ ಜೇಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರ ಉಪಸ್ಥಿತಿಯಲ್ಲಿ ಉಪವಾಸ ಮುರಿದಿದ್ದಕ್ಕೆ ಎದ್ದಿರುವ ಟೀಕೆಗಳಿಗೆ ಉತ್ತರಿಸಿದ ಅವರು, “ಸರ್ಕಾರದೊಂದಿಗೆ ಡೀಲ್ ಮಾಡಿಕೊಳ್ಳಲು ಯಾರಾದರೂ 26 ದಿನ ಹಸಿವಿನಿಂದ ಬಳಲುತ್ತಾರೆಯೇ? ಡೀಲ್ ಮಾಡಿಕೊಳ್ಳುವುದಿದ್ದರೆ ದೆಹಲಿಯ ಭಾರಿ ಬಿಸಿಲಿನಲ್ಲಿ ರಸ್ತೆಯಲ್ಲಿ ಕೂರುವ ಬದಲು ಏಸಿ ಕೊಠಡಿಯಲ್ಲಿ ಕುಳಿತು ಮಾಡಬಹುದಿತ್ತಲ್ಲವೇ?” ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: “ಥ್ಯಾಂಕ್ಯೂ ಫ್ರೆಂಡ್ಸ್”: ಮತ್ತೊಂದು ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ

ಮತ್ತೊಂದೆಡೆ, ವಾಂಗ್ಚುಕ್ ಅವರು ಉಪವಾಸ ಹಿಂಪಡೆದಿರುವುದನ್ನು ಸಿಜೆಪಿ (CJP) ವಕ್ತಾರ ಅಶುತೋಷ್ ರಂಕಾ ಸ್ವಾಗತಿಸಿದ್ದಾರೆ. “ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದ ಕಾರಣ ನಾವೇ ಉಪವಾಸ ಹಿಂಪಡೆಯಲು ವಿನಂತಿಸುತ್ತಿದ್ದೆವು. ಅವರು ಉಪವಾಸ ಅಂತ್ಯಗೊಳಿಸಿರುವುದು ಸಂತಸ ತಂದಿದೆ, ಆದರೆ ನಮ್ಮ ಪ್ರತಿಭಟನೆ ಮುಂದುವರಿಯಲಿದೆ” ಎಂದಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಯಾರು ಹೆದರುತ್ತಾರೋ ಅವರು ಸತ್ತಂತೆ’; ನಿಗೂಢಾರ್ಥದ ಪೋಸ್ಟ್ ಹಂಚಿಕೊಂಡ ಸಲ್ಮಾನ್ ಖಾನ್ – Kannada News | Salman Khan Flaunts Ripped Physique in New Gym Pics Shares Cryptic Sholay Dialogue for Critics

ಬಾಲಿವುಡ್‌ನ ನಟ ಸಲ್ಮಾನ್ ಖಾನ್ (Salman Khan) ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಹೋರಾಡುತ್ತಿರುವವರಿಗೆ ಬೆಂಬಲ ನೀಡಿದ್ದಾರೆ. ಇದನ್ನು ಅನೇಕರು ಟೀಕೆ ಮಾಡಿದ್ದಾರೆ. ಈ ಬೆನ್ನಲ್ಲೇ ಅವರು ಸಿಕ್ಸ್ ಪ್ಯಾಕ್ ಬಾಡಿಯ ಫೋಟೋ ಹಂಚಿಕೊಂಡು ಅದಕ್ಕೆ ನಿಗೂಢಾರ್ಥದ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಚರ್ಚೆ ಆಗುತ್ತಿದೆ.

ಸಲ್ಮಾನ್ ಖಾನ್ ಶನಿವಾರ (ಜುಲೈ 25) ಮುಂಜಾನೆ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ವರ್ಕೌಟ್ ನಂತರದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ಸ್ಲಿಮ್ ಹಾಗೂ ಫಿಟ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅವರು ತಮ್ಮ ಬಲಿಷ್ಠ ಬೈಸೆಪ್ಸ್ ಹಾಗೂ ಆ್ಯಬ್ಸ್ ಪ್ರದರ್ಶಿಸಿದ್ದಾರೆ. ಈ ಜಿಮ್ ಸೆಲ್ಫಿಗಳಿಗೆ ಸಲ್ಮಾನ್ ನೀಡಿರುವ ಕ್ಯಾಪ್ಷನ್ ಗಮನ ಸೆಳೆಯುತ್ತಿದೆ.

‘ಸಲ್ಮಾನ್ ಖಾನ್ ಹೆದರಿದರು.. ಹೌದು, ಯಾರು ಹೆದರುತ್ತಾರೋ ಅವರು ಸತ್ತಂತೆ’ ಎಂದು ಬರೆದುಕೊಂಡಿದ್ದು, ಇದು ಕೊಟ್ಟ ಟಾಂಗ್ ಎಂದು ಬಣ್ಣಿಸಲಾಗುತ್ತಿದೆ. ‘ಜೋ ಡರ್​​ ಗಯಾ, ವೋ ಮರ್​​ ಗಯಾ’ ಇದು ಬಾಲಿವುಡ್‌ನ ಐಕಾನಿಕ್ ಸಿನಿಮಾ ‘ಶೋಲೆ’ ಚಿತ್ರದ ಪ್ರಸಿದ್ಧ ಡೈಲಾಗ್ ಆಗಿದೆ. ಈ ಸಾಲುಗಳನ್ನು ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರೇ ಬರೆದಿದ್ದರು ಎಂಬುದು ವಿಶೇಷ.

ಇದನ್ನೂ ಓದಿ: ‘ಮನೆಗೆ ವಾಪಸ್ ಹೋಗಿ’: ಮೋದಿ ಟ್ವೀಟ್ ಬಳಿಕ ವಿದ್ಯಾರ್ಥಿಗಳಿಗೆ ಸಲ್ಮಾನ್ ಖಾನ್ ಮನವಿ

ಇತ್ತೀಚೆಗೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪರವಾಗಿಯೂ ಸಲ್ಮಾನ್ ಧ್ವನಿ ಎತ್ತಿದ್ದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ ಬೆನ್ನಲ್ಲೇ ಸೋನಮ್ ಅವರಿಗೆ ಉಪವಾಸ ಕೈಬಿಡುವಂತೆ ಸಲ್ಮಾನ್ ಮನವಿ ಮಾಡಿದ್ದರು.

ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಯಾವುದೇ ರಾಜಕೀಯ ಪಕ್ಷಗಳು ದುರುಪಯೋಗಪಡಿಸಿಕೊಳ್ಳಬಾರದು ಎಂದು ಸಲ್ಮಾನ್ ಕಿವಿಮಾತು ಹೇಳಿದ್ದರು. ಇನ್ನು ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಸಲ್ಮಾನ್ ಖಾನ್ ಸದ್ಯದಲ್ಲೇ ‘ಬಿಗ್ ಬಾಸ್ 20’ ರಿಯಾಲಿಟಿ ಶೋ ನಿರೂಪಣೆ ಮಾಡಲಿದ್ದಾರೆ. ಇದರ ಜೊತೆಗೆ ವಂಶಿ ಪೈಡಿಪಲ್ಲಿ ನಿರ್ದೇಶನದ ಹೊಸ ಆಕ್ಷನ್ ಸಿನಿಮಾದಲ್ಲಿ ನಯನತಾರಾ ಜೊತೆ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಜ್ಯದಲ್ಲಿ ಬೀದಿ ನಾಯಿ ಸಂತಾನಹರಣ ಅಭಿಯಾನ: ಅಸ್ಸಾಂನಿಂದ ನಾಯಿ ಹಿಡಿಯುವವರ ಆಗಮನಕ್ಕಾಗಿ ಕಾಯುತ್ತಿರುವ ಸರ್ಕಾರ – Kannada News | Karnataka Stray Dog Sterilisation Drive Awaits Dog Catchers From Assam

ಬೆಂಗಳೂರು, ಜುಲೈ 25: ರಾಜ್ಯಾದ್ಯಂತ ಹೆಚ್ಚುತ್ತಿರುವ ಬೀದಿ ನಾಯಿಗಳ (Street Dogs) ಹಾವಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಬೃಹತ್ ಸಂತಾನಹರಣ ಅಭಿಯಾನ ಕೈಗೊಳ್ಳಲು ನಿರ್ಧರಿಸಿವೆ. ಆದರೆ, ಈ ಕಾರ್ಯಾಚರಣೆ ಪೂರ್ಣ ಪ್ರಮಾಣದಲ್ಲಿ ಚುರುಕುಗೊಳ್ಳಲು ಅಸ್ಸಾಂ ರಾಜ್ಯದಿಂದ ನಾಯಿ ಹಿಡಿಯುವ ಪರಿಣಿತ ತಂಡಗಳ (Dog Catchers) ಆಗಮನಕ್ಕಾಗಿ ಕಾಯಲಾಗುತ್ತಿದೆ.

ಅಸ್ಸಾಂನಿಂದ ತರಬೇತಿ ಪಡೆದ ಸಿಬ್ಬಂದಿ ಕರೆಸಲು ನಿರ್ಧಾರ

ಬೀದಿ ನಾಯಿಗಳನ್ನು ಪ್ರಾಣಿದಯಾ ಸಂಘಗಳ (AWBI) ಕಟ್ಟುನಿಟ್ಟಿನ ನಿಯಮಾವಳಿಗಳಿಗೆ ಅನುಗುಣವಾಗಿ ಮತ್ತು ಸುರಕ್ಷಿತವಾಗಿ ಹಿಡಿಯುವುದು ಸವಾಲಿನ ಕೆಲಸವಾಗಿದೆ. ಸ್ಥಳೀಯವಾಗಿ ಇಂತಹ ತರಬೇತಿ ಪಡೆದ ಸಿಬ್ಬಂದಿಯ ಅಭಾವವಿರುವುದರಿಂದ, ಟೆಂಡರ್ ಪಡೆದ ಸಂಸ್ಥೆಗಳು ಅಸ್ಸಾಂ ಸೇರಿದಂತೆ ಇತರೆ ರಾಜ್ಯಗಳಿಂದ ಪರಿಣಿತ ಸಿಬ್ಬಂದಿಯನ್ನು ಕರೆಸಿಕೊಳ್ಳುತ್ತಿವೆ. ಪ್ರಾಣಿಗಳಿಗೆ ಯಾವುದೇ ರೀತಿಯ ಗಾಯ ಅಥವಾ ಹಿಂಸೆಯಾಗದಂತೆ ವೈಜ್ಞಾನಿಕ ವಿಧಾನಗಳಲ್ಲಿ ಹಿಡಿಯಲು ಈ ತಂಡಗಳಿಗೆ ವಿಶೇಷ ತರಬೇತಿ ನೀಡಲಾಗಿರುತ್ತದೆ.

ಸಂತಾನಹರಣ ಕಾರ್ಯಾಚರಣೆ ಹಾಗೂ ಆರೈಕೆ ವಿಧಾನ

ಈ ಅಭಿಯಾನದ ಮುಖ್ಯ ಉದ್ದೇಶ ರಾಜ್ಯದಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸುವುದು ಮತ್ತು ರೇಬೀಸ್ ರೋಗ ಹರಡುವುದನ್ನು ತಡೆಯುವುದಾಗಿದೆ. ಅಸ್ಸಾಂನಿಂದ ಆಗಮಿಸುವ ಸಿಬ್ಬಂದಿ ವಿವಿಧ ತಂಡಗಳಾಗಿ ವಿಂಗಡಣೆಯಾಗಿ, ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ನಿಯಮಗಳ ಪ್ರಕಾರ, ಹಿಡಿದ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ, ರೇಬೀಸ್ ನಿರೋಧಕ ಲಸಿಕೆ ನೀಡಲಾಗುತ್ತದೆ. ನಂತರ ಚೇತರಿಸಿಕೊಳ್ಳಲು ಗಂಡು ನಾಯಿಗಳನ್ನು 3 ದಿನ ಹಾಗೂ ಹೆಣ್ಣು ನಾಯಿಗಳನ್ನು 5 ದಿನಗಳ ಕಾಲ ಪ್ರತ್ಯೇಕ ಕೇಂದ್ರಗಳಲ್ಲಿಟ್ಟು ಆರೈಕೆ ಮಾಡಲಾಗುತ್ತದೆ. ಅವು ಸಂಪೂರ್ಣವಾಗಿ ಗುಣಮುಖರಾದ ಬಳಿಕ, ಅವುಗಳನ್ನು ಎಲ್ಲಿಂದ ಹಿಡಿಯಲಾಗಿತ್ತೋ ಅದೇ ಸ್ಥಳದಲ್ಲೇ ಮರಳಿ ಬಿಡಲಾಗುತ್ತದೆ. ಅಸ್ಸಾಂ ತಂಡ ಬಂದ ತಕ್ಷಣವೇ ಈ ಬೃಹತ್ ಕಾರ್ಯಾಚರಣೆಗೆ ಚಾಲನೆ ಸಿಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ಇಂಗ್ಲೆಂಡ್ vs ಆಸ್ಟ್ರೇಲಿಯಾ ಟೆಸ್ಟ್ ಪಂದ್ಯ? – Kannada News | CA Open to Hosting Historic Ashes Test in India

ಟೆಸ್ಟ್​ ಕ್ರಿಕೆಟ್​ನ ಮದಗಜಗಳ ಕಾದಾಟ ಎಂದೇ ಬಿಂಬಿತವಾಗಿರುವ ಆ್ಯಶಸ್ ಸರಣಿಯ ಪಂದ್ಯವೊಂದು ಭಾರತದಲ್ಲಿ ನಡೆಯಲಿದೆಯಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ (CEO) ಟಾಡ್ ಗ್ರೀನ್‌ಬರ್ಗ್ ನೀಡಿರುವ ಹೇಳಿಕೆ.

BBC ಸ್ಟಂಪ್ಡ್ ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಟಾಡ್ ಗ್ರೀನ್‌ಬರ್ಗ್,  ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಐತಿಹಾಸಿಕ ಆಶ್ಯಸ್ ಟೆಸ್ಟ್ ಪಂದ್ಯವನ್ನು ಭವಿಷ್ಯದಲ್ಲಿ ಭಾರತದ ಮಣ್ಣಿನಲ್ಲಿ ಆಯೋಜಿಸುವ ಆಲೋಚನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಎದುರು ನೋಡುತ್ತಿದೆ ಎಂದು ತಿಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನ ಜಾಗತಿಕ ಜನಪ್ರಿಯತೆಯನ್ನು ಹೆಚ್ಚಿಸಲು ಮತ್ತು ಭಾರತದಂತಹ ಬೃಹತ್ ಕ್ರಿಕೆಟ್ ಮಾರುಕಟ್ಟೆಯನ್ನು ಸದುಪಯೋಗಪಡಿಸಿಕೊಳ್ಳಲು ಇಂತಹ ನಿರ್ಧಾರಗಳು ನೆರವಾಗಲಿವೆ ಎಂದು ಟಾಡ್ ಗ್ರೀನ್‌ಬರ್ಗ್ ಅಭಿಪ್ರಾಯಪಟ್ಟಿದ್ದಾರೆ.

ಅಂದರೆ ಭಾರತದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಟೆಸ್ಟ್ ಕ್ರಿಕೆಟ್​ನಲ್ಲಿ ಮುಖಾಮುಖಿಯಾಗಲಿದೆ. ಸದ್ಯಕ್ಕೆ ಯಾವುದೇ ಅಧಿಕೃತ ವೇಳಾಪಟ್ಟಿ ಸಿದ್ಧವಾಗಿಲ್ಲದಿದ್ದರೂ, ಭವಿಷ್ಯದಲ್ಲಿ ಈ ಪ್ರಸ್ತಾಪವನ್ನು ಖಂಡಿತವಾಗಿಯೂ ಪರಿಗಣಿಸುತ್ತೇವೆ ಎಂದು ಗ್ರೀನ್‌ಬರ್ಗ್ ಸ್ಪಷ್ಟಪಡಿಸಿದ್ದಾರೆ.

ಅಂದರೆ 2027ರ ಆ್ಯಶಸ್ ಸರಣಿಯ ಒಂದು ಪಂದ್ಯವು ಭಾರತದಲ್ಲಿ ನಡೆದರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ ಈಗಾಗಲೇ ಬಿಗ್ ಬ್ಯಾಷ್ ಲೀಗ್​ನ ಉದ್ಘಾಟನಾ ಪಂದ್ಯವನ್ನು ಭಾರತದಲ್ಲಿ ಆಯೋಜಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಸಂಪೂರ್ಣ ಸಜ್ಜಾಗಿದೆ. ಈ ಪಂದ್ಯವು ಯಶಸ್ವಿಯಾದರೆ, ಆ್ಯಶಸ್ ಸರಣಿಯ ಒಂದು ಮ್ಯಾಚ್​ ಭಾರತದಲ್ಲಿ ನಡೆಯುವ ಸಾಧ್ಯತೆಯಿದೆ.

ಮೂರು ಕ್ರಿಕೆಟ್ ಮಂಡಳಿಗಳ ಒಪ್ಪಿಗೆ ಅಗತ್ಯ:

ಈ ಐತಿಹಾಸಿಕ ಪಂದ್ಯ ಭಾರತದಲ್ಲಿ ನಡೆಯಬೇಕಾದರೆ ಕ್ರಿಕೆಟ್ ಆಸ್ಟ್ರೇಲಿಯಾ (CA) ಮಾತ್ರವಲ್ಲದೆ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗಳ ಅಧಿಕೃತ ಅನುಮತಿ ಮತ್ತು ಸಹಭಾಗಿತ್ವ ಕಡ್ಡಾಯವಾಗಿದೆ.

ಇದನ್ನೂ ಓದಿ: 18 ತಂಡಗಳು… ಹೀಗಿರಲಿದೆ ಏಷ್ಯನ್ ಗೇಮ್ಸ್​ ಟಿ20 ಟೂರ್ನಿ

ಆ್ಯಶಸ್ ಪಂದ್ಯದ ಆಲೋಚನೆಗೂ ಮುನ್ನವೇ, ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಪ್ರಸಿದ್ಧ ಬಿಗ್ ಬ್ಯಾಷ್ ಲೀಗ್‌ನ 2026ರ ಸೀಸನ್‌ನ ಉದ್ಘಾಟನಾ ಪಂದ್ಯವನ್ನು (ಮೆಲ್ಬೋರ್ನ್ ರೆನೆಗೇಡ್ಸ್ vs ಪರ್ತ್ ಸ್ಕಾರ್ಚರ್ಸ್) ಇದೇ ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ಆಯೋಜಿಸಲು ಈಗಾಗಲೇ ನಿರ್ಧರಿಸಿದೆ.

ಹೀಗಾಗಿ ಭವಿಷ್ಯದ ಟೆಸ್ಟ್ ಪಂದ್ಯಕ್ಕಾಗಿ ಬಿಸಿಸಿಐ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಮನವೊಲಿಸುವುದು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಅಷ್ಟೊಂದು ಕಷ್ಟವಾಗಲಿಕ್ಕಿಲ್ಲ. ಅದರಂತೆ 2027 ರಲ್ಲಿ ಭಾರತದಲ್ಲೇ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಕದನವನ್ನು ವೀಕ್ಷಿಸುವ ಅವಕಾಶ ಭಾರತೀಯರಿಗೆ ಸಿಗಲಿದೆಯಾ ಕಾದು ನೋಡಬೇಕಿದೆ.

Published On – 8:01 am, Sat, 25 July 26

Source link

ದಕ್ಷಿಣದ ಈ ನಟನ ಜೊತೆ ನಟಿಸಲು ರೆಡಿ ಆದ ಕತ್ರಿನಾ ಕೈಫ್? – Kannada News | Katrina Kaif in Talks for Prabhas Starrer Spirit After Deepika Padukone Exit

ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನ ‘ಸ್ಪಿರಿಟ್’ ಸಿನಿಮಾ ದಿನದಿಂದ ದಿನಕ್ಕೆ ಭಾರೀ ಕುತೂಹಲ ಮೂಡಿಸುತ್ತಿದೆ. ಈ ಚಿತ್ರದ ತಾರಾಗಣದ ಬಗ್ಗೆ ಈಗ ಹೊಸದೊಂದು ಬಿಸಿಬಿಸಿ ಸುದ್ದಿ ಹರಿದಾಡುತ್ತಿದೆ. ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಈ ಬಿಗ್ ಬಜೆಟ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ವರದಿಗಳ ಪ್ರಕಾರ ಕತ್ರಿನಾ ಕೈಫ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಅವಧಿ ತುಂಬಾ ಕಡಿಮೆ ಇರಲಿದೆ. ಆದರೆ ಕಥೆಗೆ ಈ ಪಾತ್ರ ಅತ್ಯಂತ ಪ್ರಮುಖವಾಗಿರಲಿದೆ. ಸಿನಿಮಾದ ಪ್ರಮುಖ ತಿರುವಿಗೆ ಈ ಪಾತ್ರವೇ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರತಂಡವಾಗಲಿ ಅಥವಾ ನಟಿಯಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಈ ಹಿಂದೆ ಈ ಸಿನಿಮಾಗೆ ದೀಪಿಕಾ ಪಡುಕೋಣೆ ನಾಯಕಿಯಾಗಲಿದ್ದಾರೆ ಎನ್ನಲಾಗಿತ್ತು. ಪ್ರಭಾಸ್ ಮತ್ತು ದೀಪಿಕಾ ಈಗಾಗಲೇ ‘ಕಲ್ಕಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆದರೆ ದೀಪಿಕಾ ಈ ಪ್ರಾಜೆಕ್ಟ್‌ನಿಂದ ಹೊರನಡೆದಿದ್ದಾರೆ. ಅವರ ಜಾಗಕ್ಕೆ ತೃಪ್ತಿ ಡಿಮ್ರಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಒಂದು ವೇಳೆ ಕತ್ರಿನಾ ಈ ಚಿತ್ರಕ್ಕೆ ಒಪ್ಪಿಕೊಂಡರೆ ಅವರು ಸುಮಾರು ಎರಡು ದಶಕಗಳ ಬಳಿಕ ತೆಲುಗು ಚಿತ್ರರಂಗಕ್ಕೆ ಮರಳಿದಂತಾಗುತ್ತದೆ. ಈ ಹಿಂದೆ ಅವರು ವೆಂಕಟೇಶ್ ಜೊತೆ ‘ಮಲ್ಲೀಶ್ವರಿ’ ಮತ್ತು ಬಾಲಕೃಷ್ಣ ಜೊತೆ ‘ಅಲ್ಲರಿ ಪಿಡುಗು’ ಸಿನಿಮಾಗಳಲ್ಲಿ ನಟಿಸಿದ್ದರು. ವಿಕ್ಕಿ ಕೌಶಲ್ ಅವರನ್ನು ಮದುವೆಯಾದ ಬಳಿಕ ಕತ್ರಿನಾ ಸಿನಿಮಾಗಳಿಂದ ಕೊಂಚ ಬ್ರೇಕ್ ತಗೆದುಕೊಂಡಿದ್ದರು.

ಇದನ್ನೂ ಓದಿ:  ಬಾಲಿವುಡ್​​ನ ಸೀಕ್ವೆಲ್ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ಕತ್ರಿನಾ ಕೈಫ್ ರೆಡಿ?

ಕತ್ರಿನಾ ಕೈಫ್ ಅವರು 2024ರ ‘ಹ್ಯಾಪಿ ನ್ಯೂಯರ್’ ಸಿನಿಮಾ ಬಳಿಕ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ವಿಕ್ಕಿ ಜೊತೆ ಮದುವೆ ಆಗಿರೋ ಅವರು ಇತ್ತೀಚೆಗೆ ತಾಯಿ ಆಗಿದ್ದಾರೆ. ಈ ಕಾರಣಕ್ಕೆ ಅವರು ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version