ಪ್ರತ್ಯೇಕ ಘಟನೆ: ರಸ್ತೆ ಅಪಘಾತದಲ್ಲಿ ನಾಲ್ವರು ದಾರುಣ ಸಾವು; ಮೂವರು ಗಂಭೀರ – Kannada News | Karnataka Road Accidents: Four Lives Lost in Multiple Tragic Incidents

ಚಿತ್ರದುರ್ಗ/ಕಲಬುರಗಿ, ಜನವರಿ 11: ಲಾರಿಗೆ ಇನ್ನೋವಾ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ತಾಲೂಕಿನ ತಮಟಕಲ್ಲು ಗ್ರಾಮದ ಬಳಿ ನಡೆದಿದೆ. ಮಹಾರಾಷ್ಟ್ರದ ಕೊಲ್ಹಾಪುರದ DySP ವೈಷ್ಣವಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು ಅವರ ತಾಯಿ ಕಮಲ(65), ಕಾರು ಚಾಲಕ ರಾಕೇಶ್(40) ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ವೈಷ್ಣವಿ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಚಿತ್ರದುರ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ತಾಯಿ ಜೊತೆ ತಮಿಳುನಾಡಿಗೆ ಪ್ರವಾಸಕ್ಕೆ ಹೋಗಿದ್ದ DySP ವೈಷ್ಣವಿ ಹಿಂದಿರುಗಿ ಕೊಲ್ಹಾಪುರಕ್ಕೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಘಟನಾ ಸ್ಥಳಕ್ಕೆ ಸಿಪಿಐ ಬಾಲಚಂದ್ರ ನಾಯ್ಕ್ ಭೇಟಿ‌, ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಿಟ್​ ಆ್ಯಂಡ್​ ರನ್​ಗೆ ಬೈಕ್ ಸವಾರ ಬಲಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಬಳಿ ಹಿಟ್​ ಆ್ಯಂಡ್​ ರನ್​ಗೆ ಬೈಕ್ ಸವಾರ ಬಲಿಯಾಗಿದ್ದಾನೆ. ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಮಧುಸೂದನ್(21) ಮೃತಪಟ್ಟಿದ್ದಾರೆ. ಮಧುಸೂದನ್​ ಮಾಗಡಿ ತಾಲೂಕಿನ ವೀರಸಾಗರ ಗ್ರಾಮದ ನಿವಾಸಿಯಾಗಿದ್ದು, ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ; ಬಸ್​​ ಅಪಘಾತದಲ್ಲಿ ಹಲವರಿಗೆ ಗಾಯ; ಓರ್ವ ವಿದ್ಯಾರ್ಥಿ ಸ್ಥಿತಿ ಗಂಭೀರ

ಬೈಕ್​​ಗೆ ಬಸ್​​ ಡಿಕ್ಕಿ: ಸವಾರ ಸಾವು

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿರಾಳ ಹಿಸ್ಸಾ ಕ್ರಾಸ್ ಬಳಿ ಬೈಕ್‌ಗೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಲಮೇಲ ಗ್ರಾಮದ ಯುವರಾಜ್ ಭಾಗಣ್ಣ (28) ಮೃತ ದುರ್ದೈವಿಯಾಗಿದ್ದು, ಶಹಾಪುರದಿಂದ ಸಿಂದಗಿ ಕಡೆ ಹೋಗ್ತಿದ್ದ ಕೆಕೆಆರ್‌ಟಿಸ್ ಬಸ್ ಡಿಕ್ಕಿಯಾದ ರಭಸಕ್ಕೆ ತಲೆಯಿಂದ ತೀವ್ರ ರಕ್ತಸ್ರಾವವಾದ ಕಾರಣ ಅವರು ಅಸುನೀಗಿದ್ದಾರೆ ಎನ್ನಲಾಗಿದೆ. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಂಗಳೂರು: ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ – Kannada News | Karnataka CM Siddaramaiah Addresses Malayalam Imposition and Returned Bills in Mangaluru

ಮಂಗಳೂರು, ಜ.11: ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕನ್ನಡ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಯತ್ನವನ್ನು ನಾವು ಒಪ್ಪುವುದಿಲ್ಲ. ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಮಾತೃಭಾಷೆಯನ್ನು ಕಡ್ಡಾಯವಾಗಿ ಹೇರುವುದು ಸರಿಯಲ್ಲ. ಮಾತೃಭಾಷೆ ಮಾತನಾಡುವವರಿಗೆ ಮಲಯಾಳಂ ಅನ್ನು ಮೊದಲ ಭಾಷೆಯಾಗಿ ಕಲಿಯುವಂತೆ ಒತ್ತಾಯಿಸುವುದು ಸರಿಯಲ್ಲ. ಒಂದು ವೇಳೆ ರಾಜ್ಯಪಾಲರು ಇಂತಹ ಮಸೂದೆಗೆ ಸಹಿ ಹಾಕಿ ಕಾನೂನಾಗಿಸಿದರೆ, ಕರ್ನಾಟಕ ಸರ್ಕಾರವು ಹೋರಾಟ ನಡೆಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು. ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಗಳಿಗೂ ಮನವಿ ಸಲ್ಲಿಸುವ ಮೂಲಕ ಹೋರಾಟ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

2 ಶತಕದೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್ – Kannada News | Ryan Rickleton becomes the first player to score 2 Hundreds in the SA20 History

ಸೌತ್ ಆಫ್ರಿಕಾ ಟಿ20 ಲೀಗ್​ನ ಸೀಸನ್​ವೊಂದರಲ್ಲಿ ಎರಡು ಶತಕಗಳನ್ನು ಬಾರಿಸುವ ಮೂಲಕ ರಯಾನ್ ರಿಕೆಲ್ಟನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಜೋಹಾನ್ಸ್​ಬರ್ಗ್​ನಲ್ಲಿ ನಡೆದ ಈ ಟೂರ್ನಿಯ 20ನೇ ಪಂದ್ಯದಲ್ಲಿ ಎಂಐ ಕೇಪ್​ಟೌನ್ ಹಾಗೂ ಜೋಬರ್ಗ್​ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್​ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಎಂಐ ಕೇಪ್​ಟೌನ್ ಪರ ಆರಂಭಿಕನಾಗಿ ಕಣಕ್ಕಿಳಿದ ರಯಾನ್ ರಿಕೆಲ್ಟನ್ 60 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 113 ರನ್ ಬಾರಿಸಿದರು. ಈ ಶತಕದ ನೆರವಿನೊಂದಿಗೆ ಎಂಐ ಕೇಪ್​ಟೌನ್ ತಂಡವು 20 ಓವರ್​​ಗಳಲ್ಲಿ 234 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಜೋಬರ್ಗ್​ ಸೂಪರ್​ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 198 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಎಂಐ ಕೇಪ್​ಟೌನ್ ತಂಡವು 36 ರನ್​ಗಳ ಜಯ ಸಾಧಿಸಿದೆ.

ಇನ್ನು ಈ ಪಂದ್ಯದಲ್ಲಿ ಸೆಂಚುರಿ ಸಿಡಿಸುವ ಮೂಲಕ ರಯಾನ್ ರಿಕೆಲ್ಟನ್ ಸೌತ್ ಆಫ್ರಿಕಾ ಟಿ20 ಲೀಗ್​ನ ಸೀಸನ್​ವೊಂದರಲ್ಲಿ 2 ಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಡರ್ಬನ್ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 113 ರನ್​ಗಳ ಇನಿಂಗ್ಸ್ ಆಡಿದ್ದರು. ಈ ಮೂಲಕ ರಯಾನ್ ರಿಕೆಲ್ಟನ್ ಸೌತ್ ಆಫ್ರಿಕಾ ಟಿ20 ಲೀಗ್​ ಸೀಸನ್​ವೊಂದರಲ್ಲಿ 2 ಶತಕ ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Source link

ನರಿಂಗಾನ ಕಂಬಳ: ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ – Kannada News | DyCM D.K. Shivakumar Attends Naringana Kambala in Ullal, Mangaluru

ಮಂಗಳೂರು, ಜನವರಿ 11: ಉಳ್ಳಾಲ ತಾಲೂಕಿನ ನರಿಂಗಾನದಲ್ಲಿ ಆಯೋಜಿಸಲಾಗಿದ್ದ ಲವ-ಕುಶ ಜೋಡುಕರೆ ಕಂಬಳದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿದ್ದರು. ಕೋಣಗಳ ಓಟಕ್ಕೆ ಡಿಕೆಶಿ ಫಿದಾ ಆಗಿದ್ದು, ಸ್ಪೀಕರ್ ಯು.ಟಿ. ಖಾದರ್ ಅವರ ನಾಯಕತ್ವದಲ್ಲಿ ಕಂಬಳ ಆಯೋಜಿಸಲಾಗಿತ್ತು. ಇದೇ ವೇಳೆ ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಮತ್ತು ಅದನ್ನು ಭಾರತದ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಡಿಸಿಎಂ ಬಳಿ ಬೇಡಿಕೆ ಇಡಲಾಯಿತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಮೈಕೊರೆಯುವ ಚಳಿ, ತುಂತುರು ಮಳೆ! ರಾಜ್ಯದ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ – Kannada News | Bengaluru temperature: Temperature drop in Bengaluru, Yellow alert for 4 district of karnataka

ರಾಜ್ಯದ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರು, ಜನವರಿ 11: ರಾಜ್ಯದಲ್ಲಿ ನಿನ್ನೆಯಿಂದ ಚಳಿಯ ಪ್ರಮಾಣ ಹೆಚ್ಚಾಗಿದ್ದು, ನಿನ್ನೆ ಹಲವು ಜಿಲ್ಲೆಗಳಿಗೆ ಅಲರ್ಟ್​ ನೀಡಲಾಗಿತ್ತು. ಇಂದೂ ಸಹ ತಾಪಮಾನದಲ್ಲಿ (Weather Forecast) ಸುಧಾರಣೆಯಾಗದ ಕಾರಣ ಹಲವೆಡೆ ಮಂಜು ಹಾಗೂ ಒಣ ಹವೆಯ ವಾತಾವರಣ ಜನಜೀವನದ ಮೇಲೆ ಪ್ರಭಾವ ಬೀರುತ್ತಿದೆ. ಪರಿಣಾಮವಾಗಿ ಹವಾಮಾನ ಇಲಾಖೆ ರಾಜ್ಯದ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ. ಭಾರಿ ಚಳಿಗೆ ಬೆಂಗಳೂರು ನಡುಗಿದ್ದು, ರಾಜಧಾನಿಯಲ್ಲಿ ಮೈಕೊರೆಯುವ ಚಳಿಯ ಅಬ್ಬರ ಮುಂದುವರಿದಿದೆ.

ಚಳಿಗೆ ಬೆಂಗಳೂರಿಗರು ಗಡಗಡ

ಬೆಂಗಳೂರಿನಲ್ಲಿ ಚಳಿಯೊಂದಿಗೆ ತುಂತುರು ಮಳೆಯೂ ಸುರಿಯುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ತೀವ್ರ ಶೀತ ವಾತಾವರಣ ಕಂಡುಬಂದಿದೆ. ಕಳೆದ ಎರಡು ದಿನಗಳಿಂದ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ 14 ಡಿಗ್ರಿಗೆ ಇಳಿಕೆಯಾಗಿದೆ. ಹಗಲಿನ ವೇಳೆಯಲ್ಲಿಯೂ ತಾಪಮಾನ ಕುಸಿತ ಕಂಡುಬಂದಿದ್ದು, ಸದಾ ಮೋಡ ಮುಸಕಿದ ವಾತಾವರಣ ನೆಲೆಸಿದೆ. ಮೈಕೊರೆಯುವ ಚಳಿಯಿಂದ ಉದ್ಯೋಗಿಗಳು ಕೆಲಸಕ್ಕೆ ತೆರಳುವಾಗ ಹಾಗೂ ಲಾಲ್‌ಬಾಗ್‌ನಲ್ಲಿ ವಾಕಿಂಗ್‌ಗೆ ಬರುವವರು ಟೋಪಿ, ಮಫ್ಲರ್ ಧರಿಸಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಹಗುರ ಮಳೆಯಾಗುವ ಸಾಧ್ಯತೆ ಇದ್ದು, ಜನವರಿ 14ರವರೆಗೂ ಕೆಲವು ಜಿಲ್ಲೆಗಳಲ್ಲಿ ಮಂಜಿನ ವಾತಾವರಣ ಮತ್ತು ಶೀತಗಾಳಿ ಬೀಸುವ ಸಾಧ್ಯತೆ ಇದೆ.

ಎಲ್ಲೆಲ್ಲಿ ಒಣಹವೆ?

ರಾಜ್ಯದಲ್ಲಿ ಅತಿಯಾದ ಶೀತದಲೆಯ ಕಾರಣದಿಂದಾಗಿ ಬೀದರ್, ಕಲಬುರಗಿ, ಧಾರವಾಡ ಹಾಗೂ ವಿಜಯಪುರ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​ ಸೂಚಿಸಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:22 am, Sun, 11 January 26

Source link

ಗಲಾಟೆ ಬೆನ್ನಲ್ಲೇ ಬಳ್ಳಾರಿಯಲ್ಲಿ ಬ್ಯಾನರ್​​ ಹಾವಳಿಗೆ ಬ್ರೇಕ್​: ಗಣಿದಣಿ ಬರ್ತ್​​ಡೇಗೂ ಇಲ್ಲ ಹೋಲ್ಡಿಂಗ್ಸ್! – Kannada News | District Administration Orders Mandatory Local Body Permission for Banners and Hoardings in Ballari

ಬಳ್ಳಾರಿ, ಜನವರಿ 11: ಬ್ಯಾನರ್​​ ವಿಚಾರಕ್ಕೆ ಶಾಸಕರಾದ ಜನಾರ್ದನ ರೆಡ್ಡಿ ಮತ್ತು ಭರತ್​​ ರೆಡ್ಡಿ ಬೆಂಬಲಿಗರ ನಡುವೆ ಮಾರಾಮಾರಿ ವೇಳೆ ಓರ್ವ ಕಾಂಗ್ರೆಸ್​​ ಕಾರ್ಯಕರ್ತ ಮೃತಟಪಟ್ಟ ಪ್ರಕರಣ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಭಾರೀ ಸದ್ದು ಮಾಡಿದೆ. ಈ ಬೆನ್ನಲ್ಲೇ ಬಳ್ಳಾರಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಂದ್ದು, ಬ್ಯಾನರ್​​ ವಿಚಾರವಾಗಿ ಕಠಿಣ ಕ್ರಮಗಳ ಜಾರಿಗೆ ಮುಂದಾಗಿದೆ. ಬಳ್ಳಾರಿಯ ಗಲಭೆ ಬಳಿಕ ಶಾಂತಿಭಂಗ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದ್ದು, ನಗರದಲ್ಲಿ ಎಲ್ಲೆಂದರಲ್ಲಿ ಬ್ಯಾನರ್​ ಅಳವಡಿಕೆಗೆ ನಿಷೇಧ ಹೇರಲಾಗಿದೆ. ನಿಯಮ ಮೀರಿದ್ರೆ ದಂಡ ಬೀಳಲಿದೆ.

ಬಳ್ಳಾರಿ ನಗರದಲ್ಲಿ ಅನುಮತಿ ಇಲ್ಲದೆ ಬ್ಯಾನರ್, ಹೋಲ್ಡಿಂಗ್ಸ್, ಫ್ಲೆಕ್ಸ್​​​ ಅಥವಾ ಪೋಸ್ಟರ್ ಅಳವಡಿಕೆಗೆ ಜಿಲ್ಲಾಡಳಿತ ನಿಷೇಧ ವಿಧಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಇವುಗಳ ಅವಳವಡಿಕೆಗೆ ಸ್ಥಳೀಯ ಆಡಳಿತ ಸಂಸ್ಥೆಯ ಪೂರ್ವಾನುಮತಿ ಕಡ್ಡಾಯಗೊಳಿಸಲಾಗಿದೆ. ನಿಯಮ ಜಾರಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದ್ರೆ ಅಂತಹ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳೋದಾಗಿ ತಿಳಿಸಲಾಗಿದೆ. ಅನಧಿಕೃತ ಜಾಹೀರಾತು ಮತ್ತು ಬ್ಯಾನರ್​ಗಳ ಮೇಲೆ ಪೊಲೀಸ್ ಇಲಾಖೆ ಇನ್ಮುಂದೆ ನಿಗಾ ಇಡಲಿದ್ದು, ಬ್ಯಾನರ್​​ ವಿಚಾರವಾಗಿಯೇ ಗಲಾಟೆ ನಡೆದು ಜಿಲ್ಲೆ ಪ್ರಕ್ಷುಬ್ಧಗೊಂಡಿದ್ದ ಕಾರಣ ಕಠಿಣ ನಿರ್ಧಾರಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ.

ಇದನ್ನೂ ಓದಿ:  ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ; ಜ 17ರಂದು ಪ್ರತಿಭಟನೆ ಎಂದ ಜನಾರ್ದನ ರೆಡ್ಡಿ

ಜನಾರ್ದನ ರೆಡ್ಡಿ ಬರ್ತಡೇಗಿಲ್ಲ ಬ್ಯಾನರ್​!

ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಇಂದು ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಬರ್ತ್​​ ಡೇ ಸಂದರ್ಭ ಅಥವಾ ಯಾವುದೇ ಕಾರ್ಯಕ್ರಮ ಇದ್ದಾಗ ಈ ಹಿಂದೆ ಬಳ್ಳಾರಿಯಲ್ಲಿ ಬ್ಯಾನರ್​​ಗಳು ರಾರಾಜಿಸುತ್ತಿದ್ದವು. ಆದ್ರೆ ಇದೇ ಮೊದಲ ಬಾರಿಗೆ ಯಾವುದೇ ಬ್ಯಾನರ್​​ ಇಲ್ಲದೆ ಗಣಿದಣಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಾಯಕನ ಜನ್ಮ ದಿನವನ್ನು ಸರಳವಾಗಿ ಆಚರಿಸಲು ಬೆಂಬಲಿಗರು ಕೂಡ ನಿರ್ಧರಿಸಿದ್ದು, ಅದ್ಧೂರಿ ಆಚರಣೆ ಮತ್ತು ಕೇಕ್​​ ಕಟ್ಟಿಂಗ್​​ ಕೂಡ ಬೇಡ ಎಂದು ಜನಾರ್ದನ ರೆಡ್ಡಿ ಬೆಂಬಲಿಗರಿಗೆ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೇವಲ ಶುಭಾಶಯಕ್ಕೆ ಜನಾರ್ದನ ರೆಡ್ಡಿ ಬರ್ತ್​​ ಡೇ ಸೀಮಿತವಾಗಿರಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:58 am, Sun, 11 January 26

Source link

ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ! – Kannada News | Gold Treasure Found: Boy Prajwal Honoured for Returning 1KG Found Gold

ಗದಗ, ಜನವರಿ 11: ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಗಂಗವ್ವ ಬಸವರಾಜ ರಿತ್ತಿ ಎಂಬುವವರ ಮನೆ ಜಾಗದಲ್ಲಿ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಅಂದಾಜು 1 ಕೆಜಿಗೂ ಹೆಚ್ಚು ತೂಕದ ಚಿನ್ನಾಭರಣಗಳು ತುಂಬಿದ್ದ ತಂಬಿಗೆಯೊಂದು ದೊರೆತಿತ್ತು. ಅದನ್ನು ಬಾಲಕ ಪ್ರಜ್ವಲ್ ಬಸವರಾಜ್ ರಿತ್ತಿ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದು, ಆತನ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಇಲಾಖೆಯಿಂದ ಪಂಚನಾಮೆ ಕ್ರಮ ಜರುಗಿಸಿ, ದೊರೆತ ಬಂಗಾರದ ಆಭರಣಗಳನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ತಾಯಿ-ಮಗನ ಈ ಪ್ರಾಮಾಣಿಕ ಕಾರ್ಯವನ್ನು ಗುರುತಿಸಿ, ಜಿಲ್ಲಾ ಆಡಳಿತದ ವತಿಯಿಂದ ಅವರನ್ನು ಸನ್ಮಾನಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮತ್ತು ಅಬಕಾರಿ ಜಿಲ್ಲಾಧಿಕಾರಿ ಶ್ರೀ ದುರ್ಗೇಶ್ ಅವರು ಪ್ರಜ್ವಲ್‌ಗೆ ಶಾಲು ಹಾಕಿ ಗೌರವಿಸಿದ್ದು,  ವಿಷಯವನ್ನು ಸರ್ಕಾರದ ಗಮನಕ್ಕೆ ತಂದ ಗ್ರಾಮ ಪಂಚಾಯತ್ ಸದಸ್ಯೆ ರಜಿಯಾ ಬೇಗಂ ಅವರಿಗೂ ಸನ್ಮಾನ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಮಳೆ ಬರಲಿ ಹಿಮ ಬೀಳಲಿ ಶಾಲೆಗಂತೂ ಹೋಗೆ ಹೋಗ್ತೀನಿ, ವಿದ್ಯಾರ್ಥಿಯ ಭದ್ಧತೆಗೆ ಕಿರ್ಗಿಸ್ತಾನದ ಅಧ್ಯಕ್ಷ ಫಿದಾ – Kannada News | Through Ice and Silence, a Child Walks for Knowledge

ಕಿರ್ಗಿಸ್ತಾನ್, ಜನವರಿ 11: ಕಿರ್ಗಿಸ್ತಾನದ ಶಾಲಾ ವಿದ್ಯಾರ್ಥಿಯೊಬ್ಬ ಹಿಮದಲ್ಲೇ ನಡೆದುಕೊಂಡು ಶಾಲೆಗೆ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಆತನ ಎದೆಯ ಎತ್ತರದವರೆಗೆ ಹಿಮ ಬಿದ್ದಿದೆ. ಒಂದು ಚೂರೂ ಬೇಸರ ಮಾಡಿಕೊಳ್ಳದೆ ಆತ ಹಿಮದ ಮೇಲೆಯೇ ನಡೆದುಕೊಂಡು ಶಾಲೆಗೆ ಹೋಗುತ್ತಾನೆ. ಮಳೆ ಬರಲಿ, ಹಿಮ ಬೀಳಲಿ ನಾನಂತೂ ಶಾಲೆಗೆ ಹೋಗೇ ಹೋಗುತ್ತೇನೆ ಎನ್ನುವ ವಿದ್ಯಾರ್ಥಿಯ ದೃಢ ಸಂಕಲ್ಪಕ್ಕೆ ಕಿರ್ಗಿಸ್ತಾನ ಅಧ್ಯಕ್ಷರೇ ಫಿದಾ ಆಗಿದ್ದು, ಬಾಲಕನನ್ನು ಕರೆಸಿಕೊಂಡು ಆತನ ಬಳಿ ಮಾತನಾಡಿದ್ದಾರೆ. ಆತನಿಗೆ ಲ್ಯಾಪ್​ಟಾಪ್ ಹಾಗೂ ಫುಟ್ಬಾಲ್ ಹಾಗೂ ತಮ್ಮದೇ ಮೊಬೈಲ್ ಅನ್ನು ಉಡುಗೊರೆಯಾಗಿ ನೀಡಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಾರ್ಕ್, ಡೆವಿಲ್ ರೀತಿಯೇ ಬುಕ್ ಮೈ ಶೋ ರೇಟಿಂಗ್ ನಿಷೇಧಿಸಿದ ಚಿರಂಜೀವಿ ಸಿನಿಮಾ – Kannada News | Audience rating and review not allowed to Mana Shankara Vara Prasad Garu on Book My Show

ಮೆಗಾ ಸ್ಟಾರ್ ಚಿರಂಜೀವಿ ನಟನೆಯ ‘ಮನ ಶಂಕರ ವರಪ್ರಸಾದ್ ಗಾರು’ (Mana Shankara Vara Prasad Garu) ಸಿನಿಮಾ ಜನವರಿ 12ರಂದು ಬಿಡುಗಡೆ ಆಗುತ್ತಿದೆ. ಸಂಕ್ರಾಂತಿ ಪ್ರಯುಕ್ತ ಈ ಚಿತ್ರವನ್ನು ನೋಡಲು ಚಿರಂಜೀವಿ (Chiranjeevi) ಫ್ಯಾನ್ಸ್ ಕಾತರದಿಂದ ಕಾದಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಈ ಚಿತ್ರವನ್ನು ನೋಡಿ ತಮ್ಮ ಅನಿಸಿಕೆ ತಿಳಿಸಬೇಕು ಎಂಬುದು ಅಭಿಮಾನಿಗಳ ಆಸೆ. ಆದರೆ ‘ಬುಕ್ ಮೈ ಶೋ’ (Book My Show) ಮೂಲಕ ಯಾರೂ ಕೂಡ ಈ ಸಿನಿಮಾಗೆ ರೇಟಿಂಗ್ ನೀಡುವಂತಿಲ್ಲ. ವಿಮರ್ಶೆ ತಿಳಿಸುವಂತಿಲ್ಲ! ಈ ರೀತಿ ನ್ಯಾಯಾಲಯದ ಆದೇಶ ಇದೆ. ಈ ಮೊದಲು ಕನ್ನಡದ ‘ದಿ ಡೆವಿಲ್’, ‘ಮಾರ್ಕ್’, ‘45’ ಸಿನಿಮಾಗಳು ಕೂಡ ಇದೇ ಹಾದಿಯನ್ನು ಅನುಸರಿಸಿದ್ದವು.

ದರ್ಶನ್ ಅಭಿನಯದ ‘ದಿ ಡೆವಿಲ್’, ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’, ಶಿವರಾಜ್​​ಕುಮಾರ್ ಅಭಿನಯದ ‘45’ ಸಿನಿಮಾಗಳು ಬಿಡುಗಡೆ ಆಗುವಾಗ ಫ್ಯಾನ್ಸ್ ವಾರ್ ನಡೆಯುತ್ತಿತ್ತು. ಆಗ ಕೆಲವರು ಬೇಕಂತಲೇ ಈ ಸಿನಿಮಾಗಳಿಗೆ ನೆಗೆಟಿವ್ ಪ್ರಚಾರ ಮಾಡುವ ಸಾಧ್ಯತೆ ಇತ್ತು. ಅದನ್ನು ತಪ್ಪಿಸಲು ಕೋರ್ಟ್​ ಮೊರೆ ಹೋಗಲಾಗಿತ್ತು. ‘ಬುಕ್ ಮೈ ಶೋ’ ರೀತಿಯ ಪ್ಲಾಟ್​ಫಾರ್ಮ್ ಮೂಲಕ ಜನರು ವಿಮರ್ಶೆ ಅಥವಾ ರೇಟಿಂಗ್ ನೀಡುವುದನ್ನು ತಡೆಯಲಾಗಿತ್ತು.

ಚಿರಂಜೀವಿ ಅಭಿನಯದ ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾ ಸಹ ಕೋರ್ಟ್​​ ಮೊರೆ ಹೋಗಿದೆ. ಈ ಸಿನಿಮಾಗೆ ರಿವ್ಯೂ ಮತ್ತು ರೇಟಿಂಗ್ ನೀಡುವ ಆಯ್ಕೆಯನ್ನು ತೆಗೆದುಹಾಕಲಾಗಿದೆ. ಕೋರ್ಟ್ ಆದೇಶದ ಮೇರೆಗೆ ಈ ರೀತಿ ಮಾಡಲಾಗಿದೆ ಎಂದು ‘ಬುಕ್ ಮೈ ಶೋ’ ಪ್ರಕಟಿಸಿದೆ. ಸ್ಟಾರ್ ನಟರ ಸಿನಿಮಾಗಳು ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಸಿನಿಮಾಗಳ ವಿರುದ್ಧ ಅಪಪ್ರಚಾರ ಮಾಡಲು ಕೆಲವು ಕಿಡಿಗೇಡಿಗಳು ‘ಬುಕ್ ಮೈ ಶೋ’ ರೀತಿಯ ವೇದಿಕೆಗಳನ್ನು ಬಳಸಿಕೊಳ್ಳುತ್ತಾರೆ. ಅದರಿಂದಾಗಿ ಸಿನಿಮಾಗಳಿಗೆ ಹೊಡೆತ ಬೀಳುತ್ತದೆ. ಅದೇ ರೀತಿ, ಕೆಲವರು ಅತಿಯಾಗಿ ಸಿನಿಮಾವನ್ನು ಹೊಗಳುತ್ತಾರೆ. ಹಣ ಪಡೆದು ಉತ್ತಮ ರೇಟಿಂಗ್ ನೀಡಲಾಗುತ್ತದೆ. ಇದರಿಂದ ಪ್ರೇಕ್ಷಕರಿಗೆ ಮೋಸ ಆದಂತೆ ಆಗುತ್ತದೆ. ಇಂಥ ಸಮಸ್ಯೆಗಳನ್ನು ತಪ್ಪಿಸಲು ವಿಮರ್ಶೆ ಮತ್ತು ರೇಟಿಂಗ್ ನೀಡುವ ಆಯ್ಕೆಯನ್ನೇ ಚಿತ್ರತಂಡಗಳು ತೆಗೆದು ಹಾಕುತ್ತಿವೆ.

ಇದನ್ನೂ ಓದಿ: ಟಿಕೆಟ್ ದರ ಹೆಚ್ಚಿಸಲು ಪ್ರಭಾಸ್, ಚಿರಂಜೀವಿ ಸಿನಿಮಾಗಳಿಗೆ ಸಿಕ್ತು ಅವಕಾಶ

ಅನಿಲ್ ರವಿಪುಡಿ ಅವರು ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಶೈನ್ ಸ್ಕ್ರೀನ್ಸ್’ ಮತ್ತು ‘ಗೋಲ್ಡ್ ಬಾಕ್ಸ್ ಎಂಟರ್​ಟೇನ್ಮೆಂಟ್’ ಸಂಸ್ಥೆಗಳ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಚಿರಂಜೀವಿ ಜೊತೆಯಲ್ಲಿ ನಯನತಾರಾ, ದಗ್ಗುಬಾಟಿ ವೆಂಕಟೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ‘ದಿ ರಾಜಾ ಸಾಬ್’ ಸಿನಿಮಾಗೆ ‘ಮನ ಶಂಕರ ವರ ಪ್ರಸಾದ್ ಗಾರು’ ಚಿತ್ರ ಪೈಪೋಟಿ ನೀಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಮನೆ ಹೊರಗೆ ಉದ್ಯಮಿ ಮೇಲೆ ಗುಂಡಿನ ದಾಳಿ – Kannada News | Gunshots at the Gate: Fear Returns to Bihar’s Streets ,Businessman Shot Outside Home in Patna

ಪಾಟ್ನಾ, ಜನವರಿ 11: ಬಿಹಾರದ ಉದ್ಯಮಿಯೊಬ್ಬರ ಮೇಲೆ ಮನೆಯ ಹೊರಗೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಉದ್ಯಮಿ ಮನೆಯ ಮುಂದೆ ಬೈಕ್​ನಲ್ಲಿ ಬಂದು ನಿಲ್ಲುತ್ತಾರೆ. ಅಷ್ಟರೊಳಗೆ ಆತನಿಗಾಗಿ ಕಾಯುತ್ತಿದ್ದ ದುಷ್ಕರ್ಮಿಗಳು ಆತನನ್ನು ಹಿಡಿದು ಥಳಿಸಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಸ್ಥಳೀಯರು ಕೂಡಲೇ ಓಡಿ ಬಂದು ಉದ್ಯಮಿಯನ್ನು ವಿಚಾರಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version