Iran Protests: ‘ಮುಲ್ಲಾಗಳೇ ದೇಶಬಿಟ್ಟು ತೊಲಗಿ’- ಇರಾನ್ನಲ್ಲಿ ಜನಘೋಷ; ತೀವ್ರ ಪ್ರತಿಭಟನೆಯಲ್ಲಿ 7 ಬಲಿ – Kannada News | Iran sees massive protests across the country, people show anger on Mullahs
ಟೆಹರಾನ್, ಜನವರಿ 2: ಇರಾನ್ ದೇಶದಲ್ಲಿ ಸರ್ಕಾರದ ವಿರುದ್ಧ ಜನಾಕ್ರೋಶ (Iran people protest) ಹೆಚ್ಚುತ್ತಿದೆ. ಭಾನುವಾರ ಶುರುವಾದ ಪ್ರತಿಭಟನೆಗಳಲ್ಲಿ ಬಲಿಯಾದವರ ಸಂಖ್ಯೆ ಏಳು ದಾಟಿದೆ. ಆರ್ಥಿಕ ಸಂಕಷ್ಟ ಮತ್ತು ಹಣದುಬ್ಬರದಿಂದ ಜರ್ಝರಿತವಾಗಿರುವ ದೇಶದ ಈ ಹೀನಾಯ ಸ್ಥಿತಿಗೆ ಸರ್ಕಾರವನ್ನು ಹೊಣೆಯಾಗಿಸಿ, ಇರಾನ್ನಲ್ಲಿ ಜನರು ನಡೆಸುತ್ತಿರುವ ಪ್ರತಿಭಟನೆ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಹತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ. ಇರಾನ್ನ ವರ್ತಕರು, ಅಂಗಡಿ ಮಾಲೀಕರೂ ಕೂಡ ಜೊತೆಯಾಗಿದ್ಧಾರೆ. ಅನೇಕ ನಗರಗಳಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಬಂದ್…