ಕಂಬಳ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಅದೊಂದು ಘಟನೆ: ಅಷ್ಟಕ್ಕೂ ನಡೆದಿದ್ದೇನು? – Kannada News | Kambala Controversy: Bhishma of Kambala Gunapala Kadamba get Insulte in a Crowded Public Gathering

ಮಂಗಳೂರು, ಜನವರಿ 02: ತುಳುನಾಡಿನ ಜಾನಪದೀಯ ಕ್ರೀಡೆ ಕಂಬಳ (Kambala). ಕಂಬಳಕ್ಕೆ ಪ್ರೇಕ್ಷಕ ವರ್ಗ ಹೆಚ್ಚಾಗುತ್ತಿದ್ದಂತೆಯೇ ಇದೀಗ ಕಂಬಳ‌ ಸಮಿತಿ ಒಡೆದ ಮನೆಯಾಗಿದೆ. ಕಂಬಳದ ಹಿರಿಯ ಗೌರವ ಸಲಹೆಗಾರ, ಕಂಬಳದ ಭೀಷ್ಮ ಎಂದೇ ಕರೆಯಲ್ಪಡುವ ಗುಣಪಾಲ‌‌ ಕಡಂಬರಿಗೆ (Gunapal Kadamba) ತುಂಬಿದ ಸಭೆಯಲ್ಲೇ ಏಕವಚನ ಪ್ರಯೋಗ ಮಾಡಿದ್ದು, ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್‌ ಬ್ರಿಜೇಶ್ ಚೌಟ ನೇತೃತ್ವದ ಕಂಬಳದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಕಂಬಳ ವಲಯದಲ್ಲಿ‌ ಬಿರುಗಾಳಿ ಎಬ್ಬಿದೆ.

ಹೌದು, ಸಾಧನೆಗಳ ಮೂಲಕ ಸುದ್ದಿಯಾಗುತ್ತಿದ್ದ ಕಂಬಳದಲ್ಲಿ ಇದೇ ಮೊದಲ ಬಾರಿಗೆ ಭಾರೀ ಭಿನ್ನಾಭಿಪ್ರಾಯ ಸ್ಫೋಟವಾಗಿದೆ. ಕಂಬಳ ಸಮಿತಿಯ ಶೀತಲ ಸಮರ ಇದೀಗ ಬಹಿರಂಗವಾಗಿದ್ದು, ಕಂಬಳ ವಲಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ.

ನಡೆದದ್ದೇನು?

ಸಂಸದ ಕ್ಯಾಪ್ಟನ್‌ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ 9ನೇ ವರ್ಷದ ಮಂಗಳೂರು ಕಂಬಳ ಕಳೆದ ಶನಿವಾರ ಅದ್ಧೂರಿಯಿಂದ ನಡೆಯಿತು. ರಾತ್ರಿ ವೇಳೆ ರೇಸ್ ಎಂಡ್ ಪಾಯಿಂಟ್ ನಲ್ಲಿ ಗುಣಪಾಲ ಕಡಂಬ ಮೈಕ್‌‌ನಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದರು. ರೇಸ್‌ ಆರಂಭದ ಪಾಯಿಂಟ್‌ನಲ್ಲಿ ಯಶವಂತ್ ಎಂಬುವವರು ಮೈಕ್‍‌ನಲ್ಲಿ ಸ್ಪರ್ಧೆಗೆ ಕೋಣಗಳನ್ನು ಬಿಡಲು ಸೂಚಿಸುತ್ತಿದ್ದರು. ಈ ವೇಳೆ ಏಕಾಏಕಿ ಯಶವಂತ್‌ರಿಂದ ಮೈಕ್ ಕಸಿದುಕೊಂಡ ಕಂಬಳ ಸಮಿತಿ ಕಾರ್ಯಕಾರಿಣಿ ಸದಸ್ಯ ಅರುಣ್ ಶೆಟ್ಟಿ ಬಜಪೆ ಎಂಬಾತ ಗುಣಪಾಲ ಕಡಂಬರಿಗೆ ಏಕವಚನದಲ್ಲೇ ಬೈಯುವುದಕ್ಕೆ ಆರಂಭಿಸಿದರು. ಈ ವೇಳೆ ಕಡಂಬರು ಸುಮ್ಮನಿದ್ದು, ಕಂಬಳ ಸುಸೂತ್ರವಾಗಿ ನಡೆಯಲು ಅನುವು ಮಾಡಿಕೊಟ್ಟಿರು. ಆದರೆ ಅರುಣ್ ಶೆಟ್ಟಿ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಕಂಬಳಕ್ಕೆ ಮತ್ತೆ ಅಡ್ಡಿ, ಪಿಲಿಕುಳದಲ್ಲಿ ಕಂಬಳ ನಡೆಸುವುದಕ್ಕೆ ಪ್ರಾಣಿಪ್ರಿಯರ ವಿರೋಧ: ಕೋರ್ಟ್‌ಗೆ ದೂರು

ಇನ್ನು ವೈರಲ್ ವಿಡಿಯೋಗೆ ಮಾನಹಾನಿಕಾರಕ ಬರಹ ಬರೆದು ಕಂಬಳ ಸಮಿತಿ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಲ್ಲಿಗೆ ಕಡಂಬ ವಿರುದ್ಧ ಲೋಕೇಶ್ ಶೆಟ್ಟಿ ಮತ್ತು ಅರುಣ್ ಶೆಟ್ಟಿಗೆ ಇದ್ದ ತೀವ್ರ ಅಸಮಾಧಾನ ಬಯಲಾಗಿದೆ. 79ರ ಹರೆಯದ ಗುಣಪಾಲ‌‌ ಕಡಂಬ ಕಳೆದ 55 ವರ್ಷಗಳಿಂದ ಕಂಬಳಕ್ಕೆ ಸೇವೆ ಸಲ್ಲಿಸುತ್ತಿದ್ದು, ಹಿರಿಯ ಜೀವಕ್ಕೆ ಮಾಡಿದ ಅವಮಾನಕ್ಕೆ ಕಂಬಳ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಂಬಳ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಗುಣಪಾಲ ಕಡಂಬ ಅಭಿಮಾನಿಗಳು ಜಿಲ್ಲಾ ಕಂಬಳ ಸಮಿತಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಪ್ರಕರಣ ತಣಿಸಲು ಮುಂದಾಗಿದ್ದಾರೆ. ಕಂಬಳದಲ್ಲಿ ವಿವಾದಗಳು ಸಾಮಾನ್ಯವಾಗಿದ್ದು, ಈ ಬಾರಿ ಬಹಿರಂಗವಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಗುಣಪಾಲ ಕಡಂಬರಿಗೆ ಆದ ಅವಮಾನದ ಬಗ್ಗೆ ಕಂಬಳ‌ ಸಮಿತಿಯ ಹಿರಿಯರು ಕೂತು ಸಮಾಲೋಚನೆ ನಡೆಸಿ ವಿವಾದ ಬಗೆಹರಿಸುವುದಾಗಿ ಬೆಳಪು ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ತುಳುವನ್ನು 2ನೇ ಅಧಿಕೃತ ಭಾಷೆಯಾಗಿಸಲು ಗಂಭೀರ ಪ್ರಯತ್ನ; ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

ದೇವಿಪ್ರಸಾದ್ ಶೆಟ್ಟಿ ಅಧಿಕಾರಕ್ಕೆ ಬಂದ ಬಳಿಕವೇ ಕಂಬಳದಲ್ಲಿ ಗುಂಪುಗಾರಿಕೆ ಆರಂಭವಾಗಿದೆ ಅನ್ನೋದು ಕಡಂಬ ಅಭಿಮಾನಿಗಳ ಆರೋಪ. ಸಮಿತಿಯ ಅವಧಿ ಮುಕ್ತಾಯವಾದರೂ ಅಧಿಕಾರ ಬಿಟ್ಟುಕೊಡದೇ ಗುಂಪುಗಾರಿಕೆ ಮಾಡಲಾಗುತ್ತಿದೆ ಅಂತಾ ಆರೋಪಿಸಲಾಗಿದೆ. ಅದೇ ಏನೇ ಆದರೂ ಪೇಟಾದ ತೂಗುಕತ್ತಿಯ ನಡುವೆ ಕಂಬಳದೊಳಗೆಯೇ ಅಸಮಾಧಾನ ಭುಗಿಲೆದ್ದಿದ್ದು, ಹಿರಿಯರ ಸ್ವಪ್ರತಿಷ್ಠೆ ಕಂಬಳಕ್ಕೆ ಕುತ್ತು ತರದೇ ಇರಲಿ ಅನ್ನೋದು ಅಸಂಖ್ಯಾತ ಅಭಿಮಾನಿಗಳ‌ ಆಶಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಿಗರಿಗೆ ಬಿಗ್​​ ಶಾಕ್​​​​​: ಚಳಿಗಾಲದಲ್ಲಿ ಹೊರಗೆ ಹೋಗುವ ಮುನ್ನ ಎಚ್ಚರ – Kannada News | Bangalore Seasonal Flu Outbreak: Symptoms, Risks & Prevention Tips

ಬೆಂಗಳೂರು, ಜ.2: ಬೆಂಗಳೂರಿನಲ್ಲಿ ಕಾಲೋಚಿತ ಜ್ವರ (seasonal flu Bangalore) ಮತ್ತು ಇತರ ಉಸಿರಾಟದ ಕಾಯಿಲೆಗಳು ಗಮನಾರ್ಹವಾಗಿ ಹೆಚ್ಚಾಗುತ್ತಿವೆ ಎಂದು ವರದಿಯಾಗಿದೆ. ಕೆಮ್ಮು, ಜ್ವರ ಮತ್ತು ಉಸಿರಾಟಕ್ಕೆ ಸಂಬಂಧಿಸಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಗಳು ವರದಿ ಮಾಡಿದೆ. ತಾಪಮಾನದಲ್ಲಿನ ಏರಿಳಿತ, ಅದರಲ್ಲೂ ಗಾಳಿಯ ಗುಣಮಟ್ಟದಲ್ಲಿ ಬದಲಾವಣೆ, ರಾತ್ರಿ ಹೊತ್ತು ತಂಪಾದ ಗಾಳಿ, ಇದು ಸೋಂಕುಗಳು ಹರಡಲು ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸಿವೆ ಎಂದು ವೈದ್ಯರು ಹೇಳಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಹೊರ ರೋಗಿಗಳಿಗೆ ನೀಡಲಾಗುವ ಸೌಲಭ್ಯದ ಆಧಾರದಿಂದ ಕಾಲೋಚಿತ ಜ್ವರ ಪ್ರಕರಣಗಳು ಹೆಚ್ಚಾಗಿದೆ ಎಂಬ ವರದಿಯನ್ನು ನೀಡಲಾಗಿದೆ ಎಂದು ದಿ ಹಿಂದೂ ವರದಿ ತಿಳಿಸಿದೆ .

ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳು ರೋಗಿಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದೆ ಎಂಬ ವರದಿಯನ್ನು ನೀಡಿದೆ. ಇನ್ನು ಈ ಜ್ವರಕ್ಕೆ ಆಸ್ತಮಾ, ಬ್ರಾಂಕೈಟಿಸ್, (ಶ್ವಾಸಕೋಶದ ಉಸಿರಾಟದ ನಾಳಗಳು ಉರಿ) ಮಧುಮೇಹ, ಅಲರ್ಜಿಗಳು ಮತ್ತು ಹೃದ್ರೋಗದಂತಹ ಆರೋಗ್ಯ ಸಮಸ್ಯೆಗಳು ಇರುವವರೇ ತುತ್ತಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಹೆಚ್ಚಿನ ಪ್ರಮಾಣದ ಪ್ರಕರಣಗಳು 65 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಕಂಡು ಬಂದಿದೆ. ರೋಗಿಗಳಲ್ಲಿ ಸಾಮಾನ್ಯವಾಗಿ ಆರಂಭದಲ್ಲಿ ಸೌಮ್ಯ ಜ್ವರ ಪತ್ತೆ ಮಾಡಲಾಗಿದೆ. ನಂತರ ನಿರಂತರ ಕೆಮ್ಮು, ಶೀತ, ಎದೆಯ ಅಸ್ವಸ್ಥತೆ ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.

ಸೋಂಕಿತ ಮೇಲ್ಮೈ ಸಂಪರ್ಕದಿಂದ ಅಂದರೆ ಉಸಿರಾಟ ಗಾಳಿ, ಕೆಮ್ಮು, ಸ್ವರ್ಶದಿಂದ ಈ ರೋಗವು ಹರಡುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ. ಋತುಮಾನದ ಜ್ವರವು ಸಾಮಾನ್ಯವಾಗಿ ಒಂದು ವಾರದೊಳಗೆ ಪರಿಹರವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಮಕ್ಕಳು, ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಅಥವಾ ದೀರ್ಘಕಾಲದ ಕಾಯಿಲೆಗಳನ್ನು ಹೊಂದಿರುವ ಜನರು ಸೇರಿದಂತೆ ಇತರ ರೋಗಿಗಳು ಇದರಿಂದ ಹೆಚ್ಚಿನ ಅಪಾಯಗಳನ್ನು ಅನುಭವಿಸಬಹುದು.

ಇದನ್ನೂ ಓದಿ: ಈ ಅಭ್ಯಾಸಗಳಿರುವವರು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಹೆಚ್ಚು; ಈ ಬಗ್ಗೆ ಜಾಗೃತೆ ವಹಿಸಬೇಕು ಎನ್ನುತ್ತಾರೆ ಡಾ. ಸಂತೋಷ್

ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ ಅಥವಾ ವೈದ್ಯಕೀಯ ಚಿಕಿತ್ಸೆ ಪಡೆಯುವುದನ್ನು ವಿಳಂಬ ಮಾಡಬೇಡಿ ಎಂದು ವೈದ್ಯರು ಹೇಳಿದ್ದಾರೆ. ಇದನ್ನು ತಡೆಯಲು ಸರ್ಕಾರ ಈಗಾಗಲೇ ಕೆಲವೊಂದು ಶಿಬಿರಗಳು ನಡೆಸುತ್ತಿದೆ. ಇದಕ್ಕಾಗಿ ವೈದ್ಯಕೀಯ ಸೌಲಭ್ಯಗಳು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದೆ. ಚಳಿಗಾಲದ ತಿಂಗಳುಗಳಲ್ಲಿ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ನಡೆಸುವಂತೆ ಜಿಲ್ಲಾ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಇದರ ಬಗ್ಗೆ ಖಾಸಗಿ ಆಸ್ಪತ್ರೆಗಳು ಸಹ ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:36 pm, Fri, 2 January 26

Source link

ಟೀಂ ಇಂಡಿಯಾ ಆಟಗಾರನಿಗೆ ಮೂಳೆ ಮುರಿತ; ದೀರ್ಘಕಾಲ ಕ್ರಿಕೆಟ್‌ನಿಂದ ದೂರ – Kannada News | Sai Sudharsan Injury Update: Star Batter Out 6 Weeks, Misses Vijay Hazare

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಇನ್ನೇರಡು ದಿನಗಳ ಒಳಗೆ ಪ್ರಕಟಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೂ ಮುನ್ನ ತಂಡದ ಯುವ ಆಟಗಾರ ಸಾಯಿ ಸುದರ್ಶನ್ ಗಂಭೀರ ಗಾಯಕ್ಕೆ ತುತ್ತಾಗಿದ್ದು, ಕೆಲವು ವಾರಗಳ ವರೆಗೆ ಕ್ರಿಕೆಟ್​ನಿಂದ ದೂರ ಉಳಿಯಲಿದ್ದಾರೆ ಎಂದು ವರದಿಯಾಗಿದೆ.

Source link

‘ಧರ್ಮಸ್ಥಳ ನಿಯೋಜಿಕವರ್ಗ್’ ಸಿನಿಮಾ ಫಸ್ಟ್ ಲುಕ್ ರಿಲೀಸ್: ಏನು ಈ ಚಿತ್ರದ ಕಥೆ? – Kannada News | Suman Sai Kumar starrer Dharmasthala Niyogikavarg Kannada movie first look poster released

ಟೈಟಲ್ ಮೂಲಕ ‘ಧರ್ಮಸ್ಥಳ ನಿಯೋಜಿಕವರ್ಗ್’ (Dharmasthala Niyogikavarg) ಸಿನಿಮಾ ಗಮನ ಸೆಳೆಯುತ್ತಿದೆ. ಹೊಸ ವರ್ಷದ ಪ್ರಯುಕ್ತ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ‘ಮೂವಿಂಗ್ ಡ್ರೀಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಮೂಲಕ ಮೇರುಂ ಭಾಸ್ಕರ್ ಅವರು ‘ಧರ್ಮಸ್ಥಳ ನಿಯೋಜಿಕವರ್ಗ್’ ಸಿನಿಮಾವನ್ನು ನಿರ್ಮಿಸಿದ್ದಾರೆ. ಜೈ ಜ್ಞಾನ ಪ್ರಭಾ ತೋಟ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸುಮನ್, ಸಾಯಿ ಕುಮಾರ್ (Sai Kumar) ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಹಿರಿಯ ಕಲಾವಿದರಾದ ಸುಮನ್ ಹಾಗೂ ಸಾಯಿ ಕುಮಾರ್ ಅವರ ಜೊತೆ ಈ ಚಿತ್ರದಲ್ಲಿ ನಟರಾಜ್, ವಿತಿಕಾ ಶೇರು, ವರುಣ್ ಸಂದೇಶ್ ಅವರು ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ಧರ್ಮಸ್ಥಳ ನಿಯೋಜಿಕವರ್ಗ್’ ಸಿನಿಮಾದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ ಎಂದು ಚಿತ್ರತಂಡ ಹೇಳಿದೆ.

ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ‘ಧರ್ಮಸ್ಥಳ ನಿಯೋಜಿಕವರ್ಗ್’ ಸಿನಿಮಾ ತಂಡವು ಪ್ರೇಕ್ಷಕರಿಗೆ ಹೊಸ ವರ್ಷದ ಶುಭಾಶಯ ಕೋರಿದೆ. ಈ ವೇಳೆ ನಿರ್ದೇಶಕ ಜೈ ಜ್ಞಾನ ಪ್ರಭಾ ತೋಟ ಅವರು ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ಈ ಸಿನಿಮಾದಲ್ಲಿ ರಾಜಕೀಯ ಹಿನ್ನೆಲೆಯ ಕಥಾಹಂದರ ಇರಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

‘ನಮ್ಮ ಸಿನಿಮಾ ವಿಭಿನ್ನ ಶೈಲಿಯ ರಾಜಕೀಯ ಹಾಗೂ ಎಮೋಷನಲ್ ಎಂಟರ್ಟೈನರ್ ಆಗಿದೆ. ಹಿರಿಯ ನಟರಾದ ಸಾಯಿ ಕುಮಾರ್ ಹಾಗೂ ಸುಮನ್ ಅವರ ಜೊತೆಗೆ ಯುವ ನಟರು ಸಹ ಚೆನ್ನಾಗಿ ಅಭಿನಯಿಸಿದ್ದಾರೆ. ಚಿತ್ರಕಥೆಯಲ್ಲಿ ಆರಂಭದಿಂದ ಅಂತ್ಯದವರೆಗೆ ಕುತೂಹಲಕಾರಿಯಾದ ತಿರುವುಗಳು ಇರಲಿವೆ. ಖ್ಯಾತ ಸಾಹಿತಿ ಚಂದ್ರಬೋಸ್ ಬರೆದ ಸಾಹಿತ್ಯಕ್ಕೆ ಗಾಯಕಿ ಸುನೀತಾ ಧ್ವನಿಯಾಗಿದ್ದಾರೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್: ಸನ್ಮಾನ ಮಾಡಿದ ಶಿವಣ್ಣ

ಸಾಯಿ ಕುಮಾರ್, ಸುಮನ್, ನಟರಾಜ್, ವರುಣ್ ಸಂದೇಶ್, ವಿತಿಕಾ ಶೇರು ಮಾತ್ರವಲ್ಲದೇ ಕಾಲಕೇಯ ಪ್ರಭಾಕರ್, ರಾಜಾ ರವೀಂದ್ರ, ಪೃಥ್ವಿ, ರಾಜೀವ್ ಕನಕಾಲ, ಶಿವ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ವೆಂಕಟ ಹನುಮ ಅವರು ಛಾಯಾಗ್ರಹಣ ಮಾಡಿದ್ದಾರೆ. ನಂದು ಮಾಸ್ಟರ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಸೃಷ್ಟಿ ವರ್ಮಾ ಅವರ ನೃತ್ಯ ನಿರ್ದೇಶನ, ಅಸ್ಲಂ ಅವರ ಸಂಭಾಷಣೆ, ಸಾಯಿ ಬಾಬು ತಲಾರಿ ಅವರ ಸಂಕಲನ, ಭಾರ್ಗವಾಚಾರಿ ನೌಂಡ್ಲಾಸ್ ಅವರ ಕಲಾ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಗಲಿನಲ್ಲಿ ಮಲಗುವ ಅಭ್ಯಾಸ ನಿಮಗಿದ್ಯಾ? ಈ ಸಮಯಕ್ಕಿಂತ ಹೆಚ್ಚು ಮಲಗಿದ್ರೆ ಮಧುಮೇಹ ಬರಬಹುದು ಎಚ್ಚರ! – Kannada News | Diabetes Prevention: The Impact of Daytime Napping

ಇಂದಿನ ವೇಗದ ಜೀವನದಲ್ಲಿ, ಹಗಲಿನಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಲು ನಿದ್ರೆ ಮಾಡುವುದು ಸಾಮಾನ್ಯ. ಆದರೆ ಅನೇಕರು ಗಂಟೆಗಟ್ಟಲೆ ಮಲಗುತ್ತಾರೆ. ಆದರೆ ಆರೋಗ್ಯ ತಜ್ಞರು ಈ ಅಭ್ಯಾಸ ಕೆಲವೊಮ್ಮೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹದು ಎನ್ನುತ್ತಾರೆ. ಇದಕ್ಕೆ ಪೂರಕವೆಂಬಂತೆ ನಡೆದ ಒಂದು ಸಂಶೋಧನೆ ಹಗಲಿನಲ್ಲಿ ನಿದ್ರೆ ಮಾಡುವಂತಹ ಅಭ್ಯಾಸ ಅದರಲ್ಲಿಯೂ ದಿನಕ್ಕೆ 30 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿದ್ರೆ (Sleeping) ಮಾಡುವುದರಿಂದ ಎಷ್ಟೆಲ್ಲಾ ಸಮಸ್ಯೆಗಳಾಗುತ್ತದೆ, ಈ ರೀತಿ ಅಭ್ಯಾಸದಿಂದ ಮಧುಮೇಹದ (Diabetes) ಅಪಾಯ ಹೆಚ್ಚಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಹಾಗಾದರೆ ಹಗಲಿನಲ್ಲಿ ಮಲಗುವುದರಿಂದ ನಿಜವಾಗಿಯೂ ಡಯಾಬಿಟಿಸ್ ಬರುತ್ತದೆಯೇ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಗಲಿನಲ್ಲಿ 30 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿದ್ರೆ ಮಾಡುವುದರಿಂದ ಮಧುಮೇಹ ಬರುತ್ತದೆಯೇ?

ಈ ಸಂಶೋಧನೆ ಒಟ್ಟು 40 ವಿಭಿನ್ನ ಅಧ್ಯಯನಗಳನ್ನು ಒಳಗೊಂಡಿದ್ದು, ಇದರಲ್ಲಿ ಸಾವಿರಾರು ಜನರಿಂದ ಪಡೆದ ದತ್ತಾಂಶಗಳಿವೆ. ದತ್ತಾಂಶ ಸಂಗ್ರಹಣೆಯ ಸಮಯದಲ್ಲಿ, ಭಾಗವಹಿಸುವವರು ಹಗಲಿನಲ್ಲಿ ನಿದ್ರೆ ಮಾಡುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಮತ್ತು ಅವರು ನಿದ್ರೆ ಮಾಡಿದರೆ, ಎಷ್ಟು ಸಮಯದವರೆಗೆ ಎಂಬುದನ್ನು ಗಮನಿಸಲಾಗಿದೆ. ನಂತರ ಈ ಮಾಹಿತಿಯನ್ನು ಅವರ ಮಧುಮೇಹ ಸ್ಥಿತಿ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣದೊಂದಿಗೆ ಹೋಲಿಸಲಾಗಿದೆ. ಈ ಮೂಲಕ 30 ನಿಮಿಷಗಳಿಗಿಂತ ಹೆಚ್ಚು ಕಾಲ, ಅದರಲ್ಲಿಯೂ 1 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ನಿದ್ರೆ ಮಾಡುವವರಲ್ಲಿ ಮಧುಮೇಹ ಬರುವ ಅಪಾಯ ಹೆಚ್ಚು ಎಂದು ಬಹಿರಂಗಪಡಿಸಿದೆ.

ಇದನ್ನೂ ಓದಿ: ಮಧುಮೇಹ ರೋಗಿಗಳು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆಯೇ? ನೀವು ತಿಳಿಯಲೇಬೇಕಾದ ಮಾಹಿತಿ ಇದು

ಸಾಮಾನ್ಯವಾಗಿ ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ರೆ ಮಾಡುವುದರಿಂದ ದೇಹದ ನೈಸರ್ಗಿಕ ಗಡಿಯಾರಕ್ಕೆ ಅಡ್ಡಿಯಾಗುತ್ತದೆ. ಇದು ಇನ್ಸುಲಿನ್ ಸರಿಯಾಗಿ ಕಾರ್ಯನಿರ್ವಹಿಸುವುದನ್ನು ತಡೆಯುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಅಷ್ಟು ಮಾತ್ರವಲ್ಲ, ಹಗಲಿನ ನಿದ್ರೆ ರಾತ್ರಿಯ ನಿದ್ರೆಯನ್ನು ಕೆಡಿಸುತ್ತದೆ ಇದರಿಂದ ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ದೀರ್ಘಕಾಲದವರೆಗೆ ನಿದ್ರೆ ಮಾಡುವುದು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಇದು ಸಂಭಾವ್ಯ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ತೂಕ ಹೆಚ್ಚಾಗುವುದು ಮಧುಮೇಹಕ್ಕೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಹಗಲಿನಲ್ಲಿ ನಿದ್ರೆ ಮಾಡುವುದು ತಪ್ಪಲ್ಲ, ಆದರೆ ಸಮಯದ ಬಗ್ಗೆ ಗಮನ ಕೊಡಬೇಕು. ನೀವು ನಿದ್ರೆ ಮಾಡುವುದೇ ಆದಲ್ಲಿ, ಅದನ್ನು 20 ರಿಂದ 30 ನಿಮಿಷಗಳಿಗೆ ಮಿತಿಗೊಳಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Job Skiils: 2026 ರಲ್ಲಿ ನಿಮ್ಮ ಕನಸಿನ ಕೆಲಸ ಪಡೆಯಲು, ಈ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಿ! – Kannada News | Career Growth Skills: Essential for Government Jobs and Professional Success

ಅನೇಕರಿಗೆ ಸರ್ಕಾರಿ ಕೆಲಸ ಮಾಡುವುದು ಜೀವಮಾನದ ಕನಸಾಗಿರುತ್ತದೆ. ಆದರೆ ಕೆಲವರು ಮಾತ್ರ ಈ ಕನಸನ್ನು ನನಸಾಗಿಸುತ್ತಾರೆ. ಅದಕ್ಕೆ ಹಲವು ಕಾರಣಗಳಿವೆ. ವಿಶೇಷವಾಗಿ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಉದ್ಯೋಗ ಪಡೆಯಲು, ಕೇವಲ ಪದವಿ ಇದ್ದರೆ ಸಾಲದು. ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ನೀವು ಕಾಲಕಾಲಕ್ಕೆ ನವೀಕರಿಸಿಕೊಳ್ಳಬೇಕು. ತಂತ್ರಜ್ಞಾನದ ಜೊತೆಗೆ, ನೀವು ವೈಯಕ್ತಿಕ ಕೌಶಲ್ಯಗಳನ್ನು, ಅಂದರೆ ಮೃದು ಕೌಶಲ್ಯಗಳನ್ನು ಸಹ ಬೆಳೆಸಿಕೊಳ್ಳಬೇಕು. ಈ ವರ್ಷ ತಮ್ಮ ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಮಾಡಲು ಬಯಸುವವರು ಈ ಕೆಳಗಿನ ಕೌಶಲ್ಯಗಳೊಂದಿಗೆ ನಿಮ್ಮ ಸುವರ್ಣ ಭವಿಷ್ಯಕ್ಕೆ ದಾರಿ ಮಾಡಿಕೊಡಬಹುದು.

ನಿರಂತರ ಕಲಿಕೆ:

ಕಲಿಕೆ ಕೇವಲ ಅಧ್ಯಯನ ಮಾಡುವುದರೊಂದಿಗೆ ನಿಲ್ಲಬಾರದು. ವಾಸ್ತವವಾಗಿ, ಇದು ಜೀವಮಾನದ ಪ್ರಕ್ರಿಯೆ. ಆದಾಗ್ಯೂ, ಉದ್ಯೋಗ ಪಡೆಯಲು ದೃಢನಿಶ್ಚಯ ಹೊಂದಿರುವವರಿಗೆ, ಈ ಗುಣವು ಸ್ವಲ್ಪ ಹೆಚ್ಚಾಗಿರಬೇಕು. ಏಕೆಂದರೆ ಬದಲಾಗುತ್ತಿರುವ ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯಗಳನ್ನು ಕಾಲಕಾಲಕ್ಕೆ ನಿರಂತರವಾಗಿ ಅಭಿವೃದ್ಧಿಪಡಿಸಬೇಕು. ಪ್ರಸ್ತುತ, ಕೃತಕ ಬುದ್ಧಿಮತ್ತೆ ಮತ್ತು ಡೇಟಾ ವಿಶ್ಲೇಷಣೆಯಂತಹ ತಂತ್ರಜ್ಞಾನಗಳು ಪ್ರಪಂಚದಾದ್ಯಂತ ವೇಗವಾಗಿ ವಿಸ್ತರಿಸುತ್ತಿವೆ. ಈ ಕ್ರಮದಲ್ಲಿ, ಮಾರುಕಟ್ಟೆ ಪ್ರವೃತ್ತಿಗಳಿಗೆ ಅನುಗುಣವಾಗಿ ಕೌಶಲ್ಯಗಳನ್ನು ನವೀಕರಿಸುವ ಮೂಲಕ ಮತ್ತು ಹೊಸ ವಿಷಯಗಳನ್ನು ಕಲಿಯುವ ಮೂಲಕ, ಒಬ್ಬರು ತಮ್ಮ ವೃತ್ತಿಜೀವನದಲ್ಲಿ ಬೆಳೆಯಬಹುದು.

ಹೊಸ ವಿಷಯಗಳ ಮೇಲೆ ಆಸಕ್ತಿ

ಬದಲಾಗುತ್ತಿರುವ ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿ ಹೊಸ ಆಲೋಚನೆಗಳೊಂದಿಗೆ ಬರುವವರಿಗೆ ಕಂಪನಿಗಳು ಆದ್ಯತೆ ನೀಡುತ್ತಿವೆ. ಸಂದರ್ಶನಗಳಲ್ಲಿ ನಿಮ್ಮ ಸೃಜನಶೀಲತೆ ಮತ್ತು ಹೊಸ ವಿಷಯಗಳ ಮೇಲಿನ ಆಸಕ್ತಿಯನ್ನು ಉದಾಹರಣೆಗಳೊಂದಿಗೆ ವಿವರಿಸುವುದನ್ನು ನೀವು ಅಭ್ಯಾಸ ಮಾಡಿಕೊಳ್ಳಬೇಕು.

ಉನ್ನತ ಗುರಿಗಳತ್ತ ಪರಿಶ್ರಮ:

ಬೆಳೆಯಬೇಕೆಂಬ ಆಸೆ ಇದ್ದರೆ ಸಾಲದು, ಅದಕ್ಕಾಗಿ ಶ್ರಮಿಸಬೇಕು. ಪರಿಶ್ರಮದಿಂದ ಶ್ರಮಿಸಬೇಕು. ಸಣ್ಣ ಸಣ್ಣ ಗುರಿಗಳನ್ನು ಸಾಧಿಸುವ ಮೂಲಕ ಗುರಿಯತ್ತ ಮುನ್ನಡೆಯಬೇಕು. ಅದಕ್ಕಾಗಿ ತಾಳ್ಮೆ, ಪರಿಶ್ರಮ, ಅವಕಾಶಗಳನ್ನು ಬಳಸಿಕೊಳ್ಳುವ ಸಾಮರ್ಥ್ಯ ಬಹಳ ಮುಖ್ಯ. ಈ ಗುಣಗಳು ನಿಮ್ಮನ್ನು ಇತರರಿಗಿಂತ ಮುಂದೆ ಕೊಂಡೊಯ್ಯುತ್ತವೆ.

ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪೈಲಟ್‌ ಸಂಬಳ ಎಷ್ಟು? ಆಯ್ಕೆ ಪ್ರಕ್ರಿಯೆ ಮತ್ತು ಜವಾಬ್ದಾರಿ ತಿಳಿಯಿರಿ

ವಿಶ್ಲೇಷಣಾತ್ಮಕ ಚಿಂತನೆ:

ಯಾವುದೇ ಸಮಸ್ಯೆಯನ್ನು ಕೇವಲ ಒಂದು ದೃಷ್ಟಿಕೋನದಿಂದ ಅಲ್ಲ, ವಿಭಿನ್ನ ಕೋನಗಳಿಂದ ಯೋಚಿಸಲು ನೀವು ಒಗ್ಗಿಕೊಳ್ಳಬೇಕು. ಇತರರ ಅಭಿಪ್ರಾಯಗಳನ್ನು ಸಹ ನೀವು ಪರಿಗಣಿಸಬೇಕು. ಇದು ಸರಿಯಾದ ಪರಿಹಾರಗಳನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುತ್ತದೆ. ಹಠಮಾರಿ ವರ್ತನೆ ಸೂಕ್ತವಲ್ಲ. ಆದಾಗ್ಯೂ, ನೀವು ಏನನ್ನಾದರೂ ಸಾಧಿಸುವವರೆಗೆ ಬಿಟ್ಟುಕೊಡದಿರುವ ಅಭ್ಯಾಸವು ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.

ನಾಯಕತ್ವದ ಗುಣಗಳು:

ಪ್ರತಿಯೊಬ್ಬರೂ ತಮ್ಮ ಕೆಲಸದ ಭಾಗವಾಗಿ ನಾಲ್ಕು ಜನರೊಂದಿಗೆ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿರಬೇಕು. ಯಾರಾದರೂ ನಿಮ್ಮ ಅಭಿಪ್ರಾಯಗಳನ್ನು ವಿರೋಧಿಸಿದಾಗ ಕೋಪಗೊಳ್ಳಬೇಡಿ. ನೀವು ಎಲ್ಲರನ್ನೂ ಒಳಗೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ನೀವು ಪರಿಣಾಮಕಾರಿ ತಂಡದ ನಾಯಕರಾಗಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ, ನೀವು ಕೆಲಸದ ಗುರಿಗಳನ್ನು ಸಾಧಿಸುವಾಗ ತಾಂತ್ರಿಕ ಕೌಶಲ್ಯಗಳ ಜೊತೆಗೆ ಮೃದು ಕೌಶಲ್ಯಗಳನ್ನು ಬೆಳೆಸಿಕೊಂಡರೆ, ನೀವು ಯಾವುದೇ ಕ್ಷೇತ್ರದಲ್ಲಿ ಸುಲಭವಾಗಿ ಉತ್ತಮ ಸಾಧನೆ ಮಾಡಬಹುದು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇವರನ್ನು ನಂಬದ ಜಾವೇದ್ ಅಖ್ತರ್ ಈಗ ನಮಾಜ್ ಶುರು ಮಾಡಿದ್ರಾ? ಕೇಸ್ ಹಾಕುವುದಾಗಿ ಎಚ್ಚರಿಕೆ – Kannada News | Javed Akhtar reaction on AI video claiming he turned to God

ಹಿರಿಯ ಚಿತ್ರಕಥೆಗಾರ, ಸಾಹಿತಿ ಜಾವೇದ್ ಅಖ್ತರ್ ಅವರು ಓರ್ವ ನಾಸ್ತಿಕ (Atheist) ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅಂದರೆ, ಜಾವೇದ್ ಅಖ್ತರ್ ಅವರು ದೇವರ ಮೇಲೆ ನಂಬಿಕೆ ಹೊಂದಿಲ್ಲ. ದೇವರ ಅಸ್ತಿತ್ವವನ್ನು ಅವರು ಒಪ್ಪುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅವರು ಈಗಾಗಲೇ ಅನೇಕ ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ಆದರೆ ಈಗ ಅವರು ತಮ್ಮ ಅಭಿಪ್ರಾಯ ಬದಲಾಯಿಸಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿದೆ. ಟೋಪಿ ಧರಿಸಿ ನಮಾಜ್ ಕೂಡ ಮಾಡಲು ಆರಂಭಿಸಿದ್ದಾರೆ ಎಂದು ಅಂತೆ-ಕಂತೆ ಹಬ್ಬಿಸಲಾಗಿದೆ. ಅದರ ವಿರುದ್ಧ ಜಾವೇದ್ ಅಖ್ತರ್ (Javed Akhtar) ಗರಂ ಆಗಿದ್ದಾರೆ.

ಎಕ್ಸ್ (ಟ್ವಿಟರ್) ಖಾತೆಯಲ್ಲಿ ಜಾವೇದ್ ಅಖ್ತರ್ ಅವರು ಒಂದು ವಿಡಿಯೋ ಲಿಂಕ್ ಹಂಚಿಕೊಂಡಿದ್ದಾರೆ. ತಲೆಗೆ ಮುಸ್ಲಿಂ ಟೋಪಿ ಹಾಕಿಕೊಂಡಿರುವ ಚಿತ್ರ ಇದರಲ್ಲಿ ಇದೆ. ‘ಜಾವೇದ್ ಅಖ್ತರ್ ಅವರು ಪೂರ್ತಿಯಾಗಿ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದಾರೆ. ಅಲ್ಲಾ ಇರುವುದನ್ನು ಒಪ್ಪಿಕೊಂಡು, ತಲೆ ಮೇಲೆ ಟೋಪಿ ಹಾಕಿಕೊಂಡು, ನಮಾಜ್ ಮಾಡಲು ಮಸೀದಿಗೆ ಹೋಗಿದ್ದಾರೆ. ಅವರೀಗ ಪಕ್ಕಾ ಮುಸಲ್ಮಾನ ಆಗಿದ್ದಾರೆ’ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.

ಈ ವದಂತಿಯ ವಿರುದ್ಧ ಜಾವೇದ್ ಅಖ್ತರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಥ ಎಐ ಫೋಟೋ ಮತ್ತು ಸುಳ್ಳು ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ. ವಿಡಿಯೋ ಫಾರ್ವರ್ಡ್ ಮಾಡಿದವರಿಗೂ ಕಾನೂನಿನ ಮೂಲಕ ಪಾಠ ಕಲಿಸುವುದಾಗಿ ಜಾವೇದ್ ಅಖ್ತರ್ ಅವರು ಎಚ್ಚರಿಕೆ ನೀಡಿದ್ದಾರೆ.

‘ನಾನು ಟೋಪಿ ಧರಿಸಿರುವ ನಕಲಿ ಫೋಟೋವನ್ನು ವೈರಲ್ ಮಾಡಲಾಗುತ್ತಿದೆ. ದೇವರನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ಸುದ್ದಿ ಹಬ್ಬಿಸಲಾಗಿದೆ. ಇದೆಲ್ಲ ಸುಳ್ಳು. ಸೈಬರ್ ಪೊಲೀಸರಿಗೆ ದೂರು ನೀಡಲು ತೀರ್ಮಾನಿಸುತ್ತಿದ್ದೇನೆ. ಈ ಸುಳ್ಳು ಸುದ್ದಿಗೆ ಕಾರಣ ಆದ ವ್ಯಕ್ತಿಯನ್ನು ಹಿಡಿಯುತ್ತೇವೆ. ಇದರಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗಿದೆ’ ಎಂದು ಜಾವೇದ್ ಅಖ್ತರ್ ಅವರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಮೊಬೈಲ್‌ ನಾಸ್ತಿಕರ ಆವಿಷ್ಕಾರ ಅದನ್ನು ಬಳಸಂಗಿಲ್ಲ, ವಿದ್ಯಾರ್ಥಿಗಳ ಫೋನ್‌ ಪುಡಿ ಪುಡಿ ಮಾಡಿದ ಮದರಸ ಗುರು

ಕೆಲವೇ ದಿನಗಳ ಹಿಂದೆ ‘ದೇವರು ಇದ್ದಾನಾ’ ಎಂಬ ವಿಷಯದ ಮೇಲೆ ಜಾವೇದ್ ಅಖ್ತರ್ ಅವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಆ ಚರ್ಚೆಯ ವಿಡಿಯೋಗಳು ವೈರಲ್ ಆಗಿವೆ. ಅದರ ಬೆನ್ನಲ್ಲೇ ಈ ರೀತಿಯ ಫೇಕ್ ನ್ಯೂಸ್ ಹಬ್ಬಿದ್ದು, ಜಾವೇದ್ ಅಖ್ತರ್ ಅವರು ಗುಡುಗಿದ್ದಾರೆ. ಎಐ ಮೂಲಕ ಜಾವೇದ್ ಅಖ್ತರ್ ಅವರ ಫೇಕ್ ಫೋಟೋವನ್ನು ಕ್ರಿಯೇಟ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಲಿವುಡ್ ವೇದಿಕೆಯಲ್ಲಿ ತುಳು ಸಿನಿಮಾವನ್ನು ಕೊಂಡಾಡಿದ ಸುನಿಲ್ ಶೆಟ್ಟಿ – Kannada News | Sunil Shetty talks about Tulu movie Jai

ಸುನಿಲ್ ಶೆಟ್ಟಿ (Sunil Shetty), ಬಾಲಿವುಡ್​ನ ಸ್ಟಾರ್ ನಟರಲ್ಲಿ ಒಬ್ಬರು. ಮಂಗಳೂರು ಮೂಲದವರಾದ ಸುನಿಲ್ ಶೆಟ್ಟಿ ದಶಕಗಳಿಂದಲೂ ಬಾಲಿವುಡ್​​ನಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿರುವ ಸುನಿಲ್ ಶೆಟ್ಟಿ, ಬಾಲಿವುಡ್​​ನಲ್ಲಿ ಬಾಡಿ ಬಿಲ್ಡಿಂಗ್​​ ಸಂಸ್ಕೃತಿ ಶುರುವಾಗಲು ಕಾರಣರಾದವರಲ್ಲಿ ಒಬ್ಬರು ಸಹ. ಸುನಿಲ್ ಶೆಟ್ಟಿ ಹಿಂದಿ ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ, ಕೆಲವಾರು ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕನ್ನಡಕ್ಕಂತೂ ಸುನಿಲ್ ಶೆಟ್ಟಿ ಹೊಸಬರೇನೂ ಅಲ್ಲ. ಸುದೀಪ್ ಜೊತೆಗೆ ‘ಪೈಲ್ವಾನ್’ ಸಿನಿಮಾನಲ್ಲಿ ಈಗಾಗಲೇ ನಟಿಸಿದ್ದಾರೆ. ಇತ್ತೀಚೆಗಷ್ಟೆ ಅವರು ತಮ್ಮ ಮಾತೃಭಾಷೆಯಾದ ತುಳುವಿನಲ್ಲಿ ಸಿನಿಮಾ ಒಂದನ್ನು ಮಾಡಿದ್ದು, ಬಾಲಿವುಡ್​​ಗೆ ಸಂಬಂಧಿಸಿದ ವೇದಿಕೆಯೊಂದರಲ್ಲಿ ಈ ಬಗ್ಗೆ ಮಾತನಾಡಿದ್ದು, ಸಿನಿಮಾವನ್ನು ಕೊಂಡಾಡಿದ್ದಾರೆ.

ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು, ಕ್ರೀಡಾಪಟುಗಳ ಸಂದರ್ಶನ ಮಾಡುವ, ಹಿಂದಿಯ ಜನಪ್ರಿಯ ಸಂದರ್ಶನದ ಶೋ ಆಗಿರುವ ‘ಲಲ್ಲನ್​ಟಾಪ್’ನಲ್ಲಿ ಸುನಿಲ್ ಶೆಟ್ಟಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸುನಿಲ್ ಶೆಟ್ಟಿ, ತಾವು ನಟಿಸಿರುವ ತುಳು ಸಿನಿಮಾ ‘ಜೈ’ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವುದಲ್ಲದೆ, ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ.

‘ನಾನು ತುಳುನಾಡಿನವನು, ಮಂಗಳೂರು ನನ್ನ ಮೂಲ ಊರು. ನಾನು ಇತ್ತೀಚೆಗಷ್ಟೆ ಒಂದು ತುಳು ಸಿನಿಮಾನಲ್ಲಿ ನಟಿಸಿದೆ. ತುಳು ಸಿನಿಮಾಗಳಿಗೆ ಬಹಳ ಎಂದರೆ ಬಹಳ ಕಡಿಮೆ ವೀಕ್ಷಕರಿದ್ದಾರೆ. ಆ ಚಿತ್ರರಂಗಕ್ಕೆ ಬೆಂಬಲ ನೀಡಲೆಂದು ನಾನು ತುಳು ಸಿನಿಮಾನಲ್ಲಿ ನಟಿಸಿದೆ. ಸಿನಿಮಾದ ಹೆಸರು ‘ಜೈ’ ಎಂದು. ಸಿನಿಮಾ ಬಹಳ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ನನ್ನ ನಟನೆಗೆ ಬಹಳ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಬಹುಷಃ ನನ್ನ ಮೊದಲ ಸಿನಿಮಾ ‘ಬಲವಾನ್’ನಲ್ಲಿ ನನಗೆ ಸಿಕ್ಕಂಥ ಪ್ರಶಂಸೆ ಈಗ ‘ಜೈ’ ಸಿನಿಮಾಕ್ಕಾಗಿ ಸಿಗುತ್ತಿದೆ’ ಎಂದಿದ್ದಾರೆ ಸುನಿಲ್ ಶೆಟ್ಟಿ.

ಇದನ್ನೂ ಓದಿ:ಸುನಿಲ್ ಶೆಟ್ಟಿ ಮಗನ ಬಗ್ಗೆ ಇಲ್ಲ ಸಲ್ಲದ ಸುದ್ದಿ; ಸಿಟ್ಟಾದ ನಟ

‘ಈಗ ಭಾಷೆಯ ಗಡಿ ಇಲ್ಲ. ಅದು ಹೊರಟು ಹೋಗಿದೆ, ಈಗ ಇರುವುದು ಏನಿದ್ದರೂ ಕಂಟೆಂಟ್​​ನ ಗಡಿ. ನಿಮ್ಮಲ್ಲಿ ಒಳ್ಳೆಯ ಕಂಟೆಂಟ್ ಇದ್ದರೆ ಭಾಷೆ ಅದಕ್ಕೆ ಅಡ್ಡಿ ಆಗುವುದಿಲ್ಲ, ಯಾವುದೇ ಭಾಷೆ ಆದರೂ ಕಂಟೆಂಟ್ ಚೆನ್ನಾಗಿದ್ದರೆ ಖಂಡಿತ ಅದನ್ನು ಜನ ಒಪ್ಪುತ್ತಾರೆ. ಎಲ್ಲ ರೀತಿಯ ಜನರಿಗೂ ಅದು ಇಷ್ಟವಾಗುತ್ತದೆ’ ಎಂದಿದ್ದಾರೆ ಸುನಿಲ್ ಶೆಟ್ಟಿ.

ಅಂದಹಾಗೆ ಸುನಿಲ್ ಶೆಟ್ಟಿ ನಟಿಸಿರುವುದು, ಮಾಜಿ ಬಿಗ್​​ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನ ಸಹ ಮಾಡಿರುವ ‘ಜೈ’ ಸಿನಿಮಾನಲ್ಲಿ. ಈ ಸಿನಿಮಾ ಈಗಾಗಲೇ 50 ದಿನಗಳನ್ನು ಪೂರೈಸಿದೆ. ರೂಪೇಶ್ ಶೆಟ್ಟಿ ಒಂದರ ಹಿಂದೊಂದು ತುಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಿರ್ದೇಶನ, ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಸಿನಿಮಾವನ್ನು ದುಬೈ, ಕತಾರ್, ಗೋವಾ, ಮುಂಬೈ, ತುಳುನಾಡು, ಕರಾವಳಿ ಭಾಗದಲ್ಲಿ ಬಿಡುಗಡೆ ಮಾಡಿದ್ದರು. ‘ಜೈ’ ಸಿನಿಮಾ ಭರ್ಜರಿ ಗಳಿಕೆಯನ್ನು ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ – Kannada News | Bigg Boss Kannada 12: Fight between Gilli and Ashwini

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಆರಂಭದಿಂದ ಇಲ್ಲಿಯವರೆಗೆ ಗಿಲ್ಲಿ ಮತ್ತು ಅಶ್ವಿನಿ ಪರಸ್ಪರ ಜಗಳ ಆಡುತ್ತಲೇ ಬಂದಿದ್ದಾರೆ. ಈ ವಾರ ಅಶ್ವಿನಿ ಮತ್ತು ಗಿಲ್ಲಿ ಇಬ್ಬರೂ ಟಾಸ್ಕ್​​ಗಳ ಉಸ್ತುವಾರಿ ವಹಿಸಿದ್ದರು. ಸಾಕಷ್ಟು ಸಮಯದಲ್ಲಿ ಈ ಇಬ್ಬರ ನಡುವೆ ಜಗಳಗಳು ನಡೆಯಿತು. ಇದೀಗ ವಾರಾಂತ್ಯದಲ್ಲೂ ಈ ಜಗಳ ಮುಂದುವರೆದಿದೆ. ಗಿಲ್ಲಿ, ಅಶ್ವಿನಿಯ ಯೋಗ್ಯತೆಯ ಕುರಿತಾಗಿ ಮಾತನಾಡಿದ್ದಾರೆ. ಇದು ಅಶ್ವಿನಿ ಅವರನ್ನು ಕೆರಳಿಸಿದೆ. ಇಬ್ಬರ ನಡುವೆ ಭರ್ಜರಿ ವಾಗ್ಯುದ್ಧವೇ ನಡೆದಿದೆ. ಬಿಗ್​ ಬಾಸ್ ಶೋ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೂ ಸಹ ಈ ಇಬ್ಬರೂ ಇಂದಿಗೂ ಜಗಳ ಆಡುತ್ತಲೇ ಇದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Udupi: ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು; ವಿಡಿಯೋ ನೋಡಿದ್ರೆ ಹೌಹಾರ್ತೀರಿ – Kannada News | Car Loses Control While Reversing, Hits Auto, Bike and Pedestrian in Udupi

ಉಡುಪಿ, ಜನವರಿ 02: ರಿವರ್ಸ್​​ ತೆಗೆಯುವ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನಗಳು ಸೇರಿ ಪಾದಚಾರಿಗೆ ಡಿಕ್ಕಿಯಾಗಿರುವ ಘಟನೆ ಉಡುಪಿ ನಗರದ ಜಾಮಿಯ ಮಸೀದಿ ಬಳಿ ನಡೆದಿದೆ. ಕಟ್ಟಡವೊಂದರ ಮುಂಭಾಗ ಕಾರನ್ನು ಪಾರ್ಕ್ ಮಾಡಲಾಗಿತ್ತು. ಕಾರು ಮಾಲಿಕ ಹೊರಡುವ ಸಿದ್ಧತೆಯಲ್ಲಿ ಕಾರಿನೊಳಗೆ ಬಂದು ಕುಳಿತಾಗ ಆಟೋಮೆಟಿಕ್ ಕಾರು ನಿಯಂತ್ರಣ ತಪ್ಪಿ ಏಕಾಏಕಿ ಹಿಮ್ಮುಖವಾಗಿ ಚಲಿಸಿದೆ. ಈ ವೇಳೆ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್​​, ಅಟೋ ಸೇರಿ ಪಾದಚಾರಿಗೂ ಗುದ್ದಿದ್ದು, ಗಂಭೀರ ಗಾಯಗೊಂಡ ದ್ವಿಚಕ್ರ ವಾಹನ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಚಾಲಕ ಮತ್ತು ಪಾದಚಾರಿ ಸಣ್ಣಪುಟ್ಟ ಗಾಗಳೊಂದಿಗೆ ಪಾರಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version