ಸುಸ್ತಾಗುತ್ತೆ ಎಂದು ಮಲ್ಟಿವಿಟಮಿನ್‌ ಸೇವನೆ ಮಾಡುತ್ತೀರಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ

ಆರೋಗ್ಯದ ಹಾಳಾಗದಂತೆ ಕಾಳಜಿ ವಹಿಸುವುದು ಎಂದರೆ ಕೇವಲ ಔಷಧಿಗಳನ್ನು ತೆಗೆದುಕೊಳ್ಳುವುದು ಎಂದಲ್ಲ, ಬದಲಾಗಿ ನಮ್ಮ ದೇಹಕ್ಕೆ ಏನು ಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು. ಅದರಲ್ಲಿಯೂ ವಿಟಮಿನ್ ಮಾತ್ರೆಗಳ ಅತಿಯಾದ ಬಳಕೆ ಪ್ರಯೋಜನಕ್ಕಿಂತ ಹೆಚ್ಚಿನ ಹಾನಿಯನ್ನುಂಟುಮಾಡಬಹುದು ಎಂದು ವೈದ್ಯರು ಹೇಳುತ್ತಾರೆ. ಅಷ್ಟೇ ಅಲ್ಲ, ಆಧುನಿಕ ಜೀವನಶೈಲಿಯಲ್ಲಿ ನಿದ್ರೆ (Sleep) ಮತ್ತು ದಂತದ ಆರೋಗ್ಯದ ಬಗ್ಗೆ ಹೆಚ್ಚಿನವರು ನಿರ್ಲಕ್ಷಿಸುತ್ತಾರೆ. ನಿದ್ರೆ ಸರಿಯಾಗಿ ಆಗದಿದ್ದರೆ ಆಯಾಸವಾಗುವುದು ಸಾಮಾನ್ಯ. ಅದರಲ್ಲಿಯೂ ವಿದ್ಯಾರ್ಥಿಗಳಲ್ಲಿ ಈ ರೀತಿ ಸಮಸ್ಯೆಯನ್ನು ಹೆಚ್ಚಾಗಿ ಕಂಡುಬರುತ್ತದೆ ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು, ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಲು ಕೆಲವು ಸಿಂಪಲ್ ಸಲಹೆಗಳನ್ನು ಪಾಲಿಸುವುದು ಬಹಳ ಒಳ್ಳೆಯದು.

ಅನೇಕರು ಆಯಾಸವನ್ನು ಕಡಿಮೆ ಮಾಡಲು ಮಲ್ಟಿವಿಟಮಿನ್ ಮಾತ್ರೆಗಳ ಸೇವನೆ ಮಾಡುತ್ತಾರೆ. ಆದರೆ ಆಯಾಸ ರೋಗವಲ್ಲ; ಇದು ಕೇವಲ ಒಂದು ಲಕ್ಷಣ ಅಷ್ಟೇ ಎಂಬುದನ್ನು ನೆನೆಪಿನಲ್ಲಿಡಿ. ನಿದ್ರೆಯ ಕೊರತೆ, ಅಸಮರ್ಪಕ ವ್ಯಾಯಾಮ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿರುವುದು ಆಯಾಸಕ್ಕೆ ಕಾರಣವಾಗಬಹುದು. ದೇಹದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಎ, ಡಿ, ಇ ಮತ್ತು ಕೆ ಹಾನಿಕಾರಕವಾಗಬಹುದು. ಆರೋಗ್ಯವಂತ ವ್ಯಕ್ತಿಗಳು ಈ ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಪ್ರಯೋಜನ ಸಿಗುವುದಿಲ್ಲ, ಜೀವಸತ್ವಗಳ ಕೊರತೆಯಿದ್ದು ವೈದ್ಯರ ಸಲಹೆಯಾನುಸಾರ ಮಾತ್ರ ವಿಟಮಿನ್‌ಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಹಗಲಿನಲ್ಲಿ ಮಲಗುವ ಅಭ್ಯಾಸ ನಿಮಗಿದ್ಯಾ? ಈ ಸಮಯಕ್ಕಿಂತ ಹೆಚ್ಚು ಮಲಗಿದ್ರೆ ಮಧುಮೇಹ ಬರಬಹುದು ಎಚ್ಚರ!

ಇನ್ನು ವಿದ್ಯಾರ್ಥಿಗಳಿಗೆ ನಿದ್ರೆ ಕಡಿಮೆಯಾಗಿ ಆಯಾಸವಾಗುತ್ತಿದ್ದರೆ ಅಂತವರು ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ಇದನ್ನು ಸರಿಪಡಿಸಿಕೊಳ್ಳಬಹುದು. ಪರೀಕ್ಷೆಯ ಸಮಯದಲ್ಲಿ ನಿದ್ರೆಯ ಕೊರತೆಯಾಗಿ ಆಯಾಸ ಹೆಚ್ಚಾಗುತ್ತಿದ್ದರೆ ಮಲಗುವ ಹಾಸಿಗೆಯ ಮೇಲೆ ಕುಳಿತು ಓದುವುದನ್ನು ತಪ್ಪಿಸಿ. ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಎಚ್ಚರಗೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಮಲಗುವ ಮೊದಲು, ಚಹಾ, ಕಾಫಿ, ಮಸಾಲೆಯುಕ್ತ ಆಹಾರಗಳು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರಗಳಿಂದ ದೂರವಿರಿ. ಜೊತೆಗೆ ಮೊಬೈಲ್ ಫೋನ್ ಬಳಸುವುದನ್ನು ಮತ್ತು ಟಿವಿ ನೋಡುವುದನ್ನು ನಿಲ್ಲಿಸಿ ಇದರಿಂದ ನಿದ್ರೆ ಸರಿಯಾಗಿ ಬರುತ್ತದೆ ಅಷ್ಟೇ ಅಲ್ಲ, ಆಯಾಸವೂ ಕಡಿಮೆಯಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಗ್ನಿ ದುರಂತಗಳ ಬೆನ್ನಲ್ಲೇ ಎಚ್ಚೆತ್ತುಕೊಂಡ KSRTC: ಬಸ್ಸಿನಲ್ಲಿ ಸೇಫ್ಟಿ ಅಳವಡಿಕೆ ಪ್ಲಾನ್ – Kannada News | KSRTC Bus Safety Upgrades: ADAS and Fire Systems for Passenger Protection

ಬೆಂಗಳೂರು, ಜನವರಿ 02: ಇತ್ತೀಚೆಗೆ ನೈಟ್ ಸರ್ವಿಸ್ ಖಾಸಗಿ ಬಸ್​ಗಳಲ್ಲಿ ಅಗ್ನಿ ದುರಂತಗಳು ಸಂಭವಿಸಿ ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಫುಲ್ ಅಲರ್ಟ್ ಆಗಿರುವ ಕೆಎಸ್ಆರ್​​ಟಿಸಿ (KSRTC) ನಿಗಮ ಅತ್ಯಾಧುನಿಕ ಅಡಾಸ್ ಸಿಸ್ಟಮ್ ಅಳವಡಿಕೆ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಕೆಎಸ್ಆರ್​ಟಿಸಿ ಅಂಬಾರಿ ಉತ್ಸವ ಮತ್ತು ಅಂಬಾರಿ 2.0 ಬಸ್​ಗಳಲ್ಲಿ ಅತ್ಯಾಧುನಿಕ ಮುಂಜಾಗ್ರತಾ ಕ್ರಮಗಳನ್ನು (Safety) ತೆಗೆದುಕೊಳ್ಳಲು ಮುಂದಾಗಿದೆ.

ಬಸ್​​ಗಳಲ್ಲಿ ಏನೆಲ್ಲಾ ವ್ಯವಸ್ಥೆ ಇರಲಿದೆ

ಮೊದಲಿಗೆ ಅಂಬಾರಿ ಉತ್ಸವ ಎಸಿ ಸ್ಲೀಪರ್ ಬಸ್​ಗಳಲ್ಲಿ ಅಳವಡಿಸಿರುವ ಮುಂಜಾಗ್ರತಾ ಕ್ರಮಗಳನ್ನು ನೋಡುವುದಾದರೆ, ಡ್ರೈವರ್ ಸೀಟ್ ಬಳಿ ಡ್ಯಾಶ್ ಕ್ಯಾಮ್ ಅಳವಡಿಸಲಾಗಿದೆ. ಈ ಕ್ಯಾಮೆರಾದಿಂದ ಬಸ್ ಆಕ್ಸಿಡೆಂಟ್​ಗೆ ಕಾರಣ ಗೊತ್ತಾಗಲಿದೆ. ಏನಾದರೂ ಬಸ್​​ನಲ್ಲಿ ಅಗ್ನಿ ಅವಘಡಗಳು ಸಂಭವಿದರೆ, ಪ್ರಯಾಣಿಕರನ್ನು ಅಲರ್ಟ್ ಮಾಡಲು ಡ್ರೈವರ್ ಮುಂಭಾಗದಲ್ಲಿ ಅನೌಸ್ಸರ್ ಇಡಲಾಗಿದೆ. ಅಂದರೆ ಫೈರ್ ಡಿಟೆಕ್ಷನ್ ಆ್ಯಂಡ್​ ಸಪ್ರೇಷನ್ ಸಿಸ್ಟಮ್ (FDSS) ಇದು ಇಂಜಿನ್ ಕಂಪಾರ್ಟ್ಮೆಂಟ್​​ನಲ್ಲಿ ಏನಾದರೂ ಬೆಂಕಿ ಕಾಣಿಸಿಕೊಂಡರೇ ಇಂಜಿನ್​ ಕಂಪಾರ್ಟ್ಮೆಂಟ್​ನಲ್ಲಿ ಆಟೋಮ್ಯಾಟಿಕ್ ಆಗಿ 15 ನಾಜಲ್​ಗಳಿಂದ ಫೋಮ್ ಸ್ಪೈ ಆಗುತ್ತದೆ.

ಇದನ್ನೂ ಓದಿ: ಬೆಂಗಳೂರಿನ ವಾಹನ ಸವಾರರಿಗೆ ಗುಡ್ ನ್ಯೂಸ್: 6 ವರ್ಷದ ಬಳಿಕ ರಸ್ತೆ ಪುನರಾರಂಭ, ತಗ್ಗಲಿದೆ ಟ್ರಾಫಿಕ್‌

ಒಂದು ವೇಳೆ ಸ್ಪ್ರೈ ಆಗಲಿಲ್ಲ ಅಂದರೆ ಡ್ರೈವರ್ ಮುಂಭಾಗದ ಡಿಸ್ಪೈಯಲ್ಲಿರುವ ಬಟನ್ ಪ್ರೆಸ್ ಮಾಡಿದರೆ, ನಾಜಲ್​ಗಳ ಮೂಲಕ ಅಗ್ನಿ ಅವಘಡ ತಪ್ಪಲಿದೆ. ಇದಕ್ಕಾಗಿ ಬಸ್ ಹಿಂಭಾಗದಲ್ಲಿ 4 ಕೆಜಿಯ ಫೋಮ್ ಸಿಲಿಂಡರ್ ಅಳವಡಿಸಲಾಗಿದೆ. ಇತ್ತ ಬಸ್​ನಲ್ಲಿ ಏನಾದರೂ ಬೆಂಕಿ ಕಾಣಿಸಿಕೊಂಡರೇ ಫ್ರಂಟ್ ಗ್ಲಾಸ್ ಒಡೆದು ತಪ್ಪಿಸಿಕೊಳ್ಳಲು ಡ್ರೈವರ್ ಸೀಟ್ ಹಿಂಭಾಗದಲ್ಲಿ ದೊಡ್ಡದಾದ ಹ್ಯಾಮರ್ ಇಡಲಾಗಿದೆ. ಇತ್ತ ಏನಾದರೂ ಸಮಸ್ಯೆ ಎದುರಾದರೆ ತಪ್ಪಿಸಿಕೊಳ್ಳಲು ಪ್ರತಿ ಬರ್ತ್ ಸೀಟ್​ನಲ್ಲೂ ಕಿಟಕಿ ಗ್ಲಾಸ್ ಒಡೆಯಲು ಹ್ಯಾಮರ್ ಇಡಲಾಗಿದೆ. ಬಸ್​ನಲ್ಲಿ ಏನಾದರೂ ಸಮಸ್ಯೆ ಕಾಣಿಸಿಕೊಂಡಾಗ ಡ್ರೈವರ್ ಮುಂಭಾಗದಲ್ಲಿ ಪ್ಯಾನಿಕ್ ಬಟನ್ ಅನ್ನು ಕೂಡ ಅಳವಡಿಸಿದ್ದು, ಅದನ್ನು ಡ್ರೈವರ್ ಪ್ರೆಸ್ ಮಾಡಿದಾಗ ಇದರಿಂದ ಶಬ್ದ ಉಂಟಾಗಿ ಪ್ರಯಾಣಿಕರಿಗೆ ಎಚ್ಚರಿಕೆ ಸಂದೇಶ ರವಾನೆ ಆಗುತ್ತದೆ. ಬಸ್ ಒಳಗೆ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ 4 ಕೆಜಿಯ ಎರಡು ಫೈರ್ ಎಸ್ಟಿಂಗ್ ವಿಷರ್ ಅಳವಡಿಸಲಾಗಿದೆ.

ಇನ್ನು ಎಮರ್ಜೆನ್ಸಿ ಎಕ್ಸಿಟ್ ಡೋರ್ ಅನ್ನ ವಾಹನದ ಬಲಭಾಗದ ಮೂರನೇ ಬರ್ತ್​​ನಲ್ಲಿ ಅಳವಡಿಸಿದ್ದು, ತುರ್ತು ಸಂದರ್ಭದಲ್ಲಿ ಅಗ್ನಿ ಅವಘಡದ ವೇಳೆ ಪ್ರಯಾಣಿಕರು ಈ ಡೋರ್ ಮೂಲಕ ಎಕ್ಸಿಟ್ ಆಗಬಹುದು. ಈ ಬರ್ತ್ ಅನ್ನು ಯಾರಿಗೂ ಬುಕ್ ಮಾಡೋದಿಲ್ವಂತೆ. ಇದು ಯಾವಾಗಲೂ ಖಾಲಿಯಾಗಿರಲಿದೆ. ಬಸ್ ಒಳಭಾಗದಲ್ಲಿ ಎರಡು ಸೆಲೂನ್ ಕ್ಯಾಮೆರಾ ಅಳವಡಿಸಲಾಗಿದೆ.

ಕುಡಿದು ಬಂದರೆ ಬಸ್​​​ ಸ್ಟಾರ್ಟ್ ಆಗುವುದಿಲ್ಲ

ದೇಶದಲ್ಲಿ ಇದೆ ಮೊದಲ ಬಾರಿಗೆ ಕೆಎಸ್ಆರ್​​ಟಿಸಿ ನಿಗಮದ ಬಸ್​ಗಳಲ್ಲಿ ಅತ್ಯಾಧುನಿಕ ಅಡಾಸ್ ಸಿಸ್ಟಮ್ ಅನ್ನು ಕೆಎಸ್ಆರ್​ಟಿಸಿ ಬಸ್​ಗಳಲ್ಲಿ ಅಳವಡಿಸಲು ಮುಂದಾಗಿದ್ದು, ಈ ಅಡಾಸ್ ಸಿಸ್ಟಮ್ ಡ್ರೈವಿಂಗ್ ವೇಳೆ, ಫೋನ್ ಬಳಕೆ ಮಾಡಿದರೆ, ನಿದ್ರೆಗೆ ಜಾರಿದರೆ, ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡರೇ ಕೋಲಿಜಿಯನ್ ವಾರ್ನಿಂಗ್ ನೀಡಲಾಗುತ್ತದೆ. ಈ ವೇಳೆ ಮೊದಲಿಗೆ ಬೀಪ್ ಸೌಂಡ್ ನೀಡುತ್ತದೆ. ನಂತರ ಕ್ರಿಟಿಕಲ್ ವಾರ್ನಿಂಗ್ ನೀಡಿ, ವಾಹನದ ವೇಗ ಮಿತಿ ಕಡಿಮೆ ಮಾಡಿ ಆಕ್ಸಿಡೆಂಟ್ ತಡೆಗಟ್ಟಲು ಸಹಾಯ ಮಾಡುತ್ತದೆ. ಡ್ರೈವರ್ ಡ್ರೈವಿಂಗ್ ಮಾಡುವ ವೇಳೆ ಕುಡಿದು ಬಂದಿದರೆ ವಾಹನ ಸ್ಟಾರ್ಟ್ ಆಗುವುದಿಲ್ಲವಂತೆ.

ಇತ್ತ ಐರಾವತ ಬಸ್​ಗಳಲ್ಲಿ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಅಂತ ನೋಡುವುದಾದರೆ, ಪ್ರಯಾಣಿಕರ ಸೀಟ್ ಬಳಿ 30 ಸ್ಪ್ರಿಂಕ್ಲರ್ ನಾಜಲ್ ಅಳವಡಿಸಿದ್ದು, ಅಗ್ನಿ ಅವಘಡ ಸಂಭವಿಸಿದರೆ ಸ್ವಯಂಚಾಲಿತವಾಗಿ ನೀರು ಸರಬರಾಜು ಆಗುತ್ತದೆ. ಇದಕ್ಕಾಗಿ ಬಸ್ ಲಗೇಜ್​​ ಕಂಪಾರ್ಟ್‌ಮೆಂಟ್ ಬಳಿ 170 ಲೀಟರ್ ಕೆಪಾಸಿಟಿಯ ಎರಡು ಸ್ಟೈನ್ಲೆಸ್ ಸ್ಟೀಲ್ ಟ್ಯಾಂಕರ್​ಗಳನ್ನು ಅಳವಡಿಸಲಾಗಿದೆ.

ಕೆಎಸ್​​ಆರ್​​ಟಿಸಿ ಡಿ.ಸಿ ನಾಗರಾಜ್ ಮೂರ್ತಿ ಹೇಳಿದ್ದಿಷ್ಟು

ಬಸ್ ಬಲಭಾಗದ ಹಿಂಬದಿಯಲ್ಲಿ ಎಮರ್ಜೆನ್ಸಿ ಎಕ್ಸಿಟ್ ಡೋರ್ ಅಳವಡಿಸಿದ್ದು, ತುರ್ತು ಸಂದರ್ಭದಲ್ಲಿ ಸ್ಟೀಲ್ ಲ್ಯಾಡರ್ ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು ಸೇಫ್ ಆಗಿ ಬಸ್​ನಿಂದ ಕೆಳಗೆ ಇಳಿಯಬಹುದು ಎಂದು ಕೆಎಸ್​​ಆರ್​​ಟಿಸಿ ಡಿ.ಸಿ ನಾಗರಾಜ್ ಮೂರ್ತಿ ಹೇಳುತ್ತಾರೆ.

ಇದನ್ನೂ ಓದಿ: ದೇವನಹಳ್ಳಿ: ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

ಒಟ್ಟನಿಲ್ಲಿ ಇತ್ತೀಚೆಗೆ ನೈಟ್ ಸರ್ವಿಸ್ ಖಾಸಗಿ ಬಸ್​ಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿ ನೂರಾರು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಕೆಎಸ್ಆರ್​​ಟಿಸಿ ಫುಲ್ ಅಲರ್ಟ್ ಆಗಿರುವುದಂತು  ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:57 pm, Fri, 2 January 26

Source link

ಮೃತ IAS ಅಧಿಕಾರಿ ಮಹಾಂತೇಶ್‌ ಬೀಳಗಿ ಪುತ್ರಿಗೆ ಅನುಕಂಪದ ನೌಕರಿ ನೀಡಲು ಸಂಪುಟ ಒಪ್ಪಿಗೆ, ಯಾವ ಹುದ್ದೆ? – Kannada News | Karnataka Cabinet approves to Give C Group Job for demise IAS Officer mahantesh bilagi daughter

ಬೆಂಗಳೂರು, (ಜನವರಿ 02): ರಸ್ತೆ ಅಪಘಾತದಲ್ಲಿ  (Road Accident)ಮೃತಪಟ್ಟಿದ್ದ ಕರ್ನಾಟಕ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (mahantesh bilagi) ಅವರ ಪುತ್ರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲು ಸಚಿವ ಸಂಪುಟ (Karnataka Cabinet) ಒಪ್ಪಿಗೆ ಸೂಚಿಸಿದೆ. ಇಂದು (ಜನವರಿ 02) ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಮಹಾಂತೇಶ್ ಬೀಳಗಿ ಅವರ ಕುಟುಂಬಕ್ಕೆ ಅನುಕಂಪದ ಹುದ್ದೆ ನೀಡವ ಬಗ್ಗೆ ಚರ್ಚೆಯಾಗಿದ್ದು, ಅಂತಿಮವಾಗಿ ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯ ಅವರಿಗೆ ಅನುಕಂಪದ ಆಧಾರದ ಮೇಲೆ ಗ್ರೂಪ್ ಸಿ ಹುದ್ದೆ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಪ್ರೀತಿಯ ಮಾತು, ಪ್ರಮಾಣಿಕ ಕೆಲಸಗಳಿಂದ ಕರ್ನಾಟಕ ತುಂಬ ಗುರುತಿಸಿಕೊಂಡಿದ್ದ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ. ವಿದ್ಯಾರ್ಥಿಗಳು ಸಿಕ್ಕರೆ ಉತ್ಸಾಹ ತುಂಬಿಬರುವ ಮಾತುಗಳನ್ನು ಆಡದೆ ಮುಂದಕ್ಕೆ ಹೋಗ್ತಿರಲಿಲ್ಲ. ಜ್ಞಾನ ಬೆಳೆಸಿಕೊಳ್ಳಿ, ಬದುಕು ಬೆಳಗಿಸಿ ಅಂತ ಸ್ಟೂಡೆಂಟ್ಸ್‌ ಸಲಹೆ ಕೊಡೋದನ್ನು ಮರೀತಿರಲಿಲ್ಲ. ಸ್ವತಃ ಬಡತನದ ಬೇಗೆಯಲ್ಲಿ ಬೆಂದು, ಅಪಾರ ಅನುಭವಗಳನ್ನು ಬೆಳೆಸಿಕೊಂಡು ಉನ್ನತ ಸ್ಥಾನಕ್ಕೆ ಏರಿದ್ದ ಅಪರೂಪದ ವ್ಯಕ್ತಿ ಮಹಾಂತೇಶ್‌. ಈ ಜನಸ್ನೇಹಿ ಅಧಿಕಾರಿ ಇತ್ತೀಚೆಗೆ ಕಲಬುರಗಿ ಸಮೀಪ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಮೂವರು ಸಹೋದರರು ದುರಂತ ಸಾವು: IAS ಅಧಿಕಾರಿ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ರೂ ಉಳಿಯಲಿಲ್ಲ ಜೀವಗಳು

2025ರ ನವೆಂಬರ್ 25ರಂದು ಜೇವರ್ಗಿ ಸಮೀಪ ಮಹಾಂತೇಶ್ ಬೀಳಗಿ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ನಿಯಂತ್ರ ತಪ್ಪಿ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿತ್ತು. ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಲೆ ಈ ದುರ್ಘಟನೆ ಸಂಭವಿಸಿತ್ತು. ಈ ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿ ಅವರು ಚಿಕಿತ್ಸೆ ಫಲಕಾರಿಯಾಗದೇ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಮಹಾಂತೇಶ್ ಬೀಳಗಿ ಸಂಬಂಧಿ ಬಸವರಾಜ್ ಕಮರಟಗಿ ಎಂಬವರು ದೂರು ದಾಖಲಿಸಿದ್ದು, ಈ ದೂರಿನ ಅನ್ವಯ ಜೇವರ್ಗಿ ಠಾಣೆಯ ಪೊಲೀಸರು ಚಾಲಕ ಆರೋಕಿಯಾ ಆಂಥೋನಿ ರಾಜ ವಿರುದ್ದ 281 , 125(A)125(B)106 ಬಿಎನ್‌ಎಸ್‌ ಅಡಿ ಎಫ್ಐಆರ್ ದಾಖಲಾಗಿದೆ. ಚಾಲಕನ ಅತಿವೇಗ ಅಜಾರೋಗತೆಕತೆಯಿಂದ ಅಪಘಾತ ಸಂಭವಿಸಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ. ರಸ್ತೆ ಬದಿಯ ಬ್ರಿಡ್ಜ್ ಗೆ ಕಾರು ಡಿಕ್ಕಿಯಾಗಿ ನಾಲ್ಕೈದು ಬಾರಿ ಕಾರ್ ಪಲ್ಟಿಯಾಗಿದೆ. ಕಾರ್ ಪಲ್ಟಿಯಾದ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ರೆ, ಆಸ್ಪತ್ರೆಯಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸಾವನ್ನಪ್ಪಿದ್ದರು. ಕಾರ್ ಚಾಲಕ ಆಂಥೋನಿ ರಾಜ್ ಸಹ ಗಂಭೀರ ಗಾಯಗಳಾಗಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚೂಪಾದ ಮುಳ್ಳುಗಳ ರಾಶಿ ಮೇಲೆ ನೃತ್ಯ; ತಮಿಳುನಾಡಿನಲ್ಲೊಂದು ವಿಶಿಷ್ಟ ಪದ್ಧತಿ – Kannada News | Devotees Witness Unique Thorn Bed Ritual At Tamil Nadu Muthumariamman Temple

ಚೆನ್ನೈ, ಜನವರಿ 2: ತಮಿಳುನಾಡಿನ ಶಿವಗಂಗೈ ಜಿಲ್ಲೆಯ ತಿರುಪ್ಪುವನಂ ಬಳಿಯ ಹಳ್ಳಿಯಲ್ಲಿ ಪೂಂಗವನಂ ಮುತ್ತುಮಾರಿಯಮ್ಮನ್ ದೇವಾಲಯವಿದೆ. 63 ವರ್ಷದ ನಾಗರಾಣಿ ಅಮ್ಮವರು ಈ ದೇವಾಲಯದ ಆಡಳಿತಾಧಿಕಾರಿ. ಪ್ರತಿ ಮಂಡಲ ಪೂಜೆಯ ಸಮಯದಲ್ಲಿ 48 ದಿನಗಳ ಕಾಲ ಉಪವಾಸ ಆಚರಿಸುವುದು ಮತ್ತು ಜನರಿಗೆ ದೈವಿಕ ಮಾತುಗಳನ್ನು ಹೇಳುವುದು ಇಲ್ಲಿನ ಸಂಪ್ರದಾಯವಾಗಿದೆ. ಈ ವೇಲೆ 7 ಅಡಿ ಎತ್ತರದ ಮುಳ್ಳಿನ ಹಾಸಿಗೆಯನ್ನು ಉಡೈ ಮುಳ್ಳು ಮತ್ತು ಕರುವೇಲ ಮರದ ಮುಳ್ಳಿನಂತಹ ವಸ್ತುಗಳಿಂದ ತಯಾರಿಸಲಾಗುತ್ತದೆ. ನಾಗರಾಣಿ ಅಮ್ಮವರು ಭಕ್ತರನ್ನು ಆಶೀರ್ವದಿಸಲು ಆ ಮುಳ್ಳಿನ ಹಾಸಿಗೆಯ ಮೇಲೆ ಕುಳಿತು, ನಿಂತು, ನೃತ್ಯ ಮಾಡುತ್ತಾರೆ!

ಈ ವರ್ಷದ 49ನೇ ಮಂಡಲ ಪೂಜಾ ಉತ್ಸವದ ಅಂಗವಾಗಿ, ದೇವಿಗೆ ಶಂಖ ಅಭಿಷೇಕ ಮಾಡಲಾಯಿತು. ನಂತರ, ದೇವಿಗೆ ದೀಪ ಬೆಳಗಿಸಲಾಯಿತು. ಬಳಿಕ ಉಡೈ ಮುಳ್ಳು, ಇಳಂತೈ ಮುಳ್ಳು, ಮತ್ತು ಕತ್ತಲಿ ಮುಳ್ಳು ಮುಂತಾದ ವಿವಿಧ ರೀತಿಯ ಮುಳ್ಳುಗಳನ್ನು ಹೊಂದಿರುವ 7 ಅಡಿ ಎತ್ತರದ ಮುಳ್ಳಿನ ರಾಶಿಯನ್ನು ದೇವಾಲಯದ ಮುಂಭಾಗದ ನೆಲದಲ್ಲಿ ಜೋಡಿಸಿ ನಾಗರಾಣಿ ದೇವಿಯು ಮುಳ್ಳಿನ ಹಾಸಿಗೆಯ ಮೇಲೆ ಕುಳಿತು ಆಶೀರ್ವಾದ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್ ಬಾಸ್ ಕನ್ನಡ: ‘ಅಶ್ವಿನಿ ಗೌಡ ಸೋಲಬೇಕು ಅಂತ ಬಯಸುವವರೇ ಜಾಸ್ತಿ ಜನ ಇದ್ದಾರೆ’ – Kannada News | Ashwini Gowda says housemates expecting her defeat in Bigg Boss Kannada Season 12

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋ ಈಗ ಅಂತಿಮ ಹಂತವನ್ನು ತಲುಪುತ್ತಿದೆ. ಕೆಲವೇ ದಿನಗಳಲ್ಲಿ ಫಿನಾಲೆ ಬರಲಿದೆ. ಮೊದಲು ಅಗ್ರೆಸಿವ್ ಆಗಿದ್ದ ಅಶ್ವಿನಿ ಗೌಡ ಅವರು ನಂತರದ ದಿನಗಳಲ್ಲಿ ಸ್ವಲ್ಪ ಸೈಲೆಂಟ್ ಆದರು. ಟಾಸ್ಕ್ ವಿಚಾರದಲ್ಲಿ ಅವರು ಹಿಂದೆ ಬಿದ್ದಿಲ್ಲ. ಅವರು ಕೂಡ ಸ್ಟ್ರಾಂಗ್ ಸ್ಪರ್ಧಿ. ಆದರೆ ಅವರು ಗೆಲ್ಲುತ್ತಾರೋ ಇಲ್ಲವೋ ಎಂಬುದು ತಿಳಿಯಲು ಕೊನೆಯ ತನಕ ಕಾಯಬೇಕು. ಆದರೆ ಬಿಗ್ ಬಾಸ್ ಮನೆಯಲ್ಲಿ ತಮ್ಮ ಸೋಲನ್ನು ಅನೇಕರು ಬಯಸುತ್ತಿದ್ದಾರೆ ಎಂದು ಸ್ವತಃ ಅಶ್ವಿನಿ ಗೌಡ (Ashwini Gowda) ಅವರಿಗೆ ಅನಿಸಿದೆ. ಅದು ಬಹುತೇಕ ನಿಜವಾಗಿದೆ ಕೂಡ!

ಈ ಸೀಸನ್​ನ ಕೊನೇ ಕ್ಯಾಪ್ಟನ್ ಯಾರು ಎಂಬುದನ್ನು ಆಯ್ಕೆ ಮಾಡಲು ಬಿಗ್ ಬಾಸ್ ಮನೆಯಲ್ಲಿ ಕೊನೇ ಟಾಸ್ಕ್ ನೀಡಲಾಯಿತು. ಅದರಲ್ಲಿ ಧನುಷ್ ಮತ್ತು ಅಶ್ವಿನಿ ಗೌಡ ಅವರ ನಡುವೆ ಹಣಾಹಣಿ ನಡೆಯಿತು. ಇಬ್ಬರೂ ಆಟ ಆಡುವಾಗ ಕೆಲವರು ಧನುಷ್ ಅವರನ್ನು ಹುರಿದುಂಬಿಸುತ್ತಿದ್ದರು. ಇನ್ನು ಕೆಲವರು ಅಶ್ವಿನಿ ಗೌಡ ಅವರನ್ನು ಹುರಿದುಂಬಿಸಿದರು.

ಟಾಸ್ಕ್ ಮುಗಿದ ಬಳಿಕ ಅಶ್ವಿನಿ ಗೌಡ ಅವರು ಧ್ರುವಂತ್ ಜೊತೆ ಕುಳಿತು ಮಾತನಾಡಿದರು. ‘ಈ ಮನೆಯಲ್ಲಿ ನಾನು ಸೋಲಬೇಕು ಅಂತ ಬಯಸೋರು ಬಹಳ ಜನರು ಇದ್ದಾರೆ’ ಎಂದು ಅಶ್ವಿನಿ ಗೌಡ ಅವರು ಹೇಳಿದರು. ಟಾಸ್ಕ್​​ನಲ್ಲಿ ಧನುಶ್ ಗೆದ್ದರು. ಅಶ್ವಿನಿ ಗೌಡ ಅವರು ಸೋತು ಬೇಸರದ ಮುಖ ಮಾಡಿಕೊಂಡರು. ಆದರೆ ಒಂದು ಟ್ವಿಸ್ಟ್ ಕಾದಿತ್ತು.

ಧನುಶ್ ಅವರು ಟಾಸ್ಕ್ ಮುಗಿಸುವ ವೇಳೆಗೆ ಸಣ್ಣ ರೂಲ್ಸ್ ಬ್ರೇಕ್ ಮಾಡಿದ್ದರು. ಅದನ್ನು ಬಿಗ್ ಬಾಸ್ ಗುರುತಿಸಿ ಹೇಳಿದರು. ಆಗ ಯಾರು ಕ್ಯಾಪ್ಟನ್ ಆಗಬೇಕು ಎಂಬ ತೀರ್ಮಾನವನ್ನು ಬಿಗ್ ಬಾಸ್ ಮನೆಯ ಸದಸ್ಯರಿಗೆ ನೀಡಲಾಯಿತು. ಆಗ ರಕ್ಷಿತಾ ಶೆಟ್ಟಿ, ರಘು ಮತ್ತು ಧ್ರುವಂತ್ ಅವರು ಅಶ್ವಿನಿ ಗೌಡಗೆ ಸಪೋರ್ಟ್ ಮಾಡಿದರು. ಕಾವ್ಯಾ, ಸ್ಪಂದನಾ, ರಾಶಿಕಾ ಶೆಟ್ಟಿ ಮತ್ತು ಗಿಲ್ಲಿ ನಟ ಅವರು ಧನುಷ್ ಪರವಾಗಿ ವೋಟ್ ಮಾಡಿದರು.

ಇದನ್ನೂ ಓದಿ: ಗಿಲ್ಲಿಗೆ ಥರ್ಡ್​​ಕ್ಲಾಸ್ ಪದ ಬಳಕೆ ಮಾಡಿದ ಅಶ್ವಿನಿ; ಮತ್ತೆ ಬಂತು ಹಳೇ ವರ್ಷನ್

ಹೆಚ್ಚಿನ ಸ್ಪರ್ಧಿಗಳು ಧನುಷ್ ಪರವಾಗಿ ವೋಟ್ ಮಾಡಿದ್ದರಿಂದ ಅಂತಿಮವಾಗಿ ಧನುಷ್ ಅವರೇ ಕ್ಯಾಪ್ಟನ್ ಆದರು. ಅಂದರೆ, ಅಶ್ವಿನಿ ಗೌಡ ಅವರ ಊಹೆ ನಿಜವಾಯಿತು. ಅಶ್ವಿನಿ ಸೋಲಬೇಕು ಎಂದು ಕೆಲವು ಸ್ಪರ್ಧಿಗಳು ಬಯಸಿದ್ದಾರೆ. ಆದರೆ ಜನರ ನಿರ್ಧಾರ ಏನು ಇದೆಯೋ ಇನ್ನೂ ತಿಳಿದಿಲ್ಲ. ಫಿನಾಲೆಗೆ ಯಾರೆಲ್ಲ ಬರುತ್ತಾರೆ ಹಾಗೂ ಟ್ರೋಫಿ ಯಾರ ಪಾಲಾಗುತ್ತದೆ ಎಂಬುದನ್ನು ನೋಡಲು ವೀಕ್ಷಕರು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇದ್ದಕ್ಕಿದ್ದಂತೆ ಜನರು, ಹಸುಗಳ ಬೆನ್ನಟ್ಟಿದ ಕಾಡು ಕರಡಿ; ಶಾಕಿಂಗ್ ವಿಡಿಯೋ ವೈರಲ್ – Kannada News | Wild Bear chases locals and cows in Rishikesh during New Year celebrations

ಹೃಷಿಕೇಶ, ಜನವರಿ 2: ಹೃಷಿಕೇಶ ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆಗಳು ನಡೆಯುತ್ತಿರುವಾಗ ಬುಧವಾರ ಕಾಡು ಕರಡಿಯೊಂದು ಜನರು ವಾಸವಾಗಿರುವ ಪ್ರದೇಶಕ್ಕೆ ನುಗ್ಗಿ ಜನರು ಹಾಗೂ ಹಸುಗಳ ಮೇಲೆ ದಾಳಿ ನಡೆಸಿದೆ. ಇದರಿಂದಾಗಿ ಯಾತ್ರಾಸ್ಥಳವಾದ ಹೃಷಿಕೇಶದಲ್ಲಿ ಅವ್ಯವಸ್ಥೆ ಉಂಟಾಯಿತು. ಇದರ ಇಡೀ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SA: ಜನವರಿ 3 ರಿಂದ ಭಾರತ- ಆಫ್ರಿಕಾ ನಡುವೆ ಏಕದಿನ ಸರಣಿ; ವೈಭವ್​ಗೆ ನಾಯಕತ್ವ – Kannada News | India U19 Squads: Vaibhav Suryavanshi Captains SA Series; Ayush Mhatre for World Cup

ಬಿಸಿಸಿಐನ (BCCI) ಜೂನಿಯರ್ ಪುರುಷರ ಆಯ್ಕೆ ಸಮಿತಿಯು ಡಿಸೆಂಬರ್ 27 ರ ಶನಿವಾರ 2026 ರ ಅಂಡರ್-19 ವಿಶ್ವಕಪ್‌ಗಾಗಿ (U19 World Cup 2026) ಭಾರತ ತಂಡವನ್ನು ಪ್ರಕಟಿಸಿತ್ತು. ಅಂದೇ ದಕ್ಷಿಣ ಆಫ್ರಿಕಾ ವಿರುದ್ಧದ ಯೂತ್ ಏಕದಿನ ಸರಣಿಗೂ ತಂಡವನ್ನು ಪ್ರಕಟಿಸಲಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಭಾರತ ಯುವ ತಂಡದ ನಾಯಕತ್ವ ವಹಿಸಿಕೊಂಡಿರುವ ಆಯುಷ್ ಮ್ಹಾತ್ರೆ ವಿಶ್ವಕಪ್ ತಂಡವನ್ನು ಮುನ್ನಡೆಸುತ್ತಿದ್ದರೆ, ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ಅವರನ್ನು ದಕ್ಷಿಣ ಆಫ್ರಿಕಾ ಸರಣಿಗೆ ನಾಯಕರನ್ನಾಗಿ ನೇಮಿಸಲಾಗಿದೆ.

2024 ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ ಅವರ ಮೊದಲ ನಾಯಕತ್ವದ ಸರಣಿ ಇದಾಗಿದೆ. ಅವರ ನಾಯಕತ್ವದಲ್ಲಿ, ಭಾರತ ಯುವ ಪಡೆ ಜನವರಿ 3 ರಂದು ಪ್ರಾರಂಭವಾಗುವ ಈ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಯು ಮುಂಬರುವ ವಿಶ್ವಕಪ್‌ ದೃಷ್ಟಿಯಿಂದ ಟೀಂ ಇಂಡಿಯಾಗೆ ಅತ್ಯಂತ ಮುಖ್ಯವಾಗಿದೆ. ಈ ಸರಣಿ ವೈಭವ್‌ಗೆ ಬಹಳ ವಿಶೇಷವಾಗಿದ್ದು, ಈ 14 ವರ್ಷದ ಹುಡುಗ ತಮ್ಮ ಬ್ಯಾಟಿಂಗ್‌ನಲ್ಲಿ ಮಿಂಚುವುದು ಮಾತ್ರವಲ್ಲದೆ, ನಾಯಕನಾಗಿಯೂ ಚೊಚ್ಚಲ ಸರಣಿಯಲ್ಲಿ ತಂಡವನ್ನು ಮುನ್ನಡೆಸಬೇಕಾಗಿದೆ

ವೈಭವ್​ಗೆ ನಾಯಕತ್ವ ನೀಡಿದ್ಯಾಕೆ?

ನಿಯಮಿತ ನಾಯಕ ಆಯುಷ್ ಮ್ಹಾತ್ರೆ ಗಾಯಗೊಂಡ ಕಾರಣ ಎಡಗೈ ಬ್ಯಾಟ್ಸ್‌ಮನ್ ವೈಭವ್‌ಗೆ ಈ ಜವಾಬ್ದಾರಿ ನೀಡಲಾಗಿದೆ. ಮ್ಹಾತ್ರೆ ಇತ್ತೀಚೆಗೆ ಅಂಡರ್ -19 ಏಷ್ಯಾಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದಾಗ್ಯೂ, ಅವರು ಗಾಯದಿಂದ ಬಳಲುತ್ತಿದ್ದು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ ಪುನರ್ವಸತಿ ಪಡೆಯಲಿದ್ದಾರೆ. ಹೀಗಾಗಿ ಅವರು ಈ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ. ಏತನ್ಮಧ್ಯೆ, ತಂಡದ ಉಪನಾಯಕ ವಿಹಾನ್ ಮಲ್ಹೋತ್ರಾ ಕೂಡ ಗಾಯದಿಂದ ಬಳಲುತ್ತಿದ್ದು, ಆಯುಷ್ ಅವರಂತೆಯೇ ಸಿಒಇಗೆ ಹಾಜರಾಗಲಿದ್ದಾರೆ. ಆ ನಂತರ ಇಬ್ಬರೂ ವಿಶ್ವಕಪ್ ತಂಡವನ್ನು ಸೇರುತ್ತಾರೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ

ವೈಭವ್ ಸೂರ್ಯವಂಶಿ (ನಾಯಕ), ಆರನ್ ಜಾರ್ಜ್ (ಉಪನಾಯಕ), ವೇದಾಂತ್ ತ್ರಿವೇದಿ, ಅಭಿಗ್ಯಾನ್ ಕುಂಡು (ವಿಕೆಟ್ ಕೀಪರ್), ಹರ್ವಂಶ್ ಸಿಂಗ್ (ವಿಕೆಟ್ ಕೀಪರ್), ಆರ್.ಎಸ್. ಅಂಬ್ರಿಸ್, ಕನಿಷ್ಕ್ ಚೌಹಾಣ್, ಖಿಲನ್ ಎ. ಪಟೇಲ್, ಮೊಹಮ್ಮದ್ ಅನನ್, ಹೆನಿಲ್ ಪಟೇಲ್, ಡಿ. ದೀಪೇಶ್, ಕಿಶನ್ ಕುಮಾರ್ ಸಿಂಗ್, ಉಧವ್ ಮೋಹನ್, ಯುವರಾಜ್ ಗೋಹಿಲ್, ರಾಹುಲ್ ಕುಮಾರ್.

U19 World Cup: ಅಂಡರ್-19 ವಿಶ್ವಕಪ್​ಗೆ 15 ಸದಸ್ಯರ ಭಾರತ ತಂಡ ಪ್ರಕಟ

ಭಾರತ-ದಕ್ಷಿಣ ಆಫ್ರಿಕಾ ಸರಣಿ ವೇಳಾಪಟ್ಟಿ

  • ಜನವರಿ 3: ಮೊದಲ ಏಕದಿನ ಪಂದ್ಯ, ವಿಲ್ಲೋಮೂರ್ ಪಾರ್ಕ್ (ಬೆನೋನಿ)
  • ಜನವರಿ 5: 2ನೇ ಏಕದಿನ ಪಂದ್ಯ, ವಿಲೋಮೂರ್ ಪಾರ್ಕ್ (ಬೆನೋನಿ)
  • ಜನವರಿ 7: 3ನೇ ಏಕದಿನ ಪಂದ್ಯ, ವಿಲೋಮೂರ್ ಪಾರ್ಕ್ (ಬೆನೋನಿ)

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ವಾಹನ ಸವಾರರಿಗೆ ಗುಡ್ ನ್ಯೂಸ್: 6 ವರ್ಷದ ಬಳಿಕ ರಸ್ತೆ ಪುನರಾರಂಭ, ತಗ್ಗಲಿದೆ ಟ್ರಾಫಿಕ್‌ – Kannada News | Bengaluru Kamaraj Road to fully reopens from Jan 2nd after six years, easing CBD traffic

ಬೆಂಗಳೂರು, (ಜನವರಿ 02): ಬೆಂಗಳೂರಿನ (Bengaluru) ಎಂಜಿ ರಸ್ತೆ ಮತ್ತು ಕಬ್ಬನ್ ರಸ್ತೆಯನ್ನು ಸಂಪರ್ಕಿಸುವ ಕಾಮರಾಜ್ ರಸ್ತೆ (Kamaraj Road) ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಎಂಜಿ ರೋಡ್ ಮೆಟ್ರೋ ಸ್ಟೇಷನ್ ಅಂಡರ್ ಗ್ರೌಂಡ್ ಕಾಮಗಾರಿಗಾಗಿ 2019 ಜೂನ್ 15ರಿಂದ ಕಬ್ಬನ್ ರೋಡ್ ಮತ್ತು ಎಂ.ಜಿ ರೋಡ್ ನಡುವಿನ ಕಾಮರಾಜ್ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಇದೀಗ ಕಾಮಗಾರಿ ಮುಕ್ತಾಯದ ಹಿನ್ನೆಲೆ ಬರೋಬ್ಬರಿ ಆರು ವರ್ಷಗಳ ನಂತರ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ಓಪನ್ ಮಾಡಲಾಗಿದೆ. ಇದರಿಂದ ಕಮರ್ಷಿಯಲ್ ಸ್ಟ್ರೀಟ್ ಮತ್ತು ಬ್ರಿಗೇಡ್ ರಸ್ತೆ ನಡುವೆ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಬೀಳಲಿದೆ.

ಕೆಲ ದಿನಗಳಿಂದ ಏಕ ಬಂದಿ ವಾಹನ ಸಂಚಾರಕ್ಕೆ ಅವಕಾಶ ಇದ್ದರೂ, ಎರಡೂ ಬದಿ ಸಂಚಾರಕ್ಕೆ ವಾಹನ ಸವಾರರು ಎದುರು ನೋಡುತ್ತಿದ್ದರು. ಇದೀಗ ಕಾಮರಾಜ ರಸ್ತೆಯ ಕಬ್ಬನ್ ರಸ್ತೆ ಮತ್ತು ಕಾಮಧೇನು ಎಂಪೋರಿಯಂ ಜಂಕ್ಷನ್ (ಎಂಜಿ ರಸ್ತೆ) ನಡುವಿನ ಸಂಪೂರ್ಣ ಭಾಗವನ್ನು ವಾಹನ ಸಂಚಾರಕ್ಕೆ ತೆರೆಯಲಾಗಿದೆ.

ಇದನ್ನೂ ಓದಿ: ಡಂಪಿಂಗ್ ಯಾರ್ಡ್​ಗಳಾಗುತ್ತಿರುವ ಬೆಂಗಳೂರು ಮೇಲ್ಸೇತುವೆಗಳು, ಈಜಿಪುರ ಫ್ಲೈಓವರ್​ನಲ್ಲಿ ದುರ್ನಾತ

ಈ ರಸ್ತೆಯನ್ನು ಪುನರ್‌ ನಿರ್ಮಿಸಲು ಸುಮಾರು 3 ಕೋಟಿ ರೂಪಾಯಿ ಖರ್ಚಾಗಿದ್ದು, ಈ ರಸ್ತೆಯನ್ನು ದ್ವಿಮುಖ ಸಂಚಾರಕ್ಕೆ ಮುಕ್ತಗೊಳಿಸುವುದರಿಂದ ಈ ಭಾಗದಲ್ಲಿ ಕೊಂಚ ಟ್ರಾಫಿಕ್ ಜಾಮ್ ಕಡಿಮೆಯಾಗುವ ನಿರೀಕ್ಷೆಯಿದೆ. ಕಮರ್ಷಿಯಲ್ ಸ್ಟ್ರೀಟ್, ಡಿಕನ್ಸನ್‌ ರಸ್ತೆ ಮತ್ತು ಕಬ್ಬನ್ ರಸ್ತೆಯಿಂದ ಬ್ರಿಗೇಡ್ ರಸ್ತೆ ಮತ್ತು ಎಂಜಿ ರಸ್ತೆ ಕಡೆಗೆ ಬರುವ ಪ್ರಯಾಣಿಕರ ಸಮಯ ಗಣನೀಯವಾಗಿ ಕಡಿಮೆಯಾಗುತ್ತದೆ.

2019ರ ಜೂನ್‌ನಲ್ಲಿ ನಮ್ಮ ಮೆಟ್ರೋದ ಪಿಂಕ್ ಲೈನ್‌ನ ಎಂಜಿ ರಸ್ತೆ ಭೂಗತ ನಿಲ್ದಾಣ ನಿರ್ಮಾಣಕ್ಕಾಗಿ ಈ ರಸ್ತೆಯನ್ನು ಬಂದ್‌ ಮಾಡಲಾಗಿತ್ತು. 2023ರ ವೇಳೆಗೆ ಪುನಃ ತೆರೆಯುವುದಾಗಿ ಹೇಳಿತ್ತು. ಆದರೆ, ಕೋವಿಡ್ ನಿಂದಾಗಿ ಸುರಂಗ ಮಾರ್ಗ ನಿರ್ಮಾಣ ಮತ್ತು ಇತರ ತಾಂತ್ರಿಕ ಸಮಸ್ಯೆಗಳಿಂದಾಗಿ ಕಾಮಗಾರಿ ನಿಗದಿತ ಸಮಯಕ್ಕೆ ಮುಗಿದಿರಲಿಲ್ಲ. ಬದಲಿಗೆ 2025ರ ಫೆಬ್ರವರಿಯಲ್ಲಿ ರಸ್ತೆಯ ಒಂದು ಭಾಗವನ್ನು ಮಾತ್ರ ತೆರೆದಿತ್ತು. ಕಾಮಧೇನು ಎಂಪೋರಿಯಂ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಕಡೆಗೆ ಸಂಚಾರಕ್ಕೆ ಅವಕಾಶವಿತ್ತು. ಉಳಿದ ಭಾಗವನ್ನು ನಿಲ್ದಾಣದ ಕಾಮಗಾರಿ ಮತ್ತು ಭಾರೀ ಯಂತ್ರೋಪಕರಣಗಳ ಸಂಚಾರಕ್ಕಾಗಿ ಮೀಸಲಿಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಶ್ಲೀಲ, ಕಾನೂನುಬಾಹಿರ ವಿಷಯಗಳನ್ನು ಡಿಲೀಟ್ ಮಾಡಿ; ಎಕ್ಸ್​​ನ ಗ್ರೋಕ್​ಗೆ ಕೇಂದ್ರ ಸರ್ಕಾರ ಎಚ್ಚರಿಕೆ – Kannada News | Modi Government directs Elon Musk led X to remove vulgar unlawful content from Grok AI platform

ನವದೆಹಲಿ, ಜನವರಿ 2: ಎಲಾನ್ ಮಸ್ಕ್ (Elon Musk) ನೇತೃತ್ವದ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ಗೆ ಕೇಂದ್ರ ಸರ್ಕಾರ ಇಂದು ಖಡಕ್ ಎಚ್ಚರಿಕೆ ನೀಡಿದೆ. ಎಕ್ಸ್​ನ AI ಅಪ್ಲಿಕೇಶನ್ ಗ್ರೋಕ್‌ನಿಂದ (Grok AI) ಹಂಚಲ್ಪಡುತ್ತಿರುವ ಎಲ್ಲಾ ಅಶ್ಲೀಲ ಮತ್ತು ಕಾನೂನುಬಾಹಿರ ವಿಷಯವನ್ನು ತಕ್ಷಣ ಡಿಲೀಟ್ ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಒಂದುವೇಳೆ ಆ ವಿಷಯಗಳನ್ನು 72 ಗಂಟೆಯೊಳಗೆ ತೆಗೆದುಹಾಕದಿದ್ದರೆ ಕಾನೂನಿನಡಿಯಲ್ಲಿ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

2000ರ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು 2021ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳ ಅಡಿಯಲ್ಲಿ ಶಾಸನಬದ್ಧವಾದ ಬಾಧ್ಯತೆಗಳನ್ನು ಪಾಲಿಸಲು ವಿಫಲವಾದ ಕಾರಣದಿಂದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಎಕ್ಸ್‌ನ ಭಾರತದ ಕಾರ್ಯಾಚರಣೆಗಳ ಮುಖ್ಯ ಅಧಿಕಾರಿಗೆ ನೋಟಿಸ್ ನೀಡಿದೆ.

ಇದನ್ನೂ ಓದಿ: ಭಾರತದ ಕಾನೂನು ಅನುಸರಿಸಲೇಬೇಕು; ಎಲಾನ್ ಮಸ್ಕ್ ಒಡೆತನದ ಎಕ್ಸ್​ಗೆ ಕರ್ನಾಟಕ ಹೈಕೋರ್ಟ್​ನಲ್ಲಿ ಮುಖಭಂಗ

‘ಗ್ರೋಕ್’ ನಂತಹ AI ಆಧಾರಿತ ಸೇವೆಗಳ ದುರುಪಯೋಗದ ಮೂಲಕ ಅಶ್ಲೀಲ, ನಗ್ನ, ಅಸಭ್ಯ ಮತ್ತು ಲೈಂಗಿಕತೆಯುಳ್ಳ ವಿಷಯವನ್ನು ಹೋಸ್ಟ್ ಮಾಡುವುದು, ಸೃಷ್ಟಿಸುವುದು, ಪ್ರಕಟಿಸುವುದು, ಪ್ರಸಾರ ಮಾಡುವುದು, ಹಂಚಿಕೊಳ್ಳುವುದು ಅಥವಾ ಅಪ್‌ಲೋಡ್ ಮಾಡುವುದನ್ನು ತಡೆಗಟ್ಟಲು ತಕ್ಷಣ ಕ್ರಮ ಕೈಗೊಂಡು ವರದಿಯನ್ನು ಸಲ್ಲಿಸಬೇಕೆಂದು ಸಚಿವಾಲಯ ಕೋರಿದೆ.

“ನೀವು ಅಭಿವೃದ್ಧಿಪಡಿಸಿದ ಮತ್ತು ಸಂಯೋಜಿಸಲ್ಪಟ್ಟ ಮತ್ತು ಎಕ್ಸ್ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾದ “Grok AI” ಎಂಬ ಸೇವೆಯನ್ನು ಬಳಕೆದಾರರು ಮಹಿಳೆಯರ ಅಶ್ಲೀಲ ಚಿತ್ರಗಳು ಅಥವಾ ವೀಡಿಯೊಗಳನ್ನು ಅವಹೇಳನಕಾರಿ ಅಥವಾ ಅಸಭ್ಯ ರೀತಿಯಲ್ಲಿ ಹೋಸ್ಟ್ ಮಾಡಲು, ರಚಿಸಲು, ಪ್ರಕಟಿಸಲು ಅಥವಾ ಹಂಚಿಕೊಳ್ಳಲು ನಕಲಿ ಖಾತೆಗಳನ್ನು ರಚಿಸಲು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ವಿಶೇಷವಾಗಿ ಗಮನಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಂಡು ವರದಿ ಸಲ್ಲಿಸಿ” ಎಂದು ಪತ್ರದಲ್ಲಿ ಆದೇಶಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ashes: ಸಿಡ್ನಿ ಟೆಸ್ಟ್​ಗೆ ಆಡುವ ಹನ್ನೆರಡರ ಬಳಗ ಘೋಷಿಸಿದ ಇಂಗ್ಲೆಂಡ್‌ – Kannada News | Ashes Final Test: England Announce 12 Man Squad for Sydney Decider

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Australia vs England) ನಡುವಿನ ನಡೆಯುತ್ತಿರುವ ಆಶಸ್ ( Ashes) ಸರಣಿಯು ಅಂತಿಮ ಹಂತವನ್ನು ತಲುಪಿದೆ. ಆತಿಥೇಯ ಆಸ್ಟ್ರೇಲಿಯಾ ಈಗಾಗಲೇ ಆಶಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಇತ್ತ ಸರಣಿ ಕಳೆದುಕೊಂಡಿರುವ ಇಂಗ್ಲೆಂಡ್‌ ಮೆಲ್ಬೋರ್ನ್ ಟೆಸ್ಟ್‌ ಗೆದ್ದು ಕ್ಲೀನ್ ಸ್ವೀಪ್ ಮುಖಭಂಗದಿಂದ ಪಾರಾಗಿದೆ. ಇದೀಗ ಸರಣಿಯ ಕೊನೆಯ ಪಂದ್ಯವನ್ನು ಗೆದ್ದು 3-2 ಅಂತರದಿಂದ ಪ್ರವಾಸ ಅಂತ್ಯಗೊಳಿಸಲು ನೋಡುತ್ತಿದೆ. ಸರಣಿಯ ಕೊನೆಯ ಪಂದ್ಯ ಸಿಡ್ನಿ ಮೈದಾನದಲ್ಲಿ ಜನವರಿ 4 ರಿಂದ ಆರಂಭವಾಗಲಿದ್ದು, ಈ ಪಂದ್ಯಕ್ಕಾಗಿ ಇಂಗ್ಲೆಂಡ್‌ ತನ್ನ ತಂಡವನ್ನು ಪ್ರಕಟಿಸಿದೆ. ಇಂಗ್ಲೆಂಡ್‌ ತಂಡದ ವಿಶೇಷತೆ ಏನೆಂದರೆ ಕೊನೆಯ ಟೆಸ್ಟ್​ಗೆ 11 ಆಟಗಾರರ ಬದಲು 12 ಆಟಗಾರರನ್ನು ಹೆಸರಿಸಿದೆ.

12 ಆಟಗಾರರ ಆಯ್ಕೆ

ಆಶಸ್ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯವು ಜನವರಿ 4 ರ ಭಾನುವಾರದಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ. ಆಸ್ಟ್ರೇಲಿಯಾ ಈಗಾಗಲೇ ಸರಣಿಯನ್ನು 3-1 ಅಂತರದಿಂದ ಗೆದ್ದಿದೆ, ಆದರೆ ಇಂಗ್ಲೆಂಡ್ ಸೋಲಿನ ಅಂತರವನ್ನು ಕಡಿಮೆ ಮಾಡುವ ಅವಕಾಶವನ್ನು ಹೊಂದಿದೆ. ಆದಾಗ್ಯೂ, ಇಂಗ್ಲೆಂಡ್‌ ತಂಡದ ಬೌಲಿಂಗ್ ದಾಳಿ ದುರ್ಬಲಗೊಂಡಿರುವುದು ಪ್ರಮುಖ ಸವಾಲಾಗಿದೆ. ಸ್ಟಾರ್ ವೇಗದ ಬೌಲರ್ ಜೋಫ್ರಾ ಆರ್ಚರ್ ಈಗಾಗಲೇ ನಾಲ್ಕನೇ ಮತ್ತು ಐದನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರೆ, ಇದೀಗ ಗಸ್ ಅಟ್ಕಿನ್ಸನ್ ಕೂಡ ಗಾಯದಿಂದಾಗಿ ಅಂತಿಮ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಈ ಸವಾಲಿನ ನಡುವೆ ಕೊನೆಯ ಟೆಸ್ಟ್ ಆಡಲು ಸಜ್ಜಾಗಿರುವ ಇಂಗ್ಲೆಂಡ್, ಟೆಸ್ಟ್ ಪಂದ್ಯ ಆರಂಭವಾಗುವ 2 ದಿನ ಮೊದಲೇ ತನ್ನ ತಂಡವನ್ನು ಪ್ರಕಟಿಸಿದೆ. ಒಂದೇ ವ್ಯತ್ಯಾಸವೆಂದರೆ ಈ ಬಾರಿ 11 ಆಟಗಾರರ ಬದಲಿಗೆ 12 ಆಟಗಾರರನ್ನು ಆಯ್ಕೆ ಮಾಡಿದೆ. ಇದರರ್ಥ ಯಾವ ಆಟಗಾರನನ್ನು ಹೊರಗಿಡಬೇಕು ಎಂಬುದನ್ನು ಪಂದ್ಯದ ದಿನದಂದು ಟಾಸ್ ಸಮಯದಲ್ಲಿ ನಿರ್ಧರಿಸಲಾಗುತ್ತದೆ. ಇಂಗ್ಲೆಂಡ್‌ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ಸಿಡ್ನಿಯ ಹವಾಮಾನ ಮತ್ತು ಪಿಚ್ ಕಾರಣ ಎನ್ನಬಹುದು. ಸಾಮಾನ್ಯವಾಗಿ, ಸಿಡ್ನಿಯಲ್ಲಿ ಬಿಸಿಲಿನ ವಾತಾವರಣವಿರುತ್ತದೆ, ಆದರೆ ಈ ಬಾರಿ ಹವಾಮಾನ ಸ್ವಲ್ಪ ತಂಪಾಗಿರುತ್ತದೆ. ಬ್ಯಾಟ್ಸ್‌ಮನ್‌ಗಳು ಮತ್ತು ಸ್ಪಿನ್ನರ್‌ಗಳಿಗೆ ಯಾವಾಗಲೂ ಅನುಕೂಲಕರವಾಗಿರುವ SCG ಪಿಚ್‌ನಲ್ಲಿ ಹುಲ್ಲು ಹೆಚ್ಚಿರುವ ಕಾರಣ ಅದು ವೇಗದ ಬೌಲರ್‌ಗಳಿಗೆ ಪ್ರಯೋಜನವನ್ನು ನೀಡುತ್ತದೆ.

Ashes: ಪ್ರತಿಷ್ಠಿತ ಆಶಸ್ ಸರಣಿಯಿಂದ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ 90 ಕೋಟಿ ರೂ. ನಷ್ಟ

ಯಾವ ಇಬ್ಬರು ಆಟಗಾರರಿಗೆ ಅವಕಾಶ?

ಇದನ್ನು ಗಮನದಲ್ಲಿಟ್ಟುಕೊಂಡು, ಇಂಗ್ಲೆಂಡ್ ತನ್ನ ಪ್ಲೇಯಿಂಗ್ 12 ರಲ್ಲಿ ಒಬ್ಬ ಸ್ಪಿನ್ನರ್ ಮತ್ತು ಮೂವರು ಪ್ರಮುಖ ವೇಗದ ಬೌಲರ್‌ಗಳನ್ನು ಸೇರಿಸಿಕೊಂಡಿದೆ. ಆದಾಗ್ಯೂ, ಈ 12 ಆಟಗಾರರಲ್ಲಿ 10 ಮಂದಿ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಭಾಗವಹಿಸಿದ ಆಟಗಾರರೇ ಆಗಿದ್ದಾರೆ. ಪ್ರಸ್ತುತ ಆಶಸ್‌ನಲ್ಲಿ ಕೇವಲ ಇಬ್ಬರು ಆಟಗಾರರಿಗೆ ಮಾತ್ರ ಮೊದಲ ಅವಕಾಶ ನೀಡಲಾಗುತ್ತಿದೆ. ಅವರಲ್ಲಿ ಒಬ್ಬರು ಡಿಸೆಂಬರ್ 2014 ರಿಂದ ಯಾವುದೇ ಟೆಸ್ಟ್ ಪಂದ್ಯವನ್ನು ಆಡದ ವೇಗದ ಬೌಲರ್ ಮ್ಯಾಥ್ಯೂ ಪಾಟ್ಸ್. ಇಂಗ್ಲೆಂಡ್‌ನ ಏಕೈಕ ಪ್ರಮುಖ ಸ್ಪಿನ್ನರ್ ಆಗಿ ಈ ಪ್ರವಾಸಕ್ಕೆ ಬಂದ ಆಫ್-ಬ್ರೇಕ್ ಬೌಲರ್ ಶೋಯೆಬ್ ಬಶೀರ್ ಅವರಿಗೆ ಈ ಬಾರಿ ಅವಕಾಶ ನೀಡಲಾಗಿದೆ. ಬಶೀರ್ ಲಾರ್ಡ್ಸ್‌ನಲ್ಲಿ ಭಾರತ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.

ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಜಾಕೋಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಜೇಮೀ ಸ್ಮಿತ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಗಸ್ ಅಟ್ಕಿನ್ಸನ್, ಜೋಶ್ ಟಂಗ್, ಮ್ಯಾಥ್ಯೂ ಪಾಟ್ಸ್ ಮತ್ತು ಶೋಯೆಬ್ ಬಶೀರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version