Headlines

ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ ಮಿಸ್​​ – Kannada News | Drunk Driver Rams Car Into Multiple Pedestrians near Mall of Asia in Bengaluru

ದೇವನಹಳ್ಳಿ, ಜನವರಿ 01: ಹೊಸ ವರ್ಷದ ಹಿನ್ನಲೆ ಕಂಠ ಪೂರ್ತಿ ಕುಡಿದ ಕಾರು ಚಾಲಕನೊಬ್ಬ ಮದ್ಯದ ಅಮಲಿನಲ್ಲಿ ಪಾದಚಾರಿಗಳ ಮೇಲೆ ಕಾರು ಹರಿಸಿರುವ ಘಟನೆ ಬೆಂಗಳೂರಿನ ಸಹಕಾರ ನಗರದಲ್ಲಿರುವ ಮಾಲ್ ಆಫ್​​ ಏಷ್ಯಾದ ಗೇಟ್ ನಂ.3ರಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ವೇಳೆ ಅದೃಷ್ಟವಶಾತ್​​ ಕೂದಲೆಳೆ ಅಂತರದಲ್ಲಿ ಬಾಲಕಿ ಬಚಾವ್​​ ಆಗಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಚಾಲಕ ಮದ್ಯದಮಲಿನಲ್ಲಿದ್ದ ಹಿನ್ನೆಲೆ ಮಾಲ್​ನಿಂದ ಹೊರಗೆ ಬರುವಾಗ ಕಾರು ನಿಯಂತ್ರಣ ತಪ್ಪಿದೆ. ಹೀಗಾಗಿ ಫುಟ್‌ಪಾತ್​​ಗೆ ಕಾರು ನುಗ್ಗಿದ…

Read More

T20 World Cup 2026: ಟಿ20 ವಿಶ್ವಕಪ್​ಗೆ 6 ತಂಡಗಳು ಪ್ರಕಟ

2026 ರ ಟಿ20 ವಿಶ್ವಕಪ್​ಗೆ ಭಾರತ ಹಾಗೂ ಶ್ರೀಲಂಕಾ ಆತಿಥ್ಯ ನೀಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. 20 ತಂಡಗಳ ನಡುವೆ ನಡೆಯಲಿರುವ ಈ ಮಿನಿ ವಿಶ್ವ ಸಮರ ಫೆಬ್ರವರಿ 7 ರಿಂದ ಆರಂಭವಾಗಿ, ಮಾರ್ಚ್​ 8 ರಂದು ನಡೆಯಲಿರುವ ಫೈನಲ್​ ಪಂದ್ಯದೊಂದಿಗೆ ಅಂತ್ಯವಾಗಲಿದೆ. ಈ ಪಂದ್ಯಾವಳಿಗಾಗಿ ಇದುವರೆಗೆ 6 ತಂಡಗಳು ಪ್ರಕಟವಾಗಿದ್ದು, ಆ 6 ತಂಡಗಳ ವಿವರ ಇಲ್ಲಿದೆ. ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್…

Read More

ನಟನೆ ಆರಂಭಿಸಿದ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ – Kannada News | AR Rahman acting in a movie with Prabhudeva

ಎಆರ್ ರೆಹಮಾನ್ (AR Rahman), ಭಾರತ ಚಿತ್ರರಂಗದ ಲೆಜೆಂಡರಿ ಸಂಗೀತ ನಿರ್ದೇಶಕ. ಕಳೆದ ಕೆಲವು ದಶಕಗಳಿಂದಲೂ ಸಂಗೀತ ಕ್ಷೇತ್ರದಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ ಎಆರ್ ರೆಹಮಾನ್. ಹಲವಾರು ಹೊಸ ಸಂಗೀತ ನಿರ್ದೇಶಕರು ಬಂದು ಹೋದರೂ ಸಹ ರೆಹಮಾನ್ ಸಂಗೀತ ಇಂದಿಗೂ ಸೂಪರ್ ಹಿಟ್ ಆಗುತ್ತಿದೆ. ಭಾರತದ ಸಿನಿಮಾಗಳು ಮಾತ್ರವೇ ಅಲ್ಲದೆ ಹಾಲಿವುಡ್​​ನಲ್ಲೂ ಬೇಡಿಕೆ ಹೊಂದಿದ್ದಾರೆ ಎಆರ್ ರೆಹಮಾನ್. ಸಂಗೀತ ಕ್ಷೇತ್ರದಲ್ಲಿ ಬಹಳ ಬ್ಯುಸಿ ಆಗಿರುವ ಹೊತ್ತಿನಲ್ಲಿಯೇ ರೆಹಮಾನ್, ನಟನೆಯನ್ನೂ ಆರಂಭಿಸಿದ್ದಾರೆ. ರೆಹಮಾನ್ ಅವರು ಈ ಹಿಂದೆ ಕೆಲವು…

Read More

ಹುಣಸೆಹಣ್ಣನ್ನು ಚಪ್ಪರಿಸಿ ತಿನ್ನುವವರಿಗೆ ಈ ಆರೋಗ್ಯ ಸಮಸ್ಯೆಗಳು ಎಂದಿಗೂ ಬರುವುದಿಲ್ಲ – Kannada News | Unlock Tamarind’s Power: A Superfood You Need

ಹುಣಸೆಹಣ್ಣು (Tamarind’s) ಎಂಬ ಹೆಸರು ಕೇಳಿದಾಕ್ಷಣ ಯಾರಿಗಾದರೂ ಬಾಯಲ್ಲಿ ನೀರು ಬರುವುದು ಸಹಜ. ಹುಳಿ ಮತ್ತು ಸಿಹಿಯ ಮಿಶ್ರಣವಾದ ಹುಣಸೆಹಣ್ಣು ತಿನ್ನುವುದಕ್ಕೆ ರುಚಿಕರ ಮಾತ್ರವಲ್ಲ, ಆರೋಗ್ಯ ಪ್ರಯೋಜನಗಳಿಂದಲೂ ಸಮೃದ್ಧವಾಗಿದೆ. ಸಾಮಾನ್ಯವಾಗಿ ಹುಣಸೆಹಣ್ಣನ್ನು ಅದರ ಸುವಾಸನೆ ಮತ್ತು ಅದರಲ್ಲಿರುವ ರುಚಿಗೆ ಅನೇಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಇದಿಲ್ಲದೆ ಕೆಲವು ಆಹಾರಗಳು ಅಪೂರ್ಣ ಎನಿಸಿಕೊಳ್ಳುತ್ತವೆ. ಹಾಗಾದರೆ ಹುಣಸೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು, ಯಾಕಾಗಿ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ. ಹುಣಸೆಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು, ಫೈಟೊಕೆಮಿಕಲ್‌ಗಳು, ವಿಟಮಿನ್ ಎ, ಸಿ, ಇ,…

Read More

ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು – Kannada News | Kogilu Layout Housing Row: No Housing for Non Kannadigas in Kogilu Layout; Zameer Khan

ಬೆಂಗಳೂರು, ಜನವರಿ 01: ಕರ್ನಾಟಕದವರಲ್ಲದೆ ಹೊರಗಿನವರಿಗೆ ಹೇಗೆ ಮನೆ ಕೊಡಲು ಸಾಧ್ಯ? ಬಾಂಗ್ಲಾದೇಶದವರು ಹೇಗೆ ಬೆಂಗಳೂರಿನಲ್ಲಿ ಇರಲು ಸಾಧ್ಯ? ಹಾಗೇನಾದ್ರೂ ಅವರು ಬಾಂಗ್ಲಾದೇಶದವರಾಗಿದ್ದರೆ ಸಾಬೀತುಪಡಿಸಲಿ. ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ವಿಪಕ್ಷ ನಾಯಕ ಆರ್​​. ಅಶೋಕ್​​ಗೆ ವಸತಿ ಸಚಿವ ಜಮೀರ್​​ ತಿರುಗೇಟು ನೀಡಿದ್ದಾರೆ. ಕರ್ನಾಟಕದವರನ್ನು ಬಿಟ್ಟು ಹೊರಗಿನವರಿಗೆ ಮನೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.   Source link

Read More

ವರ್ಷದ ಮೊದಲ ದಿನದಂದೇ ಸ್ಫೋಟಕ ಶತಕ ಸಿಡಿಸಿದ ಮಿಚೆಲ್ ಮಾರ್ಷ್ – Kannada News | Mitchell Marsh’s BBL Century: Perth Scorchers Captain Smashes 102 After T20 WC Squad

ಆಸ್ಟ್ರೇಲಿಯಾದ ಟಿ20 ನಾಯಕ ಮಿಚೆಲ್ ಮಾರ್ಷ್ 2025-26ರ ಬಿಗ್ ಬ್ಯಾಷ್ ಲೀಗ್​ನ 19 ನೇ ಪಂದ್ಯದಲ್ಲಿ ಹೋಬಾರ್ಟ್ ಹರಿಕೇನ್ಸ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಜನವರಿ 1, 2026 ರಂದು ಹೋಬಾರ್ಟ್‌ನ ಬೆಲ್ಲೆರಿವ್ ಓವಲ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ತ್ ಸ್ಕಾರ್ಚರ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 229 ರನ್ ಗಳಿಸಿತು. 2026 ರ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡವನ್ನು ಘೋಷಿಸಿದ ಕೆಲವು ಗಂಟೆಗಳ ನಂತರ ಮಿಚೆಲ್ ಮಾರ್ಷ್ ಈ…

Read More

ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು? – Kannada News | People in Bengaluru walked 26 km to advocate for better footpaths and pedestrian rights

ಬೆಂಗಳೂರು, ಜನವರಿ 01: ಪಾದಚಾರಿ ಮಾರ್ಗದ ಅಗತ್ಯ ಮತ್ತು ಪಾದಚಾರಿಗಳ ಹಕ್ಕು ಸಾರುವ ನಿಟ್ಟಿನಲ್ಲಿ 26 ಕಿ.ಮೀ. ನಡಿಗೆ ಬೆಂಗಳೂರಲ್ಲಿ ನಡೆದಿದೆ. ದಕ್ಷಿಣ ಬೆಂಗಳೂರಿನ ಆರ್‌ವಿ ರೋಡ್ ಮೆಟ್ರೋ ನಿಲ್ದಾಣದಿಂದ ಉತ್ತರ ಬೆಂಗಳೂರಿನ ಓರಾಯನ್ ಮಾಲ್ ಸಮೀಪದ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದವರೆಗೆ ಪಾದಚಾರಿಗಳು ಹೆಜ್ಜೆ ಹಾಕಿದ್ದಾರೆ. ಲಾಲ್‌ಬಾಗ್, ಜಯನಗರ, ಕಬ್ಬನ್ ಪಾರ್ಕ್, ಉಲ್ಸೂರು ಕೆರೆ, ಶಿವಾಜಿನಗರ ಮತ್ತು ಮೇಖ್ರಿ ಸರ್ಕಲ್ ಸೇರಿದಂತೆ ನಗರದ ಪ್ರಮುಖ ಸ್ಥಳಗಳ ಮೂಲಕ ಪಾದಚಾರಿಗಳು ಸಾಗಿದ್ದಾರೆ. ವಾಕಲೂರು ಮತ್ತು ಗ್ರೇಟರ್…

Read More

ರಿಸರ್ಚ್ ಅನಾಲಿಸ್ಟ್ ಲೈಸೆನ್ಸ್ ಪಡೆದು, ಯಾರಿಗೋ ಪಾಸ್ವರ್ಡ್ ಕೊಟ್ಟು, ದಿನಸಿ ಅಂಗಡಿ ನಡೆಸುತ್ತಿದ್ದ ವ್ಯಕ್ತಿ – Kannada News | Sebi cancels licence of research analyst after finding he was running a grocery shop

ನವದೆಹಲಿ, ಜನವರಿ 1: ರಿಸರ್ಚ್ ಅನಾಲಿಸ್ಟ್ ಆಗಿ ಸೆಬಿಯಿಂದ ಲೈಸೆನ್ಸ್ (SEBI licence) ಪಡೆದ ವ್ಯಕ್ತಿಯೊಬ್ಬ ತನ್ನ ಇಮೇಲ್, ಪಾಸ್ವರ್ಡ್ ಅನ್ನು ಪರಿಚಿತನೊಬ್ಬನಿಗೆ ಕೊಟ್ಟು ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈತನ ರಿಜಿಸ್ಟ್ರೇಶನ್ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಇದರಿಂದ ಬಹಳ ಜನರಿಗೆ ಕೋಟ್ಯಂತರ ರೂ ನಷ್ಟವಾಗಿದೆ. ಸೆಬಿ ಈತನಿಗೆ ನೀಡಿದ್ದ ರಿಸರ್ಚ್ ಅನಾಲಿಸ್ಟ್ ಲೈಸೆನ್ಸ್ ಅನ್ನು ರದ್ದು ಮಾಡಿದೆ. ಕುತೂಹಲ ಎಂದರೆ, ತನ್ನ ರಿಜಿಸ್ಟ್ರೇಶನ್ ನಂಬರ್ ದುರ್ಬಳಕೆಯಾಗಿದ್ದರೂ ಅದರ ಅರಿವೇ ಇಲ್ಲದೆ ಪುರೂಸ್​ಖಾನ್ (Purooskhan) ಯಾವುದೋ ಸಣ್ಣ ದಿನಸಿ…

Read More

ಬಲು ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ಸುಳಿಯಲು ಈ ಸಿಂಪಲ್‌ ಟ್ರಿಕ್ಸ್‌ ಅನುಸರಿಸಿ – Kannada News | Just use these tricks to peel garlic skin very easily

ಅಡುಗೆಯ ರುಚಿ ಮತ್ತು ಘಮ ಹೆಚ್ಚಿಸುವಲ್ಲಿ ಬೆಳ್ಳುಳ್ಳಿಯು (garlic) ಪ್ರಮುಖ ಪಾತ್ರ ವಹಿಸುತ್ತದೆ. ರುಚಿ ಹೆಚ್ಚಿಸುವುದಷ್ಟೇ ಅಲ್ಲ ಬೆಳ್ಳುಳ್ಳಿ ಹಲವಾರು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಹಾಗಾಗಿ ಹೆಚ್ಚಿನ ಅಡುಗೆಗಳಲ್ಲಿ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಅದರಲ್ಲೂ ಮಾಂಸಹಾರ ಭಕ್ಷ್ಯಗಳಿಗೆ ಬೆಳ್ಳುಳ್ಳಿ ಬೇಕೇ ಬೇಕು.  ಆದ್ರೆ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆಯುವುದು ಮಾತ್ರ ಹಲವರಿಗೆ ಸವಾಲಿನ ಕೆಲಸ. ಬೆಳ್ಳುಳ್ಳಿ ಎಸಳುಗಳು ತೀರಾ ಚಿಕ್ಕದಾಗಿರುವ ಹಾಗೂ ತೆಳುವಾಗಿರುವ ಕಾರಣ ಸಿಪ್ಪೆಯನ್ನು ತೆಗೆಯುವುದು ಸ್ವಲ್ಪ ಕಷ್ಟ. ನೀವು ಸಹ ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ಸಿಕ್ಕಾಪಟ್ಟೆ ಪರದಾಟ…

Read More

ಹೊಸ ವರ್ಷಕ್ಕೆ ಭರ್ಜರಿ ಕಿಕ್​​ ಕೊಟ್ಟ ಮದ್ಯ: ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಆದಾಯ – Kannada News | Karnataka New Year Liquor Sales Soar: 587 Cr Excise Revenue Boost

ಬೆಂಗಳೂರು, ಜನವರಿ 01: ರಾಜ್ಯಾದ್ಯಂತ ಹೊಸ ವರ್ಷಾಚರಣೆ (New Year 2026) ಸಂಭ್ರಮ ಜೋರಾಗಿತ್ತು. ಪಬ್‌, ಬಾರ್‌, ರೆಸ್ಟೋರೆಂಟ್​​ಗಳು ಝಗಮಗಿಸಿದ್ದವು. ಕುಡಿದು ಟೈಟಾದ ಯುವಕ, ಯುವತಿಯರು ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿದರು. ಇನ್ನು ಮದ್ಯ (Liquor) ಮಾರಾಟದ ಅವಧಿಯನ್ನು ವಿಸ್ತರಿಸಲಾಗಿತ್ತು. ಹೀಗಾಗಿ ಹೊಸ ವರ್ಷದಂದು ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಭರ್ಜರಿ ಆದಾಯವಾಗಿದೆ. ಈ ವರ್ಷ ಅಬಕಾರಿ ಇಲಾಖೆ ಒಟ್ಟು 587.51 ಕೋಟಿ ರೂ. ಆದಾಯ ಗಳಿಸಿದೆ. ಈ ವರ್ಷ ಹೆಚ್ಚಿನ ಮದ್ಯ ಮಾರಾಟ: 587.51 ಕೋಟಿ…

Read More