Headlines

ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ – Kannada News | Bigg Boss Kannada: Again Dhruvanth engaged fight with Gilli Nata

ಬಿಗ್​​ಬಾಸ್ (Bigg Boss) ಮನೆಯಲ್ಲಿ ಹೊಸ ವರ್ಷಾಚರಣೆ ನಡೆಯುತ್ತಿದೆ. ಬಿಗ್​​ಬಾಸ್ ಮನೆ ಮಂದಿಗೆ ಟಾಸ್ಕ್ ನೀಡಿದ್ದು, ಮನೆ ಸದಸ್ಯರ ಬಗ್ಗೆ ಹಾಡು ಕಟ್ಟಿ ಹಾಡುವಂತೆ ಸೂಚಿಸಿದ್ದಾರೆ. ಅದರಂತೆ ಆಶುಕವಿ ಗಿಲ್ಲಿ ಮನೆ ಮಂದಿಯನ್ನು, ಅವರ ವ್ಯಕ್ತಿತ್ವವನ್ನು ಇರಿಸಿಕೊಂಡು ಹಾಡು ಕಟ್ಟುತ್ತಿದ್ದಾರೆ ಆದರೆ ಗಿಲ್ಲಿಯ ಹಾಡಿಗೆ ಧ್ರುವಂತ್ ಅಪಸ್ವರ ಎತ್ತಿದ್ದಾರೆ. ನನ್ನ ಬಗ್ಗೆ ನಿನ್ನ ಹಾಡಿನಲ್ಲಿ ಏನೂ ಬರೆಯುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ. ಗಿಲ್ಲಿಯ ಹಾಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಗಿಲ್ಲಿ ಸಹ ಕೋಪಿಸಿಕೊಂಡಿದ್ದು, ‘ಉಗುರಲ್ಲೇ ನಿನ್ನ ಕೊಂದು…

Read More

ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂ ಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್!

ರಾಮನಗರ, ಜನವರಿ 01: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ತಡರಾತ್ರಿ ಭಯಾನಕ ಘಟನೆಯೊಂದು ನಡೆದಿದೆ. ಗ್ರಾಮದ ಮಧ್ಯದಲ್ಲಿ ವಾಮಾಚಾರ ಮಾಡಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಜನರಿಗೆ ಆಘಾತ ಎದುರಾಗಿದೆ. ರಸ್ತೆಯಲ್ಲಿ ಅರಿಶಿನ, ಕುಂಕುಮ, ನಿಂಬೆಹಣ್ಣು, ದೀಪ ಇಟ್ಟು ಪೂಜೆ ಮಾಡಲಾಗಿದೆ. ತಮಾಷೆಗೆ ಮಾಡಿದ್ದಾರಾ ಅಥವಾ ಉದ್ದೇಶ ಪೂರ್ವಕವಾಗಿ ಮಾಡಿದ್ದಾರಾ ಎಂಬುವುದು ತಿಳಿದುಬಂದಿಲ್ಲ. ಸದ್ಯ ಇದರಿಂದಾಗಿ ಗ್ರಾಮಸ್ಥರು ಗಾಬರಿಯಾಗಿದ್ದಾರೆ. ಪೊಲೀಸ್​​ ತನಿಖೆಗೆ ಜನರು ಒತ್ತಾಯಿಸಿದ್ದಾರೆ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ…

Read More

ಆಧಾರ್​​ ಕಾರ್ಡ್​​ನಲ್ಲಿ ಹೆಸರು ಬದಲಾಯಿಸಬೇಕೆ? ಹಾಗಿದ್ರೆ ನೀವು ಈ ನಿಯಮ ಪಾಲಿಸಲೇ ಬೇಕು – Kannada News | Aadhaar Name Change: Online, Offline, Gazette Process Details​​

ಆಧಾರ್​​ ಕಾರ್ಡ್​​ನಲ್ಲಿ ಹೆಸರು ಬದಲಾವಣೆ. ಬೆಂಗಳೂರು, ಜನವರಿ 01: ಅಕ್ಷರ ದೋಷ, ಮದುವೆಯಾದ ಬಳಿಕ ಅಥವಾ ಇನ್ಯಾವುದೋ ಕಾರಣಕ್ಕೆ ಇಂದು ಬಹುತೇಕ ಎಲ್ಲ ವ್ಯವಹಾರಗಳಿಗೆ ಅಗತ್ಯವಾದ ಆಧಾರ್​​ ಕಾರ್ಡ್​​ನಲ್ಲಿ ಹೆಸರು ಬದಲಾವಣೆ ಮಾಡಲೇ ಬೇಕಾಗುತ್ತದೆ. ಸಣ್ಣಪುಟ್ಟ ಬದಲಾವಣೆಯನ್ನು ಆನ್​​ಲೈನ್​​ ಮತ್ತು ಆಫ್​​ಲೈನ್​​ ಮೂಲಕ ಮಾಡಬಹುದಾಗಿದ್ದರೆ, ದೊಡ್ಡ ಬದಲಾವಣೆಗಳಿಗೆ ಗೆಜೆಟ್​​ ನೋಟಿಫಿಕೇಶನ್​​ ಪ್ರಕ್ರಿಯೆ ಪಾಲಿಸಲೇ ಬೇಕಾಗುತ್ತದೆ. ಆಧಾರ್​​ನಲ್ಲಿ ಹೆಸರು ಬದಲಾವಣೆ ಮಾಡಲು ಇರುವ ಪ್ರಮುಖ 3 ವಿಧಾನಗಳ ಬಗ್ಗೆ ಹಂತಗಳ ಸಮೇತವಾಗಿ ವಿವರಣೆ ಇಲ್ಲಿದೆ. 1. ಆನ್‌ಲೈನ್ ಮೂಲಕ…

Read More

ಪ್ರಭಾಸ್ ಸಿನಿಮಾ ನಿರ್ದೇಶಕನ ಸಂಭಾವನೆ ಎಷ್ಟು ಕೋಟಿ ಗೊತ್ತೆ? – Kannada News | Prabhas starrer The Raja Saab movie director get 18 crore rs as remuneration

ಪ್ರಭಾಸ್ (Prabhas) ಭಾರತದ ಟಾಪ್ ಪ್ಯಾನ್ ಇಂಡಿಯಾ (Pan India) ನಟ. ಅವರ ಸಂಭಾವನೆ ನೂರು ಕೋಟಿಯನ್ನೂ ದಾಟಿದೆ. ಕೆಲ ಸಿನಿಮಾಗಳಿಗೆ 150 ಕೋಟಿ ರೂಪಾಯಿ ಸಂಭಾವನೆಯನ್ನೂ ಸಹ ಪ್ರಭಾಸ್ ಪಡೆಯುತ್ತಿದ್ದಾರೆ. ಅವರಿಗಿರುವ ಮಾರುಕಟ್ಟೆಗೆ ತಕ್ಕಂತೆ ಸಂಭಾವನೆ ನಿಗದಿ ಪಡಿಸಿಕೊಂಡಿದ್ದಾರೆ. ಆದರೆ ಅವರಿಂದಾಗಿ ಅವರ ಸಿನಿಮಾಗಳ ತಂತ್ರಜ್ಞರ ಸಂಭಾವನೆಯೂ ಏರಿಕೆ ಆಗಿದೆ. ಇದೀಗ ಪ್ರಭಾಸ್ ‘ದಿ ರಾಜಾ ಸಾಬ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ನಿರ್ದೇಶಕನ ಸಂಭಾವನೆ ಎಷ್ಟು ಕೋಟಿ ಗೊತ್ತೆ? ಆ ಸಂಭಾವನೆ ಮೊತ್ತದಲ್ಲಿ ನಾಲ್ಕೈದು…

Read More

ಹೊಸ ವರ್ಷದಂದು ಬಿಎಂಟಿಸಿಗೆ ಭರ್ಜರಿ ಆದಾಯ: ನಿನ್ನೆ ಒಂದೇ ದಿನ ಗಳಿಸಿದ್ದೆಷ್ಟು ಗೊತ್ತಾ? – Kannada News | Bengaluru New Year Bus Surge: BMTC Earns 10 Lakh with Special Services

ಬೆಂಗಳೂರು, ಜನವರಿ 1: 2025ಕ್ಕೆ ಗುಡ್ ಬೈ ಹೇಳಿ 2026ರನ್ನು ಜನರು ಅದ್ಧೂರಿಯಾಗಿ ವೆಲ್​ಕಂ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಭ್ರಮಾಚರಣೆ ಜೋರಾಗಿತ್ತು. ಹೊಸ ವರ್ಷದ (new year) ಸಂಭ್ರಮಾಚರಣೆಗೆ ಅನುಕೂಲವಾಗುವಂತೆ ಬಿಎಂಟಿಸಿಯಿಂದ (BMTC) ಹೆಚ್ಚುವರಿ ಬಸ್​ ಸೇವೆ ಒದಗಿಸಲಾಗಿತ್ತು. ಹೀಗಾಗಿ ಬಿಎಂಟಿಸಿ ಭಾರಿ ಆದಾಯ ಗಳಿಸಿದೆ. ನಿನ್ನೆ (ಬುಧವಾರ) ಒಂದೇ ದಿನ ಬಿಎಂಟಿಸಿಗೆ ಬರೋಬ್ಬರಿ 10 ಲಕ್ಷ ರೂ ಆದಾಯ ಹರಿದುಬಂದಿದೆ. ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಹೇಳಿದ್ದಿಷ್ಟು  ಈ ಬಗ್ಗೆ ಬಿಎಂಟಿಸಿ…

Read More

Holidays Calendar 2026: 2026ರಲ್ಲಿ ಪ್ರವಾಸ ಪ್ರಿಯರಿಗೆ ಸಿಗಲಿವೆ ಸಾಲು ಸಾಲು ರಜೆಗಳು; ಸಂಪೂರ್ಣ ವಿವರ ಇಲ್ಲಿದೆ – Kannada News | Holidays Calendar 2026 : Plan Long Weekends and Vacations Smartly!

ಹೊಸ ವರ್ಷದ ಆಚರಣೆ ಆರಂಭವಾಗಿದೆ. ಹೊಸ ವರ್ಷದ ಆಚರಣೆಗಳು ಮಾತ್ರವಲ್ಲ, ಮುಂಬರುವ ರಜಾದಿನಗಳ ಬಗ್ಗೆಯೂ ಉತ್ಸಾಹ ಹೆಚ್ಚುತ್ತಿದೆ. ಏಕೆಂದರೆ ಜನವರಿ ತಿಂಗಳ ಮೊದಲ ವಾರದಿಂದ ಅನೇಕ ಸರ್ಕಾರಿ ರಜಾದಿನಗಳು, ಹಬ್ಬಗಳು ಮತ್ತು ರಾಷ್ಟ್ರೀಯ ದಿನಗಳು ಇರುತ್ತವೆ. ಇದು ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಖುಷಿಯ ವಿಚಾರ. 2026 ಹೊಸ ವರ್ಷದೊಂದಿಗೆ ಸ್ವಾಗತಿಸುವುದರಿಂದ ಹಿಡಿದು ಡಿಸೆಂಬರ್​ ತಿಂಗಳನ್ನು ಕೊನೆಗೊಳಿಸುವವರೆಗೆ.. ಪ್ರತೀ ತಿಂಗಳು ವಿರಾಮ ತೆಗೆದುಕೊಂಡು ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಈ ವರ್ಷ ಎಷ್ಟು ರಜೆಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ….

Read More

Chanakya Niti: 2026 ರಲ್ಲಿ ಯಶಸ್ಸು ನಿಮ್ಮದಾಗಲು ಆಚಾರ್ಯ ಚಾಣಕ್ಯರ ಈ ಸಲಹೆಗಳನ್ನು ಅನುಸರಿಸಿ – Kannada News | Chanakya Niti: If you want success, follow these tips from Acharya Chanakya

ಪ್ರತಿಯೊಬ್ಬರೂ ಜೀವನದಲ್ಲಿ ಪ್ರಗತಿ, ಯಶಸ್ಸನ್ನು (success) ಸಾಧಿಸುವ ಓಟದಲ್ಲಿರುತ್ತಾರೆ. ಈ ಪ್ರಯಾಣದಲ್ಲಿ, ಕೆಲವರು ಛಲದಿಂದ ಮುಂದೆ ಸಾಗಿದರೆ, ಇನ್ನೂ ಕೆಲವರು ತಾವು ಇಡುವ ತಪ್ಪು ಹೆಜ್ಜೆಗಳ ಕಾರಣದಿಂದ ಪ್ರಗತಿಯನ್ನು ಸಾಧಿಸದೆ ಹಿಂದೆಯೇ ಉಳಿದುಬಿಡುತ್ತಾರೆ. ಕೆಲವರು ಈ ಸೋಲುಗಳಿಗೆ ತಲೆ ಕೆಡಿಸಿಕೊಳ್ಳದೆ ಹೊಸ ವರ್ಷದ ಸಂದರ್ಭದಲ್ಲಿ ಹೊಸ ಆರಂಭ, ಭರವಸೆಗಳೊಂದಿಗೆ ಯಶಸ್ಸಿನತ್ತ ಹೆಜ್ಜೆ ಇಡಲು ಶ್ರಮಿಸುತ್ತಾರೆ. 2026 ರ ಈ ಹೊಸ ವರ್ಷದಲ್ಲಿ ನೀವು ಸಹ ಜೀವನದಲ್ಲಿ ಯಶಸ್ಸು ಸಾಧಿಸಲು, ಸಂತೋಷದಾಯಕ ಜೀವನವನ್ನು ನಡೆಸಲು ಬಯಸಿದರೆ ಆಚಾರ್ಯ ಚಾಣಕ್ಯರ…

Read More

T20 World Cup 2026: ಟಿ20 ವಿಶ್ವಕಪ್​ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ – Kannada News | T20 World Cup 2026: Australia Squad Announced, Shock Selections and Captain

ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ 2026 ರ ಟಿ20 ವಿಶ್ವಕಪ್‌ಗಾಗಿ (T20 World Cup 2026) ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿದೆ. ನಾಯಕ ಮಿಚೆಲ್ ಮಾರ್ಷ್ (Mitchell Marsh) ನಾಯಕತ್ವದ 15 ಸದಸ್ಯರ ತಂಡವನ್ನು ಮಿನಿ ವಿಶ್ವಸಮರಕ್ಕೆ ಆಯ್ಕೆ ಮಾಡಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, 2025 ರಲ್ಲಿ ಟಿ20 ಮಾದರಿಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ಆಟಗಾರನನ್ನು ಆಯ್ಕೆ ಮಂಡಳಿ ಕೈಬಿಟ್ಟಿದ್ದರೆ, ಇತ್ತ ಕಳೆದ 12 ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ಹೊರಗುಳಿದ ಆಟಗಾರನನ್ನು ಆಯ್ಕೆ ಮಾಡುವ ಮೂಲಕ…

Read More

Video: ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ – Kannada News | Caught on Video: Monkey Bites Elderly Woman in Delhi Neighbourhood

ನವದೆಹಲಿ, ಡಿಸೆಂಬರ್ 31: ದೆಹಲಿಯಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಅಲ್ಲಿನ ಬಾತ್ರಾ ಕಾಲೋನಿಯಲ್ಲಿ ಮನೆಯ ಎದುರು ಕುಳಿತಿದ್ದ ವೃದ್ಧೆ ಮೇಲೆ ಕೋತಿಗಳು ದಾಳಿ ನಡೆಸಿವೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ವಸತಿ ಕಟ್ಟಡದ ಪ್ರವೇಶದ್ವಾರದ ಬಳಿ ಗೋಡೆಯ ವಿರುದ್ಧ ಇರಿಸಲಾದ ಪ್ಲಾಸ್ಟಿಕ್ ಕುರ್ಚಿಯ ಮೇಲೆ ವೃದ್ಧ ಮಹಿಳೆ ಶಾಂತವಾಗಿ ಕುಳಿತಿರುವುದನ್ನು ವೀಡಿಯೊ ತೋರಿಸುತ್ತದೆ. ಕೋತಿಗಳ ಗುಂಪು ಹತ್ತಿರದ ಓಣಿಯಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು. ಕೆಲವು ಕ್ಷಣಗಳ ನಂತರ, ಒಂದು ಕೋತಿ ಇದ್ದಕ್ಕಿದ್ದಂತೆ ದೂರ ಸರಿದು, ಮಹಿಳೆಯ ಕಡೆಗೆ…

Read More

ಇದೆಂಥಾ ಬದಲಾವಣೆ; ‘ಗಿಲ್ಲಿ ಕಪ್ ಗೆಲ್ಲಬಹುದು’ ಎಂದು ಹಾಡಿ ಹೊಗಳಿದ ಮಾಳು – Kannada News | Malu Nipanal’s U Turn! Now Says Gilli Can Win The Bigg Boss Kannada 12 Cup

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಮೂರು ತಿಂಗಳು ಇದ್ದ ಮಾಳು ನಿಪನಾಳ ಅವರು ಎಲಿಮಿನೇಟ್ ಆಗಿ ಹೊರ ಬಂದರು. ಅವರು ಈಗ ಊರಿಗೆ ತೆರಳಿದ್ದಾರೆ. ಅಲ್ಲಿಯೂ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಅವರಿಗೆ ಈಗ ತಪ್ಪಿನ ಅರಿವಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಮೊದಲು ಯಾರು ಗೆದ್ದರೂ ಒಪ್ಪಿಕೊಳ್ಳಲ್ಲ ಎನ್ನುತ್ತಿದ್ದ ಅವರು ಈಗ, ‘ಗಿಲ್ಲಿ ಕಪ್ ಗೆಲ್ಲಬಹುದು’ ಎಂದು ಹೇಳಿದ್ದಾರೆ. ಅವರ ಹೇಳಿಕೆ ಅಚ್ಚರಿ ಮೂಡಿಸಿದೆ. ಈ ಮೊದಲು ಟಿವಿ9 ಕನ್ನಡದ ಜೊತೆ ಮಾತನಾಡಿದ್ದ…

Read More