ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ: ಕಾಂಗ್ರೆಸ್​​ ಭವನಕ್ಕೆ ಜಮೀನು, ಬಿ-ಖಾತಾದಾರರಿಗೆ ಜಾಮೂನು – Kannada News | Karnataka Cabinet Meeting Decisions: Government Grants Land for Congress Bhavan in Tumakuru and Raichur

ಬೆಂಗಳೂರು, ಜನವರಿ 08: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ತುಮಕೂರು ಮತ್ತು ರಾಯಚೂರಿನಲ್ಲಿ ಕಾಂಗ್ರೆಸ್​​ ಭವನ ಟ್ರಸ್ಟ್​​ಗೆ ಜಾಗ ನೀಡಲು ಸಂಪುಟ ಒಪ್ಪಿದ್ದು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ರಮ ಪ್ರಾಧಿಕಾರದ ಅನುಮೋದನೆ ಪಡೆಯದೆ ರಚಿಸಿರುವ ಬಡಾವಣೆಗಳಲ್ಲಿನ ‘ಬಿ-ಖಾತಾ” ನಿವೇಶನ/ಕಟ್ಟಡ/ಅಪಾರ್ಟ್‌ಮೆಂಟ್/ಫ್ಲಾಟ್‌ಗಳಿಗೆ ‘ಎ-ಖಾತಾ’ ನೀಡಲೂ ಒಪ್ಪಿಗೆ ಸೂಚಿಸಿದೆ.

ಸಚಿವ ಸಂಪುಟ ಸಭೆಯ ತೀರ್ಮಾನಗಳು

  • KSDL ಬೆಂಗಳೂರು ಸಂಕೀರ್ಣಕ್ಕೆ 17.70 ಕೋಟಿ ಮೊತ್ತದ ಸಾಬೂನು ತಯಾರಿಸುವ ಯಂತ್ರ ಖರೀದಿ
  • ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 24.96 ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯ 50 TPD ಬಯೋ ಸಿಎನ್​ಜಿ ಘಟಕ ಸ್ಥಾಪನೆ
  • KKRDB ಅನುದಾನದಿಂದ ಕಲಬುರಗಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣ
  • KKRDB ಅನುದಾನದಿಂದ ಕಲಬುರಗಿಯಲ್ಲಿ 10 ಕೋಟಿ ವೆಚ್ಚದಲ್ಲಿ ಪ್ರಾದೇಶಿಕ ಸಹಕಾರ ಭವನ
  • 127.40 ಕೋಟಿ ಅಂದಾಜು ಮೊತ್ತದಲ್ಲಿ PM-ABHIM ಯೋಜನೆಯಡಿ 2024-26ನೇ ಸಾಲಿನಲ್ಲಿ ರಾಜ್ಯಾದ್ಯಂತ 196 SC-AAM (Rural Health and Wellness Centre) ಸ್ಥಾಪನೆ
  • 24 ಕೋಟಿ ರೂ. ಅಂದಾಜು ಮೊತ್ತದಲ್ಲಿ ಬೆಂಗಳೂರಿನ ಜಯನಗರದಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ 2ನೇ ಹಂತದ ಕಟ್ಟಡ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ
  • 40 ಕೋಟಿ ರೂ. ಅಂದಾಜು ಮೊತ್ತದಲ್ಲಿ ಚಿಕ್ಕಬಳ್ಳಾಪುರದ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನೂತನ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ಅವಶ್ಯವಿರುವ ಯಂತ್ರೋಪಕರಣ ಮತ್ತು ಪೀಠೋಪಕರಣ ಖರೀದಿ
  • ಹೊಳೆನರಸೀಪುರ ಪಟ್ಟಣದಲ್ಲಿ ತಾಲೂಕು ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಯ 12.30 ಕೋಟಿ ರೂ. ಪರಿಷ್ಕೃತ ಮೊತ್ತಕ್ಕೆ ಅನುಮೋದನೆ
  • ಚಾಮರಾಜನಗರ ಜಿಲ್ಲೆಯಲ್ಲಿ166 ಗ್ರಾಮಗಳ ಬಹುಗ್ರಾಮ ಕುಡಿಯುವ ಸರಬರಾಜು ನೀರು ಯೋಜನೆಯ 3 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಮಗಾರಿ 33.04 ಕೋಟಿ ಮೊತ್ತದಲ್ಲಿ ಅನುಷ್ಠಾನ
  • ಹಳಿಯಾಳ ಪಟ್ಟಣಕ್ಕ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯಡಿ ನಿರ್ಮಿಸಲಾಗಿರುವ ವಿವಿಧ ಘಟಕಗಳ 5 ವರ್ಷಗಳ ನಿರ್ವಹಣೆ ಮತ್ತು ದುರಸ್ತಿ ಕಾಮಗಾರಿಯನ್ನು 10.60 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ
  • ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಮಹಾತ್ಮಾ ಗಾಂಧಿ, ఇంದಿರಾ ಗಾಂಧಿ, ಜವಾಹರಲಾಲ್ ನೆಹರು ಮತ್ತು ರಾಜೀವ್ ಗಾಂಧಿ ಪುತ್ಥಳಿಗಳನ್ನು ಸ್ಥಾಪಿಸಲು ಅನುಮೋದನೆ
  • ಲೋಕೋಪಯೋಗಿ ಇಲಾಖೆಯ ಮೂಲಕ 70.70 ಕೋಟಿ ವೆಚ್ಚದಲ್ಲಿ ಮಂಡ್ಯದ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆಡಳಿತ ಭವನ ನಿರ್ಮಾಣ
  • 11.03 ಕೋಟಿ ವೆಚ್ಚದಲ್ಲಿಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದುಬ್ಬನಶಶಿಯ ಮತ್ತು ಗಂಗೆಕೊಳ್ಳದ ಕಡಲ ತೀರದಲ್ಲಿ ಸಮುದ್ರ ಕೊರೆತ ಪ್ರತಿಬಂಧಕ ಕಾಮಗಾರಿಯ ಪರಿಷ್ಕೃತ ಅಂದಾಜಿಗೆ ಅನುಮೋದನೆ
  • ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಬಾಳೆಪುಣಿ ಗ್ರಾಮದ ಸ.ನಂ. 87/4ರಲ್ಲಿ 5 ಎಕರೆ ಜಮೀನನ್ನು ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚರಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗಕ್ಕೆ ಮಂಜೂರಿಗೆ ಒಪ್ಪಿಗೆ

ಇದನ್ನೂ ಓದಿ: ಮೃತ IAS ಅಧಿಕಾರಿ ಮಹಾಂತೇಶ್‌ ಬೀಳಗಿ ಪುತ್ರಿಗೆ ಅನುಕಂಪದ ನೌಕರಿ ನೀಡಲು ಸಂಪುಟ ಒಪ್ಪಿಗೆ, ಯಾವ ಹುದ್ದೆ?

ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಭೂಮಿ ಮಂಜೂರು

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಲ್ಲುಕೋಟೆ ಗ್ರಾಮದ ಸ.ನಂ.49 ರಲ್ಲಿ 7.5 ಗುಂಟೆ ಜಮೀನು ಮತ್ತು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಸಿರವಾರ ಸೀಮಾದಲ್ಲಿ 10 ಗುಂಟೆ ಜಮೀನನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಕಾಂಗ್ರೆಸ್ ಭವನ ಟ್ರಸ್ಟ್, ಬೆಂಗಳೂರಿಗೆ ಮಂಜೂರು ಮಾಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಸನ್ನಡತೆ ಆಧಾರದಲ್ಲಿ 33 ಕೈದಿಗಳಿಗೆ ಬಿಡುಗಡೆ ಭಾಗ್ಯ

ಸನ್ನಡತೆ ಆಧಾರದ ಮೇಲೆ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 33 ಜೀವಾವಧಿ ಶಿಕ್ಷಾ ಬಂಧಿಗಳ ಅವಧಿಪೂರ್ವ ಬಿಡುಗಡೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇಬ್ಬರು ಶಿಕ್ಷಾ ಬಂಧಿಗಳ ಬಿಡುಗಡೆಗೆ ಕೇಂದ್ರ ಗೃಹ ಇಲಾಖೆ ಅನುಮತಿ ಪಡೆಯಲು ನಿರ್ಧರಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:59 pm, Thu, 8 January 26

Source link

ಸಾವನ್ನಪ್ಪಿದ ಭಿಕ್ಷುಕನ ಬ್ಯಾಗ್​​ನಲ್ಲಿತ್ತು 4.5 ಲಕ್ಷ ರೂ. ವಿದೇಶಿ ಕರೆನ್ಸಿ – Kannada News | Over 4 lakhs banned and foreign currency found in Kerala Beggars Bag after death

ಆಲಪ್ಪುಳ, ಜನವರಿ 8: ಕೇರಳದ ರಸ್ತೆ ಅಪಘಾತದ ನಂತರ ಸಾವನ್ನಪ್ಪಿದ ಭಿಕ್ಷುಕನೊಬ್ಬನ ಬಳಿ 4.5 ಲಕ್ಷ ರೂಪಾಯಿಗೂ ಹೆಚ್ಚು ಹಣ ಇದ್ದುದು ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿಯ ಗುರುತನ್ನು ಪತ್ತೆಹಚ್ಚಲು ಪೊಲೀಸರು ಆತನ ಬ್ಯಾಗ್ ಪರಿಶೀಲಿಸಿದರು. ಈ ವೇಳೆ ಅಲ್ಲಿದ್ದ ಭಾರೀ ಪ್ರಮಾಣದ ವಿದೇಶಿ ಕರೆನ್ಸಿಯನ್ನು ಕಂಡು ಆಲಪ್ಪುಳ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ಆಘಾತವಾಗಿದೆ. ಚಾರುಮ್ಮೂಟ್ ಮತ್ತು ಆಲಪ್ಪುಳ ಹತ್ತಿರದ ಪ್ರದೇಶಗಳಲ್ಲಿ ಪರಿಚಿತ ವ್ಯಕ್ತಿಯಾಗಿದ್ದ ಭಿಕ್ಷುಕನಿಗೆ (Beggar) ಸೇರಿದ ಬ್ಯಾಗ್​​ನಿಂದ ಲಕ್ಷಾಂತರ ರೂ ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಸೋಮವಾರ ರಾತ್ರಿ ಭಿಕ್ಷುಕ ಅಪಘಾತಕ್ಕೀಡಾದಾಗ ಈ ಘಟನೆ ಸಂಭವಿಸಿದೆ. ಸ್ಥಳೀಯ ನಿವಾಸಿಗಳು ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಯಾರೊಂದಿಗೂ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳದೆ ಆ ವ್ಯಕ್ತಿ ತಾನೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಟುಹೋದ. ಆಸ್ಪತ್ರೆ ದಾಖಲೆಗಳ ಪ್ರಕಾರ, ಆ ವ್ಯಕ್ತಿ ತನ್ನ ಹೆಸರು ಅನಿಲ್ ಕಿಶೋರ್ ಎಂದು ಹೇಳಿದ್ದ.

ಮಂಗಳವಾರ ಬೆಳಿಗ್ಗೆ ಅಂಗಡಿಯೊಂದರ ಹೊರಗೆ ಅನಿಲ್ ಕಿಶೋರ್ ಮೃತಪಟ್ಟಿರುವುದು ಕಂಡುಬಂದಿದೆ. ಆತನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಆ ಶವದ ಬಳಿ ಸಿಕ್ಕಿದ ಬ್ಯಾಗ್ ಅನ್ನು ಪರಿಶೀಲನೆಗಾಗಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲಾಯಿತು.

ಇದನ್ನೂ ಓದಿ: 14 ವರ್ಷದ ಬಾಲಕಿ ಮೇಲೆ ಚಲಿಸುವ ಕಾರಿನೊಳಗೆ ಯೂಟ್ಯೂಬರ್, ಪೊಲೀಸ್ ಸೇರಿ ಅತ್ಯಾಚಾರ

ಸ್ಥಳೀಯ ಪಂಚಾಯತ್ ಸದಸ್ಯ ಫಿಲಿಪ್ ಉಮ್ಮನ್ ಅವರ ಸಮ್ಮುಖದಲ್ಲಿ ಬ್ಯಾಗ್ ತೆರೆದಾಗ ಪೊಲೀಸ್ ಅಧಿಕಾರಿಗಳು ದಿಗ್ಭ್ರಮೆಗೊಂಡರು. ಆ ಬ್ಯಾಗ್​​ನಲ್ಲಿ ಬ್ಯಾನ್ ಆಗಿರುವ ನೋಟುಗಳು ಮತ್ತು ವಿದೇಶಿ ಕರೆನ್ಸಿಗಳಿದ್ದವು. ಆ ಬ್ಯಾಗ್​​ನಲ್ಲಿ ಒಟ್ಟು 4.5 ಲಕ್ಷ ರೂ.ಗಳಿಗೂ ಹೆಚ್ಚು ಹಣ ಸಿಕ್ಕಿತು. ಆ ಹಣವನ್ನು ಒಂದು ಹಳೆಯ ಪ್ಲಾಸ್ಟಿಕ್ ಬಾಕ್ಸ್​ ಒಳಗೆ ಹಾಕಿ, ಆ ಬಾಕ್ಸನ್ನು ಬ್ಯಾಗ್​​ನಲ್ಲಿ ಇಟ್ಟುಕೊಂಡಿದ್ದ. ನಗದು ಹಣದಲ್ಲಿ ನಿಷೇಧಿತ 2,000 ರೂ. ನೋಟುಗಳು ಮತ್ತು ವಿದೇಶಿ ಕರೆನ್ಸಿ ಕೂಡ ಸೇರಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಅನಿಲ್ ಕಿಶೋರ್ ಪ್ರತಿದಿನ ಹಣಕ್ಕಾಗಿ ಭಿಕ್ಷೆ ಬೇಡುತ್ತಿದ್ದ. ಆಹಾರಕ್ಕಾಗಿ ಎಲ್ಲರ ಬಳಿ ಹಣ ಕೇಳುತ್ತಿದ್ದ. ಊಟಕ್ಕೇ ಹಣವಿಲ್ಲವೆಂದು ಹೇಳುತ್ತಿದ್ದ ಆ ಭಿಕ್ಷುಕ ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಬ್ಯಾಗ್​​ನಲ್ಲಿ ಇಟ್ಟುಕೊಂಡಿದ್ದಾನೆಂದು ಯಾರಿಗೂ ತಿಳಿದಿರಲಿಲ್ಲ. ಈ ವಿಷಯ ಕೇಳಿ ಸುತ್ತಲಿನ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ಆಗಷ್ಟೇ ಹುಟ್ಟಿದ ಮಗುವನ್ನು ಕಸದ ತೊಟ್ಟಿಗೆ ಎಸೆದ ತಾಯಿ!

ಈ ಹಣದ ಮೂಲವೇನು? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಆತನ ಕುಟುಂಬದ ಯಾವುದೇ ಸದಸ್ಯರು ಅದನ್ನು ಪಡೆಯಲು ಮುಂದೆ ಬರುತ್ತಾರೋ ಇಲ್ಲವೋ ಎಂಬುದನ್ನು ನೋಡಿಕೊಂಡು, ನಂತರ ಆ ಹಣವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಬಳಿಕ ಈಗ ‘ಪರಾಶಕ್ತಿ’ಗೂ ಸಿಬಿಎಫ್​​ಸಿ ಸಂಕಟ – Kannada News | CBFC suggests 23 cuts to Sivakarthikeyan’s Parashakti movie

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ನಾಳೆ (ಜನವರಿ 09) ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್​​ಸಿ ಪ್ರಮಾಣ ಪತ್ರ ಸಿಗದ ಕಾರಣ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ‘ಜನ ನಾಯಗನ್’ ಎದುರಾಗಿ ಶಿವಕಾರ್ತಿಕೇಯನ್, ಶ್ರೀಲೀಲಾ ನಟನೆಯ ‘ಪರಾಶಕ್ತಿ’ ಸಿನಿಮಾ ಬಿಡುಗಡೆ ಆಗುತ್ತಿತ್ತು. ಆದರೆ ಈಗ ಅದೂ ಸಹ ಸಂಕಷ್ಟದಲ್ಲಿ ಸಿಲುಕಿದೆ. ಸಿನಿಮಾಕ್ಕೆ ಬರೋಬ್ಬರಿ 23 ಕಟ್​​ಗಳನ್ನು ಸಿಬಿಎಫ್​​ಸಿ ಸೂಚಿಸಿದ್ದು, ‘ಪರಾಶಕ್ತಿ’ ನಿರ್ಮಾಪಕರು ಸಿಬಿಎಫ್​​ಸಿ ವಿರುದ್ಧ ನ್ಯಾಯಾಲಯ ಮೊರೆ ಹೋಗುವ ಸಾಧ್ಯತೆ ಇದೆ.

ಶಿವಕಾರ್ತಿಕೇಯನ್ ಮತ್ತು ಶ್ರೀಲೀಲಾ ನಟಿಸಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಸುಧಾ ಕೊಂಗರ ನಿರ್ದೇಶನ ಮಾಡಿರುವ ‘ಪರಾಶಕ್ತಿ’ ಸಿನಿಮಾ ತಮಿಳುನಾಡಿನಲ್ಲಿ ನಡೆದ ಹಿಂದಿ ವಿರೋಧಿ ಚಳವಳಿಯ ಕತೆಯನ್ನು ಹೊಂದಿದ್ದು, ಸಿನಿಮಾ ಜನವರಿ 10 ರಂದು ಬಿಡುಗಡೆ ಆಗಲಿಕ್ಕಿತ್ತು, ಆದರೆ ಸಿನಿಮಾಕ್ಕೆ ಇದೀಗ ಸಿಬಿಎಫ್​​ಸಿ ಸಮಸ್ಯೆ ಎದುರಾಗಿದೆ. ವಿಶೇಷವೆಂದರೆ ಜನವರಿ 09 ರಂದು ಬಿಡುಗಡೆ ಆಗಲಿದ್ದ ‘ಜನ ನಾಯಗನ್’ ಸಿನಿಮಾಕ್ಕೂ ಸಿಬಿಎಫ್​​ಸಿ ಸಮಸ್ಯೆ ಎದುರಾಗಿದೆ. ಈಗ ‘ಪರಾಶಕ್ತಿ’ ಸಿನಿಮಾಕ್ಕೂ ಸಿಬಿಎಫ್​​ಸಿ ಕಠಿಣ ನಿಯಮಗಳನ್ನು ಹೇರಿದೆ.

‘ಪರಾಶಕ್ತಿ’ ಸಿನಿಮಾಕ್ಕೆ ಸಿಬಿಎಫ್​​ಸಿ ಬರೋಬ್ಬರಿ 23 ಕಟ್​​ಗಳನ್ನು ಸೂಚಿಸಿದೆಯಂತೆ. ಇದು ಸಿನಿಮಾ ತಂಡಕ್ಕೆ ಆಘಾತ ತಂದಿದೆ. ಹಿಂದಿ ವಿರೋಧಿ ಚಳವಳಿಯ ಬಗ್ಗೆ ಸಿನಿಮಾ ಆಗಿರುವ ಕಾರಣ ಸಹಜವಾಗಿಯೇ ಸಿನಿಮಾನಲ್ಲಿ ರಾಜಕೀಯ ಅಂಶವೂ ಇದ್ದು, ಇದು ಸಿಬಿಎಫ್​​ಸಿಯ ಅವಕೃಪೆಗೆ ಕಾರಣವಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ‘ಸೂರರೈ ಪೋಟ್ರು’ ಸಿನಿಮಾ ನಿರ್ದೇಶಿಸಿರುವ ಸುಧಾ ಕೊಂಗರಗೆ ಇದು ಸಹನೀಯವಾಗಿಲ್ಲ ಎನ್ನಲಾಗುತ್ತಿದ್ದು, ಚಿತ್ರತಂಡ ಸಿಬಿಎಫ್​​ಸಿಯ ನಿರ್ಣಯಕ್ಕೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ.

ಇದನ್ನೂ ಓದಿ:ವಿಜಯ್ ಹಿಟ್ ಸಾಂಗ್​​ನ ಕೆಟ್ಟದಾಗಿ ಹಾಡಿ ಟ್ರೋಲ್ ಆದ ಮಮಿತಾ ಬೈಜು

‘ಪರಾಶಕ್ತಿ’ ಸಿನಿಮಾದ ನಿರ್ಮಾಪಕರು ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆಯ ಮುಖಂಡರುಗಳಿಗೆ ಆಪ್ತರಾಗಿದ್ದು, ಡಿಎಂಕೆಗೆ ವಿಪಕ್ಷವಾಗಿ ಉದಯವಾಗುತ್ತಿರುವ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ಗೆ ಎದುರು ರಾಜಕೀಯ ದಾಳವಾಗಿ ‘ಪರಾಶಕ್ತಿ’ ಸಿನಿಮಾ ಬಿಡುಗಡೆ ಮಾಡಲಾಗುತ್ತಿದ್ದೆ ಎಂದೇ ನಂಬಲಾಗಿತ್ತು. ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡದೇ ಇರುವಲ್ಲಿ ಡಿಎಂಕೆಯ ಕೈವಾಡವೂ ಇದೆ ಎನ್ನಲಾಗಿತ್ತು. ಆದರೆ ಈಗ ಸ್ವತಃ ‘ಪರಾಶಕ್ತಿ’ ಸಿನಿಮಾಕ್ಕೂ ಸಹ ಸಿಬಿಎಫ್​​ಸಿ 23 ಕಟ್​​ಗಳನ್ನು ಸೂಚಿಸಿದ್ದು, ಚಿತ್ರತಂಡಕ್ಕೆ ಆಘಾತ ನೀಡಿದೆ.

‘ಪರಾಶಕ್ತಿ’ ಸಿನಿಮಾ ಶಿವಕಾರ್ತಿಕೇಯನ್ ಅವರ 25ನೇ ಸಿನಿಮಾ ಆಗಿದ್ದು, ಶ್ರೀಲೀಲಾಗೆ ಇದು ಮೊದಲ ತಮಿಳು ಸಿನಿಮಾ ಆಗಿದೆ. ಸಿನಿಮಾವನ್ನು 125 ಕೋಟಿ ಬಜೆಟ್​​ನಲ್ಲಿ ನಿರ್ಮಾಣ ಮಾಡಲಾಗಿದ್ದು, ಸಿನಿಮಾದ ಮೇಲೆ ಶಿವಕಾರ್ತಿಕೇಯನ್​​ಗೆ ಭಾರಿ ನಿರೀಕ್ಷೆ ಇತ್ತು. ಆದರೆ ಈಗ ಸಿನಿಮಾದ ಬಿಡುಗಡೆಯೇ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕುಂದಾಪುರದಲ್ಲಿ 5 ಕೋತಿಗಳ ಸಾವು: ಮಲೆನಾಡಲ್ಲಿ ಮಂಗನ ಕಾಯಿಲೆ ಆತಂಕ – Kannada News | Kundapur: Five Monkeys Die, Raising Fears of Monkey Disease in Malnad Region

ಉಡುಪಿ, ಜನವರಿ 08: ಮಲೆನಾಡು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ (Monkeypox virus) ಆತಂಕ ಹೆಚ್ಚುತ್ತಿರುವ ನಡುವೆ ಕುಂದಾಪುರ ತಾಲ್ಲೂಕಿನ ಹೊಸಂಗಡಿ ಭಾಗದಲ್ಲಿ ಮಂಗಗಳ ಮೃತ ದೇಹ ಪತ್ತೆಯಾಗಿದೆ. ಇದರಿಂದ ಕಳೆದ ಒಂದು ವಾರದಲ್ಲಿ ಆ ಪ್ರದೇಶದಲ್ಲಿ ಸಾವನ್ನಪ್ಪಿದ ಮಂಗಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಹಾಗೂ ಅರಣ್ಯ ಇಲಾಖೆ ತೀವ್ರ ನಿಗಾ ವಹಿಸಿ ಸ್ಯಾಂಪಲ್‌ ಕಲೆ ಹಾಕಿದೆ. ಆದರೆ ಇದುವರೆಗೂ ಮಂಗಗಳ ಸಾವಿಗೆ ನಿಖರ ಕಾರಣ ಪತ್ತೆಯಾಗದ ಹಿನ್ನಲೆ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ರಾಜ್ಯದಲ್ಲಿ ಮತ್ತೊಮ್ಮೆ ಮಂಗನ ಕಾಯಿಲೆ ಸದ್ದು ಮಾಡುತ್ತಿದೆ. ಮಲೆನಾಡು ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ ಈ ಕಾಯಿಲೆ ನೆರೆ ಜಿಲ್ಲೆ ಉಡುಪಿಯಲ್ಲೂ ಭೀತಿ ಹುಟ್ಟಿಸಿದೆ. ಮುಖ್ಯವಾಗಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇತ್ತೀಚೆಗೆ ಮಂಗಗಲು ಸಾವನ್ನಪ್ಪಿರುವ ಪ್ರಕರಣಗಳು ಸಹಜವಾಗಿಯೇ ಈ ಭಾಗದ ಜನರಲ್ಲಿ ಆತಂಕವನ್ನು ಹೆಚ್ಚುವಂತೆ ಮಾಡಿದೆ.

ಇದನ್ನೂ ಓದಿ: ಮಂಗನ ಕಾಯಿಲೆ ಭೀತಿ: ಶಿವಮೊಗ್ಗದ ಬಳಿಕ, ಶಿರಸಿಯಲ್ಲೂ ಲ್ಯಾಬ್​​ ಆರಂಭಕ್ಕೆ ನಿರ್ಧಾರ

ಕಳೆದ ದಿನಗಳ ಅಂತರದಲ್ಲಿ ಜಿಲ್ಲೆಯ ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಾರೂರುರಲ್ಲಿ ಐದು ಕೋತಿಗಳು ಸಾವನ್ನಪ್ಪಿದೆ. ಐದರಲ್ಲಿ ನಾಲ್ಕು ಮಂಗಗಳು ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಒಂದು ಮಂಗದ ಶವ ಪರೀಕ್ಷೆ ನಡೆಸಿ ಸ್ಯಾಂಪಲ್‌ ಸಂಗ್ರಹಿಸಿ ಪರಿಶೀಲನೆ ಕಳುಹಿಸುವ ಕೆಲಸವನ್ನು ಜಿಲ್ಲಾ ಆರೋಗ್ಯ ಇಲಾಖೆ ನಡೆಸಿದೆ. ಸದ್ಯ ಕಳೆದ ವರ್ಷದಂತೆ ಇದೇ ಪ್ರದೇಶದಲ್ಲಿ ಐದು ಮಂಗಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.

30 ವರ್ಷಗಳ ಬಳಿಕ ಮಂಗನ ಕಾಯಿಲೆ

ಸದ್ಯ ಹೊಸಂಗಡಿ ಭಾಗದಲ್ಲಿ ಮಂಗಗಳ ಸಾವಿನ ಬಳಿಕ ಮತ್ತೆ ಆತಂಕ ಮನೆ ಮಾಡಿದೆ. 2019ರಲ್ಲಿ ಉಡುಪಿ ಜಿಲ್ಲೆಗೆ ಸುಮಾರು 30 ವರ್ಷಗಳ ಬಳಿಕ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಮಂಗನ ಕಾಯಿಲೆಯ ಅಬ್ಬರಕ್ಕೆ ಕರಾವಳಿ ಮತ್ತು ಮಲೆನಾಡಿನ ಜನ ತತ್ತರಿಸಿ ಹೋಗಿದ್ದರು. ಮಣಿಪಾಲದ ಕೆಎಂಸಿ ಆಸ್ಪತ್ರೆಯೊಂದರಲ್ಲೇ 73 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿತ್ತು. 2019ರಲ್ಲಿ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 12 ಮಂದಿ ಕೆಎಫ್‌ಡಿ ಸೋಂಕಿಗೆ ಬಲಿಯಾಗಿದ್ದು, 344 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಉತ್ತರ ಕನ್ನಡ ಜಿಲ್ಲೆಯ 85 ಮಂದಿಗೆ ಸೋಂಕು ದೃಢಪಟ್ಟು ಮೂವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.

ಉಡುಪಿಯಲ್ಲಿ ಇಬ್ಬರು, ಮೈಸೂರು, ಬೆಳಗಾವಿ, ಚಿಕ್ಕಮಗಳೂರು ಹಾಗೂ ಹಾವೇರಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿತ್ತು. ಕಳೆದ ವರ್ಷವು ಕೂಡ ಓರ್ವ ಮಹಿಳೆ ಮಂಗನ ಕಾಯಿಲೆಯಿಂದ ಮೃತಪಟ್ಟಿರುವ ವಿಚಾರ ಮಾಸುವ ಮುನ್ನವೇ ಮತ್ತೆ ಜಿಲ್ಲೆಯಲ್ಲಿ ಮಂಗಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.

ಮಂಗಗಳ ಸಾವಿಗೆ ಕಾರಣ ತಿಳಿಸದ ಆರೋಗ್ಯ ಇಲಾಖೆ

ಇನ್ನು ಆರೋಗ್ಯ ಇಲಾಖೆ ಸತ್ತ ಮಂಗನ ದೇಹದ ಸ್ಯಾಂಪಲ್‌ ಪಡೆದು ತೆರಳಿದ ಬಳಿಕ ಇದುವರೆಗೂ ಸಾವಿಗೆ ಕಾರಣ ತಿಳಿಸದೆ ಇರುವುದು ಹೊಸಂಗಡಿ ಭಾಗದ ಸ್ಥಳೀಯರ ಆತಂಕ ಹೆಚ್ಚುವಂತೆ ಮಾಡಿದೆ. ಇನ್ನು ಕಾರೂರುನಲ್ಲಿರುವ ನೀರಿನ ಮೂಲದ ಬಳಿಯೇ ಐದು ಮಂಗಳ ಶವ ಪತ್ತೆಯಾಗಿರುವುದು ಮತ್ತು ಪ್ರತಿ ವರ್ಷವು ಕೂಡ ಇದೇ ಪರಿಸರದಲ್ಲಿ ಮಂಗಗಳು ಸಾಯುತ್ತಿರುವುದು ಸ್ಥಳೀಯರಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟು ಹಾಕಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಮತ್ತೆ ವಕ್ಕರಿಸಿದ ಮಂಗನ ಕಾಯಿಲೆ: ಕಾಡಿನಂಚಿನ ಜನರಲ್ಲಿ ಆತಂಕ

ಒಟ್ಟಾರೆಯಾಗಿ ಮಾರಣಾಂತಿಕ ಮಂಗನ ಕಾಯಿಲೇ ಮಲೆನಾಡಿನಲ್ಲಿ ಹೆಚ್ಚುತ್ತಿರುವ ಹಿನ್ನಲೆ ಪಶ್ಚಿಮ ಘಟ್ಟದ ಗಡಿ ಭಾಗದ ಜನರಿಗೆ ಆತಂಕ ಹೆಚ್ಚಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಶೀಘ್ರದಲ್ಲಿ ಮಂಗಗಳ ಸಾವಿಗೆ ನಿಖರ ಕಾರಣದ ಜೊತೆಗೆ ಹೊಸಂಗಡಿ ಸಿದ್ಧಾಪುರ ಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಧಾರವಾಡ ಕವಿವಿಯಲ್ಲಿ ಎಐ ಕ್ರಾಂತಿ: ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಆಧುನಿಕ ಸ್ಪರ್ಶ – Kannada News | Karnataka University Dharwad Embraces AI Revolution, Bringing a Modern Touch to Traditional Courses

ಧಾರವಾಡ, ಜನವರಿ 08: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ (Karnatak University) ಹೊಸದೊಂದು ಕ್ರಾಂತಿಗೆ ಮುಂದಾಗಿದೆ. ಮುಂಚೆಯಿಂದಲೂ ಉನ್ನತ ಶಿಕ್ಷಣ ನೀಡುವಲ್ಲಿ ಸಾಕಷ್ಟು ಹೆಸರು ಮಾಡಿರುವ ಈ ವಿಶ್ವವಿದ್ಯಾಲಯ ಇದೀಗ ಕೃತಕ ಬುದ್ಧಿಮತ್ತೆಯಲ್ಲಿ (AI) ಕ್ರಾಂತಿಯನ್ನು ಮಾಡಲು ನಿರ್ಧರಿಸಿದೆ. ಇತ್ತೀಚಿನ ದಿನಗಳಲ್ಲಿ ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಕಾರಣಕ್ಕೆ ಈ ಕೃತಕ ಬುದ್ಧಿಮತ್ತೆಯನ್ನು ಎಲ್ಲ ಕೋರ್ಸ್​ಗಳಲ್ಲಿ ಕಲಿಸಲು ನಿರ್ಧರಿಸಲಾಗಿದೆ.

ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಆಧುನಿಕ ಸ್ಪರ್ಶ

ಕಾಲಕ್ಕೆ ತಕ್ಕಂತೆ ಶೈಕ್ಷಣಿಕ ಕೋರ್ಸ್‌ಗಳು ಕೂಡ ಬದಲಾಗಬೇಕು. ಅದರಲ್ಲೂ ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಆಧುನಿಕ ಸ್ಪರ್ಶ ನೀಡಬೇಕಿದ್ದು, ಈ ನಿಟ್ಟಿನಲ್ಲಿ ವಿದ್ಯಾಕಾಶಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೆಜ್ಜೆ ಇಡುತ್ತಿದೆ. ಬಿಎ, ಬಿಎಸ್ಸಿ, ಬಿಕಾಂ ನಂತಹ ಸಾಂಪ್ರದಾಯಿಕ ಕೋರ್ಸ್‌ಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ವಿಷಯದ ಕೌಶಲ್ಯ ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ನೀಡಲು ವಿವಿ ಮುಂದಾಗುತ್ತಿದೆ.

ಇದನ್ನೂ ಓದಿ: ನೂರಾರು ಎಕರೆಯ ಧಾರವಾಡ ಕರ್ನಾಟಕ ವಿವಿ ಜಮೀನು ರಕ್ಷಣೆಗೆ ದಿಟ್ಟ ಹೆಜ್ಜೆ: ಕುಲಪತಿ ನಡೆಗೆ ಮೆಚ್ಚುಗೆ

ಇನ್ನು ಬಿಸಿಎ ಎಐ ಅಥವಾ ಬಿಸಿಎ ಸೈಬರ್‌ ಸೆಕ್ಯುರಿಟಿ ಅಥವಾ ಬಿಸಿಎ ಡೇಟಾ ಸೈನ್ಸ್‌, ಮಿಷನ್‌ ಲರ್ನಿಂಗ್‌ ಅಂತಹ ಕೋರ್ಸ್‌ಗಳನ್ನು ಪರಿಚಯಿಸುವ ಚಿಂತನೆ ನಡೆಸಿದೆ. ಈ ಕೋರ್ಸ್‌ಗಳಿಗೆ ಆಧುನಿಕ ಸ್ಪರ್ಶ ನೀಡಲು ಅಧ್ಯಾಪಕರಿಗೆ ವಿಶೇಷ ತರಬೇತಿ ನೀಡುವ ಮೂಲಕ ಕವಿವಿ ವಿದ್ಯಾರ್ಥಿಗಳಿಗೆ ಪದವಿ ಮುಗಿದ ತಕ್ಷಣ ಗೌರವಯುತ ಉದ್ಯೋಗಗಳು ಸಿಗುವಂತೆ ನೋಡಿಕೊಳ್ಳುವ ಗುರಿಯನ್ನು ಕೂಡ ಇಟ್ಟುಕೊಳ್ಳಲಾಗಿದೆ‌. ಇತ್ತೀಚಿಗಷ್ಟೇ ಅಧಿಕಾರ ವಹಿಸಿಕೊಂಡಿರುವ ಕುಲಪತಿ ಪ್ರೊ. ಎ.ಎಂ. ಖಾನ್, ಕರ್ನಾಟಕ ವಿಶ್ವವಿದ್ಯಾಲಯದ ಬಹುತೇಕ ಕೋರ್ಸ್​ಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೋರ್ಸ್​​ನ್ನು ಕೂಡ ಸೇರಿಸಲು ನಿರ್ಧರಿಸಿದ್ದಾರೆ.

ಕುಲಪತಿ ನಿರ್ಧಾರಕ್ಕೆ ಮೆಚ್ಚುಗೆ

ಇತ್ತೀಚಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನಿವಾರ್ಯವೆನ್ನುವಂತಾಗಿದೆ. ಎಲ್ಲಾ ಕ್ಷೇತ್ರದಲ್ಲಿಯೂ ಎಐ ತನ್ನ ಛಾಪನ್ನು ಮೂಡಿಸುತ್ತಾ ಸಾಗುತ್ತಿದೆ. ಒಂದು ವೇಳೆ ವಿದ್ಯಾರ್ಥಿಗಳು ಹಿಂದಿನ ವರ್ಷಗಳಂತೆ ಈಗಲೂ ಅದೇ ಹಳೆಯ ವಿಷಯಗಳನ್ನು ವ್ಯಾಸಂಗ ಮಾಡಿದರೆ ಅದರಿಂದ ಯಾವುದೇ ಪ್ರಯೋಜನವಾಗೋದಿಲ್ಲ ಅಂತಾ ಅರಿತಿರುವ ಕುಲಪತಿಗಳು ಇದೀಗ ಹೊಸದೊಂದು ಹೆಜ್ಜೆಯನ್ನು ಇಡಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: Guest Lecturer Jobs: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕಾತಿ; ಅರ್ಜಿ ಸಲ್ಲಿಸುವುದು ಹೇಗೆ?

ತಂತ್ರಜ್ಞಾನ ಬೆಳೆದಂತೆಲ್ಲಾ ಬದಲಾವಣೆ ಆಗಲೇಬೇಕು. ಅದಕ್ಕಾಗಿ ಎಐ ತಂತ್ರಜ್ಞಾನದ ಬಗ್ಗೆ ಜ್ಞಾನ ಇರುವ‌ ನುರಿತ ಪ್ರಾಧ್ಯಾಪಕರಿಂದ ಈ ಕೋರ್ಸ್​​​ ಪಾಠ ವಿದ್ಯಾರ್ಥಿಗಳಿಗೆ ಮಾಡಬೇಕಿದೆ. ಅದಕ್ಕಾಗಿ ತರಬೇತಿ‌ ನೀಡಿ ಪ್ರಾಧ್ಯಾಪಕರಿಗೆ ಎಐ ಕಲಿಸುವ ಜವಾಬ್ದಾರಿಯನ್ನು ಕೂಡ ನೀಡಬೇಕಿದೆ.

ಒಟ್ಟಿನಲ್ಲಿ ವಿದ್ಯಾಕಾಶಿ ಧಾರವಾಡದ ಕರ್ನಾಟಕ ವಿವಿ ಹೊಸದೊಂದು‌ ಹೆಜ್ಜೆ ಇಡಲು ಹೊರಟಿದೆ. ಅದಕ್ಕೆ ರಾಜ್ಯ ಸರ್ಕಾರ ಕೂಡ ಬೆಂಬಲಿಸಿದೆ. ಇದು ಕರ್ನಾಟಕ ವಿವಿ ಮತ್ತು ಈ ಭಾಗದ ವಿದ್ಯಾರ್ಥಿಗಳಿಗೆ ಸಂತಸದ ವಿಷಯವೇ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗೀತು ಮೋಹನ್​ದಾಸ್ ‘ಟಾಕ್ಸಿಕ್’ ಚಿತ್ರಿಸಿದ್ದಾರೆ ಅಂತ ನಂಬೋಕೆ ಆಗಲ್ಲ: ಆರ್​ಜಿವಿ ನೇರ ಮಾತು – Kannada News | Ram Gopal Varma can not believe Geethu Mohandas shot Toxic teaser ft Yash

ಟೀಸರ್ ರಿಲೀಸ್ ಆದ ಬಳಿಕ ‘ಟಾಕ್ಸಿಕ್’ (Toxic) ಸಿನಿಮಾದ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ. ಯಶ್ ಅವರು ಈ ಸಿನಿಮಾದಲ್ಲಿ ತುಂಬಾ ರಗಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹಾಲಿವುಡ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ವಿಶ್ವಾದ್ಯಂತ ಇರುವ ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ನಿರ್ದೇಶಕರು ಕೂಡ ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್, ಸಂದೀಪ್ ರೆಡ್ಡಿ ವಂಗಾ ಮುಂತಾದವರು ಭೇಷ್ ಎಂದಿದ್ದಾರೆ. ಅದೇ ರೀತಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಕೂಡ ‘ಟಾಕ್ಸಿಕ್’ ಸಿನಿಮಾದ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ತಮ್ಮದೇ ರೀತಿಯಲ್ಲಿ ಅವರು ವಿಶ್ಲೇಷಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಟೀಸರ್ ತುಂಬಾ ಬೋಲ್ಡ್ ಆಗಿದೆ. ಆದರೆ ಈ ಸಿನಿಮಾಗೆ ನಿರ್ದೇಶನ ಮಾಡಿರುವುದು ಗೀತು ಮೋಹನ್​ದಾಸ್. ನಿರ್ದೇಶಕಿಯೊಬ್ಬರು ಈ ರೀತಿಯ ಮಾಸ್ ಸಿನಿಮಾ ಮಾಡುತ್ತಾರೆ ಎಂಬುದನ್ನು ರಾಮ್ ಗೋಪಾಲ್ ವರ್ಮಾ ಅವರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ನಟ ಯಶ್ ಅವರ ಟಾಕ್ಸಿಕ್ ಸಿನಿಮಾ ಟೀಸರ್ ನೋಡಿದ ಬಳಿಕ ನಿರ್ದೇಶಕಿ ಗೀತು ಮೋಹನ್​ದಾಸ್ ಅವರು ಮಹಿಳಾ ಸಬಲೀಕರಣದ ಅಲ್ಟಿಮೇಟ್ ಸಂಕೇತವಾಗಿದ್ದಾರೆ ಎಂಬುದರಲ್ಲಿ ನನಗೆ ಅನುಮಾನವೇ ಇಲ್ಲ. ಈ ಮಹಿಳೆಗೆ ಹೋಲಿಸಿದರೆ ಯಾವ ನಿರ್ದೇಶಕನೂ ಸಾಟಿ ಇಲ್ಲ. ಆಕೆಯೇ ಇದನ್ನು ಚಿತ್ರಿಸಿದ್ದಾರೆ ಎಂದು ಈಗಲೂ ನನಗೆ ನಂಬಲಾಗುತ್ತಿಲ್ಲ’ ಎಂದು ರಾಮ್ ಗೋಪಾಲ್ ವರ್ಮಾ ಅವರು ಪೋಸ್ಟ್ ಮಾಡಿದ್ದಾರೆ.

‘ಅನಿಮಲ್’ ಸಿನಿಮಾದ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ಅವರು ಸೋಶಿಯಲ್ ಮೀಡಿಯಾದಲ್ಲಿ ‘ಟಾಕ್ಸಿಕ್’ ಚಿತ್ರದ ಟೀಸರ್ ಹಂಚಿಕೊಂಡಿದ್ದಾರೆ. ‘ಟಾಕ್ಸಿಕ್ ಟೀಸರ್ ನನ್ನನ್ನು ತಟ್ಟಿತು. ಸ್ಟೈಲ್, ಆ್ಯಟಿಟ್ಯೂಟ್, ಕೆಯಾಸ್.. ಜನ್ಮದಿನದ ಶುಭಾಶಯಗಳು ಯಶ್’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಹಂಚಿಕೊಳ್ಳುತ್ತಿರುವುದರಿಂದ ಈ ಟೀಸರ್ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಕುಟುಂಬ ಸಮೇತ ‘ಟಾಕ್ಸಿಕ್’ ಟೀಸರ್ ನೋಡಿದ ಪ್ರೇಕ್ಷಕರು ಕಂಗಾಲು

‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ‘ಟಾಕ್ಸಿಕ್’ ಸಿನಿಮಾ ನಿರ್ಮಾಣ ಆಗುತ್ತಿದೆ. ನೂರಾರು ಕೋಟಿ ರೂಪಾಯಿ ಬಂಡವಾಳ ಸುರಿಯಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಇನ್ನುಳಿದ ಭಾಷೆಗಳಿಗೆ ಡಬ್ ಆಗುತ್ತಿದೆ. ಮಾರ್ಚ್ 19ರಂದು ವಿಶ್ವಾದ್ಯಂತ ‘ಟಾಕ್ಸಿಕ್’ ಸಿನಿಮಾ ತೆರೆಕಾಣಲಿದೆ. ಅದೇ ದಿನ ‘ಧುರಂಧರ್ 2’ ಚಿತ್ರ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಿಕೆಶಿಗೆ ಮಹತ್ವ ಹುದ್ದೆ ನೀಡಿದ ಹೈಕಮಾಂಡ್, ಇತ್ತ ಸಿದ್ದರಾಮ್ಯಯ ಕುರ್ಚಿ ಮತ್ತಷ್ಟು ಗಟ್ಟಿ – Kannada News | Congress Appoints DK Shivakumar As Observer For Assam Polls, No Leadership Change Till April In Karnataka

ಬೆಂಗಳೂರು, (ಜನವರಿ 08): ಸಂಕ್ರಾಂತಿ. ಸೂರ್ಯ ಪಥ ಬದಲಿಸುವ ದಿನ. ಆದ್ರೆ  ಕರ್ನಾಟಕ ಕಾಂಗ್ರೆಸ್ಸಿಗರು (Karnataka Congress), ನಾಯಕತ್ವ ಬದಲಾವಣೆಗೆ ಸಾಕ್ಷಿ ಆಗಲಿರುವ ಬೆಳವಣಿಗೆ ಅಂತ್ಲೇ ನಂಬಿದ್ರು. ಸಂಕ್ರಾಂತಿ ಬಳಿಕ ಮುಖ್ಯಮಂತ್ರಿ ಕುರ್ಚಿ ಗೊಂದಲಕ್ಕೆ ಹೈಕಮಾಂಡ್ ತೆರೆ ಎಳೆಯುತ್ತದೆ ಎಂದುಕೊಂಡಿದ್ರು. ಆದ್ರೆ ಲೆಕ್ಕಾಚಾರ ಯಾಕೋ ಬದಲಾದಂತೆ ಕಾಣ್ತಿದೆ. ದಿಲ್ಲಿ ದೊರೆಗಳು ಕುರ್ಚಿ ಚರ್ಚೆಯ ಕೇಂದ್ರ ಬಿಂದು ಡಿಕೆ ಶಿವಕುಮಾರ್​​​​​​ಗೆ  (DK Shivakumar)  ಅಸ್ಸಾಂ ಚುನಾವಣೆಯ ಜವಾಬ್ದಾರಿ ನೀಡಿದ್ದಾರೆ. ಹೌದು… ಡಿಸಿಎಂ ಡಿಕೆ ಶಿವಕುಮಾರ್‌ರನ್ನ ಅಸ್ಸಾಂ ಕಾಂಗ್ರೆಸ್​ನ ಹಿರಿಯ ವೀಕ್ಷಕರಾಗಿ ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಸಿಎಂ ಕುರ್ಚಿ ಚರ್ಚೆ ನಡೀತಿರೋ ಹೊತ್ತಲ್ಲೇ ಹೈಕಮಾಂಡ್ ಇಂತಹದೊಂದು ನಿರ್ಧಾರ ತೆಗೆದುಕೊಂಡಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಬೆಳವಣಿಗೆ ಇನ್​ಸೈಡ್ ಮಾಹಿತಿ

ಅಸ್ಸಾಂನ ಕಾಂಗ್ರೆಸ್ ವೀಕ್ಷಕರ ಪಟ್ಟಿಯಲ್ಲಿ ಛತ್ತೀಸ್​ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಜಾರ್ಖಂಡ್​ನ ಬಿಂದು ತಿರ್ಕಿ ಅವ್ರು ಕೂಡ ಇದ್ದಾರೆ. ಇಲ್ಲಿ ನೀವ್ ಗಮನಸಬೇಕಾದ ಅಂಶವೊಂದಿದೆ. ಅದೇನಂದ್ರೆ, ಸಾಮಾನ್ಯವಾಗಿ ಚುನಾವಣಾ ವೀಕ್ಷಕರನ್ನಾಗಿ ಉಪ ಮುಖ್ಯಮಂತ್ರಿಗಳ ನೇಮಕ ಮಾಡೋದು ತೀರ ವಿರಳ.. ಹೀಗಿದ್ದರೂ ಡಿಕೆರನ್ನ ಎಐಸಿಸಿ ನಿಯೋಜಿಸಿರೋದರ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ ಅಂತಾ ವ್ಯಾಖ್ಯಾನ ಮಾಡಲಾಗುತ್ತಿದೆ.

ಇದನ್ನೂ ನೋಡಿ: ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ

ಒಂದು ವೇಳೆ ಡಿಕೆ ಶಿವಕುಮಾರ್ ಬೆಂಬಲಿಗರು ಅಂದುಕೊಂಡಂತೆ ಡಿಕೆ ಸಂಕ್ರಾಂತಿ ಬಳಿಕ ಸಿಎಂ ಆದ್ರು, ಅಸ್ಸಾಂನಲ್ಲಿ ರಾಜಕೀಯದಲ್ಲಿರಲು ಸಾಧ್ಯವೇ? ಸಿಎಂ ಆಗಿ ವೀಕ್ಷಕರ ಕೆಲಸ ಮಾಡೋಕೆ ಸಾಧ್ಯವೆ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಹೇಳಿ ಕೇಳಿ ಪಂಚ ರಾಜ್ಯ ಚುನಾವಣೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯೋ ಸಾಧ್ಯತೆ ಇದೆ. ಡಿಕೆ ಅಸ್ಸಾಂ ವೀಕ್ಷಕರಾಗಿರೋದ್ರಿಂದ ಆ ರಾಜ್ಯಕ್ಕೆ ಹೋಗಿ ಬಂದು ಮಾಡಬೇಕಾಗುತ್ತೆ.

ದೆಹಲಿಗೆ ತೆರಳಿ ವರದಿ ಕೊಡುವ ಕೆಲಸಗಳು ಇರುತ್ತೆ. ಒಂದು ವೇಳೆ ಅಲ್ಲಿ ಕಾಂಗ್ರೆಸ್ ಸರ್ಕಾರ ಬಂದ್ರೆ ನೇಮಕಾತಿ ಮಾಡೋ ಜವಬ್ದಾರಿ ಕೂಡ ನಿರ್ವಹಿಸಬೇಕು. ವೀಕ್ಷಕರ ಅಭಿಪ್ರಾಯ ಆಗ ಅತ್ಯಮೂಲ್ಯ. ಏನಿಲ್ಲ ಅಂದ್ರು ಚುನಾವಣೆಯಿಂದ ಸರ್ಕಾರ ರಚನೆ ಮಾಡೋವರೆಗೆ 40ರಿಂದ 45 ದಿನಗಳನ್ನ ತೆಗೆದುಕೊಳ್ಳಲಿದೆ. ಇದು ರಾಜ್ಯದ ಅಧಿಕಾರ ಹಂಚಿಕೆ ಮೇಲೂ ಪರಿಣಾಮ ಬೀರೋದಂತೂ ಖಚಿತ. ವಿಚಾರ ಇಷ್ಟೇ ವೀಕ್ಷಕರೇ ಹೈಕಮಾಂಡ್ ಈ ಮೂಲಕ ಮಾರ್ಚ್ ಹಾಗೂ ಏಪ್ರಿಲ್ ತಿಂಗಳವರೆಗೆ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶ ಕೊಟ್ಟಂತಿದೆ.

ಅಧಿಕಾರ ಹಂಚಿಕೆ ನಿರ್ಧಾರ ಸದ್ಯಕ್ಕಿಲ್ಲ

ರಾಜ್ಯದಲ್ಲಿ ಅಧಿಕಾರ ಹಂಚಿಕೆ ನಿರ್ಧಾರ ಸದ್ಯ ಮಾಡೋದಿಲ್ಲ. ಚುನಾವಣೆಗಳು ಮುಗಿಯುವವರೆಗೆ ಯಾವುದೇ ಚರ್ಚೆ ಆಗೋದಿಲ್ಲ. ದೆಹಲಿ ಹೈಕಮಾಂಡ್ ಚುನಾವಣೆಗೆ ಹೆಚ್ಚಿನ ಮಹತ್ವ ಕೊಡಲಿದೆ. ಕಾಂಗ್ರೆಸ್ ಗೆಲುವಿನ ಅಜೆಂಡದ ಬಗ್ಗೆ ವರಿಷ್ಠರು ಚಿಂತನೆ ನಡೆಸಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್​ಗೆ ಸದ್ಯ ಹೆಚ್ಚಿನ ಸಮಯವೇ ಇಲ್ಲ. ಇನ್ನು ನಿರ್ಧಾರ ತೆಗೆದುಕೊಳ್ಳಬೇಕಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್, ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಬ್ಯುಸಿ ಇರಲಿದ್ದಾರೆ. ಇದೆಲ್ಲವನ್ನ ನೋಡ್ತಿದ್ರೆ, ಸಿಎಂ ಕುರ್ಚಿ ಕುರಿತ ನಿರ್ಧಾರ ಏಪ್ರಿಲ್​ವರೆಗೆ ಬ್ರೇಕ್ ಬೀಳೋದು ಗ್ಯಾರಂಟಿ..

ಡಿಕೆ ಶಿವಕುಮಾರ್​​ ಕೊಟ್ಟ ಸಂದೇಶವೇನು?

ಇನ್ನು ಅಸ್ಸಾಂನ ಜವಾಬ್ದಾರಿ ನಿಭಾಯಿಸೋ ಮೂಲಕ ಡಿಕೆ ಸಂದೇಶವೊಂದನ್ನ ಕೊಡುವ ಸಾಧ್ಯತೆ ಇದೆ. ಅದೇನಂದ್ರೆ, ಕಾಂಗ್ರೆಸ್ ಪಕ್ಷ ಕೊಟ್ಟ ಜವಾಬ್ದಾರಿ ನಿರ್ವಹಿಸುವೆ. ಕಷ್ಟಕಾಲದಲ್ಲಿ ಪಕ್ಷದ ಜೊತೆಗೆ ನಿಂತಿದ್ದೇನೆ ಅಂತಾ ಡಿಕೆ ಸಂದೇಶ ರವಾನಿಸಲಿದ್ದಾರೆ. ಪಕ್ಷವೇ ನನ್ನ ಗುಂಪು ಎನ್ನುವ ಮಾತನ್ನ ಸಾರಿಸಾರಿ ಹೇಳಲಿದ್ದಾರೆ. ಚುನಾವಣೆ ಸೇರಿದಂತೆ ಸವಾಲಿನ ಹೊಣೆ ಹೊರಲು ನಾನು ಸಿದ್ಧನಿದ್ದೇನೆ. ಹೊಣೆ ಹೊತ್ತ ಬಳಿಕ ಕೆಲಸದ ಕೂಲಿ ಕೊಡಲಿದೆ. ಹೈಕಮಾಂಡ್ ಕೈಬಿಡಲ್ಲ ಅನ್ನೋ ವಿಶ್ವಾಸ ಡಿಕೆಯಲ್ಲಿ ಮತ್ತಷ್ಟು ಬೆಳೆಯಲಿದೆ.

ನನಗೆ ಬೇರೆ ಆಯ್ಕೆಗಳಿಲ್ಲ. ನನ್ನ ಆಯ್ಕೆ ಇಷ್ಟೆ ಪಕ್ಷ ಏನು ಹೇಳುತ್ತೋ ಅದನ್ನ ಮಾಡೋದು. ಕಾಂಗ್ರೆಸ್ಸಿಗನಾಗಿ ನಾನು ಪಕ್ಷಕ್ಕಾಗಿ ಕೆಲಸ ಮಾಡಬೇಕಾಗುತ್ತದೆ. ಎಐಸಿಸಿಯ ಮಾಧ್ಯಮ ಪ್ರಕಟಣೆಯನ್ನ ನೋಡಿದೆ. ಇನ್ನು ಅತ್ತ ಮುಖ್ಯಮಂತ್ರಿಗಳಾಗಲಿ, ಡಿಸಿಎಂ ಡಿಕೆ ಆಗಲಿ ಸದ್ಯಕ್ಕೆ ದೆಹಲಿಗೆ ಬಗ್ಗೆ ಮುನ್ಸೂಚನೆ ಕೊಡ್ತಿಲ್ಲ. ಸಿಎಂ ಟೀಮ್, ಸಂಕ್ರಾಂತಿ ಬಳಿಕ ಪುನರ್ ರಚನೆ ಅಂತಿದೆ, ಡಿಕೆ ಬಣ ಹೈಕಮಾಂಡ್​ಗೆ ನಾವ್ ಹೋಗಲ್ಲ. ಫೋನ್, ಮೆಸೇಜ್ ಕೂಡ ಮಾಡಲ್ಲ ಅಂತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಮಮತಾ ಬ್ಯಾನರ್ಜಿ ತನಿಖೆಗೆ ಅಡ್ಡಿಪಡಿಸಿ, ಬಲವಂತವಾಗಿ ದಾಖಲೆ ಹೊತ್ತೊಯ್ದಿದ್ದಾರೆ; ಹೈಕೋರ್ಟ್​ ಮೊರೆ ಹೋದ ಇಡಿ – Kannada News | CM Mamata Banerjee Obstructed Probe ED Moves Calcutta High Court

ಕೊಲ್ಕತ್ತಾ, ಜನವರಿ 8: ಕೊಲ್ಕತ್ತಾದಲ್ಲಿ ಜಾರಿ ನಿರ್ದೇಶನಾಲಯದ ದಾಳಿಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ತಮ್ಮ ಚುನಾವಣಾ ಸಲಹೆಗಾರ I-PAC ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮತ್ತು ಅವರ ಕಚೇರಿಗಳಿಂದ ಲ್ಯಾಪ್‌ಟಾಪ್, ಫೋನ್ ಮತ್ತು ಹಲವು ದಾಖಲೆಗಳನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ಇಡಿ ಆರೋಪಿಸಿದೆ. ಹಾಗೇ, ಸಿಎಂ ಮಮತಾ ಬ್ಯಾನರ್ಜಿ ತಮ್ಮ ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆ ಮತ್ತು ಕಲ್ಲಿದ್ದಲು ಕಳ್ಳಸಾಗಣೆ, ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಇಡಿ ಹೈಕೋರ್ಟ್‌ ಮೊರೆಹೋಗಿದೆ.

“ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಹೆಚ್ಚಿನ ಸಂಖ್ಯೆಯ ಪೊಲೀಸ್ ಅಧಿಕಾರಿಗಳು ಆಗಮಿಸುವವರೆಗೂ ವಿಚಾರಣೆ ಶಾಂತಿಯುತ ಮತ್ತು ವೃತ್ತಿಪರ ರೀತಿಯಲ್ಲಿ ನಡೆಯುತ್ತಿತ್ತು. ಆದರೆ, ಸಿಎಂ ಮಮತಾ ಬ್ಯಾನರ್ಜಿ ಪ್ರತೀಕ್ ಜೈನ್ ಅವರ ನಿವಾಸದ ಆವರಣಕ್ಕೆ ಪ್ರವೇಶಿಸಿ, ಅನೇಕ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳು ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ತೆಗೆದುಕೊಂಡು ಹೋದರು. ಇದರಿಂದ ನಮ್ಮ ತನಿಖೆಗೆ ಅಡ್ಡಿಯಾಗಿದೆ” ಎಂದು ಇಡಿ ದೂರಿನಲ್ಲಿ ತಿಳಿಸಿದೆ.

ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಇಡಿ ದಾಳಿ ವೇಳೆ ಹೈಡ್ರಾಮಾ; I-PAC ಕಚೇರಿಗೆ ನುಗ್ಗಿ ಹಸಿರು ಫೈಲ್‌ ಹೊತ್ತೊಯ್ದ ಮಮತಾ ಬ್ಯಾನರ್ಜಿ

ಹೈಕೋರ್ಟ್ ನಾಳೆ (ಶುಕ್ರವಾರ) ಈ ಪ್ರಕರಣವನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಈ ದಾಳಿ ರಾಜಕೀಯ ಪ್ರೇರಿತ ಮತ್ತು ಬಿಜೆಪಿಯ ಪ್ಲಾನ್ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಆದರೆ, ಇಡಿ ಈ ಆರೋಪಗಳನ್ನು ನಿರಾಕರಿಸಿದೆ. ಇದು ಯಾವುದೇ ರಾಜಕೀಯ ಪಕ್ಷಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲ ಎಂದು ಹೇಳಿದೆ. ನಾವು ಯಾವುದೇ ಪಕ್ಷದ ಕಚೇರಿಯನ್ನು ಶೋಧಿಸಿಲ್ಲ. ಈ ಶೋಧನೆಯು ಯಾವುದೇ ಚುನಾವಣೆಗಳಿಗೆ ಸಂಬಂಧಿಸಿಲ್ಲ ಮತ್ತು ಹಣ ವರ್ಗಾವಣೆಯ ವಿರುದ್ಧ ನಿಯಮಿತ ಕ್ರಮದ ಭಾಗವಾಗಿದೆ ಎಂದು ED ಅಧಿಕಾರಿಗಳು ತಿಳಿಸಿದ್ದಾರೆ.

ಇದರ ನಡುವೆ, ಇಡಿ ದಾಳಿಯ ಸಮಯದಲ್ಲಿ ಪ್ರಮುಖ ದಾಖಲೆಗಳ ಕಳ್ಳತನವಾಗಿದೆ ಎಂದು ಆರೋಪಿಸಿ ಪ್ರತೀಕ್ ಜೈನ್ ಅವರ ಕುಟುಂಬವು ಜಾರಿ ನಿರ್ದೇಶನಾಲಯದ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ vs ಸಿಬಿಎಫ್​​ಸಿ: ವಿಜಯ್​​ಗೆ ಬೆಂಬಲಿಸಿದ ಕಾಂಗ್ರೆಸ್: ಡಿಎಂಕೆ? – Kannada News | Jana Nayagan vs CBFC case: Congress extended support to Thalapathy Vijay

ರಾಜಕೀಯಕ್ಕೆ ಪ್ರವೇಶಿಸಿರುವ ದಳಪತಿ ವಿಜಯ್ (Thalapathy Vijay), ಸಿನಿಮಾಗಳಿಂದ ದೂರಾಗುವುದಾಗಿ ಹೇಳಿದ್ದು, ‘ಜನ ನಾಯಗನ್’ ತಮ್ಮ ಕೊನೆಯ ಸಿನಿಮಾ ಎಂದಿದ್ದರು. ಸಿನಿಮಾ ನಾಳೆ (ಜನವರಿ 09) ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಿಲ್ಲ. ಇದೀಗ ಪ್ರಕರಣ ನ್ಯಾಯಾಲಯದಲ್ಲಿದೆ. ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನಿರಾಕರಿಸಿರುವುದು ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತ ನಡೆ ಎನ್ನಲಾಗುತ್ತಿದೆ. ಇದೀಗ ಕಾಂಗ್ರೆಸ್ ಪಕ್ಷವು ಈ ವಿಷಯದಲ್ಲಿ ವಿಜಯ್​​ಗೆ ಬೆಂಬಲ ಘೋಷಣೆ ಮಾಡಿದೆ.

‘ಜನ ನಾಯಗನ್’ ಸಿನಿಮಾಕ್ಕೆ ಪ್ರಮಾಣ ಪತ್ರ ನಿರಾಕರಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಕಾಂಗ್ರೆಸ್ ಮುಖಂಡ ಪ್ರವೀಣ್ ಚಕ್ರವರ್ತಿ, ಸಂಸದೆ ಎಸ್ ಜೋತಿಮಣಿ ಅವರುಗಳು ‘ವಿಜಯ್ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡುತ್ತಿರುವುದು ಕೆಟ್ಟ ರಾಜಕೀಯ ನಡೆ’ ಎಂದು ಟೀಕಿಸಿದ್ದಾರೆ.

ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಪ್ರವೀಣ್ ಚಕ್ರವರ್ತಿ, ರಾಹುಲ್ ಗಾಂಧಿ ಒಂಬತ್ತು ವರ್ಷಗಳ ಹಿಂದೆ ತಮಿಳು ಸಿನಿಮಾ ಬಗ್ಗೆ ಮೋದಿ ಅವರಿಗೆ ಮಾಡಿದ್ದ ಟ್ವೀಟ್​ ಅನ್ನು ನೆನಪಿಸಿದ್ದು, ‘ಆಗಲೇ ರಾಹುಲ್ ಗಾಂಧಿ ಅವರು ಮೋದಿ ಅವರಿಗೆ ಹೇಳಿದ್ದರು, ತಮಿಳುನಾಡು ಸಂಸ್ಕೃತಿ ಮತ್ತು ತಮಿಳು ಸಿನಿಮಾಗಳನ್ನು ತುಳಿಯುವ ಪ್ರಯತ್ನ ಮಾಡಬೇಡಿ ಎಂದು. ಆದರೆ ‘ಜನ ನಾಯಗನ್’ ಸಿನಿಮಾಕ್ಕೆ ಪ್ರಮಾಣಪತ್ರ ನಿರಾಕರಿಸುವ ಮೂಲಕ ಮತ್ತೊಮ್ಮೆ ಮೋದಿ, ತಮಿಳು ಜನರನ್ನು ಅವಮಾನಿಸಿದ್ದಾರೆ’ ಎಂದಿದ್ದಾರೆ.

ಇದನ್ನೂ ಓದಿ:‘ಜನ ನಾಯಗನ್’ ಬಳಿಕ ಈಗ ‘ಪರಾಶಕ್ತಿ’ಗೂ ಸಿಬಿಎಫ್​​ಸಿ ಸಂಕಟ

ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಸಹ ಇದೇ ವಿಷಯವಾಗಿ ಟ್ವೀಟ್ ಮಾಡಿದ್ದು, ‘ಇದು ತಮಿಳು ಚಿತ್ರರಂಗದ ಮೇಲೆ ಮಾಡುತ್ತಿರುವ ದಾಳಿ. ಯಾರ್ಯಾರು ವಾಕ್ ಸ್ವಾತಂತ್ರ್ಯದ ಮೇಲೆ ನಂಬಿಕೆ ಇರಿಸಿದ್ದಾರೆಯೋ ಅವರೆಲ್ಲರೂ ಸಿಬಿಎಫ್​​ಸಿಯ ಈ ನಡೆಯನ್ನು ಖಂಡಿಸಬೇಕು. ನೂರಾರು ಜನರ ಶ್ರಮದಿಂದ, ಕೋಟ್ಯಂತರ ರೂಪಾಯಿಗಳ ಹಣ ಖರ್ಚು ಮಾಡಿ ಸಿನಿಮಾ ಮಾಡಲಅಗಿರುತ್ತದೆ. ಆದರೆ ಹೀಗೆ ಸಿನಿಮಾಕ್ಕೆ ಸಮಸ್ಯೆ ನೀಡುವುದು ಕ್ರಿಯಾತ್ಮಕ ಸ್ವಾತಂತ್ರ್ಯದ ಹರಣ ಮಾಡಿದಂತೆ. ಅದರಲ್ಲೂ ರಾಜಕೀಯ ಕಾರಣಕ್ಕೆ ಸಿನಿಮಾಕ್ಕೆ ಕಿರುಕುಳ ನೀಡುವುದು ಮತ್ತೂ ಅಪಾಯಕಾರಿ’ ಎಂದಿದ್ದಾರೆ.

ಅಂದಹಾಗೆ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿ ಪಕ್ಷಗಳಾಗಿವೆ. ಆದರೆ ವಿಜಯ್, ರಾಜಕೀಯ ಪ್ರವೇಶಿಸಿದಾಗಿನಿಂದಲೂ ಆಡಳಿತಾರೂಢ ಡಿಎಂಕೆ ಪಕ್ಷದ ವಿರುದ್ಧವೇ ಹೋರಾಡುತ್ತಿದ್ದಾರೆ. ಇದೀಗ ಡಿಎಂಕೆಯ ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್, ಡಿಎಂಕೆಯ ವಿರೋಧಿ ನಾಯಕ ಎನಿಸಿಕೊಂಡಿರುವ ವಿಜಯ್​​ಗೆ ಬೆಂಬಲ ಸೂಚಿಸಿರುವುದು ರಾಜಕೀಯ ವಿಶ್ಲೇಷಕರ ಕುತೂಹಲಕ್ಕೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:21 pm, Thu, 8 January 26

Source link

WPL 2026: ಡಬ್ಲ್ಯುಪಿಎಲ್​​ಗೆ ವೇದಿಕೆ ಸಜ್ಜು; ಎಲ್ಲಾ 5 ತಂಡಗಳು, ವೇಳಾಪಟ್ಟಿ, ನಿಯಮಗಳ ಪೂರ್ಣ ವಿವರ ಇಲ್ಲಿದೆ – Kannada News | Women’s Premier League 2026: Full Guide – Dates, Squads, Where to Watch

ಮಹಿಳಾ ಪ್ರೀಮಿಯರ್ ಲೀಗ್​ನ (Women’s Premier League 2026) ನಾಲ್ಕನೇ ಸೀಸನ್ ನಾಳೆಯಿಂದ ಅಂದರೆ ಜನವರಿ 9 ರಿಂದ ಪ್ರಾರಂಭವಾಗುತ್ತಿದೆ. ಮೆಗಾ ಹರಾಜಿನ ನಂತರ ಎಲ್ಲಾ ತಂಡಗಳು ಪ್ರಮುಖ ಬದಲಾವಣೆಗಳಾಗಿದ್ದು ಕೆಲವು ತಂಡಗಳು ಹೊಸ ನಾಯಕಿಯರನ್ನು ನೇಮಿಸಿವೆ. ಇದರೊಂದಿಗೆ ಈ ಸೀಸನ್ ಹಲವು ವಿಧಗಳಲ್ಲಿ ವಿಶೇಷವಾಗಿದ್ದು, ಅದರಲ್ಲಿ ಪ್ರಮುಖವಾಗಿ ಇದೇ ಮೊದಲ ಬಾರಿಗೆ ಜನವರಿ-ಫೆಬ್ರವರಿಯಲ್ಲಿ ನಡೆಯುತ್ತಿದೆ. ಲೀಗ್​ನ ಮೊದಲ ಪಂದ್ಯ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ತಂಡವನ್ನು ಎದುರಿಸಲಿದೆ.

ಈ ಸೀಸನ್‌ನಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿದ್ದು, ಮೊದಲ 11 ಪಂದ್ಯಗಳು ನವಿ ಮುಂಬೈನಲ್ಲಿ ಮತ್ತು ಎಲಿಮಿನೇಟರ್ ಮತ್ತು ಫೈನಲ್ ಸೇರಿದಂತೆ ಉಳಿದ 11 ಪಂದ್ಯಗಳು ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಫೆಬ್ರವರಿ 5 ರಂದು ವಡೋದರಾದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿ, ಜನವರಿ 10 ಮತ್ತು 17 ರಂದು ನವಿ ಮುಂಬೈನಲ್ಲಿ ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ.

ಎರಡು ನಗರಗಳಲ್ಲಿ ಪಂದ್ಯಾವಳಿ

ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ ಕೇವಲ ಎರಡು ನಗರಗಳಲ್ಲಿ ಮಾತ್ರ ನಡೆಯಲಿದೆ. ಏಕೆಂದರೆ ಉಳಿದ ಕ್ರೀಡಾಂಗಣಗಳು ಟಿ20 ವಿಶ್ವಕಪ್ ಮತ್ತು ರಣಜಿ ಟ್ರೋಫಿಯಂತಹ ಪಂದ್ಯಾವಳಿಗಳಿಗಾಗಿ ಕಾಯ್ದಿರಿಸಲ್ಪಟ್ಟಿವೆ.

ಈ ತಂಡಗಳ ನಾಯಕಿಯರ ಬದಲಾವಣೆ

ಮೇಲೆ ಹೇಳಿದಂತೆ ಈ ಆವೃತ್ತಿಯಲ್ಲಿ ತಂಡಗಳಲ್ಲಿ ಹಲವಾರು ಬದಲಾವಣೆಗಳನ್ನು ನೋಡಲಾಗಿದೆ. ಜೆಮಿಮಾ ರೊಡ್ರಿಗಸ್ ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿಯಾಗಿದ್ದಾರೆ. ಏತನ್ಮಧ್ಯೆ, ಮೆಗ್ ಲ್ಯಾನಿಂಗ್ ಅವರನ್ನು ಯುಪಿ ವಾರಿಯರ್ಸ್ ತಂಡದ ನಾಯಕಿಯಾಗಿ ನೇಮಿಸಲಾಗಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಯತ್ನಿಸಲಿದೆ. ಏತನ್ಮಧ್ಯೆ, ಎಲಿಸ್ ಪೆರ್ರಿ ಮತ್ತು ಅನ್ನಾಬೆಲ್ ಸದರ್ಲ್ಯಾಂಡ್‌ರಂತಹ ಸ್ಟಾರ್ ಆಟಗಾರ್ತಿಯರು ವೈಯಕ್ತಿಕ ಕಾರಣಗಳಿಂದಾಗಿ ಈ ಋತುವಿನಿಂದ ಹೊರಗುಳಿದಿದ್ದಾರೆ. ಇದರೊಂದಿಗೆ ಇತ್ತೀಚಿನ ಡಬ್ಲ್ಯೂಬಿಬಿಎಲ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ನ ಲಿಜೆಲ್ಲೆ ಲೀ, ಮುಂಬೈ ತಂಡದಲ್ಲಿರುವ ಮಿಲ್ಲಿ ಇಲಿಂಗ್‌ವರ್ತ್ ಮತ್ತು 16 ವರ್ಷದ ಅನ್‌ಕ್ಯಾಪ್ಡ್ ಬ್ಯಾಟರ್ ದಿಯಾ ಯಾದವ್ ಸೇರಿದಂತೆ ಕೆಲವು ಹೊಸ ಆಟಗಾರ್ತಿಯರು ಈ ಲೀಗ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲೀಗ್​ನ ಪಂದ್ಯಗಳನ್ನು ಎಲ್ಲಿ ವೀಕ್ಷಿಸಬಹುದು?

ಮಹಿಳಾ ಪ್ರೀಮಿಯರ್ ಲೀಗ್ 2026 ಪಂದ್ಯಗಳನ್ನು ಭಾರತದಲ್ಲಿನ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ.

ಪ್ಲೇಯಿಂಗ್ 11 ರ ನಿಯಮಗಳು

ನಿಯಮಗಳ ಪ್ರಕಾರ, ಒಂದು ತಂಡದ ಪ್ಲೇಯಿಂಗ್ 11 ರಲ್ಲಿ ಗರಿಷ್ಠ ನಾಲ್ಕು ವಿದೇಶಿ ಆಟಗಾರ್ತಿಯರು ಇರಬಹುದು. ಒಂದು ತಂಡವು ಆಡುವ 11 ರಲ್ಲಿ ಅಸೋಸಿಯೇಟ್ ದೇಶದ ಆಟಗಾರ್ತಿಯನ್ನು ಹೊಂದಿದ್ದರೆ, ಅವರು ಐದು ವಿದೇಶಿ ಆಟಗಾರ್ತಿಯರನ್ನು ಕಣಕ್ಕಿಳಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

ವಿಜೇತ ತಂಡಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು?

ಮಹಿಳಾ ಪ್ರೀಮಿಯರ್ ಲೀಗ್‌ನ ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ತಂಡಕ್ಕೆ 6 ಕೋಟಿ ರೂ. ಬಹುಮಾನವನ್ನು ನೀಡಲಾಯಿತು. ಪರಿಣಾಮವಾಗಿ, ಈ ಬಾರಿ ವಿಜೇತ ತಂಡವು ಅದೇ ಬಹುಮಾನದ ಹಣವನ್ನು ಪಡೆಯುವ ನಿರೀಕ್ಷೆಯಿದೆ. ರನ್ನರ್-ಅಪ್ ತಂಡವು 3 ಕೋಟಿ ರೂ. ಪಡೆಯುತ್ತದೆ. ಅತ್ಯುತ್ತಮ ಬ್ಯಾಟರ್, ಅತ್ಯುತ್ತಮ ಬೌಲರ್, ಟೂರ್ನಮೆಂಟ್‌ನ ಆಟಗಾರ್ತಿ, ಹೆಚ್ಚಿನ ಸಿಕ್ಸರ್‌ಗಳು ಮತ್ತು ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರ್ತಿಗೆ ಬಹುಮಾನದ ಹಣವನ್ನು ನೀಡಲಾಗುತ್ತದೆ.

ಎಲ್ಲಾ ಐದು ತಂಡಗಳು

ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸಿವರ್-ಬ್ರಂಟ್, ಹೇಲಿ ಮ್ಯಾಥ್ಯೂಸ್, ಅಮನ್‌ಜೋತ್ ಕೌರ್, ಜಿ. ಕಮಲಿನಿ, ಅಮೆಲಿಯಾ ಕೆರ್, ಶಬ್ನಿಮ್ ಇಸ್ಮಾಯಿಲ್, ಸಂಸ್ಕೃತಿ ಗುಪ್ತಾ, ಸಜನಾ ಸಜೀವನ್, ರಾಹಿಲಾ ಫಿರ್ದೌಸ್, ನಿಕೋಲಾ ಕ್ಯಾರಿ, ಪೂನಂ ಖೆಮ್ನಾರ್, ತ್ರಿವೇಣಿ ವಸಿಷ್ಟ, ನಲ್ಲ ರೆಡ್ಡಿ, ಸೈಕಾ ಇಶಾಕ್, ಮಿಲ್ಲಿ ಇಲ್ಲಿಂಗ್‌ವರ್ತ್

ಡೆಲ್ಲಿ ಕ್ಯಾಪಿಟಲ್ಸ್: ಜೆಮಿಮಾ ರೋಡ್ರಿಗಸ್ (ನಾಯಕಿ), ಶಫಾಲಿ ವರ್ಮಾ, ಮಾರ್ಜಿಯಾನ್ನೆ ಕಪ್, ನಿಕಿ ಪ್ರಸಾದ್, ಲಾರಾ ವೊಲ್ವಾರ್ಡ್ಟ್, ಚಿನೆಲ್ಲೆ ಹೆನ್ರಿ, ಶ್ರೀ ಚರಣಿ, ಸ್ನೇಹ ರಾಣಾ, ಲಿಜೆಲ್ಲೆ ಲೀ, ದೀಯಾ ಯಾದವ್, ತನಿಯಾ ಭಾಟಿಯಾ, ಮಮತಾ ಮಡಿವಾಲಾ, ನಂದಿನಿ ಶರ್ಮಾ, ಲೂಸಿ ಹ್ಯಾಮಿಲ್ಟನ್, ಮಿನ್ನು ಮಣಿ, ಅಲಾನಾ ಕಿಂಗ್ (ಅನ್ನಾಬೆಲ್ ಸದರ್ಲ್ಯಾಂಡ್ ಬದಲಿಗೆ).

ಆರ್​ಸಿಬಿ: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್, ಡಿ. ಹೇಮಲತಾ, ಸಯಾಲಿ ಸತ್ಘರೆ (ಎಲ್ಲಿಸ್ ಪೆರಿ ಬದಲಿಗೆ)

ಗುಜರಾತ್ ಜೈಂಟ್ಸ್: ಆಶ್ಲೀಗ್ ಗಾರ್ಡ್ನರ್ (ನಾಯಕಿ), ಬೆತ್ ಮೂನಿ, ಸೋಫಿ ಡಿವೈನ್, ರೇಣುಕಾ ಸಿಂಗ್ ಠಾಕೂರ್, ಭಾರತಿ ಫುಲ್ಮಾಲಿ, ಟಿಟಾಸ್ ಸಾಧು, ಕಾಶೀ ಗೌತಮ್, ಕನಿಕಾ ಅಹುಜಾ, ತನುಜಾ ಕನ್ವರ್, ಜಾರ್ಜಿಯಾ ವೇರ್ಹ್ಯಾಮ್, ಅನುಷ್ಕಾ ಶರ್ಮಾ, ಹ್ಯಾಪಿ ಕುಮಾರಿ, ಕಿಮ್ ಗಾರ್ತ್, ಯಾಸ್ತಿಕಾ ಭಾಟಿಯಾ, ಶಿವಾನಿ ಸಿಂಗ್, ಡ್ಯಾನಿ ವ್ಯಾಟ್-ಹಾಡ್ಜ್, ರಾಜೇಶ್ವರಿ ಗಾಯಕ್ವಾಡ್, ಆಯುಷಿ ಸೋನಿ.

ಯುಪಿ ವಾರಿಯರ್ಸ್​: ಮೆಗ್ ಲ್ಯಾನಿಂಗ್ (ನಾಯಕಿ), ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಫೋಬೆ ಲಿಚ್‌ಫೀಲ್ಡ್, ಕಿರಣ್ ನವಗಿರೆ, ಹರ್ಲೀನ್ ಡಿಯೋಲ್, ಕ್ರಾಂತಿ ಗೌಡ್, ಆಶಾ ಸೋಭಾನ, ಡಿಯಾಂಡ್ರಾ ಡಾಟಿನ್, ಶಿಖಾ ಪಾಂಡೆ, ಶಿಪ್ರಾ ಗಿರಿ, ಸಿಮ್ರಾನ್ ಶೇಖ್, ಕ್ಲೋಯ್ ಟ್ರಯಾನ್, ಸುಮನ್ ಮೀನಾ, ಜಿ. ತ್ರಿಶಾ, ಪ್ರತೀಕಾ ರಾವಲ್, ಚಾರ್ಲಿ ನಾಟ್ (ತಾರಾ ನಾರ್ರಿಸ್ ಬದಲಿಗೆ).

WPL 2026: ಇನ್ನೇರಡು ದಿನಗಳಲ್ಲಿ ಡಬ್ಲ್ಯುಪಿಎಲ್ ಆರಂಭ; ಇಲ್ಲಿದೆ ಪೂರ್ಣ ವೇಳಾಪಟ್ಟಿ

ಪೂರ್ಣ ವೇಳಾಪಟ್ಟಿ

ದಿನಾಂಕ ಮುಖಾಮುಖಿ ಸ್ಥಳ
09-01-2026 ಮುಂಬೈ ಇಂಡಿಯನ್ಸ್ vs ಆರ್​ಸಿಬಿ ನವಿ ಮುಂಬೈ
10-01-2026 ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
10-01-2026 ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ ನವಿ ಮುಂಬೈ
11-01-2026 ದೆಹಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
12-01-2026 ಆರ್​ಸಿಬಿ vs ಯುಪಿ ವಾರಿಯರ್ಸ್ ನವಿ ಮುಂಬೈ
13-01-2026 ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
14-01-2026 ಯುಪಿ ವಾರಿಯರ್ಸ್ vs ದೆಹಲಿ ಕ್ಯಾಪಿಟಲ್ಸ್ ನವಿ ಮುಂಬೈ
15-01-2026 ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್ ನವಿ ಮುಂಬೈ
16-01-2026 ಆರ್​ಸಿಬಿ vs ಗುಜರಾತ್ ಜೈಂಟ್ಸ್ ನವಿ ಮುಂಬೈ
17-01-2026 ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್ ನವಿ ಮುಂಬೈ
17-01-2026 ದೆಹಲಿ ಕ್ಯಾಪಿಟಲ್ಸ್ vs ಆರ್​ಸಿಬಿ ನವಿ ಮುಂಬೈ
19-01-2026 ಗುಜರಾತ್ ಜೈಂಟ್ಸ್ vs ಆರ್​ಸಿಬಿ ವಡೋದರಾ
20-01-2026 ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ ವಡೋದರಾ
22-01-2026 ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್ ವಡೋದರಾ
24-01-2026 ಆರ್​ಸಿಬಿ vs ದೆಹಲಿ ಕ್ಯಾಪಿಟಲ್ಸ್ ವಡೋದರಾ
26-01-2026 ಆರ್​ಸಿಬಿ vs ಮುಂಬೈ ಇಂಡಿಯನ್ಸ್ ವಡೋದರಾ
27-01-2026 ಗುಜರಾತ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್ ವಡೋದರಾ
29-01-2026 ಯುಪಿ ವಾರಿಯರ್ಸ್ vs ಆರ್​ಸಿಬಿ ವಡೋದರಾ
30-01-2026 ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ ವಡೋದರಾ
01-02-2026 ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್ ವಡೋದರಾ
03-02-2026 ಎಲಿಮಿನೇಟರ್ ವಡೋದರಾ
05-02-2026 ಫೈನಲ್ ವಡೋದರಾ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version