Headlines

ಕಾಡಾನೆ ದಾಳಿಗೆ ಕೊಡಗಲ್ಲಿ ಮತ್ತೊಂದು ಬಲಿ: ದಾರುಣವಾಗಿ ಮೃತಪಟ್ಟ ಕಾಫಿ ಬೆಳೆಗಾರ

ಮಡಿಕೇರಿ, ಮಾರ್ಚ್​​ 12: ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ನಂಜರಾಯಪಟ್ಟಣ ಗ್ರಾಮ ಪಂಚಾಯತ್​​ ಮಾಜಿ ಸದಸ್ಯೆಯ ಸಾವು ಮಾಸುವ ಮುನ್ನವೇ ಮತ್ತೊಂದು ಬಲಿಯಾಗಿದೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಹೈಸ್ಕೂಲ್ ಪೈಸಾರಿಯಲ್ಲಿ ಕಾಫಿ ತೋಟಕ್ಕೆ ತೆರಳಿದ್ದ ಬೆಳೆಗಾರನ ಮೇಲೆ ಸಲಗ ಅಟ್ಯಾಕ್​​ ಮಾಡಿದ ಪರಿಣಾಮ ಗಣಪತಿ (49) ಮೃತಪಟ್ಟಿದ್ದಾರೆ. ಹಾಡಹಗಲೇ ಕಾಫಿ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡ ಪರಿಣಾಮ ಸ್ಥಳಕ್ಕೆ ಪೊಲೀಸರು, ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಲು ಸಾಲು ಸಾವು ಕಾಡಾನೆ ದಾಳಿಗೆ…

Read More

‘ದೃಶ್ಯಂ 3’ ಟೀಸರ್: ಜಾರ್ಜ್ ಕುಟ್ಟಿಗೆ ಮೊದಲ ಬಾರಿ ಭಯವಾಗಿದೆ – Kannada News | Drishyam 3 movie teaser released, movie to be released on May 21

ಭಾರತೀಯ ಚಿತ್ರರಂಗದ (Movie Industry) ಅತ್ಯಂತ ಯಶಸ್ವಿ ಕ್ರೈಮ್ ಥ್ರಿಲ್ಲರ್ ಸರಣಿಗಳಲ್ಲಿ ಒಂದಾದ ‘ದೃಶ್ಯಂ’ನ ಮೂರನೇ ಭಾಗದ ಟೀಸರ್ ಇಂದು (ಏಪ್ರಿಲ್ 29) ಬಿಡುಗಡೆಯಾಗಿದೆ. ಭಾರಿ ಜನಪ್ರಿಯತೆ ಮತ್ತು ಅಭಿಮಾನಿಗಳನ್ನು ಹೊಂದಿರುವ ‘ದೃಶ್ಯಂ’ ಸರಣಿಯ ಕೊನೆಯ ಭಾಗ ಇದಾಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸಿನಿಮಾದ ಬಗ್ಗೆ ಭಾರಿ ಕುತೂಹಲ ಇದೆ. ಇದೀಗ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಮೊದಲೆರಡು ಸಿನಿಮಾಗಳಿಗಿಂತಲೂ ಬಹಳ ಭಿನ್ನವಾಗಿ ಈ ಸಿನಿಮಾ ಇರಲಿದೆ ಎಂಬುದನ್ನು ಟೀಸರ್ ಸಾರಿ ಹೇಳುತ್ತಿದೆ. ಸುಮಾರು 1…

Read More

ಭಾರೀ ಪ್ರಮಾಣದಲ್ಲಿ ಉದ್ಯೋಗಗಳಿಗೆ ಕತ್ತರಿ ಹಾಕಲು ಟಿಸಿಎಸ್​ನಿಂದ ಬ್ಯಾಂಡ್ ಡಿ ಪ್ಲಾನ್? 29,000ಕ್ಕೂ ಹೆಚ್ಚು ಮಂದಿಗೆ ಲೇ ಆಫ್ ಭೀತಿ? – Kannada News | TCS Job Cuts: Up to 29,000 Employees at Risk as ‘Band D’ Signals Mass Layoffs

ನವದೆಹಲಿ, ಮೇ 19: ಇತ್ತೀಚೆಗಷ್ಟೇ ಶೇ 2ರಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದ ಟಾಟಾ ಕನ್ಸಲ್ಪೆನ್ಸಿ ಸರ್ವಿಸಸ್ ಸಂಸ್ಥೆ (TCS- Tata Consultancy Services) ಈಗ ಇನ್ನೂ ಉಗ್ರ ಹೆಜ್ಜೆ ಇಡುವ ಯೋಜನೆ ಹಾಕಿದೆ. ಮಿಂಟ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ, ಟಿಸಿಎಸ್​ನ ಶೇ. 5ರಷ್ಟು ಉದ್ಯೋಗಿಗಳನ್ನು ‘ಬ್ಯಾಂಡ್ ಡಿ’ಗೆ (Band D) ವರ್ಗೀಕರಿಸಲು ಹೊರಟಿದೆ. ಟಿಸಿಎಸ್​ನ ಮ್ಯಾನೇಜರ್​ಗಳಿಗೆ ಈ ನಿಟ್ಟಿನಲ್ಲಿ ಸೂಚನೆ ಕೊಡಲಾಗಿದೆ. ವರದಿ ಪ್ರಕಾರ ಈಗಾಗಲೇ ಮ್ಯಾನೇಜರ್​ಗಳು 17,500 ಉದ್ಯೋಗಿಗಳನ್ನು ಡಿ ಬ್ಯಾಂಡ್​ಗೆ ವರ್ಗೀಕರಿಸಿದ್ದಾರೆ. ಕಳಪೆ…

Read More

ಇದು ಕೆಸರು ಗದ್ದೆಯಲ್ಲ, ಹಾವೇರಿ-ಶಿರಸಿ ರಾಜ್ಯ ಹೆದ್ದಾರಿ!: ರಸ್ತೆ ದುಃಸ್ಥಿಗೆ ಜನ ಹೈರಾಣು – Kannada News | Haveri–Sirsi State Highway Turns Into Muddy Stretch After Untimely Rains; Commuters Struggle

ಹಾವೇರಿ, ಫೆಬ್ರವರಿ 27: ಜಿಲ್ಲೆಯಿಂದ ಶಿರಸಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟ ಪರಿಣಾಮ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದ ಶಿರಸಿಯ ಮಾರಿಕಾಂಬಾ ಜಾತ್ರೆಗೆ ತೆರಳುವ ಭಕ್ತರು ಪ್ರತಿನಿತ್ಯ ಪರದಾಟ ನಡೆಸಬೇಕಾದ ಸ್ಥಿತಿ ಉದ್ಭವವಾಗಿದೆ. ಕಳೆದ ಮೂರು ವರ್ಷಗಳಿಂದ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು, ಹಾವೇರಿ ಜಿಲ್ಲೆಯ ಗಡಿ ದಾಟುತ್ತಿದ್ದಂತೆ 20 ಕಿಲೋ ಮೀಟರ್ ರಸ್ತೆಯಲ್ಲಿ ಜೀವದ ಹಂಗು ತೊರೆದು ವಾಹನ ಸವಾರರು ಸಂಚರಿಸಬೇಕಿದೆ. ಅಕಾಲಿಕವಾಗಿ ಸುರಿದ ಅ್ಪ ಮಳೆಗೇ ರಸ್ತೆ ಕೆಸರು ಗದ್ದೆಯಂತಾಗಿದ್ದು, ಬೈಕ್​​ ಸವಾರರು…

Read More

ಕಾರಾಗೃಹ ಇಲಾಖೆಯ ಕೋಟ್ಯಂತರ ರೂ ಮೌಲ್ಯದ ಕಟ್ಟಡವನ್ನೇ ಕಬ್ಜ ಮಾಡಿದ ಭಲೇ ಕಿಲಾಡಿಗಳು

ಕಾರಾಗೃಹ ಇಲಾಖೆಯ ಕಟ್ಟಡImage Credit source: tv9 kannada ಬೆಂಗಳೂರು, ಮೇ 29: ಸುಮಾರು 40ರಿಂದ 50 ಕೋಟಿ ರೂ ಮೌಲ್ಯದ ಕಾರಾಗೃಹ ಇಲಾಖೆಯ ಕಟ್ಟಡದ ಮೇಲೆ ಖದೀಮರು ಕಣ್ಣು ಹಾಕಿದ್ದಾರೆ. ಸ್ವತ್ತು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಅಧೀನದಲ್ಲಿರುವ ಗಾಂಧಿನಗರದ 2ನೇ ಅಡ್ಡರಸ್ತೆಯಲ್ಲಿರುವ ಮೈಸೂರು ಡಿಸ್ಮಾರ್ಜ್ ಪ್ರಿಸನರ್ಸ್ ಏಡ್ ಸೊಸೈಟಿಯ ಆಸ್ತಿಯನ್ನು (Property) ಕಬ್ಜ ಮಾಡಲಾಗಿದೆ. ಈ ಬಗ್ಗೆ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಮುಖ್ಯಾಂಶಗಳು ಮೈಸೂರು…

Read More

‘ಜೈಲರ್ 2’ ಬಿಡುಗಡೆಗೂ ಮುನ್ನವೇ 160 ಕೋಟಿ ರೂಪಾಯಿ ಒಟಿಟಿ ಡೀಲ್? – Kannada News | Rajinikanth Jailer 2 OTT rights sold to record price Amazon Prime Video

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿತ್ತು. ಈಗ ಅದರ ಮುಂದುವರಿದ ಭಾಗ ‘ಜೈಲರ್ 2’ (Jailer 2) ಮೇಲೆ ನಿರೀಕ್ಷೆ ಹೆಚ್ಚಿದೆ. ಚಿತ್ರೀಕರಣದ ಹಂತದಲ್ಲಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆಗಳ ಮೇಲೆ ದಾಖಲೆ ಬರೆಯಲು ಶುರು ಮಾಡಿದೆ. ನೆಲ್ಸನ್ ದಿಲೀಪ್ ಕುಮಾರ್ ಮತ್ತು ರಜನಿಕಾಂತ್ (Rajinikanth) ಕಾಂಬಿನೇಷನ್‌ನ ಈ ಸಿನಿಮಾ ಬಿಗ್ ಬಜೆಟ್​ನಲ್ಲಿ ತಯಾರಾಗುತ್ತಿದೆ. ಚಿತ್ರಮಂದಿರಕ್ಕೆ ಬರುವ ಮೊದಲೇ ಈ ಸಿನಿಮಾ ಡಿಜಿಟಲ್ ಲೋಕದಲ್ಲಿ ಇತಿಹಾಸ ನಿರ್ಮಿಸಿದೆ. ವರದಿಗಳ ಪ್ರಕಾರ,…

Read More

ಗಣ್ಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಅರ್ಜುನ್- ಸಾನಿಯಾ – Kannada News | Arjun Tendulkar Weds Sania Chandok: Sachin’s Son Ties Knot in Star Studded Mumbai Ceremony

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ತಮ್ಮ ಬಹುದಿನಗಳ ಗೆಳತಿ ಸಾನಿಯಾ ಚಾಂದೋಕ್ ಅವರೊಂದಿಗೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಆಗಸ್ಟ್​ನಲ್ಲಿ ತೀರ ಖಾಸಗಿಯಾಗಿ ಕುಟುಂಬದವರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಾಗೆಯೇ ಮಾರ್ಚ್ 3 ರಂದು ಮುಂಬೈನ ಮಹಾಲಕ್ಷ್ಮಿ ರೇಸ್ ಕೋರ್ಸ್‌ನಲ್ಲಿ ಮೆಹಂದಿ ಸಮಾರಂಭವು ನಡೆದಿತ್ತು. ಆ ಸಮಾರಂಭದಲ್ಲಿ ಕ್ರಿಕೆಟ್ ಜಗತ್ತಿನ ಅನೇಕ ದಂತಕಥೆಗಳು ಉಪಸ್ಥಿತರಿದ್ದರು. ಸಚಿನ್ ಅವರ ಆಪ್ತರು, ಕ್ರಿಕೆಟಿಗರು ಮತ್ತು ಸೆಲೆಬ್ರಿಟಿಗಳು ಮೆಹಂದಿ ಸಮಾರಂಭದಲ್ಲಿ ಭಾಗವಹಿಸಿದ್ದರು,…

Read More

‘ನಿನ್ನ ಟೈಮ್ ಸ್ಟಾರ್ಟ್ ಆಗಿದೆ’; ಗಿಲ್ಲಿಗೆ ವಾರ್ನ್ ಮಾಡಿ ಬಿಗ್ ಬಾಸ್ ಬಳಿ ಅಶ್ವಿನಿ ಗೌಡ ವಿಶೇಷ ಮನವಿ – Kannada News | Your Time Started in Big Boss Kannada Ashwini Gowda warns Gilli Nata

ಬಿಗ್ ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಹಾವು ಮುಂಗುಸಿ ರೀತಿ ಯಾವಾಗಲೂ ಕಚ್ಚಾಡುತ್ತಾ ಇರುತ್ತಾರೆ. ಇವರ ಮಧ್ಯೆ ಆಗಾಗ ಕಿರಿಕ್​​ಗಳು ಆಗುತ್ತಲೇ ಇರುತ್ತವೆ. ಅಶ್ವಿನಿ ಗೌಡ ಅವರು ಈ ಮೊದಲು ಸಿಟ್ಟನ್ನು ಬಿಟ್ಟು ಮೌನಕ್ಕೆ ಶರಣಾಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ಪರಿಸ್ಥಿತಿ ಹಾಗೂ ಗಿಲ್ಲಿ ನಟನ ಚುಚ್ಚು ಮಾತುಗಳು ಇದಕ್ಕೆ ಅವಕಾಶ ಕೊಡುತ್ತಿಲ್ಲ. ಅವರು ಮತ್ತೆ ಮತ್ತೆ ಕೆರಳುತ್ತಿದ್ದಾರೆ. ಈಗ ಗಿಲ್ಲಿಗೆ ಅಶ್ವಿನಿ ಗೌಡ ನೇರವಾಗಿ ಗಿಲ್ಲಿಗೆ ವಾರ್ನ್ ಮಾಡಿದ್ದಾರೆ….

Read More

ಅಶ್ಲೀಲವಾಗಿ ಮೆಸೇಜ್​​, ವರದಕ್ಷಿಣೆ ಕಿರುಕುಳ: ಪೊಲೀಸ್​​ ಪತಿ ಕಾಟಕ್ಕೆ ಪತ್ನಿ ಕಂಗಾಲು – Kannada News | Bidar Woman Accuses Police Husband of Dowry Harassment, Obscene Messages

ಬೀದರ್​​, ಜನವರಿ 12: ಪೊಲೀಸ್​​ ಕಾನ್ಸ್​​ಟೇಬಲ್ ಪತಿ ಅಶ್ಲೀಲವಾಗಿ ಮೆಸೇಜ್ ಮಾಡಿ ಕಿರುಕುಳ ನೀಡೋದಲ್ಲದೆ, ಮಾನಸಿಕ ಹಿಂಸೆ ಮತ್ತು ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಬೀದರ್​​ ಜಿಲ್ಲೆಯ ಔರಾದ್​ನಲ್ಲಿ ಯುವತಿಯೋರ್ವರು ಆರೋಪಿಸಿದ್ದಾರೆ. ಚಿಟಗುಪ್ಪ ಮೂಲದ ಕಾನ್ಸ್​​ಟೇಬಲ್​​ ಮಚೇಂದ್ರ ವಿರುದ್ಧ ಆರೋಪ ಕೇಳಿಬಂದಿದ್ದು, ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆ ಸೀನಾ ಹೇಳಿದ್ದಾರೆ. ‘ಅಕ್ಕನ ಮಗಳ ಮದುವೆ ಆಗೋದಾಗಿ ಬೆದರಿಕೆ’ ಬೆಂಗಳೂರಿನ ಮೈಕೋ ಲೇಔಟ್ ಟ್ರಾಫಿಕ್ ಠಾಣೆ ಪಿಸಿ ಆಗಿರುವ ಮಚೇಂದ್ರ ಮತ್ತು ಆತನ…

Read More

ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿ ಕಿಚ್ಚು ಹೊತ್ತಿಸಿದ ದಾವಣಗೆರೆ ದಂಗಲ್, ಪಕ್ಷದ ವಿರುದ್ಧ ಜಮೀರ್ ಷಡ್ಯಂತ್ರ ರೂಪಿಸಿದ್ರಾ?

ಬೆಂಗಳೂರು, (ಏಪ್ರಿಲ್ 10): ದಾವಣಗೆರೆ ದಕ್ಷಿಣ ಉಪ ಚುನಾವಣೆ (Davanagere By Election) ಮುಗಿದರೂ ಸಹ ಕಾಂಗ್ರೆಸ್​ ಮುಸ್ಲಿಂ ನಾಯಕರಲ್ಲಿನ (Congress Muslim Leaders) ಕಿಚ್ಚು ತಣ್ಣಗಾಗಿಲ್ಲ. ಬದಲಾಗಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಹೌದು…ಬೈ ಎಲೆಕ್ಷನ್ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ದಾವಣಗೆರೆ ಚುನಾವಣೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ನಜೀರ್ ಅಹಮದ್, ಅಬ್ದುಲ್ ಜಬ್ಬರ್ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ ಆರೋಪ ಕೇಳಿಬಂದಿದೆ. ಈ ಸಂಬಂಧ ಕಾಂಗ್ರೆಸ್ ಮುಸ್ಲಿಂ ನಾಯಕರು ರಣದೀಪ್ ಸುರ್ಜೇವಾಲಗೆ ದೂರು ನೀಡಿದ್ದಾರೆ….

Read More