Headlines

Tv9 Kannada News Live: ಮಳೆಗೆ ಬೆಂಗಳೂರಲ್ಲಿ ಸಾಲು ಸಾಲು ಅವಾಂತರ, ಬಂಗಾಳ ಸಿನಿ ತಾರೆಯರಿಗೆ ಶಾಕ್​​; ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು – Kannada News | Tv9 Kannada News Live: Bengaluru Rain Crushes Cars; FIR Against Bengali Actors; Vijay’s Cabinet Expansion Today

ಕಾರುಗಳ ಮೇಲೆ ಬಿದ್ದ ಮರImage Credit source: Tv9 Kannada ಬೆಂಗಳೂರು, ಮೇ 22: ಬೆಂಗಳೂರಲ್ಲಿ (Bengaluru) ನಿನ್ನೆ (22) ಸುರಿದ ಧಾರಾಕಾರ ಮಳೆಯ ಅಬ್ಬರಕ್ಕೆ ನಗರದಲ್ಲಿ ಸಾಲು ಸಾಲು ಅವಾಂತರಗಳು ನಡೆದಿವೆ. ಗಾಳಿ ಮಳೆಯ ಹಿನ್ನೆಲೆ ಮಹಾಲಕ್ಷ್ಮಿ ಲೇಔಟ್​​ನ ಪೈಪ್ ಲೈನ್ ರಸ್ತೆಯಲ್ಲಿ ಮರ ಧರೆಗುರುಳಿದ ಪರಿಣಾಮ ರಸ್ತೆಬದಿ ನಿಲ್ಲಿಸಿದ್ದ ಮೂರು ಕಾರುಗಳು ಸಂಪೂರ್ಣ ಜಖಂ ಆಗಿವೆ. ಬಳಿಕ ಬೃಹತ್​​ ಗಾತ್ರದ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವು ಮಾಡಿದ್ದಾರೆ. ಹಲವೆಡೆ ರಸ್ತೆಯ ಮೇಲೆಯೇ ನದಿಯಂತೆ…

Read More

ಮೆಡಿಸಿನ್ ಇಲ್ಲ, ಎಕ್ಸ್‌ರೇ ಶೀಟ್ ಕೂಡ ಇಲ್ಲ! ಗ್ಯಾರಂಟಿ ಯೋಜನೆಗೆ ಹಣ ಒದಗಿಸುವ ಭರದಲ್ಲಿ ಔಷಧಿಗಳಿಗೆ ಸರ್ಕಾರದಿಂದ ಕತ್ತರಿ? – Kannada News | Severe Medicine Shortage at Devanahalli Government Hospital: Patients Struggle Without Antibiotics and X ray Sheets

ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಗಳ ಅಭಾವ ದೇವನಹಳ್ಳಿ, ಮೇ 13: ಸರ್ಕಾರದ ಗ್ಯಾರೆಂಟಿ ಯೋಜನೆಗಳಿಗೆ ಹಣ ಒದಗಿಸುವ ಭರಾಟೆಯಲ್ಲಿ ಆರೋಗ್ಯ ಇಲಾಖೆಯ ಮೆಡಿಸಿನ್‌ಗಳಿಗೆ (Medicine) ಕತ್ತರಿ ಹಾಕಲಾಗಿದೆಯೇ ಎಂಬ ಅನುಮಾನ ಈಗ ಸಾರ್ವಜನಿಕರಲ್ಲಿ ಮೂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಗಳ ತೀವ್ರ ಕೊರತೆ ಎದುರಾಗಿದ್ದು, ಬಡ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಮುಖ್ಯಾಂಶಗಳು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಆಂಟಿಬಯೋಟಿಕ್ ಮಾತ್ರೆ ಹಾಗೂ ಚುಚ್ಚುಮದ್ದುಗಳ ತೀವ್ರ ಅಭಾವ  ಎಕ್ಸ್‌ರೇ ಶೀಟ್ ಇಲ್ಲದೆ ರೋಗಿಗಳು ಮೊಬೈಲ್‌ನಲ್ಲಿ…

Read More

WITT Summit: ಜಗತ್ತಿನ ಅನಿಶ್ಚಿತತೆಯ ನಡುವೆಯೂ ಜಾಗತಿಕ ದಿಕ್ಕನ್ನು ರೂಪಿಸಲು ಭಾರತ ಸಜ್ಜಾಗಿದೆ; ಟಿವಿ9 ಎಂಡಿ ಮತ್ತು ಸಿಇಒ ಬರುಣ್ ದಾಸ್

ನವದೆಹಲಿ, ಮಾರ್ಚ್ 20: ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026’ (WITT) ಮಾರ್ಚ್ 23-24 ರಂದು ದೆಹಲಿಯಲ್ಲಿ ನಡೆಯಲಿದೆ. ಈ ಶೃಂಗಸಭೆಗೂ ಮುನ್ನ ಮಾತನಾಡಿದ ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್, “ಜಾಗತಿಕ ಅನಿಶ್ಚಿತತೆ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷಗಳ ಹೊರತಾಗಿಯೂ ಭಾರತವು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತವು ಇತಿಹಾಸದಲ್ಲಿ ಒಂದು ವಿಶಿಷ್ಟ ಘಟ್ಟದಲ್ಲಿ ನಿಂತಿದೆ” ಎಂದು ಹೇಳಿದ್ದಾರೆ. “ಕಳೆದ ವರ್ಷ ಜಾಗತೀಕರಣವು ತೀವ್ರ ಹೊಡೆತ ನೀಡಿದೆ. ಸುಂಕಗಳನ್ನು ಆಯುಧಗಳಾಗಿ…

Read More

ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?

ಖ್ಯಾತ ಗಾಯಕಿ ಆಶಾ ಭೋಸ್ಲೆ (Asha Bhosle) ಅವರು ನಿಧನರಾಗಿದ್ದಾರೆ. ಅವರು ಕನ್ನಡದಲ್ಲಿ ಹಾಡಿದ ಮೂರು ಗೀತೆಗಳು ಬಿಡುಗಡೆ ಆಗಿವೆ. ಆದರೆ ನಾಲ್ಕನೇ ಹಾಡು ರಿಲೀಸ್ ಆಗಲೇ ಇಲ್ಲ. ಆ ಗೀತೆಗೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರು ಸಂಗೀತ ನೀಡಿದ್ದರು. ಆ ದಿನಗಳನ್ನು ವೀರ್ ಸಮರ್ಥ್ (Veer Samarth) ಅವರು ಈಗ ನೆನಪಿಸಿಕೊಂಡಿದ್ದಾರೆ. ‘ಮಾಣಿಕ್ಯ’ ಎಂಬ ಸಿನಿಮಾದ ಸಲುವಾಗಿ ಈ ಹಾಡನ್ನು ಸಿದ್ಧಪಡಿಸಲಾಗಿತ್ತು. ಆಶಾ ಭೋಸ್ಲೆ ಅವರಿಂದ ಹಾಡಿಸಬೇಕು ಎಂಬುದು ವೀರ್ ಸಮರ್ಥ್ ಅವರ ಕನಸಾಗಿತ್ತು….

Read More

SRH vs DC IPL 2026 Live Score: ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ – Kannada News | Sunrisers Hyderabad vs Delhi Capitals IPL 2026 Live Cricket Score SRH vs DC Match on 21st April latest news in Kannada

ಐಪಿಎಲ್ 2026 ರ 31 ನೇ ಪಂದ್ಯದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಿದೆ. ಎರಡೂ ತಂಡಗಳು ತಲಾ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಸಮಬಲ ಸಾಧಿಸಿವೆ. ಆದರೆ, ಉತ್ತಮ ರನ್ ರೇಟ್ ನಿಂದಾಗಿ ಹೈದರಾಬಾದ್ ನಾಲ್ಕನೇ ಸ್ಥಾನದಲ್ಲಿದೆ. ದೆಹಲಿ ತಂಡವು ತಮ್ಮ ನಾಲ್ಕನೇ ಗೆಲುವನ್ನು ಎದುರು ನೋಡುತ್ತಿದೆ. ಹೈದರಾಬಾದ್ ತಂಡವು ತವರು ನೆಲದಲ್ಲಿ ಸತತ ಮೂರನೇ ಗೆಲುವಿನ ಗುರಿಯನ್ನು ಹೊಂದಿದೆ. Source link

Read More

15 ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವ ಕೊನೆಗೂ ಸೆರೆ: 1.40 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಹಣ ವಶಕ್ಕೆ – Kannada News | Notorious Burglar Wanted in 15 Theft Cases Arrested in Bengaluru; Gold and Cash Worth Rs 1.4 Crore Seized

ಬೆಂಗಳೂರು, ಮಾರ್ಚ್​ 3: ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸರು 15 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಳವಳ್ಳಿ ಮೂಲದ ಸಿದ್ದು ಅಲಿಯಾಸ್ ನಾಗರಾಜ್ ಎಂಬಾತನೇ ಬಂಧಿತ ಆರೋಪಿ. ಈತನಿಂದ ಬರೋಬ್ಬರಿ 1.40 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 19.5 ಲಕ್ಷ ರೂಪಾಯಿ ನಗದು ಮತ್ತು 711 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ನಾಗರಾಜ್ ಸುಮಾರು ಏಳೆಂಟು ವರ್ಷಗಳಿಂದ ಕಳ್ಳತನವನ್ನೇ ಮಾಡಿಕೊಂಡಿದ್ದ. ಈತನ ವಿರುದ್ಧ ಬೆಂಗಳೂರಿನ ಮಾದನಾಯಕನಹಳ್ಳಿ…

Read More

Horoscope Today 24th​​ March​: ಇಂದು ಈ ರಾಶಿಯವರಿಗೆ ದೂರದ ಪ್ರಯಾಣ ಯೋಗ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 24, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಷಷ್ಠಿ ತಿಥಿಯಿದ್ದು, ರಾಹುಕಾಲ 3 ಗಂಟೆ 27 ನಿಮಿಷದಿಂದ 4 ಗಂಟೆ 58 ನಿಮಿಷದ ತನಕ ರಾಹುಕಾಲವಿರುತ್ತದೆ ಎಂದು ಗುರೂಜಿ ಹೇಳಿದ್ದಾರೆ. ಇಂದು ಸ್ಕಂದ ದವನಾರ್ಪಣೆಯ ದಿನ. ಇಂದು ರವಿ ಮೀನ ರಾಶಿಯಲ್ಲಿ,…

Read More

ಸೋಮವಾರ ಅಮಾವಾಸ್ಯೆ: ಮಾದಪ್ಪನ ಬೆಟ್ಟದಲ್ಲಿ ಭಕ್ತಸಾಗರ – Kannada News | Male Mahadeshwara Betta Crowded on Amavasya: Lakhs of Devotees Offer Prayers to Madappa on Monday

ಚಾಮರಾಜನಗರ, ಜೂನ್ 15: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪವಿತ್ರ ಪುಣ್ಯಕ್ಷೇತ್ರವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಸೋಮವಾರದ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಭಕ್ತರ ಮಹಾಪೂರವೇ ಹರಿದುಬಂದಿದೆ. ಸಾಮಾನ್ಯವಾಗಿ ಪ್ರತಿ ಸೋಮವಾರದಂದು ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತವೆ. ಆದರೆ, ಈ ಬಾರಿ ಸೋಮವಾರದಂದೇ ಅಮಾವಾಸ್ಯೆ ಒದಗಿ ಬಂದಿರುವುದರಿಂದ ಮಾದಪ್ಪನ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಿದ್ದಾರೆ. ಅಮಾವಾಸ್ಯೆಯ ವಿಶೇಷ ದಿನವಾದ ಇಂದು ಮುಂಜಾನೆಯಿಂದಲೇ ಶ್ರೀ ಮಹದೇಶ್ವರ ಸ್ವಾಮಿಗೆ ಸಾಂಪ್ರದಾಯಿಕವಾಗಿ ವಿಶೇಷ…

Read More

ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡಿದ ಡಿಕೆ ಶಿವಕುಮಾರ್, ರೌಡಿ ನಿಗ್ರಹ ತಂಡ ರಚನೆಗೆ ಆದೇಶ – Kannada News

ಬೆಂಗಳೂರು, (ಜೂನ್ 04): ಕರ್ನಾಟಕದ (Karnataka) ಹಲವು ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಆರೋಪಗಳು ಕೇಳಿಬರುತ್ತಿವೆ. ಪುಡಿ ರೌಡಿಗಳ ಅಟ್ಟಹಾಸ, ಡ್ರಗ್ಸ್, ಗಾಂಜಾ, ಜೂಜಾಟ, ಅಕ್ರಮ ಮರಳು ದಂಧೆ, ಮಟ್ಕಾ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚಿತ್ತಿವೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಕೊಲೆ, ಸುಲಿಗೆ, ಡ್ರಗ್ಸ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಇದೀಗ ಇವುಗಳಿಗೆ ಕಡಿವಾಣ ಹಾಕಲು ನೂತನ ಸಿಎಂ ಡಿಕೆ ಶಿವಕುಮಾರ್  (DK Shivakumar) ಸಮರ ಸಾರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇಂದು (ಜೂನ್ 04) ವಿಧಾನಸೌಧದಲ್ಲಿ ನಡೆದ ಮೊದಲ…

Read More

ಏಪ್ರಿಲ್ ಮೂರ್ಖರ ದಿನವಲ್ಲ, ಬುದ್ಧಿವಂತರ ದಿನ: ಉಪೇಂದ್ರ

ಏಪ್ರಿಲ್ 1ರಂದು ಮೂರ್ಖರ ದಿನ ಎಂದು ಆಚರಣೆ ಮಾಡಲಾಗುತ್ತದೆ. ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸ ಇಂದು ಆಗುತ್ತದೆ. ಆದರೆ, ಈ ದಿನವನ್ನು ಬುದ್ಧಿವಂತರ ದಿನವನ್ನಾಗಿ ಆಚರಿಸಬೇಕು ಎಂದು ಉಪೇಂದ್ರ ಹೇಳಿದ್ದಾರೆ. ‘ಪ್ರಜಾಕೀಯ’ ಪಕ್ಷದ ಆ್ಯಪ್ ಲಾಂಚ್ ಮಾಡುವ ಸಂದರ್ಭದಲ್ಲಿ ಅವರು ಈ ಮಾತನ್ನು ಹೇಳಿದರು. ‘ಮಾತನಾಡುವಾಗ ಎಚ್ಚರಿಕೆ ಬೇಕು. ಇಲ್ಲವಾದರೆ, ಇವರು ಎಡ, ಬಲ ಎಂದು ನಿರ್ಧರಿಸಿ ಬಿಡುತ್ತಾರೆ’ ಎಂದಿದ್ದಾರೆ ಉಪೇಂದ್ರ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More