ಕೋಗಿಲು ಕದನ: ಬಿಜೆಪಿ ವಿರುದ್ಧ ಸಚಿವ ಕೃಷ್ಣಭೈರೇಗೌಡ ಸ್ಫೋಟಕ ಆರೋಪ – Kannada News | Krishna Byregowda Slams BJP Over Politics in Kogilu Demolition

ಬೆಂಗಳೂರು, ಜನವರಿ 05: ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳ ತೆರವಿನ ಸಂಬಂಧ ವಿಪಕ್ಷ ಬಿಜೆಪಿ ಆರೋಪಗಳಿಗೆ ಸಚಿವ ಕೃಷ್ಣಭೈರೇಗೌಡ ಕಿಡಿ ಕಾರಿದ್ದಾರೆ. ಒತ್ತುವರಿ ನಾವೇ ಮಾಡಿಸಿದ್ದಾಗಿದ್ರೆ ಯಾಕೆ ತೆರವು ಮಾಡ್ತಿದ್ವಿ? ಆರೋಪ ಮಾಡೋರು ಕಾಮನ್ ಸೆನ್ಸ್ ಇಟ್ಕೊಂಡು ಮಾತಾಡಬೇಕು ಎಂದಿದ್ದಾರೆ. ಅಲ್ಲದೆ ಅಲ್ಲಿ ಬಾಂಗ್ಲಾದೇಶದ ವಲಸಿಗರು ಇರೋದಾಗಿ ಆರೋಪ ಮಾಡ್ತಿದ್ದಾರೆ. ಅದು ನಿಜವಾದ್ರೆ ಅವರನ್ನು ಗುರುತಿಸಿವುದು ಕೇಂದ್ರ ಸರ್ಕಾರದ ಕೆಲಸ. ಕೇಂದ್ರ ಗೃಹ ಇಲಾಖೆ ಏನು ಮಾಡುತ್ತಿದ್ದೆ? ಬಿಜೆಪಿಯವರು ನಮ್ಮ ಹೆಗಲ ಮೇಲೆ ಬಂದೂಕು ಇಟ್ಟು ಕೇಂದ್ರ ಸರ್ಕಾರಕ್ಕೆ ಹೊಡೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ಫೇಲ್ಯೂರ್​​ ವಿರುದ್ಧ ಬಿಜೆಪಿ ಹೋರಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಈ ಯೋಜನೆಗೆ ಕೇಂದ್ರದ ಅನುಮೋದನೆ ಸಿಕ್ಕರೆ ಬೆಂಗಳೂರಿನಿಂದ ಪುಣೆಗೆ ಹೋಗಲು 7 ಗಂಟೆ ಸಾಕು – Kannada News | Greenfield Expressway: Pune Bengaluru NH48 Congestion Relief Coming Soon

ಬೆಂಗಳೂರು, ಜ.5: ಬೆಂಗಳೂರಿಗರ ಬಹುದೊಡ್ಡ ಬೇಡಿಕೆಗೆ ಕೇಂದ್ರ ಸರ್ಕಾರ ಅಸ್ತು ಎನ್ನುವ ಸಾಧ್ಯತೆ ಇದೆ. ಪುಣೆ-ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ (Greenfield Expressway) ಅಂತಿಮ ಸಂಚರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೇಂದ್ರ ಸಚಿವ ಸಂಪುಟವು 2026ರಲ್ಲಿ ಈ ಯೋಜನೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿದೆ. 2023ರಲ್ಲಿ ಈ ಯೋಜನೆಗೆ ಅನುಮೋದನೆ ನೀಡಬೇಕಿತ್ತು. ಪುಣೆ-ಬೆಂಗಳೂರು NH48 ನಲ್ಲಿನ ದೀರ್ಘಕಾಲದ ದಟ್ಟಣೆ ಇದು ಬಹುದೊಡ್ಡ ಪರಿಹಾರವಾಗಲಿದೆ. ಇನ್ನು ಈ ಯೋಜನೆಗಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಲವು ಭಾರೀ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಯೋಜನೆಗೆ ಕೇಂದ್ರದಿಂದ ಅಂತಿಮ ಅನುಮತಿ ಇನ್ನೂ ಸಿಕ್ಕಿಲ್ಲ. ಸಚಿವ ಸಂಪುಟದ ಅನುಮೋದನೆಯ ನಂತರವೇ ಭೂಸ್ವಾಧೀನ ಪ್ರಾರಂಭವಾಗಬಹುದು ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಈ ರಸ್ತೆಯ ಕಾರ್ಯಯೋಜನೆಯ ಪ್ರಕ್ರಿಯೆಗಾಗಿ ಸುಮಾರು ಎರಡು ವರ್ಷಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪುಣೆ ಮತ್ತು ಬೆಂಗಳೂರನ್ನು ಸಂಪರ್ಕಿಸುವ ಮತ್ತು ಹೆಚ್ಚಿನ ಸಂಚಾರ ದಟ್ಟಣೆ ಇರುವ NH48ನಲ್ಲಿ ಭಾರಿ ಸಂಚಾರ ಹೊರೆ ಇರುವುದರಿಂದ ಪ್ರಸ್ತಾವಿತ ಕಾರಿಡಾರ್ ಬೇಕು ಎಂದು ಪರಿಗಣಿಸಲಾಗಿದೆ. ಹೆದ್ದಾರಿಯಲ್ಲಿ ನಿರಂತರ ನಿರ್ಮಾಣ ಕಾರ್ಯವು ಸಂಚಾರವನ್ನು ಮತ್ತಷ್ಟು ನಿಧಾನಗೊಳಿಸಿದೆ, ಪ್ರಯಾಣಿಕರು ಮತ್ತು ಸರಕು ಸಾಗಣೆದಾರರಿಗೆ ಪ್ರಯಾಣದ ಸಮಯವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 5 ಗಂಟೆಗಳಲ್ಲಿ ತಲುಪಬಹುದು! ಅದು ಹೇಗೆ ಗೊತ್ತಾ?

700 ಕಿ.ಮೀ ಉದ್ದದ, ಆರು ಪಥಗಳ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಿದ ನಂತರ ಪ್ರಯಾಣದ ಸಮಯವನ್ನು ಕಡಿಮೆ ಆಗುತ್ತದೆ. ಇದರಿಂದಾಗಿ ವಾಹನ ಚಾಲಕರು ಪುಣೆ ಹೊರ ವರ್ತುಲ ರಸ್ತೆಯಿಂದ ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR) ಅನ್ನು ಕೇವಲ ಏಳು ಗಂಟೆಗಳಲ್ಲಿ ತಲುಪಬಹುದು. ಸಚಿವ ಸಂಪುಟದ ಅನುಮೋದನೆ ದೊರೆತರೆ ಯೋಜನೆ ತಕ್ಷಣದಿಂದ ಆರಂಭವಾಗುತ್ತದೆ. ಭೂಸ್ವಾಧೀನ, ರಸ್ತೆ ಜೋಡಣೆ, ಅಡಿಪಾಯ ಹಾಕುವ ಕೆಲಸಗಳು ನಡೆಯಲಿದೆ. ಕೆಲವೇ ವರ್ಷಗಳಲ್ಲಿ ಈ ರಸ್ತೆ ನಿರ್ಮಾಣವಾಗಲಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಇದೊಂದು ಮಹತ್ವದ ಯೋಜನೆ ಆಗಿದೆ. ಇದರಿಂದ ಪುಣೆ-ಬೆಂಗಳೂರು ಕಾರಿಡಾರ್​​ನಿಂದ ನಿವಾಸಿಗಳು ಮತ್ತು ರಸ್ತೆ ಬಳಕೆದಾರರಿಗೆ ಇದು ಹೆಚ್ಚು ಸಹಾಯವಾಗಲಿದೆ. 2026 ರಲ್ಲಿ ನಿರೀಕ್ಷೆಯಂತೆ ಅನುಮೋದನೆ ದೊರೆತರೆ, ದೀರ್ಘಕಾಲದಿಂದ ವಿಳಂಬವಾಗಿದ್ದ ಪುಣೆ-ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಕಾರ್ಯನಿರ್ವಹಿಸಲಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಚಾನೆಲ್ ಮನೆ ಮಗಳಾದರೆ ಉಳಿಯಲು ಸಾಧ್ಯವಿಲ್ಲ, ಅದು ಸುಳ್ಳು’; ಸ್ಪಂದನಾ ಸೋಮಣ್ಣ – Kannada News | I Am Not A Daughter Of Colors Kannada Says Spandana Somanna

ಬಿಗ್ ಬಾಸ್ ಮನೆಯಿಂದ ಸ್ಪಂದನಾ ಸೋಮಣ್ಣ ಎಲಿಮಿನೇಟ್ ಆಗಿದ್ದು ಗೊತ್ತಿರುವ ವಿಷಯ. ಕಳೆದ ಭಾನುವಾರ ಅವರು ಔಟ್ ಆದರು. ಅವರು ಇಷ್ಟಯ ದಿನ ಇದ್ದಿದ್ದು ಅದೃಷ್ಟದಿಂದ ಎಂಬ ಮಾತಿದೆ. ಇದಕ್ಕೆ ಅವರು ಉತ್ತರಿಸಿದ್ದಾರೆ. ‘ಯಾರು ಮಗಳು, ಸೊಸೆ ಎಂದು ಉಳಿದುಕೊಳ್ಳಲ್ಲ. ಜನರ ಮನೆ ಮಗಳು ಆಗೋಕೆ ಸಾಧ್ಯವಿಲ್ಲ. ಜನರ ಮಗಳಾಗಬೇಕು. ಆಗ ಉಳಿದುಕೊಳ್ಳಬಹುದು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ಹೆಂಡತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಮಗನನ್ನು ವಿವಸ್ತ್ರಗೊಳಿಸಿದ ಗುಂಪು – Kannada News | Man Thrashed, Wife assaulted And Son Stripped By Group Of Men In Delhi

ನವದೆಹಲಿ, ಜನವರಿ 05: ದೆಹಲಿ(Delhi)ಯ ಲಕ್ಷ್ಮಿನಗರದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬನನ್ನು ಥಳಿಸಿ ಅವರ ಹೆಂಡತಿಗೆ ಲೈಂಗಿಕ ಕಿರುಕುಳ ನೀಡಿ ಮಗನನ್ನು ವಿವಸ್ತ್ರಗೊಳಿಸಿ ಚಿತ್ರಹಿಂಸೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಜನವರಿ 2 ರಂದು ನಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಸಿಕ್ಕಿವೆ. ಅವರ ಮಗನನ್ನು ಬೀದಿಯಲ್ಲಿ ಬೆತ್ತಲೆ ಮಾಡಿ ಪುರುಷರ ಗುಂಪೊಂದು ಥಳಿಸಿದೆ.

ದುಷ್ಕರ್ಮಿಗಳಿಂದ ಥಳಿತಕ್ಕೊಳಗಾದ ರಾಜೇಶ್ ಗರ್ಗ್ ತನ್ನ ಮನೆಯಲ್ಲಿ ಜಿಮ್ ನಡೆಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಮ್‌ನ ಉಸ್ತುವಾರಿ ಸತೀಶ್ ಯಾದವ್ ತಮ್ಮನ್ನು ವಂಚಿಸಿ ವಾಣಿಜ್ಯ ಉದ್ಯಮವನ್ನು ವಹಿಸಿಕೊಂಡಿದ್ದಾರೆ ಎಂದು ಗರ್ಗ್ ಆರೋಪಿಸಿದ್ದಾರೆ.

ಜನವರಿ 2 ರಂದು, ಗಾರ್ಗ್ ಮತ್ತು ಅವರ ಪತ್ನಿ ನೀರಿನ ಸೋರಿಕೆಯನ್ನು ಪರಿಶೀಲಿಸಲು ನೆಲಮಾಳಿಗೆಗೆ ಹೋಗಿದ್ದರು, ಆಗ ಯಾದವ್ ಮತ್ತು ಕೆಲವರು ಕೂಡ ಅಲ್ಲಿಗೆ ಹೋಗಿದ್ದರು. ಅವರು ತಮಗೆ ಹೊಡೆದು ಒದ್ದು, ತನ್ನ ಹೆಂಡತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗರ್ಗ್ ಹೇಳಿದ್ದಾರೆ. ಅವರ ಮಗ ಅವರನ್ನು ನೋಡಲು ಬಂದಾಗ, ಆ ಪುರುಷರು ಆತನನ್ನು ಹಿಡಿದು, ಮನೆಯ ಹೊರಗಿನ ಬೀದಿಗೆ ಕರೆದೊಯ್ದು ವಿವಸ್ತ್ರಗೊಳಿಸಿದ್ದಾರೆ ಎಂದು ಗರ್ಗ್ ಹೇಳಿದರು.

ವಿಡಿಯೋ ಇಲ್ಲಿದೆ

ಪ್ರಕರಣ ದಾಖಲಾಗಿದ್ದು, ಸತೀಶ್ ಯಾದವ್​ನನ್ನು ಬಂಧಿಸಲಾಗಿದೆ. ವಿಕಾಸ್ ಯಾದವ್, ಶುಭಂ ಯಾದವ್ ಮತ್ತು ಓಂಕಾರ್ ಯಾದವ್ ಎಂಬುವವರು ಪರಾರಿಯಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಂದಾಯ ಸಚಿವ ಕೃಷ್ಣಬೈರೇಗೌಡ ಕೊರಳಿಗೆ ಭೂ ಕಬಳಿಕೆ ಉರುಳು? ಲೋಕಾಯುಕ್ತಕ್ಕೆ ಬಿಜೆಪಿ ದೂರು – Kannada News | JP Files Lokayukta Complaint Against Krishna Byre Gowda Over Land Grab Allegations

ಕೋಲಾರ, ಜನವರಿ 05: ಜಿಲ್ಲೆಯ ನರಸಪುರ ಹೋಬಳಿ ಗರುಡನಪಾಳ್ಯದಲ್ಲಿ 21 ಎಕರೆ ಜಮೀನು ಕಬಳಿಕೆ ಆರೋಪ ಸಂಬಂಧ ಕಂದಾಯ ಸಚಿವ ಕೃಷ್ಣಭೈರೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಕೋಲಾರ ನಗರದಲ್ಲಿರುವ ಲೋಕಾಯುಕ್ತ ಕಚೇರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ‌ ಓಂ ಶಕ್ತಿ ಚಲಪತಿ ನೇತೃತ್ವದಲ್ಲಿ ಕಂಪ್ಲೇಂಟ್​ ನೀಡಲಾಗಿದೆ. ತಮ್ಮ ಹುಟ್ಟೂರು ಕೋಲಾರ ತಾಲೂಕಿನ ಗರುಡಪಾಳ್ಯದಲ್ಲಿಯೇ ಸಚಿವರು ಸರ್ಕಾರಿ ಖರಾಬು ಜಮೀನು ಕಬಳಿಕೆ ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಸರ್ವೆ ನಂಬರ್ 46, 47ರಲ್ಲಿ 21 ಎಕರೆ ಭೂಮಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದ್ದು ನಿಷ್ಪಕ್ಷಪಾತ ತನಿಖೆಗೆ ಬಿಜೆಪಿ ಆಗ್ರಹಿಸಿದೆ.

ಈ ಬಗ್ಗೆ 2025ರ ಡಿಸೆಂಬರ್ 17ರಂದು ಬಿಜೆಪಿ ಮುಖಂಡ ತಮ್ಮೇಶ ಗೌಡ ಅವರು ದಾಖಲೆಗಳನ್ನು ಬಿಡುಗಡೆ ಮಾಡಿ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಸಚಿವರು ಖರಾಬು ಜಮೀನನ್ನು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಸರ್ಕಾರಿ ಜಮೀನು ಉಳಿಸಲು ಹೋರಾಟ ಮಾಡುತ್ತೇವೆ ಎನ್ನುವವರೇ ಜಮೀನು ಕಬಳಿಸಿದ್ದಾರೆ. ಮೂಲ ದಾಖಲೆಗಳನ್ನು ಫೋರ್ಜರಿ ಮಾಡಲಾಗಿದೆ. ಹೀಗಾಗಿ ಕೃಷ್ಣಭೈರೇಗೌಡ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ: ಸಚಿವ ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ; ಭೂಮಿ ಎಲ್ಲಿ? ಹೇಗಿದೆ ನೋಡಿ

ತಮ್ಮ ಮೇಲೆನ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ ಕೃಷ್ಣಭೈರೇಗೌಡ, ಬಿಜೆಪಿ ಆರೋಪ ಅಲ್ಲಗಳೆದಿದ್ದರು. ಅದು ನಮ್ಮ ತಾತನವರ ಜಾಗ, ಅವರಿಗೆ ಮೂರು ಜನ ಮಕ್ಕಳು . ಎಲ್ಲರಿಗೆ ಭಾಗ ಆಗಿ ನಮಗೆ ಬಂದಿದೆ ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೆ ಈ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ಆಗಲಿ, ನಾನೇ ತನಿಖೆಗೆ ಸಹಕಾರ ಮಾಡುತ್ತೇನೆ ಎಂದಿದ್ದರು. ರಾಜಕೀಯ ಕೆಸರೆರಚಾಟಕ್ಕೆ ಅವರು ಆರೋಪ ಮಾಡಿದ್ದಾರೆ. ರಾಜಕೀಯದಲ್ಲಿ ಘನತೆ ಗೌರವದಿಂದ ಇದ್ದೇವೆ. ಆರೋಪ ಮಾಡಿರುವವರು ಘನತೆ ಗೌರವಕ್ಕೆ ಕೆಳಗೆ ಹೋಗ್ತೀವಿ ಅಂದ್ರೆ ನಾವೇನು ಮಾಡೋಣ ಎಂದು ಬಿಜೆಪಿಗರಿಗೆ ಕೌಂಟರ್​​ ಕೊಟ್ಟಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ

Published On – 1:52 pm, Mon, 5 January 26

Source link

ಕನ್ನಡ ಮಾತನಾಡದಂತೆ ಹಾಸ್ಟೆಲ್ ವಾರ್ಡನ್ ಧಮ್ಕಿ: ಬೆಂಗಳೂರಿನ ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ – Kannada News | Bengaluru Anekal College Row: Protests Erupt After Hostel Warden Threatens Students for Speaking Kannada

ಬೆಂಗಳೂರು, ಜನವರಿ 5: ಕನ್ನಡ ಮಾತನಾಡದಂತೆ ಹಾಸ್ಟೆಲ್ ವಾರ್ಡನ್ ಧಮ್ಕಿ ಹಾಕಿರುವುದನ್ನು ಖಂಡಿಸಿ ಬೆಂಗಳೂರಿನ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ಸಮೀಪದ ಪ್ರತಿಷ್ಠಿತ ಖಾಸಗಿ ಕಾಲೇಜಿನ ಆವರಣದಲ್ಲಿ ಕನ್ನಡಪರ ಸಂಘಟನೆಗಳು ಸೋಮವಾರ ಭಾರಿ ಪ್ರತಿಭಟನೆ ನಡೆಸಿದವು. ಪರಿಣಾಮವಾಗಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಇಂದು ನಡೆಯಬೇಕಿದ್ದ ಇಂಟರ್ನಲ್ ಪರೀಕ್ಷೆ ಮುಂದೂಡಿಕೆಯಾಗಿದೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕಾಲೇಜು ಆಡಳಿತ ಮಂಡಳಿ, ಹಾಸ್ಟೆಲ್ ವಾರ್ಡನ್ ಸುರೇಶ್ ಎಂಬವರನ್ನು ಕೆಲಸದಿಂದ ವಜಾಗೊಳಿಸಿದೆ.

ಕನ್ನಡ ಮಾತನಾಡಿದ ವಾರ್ಡನ್ ದಬ್ಬಾಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ‘ಕರ್ನಾಟಕದ ಖಾಸಗಿ ಕಾಲೇಜುಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಿಲ್ಲಬೇಕು. ಉಪನ್ಯಾಸಕರ ಮೇಲಿನ ದಬ್ಬಾಳಿಕೆ ನಿಲ್ಲಬೇಕು’ ಎಂದು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ: ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರದಿಂದ ನೇರ ಕಾನೂನು ಸಲಹೆ; ವಾಟ್ಸಾಪ್​ನಲ್ಲಿ ಉಚಿತ ನ್ಯಾಯಸೇತು ಚಾಟ್​ಬೋಟ್ ಸೇವೆ – Kannada News | Get free legal advice, assistance from govt supported Nyaya Setu chatbot on WhatsApp

ನವದೆಹಲಿ, ಜನವರಿ 5: ಕಾರ್ಪೊರೇಟ್, ಅಪರಾಧ, ಕುಟುಂಬ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಕಾನೂನು ವ್ಯಾಜ್ಯಗಳಿದ್ದಲ್ಲಿ ವಾಟ್ಸಾಪ್​ನಲ್ಲಿ ಉಚಿತವಾಗಿ ತಜ್ಞರ ಸಲಹೆ (Free legal advice) ಪಡೆಯಬಹುದು. ಇಂಥದ್ದೊಂದು ಸೇವೆಯನ್ನು ಸರ್ಕಾರವೇ ಆರಂಭಿಸಿದೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು (Ministry of law and justice) ವಾಟ್ಸಾಪ್​ನಲ್ಲಿ ನ್ಯಾಯ ಸೇತು (Nyaya Setu) ಎನ್ನುವ ಕಾನೂನು ಸೇವೆಯನ್ನು 2026ರ ಜನವರಿ 1ರಂದು ಆರಂಭಿಸಿದೆ. ಯಾರು ಬೇಕಾದರೂ ಇದರಿಂದ ಕಾನೂನು ಸಲಹೆಗಳನ್ನು ಪಡೆದುಕೊಳ್ಳಲು ಸಾಧ್ಯ.

ಯಾವ ರೀತಿಯ ಕಾನೂನು ಸೇವೆಗಳು ಲಭ್ಯ?

ವಾಟ್ಸಾಪ್​ನಲ್ಲಿ ಲಭ್ಯ ಇರುವ ನ್ಯಾಯಸೇತು ಸೇವೆಯಲ್ಲಿ ಕಾನೂನು ಸಲಹೆ, ನೆರವು ಮತ್ತು ಸಮಾಲೋಚನೆಗಳನ್ನು ಪಡೆಯಬಹುದು. ಯಾವುದಾದರೂ ವ್ಯಾಜ್ಯ ಇದ್ದಲ್ಲಿ ಅದಕ್ಕೆ ಸಂಬಂಧಿಸಿದ ಕಾನೂನುಗಳು ಏನಿವೆ ಎಂಬ ಮಾಹಿತಿ ತಿಳಿಯಬಹುದು. ಅಥವಾ, ಆ ವ್ಯಾಜ್ಯದಲ್ಲಿ ನಿಮಗೆ ಯಾವ್ಯಾವ ಕಾನೂನು ಅವಕಾಶಗಳು, ಮಾರ್ಗಗಳು ಇವೆ ಎನ್ನುವ ಸಮಾಲೋಚನೆಗಳನ್ನು ಪಡೆಯಬಹುದು.

ಇದನ್ನೂ ಓದಿ: ವಾರಕ್ಕೆ ಎರಡು ರಜೆಗೆ ಆಗ್ರಹ: ಬ್ಯಾಂಕ್ ಉದ್ಯೋಗಿಗಳಿಂದ ಜ. 27ರಂದು ರಾಷ್ಟ್ರವ್ಯಾಪಿ ಮುಷ್ಕರ

ವಾಟ್ಸಾಪ್​ನಲ್ಲಿ ನ್ಯಾಯಸೇತು ಸ್ಕೀಮ್​ಗೆ ಹೇಗೆ ನೊಂದಾಯಿಸುವುದು?

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಟ್ವೀಟ್ ಮಾಡಿದ್ದು, 7217711814 ವಾಟ್ಸಾಪ್ ನಂಬರ್ ಕೊಟ್ಟಿದೆ. ಯಾರು ಬೇಕಾದರೂ ಈ ನಂಬರ್ ಅನ್ನು ಸೇವ್ ಮಾಡಿಕೊಳ್ಳಬಹುದು. ಅಥವಾ ಆ ನಂಬರ್​ಗೆ ಹೈ ಮೆಸೇಜ್ ಕಳುಹಿಸಿದರೂ ಸಾಕು. ಟೆಲಿ-ಲಾ (Tele-Law) ಹೆಸರಿನಲ್ಲಿ ಸ್ವಯಂ ಆಗಿ ಸೇವ್ ಆಗುತ್ತದೆ.

ಮೂಲತಃ ಇದು ಒಂದು ಚಾಟ್​ಬೋಟ್ (Chatbot) ಆಗಿರುತ್ತದೆ. ನಿಮಗೆ ಮೂಲ ಕಾನೂನು ಸಲಹೆಗಳನ್ನು ಮತ್ತು ಮಾರ್ಗದರ್ಶನವನ್ನು ಇದು ಒದಗಿಸುತ್ತದೆ. ವರದಕ್ಷಿಣ ಕಿರುಕುಳ ಇತ್ಯಾದಿ ಕೌಟುಂಬಿಕ ಸಮಸ್ಯೆ ಇದ್ದರೆ ಅದಕ್ಕೆ ಸಂಬಂಧಿಸಿದ ಕಾನೂನುಗಳು ಏನಿವೆ, ಯಾವ ಕ್ರಮವನ್ನು ತೆಗೆದುಕೊಳ್ಳಬಹುದು ಇತ್ಯಾದಿ ಸಲಹೆಯನ್ನು ಪಡೆಯಬಹುದು.

ಇದನ್ನೂ ಓದಿ: ಎಟಿಎಂಗಳಲ್ಲಿ ಮಾರ್ಚ್ ನಂತರ 500 ರೂ ನೋಟು ಸಿಗಲ್ವಾ? ಸರ್ಕಾರದ ಸ್ಪಷ್ಟನೆ ಇದು

ಈ ಚಾಟ್​ಬೋಟ್ ಕೇವಲ ಕಾನೂನು ಸಲಹೆ ಮತ್ತು ಮಾರ್ಗಗಳನ್ನು ತಿಳಿಸುತ್ತದೆ. ಅದರೆ, ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲು ಇತ್ಯಾದಿ ಕೆಲಸಗಳಿಗೆ ವೃತ್ತಿಪರ ವಕೀಲರ ನೆರವನ್ನು ಪಡೆಯಲೇಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ – Kannada News | Super Smash: First Ever Double Retirement In Men’s T20

ನ್ಯೂಝಿಲೆಂಡ್​ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಶ್ ಟೂರ್ನಿಯ 10ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಬೇ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ನಾರ್ದರ್ನ್ ನೈಟ್ಸ್ vs ಒಟಾಗೋ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಒಟಾಗೋ ತಂಡ 20 ಓವರ್​ಗಳಲ್ಲಿ 166 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನಾರ್ದರ್ನ್ ನೈಟ್ಸ್ 10 ಓವರ್​ಗಳಲ್ಲಿ 82 ರನ್ ಕಲೆಹಾಕಿದ್ದರು. ಆದರೆ ಬಳಿಕ ಇಬ್ಬರು ಪ್ರಮುಖ ದಾಂಡಿಗರು ರನ್​ ಕಲೆಹಾಕಲು ಪರದಾಡಿದರು.

17ನೇ ಓವರ್‌ನ ಮೊದಲ ಎಸೆತದ ನಂತರ ಜೀತ್ ರಾವಲ್ (23) ಅವರನ್ನು ನಿವೃತ್ತರಾಗಿ ಹಿಂತಿರುಗುವಂತೆ ನಾರ್ದರ್ನ್ ನೈಟ್ಸ್ ಸೂಚಿಸಿದರು. ಮುಂದಿನ ಓವರ್‌ನ ಮೊದಲ ಎಸೆತದಲ್ಲೇ ಕ್ಸೇವಿಯರ್ ಬೆಲ್ (9) ಅವರನ್ನು ಕೂಡ ವಾಪಸ್ ಕರೆಸಲಾಯಿತು. ಈ ಮೂಲಕ ನಾರ್ದರ್ನ್ ನೈಟ್ಸ್ ತಂಡವು ಟಿ20 ಕ್ರಿಕೆಟ್​ನಲ್ಲಿ ಇಬ್ಬರು ಆಟಗಾರರನ್ನು ರಿಟೈರ್ಡ್​ ಔಟ್ ಮಾಡಿದ ಮೊದಲ ತಂಡ ಎನಿಸಿಕೊಂಡಿತು.

ಇದಾದ ಬಳಿಕ ಹೋರಾಟ ಮುಂದುವರೆಸಿದ ನಾರ್ದರ್ನ್ ನೈಟ್ಸ್ ತಂಡವು ಕೊನೆಯ ಓವರ್​ನಲ್ಲಿ 18 ರನ್​ಗಳಿಸುವ ಮೂಲಕ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದರು. ವಿಶೇಷ ಎಂದರೆ ಸೂಪರ್ ಸ್ಮ್ಯಾಶ್ ಲೀಗ್​ನಲ್ಲಿ ಸೂಪರ್ ಓವರ್ ಆಡಿಸಲಾಗುತ್ತಿಲ್ಲ. ಹೀಗಾಗಿ ಉಭಯ ತಂಡಗಳು ತಲಾ 2 ಅಂಕಗಳನ್ನು ಹಂಚಿಕೊಂಡಿದೆ.

 

 

Source link

ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ – Kannada News | Bengaluru Om Shakti Stone Pelting: Minister Zameer Khan Demands Action on Chamarajpet Incident

ಬೆಂಗಳೂರು, ಜನವರಿ 05: ಬೆಂಗಳೂರಿನ ಜೆಜೆ ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಇಬ್ಬರು ಯುವತಿಯರು ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿತ್ತು. ಈ ಹಿಂಸಾತ್ಮಕ ಘಟನೆಯ ನಂತರ ಸಚಿವ ಜಮೀರ್ ಅಹ್ಮದ್ ಖಾನ್ ಜೆ.ಜೆ. ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ದೇವಿಯ ರಥದ ಮೇಲೆ ಕಲ್ಲು ಎಸೆದ ಘಟನೆಗೆ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ.

ಕೇವಲ ಅಪ್ರಾಪ್ತರು ಮಾತ್ರ ಈ ಕೃತ್ಯ ನಡೆಸಿದ್ದಾರೆ ಎನ್ನುವುದನ್ನು ನಂಬಲು ಸಾಧ್ಯವಿಲ್ಲವೆಂದ ಜಮೀರ್, ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚುವಂತೆ ಡಿಸಿಪಿಗೆ ಆದೇಶಿಸಲಾಗಿದೆ. ಚಾಮರಾಜಪೇಟೆಯಲ್ಲಿ ಹಿಂದೂ–ಮುಸ್ಲಿಂರು ಸಹೋದರರಂತೆ ಬದುಕುತ್ತಿದ್ದು, ಈ ರೀತಿಯ ಘಟನೆ ಹಿಂದೆ ನಡೆದಿಲ್ಲ. ಈ ಪ್ರದೇಶದಲ್ಲಿ ಗಾಂಜಾ ಸಮಸ್ಯೆ ಸ್ವಲ್ಪ ಮಟ್ಟಿಗೆ ಹೆಚ್ಚಿರುವುದು ಸತ್ಯವಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ತಪ್ಪು ಮಾಡಿದವರನ್ನು ಯಾವುದೇ ಮುಲಾಜಿಲ್ಲದೆ ಬಂಧಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ – Kannada News | Spandana Somanna Talks About Boyfriend and Marriage plan

ಸ್ಪಂದನಾ ಸೋಮಣ್ಣ ಅವರು ಬಾಯ್​ಫ್ರೆಂಡ್ ಬಗ್ಗೆ ಬಿಗ್ ಬಾಸ್ ಅಲ್ಲಿ ಮಾತನಾಡಿದ್ದರು ಎನ್ನಲಾಗಿತ್ತು. ಎಲಿಮಿನೇಟ್ ಆದ ಬಳಿಕ ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಇದೇ ವಿಷಯ ಚರ್ಚೆಗೆ ಬಂದಿದೆ. ‘ಸ್ಪಂದನಾಗೆ ಬಾಯ್ಫ್ರೆಂಡ್ ಇದಾನಾ ಇಲ್ವ ಅನ್ನೋದನ್ನು ಗೆಸ್ ಮಾಡ್ತಾ ಇರಿ. ಆ ಕುತೂಹಲ ಇರಲಿ. ಮದುವೆ ಆಗೋಕೆ ಇನ್ನೂ ಸಮಯ ಇದೆ. ಈಗ ಸಿಕ್ಕಿರೋ ಫೇಮ್​​ನ ಎಂಜಾಯ್ ಮಾಡ್ತೀನಿ’ ಎಂದಿದ್ದಾರೆ ಸ್ಪಂದನಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version