ಬಿಗ್ ಬಾಸ್ ಕನ್ನಡ: ನಾಮಿನೇಟ್ ಆದ ಸ್ಪಂದನಾ; ಈ ವಾರವಾದ್ರೂ ಎಲಿಮಿನೇಟ್ ಆಗ್ತಾರಾ? – Kannada News | Spandana Somanna Ashwini Gowda and others nominated in 14th week of Bigg Boss Kannada Season 12

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಆಟದಲ್ಲಿ ಸ್ಪಂದನಾ ಸೋಮಣ್ಣ ಅವರು 14ನೇ ವಾರದ ತನಕ ಪೈಪೋಟಿ ನೀಡುತ್ತಾ ಬಂದಿದ್ದಾರೆ. ಆದರೆ ಅವರು ಈ ಮೊದಲೇ ಎಲಿಮಿನೇಟ್ ಆಗಬೇಕಿತ್ತು ಎಂಬ ಅಭಿಪ್ರಾಯ ಅನೇಕರಿಗೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ನೆಟ್ಟಿಗರು ಚರ್ಚೆ ಮಾಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಮನೆ ಒಳಗಿನ ಸ್ಪರ್ಧಿಗಳು ಕೂಡ ಈ ಕುರಿತು ಮಾತನಾಡಿದ್ದಾರೆ. ಈ ವಾರ ಸ್ಪಂದನಾ ಸೋಮಣ್ಣ (Spandana Somanna) ನಾಮಿನೇಟ್ ಆಗಿದ್ದಾರೆ. ಈ ಬಾರಿಯಾದರೂ ಅವರು ಎಲಿಮಿನೇಟ್ ಆಗುತ್ತಾರಾ ಅಥವಾ ಫಿನಾಲೆಗೆ ಎಂಟ್ರಿ ನೀಡುತ್ತಾರಾ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಸ್ಪಂದನಾ ಸೋಮಣ್ಣ ಅವರು ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಮೊದಲ ವಾರದಿಂದ 14ನೇ ವಾರದ ತನಕ ಅವರ ಆಟದಲ್ಲಿ ಹೆಚ್ಚಿನ ಬದಲಾವಣೆ ಕಾಣಿಸಿಲ್ಲ. ಆ ಕಾರಣದಿಂದ ಬಹುತೇಕ ಸಂದರ್ಭಗಳಲ್ಲಿ ಅವರನ್ನು ನಾಮಿನೇಟ್ ಮಾಡಲಾಗಿದೆ. ಆದರೂ ಕೂಡ ಅವರು ಪ್ರತಿ ವಾರ ಸೇಫ್ ಆಗಿದ್ದು ಕಂಡು ಬಹುತೇಕರಿಗೆ ಅಚ್ಚರಿ ಆಗಿದ್ದುಂಟು.

ಈ ವಾರ 5 ಜನರು ನಾಮಿನೇಟ್ ಆಗಿದ್ದಾರೆ. ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್ ಮತ್ತು ಧನುಶ್ ಅವರನ್ನು ನಾಮಿನೇಟ್ ಮಾಡಲಾಗಿದೆ. ಇಷ್ಟು ಜನರ ಪೈಕಿ ಸ್ಪಂದನಾ ಅವರೇ ವೀಕ್ ಸ್ಪರ್ಧಿ ಎಂಬುದು ಹಲವರ ಅನಿಸಿಕೆ. ಹಾಗಾಗಿ ಅವರು ಎಲಿಮಿನೇಟ್ ಆಗಬಹುದು ಎಂಬ ನಿರೀಕ್ಷೆ ಇದೆ. ಏನಾಗುತ್ತದೆ ಎಂಬುದನ್ನು ತಿಳಿಯಲು ವೀಕೆಂಡ್ ಸಂಚಿಕೆಗಾಗಿ ಕಾಯಬೇಕು.

ಕ್ಯಾಪ್ಟನ್ ಆಗಿರುವ ಗಿಲ್ಲಿ ನಟ ಅವರು ಈ ವಾರ ಸೇಫ್ ಆಗಿದ್ದು ಮಾತ್ರವಲ್ಲದೇ ಮುಂದಿನ ವಾರದ ಕ್ಯಾಪ್ಟೆನ್ಸಿ ಓಟಕ್ಕೆ ಅರ್ಹತೆ ಕೂಡ ಪಡೆದಿದ್ದಾರೆ. ಅವರ ಜೊತೆ ಅಶ್ವಿನಿ ಗೌಡ ಅವರಿಗೂ ಅರ್ಹತೆ ಸಿಕ್ಕಿತು. ಇನ್ನುಳಿದವರು ಅರ್ಹತೆ ಪಡೆಯಲು ಸೆಣೆಸಾಡುತ್ತಿದ್ದಾರೆ. ಮುಂದಿನ ವಾರ ಕ್ಯಾಪ್ಟನ್ ಆಗುವವರು ನೇರವಾಗಿ ಫಿನಾಲೆ ವಾರಕ್ಕೆ ಎಂಟ್ರಿ ಪಡೆಯಲಿದ್ದಾರೆ.

ಇದನ್ನೂ ಓದಿ: ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು

ಇನ್ನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಬರಲಿದೆ. ಯಾರು ಫಿನಾಲೆಗೆ ಹೋಗುತ್ತಾರೆ? ಯಾರಿಗೆ ಬಿಗ್ ಬಾಸ್ ಟ್ರೋಫಿ ಸಿಗಲಿದೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಗಿಲ್ಲಿ ನಟ ಅವರು ಸ್ಟ್ರಾಂಗ್ ಸ್ಪರ್ಧಿ ಆಗಿದ್ದಾರೆ. ಅವರೇ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ವೀಕ್ಷಕರಿಂದ ಕೇಳಿಬರುತ್ತಿದೆ. ಬಹುತೇಕರಿಗೆ ಗಿಲ್ಲಿ ಫೇವರಿಟ್ ಸ್ಪರ್ಧಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬ್ರಿಗೇಡ್ ರಸ್ತೆಗೆ ಎಷ್ಟು ಜನ ಬೇಕಾದರೂ ಬನ್ನಿ: ಶಾಸಕ ಎನ್.ಎ. ಹ್ಯಾರೀಸ್ – Kannada News | Bengaluru Prepares for New Year Celebrations: MLA Harris Urges Safe and Disciplined Gatherings on M.G. and Brigade Roads

ಬೆಂಗಳೂರು, ಡಿ.30: ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಾಚರಣೆಗೆ ಬರುವ ಜನರನ್ನು ಶಾಸಕ ಎನ್.ಎ. ಹ್ಯಾರೀಸ್ ಸ್ವಾಗತಿಸಿದ್ದಾರೆ. ಎಷ್ಟು ಬೇಕಾದರೂ ಜನರು ಬರಲಿ, ಆದರೆ ಶಿಸ್ತುಬದ್ಧವಾಗಿ ಸಂಭ್ರಮಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಪೊಲೀಸ್ ಇಲಾಖೆ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹ್ಯಾರೀಸ್ ಒತ್ತಿ ಹೇಳಿದರು. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳು, ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಮತ್ತು ಉತ್ತಮ ಬೆಳಕಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ಯಾವುದೇ ರೀತಿಯ ತೊಂದರೆ ಆಗದಂತೆ ಜನರು ಸಂತೋಷದಿಂದ ಹೊಸ ವರ್ಷವನ್ನು ಸ್ವಾಗತಿಸಲು ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪೊಲೀಸ್ ಇಲಾಖೆ, ಬಿಬಿಎಂಪಿ ಮತ್ತು ಸರ್ಕಾರ ಒಟ್ಟಾಗಿ ಸಮನ್ವಯದಿಂದ ಕೆಲಸ ಮಾಡುತ್ತಿದ್ದು, ಬೆಂಗಳೂರು ನಗರವು ಸುರಕ್ಷಿತ ಮತ್ತು ಸುಂದರ ಆಚರಣೆಗೆ ಸಿದ್ಧವಾಗಿದೆ. ಸಾರ್ವಜನಿಕರು ಆನಂದದಿಂದ ಭಾಗವಹಿಸಿ, ತಮ್ಮ ಮತ್ತು ಇತರರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಅವರು ಕೇಳಿಕೊಂಡರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆಯೊಳಗೆ ಹಿರಿಯ ವಕೀಲರ ಪತ್ನಿಯ ಬರ್ಬರ ಹತ್ಯೆ; ಪಕ್ಕದ ಚೇರ್​​ನಲ್ಲಿದ್ದ ಸಹಾಯಕ! – Kannada News | Mohali ex additional advocate general Wife found murdered in Home servant detained

ಮೊಹಾಲಿ, ಡಿಸೆಂಬರ್ 30: ಪಂಜಾಬ್‌ನ ಮೊಹಾಲಿಯಲ್ಲಿ ನಡೆದ ಒಂದು ಹೈ ಪ್ರೊಫೈಲ್ ಕೊಲೆ (Murder) ಆಘಾತವನ್ನು ಸೃಷ್ಟಿಸಿದೆ. ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೃಷ್ಣ ಕುಮಾರ್ ಗೋಯಲ್ ಅವರ ಪತ್ನಿ ಅಶೋಕ್ ಕುಮಾರಿ ಗೋಯಲ್ ಅವರನ್ನು ಅವರ ಮನೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಆ ಮನೆಯ ಕೆಲಸದಾಕೆಯೇ ಈ ಕೊಲೆಯನ್ನು ಮೊದಲು ನೋಡಿದವರು.

ಇಂದು ಬೆಳಿಗ್ಗೆ ಆ ಮನೆಯ ಕೆಲಸದಾಕೆ ಕೆಲಸಕ್ಕೆ ಬಂದಾಗ ಪದೇ ಪದೇ ಬಡಿದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅವರು ನೆರೆಹೊರೆಯವರಿಗೆ ಮಾಹಿತಿ ನೀಡಿದರು. ಅಕ್ಕಪಕ್ಕದವರು ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ಬಾಗಿಲು ಒಡೆದಾಗ, ಅಶೋಕ್ ಕುಮಾರಿ (66) ಒಳಗೆ ಶವವಾಗಿ ಪತ್ತೆಯಾಗಿದ್ದು, ಆಕೆಯ ಸಹಾಯಕನಾದ ನೀರಜ್ (25) ಎಂಬಾತನನ್ನು ಕುರ್ಚಿಗೆ ಕಟ್ಟಿಹಾಕಲಾಗಿತ್ತು. ಆ ಮನೆಗೆ ಹಾಲು ನೀಡುವ ಹಾಲಿನ ವ್ಯಾಪಾರಿಗೆ ನಾಳೆ ಹಾಲು ಹಾಕಬೇಡಿ ಎಂದು ಅಶೋಕ್ ಕುಮಾರಿ ಹಿಂದಿನ ದಿನವೇ ಹೇಳಿದ್ದರು ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಮಗಳಿಗೆ ಗಾಳ, ಅಮ್ಮನಿಗೆ ಬೆಂಕಿ: ತಲೆಮರೆಸಿಕೊಂಡಿದ್ದ ಆಸಾಮಿ ಅಂದರ್

ದರೋಡೆ ಮಾಡುವ ಉದ್ದೇಶದಿಂದ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಮನೆಯ ಸಹಾಯಕನನ್ನು ಕಟ್ಟಿ ಹಾಕಿ ಆಭರಣ ಮತ್ತು ನಗದು ದೋಚಿದ್ದಾರೆ. ಕೊಲೆ ನಡೆದಾಗ ಕೃಷ್ಣ ಕುಮಾರ್ ಗೋಯಲ್ ಮಸ್ಕತ್‌ನಲ್ಲಿದ್ದರು. ಅವರು ತಮ್ಮ ಮಗಳನ್ನು ಭೇಟಿ ಮಾಡಲು ಹೋಗಿದ್ದರು.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೃಷ್ಣ ಕುಮಾರ್ ಗೋಯಲ್ ಅವರ ಪತ್ನಿಯೇ ಕೊಲೆಯಾದ ಮಹಿಳೆ. ಈ ಕೊಲೆ ನಡೆದ ಸ್ಥಳದಲ್ಲಿದ್ದ 25 ವರ್ಷದ ಸಹಾಯಕ ನೀರಜ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದರೋಡೆಕೋರರು ಆ ಮಹಿಳೆಯನ್ನು ಕೊಂದು ಸಹಾಯಕನನ್ನು ಏಕೆ ಹಾಗೇ ಬಿಟ್ಟರು? ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: 3 ಕೋಟಿ ರೂ. ವಿಮೆ ಹಣ ಪಡೆಯಲು, ತಂದೆಗೆ ಹಾವು ಕಚ್ಚಿಸಿದ ಮಕ್ಕಳು

ನೀರಜ್ ದರೋಡೆಕೋರನು ತನ್ನ ತಲೆಯನ್ನು ಗೋಡೆಗೆ ಹೊಡೆದಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ. ಆದರೆ, ಪೊಲೀಸರಿಗೆ ಅವನ ತಲೆಯ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ. ಇದು ಅನುಮಾನವನ್ನು ಹುಟ್ಟುಹಾಕಿತು. ಹೀಗಾಗಿ ಅವರು ಅವನನ್ನು ವಿಚಾರಣೆಗಾಗಿ ವಶಕ್ಕೆ ಪಡೆದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೈಕುಂಠ ಏಕಾದಶಿ ಸಂಭ್ರಮ: ಭಕ್ತಿ ಪರಾಕಾಷ್ಠೆಯಲ್ಲಿ ಮಿಂದೆದ್ದ ಭಕ್ತರು – Kannada News | Vaikunta Ekadashi Celebrated with Grandeur Across Karnataka

ಬೆಂಗಳೂರು, ಡಿಸೆಂಬರ್​ 30: ಇಂದು ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ ಮನೆಮಾಡಿತ್ತು. ತಿಮ್ಮಪ್ಪನ ಸನ್ನಿಧಾನಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು. ಎಲ್ಲೆಲ್ಲೂ ಗೋವಿಂದ ನಾಮಸ್ಮರಣೆ ಮೇಳೈಸಿತ್ತು. ತಿರುಮಲದ ವೆಂಕಟೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಸಾಗರೋಪಾದಿಯಲ್ಲಿ ಹರಿದು ಬಂದ ಭಕ್ತಗಣ ಗೋವಿಂದನ ದರ್ಶನ ಪಡೆದು ಪುನೀತರಾದರು. ಸ್ವರ್ಣಖಚಿತ ರಥವೇರಿದ ತಿಮ್ಮಪ್ಪನನ್ನ ಭಕ್ತರು ಕಣ್ತುಂಬಿಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸಾಲ ವಸೂಲಿ ಮಾಡುವ ವೇಳೆ ಅವಾಚ್ಯ ಶಬ್ಧದಿಂದ ನಿಂದಿಸಿದ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಹಾಕಿದ ಕುಡುಕ – Kannada News | Chamarajanagar Murder: Relative Kills Man in Loan Recovery Conflict

ಚಾಮರಾಜನಗರ,ಡಿ.30: ಕೊಟ್ಟ ಸಾಲ ವಸೂಲಿ ಮಾಡುವ ವೇಳೆ ಅವಾಚ್ಯ ಶಬ್ಧದಿಂದ ನಿಂದಿಸಿದ ಎಂದು ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಂದಿರುವ ಘಟನೆ ಚಾಮರಾಜನಗರ (Chamarajanagar) ಕೊಳ್ಳೇಗಾಲ ತಾಲೂಕಿನ ಚೆನ್ನಿಪುರದೊಡ್ಡಿಯಲ್ಲಿ ನಡೆದಿದೆ. ಉಮೇಶ್ ಎಂಬಾತ ತನ್ನ ಸಂಬಂಧಿ ಸ್ವಾಮಿ ಗೌಡ ಎಂಬಾತನಿಗೆ ಸಾಲ ಕೊಟ್ಟಿದ್ದ, ಸ್ವಲ್ಪ ದಿನದ ನಂತರ ಉಮೇಶ್ ಸಾಲವನ್ನು ವಾಪಸ್ಸು ಕೇಳಿದ್ದಾನೆ. ಇದರಿಂದ ರೊಚ್ಚಿಗೆದ್ದು, ಸ್ವಾಮಿ ಗೌಡ ಕುಡಿದ ಅಮಲಿನಲ್ಲಿ ಉಮೇಶ್ ತಲೆ, ಮುಖವನ್ನು ಮಚ್ಚಿನಿಂದ ಕೊಚ್ಚಿ ಹಾಕಿದ್ದಾನೆ. ನಂತರ ಕತ್ತು ಕೊಯ್ದು ಹಾಕಿದ್ದಾನೆ.

ನಂತರ ತೀವ್ರ ಗಾಯಗೊಂಡಿದ್ದ ಉಮೇಶ್​​ನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಚಾಮರಾಜನಗರ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಸ್ವಾಮಿಗೌಡನ್ನನ್ನ ಬಂಧಿಸಿ ತನಿಖೆ ನಡೆಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು, ಇನ್ನು ಕೊಲೆ ಮಾಡಲು ಪೋತ್ಸಾಹ ನೀಡಿ, ಉಪ್ಪು ಹುಲಿ ಖಾರ ಹಾಕಿದ್ದ ಕೆಂಡಗಣ್ಣ ಎಂಬ ವ್ಯಕ್ತಿಯನ್ನು ಪೊಲೀಸರು ಮನೆಯಲ್ಲಿದ್ದ ಸ್ವಾಮಿಗೌಡನ್ನು ಉಮೇಶ್ ನಿನ್ನನ್ನು ಬೈಯುತ್ತಿದ್ದಾನೆ ಎಂದು ಹೇಳಿ ಕರೆದುಕೊಂಡು ಹೋದ ವ್ಯಕ್ತಿ ಎಂಬ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಯಾಣ ಕಡೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳ ಬಸ್​​​ ಪಲ್ಟಿ, 12 ವಿದ್ಯಾರ್ಥಿಗಳಿಗೆ ಗಾಯ

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಸ್ವಾಮಿಗೌಡ ಹಾಗೂ ಉಮೇಶ್ ಮಧ್ಯೆ ದೇವಸ್ಥಾನದ ವಿಚಾರ ಹಾಗೂ ವೈಯಕ್ತಿ ವಿಚಾರವಾಗಿ ಗಲಾಟೆಯಾಗಿದ್ದು, ಇದರಿಂದ ಇಬ್ಬರ ನಡುವೆ ಮತ್ತಷ್ಟು ದ್ವೇಷ ಬೆಳೆದು ಗಲಾಟೆ ತರಾಕಕ್ಕೇರಿ ಕೊಲೆಯಲ್ಲಿ ಅಂತ್ಯಯಾಗಿದೆ ಎನ್ನಲಾಗಿದೆ‌. ಇನ್ನು ಶವವನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಮೃತದೇಹ ನೀಡಿರುವ ಪೊಲೀಸರು ಮುಂದಿನ ತನಿಖೆ ಆರಂಭಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:20 pm, Tue, 30 December 25

Source link

WPL 2026: 3 ತಂಡಗಳಿಗೆ ಕೈಕೊಟ್ಟ ಮೂವರು ವಿದೇಶಿ ಆಟಗಾರ್ತಿರು; ಬದಲಿಯಾಗಿ ಬಂದಿದ್ಯಾರು?

Source link

ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸಿದ ವಂದೇ ಭಾರತ್ ಸ್ಲೀಪರ್ ರೈಲು; ಪರೀಕ್ಷೆಯ ವಿಡಿಯೋ ಇಲ್ಲಿದೆ – Kannada News | Vande Bharat Sleeper train clocks 180 kmph between Kota and Nagda section watch video

ನವದೆಹಲಿ, ಡಿಸೆಂಬರ್ 30: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಇಂದು ಸಾಮಾಜಿಕ ಮಾಧ್ಯಮದಲ್ಲಿ ಕೋಟಾ-ನಾಗ್ಡಾ ವಿಭಾಗದ ನಡುವೆ ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸುವ ವಂದೇ ಭಾರತ್ ಸ್ಲೀಪರ್ ರೈಲಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ರೈಲಿನಲ್ಲಿ “ನೀರಿನ ಪರೀಕ್ಷೆ” ಕೂಡ ನಡೆಸಲಾಗಿದೆ. “ಇಂದು ರೈಲ್ವೆ ಸುರಕ್ಷತಾ ಆಯುಕ್ತರು ವಂದೇ ಭಾರತ್ ಸ್ಲೀಪರ್ ಅನ್ನು ಪರೀಕ್ಷಿಸಿದ್ದಾರೆ. ಇದು ಕೋಟಾ-ನಾಗ್ಡಾ ವಿಭಾಗದ ನಡುವೆ ಗಂಟೆಗೆ 180 ಕಿ.ಮೀ ವೇಗದಲ್ಲಿ ಓಡಿತು. ಈ ನೀರಿನ ಪರೀಕ್ಷೆ ವಂದೇ ಭಾರತ್ ರೈಲಿನ ತಾಂತ್ರಿಕ ವೈಶಿಷ್ಟ್ಯವನ್ನು ಪ್ರದರ್ಶಿಸುತ್ತಿದೆ” ಎಂದು ಅಶ್ವಿನಿ ವೈಷ್ಣವ್ ಎಕ್ಸ್​ನಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.

“ವಂದೇ ಭಾರತ್ ಸ್ಲೀಪರ್ ರೈಲುಗಳು ಶೀಘ್ರದಲ್ಲೇ ಎಸಿ ದರ್ಜೆಯ ಪ್ರಯಾಣಿಕರಿಗಾಗಿ ಕಾರ್ಯಾಚರಣೆಗೆ ಸಿದ್ಧವಾಗಲಿವೆ. ಇದು ದೀರ್ಘ ಪ್ರಯಾಣದ ಸಮಯವನ್ನು ಇನ್ನಷ್ಟು ಅನುಕೂಲಕರವಾಗಿಸುತ್ತದೆ” ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಶ್ವಿನಿ ಗೌಡ ಎದುರು ಗಿಲ್ಲಿ ನಟ ಆ್ಯಟಿಟ್ಯೂಡ್: ವಿಡಿಯೋ ನೋಡಿ.. – Kannada News | Gilli Nata shows attitude in front of Ashwini Gowda in Bigg Boss Kannada Season 12

ಗಿಲ್ಲಿ ನಟ ಅವರು ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಅವರು ಕ್ಯಾಪ್ಟನ್ ಆಗಬೇಕು ಎಂಬುದು ಅಭಿಮಾನಿಗಳ ಬಯಕೆ ಆಗಿತ್ತು. ಅದರಂತೆ ನಡೆದಿದೆ. ಮೊದಲಿನಿಂದಲೂ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರ ನಡುವೆ ಟಫ್ ಪೈಪೋಟಿ ಇದೆ. 14ನೇ ವಾರದಲ್ಲಿ ಕೂಡ ಆ ಸ್ಪರ್ಧೆ ಮುಂದುವರಿದಿದೆ. ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ (Ashwini Gowda) ಅವರು ಪರಸ್ಪರ ಟಕ್ಕರ್ ಕೊಟ್ಟುಕೊಳ್ಳುತ್ತಿದ್ದಾರೆ. ಡಿಸೆಂಬರ್ 30ರ ಸಂಚಿಕೆಯಲ್ಲಿಯೂ ಅದೇ ರೀತಿ ಆಗಿದೆ. ರಾಜನ ಗೆಟಪ್ ಧರಿಸಿದ್ದ ಗಿಲ್ಲಿ ನಟ ಮಂಕಾಗಿದ್ದರು. ರಾಣಿಯಾಗಿ ಅಶ್ವಿನಿ ಗೌಡ ಅವರು ಪ್ರಚೋದಿಸುವ ಪ್ರಯತ್ನ ಮಾಡಿದರು. ‘ನಿನ್ನೆ ಇದ್ದ ಜೋಶ್ ಇಂದು ಕಾಣುತ್ತಿಲ್ಲ’ ಎಂದು ಕೆಣಕಿದರು. ಆಗ ಗಿಲ್ಲಿ ನಟ (Gilli Nata) ಅವರು ಆ್ಯಟಿಟ್ಯೂಡ್ ತೋರಿಸಿದ್ದಾರೆ. ಕಾದು ನೋಡುವ ತಂತ್ರವನ್ನು ಗಿಲ್ಲಿ ನಟ ಉಪಯೋಗಿಸಿದ್ದಾರೆ. ಡಿ.30ರ ಸಂಚಿಕೆಯ ಪ್ರೋಮೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಈ ಬಾರಿ ನಾನು ಡಾರ್ಲಿಂಗ್ ಕೃಷ್ಣನ ಬಿಟ್ಟು ಹೋಗಲ್ಲ: ಅಮೃತಾ ಅಯ್ಯಂಗಾರ್ – Kannada News | Amrutha Iyengar talks about her role in Father movie with Darling Krishna

‘ಫಾದರ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಅಮೃತಾ ಅಯ್ಯಂಗಾರ್ (Amrutha Iyengar) ಅವರು ನಟಿಸಿದ್ದಾರೆ. ಪ್ರಕಾಶ್ ರಾಜ್ ಕೂಡ ಪ್ರಮುಖ ಪಾತ್ರದಲ್ಲಿ ಇದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ನಡೆದಿದೆ. ಈ ವೇಳೆ ಅಮೃತಾ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಅಮೃತಾ ಅವರು ಈ ಸಿನಿಮಾ ಒಪ್ಪಿಕೊಳ್ಳಲು ಡಾರ್ಲಿಂಗ್ ಕೃಷ್ಣ (Darling Krishna) ಅವರು ಕಾರಣ. ಕೃಷ್ಣ ಅವರಿಗೆ ಕಥೆ ಇಷ್ಟ ಆಗಿದ್ದರಿಂದ ಅಮೃತಾಗೆ ಸಜೆಸ್ಟ್ ಮಾಡಿದ್ದರು. ಆ ಸಂಗತಿಯನ್ನು ಅಮೃತಾ ಅವರು ವೇದಿಕೆಯಲ್ಲಿ ನೆನಪು ಮಾಡಿಕೊಂಡರು. ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಕೈ ಕೊಟ್ಟು ಹೋಗುವ ಹುಡುಗಿಯ ಪಾತ್ರವನ್ನು ಅಮೃತಾ ಅಯ್ಯಂಗಾರ್ ಮಾಡಿದ್ದರು. ಆದರೆ ‘ಫಾದರ್’ (Father) ಸಿನಿಮಾದಲ್ಲಿ ಆ ರೀತಿ ಆಗಲ್ಲ ಎಂದು ಅಮೃತಾ ಹೇಳಿದ್ದಾರೆ. ‘ಬಿಟ್ಟು ಹೋಗುವ ಪಾತ್ರಗಳನ್ನು ಆದಷ್ಟು ಬ್ರೇಕ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರನ್ನು ನಾನು ಬಿಟ್ಟು ಹೋಗಲ್ಲ’ ಎಂದು ಅಮೃತಾ ಅಯ್ಯಂಗಾರ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

43 ಎಸೆತಗಳಲ್ಲಿ 68 ರನ್ ಚಚ್ಚಿದ ಹರ್ಮನ್‌ಪ್ರೀತ್ ಕೌರ್

ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ 175 ರನ್ ಕಲೆಹಾಕಿದೆ. ಟೀಂ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ ನಾಯಕಿ ಹರ್ಮನ್‌ಪ್ರೀತ್ 35 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಅವರ ಟಿ20 ಅಂತರರಾಷ್ಟ್ರೀಯ ವೃತ್ತಿಜೀವನದ 15 ನೇ ಅರ್ಧಶತಕವಾಗಿದೆ. ಹಾಗೆಯೇ ಹರ್ಮನ್ ಮತ್ತು ಅಮನ್‌ಜೋತ್ ಕೌರ್ 37 ಎಸೆತಗಳಲ್ಲಿ 61 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡು ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಅಂತಿಮವಾಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ 43 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 68 ರನ್ ಗಳಿಸಿದರು. ನಂತರ ಅರುಂಧತಿ ರೆಡ್ಡಿ ಅದ್ಭುತ ಬ್ಯಾಟಿಂಗ್ ಮಾಡಿ ಭಾರತವನ್ನು 170 ರನ್​ಗಳ ಗಡಿ ದಾಟಿಸಿದರು. ಅರುಂಧತಿ 11 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 27 ರನ್‌ಗಳೊಂದಿಗೆ ಅಜೇಯರಾಗಿ ಉಳಿದರೆ ಸ್ನೇಹ್ ರಾಣಾ ಆರು ಎಸೆತಗಳಲ್ಲಿ ಒಂದು ಬೌಂಡರಿ ಸೇರಿದಂತೆ ಎಂಟು ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

Source link

Exit mobile version