Headlines

ಬಜೆಟ್ 2026: ರೈತರಿಗೆ ಸ್ಮಾರ್ಟ್ ಕೃಷಿ ಸಲಹೆ ನೀಡುತ್ತೆ ಭಾರತ್ ವಿಸ್ತಾರ್ ಎಐ ಟೂಲ್! ಏನಿದರ ವಿಶೇಷ? – Kannada News | Bharat Vistar AI: How This New AI Tool announced in Budget 2026 Will Revolutionize Smart Farming for Indian Farmers

ನವದೆಹಲಿ, ಫೆಬ್ರವರಿ 1: ತಂತ್ರಜ್ಞಾನ ಆಧಾರಿತ ಕೃಷಿಗೆ ಒತ್ತು ನೀಡುವ ಸಲುವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ರ ಕೇಂದ್ರ ಬಜೆಟ್‌ನಲ್ಲಿ (Union Budget 2026) ‘ಭಾರತ್ ವಿಸ್ತಾರ್’ (Bharat Vistar) ಕೃತಕ ಬುದ್ಧಿಮತ್ತೆ ಟೂಲ್ ಪ್ರಾರಂಭಿಸುವುದಾಗಿ ಘೋಷಿಸಿದರು. ಇದು ಬಹುಭಾಷಾ ಕೃತಕ ಬುದ್ಧಿಮತ್ತೆ (AI) ಸಾಧನವಾಗಿದ್ದು ರೈತರಿಗೆ ಬೆಳೆಗಳು, ಮಣ್ಣು, ಹವಾಮಾನ ಮತ್ತು ಸರ್ಕಾರಿ ಯೋಜನೆಗಳ ಕುರಿತು ಸ್ಥಳೀಯ ಭಾಷೆಗಳಲ್ಲಿ ಮಾಹಿತಿ ಮತ್ತು ವೈಜ್ಞಾನಿಕ ಸಲಹೆಯನ್ನು ನೀಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ….

Read More

RBI Recruitment 2026: ಭಾರತೀಯ ರಿಸರ್ವ್ ಬ್ಯಾಂಕ್​​ನಲ್ಲಿ ಉದ್ಯೋಗವಕಾಶ; 10th ಪಾಸಾಗಿದ್ರೆ ಸಾಕು! – Kannada News | RBI Office Attendant Recruitment 2026: 572 Posts for 10th Pass | Apply Now!

ಭಾರತೀಯ ರಿಸರ್ವ್ ಬ್ಯಾಂಕ್ (RBI) 10 ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಪಡೆಯಲು ಉತ್ತಮ ಅವಕಾಶವನ್ನು ಒದಗಿಸಿದೆ. 572 ಆಫೀಸ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜನವರಿ 15rರಿಂದ ಪ್ರಾರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 4 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರಗಳು: ಒಟ್ಟು 572 ಹುದ್ದೆಗಳಲ್ಲಿ 291 ಮೀಸಲಾತಿ ಇಲ್ಲದ ಅಭ್ಯರ್ಥಿಗಳಿಗೆ, 83 ಒಬಿಸಿಗಳಿಗೆ, 51 ಇಡಬ್ಲ್ಯೂಎಸ್‌ಗೆ, 58 ಎಸ್‌ಟಿಗಳಿಗೆ ಮತ್ತು 89 ಎಸ್‌ಸಿಗಳಿಗೆ ಮೀಸಲಾಗಿವೆ….

Read More

ಷೇರುಪೇಟೆ ಕುಸಿತ; ಹೂಡಿಕೆದಾರರಿಗೆ 4 ಲಕ್ಷ ಕೋಟಿ ನಷ್ಟ; ಮಾರುಕಟ್ಟೆ ಕುಸಿಯಲು ಏನು ಕಾರಣ? – Kannada News | Stock Market indices falling on Tuesday, know the possible reasons for this fall

ನವದೆಹಲಿ, ಫೆಬ್ರುವರಿ 24: ಕಳೆದ ಕೆಲ ಟ್ರೇಡಿಂಗ್ ದಿನಗಳು ಪಾಸಿಟಿವ್ ಆಗಿದ್ದ ಷೇರುಪೇಟೆಯ (stock market) ಪ್ರಮುಖ ಸೂಚ್ಯಂಕಗಳು ಇವತ್ತು ಮಂಗಳವಾರ ಕೆಂಪು ಬಣ್ಣಕ್ಕೆ ತಿರುಗಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಬೆಳಗಿನ ವಹಿವಾಟಿನಲ್ಲಿ ಶೇ. 1ರಷ್ಟು ಕುಸಿತ ಕಂಡಿದ್ದವು. ಈ ವರದಿ ಬರೆಯುವಾಗ ಸೆನ್ಸೆಕ್ಸ್ 746 ಅಂಕಗಳನ್ನು ಕಳೆದುಕೊಂಡು 82,544 ಮಟ್ಟದಲ್ಲಿತ್ತು. ನಿಫ್ಟಿ ಸೂಚ್ಯಂಕ 208 ಅಂಕ ಕಳೆದುಕೊಂಡು 25,506ರ ಮಟ್ಟದಲ್ಲಿತ್ತು. ಇವತ್ತಿನ ಟ್ರೇಡಿಂಗ್​ನ ಒಂದು ಹಂತದಲ್ಲಿ ನಿಫ್ಟಿ 25,464 ಮಟ್ಟಕ್ಕೆ ಕುಸಿದಿತ್ತು. ಸೆನ್ಸೆಕ್ಸ್ 82,422…

Read More

ಮಂತ್ರಾಲಯಕ್ಕೆ ಹೋಗುವುದು ಅವರ ಕನಸಾಗಿತ್ತು: ಹರಕೆ ತೀರಿಸಿ ರಾಯರ ದರ್ಶನ ಪಡೆಯಲು ಹೋದ ವ್ಯಕ್ತಿ ನಾಪತ್ತೆ – Kannada News | Mantralaya Mystery: Chamarajanagar Devotee Doreswamy Missing Since Feb 9, Police Probe

ಚಾಮರಾಜನಗರ, ಫೆ.28: ರಾಯರನ್ನು ನೋಡಲು ಸಾವಿರಾರೂ ಭಕ್ತರು ಪ್ರತಿದಿನ ಬರುತ್ತಾರೆ. ಅದೊಂದು ಕಾರ್ಣಿಕದ ಸ್ಥಳ, ನೆಮ್ಮದಿ, ಸಂಕಷ್ಟಕ್ಕೆ ಮುಕ್ತಿ ನೀಡುವ ಸ್ಥಳ, ಹೀಗೆ ರಾಯರ ಮೇಲೆ ಅಪಾರ ಭಕ್ತಿ ಹೊಂದಿದ್ದ ವ್ಯಕ್ತಿಯೊಬ್ಬರು ಹರಕೆ ತೀರಿಸಲು ಮಂತ್ರಾಲಯಕ್ಕೆ ಹೋಗಿ ಈಗ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಚಾಮರಾಜನಗರದ ಗಾಳಿಪುರ ಬಡಾವಣೆಯ ನಿವಾಸಿ ದೊರೆಸ್ವಾಮಿ (55) ನಾಪತ್ತೆಯಾದ ದುರ್ದೈವಿ. ದೊರೆಸ್ವಾಮಿ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರೂ ಪ್ರತಿ ಗುರುವಾರ ತಪ್ಪದೇ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಾಡುತ್ತಿದ್ದರು. ಜೀವನದಲ್ಲಿ ಒಮ್ಮೆಯಾದರೂ ಮಂತ್ರಾಲಯಕ್ಕೆ…

Read More

KSCA ಅಂಡರ್ 14 ಕ್ರಿಕೆಟ್: ಬೆಂಗಳೂರಿನ ವಿದ್ಯಾನಿಕೇತನ ಶಾಲೆಗೆ 410 ರನ್‌ಗಳ ಭರ್ಜರಿ ಜಯ – Kannada News | KSCA Under 14th Cricket: Bengaluru vidyaniketan School Wins 410 runs Against carmel school

ಬೆಂಗಳೂರು, (ಡಿಸೆಂಬರ್ 25): 2025-26ನೇ ಸಾಲಿನ ಕೆ.ಎಸ್.ಸಿ.ಎ (KSCA) ಬಿ.ಟಿ.ಆರ್ 14 ವರ್ಷದೊಳಗಿನವರ ಎರಡನೇ ಡಿವಿಷನ್ ಕ್ರಿಕೆಟ್ ಪಂದ್ಯದಲ್ಲಿ ಬೆಂಗಳೂರಿನ ವಿದ್ಯಾನಿಕೇತನ ಶಾಲೆ (Bengaluru vidyaniketan School) ಭರ್ಜರಿ ಜಯಗಳಿಸಿದೆ. ವ್ಯೊಮ್ ನಾಯ್ಡು ಅದ್ಭುತ ದ್ವಿಶತಕದ ನೆರವಿನಿಂದ ವಿದ್ಯಾನಿಕೇತನ ಶಾಲೆಯು, ಬೆಂಗಳೂರಿನ ಕಾರ್ಮೆಲ್ ಶಾಲೆ (carmel school) (B-70) ವಿರುದ್ಧ 410 ರನ್‌ಗಳ ಬೃಹತ್ ಮೊತ್ತದ ಜಯ ದಾಖಲಿಸಿದೆ. ಬೆಂಗಳೂರು ನಗರದ ಸರ್ ಎಂ. ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MVIT-2) ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ…

Read More

ಬರೋಬ್ಬರಿ 11 ಶಸ್ತ್ರಚಿಕಿತ್ಸೆ: ಯುವತಿ ಸ್ಥಿತಿ ಕಂಡು ಮರುಗಿದ ಕುಮಾರಸ್ವಾಮಿ: ಮನೆಗೆ ಹೋಗಿ ಸಹಾಯ ಹಸ್ತ

ಮೈಸೂರು, ಏಪ್ರಿಲ್ 10: ನಂಜನಗೂಡಿನ ಪುಟ್ಟ ಹಳ್ಳಿಯೊಂದರಲ್ಲಿ ವಿಧಿಯ ಅಟ್ಟಹಾಸಕ್ಕೆ ಸಿಲುಕಿ ಇಡೀ ಕುಟುಂಬವೇ ಬೀದಿಗೆ ಬಿದ್ದಿತ್ತು. ಮಾರಕ ಕಾಯಿಲೆಯಿಂದ ಎರಡು ಕಾಲು ಕಳೆದುಕೊಂಡ ಪೂಜಾ ಎಂಬಾಕೆಯ ಬದುಕು ಅಂಧಕಾರದಲ್ಲಿತ್ತು. ಅತ್ತ ಪತಿಗೂ ಅಪಘಾತ, ಇತ್ತ ಕೈಯಲ್ಲಿ ಹಣವಿದಲ್ಲ ಸ್ಥಿತಿ. ಈ ಕಣ್ಣೀರಿನ ಕಥೆ ಕೇಳಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy), ಇಂದು ಆ ಬಡ ಕುಟುಂಬಕ್ಕೆ ಸಾಕ್ಷಾತ್ ದೇವರಾಗಿ ಬಂದಿದ್ದರು. ಹಳೆಯ ಲೀಸ್ ಹಣ ತೀರಿಸುವ ಭರವಸೆ ಜೊತೆಗೆ, ಮನೆಯ ಮಗನಂತೆ ಆ…

Read More

ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್​​ ಆದ ಕಾಂಗ್ರೆಸ್​ ಶಾಸಕರು – Kannada News | Congress MLA Returns to Bengaluru After Foreign Trip

ಬೆಂಗಳೂರು, ಮಾರ್ಚ್​ 04: ರಾಜ್ಯ ಕಾಂಗ್ರೆಸ್​ನಲ್ಲಿ ಕುರ್ಚಿಕಾದಾಟದ ನಡುವೆ ವಿದೇಶಕ್ಕೆ ಹಾರಿದ್ದ ಶಾಸಕರು ವಿದೇಶ ಪ್ರವಾಸ ಮುಗಿಸಿ ಇಂದು ಬೆಂಗಳೂರಿಗೆ ವಾಪಸ್​ ಆಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಏರ್​​​ಪೋರ್ಟ್​ಗೆ ಹೆಚ್​.ಡಿ.ತಮ್ಮಯ್ಯ, ದೇವೇಂದ್ರಪ್ಪ, ಪುಟ್ಟರಂಗಶೆಟ್ಟಿ ಸೇರಿದಂತೆ ಹಲವು ಕಾಂಗ್ರೆಸ್​ ಶಾಸಕರು ಮಧ್ಯರಾತ್ರಿ ಆಗಮಿಸಿದ್ದಾರೆ. ಬಹುತೇಕ ಶಾಸಕರು ಮಾಧ್ಯಮಗಳ ಕ್ಯಾಮರಾ ಕಾಣುತ್ತಿದ್ದಂತೆ ತರಾತುರಿಯಲ್ಲಿ ಕಾರು ಹತ್ತಿ ತೆಳಿದ್ದಾರೆ. ಅಧ್ಯಯನ ಮಾಡಲು ಹೋಗಿದ್ದಾಗಿ ಶಾಸಕ ದೇವೇಂದ್ರಪ್ಪ ಹೇಳಿದರೆ, ಅದೆಲ್ಲಾ ಸುಳ್ಳು ಎಂದು ಸಿರುಗುಪ್ಪ ಶಾಸಕ ಬಿಎಂ‌ ನಾಗರಾಜ್…

Read More

ತೆಲಂಗಾಣದ ಲ್ಯಾಬ್​​​ನಲ್ಲಿ ರೇಡಿಯೇಟರ್ ಸ್ಫೋಟ: 11 ಜನರಿಗೆ ಗಾಯ – Kannada News | Yadadri Bhuvanagiri Lab Blast: Choutuppal Fire Causes Massive Damage, 6 Hospitalized

ತೆಲಂಗಾಣದ ಲ್ಯಾಬ್​​​ನಲ್ಲಿ ರೇಡಿಯೇಟರ್ ಸ್ಫೋಟ ಹೈದರಾಬಾದ್ ಫೆ.14: ತೆಲಂಗಾಣದ ಯದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಚೌಟುಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯ ದೋಟಿಗುಡೆಮ್‌ನಲ್ಲಿರುವ ಖಾಸಗಿ ಪ್ರಯೋಗಾಲಯವೊಂದರಲ್ಲಿ (Laboratory) ರೇಡಿಯೇಟರ್ ಸ್ಫೋಟಗೊಂಡ ಪರಿಣಾಮ ಇಡೀ ಘಟಕಕ್ಕೆ ಬೆಂಕಿ ವ್ಯಾಪಿಸಿದೆ. ಪ್ರಯೋಗಾಲಯದಲ್ಲಿ ಎಂದಿನಂತೆ ಕೆಲಸ ಸಾಗುತ್ತಿದ್ದಾಗ ಹಠಾತ್ತನೆ ರೇಡಿಯೇಟರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಪ್ರಯೋಗಾಲಯವನ್ನು ಆವರಿಸಿಕೊಂಡಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿತ್ತು. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ…

Read More

PBKS vs RCB: ಪಂಜಾಬ್ ವಿರುದ್ಧ ಅಬ್ಬರಿಸಿ ಎರಡೆರಡು ದಾಖಲೆ ಸೃಷ್ಟಿಸಿದ ಕೊಹ್ಲಿ – Kannada News | Virat Kohli’s IPL 2026 Record: 9th 500+ Season and 5500 Runs for RCB Opener!

ಐಪಿಎಲ್ 2026 (IPL 2026) ರ ನಿರ್ಣಾಯಕ ಪಂದ್ಯ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ತಂಡಗಳ ನಡುವೆ ನಡೆಯಿತು. ಧರ್ಮಶಾಲಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​​ಸಿಬಿ ಪರ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat kohli) ತಂಡಕ್ಕೆ ಮತ್ತೊಮ್ಮೆ ಅಡಿಪಾಯ ಹಾಕಿಕೊಟ್ಟರು. ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಅಜೇಯ ಶತಕ ಬಾರಿಸಿದ್ದ ಕೊಹ್ಲಿ, ಪಂಜಾಬ್ ವಿರುದ್ಧವೂ ಅದೇ ಆಟವನ್ನು ಮುಂದುವರೆಸಿದರು. ಪರಿಣಾಮವಾಗಿ…

Read More

ರಸ್ತೆ ಇಲ್ಲ, ವಿದ್ಯುತ್ ಸಂಪರ್ಕವಿಲ್ಲ! ಮೂಲಭೂತ ಸೌಕರ್ಯವಿಲ್ಲದೆ ಕಾಡಂಚಿನ ಜನರು ಕಂಗಾಲು

ಚಾಮರಾಜನಗರ, ಮಾರ್ಚ್​ 28: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮ ಮೂಲಭೂತ ಸೌಕರ್ಯಗಳ ಕೊರತೆಯಿಂದ ನರಕಯಾತನೆ ಅನುಭವಿಸುತ್ತಿದೆ. ಗ್ರಾಮಕ್ಕೆ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಜೀವನ ಸಾಗುತ್ತಿದೆ. ರಸ್ತೆ ಇಲ್ಲದ ಕಾರಣ ಅನಾರೋಗ್ಯ ಸಂದರ್ಭದಲ್ಲಿ ರೋಗಿಗಳನ್ನು ಡೋಲಿಯಲ್ಲಿ 8 ಕಿಮೀ ದೂರ ಸಾಗಿಸಲು ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆಂಬ್ಯುಲೆನ್ಸ್ ಸೇವೆ ಸಿಗದಿರುವುದು ಗರ್ಭಿಣಿಯರ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಸಾರಿಗೆ ಬಸ್ ಇಲ್ಲದೆ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಹೋಗಲು ಸಾಧ್ಯವಾಗದೆ 5ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ…

Read More