ಭಾರತದ ಇಬ್ಬರು ಗೇಮಿಂಗ್ ಸ್ಟಾರ್​ಗಳು MOBA Legends 5v5 ಪ್ರವೇಶ; ಗೇಮಿಂಗ್ ಲೋಕದಲ್ಲಿ ಹೊಸ ಸಂಚಲನ – Kannada News | Rai Star & Gyan Gaming Join MOBA Legends 5v5: Indian Esports Strategic Shift

ಭಾರತೀಯ ಈ-ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಕೆಲವು ನಿರ್ಧಾರಗಳು ಕೇವಲ ಸ್ಟ್ರಾಟಿಜಿಕ್ ಇರುತ್ತವೆ ಎಂದಲ್ಲ, ಅವು ಒಳಗಿನಿಂದ ಹುಟ್ಟುವ ಎಮೋಶನ್ಸ್​ಗಳ ಪ್ರತಿಬಿಂಬವಾಗಿರುತ್ತವೆ. ಭಾರತೀಯ ಗೇಮಿಂಗ್ ಸ್ಟಾರ್​ಗಳೆನಿಸಿರುವ ರೈಸ್ಟಾರ್ (Rai Star) ಮತ್ತು ಗ್ಯಾನ್ ಗೇಮಿಂಗ್ (Gyan Gaming) ಅವರುಗಳು MOBA Legends 5v5 ಗೆ ಪ್ರವೇಶಿಸಿರುವುದು ಅಂತಹದ್ದೇ ಒಂದು ಕ್ಷಣ. ಇವರು ಹಿಂದೆ ಆಡುತ್ತಿದ್ದ ಗೇಮ್​ಗಳಿಂದ ಬಹಳ ಫೇಮಸ್ ಆದವರು. ಈಗ ಇವರ ಹೊಸ ಗೇಮ್ ಆಯ್ಕೆಯು ಕೇವಲ ಒಂದು ಘೋಷಣೆ ಮಾತ್ರವಲ್ಲ, ದೀರ್ಘ ಪ್ರಯಾಣದ ದಿಕ್ಕು ಬದಲಾವಣೆ.

ಡಿಸೆಂಬರ್ 21ರಂದು ನಡೆದ ಈ ಪ್ರಕಟಣೆ ಗೇಮಿಂಗ್ ಸಮುದಾಯದಲ್ಲಿ ದೊಡ್ಡ ಪ್ರತಿಕ್ರಿಯೆಯನ್ನೇ ಸೃಷ್ಟಿಸಿದೆ. ಕೆಲವರಿಗೆ ಇದು ಅಚ್ಚರಿ, ಕೆಲವರಿಗೆ ಉತ್ಸಾಹ, ಇನ್ನೂ ಹಲವರಿಗೆ ಮೌನವಾದ ಎಮೋಷನಲ್ ಎಫೆಕ್ಟ್.

ರೈಸ್ಟಾರ್ ಮತ್ತು ಗ್ಯಾನ್ ಗೇಮಿಂಗ್ ಇಬ್ಬರಿಗೂ ಅವರು ಹಿಂದೆ ಕಟ್ಟಿಕೊಂಡ ಜಗತ್ತು ಕೇವಲ ಕಂಟೆಂಟ್ ಮಾತ್ರವಲ್ಲ, ಅದು ಗುರುತು, ನಂಬಿಕೆ, ಮತ್ತು ಲಕ್ಷಾಂತರ ಅಭಿಮಾನಿಗಳೊಂದಿಗೆ ಬೆಸೆದ ಸಂಬಂಧ. ಆ ಪರಿಧಿಯನ್ನು ಬಿಟ್ಟು ಮುಂದೆ ಸಾಗುವುದು ಸುಲಭ ನಿರ್ಧಾರವಲ್ಲ. ಆದರೆ ಸಮಯದೊಂದಿಗೆ ಒಂದು ಮೌನ ಪ್ರಶ್ನೆ ಹುಟ್ಟುತ್ತದೆ. ಇದೇ ಸಾಕೆ, ಇಲ್ಲಿಂದ ಮುಂದೆ ಇನ್ನಷ್ಟು ಆಳವಾದ ಅನುಭವ ಬೇಕಲ್ಲವೇ..!

ಇದನ್ನೂ ಓದಿ: 27 ವರ್ಷಗಳಲ್ಲಿ ಅಮೆರಿಕದ ಈಕ್ವಿಟಿ ಹಾಗೂ ಚಿನ್ನವನ್ನೂ ಮೀರಿಸಿದ್ಯಾ ಭಾರತದ ನಿಫ್ಟಿ?; ಹೇಗೆ ಹೂಡಿಕೆ ಮಾಡುವುದು ನಿಫ್ಟಿ50ಯಲ್ಲಿ?

ಆ ಪ್ರಶ್ನೆಗೆ ಉತ್ತರವಾಗಿ ಬಂದಿದೆ MOBA Legends 5v5

ಇಲ್ಲಿ ಆಟ ಕೇವಲ ಪ್ರತಿಕ್ರಿಯೆಯಲ್ಲ, ಚಿಂತನೆ. ಕೇವಲ ವೈಯಕ್ತಿಕ ಪ್ರದರ್ಶನವಲ್ಲ, ತಂಡದ ನಂಬಿಕೆ. ಪ್ರತಿಯೊಂದು ನಿರ್ಧಾರಕ್ಕೂ ಪರಿಣಾಮವಿದೆ. ಐದು ಮಂದಿಯ ತಂಡದಲ್ಲಿ ಪ್ರತಿಯೊಬ್ಬರ ಪಾತ್ರವೂ ನಿರ್ಣಾಯಕ. ಇದು ಆಟಗಾರನ ಮನಸ್ಥಿತಿಯಲ್ಲಿ ಸಹಜವಾಗಿ ಒಂದು ಪರಿವರ್ತನೆ ತರುತ್ತದೆ. ವೇಗದಿಂದ ಸಹನೆಗೆ, ಸ್ವತಂತ್ರತೆಯಿಂದ ಸಂಯೋಜನೆಗೆ ಪರಿವರ್ತನೆ ಇರುತ್ತದೆ.

ಈ ಪಯಣದಲ್ಲಿ ಗ್ಯಾನ್ ಗೇಮಿಂಗ್ ಮತ್ತು ರೈ ಸ್ಟಾರ್ ಜೊತೆಯಾಗಿರುವುದು ಕೂಡ ಅರ್ಥಪೂರ್ಣ. ಇಬ್ಬರೂ ಈಗ ಕೇವಲ ವೀಕ್ಷಕರ ಸಂಖ್ಯೆಯ ಹಿಂದೆ ಓಡುವುದಿಲ್ಲ. ಅವರು ದೀರ್ಘಾವಧಿಯ ಬೆಳವಣಿಗೆ, ಸ್ಪರ್ಧಾತ್ಮಕ ಸ್ಥಿರತೆ ಮತ್ತು ಜಾಗತಿಕ ವೇದಿಕೆಯನ್ನು ಗಮನದಲ್ಲಿಟ್ಟುಕೊಂಡಿದ್ದಾರೆ. ಉದ್ಯಮ ತಜ್ಞರ ದೃಷ್ಟಿಯಲ್ಲಿ ಇದು ಮೌನವಾದ ಆದರೆ ದೃಢವಾದ ತಂತ್ರಾತ್ಮಕ ಹೆಜ್ಜೆ.

ಭಾರತೀಯ ಈ-ಸ್ಪೋರ್ಟ್ಸ್ ಕೂಡ ಇದೇ ಹಂತದಲ್ಲಿದೆ. ಪ್ರೇಕ್ಷಕರು ಹೆಚ್ಚು ಪ್ರೌಢರಾಗುತ್ತಿದ್ದಾರೆ. ಆಟವನ್ನು ನೋಡುವ ದೃಷ್ಟಿ ಬದಲಾಗುತ್ತಿದೆ. ಕೇವಲ ಮನರಂಜನೆ ದೃಷ್ಟಿ ಇದ್ದ ಆಟವು ಈಗ ಕೌಶಲ್ಯ, ತಂತ್ರ ಮತ್ತು ತಂಡದ ಸಂಸ್ಕೃತಿಯ ಕಡೆಗೆ ಗಮನ ಹರಿಯುತ್ತಿದೆ.

ಇದನ್ನೂ ಓದಿ: ಷೇರು, ಚಿನ್ನ, ಎಫ್​ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವುವು?

MOBA Legends 5v5 ಈ ಬದಲಾವಣೆಗೆ ಸರಿಹೊಂದುವ ಪ್ಲಾಟ್​ಫಾರ್ಮ್ ಆಗಿದೆ. ಇಲ್ಲಿ ಹೀರೋ ಒಬ್ಬನಲ್ಲ, ತಂಡವೇ ಹೀರೋ. ಇದು ಭಾರತೀಯ ಕ್ರೀಡಾ ಮನೋಭಾವಕ್ಕೆ ಸಹಜವಾಗಿ ಹೊಂದಿಕೊಳ್ಳುವ ರೂಪ.

ಪ್ರಸಿದ್ಧ ಕ್ರಿಯೇಟರ್‌ಗಳು ತಮ್ಮ ಕಂಫರ್ಟ್ ಝೋನ್ ಬಿಟ್ಟು ಹೊಸ ದಾರಿಗೆ ಹೆಜ್ಜೆ ಇಡುವಾಗ, ಬೆಳೆಯಲು ಧೈರ್ಯ ಮತ್ತು ಬದಲಾವಣೆ ಅವಶ್ಯ ಎಂಬ ಸಂದೇಶವು ಅನೇಕ ಯುವ ಗೇಮರ್‌ಗಳಿಗೆ ತಲುಪುತ್ತದೆ.

MOBA Legends 5v5 ಈಗ Android ಮತ್ತು iOS ನಲ್ಲಿ ಲಭ್ಯ. ಆದರೆ ಇದನ್ನು ಕೇವಲ ಹೊಸ ಗೇಮ್ ಎಂದು ನೋಡುವುದು ತಪ್ಪು. ಇದು ಭಾರತೀಯ ಈ-ಸ್ಪೋರ್ಟ್ಸ್ ಕಥೆಯಲ್ಲಿ ಆರಂಭವಾಗುತ್ತಿರುವ ಹೊಸ ಅಧ್ಯಾಯ. ಹೆಚ್ಚು ಆಳವಾದ, ಹೆಚ್ಚು ಶಿಸ್ತಿನ, ಮತ್ತು ಹೆಚ್ಚು ಭವಿಷ್ಯಮುಖಿ ಅಧ್ಯಾಯ ಇದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

VHT 2025-26: ಸಿಕ್ಸ್ ಹೊಡೆಯುವುದರಲ್ಲಿ ವೈಭವ್​ ಸೂರ್ಯವಂಶಿಯನ್ನೇ ಹಿಂದಿಕ್ಕಿದ ರವಿ ಸಿಂಗ್ – Kannada News | Vijay Hazare Trophy: Ravi Singh Smashes 19 Sixes, Outshines Suryavanshi

ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಅನೇಕ ಬ್ಯಾಟ್ಸ್‌ಮನ್‌ಗಳು ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಅದರಲ್ಲಿ ವೈಭವ್ ಸೂರ್ಯವಂಶಿಗಿಂತ (Vaibhav Suryavanshi) ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿರುವ ಒಬ್ಬ ಬ್ಯಾಟ್ಸ್‌ಮನ್ ಕೂಡ ಸೇರಿದ್ದಾರೆ. ಈ ಎಡಗೈ ಬ್ಯಾಟ್ಸ್‌ಮನ್ ಕೇವಲ ಮೂರು ಇನ್ನಿಂಗ್ಸ್‌ಗಳಲ್ಲಿ 19 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ರೈಲ್ವೇಸ್ ತಂಡದ ಪರ ಆಡುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರವಿ ಸಿಂಗ್ (Ravi Singh) ಈ ಸಾಧನೆ ಮಾಡಿದ ಆಟಗಾರರಾಗಿದ್ದಾರೆ. ಈ ಎಡಗೈ ಬ್ಯಾಟ್ಸ್‌ಮನ್ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಎಲ್ಲರನ್ನು ಅಚ್ಚರಿಗೊಳಿಸಿದ್ದು, ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ 136.5 ರ ಸರಾಸರಿ ಮತ್ತು 138 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್​ನಲ್ಲಿ 273 ರನ್ ಗಳಿಸಿದ್ದಾರೆ.

ರವಿ ಸಿಂಗ್ ಹೊಸ ಸಿಕ್ಸರ್ ಕಿಂಗ್

ವಿಜಯ್ ಹಜಾರೆ ಟ್ರೋಫಿಯಲ್ಲಿ ಸಿಕ್ಸರ್ ಕಿಂಗ್ ಎನಿಸಿಕೊಂಡಿರುವ ರವಿ ಸಿಂಗ್ ಸರ್ವಿಸಸ್ ವಿರುದ್ಧದ ಮೂರನೇ ಪಂದ್ಯದಲ್ಲಿ 46 ಎಸೆತಗಳಲ್ಲಿ 88 ರನ್​ಗಳ ಇನ್ನಿಂಗ್ಸ್ ಆಡಿದರು. ಇದರಲ್ಲಿ ಏಳು ಸಿಕ್ಸರ್‌ಗಳು ಸೇರಿದ್ದವು. ಈ ಮೂಲಕ ಅತ್ಯಧಿಕ ಸಿಕ್ಸರ್​ಗಳನ್ನು ಸಿಡಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿಯನ್ನು ಹಿಂದಿಕ್ಕಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಸೂರ್ಯವಂಶಿ 16 ಸಿಕ್ಸರ್‌ಗಳನ್ನು ಬಾರಿಸಿದ್ದರೆ, ರವಿ ಸಿಂಗ್ 19 ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ರವಿ ಸಿಂಗ್ ಈ ಆವೃತ್ತಿಯಲ್ಲಿ ಆಡಿರುವ ಸತತ ಮೂರು ಪಂದ್ಯಗಳಲ್ಲಿ ಅಬ್ಬರದ ಇನ್ನಿಂಗ್ಸ್ ಆಡಿದ್ದಾರೆ.

3 ಪಂದ್ಯಗಳಲ್ಲೂ ರವಿ ಸಿಂಗ್ ಅಬ್ಬರ

ಹರಿಯಾಣ ವಿರುದ್ಧದ ಮೊದಲ ಪಂದ್ಯದಲ್ಲೇ ಅಬ್ಬರಿಸಿದ್ದ ರವಿ ಸಿಂಗ್ ಕೇವಲ 81 ಎಸೆತಗಳಲ್ಲಿ ಅಜೇಯ 109 ರನ್ ಬಾರಿಸಿದ್ದರು. ರವಿ ಅವರ ಅದ್ಭುತ ಇನ್ನಿಂಗ್ಸ್ ನೆರವಿನಿಂದ ರೈಲ್ವೇಸ್ 43.4 ಓವರ್‌ಗಳಲ್ಲಿ 268 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ನಂತರ ಆಂಧ್ರಪ್ರದೇಶ ವಿರುದ್ಧವೂ ರವಿ 70 ಎಸೆತಗಳಲ್ಲಿ 76 ರನ್ ಸಿಡಿಸಿದ್ದರು. ಇದೀಗ ಸರ್ವಿಸಸ್ ವಿರುದ್ಧ ರವಿ ಸಿಂಗ್ 46 ಎಸೆತಗಳಲ್ಲಿ 88 ರನ್ ಕಲೆಹಾಕಿದ್ದಾರೆ. ಇದರಲ್ಲಿ 7 ಸಿಕ್ಸರ್‌ಗಳು ಮತ್ತು 6 ಬೌಂಡರಿಗಳು ಸೇರಿವೆ.

ಬರೋಬ್ಬರಿ 15 ಸಿಕ್ಸ್; ವಿಶ್ವ ದಾಖಲೆಯ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ

ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿರುವ ರವಿ ಸಿಂಗ್

ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ರವಿ ಸಿಂಗ್ ಅವರನ್ನು ಖರೀದಿ ಮಾಡಿದೆ. ರಾಜಸ್ಥಾನ್ ಅವರನ್ನು 95 ಲಕ್ಷಕ್ಕೆ ಖರೀದಿಸಿದೆ. ಯುಪಿ ಟಿ20 ಲೀಗ್‌ನಲ್ಲಿಯೂ ರವಿ ಸಿಂಗ್ ಅದ್ಭುತ ಇನ್ನಿಂಗ್ಸ್ ಆಡಿದ್ದರು. ರವಿ ವಿಕೆಟ್ ಕೀಪಿಂಗ್ ಮತ್ತು ಮ್ಯಾಚ್-ಫಿನಿಶಿಂಗ್ ಸಾಮರ್ಥ್ಯ ಎರಡನ್ನೂ ಹೊಂದಿದ್ದಾರೆ. ಆದ್ದರಿಂದ ನೀವು ಅವರನ್ನು ಐಪಿಎಲ್ 2026 ರಲ್ಲಿ ರಾಜಸ್ಥಾನದ ಪ್ಲೇಯಿಂಗ್ XI ನಲ್ಲಿ ನೋಡಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಿಲು ಜನರಿಗೆ ಹೊಸ ಸೂರು, ಎಷ್ಟು ಮೊತ್ತದ್ದು ಗೊತ್ತಾ? – Kannada News | Kogilu house demolitions: Siddaramaiah Announces Give new Houses For Eligible evictees In baiyappanahalli

ಬೆಂಗಳೂರು, ಡಿಸೆಂಬರ್ 29): ಕೋಗಿಲು ಲೇಔಟ್​ನಲ್ಲಿ ಅನಧಿಕೃತ ಮನೆಗಳ ತೆರವು ಪ್ರಕರಣ (Kogilu house demolitions) ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕೇರಳ ಸಿಎಂ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಕೆಸಿ ವೇಣುಗೋಪಾಲ್ ಅವರು ಸಹ ಕೋಗಿಲು ಜನರ ಕೂಗಿಗೆ ಕಿವಿಯಾಗಿದ್ದು, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವಂತೆ ತಮ್ಮದೇ ಪಕ್ಷದ ಸಿದ್ದರಾಮಯ್ಯ (Siddaramaiah) ಸರ್ಕಾರಕ್ಕೆ ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು (ಡಿಸೆಂಬರ್ 29) ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದ್ದು, ಮನೆ ಕಳೆದುಕೊಂಡವರಿಗೆ ಹೊಸ ಸೂರು ಒದಗಿಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಡಿಸೆಂಬರ್ 20ರಂದು ಸುಮಾರು 167 ಮನೆಗಳನ್ನು ತೆರವುಗೊಳಿಸಲಾಗಿತ್ತು. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿದ್ದರು.
ನಿನ್ನೆ ಸ್ಥಳಕ್ಕೆ ಸಚಿವ ಜಮೀರ್‌, ಇಂದು ಡಿಸಿಎಂ ಭೇಟಿ ನೀಡಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅರ್ಹರಿಗೆ 7 ಕಿ.ಮೀ ಅಂತರದಲ್ಲಿ 11.2 ಲಕ್ಷ ರೂಪಾಯಿ ವೆಚ್ಚದಲ್ಲಿ ತಲಾ ಒಂದು ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಘೋಷಿಸಿದರು.

ನಾಳೆ, ನಾಡಿದ್ದು ಪರಿಶೀಲಿಸಿ ಅರ್ಹ ವ್ಯಕ್ತಿಗಳಿಗೆ ಪರ್ಯಾಯ ವ್ಯವಸ್ಥೆಗೆ ಸೂಚನೆ ನೀಡಲಾಗಿದ್ದು, ಡಿಸಿ, ಪಾಲಿಕೆ ಅಧಿಕಾರಿಗಳು ನೀಡುವ ಪಟ್ಟಿ ಆಧರಿಸಿ ಮನೆ ಹಂಚಿಕೆ ಮಾಡಲಾಗುವುದು. ಬೈಯಪ್ಪನಹಳ್ಳಿ ಸರ್ವೆ ನಂಬರ್‌ 23ರಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಿರುವ ಮನೆಗಳನ್ನು ಹೊಸ ವರ್ಷದ ಆರಂಭದ ದಿನ ಮನೆ ನೀಡಲು ಸಚಿವ ಜಮೀರ್ ಅಹಮ್ಮದ್ ಖಾನ್ ಒಪ್ಪಿದ್ದಾರೆ ಎಂದರು.

ಇದರಲ್ಲಿ ವಿಶೇಷ ಆಸಕ್ತಿ ಇಲ್ಲ. ಕಮ್ಯೂನಿಸ್ಟ್‌ನವರು ಆಸಕ್ತಿ ವಹಿಸಿದ್ದಾರೆ. ಕೇರಳದಲ್ಲಿ ಚುನಾವಣೆ ಬರುತ್ತಿದೆ. ಹೀಗಾಗಿ ಆಸಕ್ತಿ ವಹಿಸಿದ್ದಾರೆ. ಮನುಷ್ಯತ್ವ ಆಧಾರದ ಮೇಲೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಇನ್ಮುಂದೆ ಈ ರೀತಿ ಯಾರೂ ಒತ್ತುವರಿ ಮಾಡದಂತೆ ಸೂಚಿಸಿದ್ದೇವೆ. ತಹಶೀಲ್ದಾರ್‌ ಹಾಗೂ ವಿಎಗೆ ಗೊತ್ತಿಲ್ಲದೇ ಒತ್ತುವರಿ ಸಾಧ್ಯವೇ ಇಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿ ಕಾಂಗ್ರೆಸ್ ಶಾಸಕ ಮಾಡಿದ್ದೇನು? – Kannada News | Viral video haridwar congress mla cuts off electricity officers power supply know reason

ಹರಿದ್ವಾರ, ಡಿಸೆಂಬರ್ 29: ಉತ್ತರಾಖಂಡದ ಹರಿದ್ವಾರದ ಜಬ್ರೇರಾದ ಕಾಂಗ್ರೆಸ್ (Congress)  ಶಾಸಕ ವೀರೇಂದ್ರ ಜಾತಿ ಅವರು ತಮ್ಮ ಕ್ಷೇತ್ರದಲ್ಲಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ ನಂತರ ವಿದ್ಯುತ್ ಇಲಾಖೆಯ ಅಧಿಕಾರಿಗಳ ಮನೆಗಳಿಗೆ ವಿದ್ಯುತ್ ಕಡಿತಗೊಳಿಸಿದ್ದಾರೆ. ನಿವಾಸಿಗಳು ವಿದ್ಯುತ್ ಕಡಿತವನ್ನು ಎದುರಿಸಿದರೆ, ಅದಕ್ಕೆ ಕಾರಣರಾದವರು ಸಹ ವಿದ್ಯುತ್ ವ್ಯತ್ಯಯವನ್ನು ಎದುರಿಸಬೇಕಾಗುತ್ತದೆ ಎಂದು ಶಾಸಕ ವೀರೇಂದ್ರ ಜಾತಿ ಹೇಳಿದ್ದಾರೆ.

ಈ ಘಟನೆಯ ವಿಡಿಯೋ ಎಕ್ಸ್​ನಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಕೆಲವು ಅಧಿಕಾರಿಗಳು ಹಲವಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಈ ವಿಷಯ ಶಾಸಕರ ಗಮನಕ್ಕೆ ಬಂದಾಗ ಅವರೇ ಮಧ್ಯಪ್ರವೇಶಿಸಿದರು. ಯಾವುದೇ ಸಮಸ್ಯೆ ಇದ್ದರೆ ನೋಟಿಸ್ ನೀಡಬೇಕು, ಆದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಏಕೆ? ಎಂದು ಅವರು ತಮ್ಮ ಕೋಪವನ್ನು ವ್ಯಕ್ತಪಡಿಸಿದರು.

ವಿದ್ಯುತ್ ಅಧಿಕಾರಿಗಳ ಮನೆಗಳಿಗೆ ವಿದ್ಯುತ್ ಕಡಿತಗೊಳಿಸಿದಾಗ ಅವರೂ ಸಹ ಅನುಭವಿಸುವಂತಾಗಲಿ ಎಂದು ಶಾಸಕರು ಆ ಅಧಿಕಾರಿಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಈ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜವರಾಯನ ಅಟ್ಟಹಾಸಕ್ಕೆ ನಡುರಸ್ತೆಯಲ್ಲೇ ಪ್ರಾಣಬಿಟ್ಟ ಬಾವ-ಬಾಮೈದ: ಆಗಿದ್ದೇನು?

ದೇವನಹಳ್ಳಿ, ಡಿಸೆಂಬರ್​​ 29: ಸಿಮೆಂಟ್​​ ಸಿಮೆಂಟ್ ಬಲ್ಕರ್ ಲಾರಿಗೆ ಹಿಂಬದಿಯಿಂದ ಬೈಕ್​​ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಾಯಕರಂಡನಹಳ್ಳಿ ಬಳಿ ನಡೆದಿದೆ. ಲಾರಿ ಚಾಲಕ ಏಕಾಏಕಿ ಬ್ರೇಕ್​​ ಹಾಕಿದ ಕಾರಣ ಹಿಂಬದಿ ಇದ್ದ ಬೈಕ್​​ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ. ಅಶೋಕ್ ಮತ್ತು ಪವನ್ ಕುಮಾರ್ ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಮೂಲತಹ ಹಿಂದೂಪುರದವರಾದ ಅಶೋಕ್ ಮತ್ತು ಪವನ್ ಕುಮಾರ್ ವೀಕೆಂಡ್ ಅಂತ ಊರಿಗೆ ಬಂದಿದ್ದು ಗ್ರಾಮದಲ್ಲಿ ಕಾಲ ಕಳೆದಿದ್ದರು. ಪವನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಕಾರಣ ತನಗೆ ಆಫೀಸ್​​ಗೆ ತೆರಳಲು ಬಸ್ ಸಿಗಲ್ಲ ಅಂತ ಬಾಮೈದ ಅಶೋಕನಿಗೆ ಡ್ರಾಪ್ ಕೊಡಲು ಹೇಳಿದ್ದ. ಹೀಗಾಗಿ ಬೈಕ್​​ನಲ್ಲಿ ಹಿಂದೂಪುರದಿಂದ ಯಲಹಂಕದ ಕಡೆ ಇವರಿಬ್ಬರು ಹೊರಟಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಾಯಕರಂಡನಹಳ್ಳಿ ಬಳಿ ಇವರು ಬರುತ್ತಿದ್ದಾಗ ರಸ್ತೆಯಲ್ಲಿ ಮುಂದೆ ಸಾಗ್ತಿದ್ದ ಸಿಮೆಂಟ್ ಬಲ್ಕರ್ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್​​ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ನಕಲಿ ಗೋಲ್ಡ್​​ ಲೋನ್​​ ಸೃಷ್ಟಿಸಿ ಕೋಟಿ ಕೋಟಿ ವಂಚನೆ; 41 ಗ್ರಾಹಕರಿಗೆ ಟೋಪಿ ಹಾಕಿ ಮ್ಯಾನೇಜರ್ ಎಸ್ಕೇಪ್!

ಸಿಮೆಂಟ್ ಲಾರಿಗೆ ಬೈಕ್ ಡಿಕ್ಕಿ ಹೊಡೆಯುತ್ತಿದ್ದಂತೆ ಸ್ಥಳೀಯರು ಗಾಯಾಳುಗಳನ್ನ ರಕ್ಷಿಸಿ ಆಸ್ವತ್ರೆಗೆ ದಾಖಲಿಸುವ ಯತ್ನ ಮಾಡಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್​​ ಬಾರದ ಕಾರಣ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಘಟನೆ ಬಳಿಕ ಲಾರಿ ಚಾಲಕ ಎಸ್ಕೇಪ್​​ ಆಗಿದ್ದು, ಮನೆ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಪಘಾತ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಾರಿ ಆಗಿರುವ ಲಾರಿ ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೋಗಿಲು ಕಲಹ: ಅರ್ಹರಿಗೆ 11.2 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಾಣ; ಸಿಎಂ ಘೋಷಣೆ – Kannada News | Kogilu Layout Demolition: CM Siddaramaiah Announces Construction of Houses at 11.2 Lakh Cost for Eligible Beneficiaries

ಸಿಎಂ ಸಿದ್ದರಾಮಯ್ಯ, ಕೋಗಿಲು ಲೇಔಟ್

ಬೆಂಗಳೂರು, ಡಿಸೆಂಬರ್​ 29: ಇತ್ತೀಚೆಗೆ ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆಗಳು ನೆಲಸಮ (Kogilu Layout Demolition) ಮಾಡಲಾಗಿತ್ತು. ಇದಾದ ಒಂದು ವಾರದ ಬಳಿಕ ಕೇರಳ ಸಿಎಂ ಪಿಣರಾಯ್ ವಿಜಯನ್, ಬುಲ್ಡೋಜರ್ ರಾಜ್ ಆಂತಾ ಟ್ವೀಟ್ ಮಾಡಿ ಕುಟುಕಿದ್ದರು. ಇಂದು ಡಿಸಿಎಂ ಡಿಕೆ ಶಿವಕುಮಾರ್​​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ (Siddaramaiah) ಸಭೆ ಮಾಡಿದ್ದು, ಅರ್ಹರಿಗೆ 7 ಕಿ.ಮೀ ಅಂತರದಲ್ಲಿ 11.2 ಲಕ್ಷ ರೂ ವೆಚ್ಚದಲ್ಲಿ ತಲಾ ಒಂದು ಮನೆ ನಿರ್ಮಿಸಿಕೊಡಲಾಗುವುದು ಎಂದಿದ್ದಾರೆ.

ಅರ್ಹರಿಗೆ 11.2 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಾಣ: ಸಿಎಂ

ರಾಜ್ಯ ಸರ್ಕಾರ ಕೋಗಿಲು ಲೇಔಟ್ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ತೀರ್ಮಾನಿಸಿದೆ. ಅರ್ಹರಿಗೆ ಪರಿಹಾರದ ರೂಪದಲ್ಲಿ ಮನೆಗಳ ಹಂಚಿಕೆ ಮಾಡಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ಮಾಡಿದ್ದು, ನೋಟಿಸ್ ನೀಡಿದ ಬಳಿಕ ಮನೆಗಳನ್ನು ತೆರವುಗೊಳಿಸಲಾಗಿದೆ. ಡಿ.20ರಂದು ಸುಮಾರು 167 ಮನೆಗಳನ್ನು ತೆರವುಗೊಳಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಸ್ಥಳ ಪರಿಶೀಲನೆ ಬಳಿಕ ಹೇಳಿದ್ದಿಷ್ಟು

ರವಿವಾರ ಸ್ಥಳಕ್ಕೆ ಸಚಿವ ಜಮೀರ್‌, ಇಂದು ಡಿಸಿಎಂ ಭೇಟಿ ನೀಡಿದ್ದರು. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿದ್ದರು. ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅರ್ಹರಿಗೆ 7 ಕಿ.ಮೀ ಅಂತರದಲ್ಲಿ 11.2 ಲಕ್ಷ ರೂ ವೆಚ್ಚದಲ್ಲಿ ತಲಾ ಒಂದು ಮನೆ ನಿರ್ಮಿಸಿಕೊಡಲಾಗುವುದು ಎಂದು ಹೇಳಿದ್ದಾರೆ.

ಹೊಸ ವರ್ಷದ ಆರಂಭದ ದಿನ ಮನೆ

ನಾಳೆ ಅಥವಾ ನಾಡಿದ್ದು ಪರಿಶೀಲಿಸಿ ಅರ್ಹ ವ್ಯಕ್ತಿಗಳಿಗೆ ಪರ್ಯಾಯ ವ್ಯವಸ್ಥೆಗೆ ಸೂಚಿಸಲಾಗುವುದು. ಡಿಸಿ, ಪಾಲಿಕೆ ಅಧಿಕಾರಿಗಳು ನೀಡುವ ಪಟ್ಟಿ ಆಧರಿಸಿ ಮನೆ ನಿರ್ಮಾಣ ಮಾಡಲಾಗುವುದು. ಈ ಬಗ್ಗೆ ಕಾಂಗ್ರೆಸ್ ನಾಯಕ ವೇಣುಗೋಪಾಲ್‌ ಅವರೂ ಚರ್ಚಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆಯೂ ವೇಣುಗೋಪಾಲ್‌ ಚರ್ಚಿಸಿದ್ದಾರೆ. ಆ ಜಾಗ ಬಿಟ್ಟು ಬೇರೆ ಕಡೆ ವ್ಯವಸ್ಥೆ ಮಾಡುವುದಾಗಿ ಅವರಿಗೆ ಹೇಳಿದ್ದೆ, ಅದರಂತೆ ಬೈಯಪ್ಪನಹಳ್ಳಿ ಸರ್ವೆ ನಂಬರ್‌ 23ರಲ್ಲಿ ಮನೆ ಕಟ್ಟಿಕೊಡಲು ಸೂಚಿಸಿದ್ದೇನೆ. ಹೊಸ ವರ್ಷದ ಆರಂಭದ ದಿನ ಮನೆ ನೀಡಲು ವಸತಿ ಸಚಿವ ಜಮೀರ್ ಒಪ್ಪಿದ್ದಾರೆ ಎಂದರು.

ಇನ್ನು ಇದರಲ್ಲಿ ವಿಶೇಷ ಆಸಕ್ತಿ ಇಲ್ಲ, ಕಮ್ಯೂನಿಸ್ಟ್‌ನವರು ಆಸಕ್ತಿ ವಹಿಸಿದ್ದಾರೆ. ಕೇರಳದಲ್ಲಿ ಚುನಾವಣೆ ಬರುತ್ತಿದೆ, ಹೀಗಾಗಿ ಆಸಕ್ತಿ ವಹಿಸಿದ್ದಾರೆ. ಮನುಷ್ಯತ್ವ ಆಧಾರದ ಮೇಲೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಇನ್ಮುಂದೆ ಈ ರೀತಿ ಯಾರೂ ಒತ್ತುವರಿ ಮಾಡದಂತೆ ಸೂಚಿಸಿದ್ದೇವೆ. ತಹಶೀಲ್ದಾರ್‌ ಹಾಗೂ ವಿಎಗೆ ಗೊತ್ತಿಲ್ಲದೇ ಒತ್ತುವರಿ ಸಾಧ್ಯವೇ ಇಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು 

ಇನ್ನು ಡಿಸಿಎಂ ಡಿಕೆ ಶಿವಕುಮಾರ್​​ ಮಾತನಾಡಿದ್ದು, ಸಿಎಂ ಸೂಚನೆ ಮೇರೆಗೆ ಅಲ್ಲಿ ಹೋಗಿ ನೋಡಿದ್ದೇನೆ. ಅಕ್ರಮ ಜಾಗದಲ್ಲಿ‌ ಶೆಡ್ ಹಾಕಿದ್ದಾರೆ. ಆದರೆ ಮಾನವೀಯತೆ ದೃಷ್ಟಿಯಿಂದ 1 ಲಕ್ಷ ರೂ ಸ್ಕೀಮ್ ಇದೆ. ಯಾರು ಅರ್ಹ ಇದ್ದಾರೆ ಅಂತ ಅವರಿಗೆ ಮನೆ ಕೊಡುತ್ತೇವೆ. ಬೇರೆ ವ್ಯವಸ್ಥೆ ಮಾಡುತ್ತೇವೆ. ಮುಂದಿನ ಮೂರು ದಿನ ಪ್ರತಿಯೊಂದು ಕೇಸ್ ನೋಡುತ್ತಾರೆ. ಎಲ್ಲಾ ದಾಖಲೆ‌ ನೋಡಿ ವಸತಿ ಕೊಡುತ್ತೇವೆ. ಅರ್ಹ ಕೇಸ್ ಇದ್ದರೆ ಮನೆ ಕೊಡುತ್ತೇವೆ. ನಾವು ಒತ್ತುವರಿ ಕೇಸ್​ಗೆ ಆಸ್ಪದ ಕೊಡುವುದಿಲ್ಲ. ಅಲ್ಲಿ ವಾಸ ಮಾಡುವುದಕ್ಕೆ ಅರ್ಹ ಜಾಗ ಇಲ್ಲ. ಸುತ್ತಮುತ್ತ ಪರಿಸರ ಕಾಪಾಡುವುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ.

ವರದಿ: ಈರಣ್ಣ ಬಸವ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಜೆಡಿಎಸ್ ಶಾಸಕ ಎಚ್​​​ಡಿ ರೇವಣ್ಣಗೆ ಬಿಗ್ ರಿಲೀಫ್‌ – Kannada News | Big Relief for JDS MLA HD revanna In assault Case, court refuses to consider section 354A

ಬೆಂಗಳೂರು, (ಡಿಸೆಂಬರ್ 29): ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ( assault Case)  ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣಗೆ (HD Revanna) ರಿಲೀಫ್ ಸಿಕ್ಕಿದೆ. ಎಚ್. ಡಿ. ರೇವಣ್ಣ ವಿರುದ್ಧದ ಐಪಿಸಿ ಸೆಕ್ಷನ್ 354A ಅಡಿಯ ಪ್ರಕರಣವನ್ನು ಕೋರ್ಟ್ ಕೈ ಬಿಟ್ಟಿದೆ. ವಿಳಂಬವಾಗಿ ಕೇಸ್ ದಾಖಲಿಸಿದ ಕಾರಣಕ್ಕೆ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಐಪಿಸಿ ಸೆಕ್ಷನ್ 354ಎ ಅಡಿಯ ಆರೋಪದ ಕೇಸ್ ಪರಿಗಣನೆಗೆ ಬೆಂಗಳೂರಿನ 42ನೇ ಎಸಿಜೆಎಂ ಜಡ್ಜ್ ಕೆ.ಎನ್.ಶಿವಕುಮಾರ್ ನಿರಾಕರಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಹೆಚ್.ಡಿ.ರೇವಣ್ಣ ವಿರುದ್ಧದ ಎರಡು ಸೆಕ್ಷನ್‌ಗಳಲ್ಲಿ ಹೈಕೋರ್ಟ್, ಸೆಕ್ಷನ್ 354 ರದ್ದುಪಡಿಸಿತ್ತು. ಇದೀಗ ಮತ್ತೊಂದು ಸೆಕ್ಷನ್​​ ಕೋರ್ಟ್ ಕೈಬಿಟ್ಟಿದ್ದು, ರೇವಣ್ಣಗೆ ರಿಲೀಫ್ ಸಿಕ್ಕಂತಾಗಿದೆ.

ಈ ಹಿಂದೆಯೂ ಒಂದು ಸೆಕ್ಷನ್​​ನಿಂದ ಬಚಾವ್

ಹೊಳೆನರಸಿಪುರದ ಮಹಿಳೆ ಹೆಚ್ ಡಿ ರೇವಣ್ಣ ವಿರುದ್ಧ ದೂರು ದಾಖಲಿಸಿದ್ದರು. ಈ ಹಿಂದೆ ಇದೇ ಪ್ರಕರಣದಲ್ಲಿ ಎಚ್‌.ಡಿ. ರೇವಣ್ಣ ಬಂಧಿತರಾಗಿದ್ದರು. ಎರಡು ಸೆಕ್ಷನ್ ಗಳಲ್ಲಿ ಹೈಕೋರ್ಟ್ ಒಂದು ಸೆಕ್ಷನ್ ರದ್ದುಪಡಿಸಿತ್ತು. 354 ಎ ಅಡಿಯ ಕೇಸ್ ಕಾಗ್ನಿಜೆನ್ಸ್ ಪಡೆಯಲು 42 ನೇ ಎಸಿಜೆಎಂ ಕೋರ್ಟ್ ನಿರಾಕರಿಸಿದೆ. ಹೀಗಾಗಿ ಐಪಿಸಿ ಸೆಕ್ಷನ್ 354ಎ ಅಡಿಯ ಕೇಸ್ ರದ್ದಾಗಿದೆ. ಮಹಿಳೆ ವಿಳಂಬವಾಗಿ ಕೇಸ್ ದಾಖಲಿಸಿದ ಕಾರಣಕ್ಕಾಗಿ ಐಪಿಸಿ ಸೆಕ್ಷನ್ 354ಎ ಅಡಿಯ ಆರೋಪದ ಕೇಸ್ ಅನ್ನು ಪರಿಗಣಿಸಲು ನಿರಾಕರಿಸಿದೆ.

ಏನು ಹೇಳುತ್ತೆ ಈ 354A ಸೆಕ್ಷನ್ ?

ಯಾವುದೇ ಪುರುಷ ಈ ಕೆಳಗಿನ ಕೃತ್ಯಗಳಲ್ಲಿ ತೊಡಗಿದರೆ, ಅವನು ಲೈಂಗಿಕ ಕಿರುಕುಳದ ಅಪರಾಧವನ್ನು ಮಾಡಿದ್ದಾನೆ ಎಂದು ಪರಿಗಣಿಸಲಾಗುತ್ತದೆ. ಅಸಮ್ಮತಿಯೊಂದಿಗೆ ಮತ್ತು ಸ್ಪಷ್ಟವಾಗಿ ಲೈಂಗಿಕ ಆಸಕ್ತಿಗಳನ್ನು ತೋರಿಸುವ ದೈಹಿಕ ಸ್ಪರ್ಶ, ಲೈಂಗಿಕ ಪರವಾಗಿ ಬೇಡಿಕೆ ಅಥವಾ ವಿನಂತಿ ಮಾಡುವುದು, ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲ ಚಿತ್ರಗಳನ್ನು ತೋರಿಸುವುದು, ಲೈಂಗಿಕವಾಗಿ ಆಕ್ರಮಣಕಾರಿ ಟೀಕೆಗಳನ್ನು ಮಾಡುವುದು. ಇನ್ನು ಈ ಮೇಲಿನ ಅಪರಾಧಗಳಿಗೆ ಗರಿಷ್ಠ ಮೂರು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ, ದಂಡ, ಅಥವಾ ಎರಡೂ.

ಸೆಕ್ಷನ್​ 354 ಅಡಿಯ ಕೇಸ್ ಅನ್ನು ಹೈಕೋರ್ಟ್ ರದ್ದುಪಡಿಸಿತ್ತು. ಈಗ 354A ಅಡಿಯ ಕೇಸ್ ಅನ್ನು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಕೈಬಿಟ್ಟಿದೆ. ಹೀಗಾಗಿ ಒಟ್ಟಾರೆ ಪ್ರಕರಣದಿಂದ ಹೆಚ್ ಡಿ ರೇವಣ್ಣಗೆ ರಿಲೀಫ್ ಸಿಕ್ಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:28 pm, Mon, 29 December 25

Source link

ಟಿ20 ಪಂದ್ಯದಲ್ಲಿ 8 ವಿಕೆಟ್; ವಿಶ್ವ ದಾಖಲೆ ಸೃಷ್ಟಿಸಿದ ಭೂತಾನ್ ಸ್ಪಿನ್ನರ್ – Kannada News | Sonam Yeshey Sets New T20 World Record: First Bowler with 8 Wickets for Bhutan

ಟಿ20 ಪಂದ್ಯವೊಂದರಲ್ಲಿ ಬೌಲರ್ 5 ವಿಕೆಟ್ ಪಡೆದರೆ ಅದು ದೊಡ್ಡ ವಿಷಯ. ಆದರೆ ಅದೇ ಟಿ20 ಪಂದ್ಯದಲ್ಲಿ ಬೌಲರ್ 8 ವಿಕೆಟ್ ಪಡೆದರೆ ಅದೊಂದು ವಿಶ್ವ ದಾಖಲೆ. ಇದೀಗ ಅಂತಹದ್ದೇ ವಿಶ್ವ ದಾಖಲೆಯನ್ನು ಕ್ರಿಕೆಟ್ ಶಿಶು ಭೂತಾನ್‌ ತಂಡದ ಸ್ಪಿನ್ನರ್ ಒಬ್ಬ ಮಾಡಿದ್ದಾನೆ. ಭೂತಾನ್ ತಂಡದ ಸ್ಪಿನ್ನರ್ ಸೋನಮ್ ಯೆಶೆ (Sonam Yeshey) ಬರೋಬ್ಬರಿ 8 ವಿಕೆಟ್​ಗಳನ್ನು ಪಡೆದು ಅಂತರರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ ಅತ್ಯಧಿಕ ವಿಕೆಟ್ ಉರುಳಿಸಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಲ್ಲಿಯವರೆಗೆ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ತಲಾ 7 ವಿಕೆಟ್ ಪಡೆದ ಇಬ್ಬರು ಬೌಲರ್‌ಗಳು ಮಾತ್ರ ಇದ್ದರು. ಆದರೆ ಈಗ ಸೋನಮ್ ಯೆಶೆ 8 ವಿಕೆಟ್ ಪಡೆಯುವ ಮೂಲಕ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಭೂತಾನ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಭೂತಾನ್ ಹಾಗೂ ಮ್ಯಾನ್ಮಾರ್‌ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭೂತಾನ್ ತಂಡ 127 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮ್ಯಾನ್ಮಾರ್ 56 ಎಸೆತಗಳಲ್ಲಿ ಕೇವಲ 45 ರನ್‌ಗಳಿಗೆ ಆಲೌಟ್ ಆಯಿತು. ಮ್ಯಾನ್ಮಾರ್ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಭೂತಾನ್ ತಂಡದ ಎಡಗೈ ಸ್ಪಿನ್ನರ್ ಸೋನಮ್ ಯೆಶೆ ಪ್ರಮುಖ ಪಾತ್ರವಹಿಸಿದರು.

8 ವಿಕೆಟ್ ಕಬಳಿಸಿದ ಸೋನಮ್ ಯೆಶೆ

ಮ್ಯಾನ್ಮಾರ್ ವಿರುದ್ಧದ ಟಿ20 ಪಂದ್ಯದಲ್ಲಿ ಸೋನಮ್ ಯೆಶೆ ಏಕಾಂಗಿಯಾಗಿ ಎಂಟು ವಿಕೆಟ್‌ಗಳನ್ನು ಕಬಳಿಸಿದರು. ಮೂರನೇ ಓವರ್‌ನಲ್ಲಿ ದಾಳಿಗಿಳಿದ ಸೋನಮ್ ಯೆಶೆ, ಮ್ಯಾನ್ಮಾರ್‌ ತಂಡದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ನಂತರ ಅವರು ಇನ್ನೂ ಮೂರು ವಿಕೆಟ್‌ಗಳನ್ನು ಪಡೆದು, ಮ್ಯಾನ್ಮಾರ್‌ನ ಸಂಪೂರ್ಣ ಇನ್ನಿಂಗ್ಸ್ ಅನ್ನು 50 ರನ್ ತಲುಪುವ ಮೊದಲೇ ಅಂತ್ಯಗೊಳಿಸಿದರು.

IND-W vs SL-W: ಶ್ರೀಲಂಕಾ ವಿರುದ್ಧ ಸತತ 4ನೇ ಟಿ20 ಪಂದ್ಯ ಗೆದ್ದ ಭಾರತ

82 ರನ್‌ಗಳಿಂದ ಗೆದ್ದ ಭೂತಾನ್

ಸೋನಮ್ ಯೆಶೆ ಅವರ ಅತ್ಯುತ್ತಮ ಬೌಲಿಂಗ್‌ನಿಂದ ಭೂತಾನ್ 82 ರನ್‌ಗಳಿಂದ ಗೆದ್ದಿತು. ಸೋನಮ್ ಯೆಶೆ ಅಂತರರಾಷ್ಟ್ರೀಯ ಕ್ರಿಕೆಟ್ ಅಥವಾ ಯಾವುದೇ ಟಿ20 ಪಂದ್ಯದಲ್ಲಿ ಎಂಟು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು. ಯೆಶೆ ಅವರ ಸಾಧನೆಗೆ ಮೊದಲು, ಪುರುಷರ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕೇವಲ ಇಬ್ಬರು ಬೌಲರ್‌ಗಳು ಏಳು ವಿಕೆಟ್ ಪಡೆದಿದ್ದರು. 2023 ರಲ್ಲಿ ಚೀನಾ ವಿರುದ್ಧ ಸಯಾಜ್ರುಲ್ ಇದ್ರಸ್ ಎಂಟು ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಪಡೆದಿದ್ದರು. ಈ ವರ್ಷದ ಆರಂಭದಲ್ಲಿ ಬಹ್ರೇನ್‌ನ ಅಲಿ ದಾವೂದ್ ಭೂತಾನ್ ವಿರುದ್ಧ 19 ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಪಡೆದಿದ್ದರು. ಈಗ, ಈ ದಾಖಲೆ ಭೂತಾನ್ ಸ್ಪಿನ್ನರ್ ಸೋನಮ್ ಯೆಶೆ ಅವರ ಪಾಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:13 pm, Mon, 29 December 25

Source link

ಬಿಗ್ ಬಾಸ್ ಕನ್ನಡ: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್ ಸಿಂಗ್ – Kannada News | Bigg Boss Kannada Season 12 Suraj Singh says he had 3 relationships

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಹೋಗಿದ್ದ ಸೂರಜ್ ಸಿಂಗ್ ಅವರು ನಿಜ ಜೀವನದಲ್ಲಿ ತುಂಬ ಕಷ್ಟಗಳನ್ನು ಕಂಡಿದ್ದಾರೆ. ಬಿಗ್ ಬಾಸ್ ಶೋ ಮೂಲಕ ಅವರಿಗೆ ಬಹಳ ಖ್ಯಾತಿ ಸಿಕ್ಕಿದೆ. ಈಗ ಅವರು ಎಲಿಮಿನೇಟ್ ಆಗಿ ದೊಡ್ಮನೆಯಿಂದ ಹೊರಗೆ ಬಂದಿದ್ದಾರೆ. ಟಿವಿ9 ಜತೆ ಮಾತನಾಡಿ ತಮ್ಮ ಬದುಕಿನ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಿಲೇಷನ್​ಶಿಪ್ (Relationship) ಬಗ್ಗೆ ಕೂಡ ಮಾತನಾಡಿದ್ದಾರೆ. ‘ಈಗ ನನಗೆ ಯಾರೂ ಲವ್ವರ್ ಇಲ್ಲ. ಈ ಮೊದಲು ನಾನು ಮೂರು ರಿಲೇಷನ್​ಶಿಪ್​​ನಲ್ಲಿ ಇದ್ದೆ. ಪ್ರಾಮಾಣಿಕವಾಗಿ ಹೇಳುತ್ತೇನೆ, ಕಳೆದ 10-12 ವರ್ಷಗಳಲ್ಲಿ ಮೊದಲ ಎರಡು ರಿಲೇಷನ್​ಶಿಪ್ ತುಂಬ ಗಂಭೀರವಾಗಿ ಇರಲಿಲ್ಲ. ಇನ್ನೊಂದು ಸೀರಿಯಸ್ ಆಗಿತ್ತು. ಆದರೆ ಕಾರಣಾಂತರಗಳಿಂದ ಬ್ರೇಕಪ್ ಆಯಿತು’ ಎಂದು ಸೂರಜ್ ಸಿಂಗ್ (Suraj Singh) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

New Year 2026: ಪಾರ್ಟಿ ಹ್ಯಾಂಗೋವರ್‌ನಿಂದ ಹೊರ ಬರೋಕೆ ಈ ಸರಳ ಮನೆಮದ್ದುಗಳನ್ನು ಟ್ರೈ ಮಾಡಿ – Kannada News | New Year 2026: How to get over a New Year’s party hangover? Here are some simple tips

ಹೊಸ ವರ್ಷಕ್ಕೆ (New Year) ಇನ್ನೆರಡು ದಿನಗಳು ಬಾಕಿ ಉಳಿದಿದ್ದು, ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ಹೆಚ್ಚಿನವರು ಪ್ರವಾಸ, ಪಾರ್ಟಿಗಳನ್ನು ಯೋಜಿಸುತ್ತಾರೆ. ನ್ಯೂ ಇಯರ್‌ ಅಂದ್ಮೇಲೆ ಎಣ್ಣೆ ಪಾರ್ಟಿ ಇರ್ಲೇ ಬೇಕು. ಕೆಲವರಂತೂ ಪಾರ್ಟಿಯಲ್ಲೂ ತುಸು ಜಾಸ್ತಿಯೇ ಆಲ್ಕೋಹಾಲ್‌ ಸೇವನೆ ಮಾಡುತ್ತಾರೆ. ಹೊಸ ವರ್ಷದ ಪಾರ್ಟಿಗಳು ಮೋಜಿನದ್ದಾಗಿದ್ದರೂ, ಮರುದಿನ ಬೆಳಿಗ್ಗೆ ಕಾಣಿಸಿಕೊಳ್ಳುವ ಹ್ಯಾಂಗೊವರ್ ಇಡೀ ದಿನವನ್ನು ಹಾಳುಮಾಡಬಹುದು. ಹೌದು ತಲೆನೋವು, ಆಯಾಸ ಕಿರಿಕಿರಿ ಮತ್ತು ಗೊಂದಲವನ್ನು ನಿಭಾಯಿಸುವುದು ಸುಲಭವಲ್ಲ. ಹೀಗಿರುವಾಗ ಈ ಕೆಲವು ಮನೆಮದ್ದುಗಳ ಸಹಾಯದಿಂದ ಪಾರ್ಟಿ ಹ್ಯಾಂಗೋವರ್‌ನಿಂದ ಬರೀ 10 ನಿಮಿಷದಲ್ಲಿ ಹೊರ ಬರುವಂತೆ ಮಾಡಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಾರ್ಟಿ ಹ್ಯಾಂಗೋವರ್‌ನಿಂದ ಹೊರ ಬರಲು ಇಲ್ಲಿದೆ ಸುಲಭ ಸಲಹೆ:

ನೀವು ಅತಿಯಾದ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸಿದಾಗ ಹ್ಯಾಂಗೊವರ್ ಉಂಟಾಗುತ್ತದೆ. ಇದರಿಂದ ನೀವು ಮರುದಿನ  ಎಚ್ಚರವಾದಾಗ ತಲೆ ಭಾರವಾದಂತೆ ಅನಿಸುತ್ತದೆ, ತಲೆನೋವು, ಅಥವಾ ತಲೆತಿರುಗುವಿಕೆ, ವಾಕರಿಕೆ ಕಾಣಿಸಿಕೊಳ್ಳುತ್ತದೆ. ಈ ಕೆಲವು ಪಾನೀಯಗಳನ್ನು ಕುಡಿಯುವ ಮೂಲಕ ಹ್ಯಾಂಗೋವರ್‌ನಿಂದ ಹೊರಬರಬಹುದು.

ಅರಿಶಿನ ನೀರು: ಅರಿಶಿನ ನೀರು ಹ್ಯಾಂಗೋವರ್‌ನಿಂದ ಹೊರ ಬರಲು ನಿಮಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಹ್ಯಾಂಗೊವರ್ ಲಕ್ಷಣಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. 1 ರಿಂದ 2 ಟೀ ಚಮಚ ತುರಿದ ಅರಿಶಿನ ಮತ್ತು ಕೆಲವು ನಿಂಬೆ ಹೋಳುಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಿರಿ. ಜೊತೆಗೆ ಇದಕ್ಕೆ ಸ್ವಲ್ಪ ಜೇನುತುಪ್ಪ, ಕರಿಮೆಣಸನ್ನೂ ಸೇರಿಸಬಹುದು.

ಎಳನೀರು ಕುಡಿಯಿರಿ: ಎಳ ನೀರು ಹ್ಯಾಂಗೊವರ್ ನಿವಾರಿಸಲು ಪ್ರಯೋಜನಕಾರಿ. ಹೆಚ್ಚು ಆಲ್ಕೋಹಾಲ್ ಸೇವಿಸುವುದರಿಂದ ನಿರ್ಜಲೀಕರಣ ಉಂಟಾಗುತ್ತದೆ. ಎಳನೀರು ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತದೆ, ಇದು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ, ನಿರ್ಜಲೀಕರಣವನ್ನು ಹೋಗಲಾಡಿಸುತ್ತವೆ. ಮತ್ತು ಇದು ದೇಹವನ್ನು ಚೈತನ್ಯಗೊಳಿಸುತ್ತದೆ.

ನಿಂಬೆ ನೀರು: ನಿಂಬೆ ನೀರು ಹ್ಯಾಂಗೊವರ್‌ಗೆ ಅತ್ಯಂತ ಪರಿಣಾಮಕಾರಿ ಪರಿಹಾರಗಳಲ್ಲಿ ಒಂದಾಗಿದೆ. ಒಂದು ಲೋಟಕ್ಕೆ ಅರ್ಧ ನಿಂಬೆ ರಸ ಮತ್ತು ಸ್ವಲ್ಪ ಉಪ್ಪು ಸೇರಿಸಿ, ಮಿಶ್ರಣ ಮಾಡಿ ಕುಡಿಯಿರಿ. ಇದು ಎಲೆಕ್ಟ್ರೋಲೈಟ್‌ಗಳನ್ನು ಪುನಃ ತುಂಬಿಸುತ್ತದೆ, ಜಲಸಂಚಯನವನ್ನು ಸುಧಾರಿಸುತ್ತದೆ ಮತ್ತು ವಾಕರಿಕೆ, ವಾಂತಿ ಮತ್ತು ತಲೆನೋವಿನಿಂದ ಪರಿಹಾರ ನೀಡುತ್ತದೆ.

ಮೊಸರು: ಹ್ಯಾಂಗೋವರ್‌ನಿಂದ ಹೊರ ಬರಲು ಮೊಸರನ್ನು ಸೇವನೆ ಮಾಡುವುದು ಸಹ ಪರಿಣಾಮಕಾರಿಯಾಗಿದೆ. ಸಕ್ಕರೆ ಅಥವಾ ಉಪ್ಪು ಸೇರಿಸದೆ ಮೊಸರನ್ನು ಹಾಗೆಯೇ ಸೇವನೆ ಮಾಡುವುದು ಉತ್ತಮ.

ಬಾಳೆಹಣ್ಣು: ಬಾಳೆಹಣ್ಣು ಹ್ಯಾಂಗೊವರ್ ಹೋಗಲಾಡಿಸುವಲ್ಲಿ ಅತ್ಯಂತ ಪರಿಣಾಮಕಾರಿ. ಅವುಗಳಲ್ಲಿ ಪೊಟ್ಯಾಸಿಯಮ್ ಮತ್ತು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿವೆ, ಇದು ನಿರ್ಜಲೀಕರಣವನ್ನು ತಡೆಯುತ್ತದೆ. ಅಲ್ಲದೆ ಸಾಕಷ್ಟು ಪೋಷಕಾಂಶಗಳನ್ನೂ ನೀಡುತ್ತದೆ.

ಇದನ್ನೂ ಓದಿ: ಮೋಜು-ಮಸ್ತಿ ಮಾತ್ರವಲ್ಲ, ರೀತಿಯೂ ಅರ್ಥಪೂರ್ಣವಾಗಿ ಹೊಸ ವರ್ಷವನ್ನು ಆಚರಿಸಬಹುದು

ಪುದೀನ ನೀರು: ಪುದೀನದ ತಂಪಾಗಿಸುವ ಸುವಾಸನೆ ಹ್ಯಾಂಗೊವರ್‌ ಹೋಗಲಾಡಿಸಲು ಸಹಾಯ ಮಾಡುತ್ತದೆ. ಅದಕ್ಕೆ ತಾಜಾ ಪುದೀನಾ ಎಲೆಗಳನ್ನು ಸ್ವಲ್ಪ ಸಮಯದವರೆಗೆ ಬಿಸಿ ನೀರಿನಲ್ಲಿ ನೆನೆಸಿ, ನಂತರ ಸೋಸಿ ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ವಾಕರಿಕೆ ಶಮನಗೊಳಿಸಲು ಸಹಾಯ ಮಾಡುತ್ತದೆ.

ಗ್ರೀನ್‌ ಟೀ: ಗ್ರೀನ್‌ ಟೀ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ. ಅಲ್ಲದೆ ಇದು ಹ್ಯಾಂಗೋವರ್‌ ಅನ್ನು ಹೋಗಲಾಡಿಸಲು ತುಂಬಾನೇ ಸಹಕಾರಿ.

ತರಕಾರಿ ಅಥವಾ ಚಿಕನ್ ಸೂಪ್: ಹ್ಯಾಂಗೊವರ್ ಸಮಯದಲ್ಲಿ, ದೇಹವು ಎಲೆಕ್ಟ್ರೋಲೈಟ್‌ಗಳು ಖಾಲಿಯಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಹಗುರವಾದ ತರಕಾರಿ ಅಥವಾ ಚಿಕನ್ ಸೂಪ್ ಸೇವಿಸಿ, ಇದು ದೇಹಕ್ಕೆ ಅಗತ್ಯವಾದ ಖನಿಜಗಳನ್ನು ಒದಗಿಸುತ್ತದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಬೆಚ್ಚಗಿನ ಸೂಪ್ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹ್ಯಾಂಗೊವರ್‌ನಿಂದ ಹೊರ ಬರಲು ನೀವು ಸೂಪ್‌ ಸಹ ಕುಡಿಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version