ಮಾಳು ಮತ್ತು ಸ್ಪಂದನಾ ಇಬ್ಬರಲ್ಲಿ ಅಂತ್ಯವಾಗಿದ್ದು ಯಾರ ಪ್ರಯಾಣ – Kannada News | Bigg Boss Kannada 12: Malu evicted from the house on Sunday episode

ಮನೆಯಲ್ಲಿ ಎಲ್ಲವೂ ಪ್ರೇಕ್ಷಕ ಅಂದುಕೊಂಡಂತೆ ನಡೆಯುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಬಿಗ್​​ಬಾಸ್ (BiggBoss) ಹೊಸದೊಂದು ಟ್ವಿಸ್ಟ್ ಕೊಡುತ್ತಾರೆ. ಈ ವಾರ ಡಬಲ್ ಎಲಿಮಿನೇಷನ್ ಎಂಬ ಸುಳಿವನ್ನು ಬಿಗ್​​ಬಾಸ್ ಮೊದಲೇ ಕೊಟ್ಟಿದ್ದರು. ಅದರಂತೆ ಶನಿವಾರದ ಎಪಿಸೋಡ್​​ನಲ್ಲಿ ಎಲ್ಲರಿಗೂ ಅಚ್ಚರಿ ಆಗುವಂತೆ ಸೂರಜ್ ಅವರು ಮನೆಯಿಂದ ಹೊರಗೆ ಹೋಗಿದ್ದರು. ಸಹ ಸ್ಪರ್ಧಿಗಳು ವಿದಾಯ ಸಹ ಹೇಳಲಾಗದೆ ಸೂರಜ್ ಅವರನ್ನು ಹೊರಗೆ ಕಳಿಸಲಾಗಿತ್ತು. ಇದೀಗ ಭಾನುವಾರವೂ ಸಹ ಒಬ್ಬ ಸ್ಪರ್ಧಿ ಹೊರಗೆ ಹೋಗಿದ್ದಾರೆ. ಈ ಬಾರಿಯೂ ಅಚ್ಚರಿಯ ಸ್ಪರ್ಧಿಯನ್ನು ಹೊರಗೆ ಕಳಿಸಲಾಗಿದೆ.

ಈ ವಾರ ಸುದೀಪ್ ಬಂದಿರಲಿಲ್ಲ ಬದಲಿಗೆ ಮಾಜಿ ಸ್ಪರ್ಧಿ, ನಟಿ ಅನುಪಮಾ ಅವರು ಬಿಗ್​​ಬಾಸ್ ಮನೆಗೆ ಬಂದು ಸ್ಪರ್ಧಿಗಳೊಟ್ಟಿಗೆ ಕೆಲವು ಫನ್ ಆಕ್ಟಿವಿಟಿಗಳನ್ನು ಮಾಡಿಸಿದರು. ಜೊತೆಗೆ ಈ ಬಾರಿ ನಾಮಿನೇಷನ್​​ನಲ್ಲಿದ್ದ ಸ್ಪರ್ಧಿಗಳಲ್ಲಿ ಕೆಲವರನ್ನು ನಾಮಿನೇಷನ್​​ನಿಂದ ಕಾಪಾಡಲು ಆಕ್ಟಿವಿಟಿ ಮಾಡಿಸಲಾಯ್ತು. ಕಾಫಿ ಕಪ್ ಆಕ್ಟಿವಿಟಿ, ಕೈಗೆ ಬಣ್ಣ ಮೆತ್ತುವ ಆಕ್ಟಿವಿಟಿಗಳನ್ನು ಆಡಿಸುವ ಮೂಲಕ ಈ ವಾರ ಬಚಾವಾದವರನ್ನು ಘೋಷಿಸಲಾಯ್ತು. ಅವುಗಳಲ್ಲಿ ರಾಶಿಕಾ, ಧ್ರುವಂತ್, ರಕ್ಷಿತಾ ಇನ್ನೂ ಕೆಲವರು ಬಚಾವಾದರು.

ಇದನ್ನೂ ಓದಿ: ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್

ಅಂತಿಮವಾಗಿ ಸ್ಪಂದನಾ ಮತ್ತು ಮಾಳು ಅವರುಗಳು ಉಳಿದುಕೊಂಡರು. ಈ ವೇಳೆ ಸ್ಪರ್ಧಿಗಳು ಕೆಲವರು ಮಾಳು ಉಳಿಯಬೇಕು ಎಂದರೆ ಕೆಲವರು ಸ್ಪಂದನಾ ಉಳಿಯಬೇಕು ಎಂದರು. ಬಳಿಕ ಬಿಗ್​​ಬಾಸ್ ಎರಡು ಕಾರುಗಳನ್ನು ಕರೆಸಿ, ಮಾಳು ಮತ್ತು ಸ್ಪಂದನಾ ತಲಾ ಒಂದು ಕಾರಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಅಂತೆಯೇ ಮಾಳು ಮತ್ತು ಸ್ಪಂದನಾ ಕಾರುಗಳಲ್ಲಿ ಕುಳಿತರು. ಎರಡೂ ಕಾರುಗಳು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋದವು. ಆದರೆ ವಾಪಸ್ಸಾಗಿದ್ದು ಕೇವಲ ಒಂದು ಕಾರು. ಆ ಕಾರಿನಿಂದ ಸ್ಪಂದನಾ ಕೆಳಗೆ ಇಳಿದರು. ಆ ಮೂಲಕ ಮಾಳು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋದಂತಾಯ್ತು.

ಈ ವಾರ ಸೂರಜ್ ಮತ್ತು ಮಾಳು ಅವರುಗಳು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಈ ಬಾರಿ ಹೊರಗೆ ಹೋದವರ ದುರಾದೃಷ್ಟವೆಂದರೆ ಸುದೀಪ್ ಅವರನ್ನು ವೇದಿಕೆ ಮೇಲೆ ಭೇಟಿ ಆಗುವ ಅವಕಾಶವೂ ಕೈತಪ್ಪಿದೆ. ಆದರೆ ಮುಂದಿನ ವಾರ ಇವರುಗಳನ್ನು ಮತ್ತೆ ವೇದಿಕೆಗೆ ಕರೆಸುವ ಸಾಧ್ಯತೆ ಇದೆ. ಪ್ರಸ್ತುತ ಬಿಗ್​​ಬಾಸ್ ಮನೆಯಲ್ಲಿ ಅಶ್ವಿನಿ, ರಘು, ಗಿಲ್ಲಿ, ಕಾವ್ಯಾ, ಸ್ಪಂದನಾ, ರಕ್ಷಿತಾ, ಧ್ರುವಂತ್, ಧನುಶ್, ರಾಶಿಕಾ ಅವರುಗಳು ಮಾತ್ರ ಉಳಿದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸ್ಪರ್ಧೆ ಇನ್ನಷ್ಟು ಕಠಿಣ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:49 pm, Sun, 28 December 25

Source link

ಕಾರವಾರದಲ್ಲಿ ಐಎನ್ಎಸ್ ವಾಗ್ಶೀರ್​​ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಜಲಾಂತರ್ಗಾಮಿ ಯಾನ – Kannada News | President Droupadi Murmu undertakes Historic Submarine Sortie Aboard INS Vaghsheer From Karwar

ನವದೆಹಲಿ, ಡಿಸೆಂಬರ್ 28: ರಾಷ್ಟ್ರಪತಿ ದ್ರೌಪದಿ ಮುರ್ಮು ಕಾರವಾರದ ನೌಕಾನೆಲೆಯಿಂದ ತಮ್ಮ ಮೊದಲ ಜಲಾಂತರ್ಗಾಮಿ ಪ್ರಯಾಣವನ್ನು ನಡೆಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಐಎನ್ಎಸ್ ವಾಗ್ಶೀರ್​​ನಲ್ಲಿ ಸಮುದ್ರ ತೀರದಲ್ಲಿ ಹಾರಾಟ ನಡೆಸಿದರು. ಹಾರಾಟದ ಸಮಯದಲ್ಲಿ ಭಾರತದ ಕಡಲ ಕಾರ್ಯತಂತ್ರದಲ್ಲಿ ಜಲಾಂತರ್ಗಾಮಿ ಪಡೆಯ ಪಾತ್ರ ಮತ್ತು ರಾಷ್ಟ್ರೀಯ ಕಡಲ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಕಾರ್ಯಾಚರಣೆಯ ಸಾಮರ್ಥ್ಯಗಳು ಮತ್ತು ಕೊಡುಗೆಗಳ ಬಗ್ಗೆ ರಾಷ್ಟ್ರಪತಿಗಳಿಗೆ ವಿವರಿಸಲಾಯಿತು.

ಈ ಮೂಲಕ ಇಂತಹ ಕಾರ್ಯಾಚರಣೆಯನ್ನು ಕೈಗೊಂಡ ಭಾರತದ ಎರಡನೇ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು 2006ರಲ್ಲಿ ಜಲಾಂತರ್ಗಾಮಿ ಹಾರಾಟವನ್ನು ಕೈಗೊಂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್​​ಬಾಸ್: ಕಾವ್ಯಾ ಬಿಟ್ಟು ಮೋನಿಕಾ ಹಿಂದೆ ಬಿದ್ದ ಗಿಲ್ಲಿ – Kannada News | Bigg Boss Kannada: Gilli proposes to Monica brings laughter

ಗಿಲ್ಲಿ ಬಿಗ್​​ಬಾಸ್ (Bigg Boss) ಕನ್ನಡದ ಪಕ್ಕಾ ಎಂಟರ್ಟೈನರ್ ಆಗಿದ್ದಾರೆ. ಯಾರೇ ಬರಲಿ, ಸನ್ನಿವೇಶ ಎಂಥಹುದ್ದೇ ಇರಲಿ ನಗಿಸುತ್ತಲೇ ಇರುತ್ತಾರೆ. ಕೆಲವೊಮ್ಮೆ ಅವರ ಕಾಮಿಡಿ ಎದುರಿಗಿದ್ದವರಿಗೆ ಅಪಹಾಸ್ಯ, ವ್ಯಂಗ್ಯ ಎನಿಸಿ ಸಿಟ್ಟು ಬರುವುದೂ ಉಂಟು ಆದರೆ ಅದನ್ನೆಲ್ಲ ಗಮನಕ್ಕೆ ತೆಗೆದುಕೊಳ್ಳದೆ ನಗಿಸುತ್ತಲೇ ಇರುತ್ತಾರೆ. ಗಿಲ್ಲಿ, ಬಿಗ್​​ಬಾಸ್ ಮನೆಗೆ ಬಂದಾಗಿನಿಂದಲೂ ಕಾವ್ಯಾ ಜೊತೆಗೆ ಒಳ್ಳೆಯ ಗೆಳೆತನ ಇರಿಸಿಕೊಂಡಿದ್ದಾರೆ. ಕಾವ್ಯಾರನ್ನು ಗೋಳು ಹೊಯ್ದುಕೊಳ್ಳುತ್ತಿರುತ್ತಾರೆ. ಕಾವ್ಯಾ ಹಿಂದೆ ಬಿದ್ದಿದ್ದಾರೆ. ಆದರೆ ಇದೀಗ ಒಮ್ಮೆಲೆ ಕಾವ್ಯಾ ಅನ್ನು ಬಿಟ್ಟು ಮೋನಿಕಾಗೆ ‘ಲವ್ ಯು’ ಎಂದಿದ್ದಾರೆ. ವಿಶೇಷವೆಂದರೆ ಮೋನಿಕಾ ಸಹ ಓಕೆ ಹೇಳಿಬಿಟ್ಟಿದ್ದಾರೆ!

ಸುದೀಪ್ ಅವರು ಈ ವೀಕೆಂಡ್​​ನಲ್ಲಿ ಬಿಗ್​ಬಾಸ್ ಶೋಗೆ ಗೈರು ಹಾಜರಾಗಿದ್ದಾರೆ. ‘ಮಾರ್ಕ್’ ಸಿನಿಮಾದ ಪ್ರಚಾರದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಹಾಗಾಗಿ ಬಿಗ್​​ಬಾಸ್ ಮನೆಗೆ ಬೇರೆ ಅತಿಥಿಗಳು ಕೆಲವರು ಬಂದಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿರುವ ‘ಗೌರಿ ಕಲ್ಯಾಣ’ ಧಾರಾವಾಹಿ ಪಾತ್ರಧಾರಿಗಳು ಈ ವಾರ ಬಿಗ್​​ಬಾಸ್ ಮನೆಗೆ ಬಂದಿದ್ದರು. ಧಾರಾವಾಹಿಯ ಮುಖ್ಯ ಪಾತ್ರಗಳಾದ ತಾಯಿ, ಮೂವರು ಹೆಣ್ಣು ಮಕ್ಕಳು ಸಹ ಬಂದಿದ್ದರು.

ತಾಯಿ ಪಾತ್ರಧಾರಿಗೆ ತಮ್ಮ ಹೆಣ್ಣು ಮಕ್ಕಳನ್ನು ಶ್ರೀಮಂತ ಮನೆಗೆ ಸೊಸೆಯಾಗಿ ಕಳಿಸಬೇಕು ಎಂಬುದು ಆಸೆ, ಅದರಂತೆ ಬಿಗ್​​ಬಾಸ್​​ಗೆ ಬಂದಾಗಲೂ ಸಹ ‘ಗೌರಿ ಕಲ್ಯಾಣ’ ತಾಯಿ ಪಾತ್ರಧಾರಿ ದೀಪಿಕಾ ಅವರು ತಮ್ಮ ಹೆಣ್ಣು ಮಕ್ಕಳಿಗೆ ಗಂಡು ಹುಡುಕುವ ಪ್ರಯತ್ನ ಮಾಡಿದರು. ಈ ವೇಳೆ ಗಿಲ್ಲಿ, ತಾನು ಮಹಾನ್ ಶ್ರೀಮಂತ ಎಂದು ಫೋಸು ಕೊಡುತ್ತಾ, ತನಗೆ ಸಾಕಷ್ಟು ಆಸ್ತಿ ಇದೆ, ತನಗೆ ಮಲ್ಲೇಶ್ವರದಲ್ಲಿ ಎರಡು ಮನೆ ಇದೆ ನಿಮ್ಮ ಮಗಳನ್ನು ನನಗೆ ಕೊಡಿ ಎಂದರು. ಆದರೆ ತಾಯಿ ಪಾತ್ರಧಾರಿ ದೀಪಿಕಾ ಶರಣ್, ‘ನಿಮ್ಮಲ್ಲಿ ಎಲ್ಲ ಇದೆ ಆದರೆ ಬಾಚಣಿಗೆಯೇ ಇಲ್ಲ’ ಎಂದು, ಗಿಲ್ಲಿ ತಲೆ ಬಾಚಿಲ್ಲವೆಂದು ಪರೋಕ್ಷವಾಗಿ ಹೇಳಿದರು. ಆಗ ಗಿಲ್ಲಿ, ‘ಕೆಜಿಎಫ್’ ಸಿನಿಮಾ ನೆನಪಿಸಿ ಮೋನಿಕಾ ಪಾತ್ರಧಾರಿಯ ಕೈ ಹಿಡಿದು ತಲೆ ಬಾಚಿಸಿಕೊಂಡಿದ್ದು ನಗು ತರಿಸಿತು.

ಇದನ್ನೂ ಓದಿ:ಕಾವ್ಯಾ ಅಪ್ಪ-ಅಮ್ಮನಿಗೂ ಇಷ್ಟವಾದ ಗಿಲ್ಲಿ ನಟ; ಸಿಕ್ತು ವಿಶೇಷ ಉಡುಗೊರೆ

ಹಣದಿಂದ ಅಲ್ಲದಿದ್ದರೂ ತಮ್ಮ ಮಾತುಗಳಿಂದ ಮೋನಿಕಾ ಅನ್ನು ಇಂಪ್ರೆಸ್ ಮಾಡಲು ಮುಂದಾದ ಗಿಲ್ಲಿ, ‘ಮೋನಿಕಾ, ನಿನಗೆ ಬೇಡ ಆತಂಕ’ ಎಂದು ಕವನವನ್ನೇ ಕಟ್ಟಿ ಹೇಳಿದರು. ಗಿಲ್ಲಿಯ ಕವನಕ್ಕೆ ಮೋನಿಕಾ ಫಿದಾ ಸಹ ಆಗಿ ಬಿಟ್ಟರು. ಗಿಲ್ಲಿ ಸಹ ‘ಮೋನಿಕಾ ಐ ಲವ್ ಯೂ’ ಎಂದು ಹೇಳಿಬಿಟ್ಟಿರು, ಮೋನಿಕಾ ಸಹ ಒಪ್ಪಿ ಬಿಟ್ಟಿದ್ದರು, ಆದರೆ ತಾಯಿ ಅಡ್ಡ ಬಂದು ಬಿಟ್ಟರು. ಇದನ್ನೆಲ್ಲ ನೋಡುತ್ತಿದ್ದ ಮನೆ ಮಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕುಚಿಕು ಫ್ರೆಂಡ್ಸ್; ಕೋತಿಯ ಜೊತೆಗಿನ ನಾಯಿಗಳ ಗೆಳೆತನ ನೋಡಿ! – Kannada News | Rare Friendship Monkey and 2 Dogs became Close Friends in Sattupalli Watch Viral Video

ನವದೆಹಲಿ, ಡಿಸೆಂಬರ್ 28: ಸ್ವಾಭಾವಿಕವಾಗಿ ನಾಯಿಗಳು ಮತ್ತು ಮಂಗಗಳು (Monkeys) ಬದ್ಧ ವೈರಿಗಳು. ಆದರೆ ಅದಕ್ಕಿಂತ ಭಿನ್ನವಾಗಿ ಕೋತಿಯೊಂದು ಎರಡು ನಾಯಿಗಳೊಂದಿಗೆ ಸ್ನೇಹ ಬೆಳೆಸಿದೆ. ತೆಲಂಗಾಣದ ಖಮ್ಮಂ ಜಿಲ್ಲೆಯ ಸಟ್ಟುಪಲ್ಲಿ ಪಟ್ಟಣದಲ್ಲಿ ಈ ವಿಚಿತ್ರವಾದ ಅಪರೂಪದ ದೃಶ್ಯ ಕಂಡುಬಂದಿದೆ. ಮನೆಮಾಲೀಕರೊಬ್ಬರು ಕೋತಿಯನ್ನು ತಂದು ಪಟ್ಟಣದಲ್ಲಿ ಮಂಗಗಳ ಕಾಟದಿಂದ ರಕ್ಷಣೆಗಾಗಿ ಅದನ್ನು ಸಾಕುತ್ತಿದ್ದಾರೆ. ಆದರೆ, ಅದೇ ಮನೆಯಲ್ಲಿರುವ ಎರಡು ನಾಯಿಮರಿಗಳು ಆ ಕೋತಿಯ ಜೊತೆ ಫ್ರೆಂಡ್ಸ್ ಆಗಿವೆ. ಕೋತಿ ನಾಯಿಮರಿಗಳ ಜೊತೆ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರ್‌ಎಸ್‌ಎಸ್ ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ – Kannada News | Congress leader Manickam Tagore compares RSS to Al Qaeda

ನವದೆಹಲಿ, ಡಿಸೆಂಬರ್ 28: ಬಿಜೆಪಿ ಮತ್ತು ಆರ್​​ಎಸ್​ಎಸ್​ ಅನ್ನು ಹೊಗಳುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ (Digvijay Singh) ವಿವಾದ ಸೃಷ್ಟಿಸಿದ್ದರು. ದಿಗ್ವಿಜಯ ಸಿಂಗ್ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಹಳೆಯ, ದಿನಾಂಕವಿಲ್ಲದ ಫೋಟೋವನ್ನು ಹಂಚಿಕೊಂಡಿದ್ದರು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಹಿರಿಯ ಎಲ್‌ಕೆ ಅಡ್ವಾಣಿ ಅವರೊಂದಿಗೆ ಇದ್ದಾರೆ. ಈ ಪೋಸ್ಟ್​​ನಲ್ಲಿ ದಿಗ್ವಿಜಯ್ ಸಿಂಗ್ ಆರ್‌ಎಸ್‌ಎಸ್‌ನ ಸಾಂಸ್ಥಿಕ ಬಲವನ್ನು ಶ್ಲಾಘಿಸಿದ್ದರು. ಇದು ಸಾಮಾನ್ಯ ಕಾರ್ಯಕರ್ತರನ್ನು ರಾಜಕೀಯ ನಾಯಕರನ್ನಾಗಿ ಪರಿವರ್ತಿಸಲು ಸಹಾಯ ಮಾಡಿದೆ ಎಂದು ಹೇಳಿದ್ದರು.

ಇದಕ್ಕೆ ಕಾಂಗ್ರೆಸ್ ನಾಯಕ ಮಾಣಿಕ್ಕಮ್ ಟ್ಯಾಗೋರ್ ಆರ್‌ಎಸ್‌ಎಸ್ ಅನ್ನು ಗುರಿಯಾಗಿಸಿಕೊಂಡು, ಅದನ್ನು ಅಲ್-ಖೈದಾಗೆ ಹೋಲಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ದಿಗ್ವಿಜಯ ಸಿಂಗ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಮಾಣಿಕ್ಕಂ ಟ್ಯಾಗೋರ್, ಆರ್‌ಎಸ್‌ಎಸ್ ಅನ್ನು ದ್ವೇಷದ ಮೇಲೆ ನಿರ್ಮಿಸಲಾದ ಸಂಘಟನೆ ಎಂದು ಲೇವಡಿ ಮಾಡಿದ್ದಾರೆ. ಆರ್​​ಎಸ್​​ಎಸ್​ ಅನ್ನು ಭಯೋತ್ಪಾದಕ ಗುಂಪು ಅಲ್-ಖೈದಾಗೆ ಹೋಲಿಕೆ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ – Kannada News | DCM DK Shivakumar Announces tourism development Plan In Karavali Districts

ಕಾರವಾರ, (ಡಿಸೆಂಬರ್ 28): ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು (ಡಿಸೆಂಬರ್ 28) ಕರಾವಳಿ ಉತ್ಸವದಲ್ಲಿ ಭಾಗಿಯಾಗಿದ್ದು, ಈ ವೇಳೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸಿಹಿ ಸುದ್ದಿ ನೀಡಿದ್ದಾರೆ.  ಕಾರವಾರದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಡಿಕೆಶಿ, ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ತೀರ್ಮಾನ ಮಾಡಲಾಗಿದ್ದು, ಇದಕ್ಕೆ ಹೊಸ ಪ್ರವಾಸೋದ್ಯಮ ನೀತಿರೂಪಿಸಲು ನಿರ್ಧರಿಸಲಾಗಿದೆ. ಗೋವಾ, ಮುಂಬೈ, ಸೌದಿಗೆ ನಮ್ಮವರು ಹೋಗುತ್ತಾರೆ. ಹೀಗಾಗಿ ಕರಾವಳಿಯಲ್ಲಿ ಅಭಿವೃದ್ಧಿಗೆ ನಿರ್ಧರಿಸಿದ್ದು, ಯುವಕರ ಶಕ್ತಿ, ನೈಸರ್ಗಿಕ ಸಂಪತ್ತು ಬಳಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಚರ್ಚಿಸಲು ಜನವರಿ 10ರಂದು ಕರಾವಳಿಯ ಮೂರು ಜಿಲ್ಲೆಗಳ ಡಿಸಿಗಳ ಸಭೆ ಕರೆಯಲಾಗಿದ್ದು, ದೇಶ ವಿದೇಶದ ಬಂಡವಾಳ ಹೂಡಿಕೆದಾರರಿಗೆ ಆಹ್ವಾನ ನೀಡಲಾಗಿದೆ. ಅವರ ಸಲಹೆ, ಮಾರ್ಗದರ್ಶನ ಪರಿಗಣಿಸಲಾಗುವುದು. ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ನೀತಿ ರೂಪಿಸುವ ಜವಾಬ್ದಾರಿ ನಾನೇ ಹೊತ್ತಿದ್ದೇನೆ, ನಾನೆ ಈ ಸಭೆ ಮಾಡ್ತೇನೆ ಎಂದರು. ಈ ಮೂಲಕ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಡಿಕೆಶಿ ಪಣತೊಟ್ಟಿದ್ದಾರೆ.

Source link

IND-W vs SL-W: ಶ್ರೀಲಂಕಾ ವಿರುದ್ಧ ಸತತ 4ನೇ ಟಿ20 ಪಂದ್ಯ ಗೆದ್ದ ಭಾರತ – Kannada News | India Women Beat SL by 30 Runs in 4th T20; Secure 4 0 Series Lead!

ತಿರುವನಂತಪುರಂನಲ್ಲಿ ನಡೆದ ಶ್ರೀಲಂಕಾ ಮಹಿಳಾ ತಂಡದ ವಿರುದ್ಧದ ನಾಲ್ಕನೇ ಟಿ20ಪಂದ್ಯವನ್ನು ಆತಿಥೇಯ ಭಾರತ ತಂಡ 30 ರನ್​ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 4-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಇಬ್ಬರ ಅರ್ಧಶತಕದ ನೆರವಿನಿಂದ 221 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ 191 ರನ್ ಕಲೆಹಾಕಲಷ್ಟೇ ಶಕ್ತವಾಗಿ ಸತತ 4ನೇ ಸೋಲಿಗೆ ಕೊರಳೊಡ್ಡಿತು.

Source link

ಹೊಸ ವರ್ಷ ನಿಮ್ಮ ಬಾಳು ಕತ್ತಲಾದಿತು ಹುಷಾರ್, ನ್ಯೂ ಇಯರ್ ಆಫರ್ ಬಗ್ಗೆ ಇರಲಿ ಎಚ್ಚರ – Kannada News | Karnataka Police Warn of New Year Cyber Scams as Fraudulent Links Target Bank Accounts

ಬೆಂಗಳೂರು, (ಡಿಸೆಂಬರ್ 28): ಹೊಸ ವರ್ಷದ ಟೈಮ್ನಲ್ಲಿ ಕಲರ್ ಪುಲ್ ಶುಭಾಶಯಗಳನ್ನ ( New Year Cyber Scams) ಕಳಿಸಲು ಎಪಿಕೆ ಫೈಲ್ ಬಳಸುತ್ತಾರೆ. ಇದು ಅಪಾಯಕ್ಕೆ ಅವಕಾಶ ಮಾಡಿಕೊಡಬಹುದು. ಯಾಕಂದ್ರೆ ಈ ಫೈಲ್ ಅಥವಾ ಅ್ಯಪ್ ಮೂಲಕ ಹ್ಯಾಕ್ ಮಾಡಿ ನಿಮ್ಮ ಖಾತೆಗೆ ಕನ್ನ ಹಾಕಬಹುದು. ಇನ್ನು ಕೆಲವು ಶುಭಾಶಯದ ಗಿಫ್ಟ್ ಹಾಗೂ ಹೊಸ ವರ್ಷದ ಟೈಮ್ನಲ್ಲಿ ಆಫರ್ ಅಂತಾ ನಕಲಿ ಕಂಪನಿಗಳು, ಅಪರಿಚಿತ ವೆಬ್ ಸೈಟ್ ಗಳು ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ. ಅಪ್ಪಿ ತಪ್ಪಿ ಗಿಫ್ಟ್ ಕೋಪನ್ ಸಿಗುತ್ತೆ ಆಫರ್ ಸಿಗುತ್ತೆ ಅಂತಾ ಹಿಂದೆ ಮುಂದೆ ನೋಡದೇ ಅಪರಿಚಿತ ವೆಬ್ ಸೈಟ್ ಮೇಲೆ ಲಿಂಕ್ ಕ್ಲಿಕ್ ಮಾಡಿದ್ರೆ ಮೋಸದ ಜಾಲಕ್ಕೆ ಬೀಳೋದು ಫಿಕ್ಸ್.

ಮೆಸೇಜ್ ಓಪನ್ ಮಾಡೋ ಮುನ್ನ ಎಚ್ಚರ

ಹೊಸ ವರ್ಷದ ವಿಶ್ ಮೆಸೇಜ್ ಓಪನ್ ಮಾಡೋ ಮುನ್ನ ಎಚ್ಚರಕೆ ವಹಿಸಬೇಕಿದೆ. ಹಿಂದೆ ಮುಂದೆ ನೋಡದೇ ಮೆಸೇಜ್ ಓಪನ್ ಮಾಡಿದ್ರೆ ಖಾತೆಗೆ ಕನ್ನ ಬೀಳುವುದು ಫಿಕ್ಸ್‌‌ . ಡಿಫೆರೆಂಟ್ ಡಿಫೆರೆಂಟ್ ಕಲರ್ ಪುಲ್ ಹೊಸ ವರ್ಷದ ಶುಭಾಶಯಗಳ ಎಪಿಕೆ ಓಪನ್ ಬಗ್ಗೆ ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದು, ಹೊಸ ವರ್ಷದ ಸಂಭ್ರಮದಲ್ಲಿ ನಿಮ್ಮ ಬಾಳು ಕತ್ತಲಾದಿತು ಹುಷಾರ್ ಎಂದಿದ್ದಾರೆ. ಎಪಿಕೆ ಫೈಲ್ ಮೂಲಕ ಹೊಸ ವರ್ಷದ ಶುಭಾಶಯಗಳ ಕಳಸಿ ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ. ಅಪ್ಪಿ ತಪ್ಪಿ ಹೊಸ ವರ್ಷದ ಶುಭಾಶಯಗಳು ಎಪಿಕೆ ಫೈಲ್ ನಲ್ಲಿ ಓಪನ್ ಮಾಡದಂತೆ ತಜ್ಞರ ಸಲಹೆ ನೀಡಿದ್ದಾರೆ. ಇನ್ನು ಹೊಸ ವರ್ಷದ ಗಿಫ್ಟ್ ಕೂಪನ್ ಸಿಗುತ್ತೆ ಆಫರ್ ಸಿಗುತ್ತೆ ಅಂತಾ ಹಿಂದೆ ಮುಂದೆ ನೋಡದೆ ಅಪರಿಚಿತ ವೆಬ್ ಸೈಟ್ ಮೇಲೆ ಲಿಂಕ್ ಕ್ಲಿಕ್ ಮಾಡಬೇಡಿ ಅಂತಿದ್ದಾರೆ ಸೈಬರ್ ತಜ್ಞರು.

ಇದನ್ನೂ ನೋಡಿ; ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?

ನಾರ್ಮಲ್ ಶುಭಾಶಯ ಬೆಸ್ಟ್​

ದೊಡ್ಡ ದೊಡ್ಡ ಹಬ್ಬಗಳಿಗಾಗಿ ನಕಲಿ ಸೈಬರ್ ಜಾಲ ಕಾದು ಕುಳಿತ್ತಿರುತ್ತೆ. ಜನರಿಗೆ ಈತರ ಆಫರ್ ಗಿಫ್ಟ್ ವಾಟ್ಸ್ ಆಫ್ ಮೆಸೇಜ್ ಸಾಮಾಜಿಕ ಜಾಲತಾಣಗಳ ಮೂಲಕ ಕಳಿಸುತ್ತಾರೆ . ಜನರು ತಿಳಿಯದೇ ಒಂದು ಸರಿ ಕ್ಲಿಕ್ ಮಾಡಿದ್ರೂ ಬ್ಯಾಂಕ್ ಅಕೌಂಟ್ ಲೂಟಿಯಾಗುತ್ತೆ. ಹೀಗಾಗಿ ಮೋಸದ ಜಾಲಕ್ಕೆ ಬಲಿಯಾಗದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಹೊಸ ವರ್ಷದಂದು ನಾರ್ಮಲ್ ಟೆಕ್ಸ್ಟ್ ಮೆಸೇಜ್ ಮೂಲಕ ಶುಭಾಶಯಗಳನ್ನ ಕಳಿಸುವುದು ಬೆಸ್ಟ ಅಂತ ಪೊಲೀಸ್ ಇಲಾಖೆ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುತ್ತಿದೆ.

ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾ ಎನ್ನುವುದು ಓಡೋ ಕುದುರೆ ರೀತಿ. ಆದ್ರೆ ಅದನ್ನು ಕಂಟ್ರೋಲ್ ಮಾಡಬೇಕಾದ ಜಾಕಿಗಳು ಅಂದ್ರೆ ಯೂಸರ್ಸ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುರುಡಾಗಿ ದಾರಿ ತಪ್ಪುತಿರೋದು ವಿಪರ್ಯಾಸವೆ ಸರಿ. ಇನ್ನಾದರೂ ಜನ ಕೊಂಚ ಎಚ್ಚರಿಕೆ ವಹಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಂಜಾವೂರು ಆಸ್ಪತ್ರೆಯಲ್ಲಿ 9 ಲಕ್ಷ ರೂ. ಮೌಲ್ಯದ ನಿಧಿ ಪತ್ತೆ; ವೈದ್ಯರಿಗೆ ಅಚ್ಚರಿ – Kannada News | 9 Lakh Rs Worth over 50 years old copper and brass utensils discovered at thanjavur medical college

ತಂಜಾವೂರು, ಡಿಸೆಂಬರ್ 28: ತಂಜಾವೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹಿಂಭಾಗದ ಪಾಳು ಬಿದ್ದ ಕಟ್ಟಡದಲ್ಲಿ ನಿರ್ವಹಣಾ ಕಾರ್ಯದ ಸಮಯದಲ್ಲಿ ಅಪರೂಪದ ವಸ್ತುಗಳು ಪತ್ತೆಯಾಗಿವೆ. ಅಲ್ಲಿನ ಒಂದು ಕೋಣೆಯಲ್ಲಿ ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳು ಪತ್ತೆಯಾಗಿವೆ. ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಈ ಪಾತ್ರೆಗಳ ಮೌಲ್ಯ ರೂ. 9 ಲಕ್ಷ ಆಗಿರಬಹುದು. ತಂಜಾವೂರು (Thanjavur) ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆವರಣದ ಹಳೆಯ ಕಟ್ಟಡ ಪ್ರದೇಶದಲ್ಲಿ ನಿರ್ವಹಣಾ ಕಾರ್ಯವನ್ನು ನಡೆಸಲಾಗುತ್ತಿತ್ತು. ಈ ವೇಳೆ ಈ ನಿಧಿ ಪತ್ತೆಯಾಗಿದೆ.

ತಂಜಾವೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹಿಂದೆ ಒಂದು ಬಳಕೆಯಾಗದ ಕಟ್ಟಡವಿತ್ತು. ಇದರ ನಂತರ, ವೈದ್ಯಕೀಯ ಕಾಲೇಜಿನ ಡೀನ್ ಅದನ್ನು ಸ್ವಚ್ಛಗೊಳಿಸಲು ಆದೇಶಿಸಿದ್ದರು. ಈ ವೇಳೆ ನಿರ್ವಹಣಾ ಕಾರ್ಯಕ್ಕಾಗಿ ಅದನ್ನು ತೆರೆದಾಗ ತಾಮ್ರದ ಜಗ್‌ಗಳು, ಹಿತ್ತಾಳೆ ಪಾತ್ರೆಗಳು, ಅಡುಗೆಗಾಗಿ ದೊಡ್ಡ ಪಾತ್ರೆಗಳು ಮತ್ತು ನೀರು ಸಂಗ್ರಹ ಟ್ಯಾಂಕ್ ಸೇರಿದಂತೆ ಹಲವು ಪ್ರಾಚೀನ ವಸ್ತುಗಳು ಪತ್ತೆಯಾಗಿವೆ. ಆರಂಭಿಕ ವರದಿಯ ಪ್ರಕಾರ, ಇವೆಲ್ಲವೂ ಸುಮಾರು 9 ಲಕ್ಷ ರೂ. ಮೌಲ್ಯದ್ದಾಗಿವೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಮೊದಲ ಪತಿ ಮೇಲೆ ವರದಕ್ಷಿಣೆ ಕೇಸ್​​ ಹಾಕಿದ ಮಹಿಳೆಗೆ ಶಾಕ್ ಕೊಟ್ಟ 2ನೇ ಗಂಡ!

ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಯಿಂದ ಮಾಹಿತಿ ಪಡೆದ ನಂತರ, ಕಂದಾಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ತನಿಖೆ ನಡೆಸಿದ್ದಾರೆ. ವಶಪಡಿಸಿಕೊಂಡ ಎಲ್ಲಾ ಪಾತ್ರೆಗಳನ್ನು ಸುರಕ್ಷಿತವಾಗಿ ಆರ್ಕೈವ್‌ಗೆ ಸ್ಥಳಾಂತರಿಸಲಾಗಿದೆ. ಆ ಸ್ಥಳದಲ್ಲಿ ಅವುಗಳನ್ನು ಯಾವಾಗ, ಯಾವ ಉದ್ದೇಶಕ್ಕಾಗಿ ಮತ್ತು ಹೇಗೆ ಸಂಗ್ರಹಿಸಲಾಗಿದೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.

ತಂಜಾವೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆವರಣದಲ್ಲಿ ಇಂತಹ ಪ್ರಾಚೀನ ಲೋಹದ ವಸ್ತುಗಳ ಆವಿಷ್ಕಾರವು ಸಾರ್ವಜನಿಕರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಶ್ಚರ್ಯ ಮತ್ತು ಆಸಕ್ತಿಯನ್ನು ಉಂಟುಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND-W vs SL-W: 6,6,4,6.. ಒಂದೇ ಓವರ್​ನಲ್ಲಿ ಲಂಕಾ ಸ್ಪಿನ್ನರ್ ಬೆವರಿಳಿಸಿದ ರಿಚಾ ಘೋಷ್

ಶ್ರೀಲಂಕಾ ವಿರುದ್ಧದ ನಾಲ್ಕನೇ ಟಿ20ಪಂದ್ಯದಲ್ಲಿ ಭಾರತ 221 ರನ್ ಗಳಿಸಿತು. ಇದು ಅಂತರರಾಷ್ಟ್ರೀಯ ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಅತ್ಯಧಿಕ ಸ್ಕೋರ್ ಆಗಿದೆ. ತಂಡ ಇಷ್ಟು ಬೃಹತ್ ಮೊತ್ತ ಕಲೆಹಾಕುವಲ್ಲಿ ಸ್ಮೃತಿ, ಶಫಾಲಿ ಹಾಗೂ ರಿಚಾ ಘೋಷ್ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್‌ ಮಾಡಿದ ರಿಚಾ ತಂಡವನ್ನು 200 ರನ್​ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಪಂದ್ಯದ 19ನೇ ಓವರ್​ನಲ್ಲಿ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದ ರಿಚಾ, ಈ ಓವರ್​ನ ಕೊನೆಯ 4 ಎಸೆತಗಳನ್ನು ಬೌಂಡರಿಗಟ್ಟಿದರು. ಮೂರು ಹಾಗೂ 4ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರಿಚಾ, ಐದನೇ ಎಸೆತದಲ್ಲಿ ಬೌಂಡರಿ ಕಲೆಹಾಕಿದರೆ, ಕೊನೆಯ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸರ್ ಬಾರಿಸಿದರು. ಈ ಮೂಲಕ ಈ ಓವರ್​ನಲ್ಲಿ 23 ರನ್​ಗಳು ಬಂದವು. ಮಾತ್ರವಲ್ಲದೆ ಅಂತಿಮ 10 ಓವರ್‌ಗಳಲ್ಲಿ ಭಾರತ ಬರೋಬ್ಬರಿ 136 ರನ್‌ಗಳನ್ನು ಕಲೆಹಾಕಿತು.

Source link

Exit mobile version