Headlines

ಪ್ರಭಾಸ್ ‘ಮಿಡ್ ರೇಂಜ್ ಹೀರೋ: ನಿರ್ದೇಶಕನ ಮಾತಿಗೆ ರೊಚ್ಚಿಗೆದ್ದ ಫ್ಯಾನ್ಸ್ – Kannada News | Director Maruthi said Prabhas was a medium range hero

ಪ್ರಭಾಸ್ (Prabhas) ಪ್ಯಾನ್ ಇಂಡಿಯಾ ಸ್ಟಾರ್ ನಟ. ಅವರ ಕೆಟ್ಟ ಸಿನಿಮಾಗಳು ಸಹ 200-300 ಕೋಟಿ ಹಣವನ್ನು ಸುಲಭವಾಗಿ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡುತ್ತವೆ. ಪ್ರಭಾಸ್ ನಟನೆಯ ಕಳೆದ ಕೆಲ ಸಿನಿಮಾಗಳು ದೊಡ್ಡ ಯಶಸ್ಸು ಗಳಿಸದೇ ಇದ್ದರೂ ಸಹ ಅವರ ಕೈಯಲ್ಲಿ ಕನಿಷ್ಟ ಐದು ಸಿನಿಮಾಗಳಂತೂ ಇದೆ. ತೆಲುಗು ಮಾತ್ರವಲ್ಲದೆ ಬಾಲಿವುಡ್​ನ ನಿರ್ಮಾಪಕರುಗಳು ಸಹ ಹಣದ ಥೈಲಿ ಹಿಡಿದುಕೊಂಡು ಪ್ರಭಾಸ್ ಕಾಲ್​​ಶೀಟ್​​ಗಾಗಿ ಕಾಯುತ್ತಿದ್ದಾರೆ. ಅಂಥಹಾ ನಟನನ್ನು ನಿರ್ದೇಶಕನೊಬ್ಬ ‘ಮಿಡ್ ರೇಂಜ್ ಹೀರೋ’ ಎಂದಿದ್ದಾರೆ. ಇದು ಪ್ರಭಾಸ್ ಅಭಿಮಾನಿಗಳ…

Read More

IND vs NZ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ ಯಾವಾಗ? – Kannada News | India vs NZ ODI 2026: Team India Squad Announcement; Kohli, Rohit Awaited

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಿದ್ದ ಟೀಂ ಇಂಡಿಯಾ (Team India) ಪ್ರಸ್ತುತ ವಿಶ್ರಾಂತಿ ಮೂಡ್​ನಲ್ಲಿದೆ. ಇನ್ನೇನಿದ್ದರೂ ತಂಡ ಕಣಕ್ಕಿಳಿಯುವುದು ಮುಂದಿನ ವರ್ಷವೇ. ಆದಾಗ್ಯೂ 2026 ರಲ್ಲಿ ಟೀಂ ಇಂಡಿಯಾ ಮೊದಲಿಗೆ ಯಾವ ತಂಡವನ್ನು ಯಾವಾಗ ಎದುರಿಸಲಿದೆ ಎಂಬುದು ಖಚಿತವಾಗಿದೆ. ಅದರಂತೆ ಭಾರತ ಏಕದಿನ ತಂಡ ನ್ಯೂಜಿಲೆಂಡ್ (India vs New Zealand) ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿ ಜನವರಿ 11 ರಿಂದ ಆರಂಭವಾಗಲಿದೆ. ಈ ಸರಣಿಯೊಂದಿಗೆ ಟೀಂ ಇಂಡಿಯಾದ ಹೊಸ…

Read More

ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ, ಮೋದಿ ಅಭಿಮಾನಿಯಿಂದ ವ್ಯವಸ್ಥೆ – Kannada News | PM Modi Fan arranged free biriyani for people Who Came listening Mann Ki Baat at Chikkaballapur

ಚಿಕ್ಕಬಳ್ಳಾಪುರ, (ಡಿಸೆಂಬರ್ 28): ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಡಿಸೆಂಬರ್ 28) 129ನೇ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ (Mann Ki Baat) ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದು, ಇದನ್ನು ಸಂಸದ ಡಾ. ಸುಧಾಕರ್ ಅವರು ಅಗಲಗುರ್ಕಿ ಗ್ರಾಮದ ಜನರ ಜತೆ ‘ಮನ್ ಕಿ ಬಾತ್’ ಆಲಿಸಿದರು. ಅಲ್ಲದೇ ‘ಮನ್ ಕಿ ಬಾತ್’ ವೀಕ್ಷಿಸಿದವರಿಗೆ ಪ್ರೀ ಬಿರಿಯಾನಿ ವ್ಯವಸ್ಥೆ ಮಾಡಲಾಗಿದೆ. ಮೋದಿ ಅಭಿಮಾನಿ ರೈತ ರಾಮಾಂಜನಿ ಅವರು ಬಿರಿಯಾನಿ ವ್ಯವಸ್ಥೆ ಮಾಡಿದ್ದು, ಬಿರಿಯಾನಿಗಾಗಿ…

Read More

ಥೈರಾಯ್ಡ್ ಸಮಸ್ಯೆ ಇದ್ಯಾ? ಹಾಗಿದ್ರೆ ಚಳಿಗಾಲದಲ್ಲಿ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವನೆ ಮಾಡಬೇಡಿ – Kannada News | Winter Foods Thyroid Patients Should Avoid, Says Expert

ಚಳಿಗಾಲದಲ್ಲಿ ಥೈರಾಯ್ಡ್ (Thyroid) ರೋಗಿಗಳು ಆರೋಗ್ಯದ ಬಗ್ಗೆ ಸ್ವಲ್ಪ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಶೀತ ಹೆಚ್ಚಾದಂತೆ, ದೇಹದಲ್ಲಿ ಆಲಸ್ಯ, ಆಯಾಸ, ತೂಕ ಹೆಚ್ಚಾಗುವುದು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಉದ್ಭವಿಸಬಹುದು. ಅದರಲ್ಲಿಯೂ ಥೈರಾಯ್ಡ್ ಇರುವಾಗ, ಔಷಧಿಗಳ ಜೊತೆಗೆ, ಸರಿಯಾದ ಆಹಾರ ಸೇವನೆಯೂ ಸಹ ಬಹಳ ಮುಖ್ಯವಾಗುತ್ತದೆ. ಹೆಚ್ಚು ಹುರಿದ ಮತ್ತು ಸಿಹಿ ಅಂಶವಿರುವ ಆಹಾರ ಸೇವನೆ ಥೈರಾಯ್ಡ್ ರೋಗಿಗಳ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜೊತೆಗೆ ಈ ರೀತಿಯ ಅನುಚಿತ ಆಹಾರ…

Read More

ತಡರಾತ್ರಿ ಜನಿಸಿದ ಮಗುವಿನ ಕರುಳೆಲ್ಲಾ ಹೊರಕ್ಕೆ: ಝೀರೋ ಟ್ರಾಫಿಕ್‌ನಲ್ಲಿ ಹುಬ್ಬಳ್ಳಿಗೆ ರವಾನೆ – Kannada News | Koppal: Baby’s Intestine Came Out, Rushed to Hubballi Hospital in Zero Traffic Corridor

ಕೊಪ್ಪಳ, ಡಿಸೆಂಬರ್​​ 28: ಕೇವಲ 10 ಗಂಟೆ ಹಿಂದೆ ಜನಿಸಿದ ಮಗು (Newborn baby). ಆ ಮಗುವಿನ ಕರಳುಗಳು ಹೊರಗೆ ಬಂದಿದ್ದವು. ಹೀಗಾಗಿ ತುರ್ತು ಚಿಕಿತ್ಸೆ ಅನಿವಾರ್ಯವಾಗಿತ್ತು. ನಿನ್ನೆ ರಾತ್ರಿ ಜನಿಸಿದ ಮಗು ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿತ್ತು. ಮಗುವನ್ನು ಉಳಿಸಲು ಕೆಲವರು ಪ್ರಾಣ ಒತ್ತೆ ಇಟ್ಟಿದ್ದರು. ಮಗುವನ್ನು ಝೀರೋ ಟ್ರಾಫಿಕ್​ನಲ್ಲಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದುಕೊಂಡು ಹೋಗಲಾಗಿದ್ದು, ಪೊಲೀಸ್ ಇಲಾಖೆ ಕೂಡ ಸಾಥ್ ನೀಡಿತ್ತು. ಕೊಪ್ಪಳದಲ್ಲಿ ಶನಿವಾರ ರಾತ್ರಿ 10 ಗಂಟೆ ಹಿಂದೆ ಜನಿಸಿದ…

Read More

ಹೆಡ್ ಕೋಚ್ ಹುದ್ದೆಯಿಂದ ಗಂಭೀರ್ ತಲೆದಂಡ? ಸ್ಪಷ್ಟನೆ ನೀಡಿದ ಬಿಸಿಸಿಐ – Kannada News | Gautam Gambhir Test Coach Future: BCCI Denies Laxman Rumors Amidst Poor Performance

ಗೌತಮ್ ಗಂಭೀರ್ (Gautam Gambhir) ಟೀಂ ಇಂಡಿಯಾ ಮುಖ್ಯ ಕೋಚ್ ಆದ ಬಳಿಕ ತಂಡದ ಪ್ರದರ್ಶನದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಟಿ20 ಹಾಗೂ ಏಕದಿನ ಮಾದರಿಯಲ್ಲಿ ತಂಡದ ಪ್ರದರ್ಶನ ಉತ್ತಮವಾಗಿದ್ದರೂ, ಟೆಸ್ಟ್​ನಲ್ಲಿ ಮಾತ್ರ ತಂಡದ ಪ್ರದರ್ಶನ ಕಳಪೆಯಾಗಿದೆ. ಅದರಲ್ಲೂ ತವರಿನಲ್ಲೇ ಕ್ಲೀನ್ ಸ್ವೀಪ್ ಮುಜುಗರಕ್ಕೆ ಒಳಗಾಗುವಷ್ಟು ಮಟ್ಟಕ್ಕೆ ತಂಡದ ಪ್ರದರ್ಶನ ಕುಸಿದಿದೆ. ಹೀಗಾಗಿ ಗಂಭೀರ್ ಅವರನ್ನು ಟೆಸ್ಟ್ ತಂಡದಿಂದ ಮುಖ್ಯ ಕೋಚ್ ಹುದ್ದೆಯಿಂದ ಹೊರಗಿಡಬೇಕು ಎಂಬ ಕೂಗು ಜೋರಾಗಿದೆ. ಇದೆಲ್ಲದರ ನಡುವೆ, ಗಂಭೀರ್ ಅವರನ್ನು ಟೆಸ್ಟ್…

Read More

IND-W vs SL-W: ಟಾಸ್ ಗೆದ್ದ ಶ್ರೀಲಂಕಾ; ಪ್ಲೇಯಿಂಗ್ 11 ಹೀಗಿದೆ – Kannada News | IND W vs SL W 4th T20: India Dominates, Sri Lanka Wins Toss for Formal Match

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ಇಂದು ತಿರುವನಂತಪುರದಲ್ಲಿ ನಡೆಯುತ್ತಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ಈಗಾಗಲೇ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದ್ದು, ಸರಣಿಯನ್ನು ಕೈವಶಮಾಡಿಕೊಂಡಿದೆ. ಹೀಗಾಗಿನ ಉಳಿದಿರುವ ಎರಡು ಪಂದ್ಯಗಳು ಭಾರತ ತಂಡಕ್ಕೆ ಕೇವಲ ಔಪಚಾರಿಕವಾಗಿವೆ. ಆದಾಗ್ಯೂ ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾ ಯಾವ ಪಂದ್ಯವನ್ನು ನಿರ್ಲಕ್ಷಿಸುವಂತಿಲ್ಲ. ಆದ್ದರಿಂದ ಹರ್ಮನ್​ ಪಡೆ ಮೊದಲ ಮೂರು ಪಂದ್ಯಗಳಲ್ಲಿ ಮಾಡಿದ ಕೆಲವು ತಪ್ಪುಗಳನ್ನು ತಿದ್ದಿಕೊಳ್ಳಲು ಉಳಿದಿರುವ…

Read More

ಅಧಿಕಾರಿಗಳ ನಡೆ ಗ್ರಾಮಗಳ ಕಡೆ: ಜನ ಸೇವೆಯೇ ಜನಾರ್ಧನ ಸೇವೆಗೆ ವಿಶೇಷ ಅರ್ಥ ಕೊಟ್ಟ CEO – Kannada News | Davangere ZP CEO’s Morning Village Visits: Gitte Madhav Rao Solves Public Problems

ದಾವಣಗೆರೆ, ಡಿಸೆಂಬರ್​ 28: ಸರ್ಕಾರಿ ಅಧಿಕಾರಿಗಳು (Government officer) ಅಂದರೆ ಬೆಳಗ್ಗೆ 10 ಗಂಟೆಗೆ ಕಚೇರಿಗೆ ಹೋಗಿ, ಸಂಜೆ 5 ಗಂಟೆಗೆ ಮನೆಗೆ ಹೋಗುತ್ತಾರೆ ಎನ್ನುವ ಮಾತು ಎಲ್ಲೆಡೆ ಕೇಳಿಬರತ್ತೆ. ಆದರೆ ಇಲ್ಲೊಬ್ಬರು ಅಧಿಕಾರಿ ಬೆಳ್ಳಂಬೆಳಗ್ಗೆ ಎದ್ದು ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ ಗ್ರಾಮದ ವೀಕ್ಷಣೆ ಬಳಿಕ ಬೆಳಗ್ಗೆ 10 ಗಂಟೆಗೆ ಕಚೇರಿಗೆ ತೆರಳಿ ಕಾರ್ಯನಿರ್ವಹಿಸುತ್ತಾರೆ. ದಾವಣಗೆರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠಲ್ ರಾವ್,…

Read More

ಬೆಂಗಳೂರು ಕೋಗಿಲು ಲೇಔಟ್​ನಲ್ಲಿ ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು

ಬೆಂಗಳೂರು, ಡಿಸೆಂಬರ್​ 28: ಹಲವರಿಂದ ಹಣ ಪಡೆದು ಓರ್ವ ಅಲ್ಲಿ ಶೆಡ್​ ಹಾಕಿದ್ದಾನೆ. ಹೀಗಾಗಿ ತೀರ್ಮಾನ ತೆಗೆದುಕೊಂಡು ನೋಟಿಸ್ ಕೊಟ್ಟಿದ್ದೇವೆ. ಅವರು ಸ್ಥಳೀಯರೇ ಆಗಿದ್ದರೆ ಪರಿಹಾರದ ಬಗ್ಗೆ ಚರ್ಚೆ ನಡೀತಿದೆ. ರಾಜೀವ್ ಗಾಂಧಿ ಹೌಸಿಂಗ್ ಸ್ಕೀಮ್‌ನಲ್ಲಿ ಪರಿಹಾರ ನೀಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆ.ಸಿ.ವೇಣುಗೋಪಾಲ್ ಎಐಸಿಸಿ ಜನರಲ್ ಸೆಕ್ರೆಟರಿ ಇದ್ದಾರೆ. ಅವರಿಗೆ ಸಲಹೆ ನೀಡೋದಕ್ಕೆ ಎಲ್ಲಾ ಅಧಿಕಾರ ಇದೆ. ಏನಾದರೂ ಇದ್ದರೆ ನಾವು ಸಲಹೆ ಪಡೆದುಕೊಳ್ಳುತ್ತೇವೆ, ಆದ್ರೆ ವೇಣುಗೋಪಾಲ್ ಅಧಿಕಾರದಲ್ಲಿ…

Read More

Important Days in January 2026: ಜನವರಿ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಗಳ ಪಟ್ಟಿ – Kannada News | Important Days in January 2026: What are the national and international days celebrated in the month of January?

2026 ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ಜನರು ಉತ್ಸುಕತೆಯಿಂದ ಕಾಯುತ್ತಿದ್ದಾರೆ. ವರ್ಷದ ಮೊದಲ ತಿಂಗಳಾದ ಜನವರಿ (January) ಹೊಸ ವರ್ಷದ, ಹೊಸತನ, ಭರವಸೆಯ ಆರಂಭವನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೆ ಈ ತಿಂಗಳಿನಲ್ಲಿ  ಸಾಮಾಜಿಕ ಅರಿವು, ಶಿಕ್ಷಣ ಮತ್ತುಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಒಂದಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಗಳನ್ನು ಆಚರಿಸಲಾಗುತ್ತದೆ. ವರ್ಷದ ಮೊದಲ ತಿಂಗಳಿನಲ್ಲಿ ಆಚರಿಸಲಾಗುವ ವಿಶೇಷ ದಿನಗಳು ಯಾವುವು ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಜನವರಿ ತಿಂಗಳ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ: ಜನವರಿ…

Read More