Headlines

ಕೋಗಿಲು ಮನೆಗಳ ತೆರವು: ಕೇರಳ ಸಿಎಂ, ಎಂಪಿ ಎಂಟ್ರಿ ಬೆನ್ನಲ್ಲೇ ಹೊಸ ಮನೆ ನೀಡಲು ತೀರ್ಮಾನ – Kannada News | Bengaluru Kogilu Demolition: Karnataka Government Ready to Provide New Houses

ಬೆಂಗಳೂರು, ಡಿಸೆಂಬರ್​ 28: ನಗರದ ಕೋಗಿಲು (kogilu) ಲೇಔಟ್​​ನ ಅಕ್ರಮ ಒತ್ತುವರಿ ತೆರವು ಕಾರ್ಯಚರಣೆ, ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಕದನ ಸೃಷ್ಟಿಸಿದೆ. ನಿನ್ನೆಯಿಂದ ಈ ವಿಚಾರಕ್ಕೆ ಕೇರಳ ಸರ್ಕಾರ ಎಂಟ್ರಿ ಕೊಟ್ಟಿದ್ದು, ಹಂತಹಂತವಾಗಿ ರಾಜ್ಯ ಸರ್ಕಾರವನ್ನ ಟೀಕಿಸುವ ಕೆಲಸ ಮಾಡುತ್ತಿದೆ. ಈ ಮಧ್ಯೆ ಕೋಗಿಲು ಲೇಔಟ್ ಸಂತ್ರಸ್ತರಿಗೆ ಬೇರೆ ಕಡೆ ವಸತಿ ನೀಡಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ವಸತಿ ಸಚಿವ ಜಮೀರ್ ಅಹ್ಮದ್ (Zameer Ahmed)​​ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. 180 ಮನೆ ನೀಡಲು ಒಪ್ಪಿಗೆ…

Read More

Chanakya Niti: ಮಹಿಳೆಯರು ಈ ವಿಚಾರಗಳಲ್ಲಿ ಪುರುಷರಿಗಿಂತಲೂ ಸಖತ್‌ ಸ್ಟ್ರಾಂಗ್ – Kannada News | Chanakya Niti: Chanakya says that women are much stronger than men in these matters

ಈ ಸಮಾಜದಲ್ಲಿ ಪುರುಷರನ್ನು ಬಲಿಷ್ಠರಾಗಿ ಹಾಗೂ ಮಹಿಳೆಯರನ್ನು (women) ಹೆಚ್ಚಾಗಿ ಭಾವನಾತ್ಮಕವಾಗಿ ಕಾಣಲಾಗುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಭಾವನಾತ್ಮಕವಾಗಿ ಬಲಶಾಲಿಗಳಲ್ಲಾ ಎನ್ನುವ ಮಾತಿದೆ. ಆದರೆ ಆಚಾರ್ಯ ಚಾಣಕ್ಯರ ಪ್ರಕಾರ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಈ ಕೆಲವೊಂದು ವಿಚಾರಗಳಲ್ಲಿ ಸಿಕ್ಕಾಪಟ್ಟೆ ಸ್ಟ್ರಾಂಗ್‌. ಅದರಲ್ಲೂ ಮಹಿಳೆಯರು ಭಾವನಾತ್ಮಕವಾಗಿ ಹೆಚ್ಚು ಬಲಶಾಲಿಗಳು, ಅವರು ಅತ್ಯಂತ ಕಷ್ಟದ ಸಮಯಗಳಲ್ಲಿಯೂ ಸಹ ಶಾಂತತೆಯನ್ನು ಕಾಯ್ದುಕೊಳ್ಳುತ್ತಾರೆ. ತಮ್ಮ ಕುಟುಂಬದ ಸಂತೋಷಕ್ಕಾಗಿ ದೊಡ್ಡ ತ್ಯಾಗಗಳನ್ನು ಮಾಡುವ ಧೈರ್ಯ ಮಹಿಳೆಗೆ ಮಾತ್ರ ಇದೆ ಎಂದು ಹೇಳಿದ್ದಾರೆ. ಹಾಗಿದ್ರೆ ಇವರ…

Read More

ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ – Kannada News | Sky Gold And Diamonds Jewelry Shop Robbery In Hunsur Mysuru

ಮೈಸೂರು, (ಡಿಸೆಂಬರ್ 28): ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಹಾಡಹಗಲೇ ಚಿನ್ನದಂಗಡಿ ದರೋಡೆಯಾಗಿದೆ. ಹುಣಸೂರು ಬಸ್ ನಿಲ್ದಾಣ ಹಿಂಭಾಗ ಇರುವ ಸ್ಕೈ ಗೋಲ್ಡ್ಸ್ ಆಂಡ್ ಡೈಮಂಡ್ಸ್ ಚಿನ್ನದ ಅಂಗಡಿಗೆ ನುಗ್ಗಿದ ಐವರು ಮುಸುಕುಧಾರಿ ದರೋಡೆಕೋರರು, ಗನ್ ತೋರಿಸಿ ಸುಮಾರು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ಲೂಟಿ ಮಾಡಿಕೊಂಡು ಪರಾರಿಯಾಗಿದ್ದಾರೆ. ಬೈಕ್‌ಗಳಲ್ಲಿ ಬಂದಿದ್ದ ಈ ಐವರು ದರೋಡೆಕೋರರು ಅಂಗಡಿಗೆ ನುಗ್ಗಿ ಸಿಬ್ಬಂದಿಯನ್ನು ಗನ್​​​ನಿಂದ ಹೆದರಿಸಿ, ಚೀಲದಲ್ಲಿ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ. ಹಾಡಹಗಲೇ ಈ…

Read More

IOCL Recruitment 2025: ಇಂಡಿಯನ್ ಆಯಿಲ್​ನಲ್ಲಿ 501 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ – Kannada News | Iocl apprentice recruitment 2025 501 posts apply online by jan 12

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಜನವರಿ 12ರ ಮೊದಲು ಅಧಿಕೃತ IOCL ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸತಕ್ಕದ್ದು. ಕಂಪನಿಯು ಒಟ್ಟು 501 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿದಾರರಿಗೆ ಅಗತ್ಯವಿರುವ ಅರ್ಹತೆಗಳು ಮತ್ತು ಅವರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು ಯಾವುವು? ಕಂಪನಿಯು ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಟ್ರೇಡ್…

Read More

ಪ್ರಭಾಸ್ ಅಭಿಮಾನಿಗಳಿಗೆ ತನ್ನ ಮನೆ ವಿಳಾಸ ಕೊಟ್ಟ ‘ರಾಜಾ ಸಾಬ್’ ನಿರ್ದೇಶಕ – Kannada News | The Raja Saab movie director Maruthi gave his address to Prabhas fans

ಪ್ರಭಾಸ್ (Prabhas) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಕೊನೆಗೂ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ. ಈ ವರ್ಷದ ಆರಂಭದಿಂದಲೂ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಇದೀಗ ಕೊನೆಗೂ ಸಿನಿಮಾ ಮುಂದಿನ ತಿಂಗಳು ಅಂದರೆ ಜನವರಿಯ ಸಂಕ್ರಾಂತಿ ವೇಳೆ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ ಅದ್ಧೂರಿಯಾಗಿ ನೆರವೇರಿದ್ದು ಕಾರ್ಯಕ್ರಮದಲ್ಲಿ ನಿರ್ದೇಶಕ ಮಾರುತಿ ಅವರು, ಪ್ರಭಾಸ್ ಅಭಿಮಾನಿಗಳಿಗೆ ತಮ್ಮ ಮನೆ ವಿಳಾಸ ಕೊಟ್ಟಿದ್ದಾರೆ. ಪ್ರೀ ರಿಲೀಸ್ ಇವೆಂಟ್​​ನಲ್ಲಿ…

Read More

ಭಾರತದ ಆಪರೇಷನ್ ಸಿಂಧೂರ್ ವೇಳೆ ನೂರ್ ಖಾನ್ ವಾಯುನೆಲೆಗೆ ಹಾನಿ; ಒಪ್ಪಿಕೊಂಡ ಪಾಕಿಸ್ತಾನ – Kannada News | Pakistan Minister Ishaq Dar Admits Indias Operation Sindoor Strikes Damaged Nur Khan Base

ನವದೆಹಲಿ, ಡಿಸೆಂಬರ್ 28: ಈ ವರ್ಷದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ್ (Operation Sindoor) ಸಮಯದಲ್ಲಿ ಭಾರತ ನಡೆಸಿದ ಕಾರ್ಯತಂತ್ರದ ಮತ್ತು ನಿಖರವಾದ ದಾಳಿಗಳ ಪರಿಣಾಮವನ್ನು ಪಾಕಿಸ್ತಾನ (Pakistan) ಸರ್ಕಾರ ಸಾರ್ವಜನಿಕವಾಗಿ ಒಪ್ಪಿಕೊಂಡಿದೆ. ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ (Pahalgam Attack) ನಡೆದ 26 ಭಾರತೀಯರ ಸಾವಿಗೆ ಪ್ರತಿಕ್ರಿಯೆಯಾಗಿ ಭಾರತ ಆಪರೇಷನ್ ಸಿಂಧೂರ್ ನಡೆಸಿದ ಹಲವು ತಿಂಗಳ ನಂತರ ಪಾಕಿಸ್ತಾನ ಈ ವಿಷಯವನ್ನು ಒಪ್ಪಿಕೊಂಡಿದೆ. ನೂರ್ ಖಾನ್ ವಾಯುನೆಲೆಗೆ ಹಾನಿಯನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ರಾವಲ್ಪಿಂಡಿಯ ಚಕ್ಲಾಲಾ ಪ್ರದೇಶದ ನೂರ್ ಖಾನ್…

Read More

ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಮನೆ ಕೆಲಸಗಾರ – Kannada News | Bengaluru Ganvi Suicide Case: Home Worker Venkatappa talks about owner Suraj

ಬೆಂಗಳೂರು, (ಡಿಸೆಂಬರ್ 28): ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನವ ವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಗಳ ಸಾವಿಗೆ ಆಕೆಯ ಗಂಡನ ಕುಟುಂಬವೇ ಕಾರಣ. ಆತ ಗಂಡಸೇ ಅಲ್ಲ ಎಂದು ದೂರಿದ್ದ ಗಾನವಿ ಕುಟುಂಬದ ವಿರುದ್ಧವೇ ಈಗ ಎಫ್​​ಐಆರ್​​ ದಾಖಲಾಗಿದೆ. ತನ್ನ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಕೂಡ ಕೇಳಿಬಂದಿದ್ದ ಕಾರಣ ಮನನೊಂದಿದ್ದ ಗಾನವಿ ಪತಿ ಸೂರಜ್​​ ಕೂಡ ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಜೊತೆ ಆತನ ತಾಯಿ…

Read More

ಕಾವ್ಯಾ ಅಪ್ಪ-ಅಮ್ಮನಿಗೂ ಇಷ್ಟವಾದ ಗಿಲ್ಲಿ ನಟ; ಸಿಕ್ತು ವಿಶೇಷ ಉಡುಗೊರೆ – Kannada News | Kavya Shaiva father Sadanand gifts Gilli Nata a silver bracelet in Bigg Boss Kannada Season 12

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ (Gilli Nata) ಅವರು ಎಲ್ಲರ ಫೇವರಿಟ್ ಆಗಿದ್ದಾರೆ. ವೀಕ್ಷಕರಿಗೆ ಮಾತ್ರವಲ್ಲದೇ ಸ್ಪರ್ಧಿಗಳ ಕುಟುಂಬದವರಿಗೂ ಗಿಲ್ಲಿ ನಟ ಎಂದರೆ ಇಷ್ಟ. ಈಗಾಗಲೇ ಬಿಗ್ ಬಾಸ್ (BBK 12) ಮನೆಯೊಳಗೆ ಬಂದು ಹೋಗಿರುವ ಫ್ಯಾಮಿಲಿ ಸದಸ್ಯರು ಈ ಮಾತನ್ನು ಹೇಳಿದ್ದಾರೆ. ವಿಶೇಷವಾಗಿ ಕಾವ್ಯಾ ಶೈವ (Kavya Shaiva) ಅವರ ತಂದೆ-ತಾಯಿಗೂ ಗಿಲ್ಲಿ ಇಷ್ಟ ಆಗಿದ್ದಾರೆ. ಅದಕ್ಕಾಗಿ ಒಂದು ವಿಶೇಷ ಗಿಫ್ಟ್ ನೀಡಿದ್ದಾರೆ. ಕಾವ್ಯಾ ತಂದೆ ಸದಾನಂದ್ ಅವರು ಬೆಳ್ಳಿ ಬ್ರಾಸ್ಲೆಟ್ ತಂದು ಗಿಲ್ಲಿಗೆ…

Read More

ನಿರಂತರ ಆಯಾಸವಾಗಿ ಕೈ, ಕಾಲುಗಳಲ್ಲಿ ಜುಮ್ಮೆನಿಸುತ್ತಾ? ಹಾಗಿದ್ರೆ ನಿಮ್ಮ ದೇಹದಲ್ಲಿ ಈ ವಿಟಮಿನ್ ಕೊರತೆ ಇದೆ ಎಂದರ್ಥ! – Kannada News | Vitamin B12 Deficiency: Early Warning Signs You Need to Know

ನಮ್ಮ ದೇಹ ಮತ್ತು ಅಂಗಗಳು ಆರೋಗ್ಯಕರವಾಗಿ ಕಾರ್ಯನಿರ್ವಹಿಸಲು, ಜೀವಸತ್ವ (Vitamin) ಅಂದರೆ ವಿಟಮಿನ್ ಮತ್ತು ಖನಿಜಗಳು ಅವಶ್ಯಕ. ದೇಹವು ಪೋಷಕಾಂಶಗಳನ್ನು ಸರಿಯಾಗಿ ಪಡೆಯದಿದ್ದರೆ, ದೈಹಿಕ ಕಾರ್ಯಗಳಿಗೆ ಅಡ್ಡಿಯಾಗುತ್ತದೆ ಮತ್ತು ಅಂಗಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಅದೇ ರೀತಿ, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುವ ಪೋಷಕಾಂಶಗಳನ್ನು ಹೊಂದಿರುವ ಸಮತೋಲಿತ ಆಹಾರವು ದೇಹದ ಬೆಳವಣಿಗೆ, ರೋಗನಿರೋಧಕ ಶಕ್ತಿ ಮತ್ತು ಜೀವನ ಪ್ರಕ್ರಿಯೆಗಳಿಗೆ ಸಹಾಯ ಮಾಡುತ್ತದೆ. ಅಂತಹ ಪ್ರಮುಖ ಜೀವಸತ್ವಗಳಲ್ಲಿ ವಿಟಮಿನ್ ಬಿ 12 (Vitamin B12) ಕೂಡ ಒಂದು. ಇದು…

Read More

New Year 2026: ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು – Kannada News | New Year 2026 Security: Bengaluru Expects Over 10 Lakh Revelers; Focus on Womens Safety and Crowd Management

ಬೆಂಗಳೂರು, ಡಿಸೆಂಬರ್ 28: ಹೊಸ ವರ್ಷ 2026ರ ಆಚರಣೆಗೆ ಬೆಂಗಳೂರು ನಗರ ಸಜ್ಜಾಗಿದ್ದು, ಪೊಲೀಸರು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಗೃಹ ಸಚಿವ ಜಿ. ಪರಮೇಶ್ವರ ಅವರು, ಈ ಬಾರಿ 10 ಲಕ್ಷಕ್ಕೂ ಹೆಚ್ಚು ಜನರು ಆಚರಣೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ, ಸಂಚಾರ ನಿಯಂತ್ರಣ ಹಾಗೂ ಜನದಟ್ಟಣೆ ನಿರ್ವಹಣೆಗೆ ವಿಶೇಷ ಸೂಚನೆ ನೀಡಲಾಗಿದೆ. ಮಹಿಳೆಯರ ಸುರಕ್ಷತೆಗೆ ಅತ್ಯುನ್ನತ ಆದ್ಯತೆ ನೀಡಲಾಗಿದೆ. ಬಾರ್, ರೆಸ್ಟೋರೆಂಟ್ ಮತ್ತು ಮಾಲ್‌ಗಳೊಂದಿಗೆ ಸಭೆ ನಡೆಸಿ ಮಾರ್ಗಸೂಚಿಗಳನ್ನು ಜಾರಿ ಮಾಡಲಾಗಿದೆ….

Read More