ಮನ್ ಕಿ ಬಾತ್; ಮನಬಂದಂತೆ ಆ್ಯಂಟಿಬಯೋಟಿಕ್ ಸೇವಿಸುವವರಿಗೆ ಪ್ರಧಾನಿ ಮೋದಿ ಎಚ್ಚರಿಕೆ – Kannada News | Mann Ki Baat 2025 PM Modi Shares Health Warning on Self Medication and antibiotics

ನವದೆಹಲಿ, ಡಿಸೆಂಬರ್ 28: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಈ ವರ್ಷದ ಕೊನೆಯ ಮನ್ ಕಿ ಬಾತ್​​ನಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಉಗ್ರರ ದಾಳಿಯಿಂದ ಹಿಡಿದು ಆರೋಗ್ಯ ಸಮಸ್ಯೆಯವರೆಗೆ ಹಲವು ವಿಷಯಗಳವರೆಗೆ ಅವರು ಬೆಳಕು ಚೆಲ್ಲಿದ್ದಾರೆ. ಆದರೆ, ದೆಹಲಿ ಸೇರಿದಂತೆ ದೆಹಲಿಯ ಹಲವು ನಗರಗಳಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಬಗ್ಗೆ ಅವರು ಯಾವುದೇ ಪ್ರಸ್ತಾಪವನ್ನೂ ಮಾಡಿಲ್ಲ. ತಮ್ಮ ಮನ್ ಕಿ ಬಾತ್​​ನಲ್ಲಿ ಪ್ರಧಾನಿ ಮೋದಿ ಪ್ರತಿಯೊಬ್ಬ ಭಾರತೀಯರು ಗಂಭೀರವಾಗಿ ಪರಿಗಣಿಸಬೇಕಾದ ಆರೋಗ್ಯ ಎಚ್ಚರಿಕೆಯನ್ನು ಹಂಚಿಕೊಂಡಿದ್ದಾರೆ.

ಭಾರತದ ಯುವ ಜನರು ದೇಶದ ಅತಿದೊಡ್ಡ ಭರವಸೆಯ ಮೂಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜನವರಿ 12ರಂದು ರಾಷ್ಟ್ರೀಯ ಯುವ ದಿನ ಹಾಗೂ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯಂದು ವಿಕಸಿತ ಭಾರತ ಯುವ ನಾಯಕರ ಸಂವಾದದ ಎರಡನೇ ಆವೃತ್ತಿ ನಡೆಯಲಿದೆ ಎಂದು ಅವರು ಘೋಷಿಸಿದ್ದಾರೆ.

ಇದನ್ನೂ ಓದಿ: ಮನ್‌ ಕಿ ಬಾತ್‌ನಲ್ಲಿ ಕನ್ನಡ ಡಿಂಡಿಮ: ದುಬೈನಲ್ಲಿ ಕನ್ನಡಾಭಿಮಾನಕ್ಕೆ ಮೋದಿ ಶ್ಲಾಘನೆ

ಈ ವೇಳೆ ಆರೋಗ್ಯದ ಬಗ್ಗೆ ಗಮನಹರಿಸಿದ ಪ್ರಧಾನಿ ಮೋದಿ, “ನ್ಯುಮೋನಿಯಾ ಮತ್ತು ಮೂತ್ರನಾಳದ ಸೋಂಕುಗಳು (ಯುಟಿಐ) ನಂತಹ ರೋಗಗಳ ವಿರುದ್ಧ ಪ್ರತಿಜೀವಕಗಳು (ಆ್ಯಂಟಿಬಯೋಟಿಕ್) ಕಡಿಮೆ ಪರಿಣಾಮಕಾರಿಯಾಗುತ್ತಿವೆ ಎಂದು ಎಚ್ಚರಿಸುವ ಇತ್ತೀಚಿನ ಐಸಿಎಂಆರ್ ವರದಿಯನ್ನು ಪ್ರಧಾನಿ ಬಹಿರಂಗಪಡಿಸಿದ್ದಾರೆ. ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯೋಟಿಕ್​ಗಳನ್ನು ಬಳಸದಂತೆ ಅವರು ಜನರ ಬಳಿ ಮನವಿ ಮಾಡಿದ್ದಾರೆ. ಇವುಗಳ ಅತಿಯಾದ ಬಳಕೆ ಅಥವಾ ಯಾವುದೇ ವೈದ್ಯಕೀಯ ಸಲಹೆಯಿಲ್ಲದ ಬಳಕೆಯು ಅವುಗಳ ಪರಿಣಾಮಕಾರಿತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ಹೇಳಿದ್ದಾರೆ. ಆ್ಯಂಟಿಬಯೋಟಿಕ್ ಔಷಧಿಯನ್ನು ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯಲೇಬೇಕು” ಎಂದು ಅವರು ಎಚ್ಚರಿಸಿದ್ದಾರೆ.

ನ್ಯುಮೋನಿಯಾ ಮತ್ತು ಮೂತ್ರನಾಳದ ಸೋಂಕುಗಳು (ಯುಟಿಐ) ನಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಬಳಸುವ ಆ್ಯಂಟಿಬಯೋಟಿಕ್​​ಗಳು ಹೆಚ್ಚು ನಿಷ್ಪರಿಣಾಮಕಾರಿಯಾಗುತ್ತಿವೆ ಎಂದು ಐಸಿಎಂಆರ್ ವರದಿಯು ಕಂಡುಹಿಡಿದಿದೆ. ಇದು ತುಂಬಾ ಆತಂಕಕಾರಿ ಸಂಗತಿ. ವೈದ್ಯಕೀಯ ಸಲಹೆಯಿಲ್ಲದೆ ಜನರು ಆ್ಯಂಟಿಬಯೋಟಿಕ್​ಗಳನ್ನು ಸೇವಿಸುವ ಅಭ್ಯಾಸವು ಬೆಳೆಯುತ್ತಿರುವುದು ಆತಂಕಕಾರಿ ಸಂಗತಿ. ಪ್ರತಿಜೀವಕಗಳು ಹಾಗೆ ಯಾರು ಬೇಕಾದರೂ ಹೇಗೆ ಬೇಕಾದರೂ ತೆಗೆದುಕೊಳ್ಳಬಹುದಾದ ಔಷಧಿಗಳಲ್ಲ. ಅವುಗಳನ್ನು ವೈದ್ಯರ ಸಲಹೆಯ ನಂತರ ಮಾತ್ರ ಬಳಸಬೇಕು” ಎಂದು ಮೋದಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Mann Ki Baat: ಬೆಂಗಳೂರಿನ ಐಐಎಸ್​ಸಿಯನ್ನು ಹಾಡಿಹೊಗಳಿದ ಪ್ರಧಾನಿ ಮೋದಿ

“ಇದು 2025ರ ಮನ್ ಕಿ ಬಾತ್​​ನ ಕೊನೆಯ ಕಂತು. 2026ರಲ್ಲಿ ನಾವು ಮತ್ತೆ ಭೇಟಿಯಾಗುತ್ತೇವೆ. ಹೊಸ ಕಂತುಗಳು, ಹೊಸ ಸಮಸ್ಯೆಗಳೊಂದಿಗೆ ನಾವು ಅದೇ ಉತ್ಸಾಹ, ಶಕ್ತಿ ಮತ್ತು ಒಗ್ಗಟ್ಟಿನ ಭಾವನೆಯೊಂದಿಗೆ ಹಿಂತಿರುಗುತ್ತೇವೆ” ಎಂದು ಪ್ರಧಾನಿ ಮೋದಿ ಮನ್ ಕಿ ಬಾತ್​​ನ ಕೊನೆಯಲ್ಲಿ ಹೇಳಿದ್ದಾರೆ. ಚಳಿಗಾಲದಲ್ಲಿ ಜನರು ಹೆಚ್ಚು ಆರೋಗ್ಯದ ಬಗ್ಗೆ ಗಮನ ಹರಿಸಲು ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:59 pm, Sun, 28 December 25

Source link

ಮನ್‌ ಕಿ ಬಾತ್‌ನಲ್ಲಿ ಕನ್ನಡ ಡಿಂಡಿಮ: ದುಬೈನಲ್ಲಿ ಕನ್ನಡಾಭಿಮಾನಕ್ಕೆ ಮೋದಿ ಶ್ಲಾಘನೆ – Kannada News | Pride in their language: PM Modi lauds Kannada Pathshala in Dubai at Mann ki baat

ನವದೆಹಲಿ, (ಡಿಸೆಂಬರ್ 28): ಮನ್‌ ಕಿ ಬಾತ್‌ನಲ್ಲಿ ಕನ್ನಡ (Kannada) ಭಾಷೆ ಬಗ್ಗೆ ಪ್ರಧಾನಿ ಮೋದಿ (PM Modi) ಮಾತನಾಡಿದ್ದಾರೆ. ದುಬೈ ಕನ್ನಡಿಗರ ಕನ್ನಡ ಭಾಷಾ ಪ್ರೇಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತಮ್ಮ 129 ನೇ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ (Mann Ki Baat) ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ದುಬೈನಲ್ಲಿ ಬಹಳ ವರ್ಷಗಳಿಂದ ಕನ್ನಡಿಗರು ವಾಸವಿದ್ದಾರೆ. ದುಬೈ ಕನ್ನಡಿಗರು ತಮ್ಮಲ್ಲಿ ತಾವೇ ಒಂದು ಪ್ರಶ್ನೆ ಕೇಳಿಕೊಂಡ್ರು. ನಮ್ಮ ಮಕ್ಕಳು ಟೆಕ್‌ವರ್ಲ್ಡ್‌ನಲ್ಲಿ ಪ್ರಗತಿ ಹೊಂದುತ್ತಿದ್ದಾರೆ. ಆದರೆ, ಅವರು ತಮ್ಮ ನೆಲದ ಭಾಷೆಯಾದ ಕನ್ನಡದಿಂದ ದೂರ ಆಗುತ್ತಿದ್ದಾರೆಯೇ ಅನ್ನೋ ಆತಂಕ ದುಬೈ ಕನ್ನಡಿಗರಿಗೆ ಬಂತು. ಆಗಿನಿಂದಲೇ ಅವರು ದುಬೈನಲ್ಲಿ ಕನ್ನಡ ಪಾಠ ಶಾಲೆ ಆರಂಭ‌ ಮಾಡಿದರು ಎಂದು ತಿಳಿಸಿದ್ದಾರೆ. ಇನ್ನು ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಎನ್ನುವುದನ್ನು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮೋದಿ ಹೇಳಿದ ದುಬೈನ ‘ಕನ್ನಡ ಪಾಠ ಶಾಲೆ’ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ

Source link

KHPT Recruitment 2025: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​ನಲ್ಲಿ ನರ್ಸ್ ಮತ್ತು ಕೌನ್ಸಿಲರ್ ಹುದ್ದೆಗೆ ನೇಮಕಾತಿ – Kannada News | KHPT Recruitment 2025: Nurse and Counselor Jobs in Karnataka; Apply Online Now!

ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​

ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (KHPT) ಅಧಿಕೃತ ಅಧಿಸೂಚನೆಯ ಮೂಲಕ ನರ್ಸ್ ಮತ್ತು ಕೌನ್ಸಿಲರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಡಿಯಲ್ಲಿ ಬಳ್ಳಾರಿ, ವಿಜಯನಗರ, ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಜನವರಿ 02 ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸತಕ್ಕದ್ದು.

ಕೆಎಚ್‌ಪಿಟಿ ಹುದ್ದೆಯ ಅಧಿಸೂಚನೆ:

  • ಸಂಸ್ಥೆಯ ಹೆಸರು : ಕರ್ನಾಟಕ ಆರೋಗ್ಯ ಪ್ರಮೋಷನ್ ಟ್ರಸ್ಟ್ ( KHPT)
  • ಹುದ್ದೆಗಳ ಸಂಖ್ಯೆ: 2
  • ಉದ್ಯೋಗ ಸ್ಥಳ: ಬಳ್ಳಾರಿ, ವಿಜಯನಗರ, ಬೆಂಗಳೂರು
  • ಹುದ್ದೆಯ ಹೆಸರು: ನರ್ಸ್ ಮತ್ತು ಕೌನ್ಸಿಲರ್

ಶೈಕ್ಷಣಿಕ ಅರ್ಹತೆ:

KHPT ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ GNM, B.Sc , ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು .

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​​ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ KHPT ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • KHPT ನರ್ಸ್ ಮತ್ತು ಕೌನ್ಸಿಲರ್ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • KHPT ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ ಅಪ್‌ಲೋಡ್ ಮಾಡಿ.
    ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.
  • ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಸೀಸ್ ಲೆಜೆಂಡರಿ ವೇಗಿ ಬ್ರೆಟ್​ ಲೀಗೆ ಹಾಲ್​ ಆಫ್ ​ಫೇಮ್ ಗೌರವ

Source link

ಕೋಗಿಲು ಮನೆಗಳ ತೆರವು: ಕೇರಳ ಸಿಎಂ, ಎಂಪಿ ಎಂಟ್ರಿ ಬೆನ್ನಲ್ಲೇ ಹೊಸ ಮನೆ ನೀಡಲು ತೀರ್ಮಾನ – Kannada News | Bengaluru Kogilu Demolition: Karnataka Government Ready to Provide New Houses

ಬೆಂಗಳೂರು, ಡಿಸೆಂಬರ್​ 28: ನಗರದ ಕೋಗಿಲು (kogilu) ಲೇಔಟ್​​ನ ಅಕ್ರಮ ಒತ್ತುವರಿ ತೆರವು ಕಾರ್ಯಚರಣೆ, ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಕದನ ಸೃಷ್ಟಿಸಿದೆ. ನಿನ್ನೆಯಿಂದ ಈ ವಿಚಾರಕ್ಕೆ ಕೇರಳ ಸರ್ಕಾರ ಎಂಟ್ರಿ ಕೊಟ್ಟಿದ್ದು, ಹಂತಹಂತವಾಗಿ ರಾಜ್ಯ ಸರ್ಕಾರವನ್ನ ಟೀಕಿಸುವ ಕೆಲಸ ಮಾಡುತ್ತಿದೆ. ಈ ಮಧ್ಯೆ ಕೋಗಿಲು ಲೇಔಟ್ ಸಂತ್ರಸ್ತರಿಗೆ ಬೇರೆ ಕಡೆ ವಸತಿ ನೀಡಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ವಸತಿ ಸಚಿವ ಜಮೀರ್ ಅಹ್ಮದ್ (Zameer Ahmed)​​ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

180 ಮನೆ ನೀಡಲು ಒಪ್ಪಿಗೆ

ಬೈಯಪ್ಪನಹಳ್ಳಿ ಬಳಿ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ 1200 ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಆ ಮನೆಗಳಲ್ಲಿ ಇಲ್ಲಿರುವ ನಿವಾಸಿಗಳಿಗೆ ಮನೆಗಳನ್ನು ನೀಡಲು ಸರ್ಕಾರ ತಿರ್ಮಾನಿಸಿದೆ. ಹೋರಾಟಗಾರರು 250 ಮನೆಗಳನ್ನು ಕೇಳಿದ್ದರು. ಆದರೆ ವಸತಿ ಇಲಾಖೆಯಿಂದ 180 ಮನೆ ನೀಡಲು ಒಪ್ಪಿಗೆ ನೀಡಲಾಗಿದ್ದು, ರಿಜಿಸ್ಟರ್ ಮಾಡಿಕೊಡುವುದಾಗಿಯೂ ಭರವಸೆ ನೀಡಲಾಗಿದೆ.

ಕೇರಳ ಸಿಎಂ ಪಿಣರಾಯಿ ಮಾತಿಗೆ ಡಿಸಿಎಂ ಡಿಕೆ ಶಿವಕುಮಾರ್​ ತಿರುಗೇಟು

ಸದ್ಯ ಕೋಗಿಲು ಲೇಔಟ್ ತೆರವು ಪ್ರಕರಣ ಕರ್ನಾಟಕ ಮತ್ತು ಕೇರಳ ಸರ್ಕಾರದ ಮಧ್ಯೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಕೇರಳ ಸಿಎಂ ಪಿಣರಾಯಿ ಕರ್ನಾಟಕ ಸರ್ಕಾರವನ್ನು ಬುಲ್ಡೋಜರ್ ಸರ್ಕಾರ ಎಂದಿದ್ದರು. ಕೇರಳ ಸಿಎಂ ಪಿಣರಾಯಿ ಮಾತಿಗೆ ಡಿಸಿಎಂ ಡಿಕೆ ಶಿವಕುಮಾರ್​ ತಿರುಗೇಟು ನೀಡಿದ್ದಾರೆ. ಈ ವಿಷಯದಲ್ಲಿ ಮೂಗು ತೂರಿಸಬೇಡಿ. ಈ ಮಧ್ಯೆ ಕರ್ನಾಟಕ ಸರ್ಕಾರಕ್ಕೆ ವೇಣುಗೋಪಾಲ್ ಸಲಹೆ ನೀಡಿದ್ದರು. ವೇಣುಗೋಪಾಲ್ ಸಲಹೆ ನೀಡುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ.

ಸರ್ಕಾರದ ವಿರುದ್ಧ ಸಿ.ಟಿ.ರವಿ ಕಿಡಿ

ಇನ್ನು ಈ ವಿಚಾರವಾಗಿ ಬಿಜೆಪಿ MLC ಸಿ.ಟಿ.ರವಿ ಮಾತನಾಡಿದ್ದು, ಕೇರಳ ಸಂಸದ ಇಲ್ಲಿ ಬಂದು ನಮಗೆ ಪಾಠ ಹೇಳುವ ಅಗತ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಕನ್ನಡಿಗರ, ಕನ್ನಡದ ಹಿತಾಸಕ್ತಿ ಒತ್ತೆ ಇಡಬೇಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಕೋಗಿಲು ಲೇಔಟ್​ನಲ್ಲಿ ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು

ಕೋಗಿಲು ಲೇಔಟ್​ನಲ್ಲಿ ಅಕ್ರಮ ಮನೆಗಳ ತೆರವಾಗಿದೆ. ಈಗ ಯಾಕೆ ನೀವು ಆ ಅಕ್ರಮವನ್ನು ಸಮರ್ಥಿಸುತ್ತಿದ್ದೀರಿ? ಅಕ್ರಮ‌ ಅಂದ್ಮೇಲೆ ಅದನ್ನ ಸಮರ್ಥನೆ ಮಾಡುವ ಅಗತ್ಯವಿಲ್ಲ. ಅಕ್ರಮ ಯಾರು ಮಾಡಿದರೂ ಅಕ್ರಮವೇ. ಸಿಎಂ ಹಾಗೂ ಡಿಸಿಎಂ ಕನ್ನಡ, ಕರ್ನಾಟಕವನ್ನು ಕಡೆಗಣಿಸಿ, ರಾಜಕಾರಣ ಮಾಡಿದರೆ ಕರ್ನಾಟಕದ ಜನರು ಕ್ಷಮಿಸಲ್ಲ. ನಿಮ್ಮ ರಾಜಕೀಯಕ್ಕೆ ರಾಜ್ಯದ ಸ್ವಾಭಿಮಾನ ಒತ್ತೆ ಇಡಬೇಡಿ ಎಂದು ವಾಗ್ದಾಳಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:14 pm, Sun, 28 December 25

Source link

Chanakya Niti: ಮಹಿಳೆಯರು ಈ ವಿಚಾರಗಳಲ್ಲಿ ಪುರುಷರಿಗಿಂತಲೂ ಸಖತ್‌ ಸ್ಟ್ರಾಂಗ್ – Kannada News | Chanakya Niti: Chanakya says that women are much stronger than men in these matters

ಈ ಸಮಾಜದಲ್ಲಿ ಪುರುಷರನ್ನು ಬಲಿಷ್ಠರಾಗಿ ಹಾಗೂ ಮಹಿಳೆಯರನ್ನು (women) ಹೆಚ್ಚಾಗಿ ಭಾವನಾತ್ಮಕವಾಗಿ ಕಾಣಲಾಗುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಭಾವನಾತ್ಮಕವಾಗಿ ಬಲಶಾಲಿಗಳಲ್ಲಾ ಎನ್ನುವ ಮಾತಿದೆ. ಆದರೆ ಆಚಾರ್ಯ ಚಾಣಕ್ಯರ ಪ್ರಕಾರ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಈ ಕೆಲವೊಂದು ವಿಚಾರಗಳಲ್ಲಿ ಸಿಕ್ಕಾಪಟ್ಟೆ ಸ್ಟ್ರಾಂಗ್‌. ಅದರಲ್ಲೂ ಮಹಿಳೆಯರು ಭಾವನಾತ್ಮಕವಾಗಿ ಹೆಚ್ಚು ಬಲಶಾಲಿಗಳು, ಅವರು ಅತ್ಯಂತ ಕಷ್ಟದ ಸಮಯಗಳಲ್ಲಿಯೂ ಸಹ ಶಾಂತತೆಯನ್ನು ಕಾಯ್ದುಕೊಳ್ಳುತ್ತಾರೆ. ತಮ್ಮ ಕುಟುಂಬದ ಸಂತೋಷಕ್ಕಾಗಿ ದೊಡ್ಡ ತ್ಯಾಗಗಳನ್ನು ಮಾಡುವ ಧೈರ್ಯ ಮಹಿಳೆಗೆ ಮಾತ್ರ ಇದೆ ಎಂದು ಹೇಳಿದ್ದಾರೆ. ಹಾಗಿದ್ರೆ ಇವರ ಪ್ರಕಾರ ಮಹಿಳೆಯರು ಯಾವೆಲ್ಲಾ ವಿಚಾರದಲ್ಲಿ ಪುರುಷರಿಗಿಂತ ಸಿಕ್ಕಾಪಟ್ಟೆ ಸ್ಟ್ರಾಂಗ್‌ ಅನ್ನೋದನ್ನು ನೋಡೋಣ.

ಮಹಿಳೆಯರು ಈ ವಿಷಯಗಳಲ್ಲಿ ಪುರುಷರಿಗಿಂತಲೂ ಸ್ಟ್ರಾಂಗ್:

ಸಮನ್ವಯ ಮತ್ತು ಸಂಬಂಧ ನಿರ್ವಹಣೆಯ ಕಲೆ: ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸಂಬಂಧಗಳನ್ನು ಪೋಷಿಸುವ ಮತ್ತು ಸಂಬಂಧ ಒಡೆಯುವುದನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಚಾಣಕ್ಯರು ಹೇಳಿದ್ದಾರೆ. ಮಹಿಳೆಯರು ಸ್ವಾಭಾವಿಕವಾಗಿ ಹೆಚ್ಚು ಸಹಿಷ್ಣುರು ಮತ್ತು ಕೆಲವೊಮ್ಮೆ ಕುಟುಂಬದ ಐಕ್ಯತೆಗಾಗಿ ರಾಜಿ ಮಾಡಿಕೊಳ್ಳಲು ಮತ್ತುಎಂತಹ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಮನೆಯಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಯಾವಾಗ ಮೌನವಾಗಿರಬೇಕು ಮತ್ತು ಯಾವಾಗ ಮಾತಾಡಬೇಕು ಎಂಬುದು ಅವರಿಗೆ ತಿಳಿದಿದೆ. ಪುರುಷರು ಹೆಚ್ಚು ಸಂಪಾದನೆ ಮಾಡಬಹುದು ಆದರೆ ಕುಟುಂಬದಲ್ಲಿ ಪ್ರೀತಿಯನ್ನು ಕಾಪಾಡುವ ತಾಕತ್ತು ಕೇವಲ ಮಹಿಳೆಯರಲ್ಲಿ ಮಾತ್ರ ಇರುವುದು.

ಬುದ್ಧಿವಂತಿಕೆ ಮತ್ತು ಬಿಕ್ಕಟ್ಟು ಪರಿಹಾರ: ಚಾಣಕ್ಯನ ಪ್ರಕಾರ, ಮಹಿಳೆಯರು ಪುರುಷರಿಗಿಂತ ಹೆಚ್ಚು ಬುದ್ಧಿವಂತರು ಮತ್ತು ದೂರದೃಷ್ಟಿಯುಳ್ಳವರು. ಅವರು ಯಾವುದೇ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ಬುದ್ಧಿವಂತಿಕೆಯನ್ನು ಬಳಸುತ್ತಾರೆ. ಮಹಿಳೆಯರು ಹೆಚ್ಚಾಗಿ ಭವಿಷ್ಯದವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಪುರುಷರು ಆತುರ ಅಥವಾ ದುರಹಂಕಾರದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ತಪ್ಪುಗಳು ಆಗುವುದೇ ಹೆಚ್ಚು.

ಇದನ್ನೂ ಓದಿ: ಕೌಟುಂಬಿಕ ಕಲಹಗಳಿಗೆ ಮೂಲ ಕಾರಣವೇ ಅಂಶಗಳು ಎನ್ನುತ್ತಾರೆ

ಸಂವಹನ ಮತ್ತು ಉತ್ತಮ ನಡವಳಿಕೆ:  ಪುರುಷರಿಗಿಂತ ಮಹಿಳೆಯರಿಗೆ ಉತ್ತಮ ಸಂವಹನ ಕಲೆಯಿದೆ. ಚಾಣಕ್ಯರ ಪ್ರಕಾರ ಮಹಿಳೆಯರು ಯಾವಾಗಲೂ ಚಿಂತನಶೀಲವಾಗಿ ಮಾತನಾಡುತ್ತಾರೆ. ಹೃದಯವನ್ನು ಹೇಗೆ ಗೆಲ್ಲುವುದು ಅಥವಾ ತಮ್ಮ ಮಾತುಗಳಿಂದ ಸಮಸ್ಯೆಯನ್ನು ಹೇಗೆ ಸರಿಪಡಿಸುವುದು ಎಂದು ಅವರಿಗೆ ತಿಳಿದಿದೆ. ಆದರೆ ಪುರುಷರು ಹೆಚ್ಚಾಗಿ ಕೋಪದಿಂದ ಕಠಿಣ ಮಾತುಗಳನ್ನಾಗಿ ಸಂಬಂಧವನ್ನು ಹಾಳುಮಾಡಿಕೊಳ್ಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:16 pm, Sun, 28 December 25

Source link

ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ – Kannada News | Sky Gold And Diamonds Jewelry Shop Robbery In Hunsur Mysuru

ಮೈಸೂರು, (ಡಿಸೆಂಬರ್ 28): ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಹಾಡಹಗಲೇ ಚಿನ್ನದಂಗಡಿ ದರೋಡೆಯಾಗಿದೆ. ಹುಣಸೂರು ಬಸ್ ನಿಲ್ದಾಣ ಹಿಂಭಾಗ ಇರುವ ಸ್ಕೈ ಗೋಲ್ಡ್ಸ್ ಆಂಡ್ ಡೈಮಂಡ್ಸ್ ಚಿನ್ನದ ಅಂಗಡಿಗೆ ನುಗ್ಗಿದ ಐವರು ಮುಸುಕುಧಾರಿ ದರೋಡೆಕೋರರು, ಗನ್ ತೋರಿಸಿ ಸುಮಾರು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ಲೂಟಿ ಮಾಡಿಕೊಂಡು ಪರಾರಿಯಾಗಿದ್ದಾರೆ. ಬೈಕ್‌ಗಳಲ್ಲಿ ಬಂದಿದ್ದ ಈ ಐವರು ದರೋಡೆಕೋರರು ಅಂಗಡಿಗೆ ನುಗ್ಗಿ ಸಿಬ್ಬಂದಿಯನ್ನು ಗನ್​​​ನಿಂದ ಹೆದರಿಸಿ, ಚೀಲದಲ್ಲಿ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ. ಹಾಡಹಗಲೇ ಈ ದರೋಡೆಯಿಂದಾಗಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ತನಿಖೆ ನಡೆಸಿದ್ದಾರೆ.

 

Source link

IOCL Recruitment 2025: ಇಂಡಿಯನ್ ಆಯಿಲ್​ನಲ್ಲಿ 501 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ – Kannada News | Iocl apprentice recruitment 2025 501 posts apply online by jan 12

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಜನವರಿ 12ರ ಮೊದಲು ಅಧಿಕೃತ IOCL ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸತಕ್ಕದ್ದು. ಕಂಪನಿಯು ಒಟ್ಟು 501 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿದಾರರಿಗೆ ಅಗತ್ಯವಿರುವ ಅರ್ಹತೆಗಳು ಮತ್ತು ಅವರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು ಯಾವುವು?

ಕಂಪನಿಯು ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಅಭ್ಯರ್ಥಿಗಳು 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪೂರ್ಣಗೊಳಿಸಿರಬೇಕು. ಗ್ರಾಜುಯೇಟ್ ಅಪ್ರೆಂಟಿಸ್‌ಗಾಗಿ, ಬಿಬಿಎ, ಬಿಎ, ಬಿಕಾಂ ಮತ್ತು ಬಿಎಸ್ಸಿ ಪದವಿಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಪ್ಲೊಮಾ ಅಪ್ರೆಂಟಿಸ್‌ಗಾಗಿ, ಅಭ್ಯರ್ಥಿಗಳು ಸಂಬಂಧಿತ ಶಾಖೆಯಲ್ಲಿ ಡಿಪ್ಲೊಮಾ ಹೊಂದಿರಬೇಕು.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​​ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ

ಅರ್ಜಿ ಸಲ್ಲಿಸುವುದು ಹೇಗೆ?

  • IOCL ನ ಅಧಿಕೃತ ವೆಬ್‌ಸೈಟ್ iocl.com ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ನೀಡಿರುವ ವೃತ್ತಿ/ಉದ್ಯೋಗ ವಿಭಾಗಕ್ಕೆ ಹೋಗಿ.
  • ಅಪ್ರೆಂಟಿಸ್ ಖಾಲಿ ಹುದ್ದೆ ಅರ್ಜಿ ಲಿಂಕ್ ಮೇಲೆ ಇಲ್ಲಿ ಕ್ಲಿಕ್ ಮಾಡಿ.
  • ನೋಂದಾಯಿಸಿ ಮತ್ತು ಫಾರ್ಮ್ ಅನ್ನು ಭರ್ತಿ ಮಾಡಿ.
  • ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸಿ.

ಆಯ್ಕೆ ಹೇಗೆ ಮಾಡಲಾಗುತ್ತದೆ?

ಅರ್ಜಿದಾರರನ್ನು ಅವರ ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಟೈಫಂಡ್ ಸಹ ಸಿಗುತ್ತದೆ. ಈ ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಅಧಿಕೃತ IOCL ವೆಬ್‌ಸೈಟ್‌ನಲ್ಲಿ ಅಪ್ರೆಂಟಿಸ್ ಹುದ್ದೆಯ ಅಧಿಸೂಚನೆಯನ್ನು ಪರಿಶೀಲಿಸಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಭಾಸ್ ಅಭಿಮಾನಿಗಳಿಗೆ ತನ್ನ ಮನೆ ವಿಳಾಸ ಕೊಟ್ಟ ‘ರಾಜಾ ಸಾಬ್’ ನಿರ್ದೇಶಕ – Kannada News | The Raja Saab movie director Maruthi gave his address to Prabhas fans

ಪ್ರಭಾಸ್ (Prabhas) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಕೊನೆಗೂ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ. ಈ ವರ್ಷದ ಆರಂಭದಿಂದಲೂ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಇದೀಗ ಕೊನೆಗೂ ಸಿನಿಮಾ ಮುಂದಿನ ತಿಂಗಳು ಅಂದರೆ ಜನವರಿಯ ಸಂಕ್ರಾಂತಿ ವೇಳೆ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ ಅದ್ಧೂರಿಯಾಗಿ ನೆರವೇರಿದ್ದು ಕಾರ್ಯಕ್ರಮದಲ್ಲಿ ನಿರ್ದೇಶಕ ಮಾರುತಿ ಅವರು, ಪ್ರಭಾಸ್ ಅಭಿಮಾನಿಗಳಿಗೆ ತಮ್ಮ ಮನೆ ವಿಳಾಸ ಕೊಟ್ಟಿದ್ದಾರೆ.

ಪ್ರೀ ರಿಲೀಸ್ ಇವೆಂಟ್​​ನಲ್ಲಿ ಮಾತನಾಡಿದ ‘ದಿ ರಾಜಾ ಸಾಬ್’ ಸಿನಿಮಾದ ನಿರ್ದೇಶಕ ಮಾರುತಿ, ಪ್ರಭಾಸ್ ಅವರ ನಟನೆ, ಅವರ ಸ್ಟೈಲ್, ಅವರ ಮಾನವೀಯತೆ, ತಾಳ್ಮೆ ಇನ್ನಿತರೆಗಳನ್ನು ಕೊಂಡಾಡಿದರು. ‘ಪ್ರಭಾಸ್ ಅಂಥಹಾ ದೊಡ್ಡ ಸ್ಟಾರ್ ಅನ್ನು ಕರೆದುಕೊಂಡು ಬಂದು, ಏನೋ ಸುಮ್ಮನೆ ನಾಮ್​ ಕೆ ವಾಸ್ತೆ ಸಿನಿಮಾ ಮಾಡಲು ಆಗುವುದಿಲ್ಲ ನಾವು ಅದ್ಭುತವಾದ ಸಿನಿಮಾ ಅನ್ನೇ ಮಾಡಿದ್ದೀವಿ, ಚಿತ್ರಮಂದಿರಕ್ಕೆ ಹೋದಾಗ ನಿಮಗೆ ಅದರ ಅರಿವಾಗುತ್ತದೆ’ ಎಂದಿದ್ದಾರೆ ಮಾರುತಿ.

ಪ್ರಭಾಸ್ ಅವರು ‘ಆದಿಪುರುಷ್’ ಸಿನಿಮಾ ಮಾಡುವಾಗ ಶ್ರೀರಾಮನ ಪಾತ್ರದಲ್ಲಿದ್ದಾಗ ನಾನು ಮಾರುತಿ ಅವರ ಬಳಿಗೆ ಹೋಗಿ ಕತೆ ಹೇಳಿದೆ. ಮೊದಲ ಭೇಟಿಯಲ್ಲಿ ಅವರನ್ನು ಚೆನ್ನಾಗಿ ನಗಿಸಿದ್ದೆ. ಅಲ್ಲಿಯ ವರೆಗೂ ನಾನು ಸಾಮಾನ್ಯ ಸಿನಿಮಾಗಳನ್ನು ಮಾಡುತ್ತಾ ಹೋಗುತ್ತಿದ್ದೆ ಆದರೆ ವಿಧಿ ನನ್ನನ್ನು ‘ರೆಬೆಲ್’ ಯೂನಿವರ್ಸಿಟಿಗೆ ಸೇರಿಸಿತು. ಅವರು ನನ್ನ ಹಿಂದೆ ಒಂದು ಶಕ್ತಿಯಾಗಿ ನಿಂತು ನನ್ನನ್ನು ಮುಂದಕ್ಕೆ ಕರೆದುಕೊಂಡು ಬಂದಿದ್ದಾರೆ’ ಎಂದರು ಮಾರುತಿ.

ಇದನ್ನೂ ಓದಿ: ಹೇಗಿದೆ ನೋಡಿ ಪ್ರಭಾಸ್-ನಿಧಿ ಕಾಂಬಿನೇಷನ್

‘ಬಹಳ ಕಷ್ಟಪಟ್ಟು ಕಳೆದ ಮೂರು ವರ್ಷಗಳಿಂದ ಕಷ್ಟ ಪಟ್ಟು ಕೆಲಸ ಮಾಡಿದ್ದೇವೆ. ನಾನು ಪ್ರೇಕ್ಷಕನಾಗಿ ಸಿನಿಮಾ ನೋಡಿದ್ದೇನೆ, ಪ್ರತಿ ಬಾರಿ ಸಿನಿಮಾ ನೋಡಿದಾಗಲೂ ಕಣ್ಣೀರು ಹಾಕಿದ್ದೇನೆ, ಅದರಲ್ಲೂ ಪ್ರಭಾಸ್ ನಟನೆ ನನ್ನನ್ನು ಭಾವುಕಗೊಳಿಸಿದೆ’ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದರು ನಟ ಮಾರುತಿ. ಬಳಿಕ, ‘ನಾವು ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ, ಈ ಸಿನಿಮಾ ನಿಮಗೆ 1% ಆದರೂ ಬೇಸರ ಮೂಡಿಸಿದರೂ ಸಹ ನನ್ನ ಮನೆ ವಿಳಾಸ ವಿಲ್ಲಾ ನಂಬರ್ 17, ವಿಲ್ಲಾ ಲಕ್ಷುರಿಯಾ, ಕೊಂಡಾಪುರ, ಹೈದರಾಬಾದ್. ಈ ವಿಳಾಸಕ್ಕೆ ಪ್ರಭಾಸ್ ಅಭಿಮಾನಿಗಳು, ಅವರ ಕುಟುಂಬದವರು ಬಂದು ನನ್ನನ್ನು ಪ್ರಶ್ನೆ ಮಾಡಬಹುದು ಎಂದಿದ್ದಾರೆ ಮಾರುತಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಆಪರೇಷನ್ ಸಿಂಧೂರ್ ವೇಳೆ ನೂರ್ ಖಾನ್ ವಾಯುನೆಲೆಗೆ ಹಾನಿ; ಒಪ್ಪಿಕೊಂಡ ಪಾಕಿಸ್ತಾನ – Kannada News | Pakistan Minister Ishaq Dar Admits Indias Operation Sindoor Strikes Damaged Nur Khan Base

ನವದೆಹಲಿ, ಡಿಸೆಂಬರ್ 28: ಈ ವರ್ಷದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ್ (Operation Sindoor) ಸಮಯದಲ್ಲಿ ಭಾರತ ನಡೆಸಿದ ಕಾರ್ಯತಂತ್ರದ ಮತ್ತು ನಿಖರವಾದ ದಾಳಿಗಳ ಪರಿಣಾಮವನ್ನು ಪಾಕಿಸ್ತಾನ (Pakistan) ಸರ್ಕಾರ ಸಾರ್ವಜನಿಕವಾಗಿ ಒಪ್ಪಿಕೊಂಡಿದೆ. ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ (Pahalgam Attack) ನಡೆದ 26 ಭಾರತೀಯರ ಸಾವಿಗೆ ಪ್ರತಿಕ್ರಿಯೆಯಾಗಿ ಭಾರತ ಆಪರೇಷನ್ ಸಿಂಧೂರ್ ನಡೆಸಿದ ಹಲವು ತಿಂಗಳ ನಂತರ ಪಾಕಿಸ್ತಾನ ಈ ವಿಷಯವನ್ನು ಒಪ್ಪಿಕೊಂಡಿದೆ.

ನೂರ್ ಖಾನ್ ವಾಯುನೆಲೆಗೆ ಹಾನಿಯನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ರಾವಲ್ಪಿಂಡಿಯ ಚಕ್ಲಾಲಾ ಪ್ರದೇಶದ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತೀಯ ಡ್ರೋನ್‌ಗಳು ದಾಳಿ ನಡೆಸಿವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ದೃಢಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಶಾಕ್ ದಾರ್, ಭಾರತದ ದಾಳಿಯು ಪಾಕಿಸ್ತಾನದ ಮಿಲಿಟರಿ ನೆಲೆಗೆ ಮತ್ತು ಅಲ್ಲಿ ನೆಲೆಸಿದ್ದ ಗಾಯಗೊಂಡ ಸಿಬ್ಬಂದಿಗೆ ಹಾನಿಯನ್ನುಂಟುಮಾಡಿದೆ ಎಂದು ಹೇಳಿದ್ದಾರೆ.

ಇಶಾಕ್ ದಾರ್ ಅವರ ಪ್ರಕಾರ, ಭಾರತವು ಅಲ್ಪಾವಧಿಯಲ್ಲಿ ಪಾಕಿಸ್ತಾನದ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯ ಡ್ರೋನ್‌ಗಳ ದಾಳಿ ಮಾಡಿತ್ತು. 36 ಗಂಟೆಗಳ ಒಳಗೆ 80ಕ್ಕೂ ಹೆಚ್ಚು ಭಾರತದ ಡ್ರೋನ್‌ಗಳು ಗಡಿಯನ್ನು ದಾಟಿತ್ತು ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನಿ ಪಡೆಗಳು ಅವುಗಳಲ್ಲಿ 79ನ್ನು ತಡೆದವು. ಆದರೆ ಒಂದು ಡ್ರೋನ್ ಮಿಲಿಟರಿ ನೆಲೆಯನ್ನು ಅಪ್ಪಳಿಸುವಲ್ಲಿ ಯಶಸ್ವಿಯಾಯಿತು, ಇದರಿಂದಾಗಿ ಗಾಯಗಳಾದವು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ನ್ಯಾಯಾಧೀಶರ ರೂಂನಿಂದ ಸೇಬು ಹಣ್ಣು, ಹ್ಯಾಂಡ್​​ವಾಶ್ ಕಳ್ಳತನ; ಕೇಸ್ ದಾಖಲು

ಪಾಕಿಸ್ತಾನಿ ನಾಗರಿಕರು ಬಿಡುಗಡೆ ಮಾಡಿದ ವೀಡಿಯೊಗಳು ನೂರ್ ಖಾನ್ ನೆಲೆಗೆ ಬೆಂಕಿ ಹಚ್ಚಿರುವುದನ್ನು ತೋರಿಸಿವೆ ಮತ್ತು ಎಲ್ಲಾ 11 ಗುರಿಯಿಟ್ಟ ವಾಯುನೆಲೆಗಳ ಮೇಲೆ ಭಾರೀ ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಪಾಕಿಸ್ತಾನದ ನಾಗರಿಕ ಮತ್ತು ಮಿಲಿಟರಿ ನಾಯಕತ್ವವು ಮೇ 9ರ ರಾತ್ರಿ ಪರಿಸ್ಥಿತಿಯನ್ನು ಚರ್ಚಿಸಲು ಮತ್ತು ಕೆಲವು ನಿರ್ಧಾರಗಳನ್ನು ಅನುಮೋದಿಸಲು ಸಭೆ ನಡೆಸಿತು ಎಂದು ದಾರ್ ಹೇಳಿದ್ದಾರೆ. ಮೇ 10ರ ಮುಂಜಾನೆ ನೂರ್ ಖಾನ್ ವಾಯುನೆಲೆಯ ಮೇಲೆ ದಾಳಿ ಮಾಡುವ ಮೂಲಕ ಭಾರತ ತಪ್ಪು ಮಾಡಿದೆ ಎಂದು ಅವರು ಹೇಳಿದ್ದಾರೆ.

ನೂರ್ ಖಾನ್ ವಾಯುನೆಲೆ ರಾವಲ್ಪಿಂಡಿಯಲ್ಲಿರುವ ಪ್ರಮುಖ ಪಾಕಿಸ್ತಾನ ವಾಯುಪಡೆಯ ಸೌಲಭ್ಯವಾಗಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ದಾಳಿಗೆ ಗುರಿಯಾದ 11 ವಾಯುನೆಲೆಗಳಲ್ಲಿ ಇದು ಸೇರಿತ್ತು. ಇತರ ದಾಳಿಯ ತಾಣಗಳಲ್ಲಿ ಸರ್ಗೋಧಾ, ರಫಿಕಿ, ಜಾಕೋಬಾಬಾದ್ ಮತ್ತು ಮುರಿಡ್ಕೆಯಲ್ಲಿನ ವಾಯುನೆಲೆಗಳು ಸೇರಿವೆ.

ಮೇ 7ರ ಮುಂಜಾನೆ ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದವು. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಇದು ಪ್ರತೀಕಾರದ ಕ್ರಮವಾಗಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 9 ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತೀಯ ದಾಳಿಗಳು ನಡೆದವು, ನಂತರ ಪ್ರಮುಖ ಮಿಲಿಟರಿ ಸ್ಥಾಪನೆಗಳ ಮೇಲೆ ದಾಳಿಗಳು ನಡೆದವು.

ಇದನ್ನೂ ಓದಿ: ಪಹಲ್ಗಾಮ್ ದಾಳಿಯ ತನಿಖೆ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ; ಅಮಿತ್ ಶಾ

ನೂರ್ ಖಾನ್ ವಾಯುನೆಲೆಯ ಮೇಲೆ ಭಾರತದ ದಾಳಿಯನ್ನು ಪ್ರಧಾನಿ ಶೆಹಬಾಜ್ ಷರೀಫ್ ಈ ಹಿಂದೆ ದೃಢಪಡಿಸಿದ್ದರು. ಕಾರ್ಯಾಚರಣೆಯ ಕೆಲವು ದಿನಗಳ ನಂತರ, ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮೇ 9 ಮತ್ತು 10 ರ ರಾತ್ರಿ ದಾಳಿಯ ಬಗ್ಗೆ ತಮಗೆ ವೈಯಕ್ತಿಕವಾಗಿ ಮಾಹಿತಿ ನೀಡಿದ್ದರು ಎಂದು ಷರೀಫ್ ಹೇಳಿದರು.

ಮೇ ತಿಂಗಳಲ್ಲಿ ತೆಗೆದ ಉಪಗ್ರಹ ಚಿತ್ರಗಳು ನೂರ್ ಖಾನ್, ಸರ್ಗೋಧಾದಲ್ಲಿನ ಮುಷಾಫ್, ಭೋಲಾರಿ ಮತ್ತು ಜಕೋಬಾಬಾದ್‌ನ ಶಹಬಾಜ್ ಸೇರಿದಂತೆ ಹಲವಾರು ಪಾಕಿಸ್ತಾನಿ ವಾಯುನೆಲೆಗಳಿಗೆ ಗಮನಾರ್ಹ ಹಾನಿಯನ್ನು ತೋರಿಸಿತ್ತು. ಭಾರತೀಯ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ನೂರ್ ಖಾನ್, ಮುರಿಯ್ಕೆ ಮತ್ತು ರಫಿಕಿ ಸೇರಿದಂತೆ ತನ್ನ ಮೂರು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಪಾಕಿಸ್ತಾನವು ಮೇ 10ರಂದು ಒಪ್ಪಿಕೊಂಡಿತ್ತು. ಇದೀಗ ಮತ್ತೊಮ್ಮೆ ಪಾಕಿಸ್ತಾನ ಒಪ್ಪಿಕೊಂಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version