ವಿಕೆಟ್ ಕೀಪರ್ ಬದಲಿಗೆ ಟೀಮ್ ಇಂಡಿಯಾಗೆ ಎಡಗೈ ದಾಂಡಿಗನ ಎಂಟ್ರಿ – Kannada News | Ishan Kishan is likely to be picked India’s ODI Squad
ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಈ ಬದಲಾವಣೆಯೊಂದಿಗೆ ಎಡಗೈ ದಾಂಡಿಗ ಇಶಾನ್ ಕಿಶನ್ ಭಾರತ ಏಕದಿನ ತಂಡಕ್ಕೂ ಮರಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಇಶಾನ್ ಕಿಶನ್ ಅವರ ಆಯ್ಕೆಯಿಂದ ಹೊರಬೀಳಲಿರುವುದು ರಿಷಭ್ ಪಂತ್ ಎಂಬುದು ಅಚ್ಚರಿ. ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರನ್ನು ಕೈ ಬಿಡಲು ಬಿಸಿಸಿಐ ಆಯ್ಕೆ ಸಮಿತಿ ಚಿಂತಿಸಿದೆ ಎಂದು ವರದಿಯಾಗಿದೆ. ಬದಲಿಗೆ ಇಶಾನ್ ಕಿಶನ್ ಅವರನ್ನು ಆಯ್ಕೆ…