ಗುಂಡ್ಲುಪೇಟೆಯಲ್ಲಿ ಡಿಜೆ ವಿವಾದ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಹನುಮ ಭಕ್ತರ ಆಕ್ರೋಶ – Kannada News | Police Action on DJ During Hanuman Shobhayatra Sparks Devotee Outrage in Chamarajanagara
ಚಾಮರಾಜನಗರ, ಡಿಸೆಂಬರ್ 28: ಡಿಜೆ ವಾಹನ ವಶಕ್ಕೆ ಪಡೆದ ಪೊಲೀಸರ ನಡೆಗೆ ಆಕ್ರೋಶಗೊಂಡು ಹನುಮ ಭಕ್ತರು ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಹನುಮ ಜಯಂತಿ ಹಿನ್ನೆಲೆ ನಿನ್ನೆ ಸಂಜೆ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಈ ವೇಳೆ ಆಯೋಜಕರು ಅನುಮತಿ ಪಡೆಯದೆ ಡಿಜೆ ಬಳಸಿದ ಕಾರಣ ಟ್ರ್ಯಾಕ್ಟರ್ ಸಮೇತ ಪೊಲೀಸರು ಡಿಜೆ ವಶಕ್ಕೆ ಪಡೆದಿದ್ದರು. ಪೊಲೀಸರು ವಾಹನ ವಶಕ್ಕೆ ಪಡೆಯುತ್ತಿದ್ದಂತೆ ರೊಚ್ಚಿಗೆದ್ದ ಹನುಮ ಭಕ್ತರು, ರಾತ್ರಿ ಗುಂಡ್ಲುಪೇಟೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ….