ಕೋಗಿಲು ಬಡಾವಣೆ ತೆರವು: ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ ಎಂದ ಸಿಎಂ ಸಿದ್ಧರಾಮಯ್ಯ – Kannada News | Bengaluru Kogilu Demolition: Unauthorised Structures Razed, Migrants to Receive Aid

ಬೆಂಗಳೂರು, ಡಿ.27: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ನಡೆದ ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆ ಹಲವು ಕುಟುಂಬಗಳನ್ನು ನಿರ್ಗತಿಕರನ್ನಾಗಿ ಮಾಡಿದೆ. 2021ರಿಂದಲೂ ಈ ಪ್ರದೇಶದಲ್ಲಿನ ನಿವಾಸಿಗಳು ಅನಧಿಕೃತವಾಗಿ ನೆಲೆಸಿದ್ದರು. ಈ ವಸತಿಗಳು ಐದು ಎಕರೆ ವಿಸ್ತೀರ್ಣದ ತ್ಯಾಜ್ಯ ನಿರ್ವಹಣಾ ಸ್ಥಳದ ಸಮೀಪದಲ್ಲಿದ್ದ ಕಾರಣ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತಿದ್ದವು. ನಿವಾಸಿಗಳಿಗೆ ಈ ಹಿಂದೆ ನೋಟಿಸ್ ನೀಡಿದ್ದರೂ, ಅವರು ಜಾಗ ಖಾಲಿ ಮಾಡಿರಲಿಲ್ಲ. ಇದಾದ ಬಳಿಕ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಕಮಿಷನರ್ ಮತ್ತು ಸೆಕ್ರೆಟರಿಗಳೊಂದಿಗೆ ಮಾತನಾಡಿ, ತೆರವುಗೊಂಡ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. ಅವರಲ್ಲಿ ಹೆಚ್ಚಿನವರು ವಲಸಿಗರು. ಬೇರೆ ಕಡೆಯಿಂದ ಬಂದಿರುವವರು. ನಾವು ಮಾನವೀಯತೆ ದೃಷ್ಟಿಯಿಂದ ಅವರಿಗೆ ಪರ್ಯಾಯವಾಗಿ ಜಾಗ ನೀಡಿ, ವಸತಿ ನಿರ್ಮಿಸಿ ಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ambedkar University Delhi: ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ 71 ಪ್ರಾಧ್ಯಾಪಕ ಮತ್ತು ಇತರೆ ಹುದ್ದೆಗಳಿಗೆ ನೇಮಕಾತಿ – Kannada News | Ambedkar University Delhi Jobs: Professor Vacancy, 71 Posts | Apply Before Jan 9

ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯ (AUD) ಪ್ರಾಧ್ಯಾಪಕ ಹುದ್ದೆ ಸೇರಿದಂತೆ ಹಲವಾರು ಹುದ್ದೆಗಳಿಗೆ ನೇಮಕಾತಿ ಘೋಷಿಸಿದೆ. ಒಟ್ಟು 71 ಹುದ್ದೆಗಳಿಗೆ ನೇಮಕಾತಿ ಲಭ್ಯವಿದೆ. ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ 9 ವರೆಗೆ ಇರಲಿದೆ. ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಆದಾಗ್ಯೂ, ಅರ್ಜಿಗಳ ಹಾರ್ಡ್ ಪ್ರತಿಗಳನ್ನು ಜನವರಿ 16 ರವರೆಗೆ ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಬಹುದು.

ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದ ವಿವಿಧ ಹುದ್ದೆಗಳಿಗೆ ಜನವರಿ 9 ರವರೆಗೆ audrec.samarth.edu.inc ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು . ಅರ್ಜಿ ನಮೂನೆಯ ಮುದ್ರಿತ ಪ್ರತಿಯನ್ನು ಜನವರಿ 16 ರೊಳಗೆ ಕಾಲೇಜಿಗೆ ಸಲ್ಲಿಸಬೇಕು. ಯಾವುದೇ ವಯಸ್ಸಿನ ಮಿತಿಯಿಲ್ಲ. ಅರ್ಜಿ ಶುಲ್ಕ 1,000 ರೂ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಅರ್ಜಿ ಪ್ರಕ್ರಿಯೆಯ ಸಮಯದಲ್ಲಿ ಶೈಕ್ಷಣಿಕ ಅರ್ಹತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಲಗತ್ತಿಸಬೇಕು. ಆನ್‌ಲೈನ್ ಅರ್ಜಿಯನ್ನು ಸಲ್ಲಿಸಿದ ನಂತರ, ಮುದ್ರಿತ ಪ್ರತಿಯನ್ನು ಉಪ ರಿಜಿಸ್ಟ್ರಾರ್ (ನೇಮಕಾತಿ ಮತ್ತು ಪ್ರಚಾರ ಕೋಶ), ಕೊಠಡಿ ಸಂಖ್ಯೆ 31A, ಡಾ. ಬಿಆರ್ ವಿಶ್ವವಿದ್ಯಾಲಯ, ದೆಹಲಿ, ಕಾಶ್ಮೀರಿ ಗೇಟ್ ಕ್ಯಾಂಪಸ್ 110006 ಗೆ ಸಲ್ಲಿಸಬೇಕು.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​​ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ

ಆಯ್ಕೆ ಹೇಗೆ ಮತ್ತು ಸಂಬಳ ಎಷ್ಟು?

ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯವು ನಡೆಸುವ ಈ ನೇಮಕಾತಿಗಳಿಗೆ ಆಯ್ಕೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ, ಅರ್ಜಿಗಳನ್ನು ಪರಿಶೀಲಿಸಿ ನಂತರ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಈ ಹುದ್ದೆಗಳಿಗೆ ನಿಗದಿಪಡಿಸಿದ ವೇತನಕ್ಕೆ ಸಂಬಂಧಿಸಿದಂತೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 57,000 ರಿಂದ 2,18,200 ರೂ. ರವರೆಗೆ ವೇತನ ದೊರೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate Today Bangalore: ಮೈಝುಮ್ಮೆನಿಸುವಷ್ಟು ಜಿಗಿದ ಚಿನ್ನ, ಬೆಳ್ಳಿ ಬೆಲೆ – Kannada News | Gold Price Today on 27th December 2025, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಡಿಸೆಂಬರ್ 27: ಚಿನ್ನ, ಬೆಳ್ಳಿ ಬೆಲೆಗಳ ಸತತ ಏರಿಕೆ ಮುಂದುವರಿಯುತ್ತಲೇ ಇದೆ. ಶನಿವಾರ ಚಿನ್ನದ ಬೆಲೆ (Gold Rate) 110 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ ಚೆನ್ನೈನಲ್ಲಿ 13,000 ರೂ ಗಡಿ ಮುಟ್ಟಿದೆ. ವಿದೇಶಗಳಲ್ಲೂ ಚಿನ್ನದ ಬೆಲೆ ಇಂದು ಏರಿದೆ. ಬೆಳ್ಳಿ ಬೆಲೆಯಂತೂ ಜಿಗಿಜಿಗಿದು ಓಡುವುದು ಮುಂದುವರಿದಿದೆ. ಶನಿವಾರ ಒಂದು ಗ್ರಾಮ್ ಬೆಳ್ಳಿ ಬೆಲೆ 11 ರೂ ಹೆಚ್ಚಳಗೊಂಡು 251 ರೂ ಮುಟ್ಟಿದೆ. ಚೆನ್ನೈನಲ್ಲಂತೂ ಇದರ ಬೆಲೆ 274 ರೂಗೆ ಏರಿದೆ. ವರ್ಷದ ಹಿಂದೆ ನೂರು ರೂ ಒಳಗಿದ್ದ ಇದರ ಬೆಲೆ ಈಗ ಮೈಝುಮ್ಮೆನಿಸುವಷ್ಟು ಏರಿರುವುದು ಕುತೂಹಲ ಮೂಡಿಸಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,29,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,41,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,29,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,100 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,400 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 27ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,122 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,945 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,592 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 251 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,122 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,945 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 251 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,945 ರೂ
  • ಚೆನ್ನೈ: 13,000 ರೂ
  • ಮುಂಬೈ: 12,945 ರೂ
  • ದೆಹಲಿ: 12,960 ರೂ
  • ಕೋಲ್ಕತಾ: 12,945 ರೂ
  • ಕೇರಳ: 12,945 ರೂ
  • ಅಹ್ಮದಾಬಾದ್: 12,950 ರೂ
  • ಜೈಪುರ್: 12,960 ರೂ
  • ಲಕ್ನೋ: 12,960 ರೂ
  • ಭುವನೇಶ್ವರ್: 12,945 ರೂ

ಇದನ್ನೂ ಓದಿ: 2025ರಲ್ಲಿ ಭಾರತದ ಬಿಲಿಯನೇರ್​ಗಳ ಪಟ್ಟಿ; ಯಾರು ಅತಿ ಶ್ರೀಮಂತರು, ಯಾರ ಶ್ರೀಮಂತಿಕೆ ಹೆಚ್ಚು ಏರಿದ್ದು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 575 ರಿಂಗಿಟ್ (12,754 ರುಪಾಯಿ)
  • ದುಬೈ: 505 ಡಿರಾಮ್ (12,223 ರುಪಾಯಿ)
  • ಅಮೆರಿಕ: 141.50 ಡಾಲರ್ (12,706 ರುಪಾಯಿ)
  • ಸಿಂಗಾಪುರ: 180.30 ಸಿಂಗಾಪುರ್ ಡಾಲರ್ (12,604 ರುಪಾಯಿ)
  • ಕತಾರ್: 504 ಕತಾರಿ ರಿಯಾಲ್ (12,418 ರೂ)
  • ಸೌದಿ ಅರೇಬಿಯಾ: 515 ಸೌದಿ ರಿಯಾಲ್ (12,330 ರುಪಾಯಿ)
  • ಓಮನ್: 53.65 ಒಮಾನಿ ರಿಯಾಲ್ (12,514 ರುಪಾಯಿ)
  • ಕುವೇತ್: 41.04 ಕುವೇತಿ ದಿನಾರ್ (11,993 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 251 ರೂ
  • ಚೆನ್ನೈ: 274 ರೂ
  • ಮುಂಬೈ: 251 ರೂ
  • ದೆಹಲಿ: 251 ರೂ
  • ಕೋಲ್ಕತಾ: 251 ರೂ
  • ಕೇರಳ: 274 ರೂ
  • ಅಹ್ಮದಾಬಾದ್: 251 ರೂ
  • ಜೈಪುರ್: 251 ರೂ
  • ಲಕ್ನೋ: 251 ರೂ
  • ಭುವನೇಶ್ವರ್: 274 ರೂ
  • ಪುಣೆ: 251

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಪುಂಸಕ, ಗಂಡಸೇ ಅಲ್ಲ: ಹೆಂಡ್ತಿ ಕುಟುಂಬಸ್ಥರ ಆರೋಪ, ಮನನೊಂದು ಪತಿ ಸಾವಿಗೆ ಶರಣು – Kannada News | Bengaluru Husband Suraj Also Commits Suicide In nagpur after Wife Ganvi Death In bengaluru

ಬೆಂಗಳೂರು, (ಡಿಸೆಂಬರ್ 27): ರಾಮಮೂರ್ತಿ ನಗರದಲ್ಲಿ ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ (Ganavi Suicide Case) ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಗಾನವಿ ಪತಿ ಸೂರಜ್ (Suraj) ಆತ್ಮಹತ್ಯೆ ಮಾಡಿಕೊಂಡರೆ ಅತ್ತೆ ಜಯಂತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಗಾನವಿ ಆತ್ಮಹತ್ಯೆಯ ಬಳಿಕ ಸೂರಜ್‌, ಜಯಂತಿ, ಸೂರಜ್‌ ಸಹೋದರ ಸಂಜಯ್‌ ಮಹಾರಾಷ್ಟ್ರದ ನಾಗ್ಪುರಕ್ಕೆ(Nagpura) ತೆರಳಿದ್ದು ನಿನ್ನೆ ಸಂಜೆ ಜಯಂತಿ, ಸೂರಜ್ ಸೋನೆಗಾಂವ್‌ನಲ್ಲಿರುವ ರಾಯಲ್‌ ವಿಲ್ಲಾ ಹೋಟೆಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸೂರಜ್‌ ಮೃತಪಟ್ಟಿದ್ದರೆ, ಜಯಂತಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಸೂರಜ್ ನಪುಂಸಕ, ಗಂಡಸೇ ಅಲ್ಲ. ಶ್ರೀಲಂಕಾಕ್ಕೆ ಹನಿಮೂನ್​​ಗೆ ಹೋದರೂ ಹೆಂಡ್ತಿಯನ್ನು ಮುಟ್ಟೇ ಇಲ್ಲ ಅಂತೆಲ್ಲಾ ಮೃತ ಗಾನವಿ ಕುಟುಂಬಸ್ಥರು ಆರೋಪಿಸಿದ್ದರು. ಅಲ್ಲದೇ ಮನೆ ಮುಮದೆ ಹೋಗಿ ಶವವಿಟ್ಟು ಪ್ರತಿಭಟನೆ ಮಾಡಿದ್ದರು. ಅಲ್ಲದೇ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ಇನ್ಸ್​​ಪೆಕ್ಟರ್​​ ಮಾತನಾಡಿದ್ದು, ಏನು ಹೇಳಿದ್ದಾರೆ ಕೇಳಿ.

ಇದನ್ನೂ ಓದಿ: ನವವಿವಾಹಿತೆ ಸೂಸೈಡ್ ಕೇಸ್​ಗೆ ಬಿಗ್ ಟ್ವಿಸ್ಟ್: ನಾಗಪುರದಲ್ಲಿ ಆತ್ಮಹತ್ಯೆಗೆ ಶರಣಾದ ಗಾನವಿ ಪತಿ ಸೂರಜ್!

 

Source link

Video: 4.5 ಲಕ್ಷ ರೂ. ಮೌಲ್ಯದ ಮೂರು ಹಸುಗಳ ಕಳ್ಳತನ, ಸಿಸಿಟಿವಿ ವಿಡಿಯೋ ವೈರಲ್ – Kannada News | CCTV Captures Cow Theft: Lakshman’s 3 Cows Vanish from Bengaluru Plot

ಬೆಂಗಳೂರು, ಡಿ.27: ಮನೆ ಬಳಿಯ ಖಾಲಿ ಜಾಗದಲ್ಲಿದ್ದ ಹಸುಗಳ ಕಳ್ಳತನ ಮಾಡಿರುವ ಘಟನೆ ನಗರದ ಸಂಪಿಗೇಹಳ್ಳಿಯ ಮಂಜುನಾಥ ಲೇಔಟ್​​​​ನಲ್ಲಿ ನಡೆದಿದೆ. 4.5 ಲಕ್ಷ ರೂ. ಮೌಲ್ಯದ ಮೂರು ಹಸುಗಳ ಕಳ್ಳತನ ಮಾಡಲಾಗಿದೆ. ಲಕ್ಷ್ಮಣ್ ಎಂಬುವರಿಗೆ ಸೇರಿದ್ದ ಮೂರು ಹಸುಗಳು ಎಂದು ಹೇಳಲಾಗಿದೆ. ಗುರುವಾರ (ಡಿ.25) ರಾತ್ರಿ 1.20ಕ್ಕೆ ಧನಗಳನ್ನು ಕಳ್ಳತನ ಮಾಡಲಾಗಿದೆ ಎಂದು ಹೇಳಲಾಗಿದೆ. ಮಿನಿ ಟೆಂಪೋದಲ್ಲಿ ಬಂದ ಐದು ಜನ ಹಸುಗಳ ಕಳ್ಳತನ ಮಾಡಿದ್ದಾರೆ. ಖಾಲಿ ಜಾಗದಲ್ಲಿ ಹಸುಗಳನ್ನು ಕಟ್ಟಿದ್ದ ಲಕ್ಷ್ಮಣ್, ಬೆಳಿಗ್ಗೆ ಬಂದು ನೋಡಿದ್ರೆ ಹಸುಗಳು ಅಲ್ಲಿ ಇರಲಿಲ್ಲ. ಸಮೀಪದ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಹಸುಗಳನ್ನು ಕರೆದುಕೊಂಡು ಹೋಗುವುದು ತಿಳಿದಿದೆ. ಇದೀಗ ಈ ಬಗ್ಗೆ ದೂರು ಕೂಡ ನೀಡಲಾಗಿದೆ.

ವರದಿ: ಪ್ರದೀಪ್ 

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ತಂತ್ರಜ್ಞಾನ 2025: AI, ಸೆಮಿಕಂಡಕ್ಟರ್, ಸ್ವಾವಲಂಬನೆ & ಜಾಗತಿಕ ನಾಯಕತ್ವ – Kannada News | Year 2025: The Turning Point in India’s Technological Self Determination

2025ರ ವರ್ಷವು ಭಾರತದ ವೈಜ್ಞಾನಿಕ ಮತ್ತು ತಂತ್ರಜ್ಞಾನ ಪ್ರಯಾಣದಲ್ಲಿ ಪ್ರಮುಖ ಟರ್ನಿಂಗ್ ಪಾಯಿಂಟ್ ಎನಿಸಿದೆ. ಪ್ರಮುಖ ಕ್ಷೇತ್ರಗಳಲ್ಲಿ ಹೊಸ ಆತ್ಮವಿಶ್ವಾಸದೊಂದಿಗೆ ದೇಶ ಮುನ್ನಡೆದಿದೆ. ಜಾಗತಿಕ ಮಾನ ಸನ್ಮಾನ ಗಿಟ್ಟಿಸಿದೆ. ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್​ಗಳಿಂದ ಹಿಡಿದು ಬಾಹ್ಯಾಕಾಶ ಅನ್ವೇಷಣೆ, ಪರಮಾಣ ಶಕ್ತಿ, ಪ್ರಮುಖ ಖನಿಜಗಳವರೆಗೆ ಭಾರತ ಜಾಗತಿಕ ತಂತ್ರಜ್ಞಾನಗಳ ಮೇಲಿನ ಅವಲಂಬನೆ ಕಡಿಮೆ ಮಾಡಿರುವುದು ಮಾತ್ರ, ಹೊಸ ತಂತ್ರಜ್ಞಾನ ರೂಪಿಸುವ ಸಾಮರ್ಥ್ಯವನ್ನೂ ತೋರಿದೆ. ಭಾರತದ ಸ್ವತಂತ್ರ ಇತಿಹಾಸದಲ್ಲಿ ಮೊದಲ ಬಾರಿಗೆ ತಂತ್ರಜ್ಞಾನ ಸ್ವಾವಂಬನೆ (Technological self-determination) ಎಂಬುದು ಕನಸಾಗಿ ಉಳಿಯದೇ ನನಸಾಗುತ್ತಿದೆ. 2047ರ ವಿಕಸಿತ ಭಾರತದ (Viksit Bharat) ಗುರಿಯೊಂದಿಗೆ ಮಿಳಿತಗೊಂಡಿದೆ.

ಎಐ ಕ್ರಾಂತಿ: ಡಿಜಿಟಲ್ ಬೆನ್ನೆಲುಬಿಗೆ ಆಧಾರ

ಇಂಡಿಯಾ ಎಐ ಮಿಷನ್ ಅಡಿಯಲ್ಲಿ ಸರ್ಕಾರವು 10,000 ಕೋಟಿ ರೂಗೂ ಅಧಿಕ ಹೂಡಿಕೆಗೆ ಬದ್ಧವಾಗಿದೆ. ಮಾನವ ಕೇಂದ್ರಿತ ಅಥವಾ ಮಾನವಮುಖಿ ಕೃತಕ ಬುದ್ಧಿಮತ್ತೆಯಲ್ಲಿ ಭಾರತವನ್ನು ಮುಂಚೂಣಿಗೆ ತರುವುದು ಈ ಮಿಷನ್​ನ ಗುರಿ. ಸಾಮಾಜಿಕ ನ್ಯಾಯಕ್ಕೆ, ಅದರಲ್ಲೂ ನಗರ ಮತ್ತು ಗ್ರಾಮೀಣ ಅಂತರ ತಗ್ಗಿಸಲು ಆರ್ಟಿಫಿಶಿಯಲ್ ಇಂಟೆಜೆನ್ಸ್ ಅನ್ನು ಒಂದು ಪ್ರಮುಖ ಸಾಧನವಾಗಿ ಮಾಡಬೇಕು ಎಂಬುದು ಈ ಮಿಷನ್​ನ ಮಹದೋದ್ದೇಶ. 2025-26ರ ಮೊದಲ ಕ್ವಾರ್ಟರ್​ನಲ್ಲಿ (2025ರ ಏಪ್ರಿಲ್​ನಿಂದ ಜೂನ್) ಭಾರತದ ರಾಷ್ಟ್ರೀಯ ಎಐ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ದೊಡ್ಡ ವಿಸ್ತರಣೆಯನ್ನು ಘೋಷಿಸಲಾಯಿತು. ಈ ಸಂದರ್ಭದಲ್ಲಿ 15,916 ಹೊಸ ಜಿಪಿಯುಗಳನ್ನು ಪಡೆಯಲಾಯಿತು. ಇದರೊಂದಿಗೆ ಭಾರತದ ಒಟ್ಟೂ ಕಂಪ್ಯೂಟ್ ಕೆಪಾಸಿಟಿ 38,000 ಜಿಪಿಯುಗಿಂತ ಹೆಚ್ಚಾಗಿದೆ. ಈ ಜಿಪಿಯುಗಳು ಗಂಟೆಗೆ ಕೇವಲ 67 ರೂಗಳ ದರಕ್ಕೆ ಲಭ್ಯ ಇವೆ. ಮಾರುಕಟ್ಟೆಯಲ್ಲಿ ಈ ಜಿಪಿಯುಗಳ ಬಳಕೆಗೆ ಇರುವ ಸರಾಸರಿ ಬೆಲೆ ಗಂಟೆಗೆ 115 ರೂ. ಆದರೆ, ಸರ್ಕಾರವು ಸಬ್ಸಿಡಿ ಮೂಲಕ ಕಡಿಮೆ ದರಕ್ಕೆ ಈ ಜಿಪಿಯುಗಳನ್ನು ಉದ್ಯಮಗಳಿಗೆ ಕೊಡುತ್ತಿದೆ. ಉನ್ನತ ಮಟ್ಟದ ಕಂಪ್ಯೂಟ್ ಇನ್​ಫ್ರಾಸ್ಟ್ರಕ್ಚರ್ ಎಲ್ಲರಿಗೂ ಲಭ್ಯ ಇರಲಿ ಎಂಬುದು ಉದ್ದೇಶ.

ಇತ್ತೀಚೆಗೆ, ಅಮೆರಿಕ ಸ್ಟಾನ್​ಫೋರ್ಡ್ ಯೂನಿವರ್ಸಿಟಿಯ 2025ರ ಗ್ಲೋಬಲ್ ಎಐ ವೈಬ್ರನ್ಸಿ ಟೂಲ್​ನಲ್ಲಿ ಭಾರತ ಮೂರನೇ ಸ್ಥಾನಕ್ಕೆ ಜಿಗಿದಿದೆ. ಗ್ಲೋಬಲ್ ಎಐ ಸ್ಪರ್ಧಾತ್ಮಕತೆಯಲ್ಲಿ ಅಮೆರಿಕ ಮತ್ತು ಚೀನಾ ನಂತರ ಭಾರತ ಸ್ಥಾನ ಪಡೆದಿದೆ. ಸೌತ್ ಕೊರಿಯಾ, ಬ್ರಿಟನ್, ಸಿಂಗಾಪುರ್, ಜಪಾನ್, ಜರ್ಮನಿ, ಫ್ರಾನ್ಸ್, ಕೆನಡಾ ಇತ್ಯಾದಿ ಅನೇಕ ಮುಂದುವರಿದ ದೇಶಗಳಿಗಿಂತ ಭಾರತ ಎಐ ಸ್ಪರ್ಧಾತ್ಮಕತೆಯಲ್ಲಿ ಮುಂಚೂಣಿಯಲ್ಲಿದೆ ಎಂದಾಯಿತು. ಗ್ಲೋಬಲ್ ಎಐ ಸ್ಪರ್ಎಯಲ್ಲಿ ಭಾರತ ಪ್ರಮುಖ ಪಾತ್ರವಹಿಸಬೇಕಾದರೆ ಟೆಕ್ ಇಕೋಸಿಸ್ಟಂ ಬೇಗ ಬೆಳೆಸಲು ಮತ್ತು ಉತ್ತಮ ಗುಣಮಟ್ಟದ ಪ್ರತಿಭಾ ಸಮೂಹ ಬೆಳೆಸಲು ಭಾರತ ಸರಿಯಾದ ಹಾದಿಯಲ್ಲಿದೆ.

ಸೆಮಿಕಂಡಕ್ಟರ್​ನಲ್ಲಿ ಭಾರತದ ಸ್ವಾವಲಂಬನೆಯ ಹೊಸ ಪರ್ವ

ಭಾರತದ ಇತಿಹಾಸದಲ್ಲಿ ಸರ್ಕಾರವೊಂದು ಸೆಮಿಕಂಡಕ್ಟರ್ ತಯಾರಿಕೆಯನ್ನು ದೇಶದ ತಂತ್ರಜ್ಞಾನ ಮಿಷನ್​ನ ಮುಖ್ಯಭಾಗವಾಗಿ ಇಟ್ಟಿದೆ. 2025ರ ಮೇ ತಿಂಗಳಲ್ಲಿ ನೋಯ್ಡಾ ಮತ್ತು ಬೆಂಗಳೂರಿನಲ್ಲಿ ಎರಡು ಸುಧಾರಿತ ಸೆಮಿಕಂಡಕ್ಟರ್ ಘಟಕಗಳನ್ನು ಸ್ಥಾಪಿಸಿತು. ಈ ಎರಡು ಘಟಕಗಳಲ್ಲಿ 3-ಎನ್​ಎಂ ಚಿಪ್ ಡಿಸೈನ್ ಮಾಡಲಾಗುತ್ತದೆ. ಈ ಎರಡು ಘಟಕಗಳು ಮ್ಯಾನುಫ್ಯಾಕ್ಚರಿಂಗ್ ಸಾಮರ್ಥ್ಯವನ್ನಷ್ಟೇ ಅಲ್ಲ, ಬಹಳ ಮುಖ್ಯವಾದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ತನ್ನದೇ ಭವಿಷ್ಯ ರೂಪಿಸುವ ಹಾದಿಯಲ್ಲಿ ಸಾಗಲು ಅನುವು ಮಾಡಿಕೊಡುತ್ತವೆ.

ಈ 3ಎನ್​ಎಂ ಚಿಪ್​​ಗಳು ಸಾಮಾನ್ಯವಲ್ಲ. ಸ್ಮಾರ್ಟ್​ಫೋನ್​ಗಳಿಂದ ಹಿಡಿದು ಲ್ಯಾಪ್​ಟಾಪ್, ಉನ್ನತ ಸಾಮರ್ಥ್ಯದ ಕಂಪ್ಯೂಟರ್​ಗಳವರೆಗೆ ವಿಶ್ವದ ಅತ್ಯಂತ ಸುಧಾರಿತ ತಂತ್ರಜ್ಞಾನಗಳಿಗೆ ಶಕ್ತಿ ಕೊಡುವ ಮುಖ್ಯ ಭಾಗವಾಗಿವೆ. ಐಐಟಿ ಮದ್ರಾಸ್ ತನ್ನ ಶಕ್ತಿ ಯೋಜನೆಮೂಲಕ 7 ಎನ್​ಎಂ ಪ್ರೋಸಸರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಸೆಪ್ಟೆಂಬರ್​ನಲ್ಲಿ ನಡೆದ ಸೆಮಿಕಾನ್ ಇಂಡಿಯಾ 2025 ಕಾನ್ಫರೆನ್ಸ್ ವೇಳೆ ಪ್ರಧಾನಿ ಮೋದಿ ಅವರಿಗೆ ವಿಕ್ರಮ್-32 ಬಿಟ್ ಚಿಪ್ ಅನ್ನು ಉಡುಗೆಯಾಗಿ ಕೊಡಲಾಯಿತು. ಇದು ಪೂರ್ಣ ದೇಶೀಯವಾಗಿ ನಿರ್ಮಿಸಿದ ಚಿಪ್.

ಈ ಅಂಕಿ ಅಂಶದ ಹಿಂದೆ ಜಾಗತಿಕ ರಾಜಕೀಯ ವಿಚಾರವೂ ಮಿಳಿತವಾಗಿದೆ. ವೈಚಾರಿಕ ತುಮುಲಗಳ ನಡುವೆ ಜಾಗತಿಕ ಸರಬರಾಜು ಸರಪಳಿಯು ಹರಿದು ಹಂಚಿಹೋಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಸೆಮಿಕಂಡಕ್ಟರ್ ಸಾಮರ್ಥ್ಯವು ಆರ್ಥಿಕ ಕ್ಷಮತೆಯನ್ನು ಬಿಂಬಿಸುತ್ತದೆ. 2025ರ ಒಂದೇ ವರ್ಷದಲ್ಲಿ ಭಾರತವು ಐದಕ್ಕೂ ಅಧಿಕ ಸೆಮಿಕಂಡಕ್ಟರ್ ಯೂನಿಟ್​ಗಳಿಗೆ ಅನುಮೋದನೆ ಕೊಟ್ಟಿತು. ಇದರೊಂದಿಗೆ ಆರು ರಾಜ್ಯಗಳಲ್ಲಿ ಒಟ್ಟು 1.60 ಲಕ್ಷ ಕೋಟಿ ರೂ ಹೂಡಿಕೆಯೊಂದಿಗೆ ಆರಂಭವಾಗಿರುವ ಮತ್ತು ಆರಂಭವಾಗಲಿರುವ ಸೆಮಿಕಂಡಕ್ಟರ್ ಘಟಕಗಳ ಸಂಖ್ಯೆ 10ಕ್ಕೆ ಏರಿದೆ. 2030ರೊಳಗೆ ಜಾಗತಿಕ ಸೆಮಿಕಂಡಕ್ಟರ್ ಅನುಭೋಗದಲ್ಲಿ ಶೇ. 10 ಪಾಲನ್ನು ಪಡೆಯುವ ದೊಡ್ಡ ಗುರಿ ಭಾರತದ್ದಾಗಿದೆ. ಇದು ಸಾಧ್ಯವಾದರೆ ಭಾರತವು ಸೆಮಿಕಂಡಕ್ಟರ್ ಡಿಸೈನ್, ಮ್ಯಾನುಫ್ಯಾಕ್ಚರಿಂಗ್ ಮತ್ತು ಇನ್ನೋವೇಶನ್​ನಲ್ಲಿ ಪ್ರಮುಖ ಕೇಂದ್ರವಾಗಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಭಾರತ 2025: ಹೊಸ ಭದ್ರತಾ ನೀತಿ, ಆಪರೇಷನ್ ಸಿಂದೂರ್ ಶಕ್ತಿ & ಭಯೋತ್ಪಾದನೆಗೆ ಖಡಕ್ ಉತ್ತರ

ವಿರಳ ಭೂ ಖನಿಜಗಳ ಯೋಜನೆ

ಗಗನಚುಂಬಿ ಕಟ್ಟಡಗಳನ್ನು ಕಟ್ಟಡಲು ಉಕ್ಕು ಎಷ್ಟು ಮುಖ್ಯವೋ, ಸೆಮಿಕಂಡಕ್ಟರ್​ಗಳನ್ನು ನಿರ್ಮಿಸಲು ಕ್ರಿಟಿಕಲ್ ಮಿನರಲ್​ಗಳು ಬಹಳ ಮುಖ್ಯ. ಈ ವಿರಳ ಭೂ ಖನಿಜಗಳು (Critical minerals) ಇಲ್ಲದಿದ್ದರೆ ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಆಗಲೀ ಎಐ ಆಗಲೀ ಕಷ್ಟಸಾಧ್ಯ. ಡಿಜಿಟಲ್ ಭವಿಷ್ಯ ಮಸುಕಾಗುತ್ತದೆ. ಹೀಗಾಗಿ, ಮೋದಿ ಸರ್ಕಾರ 2025ರ ಜನವರಿಯಲ್ಲಿ ನ್ಯಾಷನಲ್ ಕ್ರಿಟಿಕಲ್ ಮಿನರಲ್ ಮಿಷನ್​ಗೆ ಚಾಲನೆ ನೀಡಿದರು. ಭಾರತಕ್ಕೆ ಅಗತ್ಯವಾಗಿರುವ ವಿರಳ ಭೂಖನಿಜಗಳನ್ನು ಗಳಿಸಲು, ಹಾಗೂ ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ಸ್​ವಾವಲಂಬನೆ ಸಾಧಿಸಲು 16,300 ಕೋಟಿ ರೂ ಬಜೆಟ್ ಇಟ್ಟು ಈ ಮಿಷನ್ ಆರಂಭಿಸಲಾಗಿದೆ.

ಈ ಖನಿಜಗಳು ದೇಶೀಯವಾಗಿಯೇ ಸಿಗುವಂತೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶಗಳಲ್ಲಿ ಒಂದೆನಿಸಿದೆ. ಈ ಖನಿಜಗಳಿಗಾಗಿ ಬೇರೆ ದೇಶಗಳ ಮೇಲೆ ಅವಲಂಬಿಸುವುದನ್ನು ತಪ್ಪಿಸಬಹುದು. 2024-25ರಲ್ಲಿ ಜಿಎಸ್​ಐ ಸಂಸ್ಥೆಯು ದೇಶಾದ್ಯಂತ 195 ಕಡೆ ಮುಖ್ಯ ಖನಿಜಗಳ ಅನ್ವೇಷಣೆ ಯೋಜನೆಗಳನ್ನು ಆರಂಭಿಸಿತು. 2025-26ರಲ್ಲಿ ಒಟ್ಟು 227 ಪ್ರಾಜೆಕ್ಟ್​ಗಳು ಕಾರ್ಯಗತಗೊಳ್ಳುತ್ತಿವೆ. 2025-26ರ ಬಜೆಟ್​ನಲ್ಲಿ ಮೋದಿ ಸರ್ಕಾರವು ಲಿಥಿಯಮ್ ಅಯಾನ್ ಬ್ಯಾಟರಿಯ ತ್ಯಾಜ್ಯವಾದ ಕೊಬಾಲ್ಟ್ ಪೌಂಡರ್, ಪಾದರಸ (ಲೆಡ್), ಜಿಂಕ್ ಹಾಗೂ ಇನ್ನೂ 12 ಇತರ ಮುಖ್ಯ ಖನಿಜನಗಳಿಗೆ ವಿನಾಯಿತಿ ನೀಡಿತು. ಇವುಗಳ ರೀಸೈಕ್ಲಿಂಗ್ ಮತ್ತು ಪ್ರೋಸಸಿಂಗ್​ಗೆ ಉತ್ತೇಜಿಸುವಂತಹ ಕ್ರಮಗಳನ್ನು ಕೈಗೊಂಡಿತು.

ಇದನ್ನೂ ಓದಿ: Infra Achievements: 2025ರಲ್ಲಿ ಭಾರತದಲ್ಲಿ ಅದೆಷ್ಟು ಮೂಲಸೌಕರ್ಯ ಯೋಜನೆಗಳು, ಮೈಲಿಗಲ್ಲುಗಳು, ಮೊದಲುಗಳು

ಸಂಶೋಧನೆ ಮತ್ತು ನಾವೀನ್ಯತೆ ವ್ಯವಸ್ಥೆಯಲ್ಲಿ ವೇಗದ ಪರಿವರ್ತನೆ

2047ರ ವಿಕಸಿತ ಭಾರತದ ಗುರಿಸಾಧನೆಗೆ ಆರ್ ಅಂಡ್ ಡಿಗೆ ಬಹಳ ಆದ್ಯತೆ ಕೊಡಲಾಗಿದೆ. ನವೆಂಬರ್ 3ರಂದು ರಿಸರ್ಚ್ ಡೆವಲಪ್ಮೆಂಟ್ ಅಂಡ್ ಇನ್ನೋವೇಶನ್ (ಆರ್​​ಡಿಐ) ಸ್ಕೀಮ್ ಫಂಡ್ ಅನ್ನು ಆರಂಭಿಸಲಾಯಿತು. ಭಾರತದ ಸಂಧೋಧನೆ ಮತ್ತು ಅಭಿವೃದ್ಧಿ ಇಕೋಸಿಸ್ಟಂ ಬಲಪಡಿಸುವ ಉದ್ದೇಶದ ಈ ಫಂಡ್​ಗೆ ಒಂದು ಲಕ್ಷ ಕೋಟಿ ರೂ ಮೀಸಲಿಡಲಾಗಿದೆ. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಕೋಸಿಸ್ಟಂ ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಪ್ರಮುಖ ಸ್ಕೀಮ್​ಗಳ ಏಕೀಕರಣಕ್ಕೆ ಅನುಮೋದನೆ ಕೊಟ್ಟರು. 10,579.84 ಕೋಟಿ ರೂ ಅನುದಾನದ ‘ವಿಜ್ಞಾನ್ ಧಾರ’ ಯೋಜನೆ ಇದು. ವಿಜ್ಞಾನಿಗಳಿಗೆ ತರಬೇತಿ ನೀಡುವುದು, ಲ್ಯಾಬ್ ಸೌಕರ್ಯ ವ್ಯವಸ್ಥೆ ಉನ್ನತೀಕರಿಸುವುದು, ವೈಜ್ಞಾನಿಕ ಆವಿಷ್ಕಾರಗಳು ಲ್ಯಾಬ್​ನಿಂದ ನಾಡಿಗೆ ಬೇಗ ವರ್ಗಾವಣೆಗೊಳುವುದು, ಈ ಅಂಶಗಳತ್ತ ಇದು ಗಮನ ಕೊಡುತ್ತದೆ. ಫಂಡಿಂಗ್ ಅನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಭಾರತದ ವೈಜ್ಞಾನಿಕ ಇಕೋಸಿಸ್ಟಂ ಹೆಚ್ಚು ಕ್ಷಮತೆಯಿಂದ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವಂತೆ ಮಾಡುವುದು ಈ ಸ್ಕೀಮ್​ನ ಉದ್ದೇಶ.

ದೂರದೃಷ್ಟಿ ಗುಣದ ಪಿಎಂ ಮೋದಿ ಅವರ ನಾಯಕತ್ವದಲ್ಲಿ ದೇಶದಲ್ಲಿ ನಾವೀನ್ಯತೆಗೆ ಪುಷ್ಟಿ ಸಿಕ್ಕಿದೆ, ದೇಶೀಯ ಸಾಮರ್ಥ್ಯ ಹೆಚ್ಚಿದೆ, ತಂತ್ರಜ್ಞಾನ ಸ್ವಾಲವಂಬನೆ ಬಲಗೊಂಡಿದೆ. ಭಾರತ ಈಗ ಜಾಗತಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ರಾಂತಿಯಲ್ಲಿ ಕೇವಲ ವೀಕ್ಷಕನಾಗಿ ಉಳಿಯದೇ ಮುಂಚೂಣಿಯಲ್ಲಿ ಸಾಗುತ್ತಿದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದ ಜನರಿಗೆ ಬಿಗ್ ಶಾಕ್: ವೈದ್ಯರ ವಿಲೀನಕ್ಕೆ ಮುಂದಾದ ಆರೋಗ್ಯ ಇಲಾಖೆ – Kannada News | Big Shock for Karnataka Residents: Health Department Plans to Merge Doctors

ಬೆಂಗಳೂರು, ಡಿಸೆಂಬರ್​ 27: ಶಿಕ್ಷಕರ ಕೊರತೆ ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ವಿಲೀನಕ್ಕೆ ಶಿಕ್ಷಣ ಇಲಾಖೆ ಇತ್ತೀಚೆಗೆ ಮುಂದಾಗಿತ್ತು. ಇದೀಗ ಆರೋಗ್ಯ ಇಲಾಖೆ (Health Department) ಸರದಿ. ವೈದ್ಯರ ವಿಲೀನ ಪ್ರಕ್ರಿಯೆಗೆ ಆರೋಗ್ಯ ಇಲಾಖೆ ಕೈ ಹಾಕಿದ್ದು, 270 ಸಮುದಾಯ ಆರೋಗ್ಯ ಕೇಂದ್ರಗಳಿಂದ ವೈದ್ಯರನ್ನು (doctors) ತಾಲೂಕಾಸ್ಫತ್ರೆಗೆ ಸ್ಥಳಾಂತರಿಸುವುದಕ್ಕೆ ಪ್ಲ್ಯಾನ್​​ ಮಾಡಲಾಗುತ್ತಿದೆ. ಆ ಮೂಲಕ ರಾಜ್ಯದ ಜನರಿಗೆ ಆರೋಗ್ಯ ಇಲಾಖೆ ಬಿಗ್ ಶಾಕ್ ನೀಡಿದೆ.

ಕರ್ನಾಟಕದಲ್ಲಿ ಸುಮಾರು 270ಕ್ಕೂ ಹೆಚ್ಚು ಸಮುದಾಯ ಆರೋಗ್ಯ ಕೇಂದ್ರಗಳಿವೆ. ಈ ಆಸ್ಫತ್ರೆಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ವೈದ್ಯಕೀಯ ಸೇವೆಗಳು ಸಿಗುತ್ತಿವೆ. ಗ್ರಾಮೀಣ ಭಾಗದ ಜನರಿಗೆ ತುಂಬಾ ಅನುಕೂಲವಾಗುತ್ತಿತ್ತು. ಆದರೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಡಿಮೆ ಹೆರಿಗೆ ಆಗುತ್ತಿವೆ.

ಇದನ್ನೂ ಓದಿ: ಕೊವಿಡ್​​ನಂತೆ ಆತಂಕ ಸೃಷ್ಟಿಸಿದ ILI-ಸಾರಿ ಕೇಸ್ ಏರಿಕೆ: ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ

ಯಾವ ಆಸ್ಫತ್ರೆಗಳಲ್ಲಿ 30ಕ್ಕಿಂತ ಕಡಿಮೆ ಹೆರಿಗೆ ಆಗಿವೆ ಅಂತಹ ಆಸ್ಫತ್ರೆಗಳಲ್ಲಿ ಅನಸ್ತೇಶಿಯಾ ವೈದ್ಯರು, ಮಕ್ಕಳ ವೈದ್ಯರು ಮತ್ತು ಹೆರಿಗೆ ವೈದ್ಯರನ್ನು ತಾಲೂಕು ಆಸ್ಫತ್ರೆಗಳಿಗೆ ಸ್ಥಳಾಂತರ ಮಾಡಲು ಮುಂದಾಗಿದೆ. ಈಗಾಗಲೇ ಎಲ್ಲಾ ಆಸ್ಪತ್ರೆಗಳ ತಿಂಗಳ ಹೆರಿಗೆಯಾಗುವ ವರದಿಯನ್ನು ಸಿದ್ಧಪಡಸಿ ವೈದ್ಯರ ಶಿಫ್ಟ್​ಗೆ ಆರೋಗ್ಯ ಇಲಾಖೆ ಮುಂದಾಗಿದೆ. ಹೀಗಾಗಿ ಇನ್ಮುಂದೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ಡಾಕ್ಟರ್, ಹೆರಿಗೆ ವೈದ್ಯರು, ಅನಸ್ತೇಶಿಯಾ ವೈದ್ಯರು ಸಿಗುವುದು ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬಣ್ಣ ಬಣ್ಣದ ಕೇಕ್​​ ತಿನ್ನೋ ಮುನ್ನ ಜೋಕೆ: ಯಾಮಾರಿದ್ರೆ ಬರಬಹುದು ಭೀಕರ ಕಾಯಿಲೆ!

ಆರೋಗ್ಯ ಇಲಾಖೆ ಈಗಾಗಲೇ ರಾಜ್ಯದಲ್ಲಿ ಕಡಿಮೆ ಹೆರಿಗೆಯಾಗುವ ಆಸ್ಪತ್ರೆಗಳ ಪಟ್ಟಿ ಸಿದ್ಧಪಡಿಸಿದೆ. ಪ್ರಸೂತಿ ತಜ್ಞರು, ಅರವಳಿಕೆ ತಜ್ಞರು, ಮಕ್ಕಳ ತಜ್ಞರು, ರೇಡಿಯಾಲಜಿಸ್ಟ್​​, ಜನರಲ್ ಮೆಡಿಸಿನ್ ವೈದ್ಯರು ಪಟ್ಟಿಯಲ್ಲಿದ್ದಾರೆ. ಆ ಮೂಲಕ ಕಡಿಮೆ ಕಾರ್ಯಕ್ಷಮತೆಯ ಆಸ್ಪತ್ರೆಯಿಂದ ವೈದ್ಯರ ಎತ್ತಗಂಡಿಗೆ ಮುಂದಾಗಿದೆ. 270 ಸಮುದಾಯ ಆರೋಗ್ಯ ಕೇಂದ್ರಗಳಿಂದ ವೈದ್ಯರನ್ನ ತಾಲೂಕು ಆಸ್ಫತ್ರೆಗಳಿಗೆ ಶಿಫ್ಟ್​​ ಮಾಡುವುದಕ್ಕೆ ಪ್ಲ್ಯಾನ್​​ ಮಾಡಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘45’ ಚಿತ್ರದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಾನೂನು ಕ್ರಮದ ಎಚ್ಚರಿಕೆ – Kannada News | ’45’ Film: Shivarajkumar Team Warns FIR, Strict Action Against Defamation

ಶಿವರಾಜ್​​ಕುಮಾರ್, ರಾಜ್​ ಬಿ. ಶೆಟ್ಟಿ ಹಾಗೂ ಉಪೇಂದ್ರ ನಟನೆಯ ‘45’ ಸಿನಿಮಾಗೆ (45 Movie) ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಒಳ್ಳೆಯ ವಿಮರ್ಶೆ ಸಿಕ್ಕಿದ್ದು, ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಕಲೆಕ್ಷನ್ ಕೂಡ ಮಾಡುತ್ತಿದೆ. ಉದ್ದೇಶಪೂರ್ವಕವಾಗಿ ಸಿನಿಮಾ ಬಗ್ಗೆ ನೆಗೆಟಿವ್ ಹಬ್ಬಿಸೋವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ‘45’ ತಂಡ ನೀಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಲಾಗಿದೆ.

‘45 ಚಿತ್ರತಂಡ ಬೆಂಗಳೂರು 9ನೇ ಅಪರ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಮಧ್ಯಂತರ ಆದೇಶವನ್ನು ಪಡೆದಿದೆ. ನ್ಯಾಯಾಲಯದ ಮಧ್ಯಂತರ ಆದೇಶದಂತೆ, 45 ಚಿತ್ರದ ಕುರಿತು ಯಾವುದೇ ವ್ಯಕ್ತಿ, ಸಂಸ್ಥೆ, ಚಾನೆಲ್, ಸಾಮಾಜಿಕ ಜಾಲತಾಣದ ಖಾತೆದಾರರು ಅಥವಾ ಸಂಬಂಧಿತ ಪ್ಲಾಟ್‌ಫಾರ್ಮ್‌ಗಳು, ಅವಹೇಳನಕಾರಿ, ಮಾನಹಾನಿಕರ, ಅಪಪ್ರಚಾರಾತ್ಮಕ ವಿಮರ್ಶೆಗಳು ಅಥವಾ ನೆಗೆಟಿವ್ ರೇಟಿಂಗ್‌ಗಳು ಸೇರಿದಂತೆ ಚಿತ್ರಕ್ಕೆ ಹಾನಿಯುಂಟು ಮಾಡುವ ವಿಷಯಗಳನ್ನು ಪ್ರಕಟಿಸುವುದು, ಪ್ರಸಾರ ಮಾಡುವುದು ಅಥವಾ ಹರಡುವುದು ನಿರ್ಬಂಧಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಬರೆಯಲಾಗಿದೆ.

‘ಈಗಾಗಲೇ ಪ್ರಕಟಗೊಂಡಿರುವ ಇಂತಹ ಎಲ್ಲಾ ವಿಷಯಗಳನ್ನು ತೆಗೆದುಹಾಕಿ ನಿಷ್ಕ್ರಿಯಗೊಳಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ನ್ಯಾಯಾಲಯದ ಆದೇಶವಿದ್ದರೂ ಸಹ, ಕೆಲವೊಂದು ದುರುದ್ದೇಶಪೂರಿತ ವ್ಯಕ್ತಿಗಳಿಂದ ಚಿತ್ರದ ವಿರುದ್ಧ ಅಪಪ್ರಚಾರದ ಪೋಸ್ಟ್‌ಗಳು ಪ್ರಕಟವಾಗುತ್ತಿರುವುದು ಚಿತ್ರತಂಡದ ಗಮನಕ್ಕೆ ಬಂದಿದೆ. ಇಂತಹ ಕೃತ್ಯಗಳು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದ್ದು, ನ್ಯಾಯಾಂಗ ನಿಂದನೆಗೆ ಒಳಪಡುವ ಅಪರಾಧವಾಗಿರುತ್ತದೆ’ ಎಂದು ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ‘45’ ಸಿನಿಮಾದಲ್ಲಿ ಶಿವರಾಜ್​​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ..

‘ಈ ರೀತಿಯ ಅಪಪ್ರಚಾರದಿಂದ ಚಿತ್ರಕ್ಕೆ ಅಥವಾ ನಿರ್ಮಾಪಕರಿಗೆ ಉಂಟಾಗುವ ಯಾವುದೇ ರೀತಿಯ ಆರ್ಥಿಕ, ವಾಣಿಜ್ಯ ಹಾಗೂ ಗೌರವ ಹಾನಿಗೆ ಸಂಬಂಧಪಟ್ಟ ವ್ಯಕ್ತಿಗಳು ವೈಯಕ್ತಿಕವಾಗಿ ಸಂಪೂರ್ಣ ಹೊಣೆಗಾರರಾಗಿದ್ದು, ಅವರ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲು ಅವಕಾಶವಿದೆ. ಅಗತ್ಯವಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧನ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲು ತಜ್ಞರ ಅಭಿಪ್ರಾಯ ಪಡೆಯಲಾಗಿದೆ’ ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ. ಪೈರಸಿ ಮಾಡದಂತೆಯೂ ಎಚ್ಚರಿಕೆ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು: ಮೈ ಜುಮ್ಮೆನಿಸುವ ಸಿಸಿಟಿವಿ ವಿಡಿಯೋ – Kannada News | Belagavi Couple and Child Narrowly Escape Stray Dog Attack, CCTV Video Goes Viral

ಬೆಳಗಾವಿ, ಡಿಸೆಂಬರ್ 27: ದಂಪತಿ ತಮ್ಮ ಪಾಡಿಗೆ ತಾವು ಮಕ್ಕಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿದ ಘಟನೆ ಬೆಳಗಾವಿ ನಗರದ ಜೋಶಿಮಾಳಾದಲ್ಲಿ ನಡೆದಿದೆ. ಆರಂಭದಲ್ಲಿ ಒಂದೆರಡು ನಾಯಿಗಳಷ್ಟೇ ಕಾಣ್ತಿವೆ. ಆದರೆ, ಉಳಿದ ಬೀದಿನಾಯಿಗಳ ಪಡೆ ಅದೆಲ್ಲಿದ್ದವೋ ಏನೋ ಒಮ್ಮಿಂದೊಮ್ಮೆಲೇ ಪ್ರತ್ಯಕ್ಷವಾಗಿ ದಂಪತಿ ಮತ್ತು ಮಕ್ಕಳನ್ನು ಸುತ್ತುವರಿದಿವೆ. ಬೀದಿನಾಯಿಗಳು ಅಟ್ಟಹಾಸ ಮೆರೆಯುತ್ತಿತಿದ್ದಂತೆಯೇ ಬೆಚ್ಚಿದ ಪುಟ್ಟ ಮಗು, ಕಿರುಚಾಡತೊಡಗಿದೆ. ಇನ್ನು, ತಂದೆ ನಾಯಿಗಳನ್ನು ಓಡಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ದಂಪತಿ ಮತ್ತು ಮಕ್ಕಳು ಪಾರಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿಯೊಂದಿಗೆ ಮೈತ್ರಿ ಕಡಿತದ ಹಿಂದಿದೆ ದೇವೇಗೌಡ್ರ ರಾಜಕೀಯ ಲೆಕ್ಕಾಚಾರ, ವಿಜಯೇಂದ್ರ ಹೇಳಿದ್ದೇನು? – Kannada News | BJP President BY Vijayendra Reacts On HD Devegowda Statement JDS alone in local body polls, no alliance with BJP

ಬೆಂಗಳೂರು, (ಡಿಸೆಂಬರ್ 27): ಕರ್ನಾಟಕದಲ್ಲಿ (Karnataka) ಲೋಕಸಭೆ, ವಿಧಾನಸಭೆಗಷ್ಟೇ ಬಿಜೆಪಿ-ಜೆಡಿಎಸ್ ಮೈತ್ರಿ,  (JDS And BJP alliance)ಸ್ಥಳೀಯ ಸಂಸ್ಥೆಗಳ ಚುನಾವಣೆಗಿಲ್ಲ ಮೈತ್ರಿ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (HD Devegowda) ಸ್ಪಷ್ಟಪಡಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರೀ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಎಂಪಿ, ಎಂಎಲ್​​ಎಗಳು ಅನ್ಯೂನ್ಯವಾಗಿರಲಿ. ಸ್ಥಳೀಯವಾಗಿ ಚುನಾವಣೆಗಳು ಕೆಳ ಹಂತದ ಕಾರ್ಯಕರ್ತರು ಹೊಡೆದುಕೊಳ್ಳಲಿ ಎಂದು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.

ಹೆಚ್‌ಡಿಡಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (B.Y.Vijayendra), ಸ್ವಂತ ಬಲದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಒಳಜಗಳ ನೋಡಿದರೆ 2028ಕ್ಕೂ ಮುನ್ನವೇ ವಿಧಾನಸಭಾ ಚುನಾವಣೆ ಬರಬಹುದು. 130-140 ಸ್ಥಾ‌ನಗಳೊಂದಿಗೆ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಮೈತ್ರಿಯಲ್ಲಿ ಹೆಚ್ಚಾಗ್ತಿದೆಯಾ ಗೊಂದಲ? ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಇಲ್ಲ ಎಂದ ದೇವೇಗೌಡ

Source link

Exit mobile version