IPL 2026: ಪ್ರಮುಖ ಆಟಗಾರ ಗಾಯಾಳು: RCBಗೆ ಚಿಂತೆ ಶುರು

Source link

ದೆಹಲಿ ಹೊಸ ವರ್ಷಾಚರಣೆ: ಆಪರೇಷನ್ ಆಘಾಟ್ 3.0 ಅಡಿಯಲ್ಲಿ 500ಕ್ಕೂ ಹೆಚ್ಚು ಜನರ ಬಂಧನ – Kannada News | Delhi New Year Security: Police Seize Illegal Arms, Drugs; 500 Arrests in Aghaat 3.0

ದೆಹಲಿ, ಡಿ.27: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi New Year Security) ಹೊಸ ವರ್ಷಾಚರಣೆಗೆ ಭದ್ರತೆ ಕುರಿತು ತಯಾರಿ ಮಾಡಿಕೊಳ್ಳುತ್ತಿರುವ ವೇಳೆ, ಮಹತ್ವದ ಕಾರ್ಯಚರಣೆಯೊಂದನ್ನು ದೆಹಲಿ ಪೊಲೀಸರು ನಡೆಸಿದ್ದಾರೆ. ರಾತ್ರಿಯಿಡೀ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ನೂರಾರು ಜನರನ್ನು ಬಂಧಿಸಿದ್ದಾರೆ. ಆಪರೇಷನ್ ಆಘಾಟ್ 3.0 ಅಡಿಯಲ್ಲಿ ದೆಹಲಿ ಆಗ್ನೇಯ ಜಿಲ್ಲೆಯ ಪೊಲೀಸರು ಸುಮಾರು ಎರಡು ಡಜನ್ ಅಕ್ರಮ ಶಸ್ತ್ರಾಸ್ತ್ರಗಳು, ಲಕ್ಷಾಂತರ ನಗದು, ಅಕ್ರಮ ಮದ್ಯ, ಮಾದಕ ವಸ್ತುಗಳು ಮತ್ತು ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನ್ಯೂ ಇಯರ್​​​​ ಸೆಲೆಬ್ರೇಷನ್​​​​ ಸಂದರ್ಭದಲ್ಲಿ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಸಮಯದಲ್ಲಿ ಅಪಾಯವನ್ನು ಅಥವಾ ಉದ್ದೇಶಪೂರ್ವಕವಾಗಿ ಗಲಭೆ ಸೃಷ್ಟಿಸುವ ಅನುಮಾಸ್ಪದ ವ್ಯಕ್ತಿಗಳನ್ನು ಬಂಧನ ಮಾಡಲಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ 285 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಸ್ತ್ರಾಸ್ತ್ರ ಕಾಯ್ದೆ, ಅಬಕಾರಿ ಕಾಯ್ದೆ, ಎನ್‌ಡಿಪಿಎಸ್ ಕಾಯ್ದೆ ಮತ್ತು ಜೂಜಾಟ ಕಾಯ್ದೆಯ ನಿಬಂಧನೆಗಳು ಸೇರಿದಂತೆ ವಿವಿಧ ಕಾನೂನುಗಳ ಅಡಿಯಲ್ಲಿ ಈ ಬಂಧನಗಳನ್ನು ಮಾಡಲಾಗಿದೆ. ಇದಲ್ಲದೆ, ಇಲ್ಲಿಯವರೆಗೆ ಹೊಸ ವರ್ಷದ ಸಂದರ್ಭದಲ್ಲಿ ಅಪರಾಧ ಮುಕ್ತ ಆಚರಣೆ ನಡೆಸುವ ಉದ್ದೇಶದಿಂದ 504 ಜನರನ್ನು ಬಂಧಿಸಲಾಗಿದೆ.

ಎಕ್ಸ್​​ ಪೋಸ್ಟ್​​ ಇಲ್ಲಿದೆ ನೋಡಿ:

ಪೊಲೀಸರು ಆರೋಪಿಗಳಿಂದ 21 ಅಕ್ರಮ ಶಸ್ತ್ರಾಸ್ತ್ರಗಳು, 27 ವಾಹನಗಳು, 12,000 ಕ್ಕೂ ಹೆಚ್ಚು ಮದ್ಯದ ಬಾಟಲಿಗಳು, ಸುಮಾರು 2.5 ಲಕ್ಷ ರೂ. ನಗದು ಮತ್ತು 7 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆಪರೇಷನ್ ಆಘಾಟ್ 3.0 ಅಡಿಯಲ್ಲಿ, ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವ ಸುಮಾರು 116 ವ್ಯಕ್ತಿಗಳನ್ನು ಬಂಧಿಸಲಾಗಿದೆ. ವಾಹನ ಕಳ್ಳತನ ಜಾಲವನ್ನು ತಡೆಯುವ ನಿಟ್ಟಿನಲ್ಲೂ ಆಪರೇಷನ್ ಆಘಾಟ್ 3.0 ಮೂಲಕ ಕ್ರಮ ಕೈಗೊಳ್ಳಲಾಗಿದೆ. ನ್ಯೂ ಇಯರ್​​​​ ಪಾರ್ಟಿ ಸಮಯದಲ್ಲಿ ವಾಹನ ಸವಾರರು ಯಾವುದೇ ತೊಂದರೆ ಎದುರಿಸದಂತೆ ನೋಡಿಕೊಳ್ಳಲು ಐದು ಆಟೋ ಲಿಫ್ಟರ್‌ಗಳನ್ನು ಬಂಧಿಸಲಾಗಿದೆ. ದಾಳಿಯ ಸಮಯದಲ್ಲಿ 231 ದ್ವಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರದ ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ‘ಬುಲ್ಡೋಜರ್ ರಾಜ್’ ನೀತಿಯಿಂದ ಬೀದಿಗೆ ಬಂದ ಮುಸ್ಲಿಂ ಕುಟುಂಬ: ಪಿಣರಾಯಿ ವಿಜಯನ್ ಆಕ್ರೋಶ

ಇನ್ನು ಪೊಲೀಸರು, 21 ದೇಶೀಯ ಪಿಸ್ತೂಲುಗಳು, 20 ಗನ್‌ಪೌಡರ್, 27 ಚಾಕುಗಳು ಸೇರಿದಂತೆ 12,000 ಕ್ಕೂ ಹೆಚ್ಚು ಅಕ್ರಮ ಮದ್ಯ ಮತ್ತು 6 ಕೆಜಿ ಗಾಂಜಾವನ್ನು ಸಹ ವಶಪಡಿಸಿಕೊಳ್ಳಲಾಗಿದೆ.ಪೊಲೀಸರು ದಾಳಿಯ ಸಮಯದಲ್ಲಿ 2.3 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಸುಮಾರು 210 ಕದ್ದ ಅಥವಾ ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.

ದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಯನಗರ ಆಸ್ಪತ್ರೆಯಲ್ಲಿ ವೈದ್ಯರ ಭಾರೀ ಎಡವಟ್ಟು: ಸ್ವಲ್ಪ ಏರುಪೇರಾದರೂ ಜೀವವೇ ಹೋಗ್ತಿತ್ತು! – Kannada News | Jayanagar Hospital Negligence: Wrong Blood Transfusion Critically Harms Patient

ಜಯನಗರ ಆಸ್ಪತ್ರೆಯಲ್ಲಿ ವೈದ್ಯರ ಭಾರೀ ಎಡವಟ್ಟು

ಬೆಂಗಳೂರು, ಡಿಸೆಂಬರ್ 27: ಬೆಂಗಳೂರಿನ (Bengaluru) ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಭಾರೀ ನಿರ್ಲಕ್ಷ್ಯ ಬೆಳಕಿಗೆ ಬಂದಿದ್ದು, ರಕ್ತಹೀನತೆ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರ ಸ್ಥಿತಿ ಗಂಭೀರವಾದ ಘಟನೆ ನಡೆದಿದೆ. ಪರಿಣಾಮ ರೋಗಿಯ ಆತೋಗ್ಯ ತೀವ್ರ ಹದಗೆಟ್ಟಿದೆ.ತಕ್ಷಣ ಅವರನ್ನು ಐಸಿಯುವಿಗೆ ಸ್ಥಳಾಂತರಿಸಿ ತುರ್ತು ಚಿಕಿತ್ಸೆ ನೀಡಲಾಗಿದ್ದು, ಈ ಕುರಿತು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೋಗಿಯ ಸ್ಥಿತಿ ಗಂಭೀರ

ಪುನೀತ್ ಸೂರ್ಯ ಎಂಬ ರೋಗಿ ರಕ್ತಹೀನತೆ ಚಿಕಿತ್ಸೆ ಪಡೆಯಲು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದರು. ಅವರು ಓ ಪಾಸಿಟಿವ್ (O+) ರಕ್ತದ ಗುಂಪಿನವರಾಗಿದ್ದು, ಲ್ಯಾಬ್ ಟೆಕ್ನಿಷಿಯನ್ ನಿರ್ಲಕ್ಷ್ಯದಿಂದಾಗಿ ತಪ್ಪಾಗಿ ಎ ಪಾಸಿಟಿವ್ (A+) ರಕ್ತ ನೀಡಲಾಗಿದ್ದು, ಪುನೀತ್ ಸ್ಥಿತಿ ಗಂಭೀರವಾಗಿತ್ತು. ಐಸಿಯುವಿನಲ್ಲಿ ಮುಂದುವರಿದ ಚಿಕಿತ್ಸೆಯಿಂದ ಇದೀಗ ಅವರ ಆರೋಗ್ಯ ಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ. ಈ ಎಡವಟ್ಟಿಗೆ ಕಾರಣವಾದ ಲ್ಯಾಬ್ ಟೆಕ್ನಿಷಿಯನ್ ಉಮೇಶ್ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಮೇರೆಗೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ಕಠಿಣ ಕ್ರಮ

O+ ರಕ್ತದ ಗುಂಪಿನವರಿಗೆ A ರಕ್ತಕಣಗಳ ವಿರುದ್ಧ ಪ್ರತಿಕಾಯಗಳು (antibodies) ಇರುತ್ತವೆ. ಆದ್ದರಿಂದ A+ ರಕ್ತ ನೀಡಿದಾಗ ದೇಹದ ರೋಗನಿರೋಧಕ ವ್ಯವಸ್ಥೆ, ರೋಗಿಗೆ ನೀಡಿದ ರಕ್ತವನ್ನು ಪರಕೀಯವೆಂದು ಗುರುತಿಸಿ ತಕ್ಷಣ ದಾಳಿ ಮಾಡುತ್ತದೆ.ಇದರಿಂದ ರೋಗಿಯ ದೇಹದಲ್ಲಿ ಅಪಾಯಕಾರಿ ಪ್ರತಿಕ್ರಿಯೆ ಉಂಟಾಗಬಹುದು. ಇದರಿಂದಾಗಿ ಜ್ವರ, ಉಸಿರಾಟದ ತೊಂದರೆ, ಎದೆನೋವು, ರಕ್ತದೊತ್ತಡ ಕುಸಿತ, ಮೂತ್ರಪಿಂಡಗಳ ವೈಫಲ್ಯ ಹಾಗೂ ಕೆಲ ಸಂದರ್ಭಗಳಲ್ಲಿ ಜೀವಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ.

ಹೀಗಾಗಿ ಪುನೀತ್​ರೊಂದಿಗೆ ನಡೆದ ಘಟನೆಯ ಬಳಿಕ ಆಸ್ಪತ್ರೆ ಸಿಬ್ಬಂದಿ ಹಾಗೂ ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ರೋಗಿಯ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ ನಡೆಯುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪ್ರಕರಣದ ಬಗ್ಗೆ ಶೀಘ್ರದಲ್ಲೇ ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆ ಆಡಳಿತ ಭರವಸೆ ನೀಡಿದೆ.

ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 12:39 pm, Sat, 27 December 25

Source link

Shani Dev: ಶನಿ ದೋಷದಿಂದ ಸಮಸ್ಯೆ ಎದುರಿಸುತ್ತಿದ್ದರೆ ಶನಿವಾರ ಈ ಪರಿಹಾರಗಳನ್ನು ಮಾಡಿ – Kannada News | Shani Dev Puja and Remedies: Appease Saturn God on Saturdays for Good Fortune

ಹಿಂದೂ ಧರ್ಮಗ್ರಂಥಗಳಲ್ಲಿ, ಶನಿ ದೇವರನ್ನು ಒಬ್ಬರ ಕರ್ಮಗಳಿಗೆ ಫಲ ಮತ್ತು ನ್ಯಾಯವನ್ನು ನೀಡುವ ದೇವರು ಎಂದು ಹೇಳಲಾಗುತ್ತದೆ. ಶನಿ ದೇವರು ಯಾರ ಮೇಲೆ ಆಶೀರ್ವಾದ ಮಾಡುತ್ತಾರೋ ಅವರು ಬಡವರಿಂದ ರಾಜರಾಗುತ್ತಾರೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಶನಿ ದೇವರು ಯಾರ ಮೇಲೆ ತನ್ನ ದುಷ್ಟ ದೃಷ್ಟಿಯನ್ನು ಬೀರುತ್ತಾರೋ ಅವರ ಜೀವನದಲ್ಲಿ ಬರೀ ಕಷ್ಟಗಳೇ ತುಂಬಿರುತ್ತವೆ. ಶನಿಯ ದುಷ್ಟ ದೃಷ್ಟಿ ಮಾನಸಿಕ ಒತ್ತಡ, ಕೆಲಸದಲ್ಲಿ ಅಡೆತಡೆಗಳು ಮತ್ತು ಹಠಾತ್ ನಷ್ಟಗಳಿಗೆ ಕಾರಣವಾಗುತ್ತದೆ.

ಹಿಂದೂ ಧರ್ಮಗ್ರಂಥಗಳಲ್ಲಿ, ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಈ ದಿನದಂದು ವಿಶೇಷ ಪ್ರಾರ್ಥನೆ ಮತ್ತು ಉಪವಾಸಗಳನ್ನು ಆಚರಿಸಲಾಗುತ್ತದೆ. ಶನಿ ದೇವರನ್ನು ಪೂಜಿಸುವುದರಿಂದ ಜೀವನದಲ್ಲಿನ ಅಡೆತಡೆಗಳು ದೂರವಾಗುತ್ತವೆ. ಶನಿ ದೇವರ ದುಷ್ಟ ದೃಷ್ಟಿಯನ್ನು ದೂರವಿಡಲು, ಶನಿವಾರದಂದು ಪ್ರಾರ್ಥನೆಗಳ ಜೊತೆಗೆ ಕೆಲವು ವಿಶೇಷ ಕ್ರಮಗಳನ್ನು ಪಾಲಿಸುವುದು ಅಗತ್ಯ.

ಶನಿವಾರ ಈ ಕ್ರಮಗಳನ್ನು ಮಾಡಿ:

ಅರಳಿ ಮರದ ಪೂಜೆ:

ಹಿಂದೂ ಧರ್ಮದಲ್ಲಿ ಅಶ್ವತ್ಥ ಮರವನ್ನು ಅತ್ಯಂತ ಪೂಜ್ಯವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದ ಪ್ರಕಾರ, ಶನಿವಾರ ಸೂರ್ಯೋದಯಕ್ಕೆ ಮೊದಲು ಅಶ್ವತ್ಥ ಮರವನ್ನು ಪೂಜಿಸುವುದರಿಂದ ಶನಿದೇವರು ಸಂತೋಷಪಡುತ್ತಾರೆ. ಶನಿವಾರದಂದು ಅಶ್ವತ್ಥ ಮರಕ್ಕೆ ನೀರು ಅರ್ಪಿಸಿ ಮತ್ತು ಎಣ್ಣೆ ದೀಪವನ್ನು ಬೆಳಗಿಸಿ. ಹಾಗೆ ಮಾಡುವುದರಿಂದ ಶನಿದೇವನ ಆಶೀರ್ವಾದ ಖಚಿತ.

ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ

ಶನಿವಾರ ದಾನ ಮಾಡಿ:

ಶನಿವಾರದಂದು ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡಿ. ಕಪ್ಪು ಎಳ್ಳು, ಕಪ್ಪು ಛತ್ರಿ, ಸಾಸಿವೆ ಎಣ್ಣೆ, ಕಪ್ಪು ಉದ್ದಿನ ಬೇಳೆ ಮತ್ತು ಪಾದರಕ್ಷೆಗಳನ್ನು ದಾನ ಮಾಡಿ. ಈ ವಸ್ತುಗಳನ್ನು ದಾನ ಮಾಡುವುದರಿಂದ ಜೀವನದಲ್ಲಿ ಸಮಸ್ಯೆಗಳು ಕಡಿಮೆಯಾಗುತ್ತವೆ, ಆರ್ಥಿಕ ಯೋಗಕ್ಷೇಮ ಸುಧಾರಿಸುತ್ತದೆ ಮತ್ತು ಶನಿ ದೇವರ ಆಶೀರ್ವಾದ ಬೇಗನೆ ಸಿಗುತ್ತದೆ.

ಶನಿ ಯಂತ್ರವನ್ನು ಪೂಜಿಸಿ:

ಶನಿವಾರದಂದು ಶನಿ ಯಂತ್ರವನ್ನು ಪೂಜಿಸಬೇಕು. ಶನಿ ಯಂತ್ರವನ್ನು ಪೂಜಿಸುವುದರಿಂದ ಶನಿ ದೇವರ ನಕಾರಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ. ಶನಿವಾರದಂದು ಮಾಂಸಾಹಾರ ಸೇವಿಸುವುದನ್ನು ತಪ್ಪಿಸಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅವತಾರ್ 3’ ಬಳಿಕ ಬಾಕ್ಸ್ ಆಫೀಸ್​​ನಲ್ಲಿ ಮುಗ್ಗರಿಸಿದ ಮತ್ತೊಂದು ಹಾಲಿವುಡ್ ಸಿನಿಮಾ – Kannada News | Anaconda 2025 movie fail to perform at Indian box office

ಭಾರತದ ಬಾಕ್ಸ್ ಆಫೀಸ್ (Box Office)​​ ವಿದೇಶಿ ಸಿನಿಮಾಗಳ ಪಾಲಿಗೆ ಚಿನ್ನದ ಗಣಿಯಾಗಿವೆ. ಹಾಲಿವುಡ್ ಸಿನಿಮಾಗಳಂತೂ ಭಾರತದಲ್ಲಿ ಮುಗಿಬಿದ್ದು ಸಿನಿಮಾ ಬಿಡುಗಡೆ ಮಾಡುತ್ತಿವೆ. ವಿಶೇಷ ಪ್ರಚಾರವನ್ನು ಸಹ ಮಾಡುತ್ತಿವೆ. ಸಿನಿಮಾ ನಿರ್ಮಾಣ ಹಂತದಲ್ಲಿಯೇ ಭಾರತದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಜನರು ಸಹ ಹಾಲಿವುಡ್ ಸಿನಿಮಾಗಳಿಗೆ ಭರಪೂರ ಪ್ರೀತಿಯನ್ನು ಇಲ್ಲಿಯ ಜನ ನೀಡಿದ್ದಾರೆ. ಆದರೆ ಇತ್ತೀಚೆಗೆ ಬಿಡುಗಡೆ ಆದ ಎರಡು ಹಾಲಿವುಡ್ ಸಿನಿಮಾಗಳ ಒಂದರ ನಂತರ ಇನ್ನೊಂದು ಮಕಾಡೆ ಮಲಿಗವೆ.

ಕಳೆದ ವಾರವಷ್ಟೆ ಬಿಡುಗಡೆ ಆದ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಭಾರಿ ನಿರೀಕ್ಷೆಗಳನ್ನು ಮೂಡಿಸಿತ್ತು. ಸಿನಿಮಾ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿತ್ತು. ಆದರೆ ಸಿನಿಮಾ ನಿರೀಕ್ಷಿತ ಮಟ್ಟದ ಪ್ರದರ್ಶನವನ್ನು ಬಾಕ್ಸ್ ಆಫೀಸ್​​ನಲ್ಲಿ ಕಾಣಲಿಲ್ಲ. ಸಿನಿಮಾ ಈ ವರೆಗೆ ಭಾರತದಲ್ಲಿ 100 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ಆದರೆ ಕಳೆದ ‘ಅವತಾರ್’ ಸಿನಿಮಾಗಳಿಗೆ ಹೋಲಿಸಿದರೆ ಇದು ಭಾರಿ ದೊಡ್ಡ ಗಳಿಕೆ ಅಲ್ಲ.

ಇದೀಗ ‘ಅವತಾರ್ 3’ ಸಿನಿಮಾದ ಬಳಿಕ ಮತ್ತೊಂದು ಹಾಲಿವುಡ್ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಮುಗ್ಗರಿಸಿದೆ. ‘ಅನಕೊಂಡ’ ಸಿನಿಮಾ ಸರಣಿ ವಿಶ್ವದ ಜನಪ್ರಿಯ ಸಿನಿಮಾ ಸರಣಿಗಳಲ್ಲಿ ಒಂದಾಗಿದೆ. ಇದೇ ಸಿನಿಮಾ ಸರಣಿಯ ಆರನೇ ಸಿನಿಮಾ ಎರಡು ದಿನದ ಹಿಂದೆಯಷ್ಟೆ ಭಾರತದಲ್ಲಿ ಬಿಡುಗಡೆ ಆಗಿದೆ. ಮೊದಲ ದಿನ 1.50 ಕೋಟಿ ರೂಪಾಯಿ ಹಣವನ್ನು ಸಿನಿಮಾ ಗಳಿಸಿತ್ತು. ಆದರೆ ಎರಡೇ ದಿನದಲ್ಲೇ ಸಿನಿಮಾ ಮುಗ್ಗರಿಸಿದೆ. ಎರಡನೇ ದಿನ ಒಂದು ಕೋಟಿ ರೂಪಾಯಿ ಹಣವನ್ನೂ ಸಹ ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿಲ್ಲ.

ಇದನ್ನೂ ಓದಿ:ಬಾಕ್ಸ್ ಆಫೀಸ್ ದೂಳಿಪಟ ಮಾಡುತ್ತಿರುವ ‘ಧುರಂಧರ್’, ಮಂಕಾದ ‘ಅವತಾರ್’

ಪೌಲ್ ರುಡ್ ಮತ್ತು ಜಾಕ್ ಬ್ಲಾಕ್ ಅವರುಗಳು ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ಟಾಮ್ ಜಾರ್ಮಿಕನ್ ನಿರ್ದೇಶನ ಮಾಡಿದ್ದಾರೆ. ‘ಅನಕೊಂಡ’ ಸಿನಿಮಾವು ಹಾಸ್ಯದ ಜೊತೆಗೆ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ಈ ಸಿನಿಮಾಕ್ಕೆ ಸುಮಾರು 400 ಕೋಟಿಗೂ ಹೆಚ್ಚು ಮೊತ್ತದ ಬಜೆಟ್ ಹಾಕಲಾಗಿದೆ. ಆದರೆ ಸಿನಿಮಾ ಬಿಡುಗಡೆ ಆಗಿ ಈ ವರೆಗೆ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 80 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ.

ಸಿನಿಮಾ ಸುದ್ದಿಗಳಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನವ ವಿವಾಹಿತೆ ಆತ್ಮಹತ್ಯೆ ಕೇಸ್: ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ! ಗಾನವಿ ಅಮ್ಮ ನೋವಿನ ಮಾತು – Kannada News | Bengaluru Newlywed Woman Death Case: Mother Alleges Harassment by Mother in Law, Reveals Painful Details

ಬೆಂಗಳೂರು, ಡಿಸೆಂಬರ್ 27: ಬೆಂಗಳೂರಿನಲ್ಲಿ ನವ ವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ದೊರೆತಿದೆ. ಗಾನವಿ ಪತಿಯೂ ಆತ್ಮಹತ್ಯೆಗೆ ಶರಣಾಗಿದ್ದು, ಆತನ ತಾಯಿ ಸಹ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಗಾನವಿ ತಾಯಿ ಮಾತನಾಡಿದ್ದು, ಆಕೆಗೆ ಗಂಡ ಮನೆಯಲ್ಲಿ ಬಹಳ ಹಿಂಸೆ ನೀಡಲಾಗುತ್ತಿತ್ತು ಎಂದಿದ್ದಾರೆ.

ಮದುವೆಯಾದ ಒಂದೂವರೆ ತಿಂಗಳಾದರೂ ಗಾನವಿಗೆ ಪತಿಯಿಂದ ಪ್ರೀತಿ ಸಿಕ್ಕಿರಲಿಲ್ಲ. ಅತ್ತೆ ತನ್ನ ಮಗಳನ್ನು ಪತಿಯ ಪಕ್ಕದಲ್ಲಿ ಕುಳಿತುಕೊಳ್ಳಲೂ ಬಿಡುತ್ತಿರಲಿಲ್ಲ. ಸರಿಯಾಗಿ ಊಟ ನೀಡದೆ ಸತಾಯಿಸುತ್ತಿದ್ದರು. ಆದರೂ ಗಾನವಿ ಗಂಡನ ಪ್ರೀತಿಗಾಗಿ ಗಾನವಿ ಹಾತೊರೆಯುತ್ತಿದ್ದಳು. ‘ನನ್ನನ್ನು ವಾಪಸ್ ಕಳುಹಿಸಬೇಡಿ, ನಾನು ಇಲ್ಲೇ ಬದುಕುತ್ತೇನೆ, ನನಗೆ ಪ್ರೀತಿ ಕೊಡಿ ಸಾಕು’ ಎಂದು ಗಾನವಿ ತನ್ನ ಅತ್ತೆಯನ್ನು ಬೇಡಿಕೊಂಡಿದ್ದಳು. ಗ್ರಾಮದಲ್ಲಿ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ವಿಚ್ಛೇದನಕ್ಕೆ ಹಿಂಜರಿಯುತ್ತಿದ್ದಳು ಎಂದು ತಾಯಿ ಹೇಳಿದ್ದಾರೆ. ಗಾನವಿ ಗಂಡ ಸೂರಜ್ ಆತ್ಮಹತ್ಯೆಗೆ ಆತ ಆಕೆಗೆ ಮಾಡಿದ ಮೋಸದ ತಪ್ಪಿತಸ್ಥ ಭಾವನೆಯೇ ಕಾರಣ ಎಂದು ಗಾನವಿ ತಾಯಿ ಆರೋಪಿಸಿದ್ದಾರೆ.

ವಿವರಗಳಿಗೆ ಓದಿ: ನವವಿವಾಹಿತೆ ಸೂಸೈಡ್ ಕೇಸ್​ಗೆ ಬಿಗ್ ಟ್ವಿಸ್ಟ್: ನಾಗಪುರದಲ್ಲಿ ಆತ್ಮಹತ್ಯೆಗೆ ಶರಣಾದ ಗಾನವಿ ಪತಿ ಸೂರಜ್!

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್ – Kannada News | Mark Kannada movie thanks giving press meet LIVE

ಸುದೀಪ್ ನಟನೆಯ ‘ಮಾರ್ಕ್’ (Mark) ಸಿನಿಮಾ ಇದೇ ಗುರುವಾರ (ಡಿಸೆಂಬರ್ 25) ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಮೊದಲೆರಡು ದಿನ ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಹ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಿನಿಮಾ ಬಿಡುಗಡೆಗೆ ಮುಂಚೆ, ‘ಮಾರ್ಕ್’ ಸಿನಿಮಾ ವಿರುದ್ಧ ಸಂಚು ನಡೆದಿತ್ತು, ಸಿನಿಮಾ ಅನ್ನು ಸೋಲಿಸಿಯೇ ಸಿದ್ಧ ಎಂದು ಕೆಲವರು ಸವಾಲು ಹಾಕಿದ್ದರು. ಇದರ ನಡುವೆಯೂ ಸಿನಿಮಾ ಗೆಲುವಿನತ್ತ ದಾಪುಗಾಲು ಹಾಕಿದೆ. ಇದೇ ಕಾರಣಕ್ಕೆ ಸುದೀಪ್ ಸೇರಿದಂತೆ ‘ಮಾರ್ಕ್’ ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿದ್ದು, ಸಿನಿಮಾ ನಿರ್ಮಾಣ ಮತ್ತು ಗೆಲುವಿಗೆ ಕಾರಣರಾದವರಿಗೆ ಧನ್ಯವಾದ ಹೇಳಲಿದೆ. ಕಾರ್ಯಕ್ರಮದ ಲೈವ್ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Ashes 2025: 14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..! – Kannada News | England Won 4th Ashes Test vs Australia

ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯ ಗೆಲ್ಲುವ ಇಂಗ್ಲೆಂಡ್ ತಂಡದ 14 ವರ್ಷಗಳ ಕನಸು ಕೊನೆಗೂ ಈಡೇರಿದೆ. ಮೆಲ್ಬೋರ್ನ್​ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯ ಗೆದ್ದಿದ್ದು 2011 ರಲ್ಲಿ.

2011 ರಲ್ಲಿ ನಡೆದ ಆ್ಯಶಸ್ ಸರಣಿಯ  ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು ಇನ್ನಿಂಗ್ಸ್ ಮತ್ತು 83 ರನ್‌ಗಳಿಂದ ಸೋಲಿಸಿತ್ತು. ಈ ಅಮೋಘ ಗೆಲುವಿನ ನಂತರ ಆಂಗ್ಲ ಪಡೆ ಒಮ್ಮೆಯೂ ಕಾಂಗರೂನಾಡಿನಲ್ಲಿ ಟೆಸ್ಟ್ ಪಂದ್ಯ ಗೆದ್ದಿರಲಿಲ್ಲ ಎಂಬುದೇ ಅಚ್ಚರಿ.

ಈ ಹದಿನಾಲ್ಕು ವರ್ಷಗಳಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾದಲ್ಲಿ 18 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಇಂಗ್ಲೆಂಡ್ 16 ಮ್ಯಾಚ್​ಗಳಲ್ಲಿ ಸೋಲನುಭವಿಸಿದರೆ, 2 ಪಂದ್ಯಗಳನ್ನು ಆಸ್ಟ್ರೇಲಿಯಾ ಡ್ರಾ ಮಾಡಿಕೊಂಡಿತ್ತು. ಅಂದರೆ ಕಳೆದ ಒಂದು ದಶಕದಿಂದ ಇಂಗ್ಲೆಂಡ್ ವಿರುದ್ಧ ಆಸೀಸ್ ಪಡೆ ತವರಿನಲ್ಲಿ ಒಂದೇ ಒಂದು ಪಂದ್ಯದಲ್ಲಿ ಸೋತಿರಲಿಲ್ಲ.

ಇದೀಗ ಆಸ್ಟ್ರೇಲಿಯಾ ತಂಡದ ಈ ಗೆಲುವಿನ ನಾಗಲೋಟಕ್ಕೆ ಇಂಗ್ಲೆಂಡ್ ತಂಡ ಬ್ರೇಕ್ ಹಾಕಿದೆ. ಮೆಲ್ಬೋರ್ನ್​ ಮೈದಾನದಲ್ಲಿ ಆತಿಥೇಯರನ್ನು 4 ವಿಕೆಟ್​ಗಳಿಂದ ಸೋಲಿಸಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ಪಿಚ್​ನಲ್ಲಿ 14 ವರ್ಷಗಳ ಬಳಿಕ ಗೆಲುವಿನ ನಗೆ ಬೀರಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್, ಜೇಕ್ ವೆದರಾಲ್ಡ್, ಮಾರ್ನಸ್ ಲ್ಯಾಬುಶೇನ್, ಸ್ಟೀವ್ ಸ್ಮಿತ್ (ನಾಯಕ), ಉಸ್ಮಾನ್ ಖ್ವಾಜಾ, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್, ಮೈಕೆಲ್ ನೇಸರ್, ಜ್ಯೇ ರಿಚರ್ಡ್ಸನ್.

ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಜೇಕಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್, ವಿಲ್ ಜ್ಯಾಕ್ಸ್, ಬ್ರೈಡನ್ ಕಾರ್ಸ್​, ಗಸ್ ಅಟ್ಕಿನ್ಸನ್, ಜೋಶ್ ಟಂಗ್.

 

 

Source link

ಬೆಂಗಳೂರು: ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಕಿರುಕುಳ ನೀಡಿದ ಮೂವರು ಪುಂಡರು – Kannada News | Bengaluru BTM Layout Harassment: Viral Video Leads to Police Action 

ಬೆಂಗಳೂರು, ಡಿ. 27: ಬೆಂಗಳೂರಿನ ಬಿಟಿಎಂ ಲೇ ಔಟ್ ನಲ್ಲಿ ತಡರಾತ್ರಿ ಯುವತಿಗೆ ಮೂವರು ಪುಂಡರು ಕಿರುಕುಳ ನೀಡಿದ್ದಾರೆ. ಒಂದೇ ಬೈಕ್‌ನಲ್ಲಿದ್ದ ಮೂವರು ಯುವತಿಗೆ ಕಿರುಕುಳ ನೀಡಿಲಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸುಮಾರು ಎರಡು ಕಿಲೋ ರಸ್ತೆಯುದ್ದಕ್ಕೂ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಈ ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಮುಂದೆಯಿಂದ ಹೋಗುತ್ತಿದ್ದ ಯುವತಿಯನ್ನು ಹಿಂದಿನಿಂದ ಬಂದ ಮೂವರು ಒಂದೇ ಬೈಕ್​​ನಲ್ಲಿ ಫಾಲೋ ಮಾಡಿಕೊಂಡು ಬಂದಿದ್ದಾರೆ. ಜತೆಗೆ ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್​​ನಲ್ಲಿ ಓಡಿಸಿದ್ದಾರೆ. ಈ ಪುಂಡರು ಯುವತಿಗೆ ಕಿರುಕುಳ ನೀಡುತ್ತಿರುವುದನ್ನು ಬೈಕ್​​ನ ಹಿಂದೆ ಬರುತ್ತಿದ್ದ ಕಾರು ಚಾಲಕ ವಿಡಿಯೋ ಮಾಡಿದ್ದಾರೆ. ವಿಡಿಯೋವನ್ನು ಎಕ್ಸ್​​​ನಲ್ಲಿ ಹಂಚಿಕೊಂಡು, ಬೆಂಗಳೂರು ಪೊಲೀಸರಿಗೆ ಟ್ಯಾಗ್​ ಮಾಡಿದ್ದಾರೆ. ಇದಕ್ಕೆ ಪೊಲೀಸರು ಕೂಡ ಎಕ್ಸ್​​ ಮೂಲಕವೇ ಬೈಕ್‌ ನಂಬರ್ ಪತ್ತೆ ಮಾಡಿದ್ದು, ಮೂವರನ್ನು ವಿಚಾರಣೆ ಮಾಡೋದಾಗಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ನಿಮ್ಮ ಸಂಬಂಧಿಕರು ಕಸ್ಟಮ್ಸ್‌ ಬಲೆಗೆ ಬಿದ್ದಿದ್ದಾರೆ ಎಂದು ಕರೆ ಬಂದರೆ ಎಚ್ಚರ! ಏರ್​ಪೋರ್ಟ್​ ಕಸ್ಟಮ್ಸ್ ಇಲಾಖೆ ಹೈ ಅಲರ್ಟ್​ – Kannada News | Bengaluru Customs Fraud: Fake Officers Target Public, Customs issues high alert at Bengaluru airport

ಬೆಂಗಳೂರು, ಡಿಸೆಂಬರ್ 27: ಬೆಂಗಳೂರಿನಲ್ಲಿ (Bengaluru) ಕಸ್ಟಮ್ಸ್ ಅಧಿಕಾರಿಗಳಂತೆ ನಟಿಸಿ ಜನರನ್ನು ವಂಚಿಸುವ ವಂಚನಾ ಜಾಲ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆ ಸಾರ್ವಜನಿಕರಿಗೆ ಹೈ ಅಲರ್ಟ್ ನೀಡಿದೆ. ವಂಚಕರ ಜಾಲದಿಂದ ತಪ್ಪಿಸಿಕೊಳ್ಳಲು ಜಾಗರೂಕರಾಗಿರುವುದರ ಜೊತೆಗೆ ವಂಚನೆಗೊಳಗಾದ ಸಮದರ್ಭದಲ್ಲಿ ಸೈಬರ್ ಕ್ರೈಂ ಹೆಲ್ಪ್‌ಲೈನ್ಗೆ ಕರೆ ಮಾಡುವಂತೆ ಕಸ್ಟಮ್ಸ್ ಇಲಾಖೆ ಎಚ್ಚರಿಸಿದೆ.

ಆರ್ಥಿಕವಾಗಿ ಹಿಂದುಳಿದ ವರ್ಗದ ಜನರೇ ಇವರ ಟಾರ್ಗೆಟ್

ಕಸ್ಟಮ್ಸ್ ಅಧಿಕಾರಿಗಳೆಂದು ಹೇಳಿಕೊಂಡು, ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ಕಸ್ಟಮ್ಸ್‌ನಲ್ಲಿ ತಡೆಹಿಡಿದಿದ್ದೇವೆ ಎಂದು ಸುಳ್ಳು ಹೇಳಿ, ಸಮಸ್ಯೆ ಬಗೆಹರಿಸಲು ಹಣ ಪಾವತಿಸಬೇಕು ಎಂದು ಬೆದರಿಸಿ ಹಣ ದೋಚಲಾಗುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ವಂಚಕರು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರನ್ನು ಗುರಿಯಾಗಿಸಿಕೊಂಡು, ಫೋನ್ ಕರೆ, ಸಾಮಾಜಿಕ ಜಾಲತಾಣ ಮತ್ತು ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಭಯ ಸೃಷ್ಟಿಸಿ ವಂಚನೆ ಮಾಡುತ್ತಿದ್ದಾರೆ. ಪ್ರಯಾಣಿಕನೊಬ್ಬ ಕಸ್ಟಮ್ಸ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ, ತಕ್ಷಣ ದಂಡ ಅಥವಾ ಸುಂಕ ಪಾವತಿಸದಿದ್ದರೆ ಜೈಲು ಶಿಕ್ಷೆ ಅಥವಾ ಕಿರುಕುಳ ಎದುರಾಗಲಿದೆ ಎಂದು ಬೆದರಿಸುತ್ತಾರೆ ಎಂದು ಹೇಳಲಾಗಿದೆ.

ವಂಚಕರ ಜಾಲ ಹೇಗಿರುತ್ತೆ ನೋಡಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಸ್ಟಮ್ಸ್ ಕಮಿಷನರ್, ಕಸ್ಟಮ್ಸ್ ಅಧಿಕಾರಿಗಳು ಎಂದಿಗೂ ಫೋನ್, ವಾಟ್ಸಾಪ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಹಣ ಕೇಳುವುದಿಲ್ಲ. ವೈಯಕ್ತಿಕ ಬ್ಯಾಂಕ್ ಖಾತೆ, ಯುಪಿಐ ಅಥವಾ ಡಿಜಿಟಲ್ ವಾಲೆಟ್‌ಗೆ ಹಣ ವರ್ಗಾಯಿಸಲು ಹೇಳುವುದಿಲ್ಲ. ಎಲ್ಲಾ ಸರ್ಕಾರಿ ಪಾವತಿಗಳು ಅಧಿಕೃತ ಕೌಂಟರ್ ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ರಸೀದಿಯೊಂದಿಗೆ ಮಾತ್ರ ನಡೆಯುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.

ವಂಚಕರ ಜಾಲವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಧಿಕಾರಿಗಳು, ಮೊದಲಿಗೆ ಆನ್‌ಲೈನ್‌ನಲ್ಲಿ ಸಂಪರ್ಕಿಸಿ ನಂತರ ಸಂಬಂಧಿಕ ಅಥವಾ ಸ್ನೇಹಿತ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ ಎಂದು ಹೇಳುತ್ತಾರೆ. ಹಣ ವರ್ಗಾವಣೆ ಮಾಡಿದ ತಕ್ಷಣ ಸಂಪರ್ಕ ಕಡಿತಗೊಳಿಸುತ್ತಾರೆ ಎಂದು ವಿವರಿಸಿದ್ದಾರೆ.

ವಂಚನೆಯ ಕರೆಗಳು ಬಂದಲ್ಲಿ ಇಲಾಖೆಯನ್ನೇ ಸಂಪರ್ಕಿಸಿ

ಸುಂಕ ಪಾವತಿ ವಿಚಾರದಲ್ಲಿ ಯಾವುದೇ ಪ್ರಯಾಣಿಕನಿಗೂ ಕಿರುಕುಳ ನೀಡುವುದಿಲ್ಲವೆಂದು ಹೇಳಿರುವ ಕಸ್ಟಮ್ಸ್ ಇಲಾಖೆ, ಎಲ್ಲಾ ಪ್ರಕ್ರಿಯೆಗಳು ಸಿಸಿಟಿವಿ ಮೇಲ್ವಿಚಾರಣೆಯಲ್ಲೇ ನಡೆಯುತ್ತವೆ ಎಂದು ತಿಳಿಸಿದೆ. ಇಂತಹ ವಂಚನೆಯ ಕರೆಗಳು ಬಂದಲ್ಲಿ commrapacc-cusblr@gov.in ಗೆ ಇಮೇಲ್ ಮಾಡುವಂತೆ ಅಥವಾ ಸೈಬರ್ ಕ್ರೈಂ ಹೆಲ್ಪ್‌ಲೈನ್ 1930 ಗೆ ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ವಂಚಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Source link

Exit mobile version