ಬರೋಬ್ಬರಿ 94 ವರ್ಷಗಳ ಬಳಿಕ ಬಾಕ್ಸಿಂಗ್ ಡೇನಲ್ಲಿ 20 ವಿಕೆಟ್..!
ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯದ ಮೊದಲ ದಿನವೇ 20 ವಿಕೆಟ್ಗಳು ಉರುಳಿವೆ. ಅಂದರೆ ಒಂದೇ ದಿನವೇ ಎರಡೂ ತಂಡಗಳು ಆಲೌಟ್ ಆಗಿವೆ. ಆಸ್ಟ್ರೇಲಿಯಾದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ನ ಮೊದಲ ದಿನ 20 ವಿಕೆಟ್ಗಳು ಉರುಳಿರುವುದು 94 ವರ್ಷಗಳ ಬಳಿಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಕೇವಲ 152 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 110 ರನ್ಗಳಿಗೆ ಸರ್ವಪತನ ಕಂಡಿದೆ. ಅಂದರೆ ಉಭಯ…