Gold Rate Today Bangalore: ಮೈಝುಮ್ಮೆನಿಸುವಷ್ಟು ಜಿಗಿದ ಚಿನ್ನ, ಬೆಳ್ಳಿ ಬೆಲೆ – Kannada News | Gold Price Today on 27th December 2025, Gold And Silver Rates In Bengaluru, Delhi, Mumbai | Latest News in Kannada
ಬೆಂಗಳೂರು, ಡಿಸೆಂಬರ್ 27: ಚಿನ್ನ, ಬೆಳ್ಳಿ ಬೆಲೆಗಳ ಸತತ ಏರಿಕೆ ಮುಂದುವರಿಯುತ್ತಲೇ ಇದೆ. ಶನಿವಾರ ಚಿನ್ನದ ಬೆಲೆ (Gold Rate) 110 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ ಚೆನ್ನೈನಲ್ಲಿ 13,000 ರೂ ಗಡಿ ಮುಟ್ಟಿದೆ. ವಿದೇಶಗಳಲ್ಲೂ ಚಿನ್ನದ ಬೆಲೆ ಇಂದು ಏರಿದೆ. ಬೆಳ್ಳಿ ಬೆಲೆಯಂತೂ ಜಿಗಿಜಿಗಿದು ಓಡುವುದು ಮುಂದುವರಿದಿದೆ. ಶನಿವಾರ ಒಂದು ಗ್ರಾಮ್ ಬೆಳ್ಳಿ ಬೆಲೆ 11 ರೂ ಹೆಚ್ಚಳಗೊಂಡು 251 ರೂ ಮುಟ್ಟಿದೆ. ಚೆನ್ನೈನಲ್ಲಂತೂ ಇದರ ಬೆಲೆ 274 ರೂಗೆ ಏರಿದೆ. ವರ್ಷದ ಹಿಂದೆ…