ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ಕನ್ನಡದಲ್ಲಿರುವ ಫಲಕಕ್ಕೆ ತೆಲುಗು ಭಾಷಿಕರ ವಿರೋಧ – Kannada News | Mantralaya Language Row: Telugu Speakers Oppose Kannada Signboard at Temple Entrance

ರಾಯಚೂರು, ಡಿಸೆಂಬರ್​​ 27: ಆಂಧ್ರ ಮತ್ತು ರಾಯಚೂರು ಗಡಿಯ ಮಂತ್ರಾಲಯದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭಾಷಾ ವಿವಾದ ತಟ್ಟಿದೆ. ಮಠದ ಮುಖ್ಯ ದ್ವಾರದಲ್ಲಿ ಕನ್ನಡದಲ್ಲಿ ಬರೆಯಲಾಗಿರುವ ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಎಂಬ ಶ್ಲೋಕದ ಫಲಕಕ್ಕೆ ತೆಲುಗು ಭಾಷಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಂತ್ರಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಗೆ ಸೇರಿದ್ದರಿಂದ, ಇಲ್ಲಿ ತೆಲುಗು ಭಾಷೆಯಲ್ಲಿ ಫಲಕ ಇರಬೇಕು ಎಂದು ಅವರು ವಾದಿಸುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಂಧ್ರಪ್ರದೇಶ ಸಿಎಂ ಮತ್ತು ಉಪಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಫಲಕ ಇಂದು ನಿನ್ನೆಯದಲ್ಲ, ಹಲವು ವರ್ಷಗಳಿಂದಲೂ ಕನ್ನಡದಲ್ಲಿಯೇ ಇದೆ ಎಂದು ವರದಿಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

“ತಾಯಂದಿರಿಗಾಗಿ ಕಾಯ್ದಿರಿಸಲಾಗಿದೆ”: ಬೆಂಗಳೂರು ಮಾಲ್‌ನಲ್ಲಿ ಗರ್ಭಿಣಿಯರಿಗಾಗಿ ವಿಶೇಷ ಪಾರ್ಕಿಂಗ್ ವ್ಯವಸ್ಥೆ – Kannada News | Pregnant Women Parking Goes Viral: Bengaluru Nexus Mall’s Thoughtful Concept

ಬೆಂಗಳೂರು , ಡಿ.27: ಗರ್ಭಿಣಿಯರಿಗೆ (pregnant women) ಮೀಸಲಾದ ಪಾರ್ಕಿಂಗ್ ಸ್ಥಳದ ಒಂದು ವಿಡಿಯೋವನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಮಾಲ್​​​ವೊಂದರಲ್ಲಿ ಈ ದೃಶ್ಯ ಕಂಡು ಬಂದಿದೆ. ಮಹಿಳೆಯರಿಗಾಗಿ, ಅದರಲ್ಲೂ ಗರ್ಭಿಣಿಯರಿಗೆ ಈ ವಿಶೇಷ ಪಾರ್ಕಿಂಗ್​​ ವ್ಯವಸ್ಥೆಯನ್ನು ಮಾಡಲಾಗಿದೆ. ಇದೀಗ ಮಾಲ್​​ನ ಈ ಪರಿಕಲ್ಪನೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಮಾಲ್​​​ನ ಪಾರ್ಕಿಂಗ್ ಪ್ರದೇಶದಲ್ಲಿ ಒಂದು ಸಣ್ಣದಾಗಿ ಗರ್ಭಿಣಿಯರಿಗಾಗಿ ವಿಶೇಷ ಪಾರ್ಕಿಂಗ್​​ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬಗ್ಗೆ ವಿಡಿಯೋವೊಂದನ್ನು ಅಕ್ಷಯ್ ರೈನಾ ಎಂಬುವವರು ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದು “ತಾಯಂದಿರಿಗಾಗಿ ಕಾಯ್ದಿರಿಸಲಾಗಿದೆ” ಎಂಬ ಬೋರ್ಡ್​​ನ್ನು ಕೂಡ ಈ ಪಾರ್ಕಿಂಗ್​ ಸ್ಥಳದಲ್ಲಿ ಹಾಕಲಾಗಿದೆ. ಗುಲಾಬಿ ಥೀಮ್‌ ಮೂಲಕ ಈ ಪಾರ್ಕಿಂಗ್​​ ಸ್ಥಳವನ್ನು ವಿನ್ಯಾಸ ಮಾಡಲಾಗಿದೆ. ಇದು ತುಂಬಾ ವಿಶೇಷವಾಗಿ ಕಂಡು ಬಂದಿದೆ. ದೊಡ್ಡ ಶಾಪಿಂಗ್ ಮಾಲ್​​ನಲ್ಲಿ ಜನ ಹಾಗೂ ವಾಹನ ದಟ್ಟಣೆ ಇರುವುದು ಸಹಜ. ಇದರಿಂದ ಗರ್ಭಿಣಿಯರಿಗೆ ಯಾವುದೇ ತೊಂದರೆ ಆಗಬಾರದು ಎಂದು ಈ ವ್ಯವಸ್ಥೆಯನ್ನು ಮಾಡಲಾಗಿದೆ. ಪಿಂಕ್​​ ಕಲರ್​​​ನಿಂದ ಈ ಪಾರ್ಕಿಂಗ್​​ ಸ್ಥಳವನ್ನು ಅಲಂಕಾರ ಮಾಡಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ದೃಶ್ಯದ ಬಗ್ಗೆ ಅಕ್ಷಯ್ ರೈನಾ ಅದ್ಭುತವಾಗಿ ವಿವರಿಸಿದ್ದಾರೆ. “ತುಂಬಾ ಒಳ್ಳೆಯ ಪರಿಕಲ್ಪನೆ ಮತ್ತು ನನಗೆ ಅದು ತುಂಬಾ ಇಷ್ಟವಾಯಿತು. ಈ ದೃಶ್ಯ ಕಂಡು ಬಂದದ್ದು ನೆಕ್ಸಸ್ ಮಾಲ್​​ನಲ್ಲಿ, ಸಾಂಪ್ರದಾಯಿಕ ಸೌಲಭ್ಯಗಳನ್ನು ಮೀರಿ ಯೋಚಿಸಿದ್ದಕ್ಕಾಗಿ ಮಾಲ್ ಆಡಳಿತ ಮಂಡಳಿಗೆ ಧನ್ಯವಾದಗಳು” ಎಂದು ಹೇಳಿದ್ದಾರೆ. ಮಹಿಳೆಯರಿಗೆ, ವಿಶೇಷವಾಗಿ ತಾಯಂದಿರಿಗೆ ಪ್ರತ್ಯೇಕ ಸ್ಥಳವನ್ನು ಇಟ್ಟುಕೊಂಡಿರುವ ಬೆಂಗಳೂರಿನ ನೆಕ್ಸಸ್‌ಮಾಲ್‌ಗಳಿಗೆ ಹ್ಯಾಟ್ಸ್ ಆಫ್. ಭಾರತದ ಇತರ ಎಲ್ಲಾ ಮಾಲ್‌ಗಳು ಇದನ್ನು ಜಾರಿಗೆ ತರಬೇಕು ಎಂದು ಈ ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಕಿರುಕುಳ ನೀಡಿದ ಮೂವರು ಪುಂಡರು

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಅನೇಕರು ಈ ವಿಡಿಯೋವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಸಹಾಯಕವಾಗಿದೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಇದು ಮಾಲ್‌ಗಳ ಜನದಟ್ಟಣೆ ಮತ್ತು ಗೊಂದಲಮಯ ಪಾರ್ಕಿಂಗ್‌ನಲ್ಲಿ ಬಹಳ ಅವಶ್ಯಕವಾದ ಸ್ಥಳವಾಗಿದೆ, ಇದರಿಂದಾಗಿ ತಾಯಂದಿರು ತಮ್ಮ ವಾಹನವನ್ನು ಸುಲಭವಾಗಿ ನಿಲ್ಲಿಸಿ ಮಾಲ್‌ಗೆ ಸುಲಭವಾಗಿ ಹೋಗಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ನೋಡಲು ತುಂಬಾ ಹೃದಯಸ್ಪರ್ಶಿಯಾಗಿದೆ ಎಂದು ಇನ್ನೊಬ್ಬರು ಕಮೆಂಟ್​​ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್ – Kannada News | Bigg Boss Kannada 12: This week there will be double elimination

ಬಿಗ್​​ಬಾಸ್​​ನಲ್ಲಿ (Bigg Boss) ಈ ವಾರ ಫ್ಯಾಮಿಲಿ ವಾರವಾಗಿತ್ತು. ಸ್ಪರ್ಧಿಗಳು ಕುಟುಂಬ ಸದಸ್ಯರೊಡನೆ ಮಜವಾಗಿ ಸಮಯ ಕಳೆದರು. ಆದರೆ ವಾರಾಂತ್ಯದಲ್ಲಿ ಬಿಗ್​​ಬಾಸ್, ಸ್ಪರ್ಧಿಗಳಿಗೆ ಸಖತ್ ಶಾಕ್ ನೀಡಿದ್ದಾರೆ. ಈ ವಾರ ಮನೆಯಿಂದ ಒಬ್ಬರಲ್ಲ ಬದಲಿಗೆ ಇಬ್ಬರು ಹೊರಗೆ ಹೋಗಲಿದ್ದಾರೆ. ಬಿಗ್​​ಬಾಸ್ ಮನೆಗೆ ಈ ವಾರ ಕೆಲವು ಸೆಲೆಬ್ರಿಟಿಗಳು ಬಂದಿದ್ದಾರೆ, ನಿರ್ದೇಶಕ ಪ್ರೇಮ್ ಸೇರಿದಂತೆ ಇನ್ನೂ ಕೆಲವರು ಬಿಗ್​​ಬಾಸ್ ಮನೆಗೆ ಬಂದಿದ್ದು, ಸ್ಪರ್ಧಿಗಳು ಸಹ ಸಖತ್ ಎಂಜಾಯ್ ಮಾಡಿದ್ದಾರೆ. ಆದರೆ ಎಲ್ಲದರ ಅಂತ್ಯದಲ್ಲಿ ಡಬಲ್ ಎಲಿಮಿನೇಷನ್ ಎಂಬುದು ಮನೆ ಮಂದಿಗೆ ಶಾಕ್ ನೀಡಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ದೆವ್ವ ಹಿಡಿದಿದೆ ಎಂದು ಕಟ್ಟಿಗೆಯಿಂದ ಹೊಡೆದು ಕೊಲೆ: ಕಲಬುರಗಿ ಮೂಲದ ಮಹಿಳೆ ಮಹಾರಾಷ್ಟ್ರದಲ್ಲಿ ಸಾವು – Kannada News | Kalaburagi Woman Beaten to Death Over ‘Devil Possession’

ದೆವ್ವ ಹಿಡಿದಿದೆ ಎಂದು ಕಟ್ಟಿಗೆಯಿಂದ ಹೊಡೆದ ಪಾಪಿಗಳು!

ಕಲಬುರಗಿ, ಡಿಸೆಂಬರ್ 27: ತಂತ್ರಜ್ಞಾನ ಯುಗದಲ್ಲಿಯೂ ಮೂಢನಂಬಿಕೆಗಳ ಅಂಧಕಾರ ಇನ್ನೂ ಜೀವಂತವಾಗಿರುವುದಕ್ಕೆ ಕಲಬುರಗಿಯ (Kalaburagi) ಮಹಿಳೆಯೊಬ್ಬರ ದಾರುಣ ಸಾವು ಸಾಕ್ಷಿಯಾಗಿದೆ. ದೆವ್ವ ಹಿಡಿದಿದೆ ಎಂಬ ಅಸಂಬದ್ಧ ನಂಬಿಕೆಯ ಹೆಸರಿನಲ್ಲಿ ಮಹಿಳೆಯನ್ನು ಬೇವಿನ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮುರುಮ್ ಗ್ರಾಮದಲ್ಲಿ ನಡೆದಿದೆ.

ಬೇವಿನ ಕಟ್ಟಿಗೆಯಿಂದ ಹಲ್ಲೆ

ಕೊಲೆಯಾದ ಮಹಿಳೆಯನ್ನು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ವೆಂಕಟೇಶ್ವರ ನಗರ ನಿವಾಸಿ ಮುಕ್ತಬಾಯಿ ಎಂದು ಗುರುತಿಸಲಾಗಿದೆ. ಸುಮಾರು ಆರು ವರ್ಷಗಳ ಹಿಂದೆ ಮುಕ್ತಬಾಯಿಗೆ ಮುರುಮ್ ಗ್ರಾಮದ ಗಿಡ್ಡೆಪ್ಪ ಎಂಬುವನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಐದು ವರ್ಷದ ಗಂಡು ಮಗನೂ ಇದ್ದನು. ಇತ್ತೀಚಿನ ದಿನಗಳಲ್ಲಿ ಮುಕ್ತಬಾಯಿಗೆ ದೆವ್ವ ಹಿಡಿದಿದೆ ಎಂದು ಆರೋಪಿಸಿದ ಗಂಡನ ಮನೆಯವರು, ಆಕೆಯ ಮೇಲೆ ಪದೇಪದೇ ಬೇವಿನ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ.

ಹೆಚ್ಚಿನ ಮಾಹಿತಿಗೆ ವೀಡಿಯೋ ನೋಡಿ

ಐದು ವರ್ಷದ ಮಗನ ಎದುರಲ್ಲೇ ಥಳಿತ

ಈ ಬಗ್ಗೆ ಮಾತನಾಡಿದ ಮೃತಳ ತಾಯಿ ತಿಪ್ಪವ್ವ, ಮಗಳಿಗೆ ಯಾವುದೇ ದೆವ್ವ ಹಿಡಿದಿಲ್ಲ. ಅವಳನ್ನು ಹಿಂಸಿಸಬೇಡಿ ಎಂದು ಮನವಿ ಮಾಡಿದರೂ ಆಕೆಯ ಮಾತು ಕೇಳಲಿಲ್ಲ. ನಿನ್ನೆ ಗಂಡ ಮನೆಯಲ್ಲಿ ಇಲ್ಲದ ವೇಳೆ, ಐದು ವರ್ಷದ ಮಗನ ಎದುರಲ್ಲೇ ಮುಕ್ತಬಾಯಿಯ ಮೇಲೆ ಭೀಕರವಾಗಿ ಹಲ್ಲೆ ಮಾಡಲಾಗಿದೆ ಎಂದಿದ್ದಾರೆ. ಹಲ್ಲೆಗೊಳಗಾದ ಮಹಿಳೆಯನ್ನು ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪೂಜೆ, ನದಿ ಸ್ನಾನ ಮಾಡಿಸಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಿಸದೇ ಮುಕ್ತಬಾಯಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ ಶಕ್ತಿ ಯೋಜನೆಯೇ ಬಂಡವಾಳ, ಮಹಿಳೆಯರೇ ಟಾರ್ಗೆಟ್​​: ಕಳ್ಳಿಯರ ಗ್ಯಾಂಗ್​​ ಭೇದಿಸಿದ ಖಾಕಿ

ಮೃತಳ ಸಹೋದರಿ ಶ್ರೀದೇವಿ, ಇದು ಮೂಢನಂಬಿಕೆಯ ಹೆಸರಿನ ನೇರ ಕೊಲೆ ಎಂದು ಆರೋಪಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆಳಂದ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್‌ಐಆರ್ ದಾಖಲಿಸಿ, ತನಿಖೆಯನ್ನು ಮಹಾರಾಷ್ಟ್ರದ ಮುರುಮ್ ಠಾಣೆ ಪೊಲೀಸರಿಗೆ ವರ್ಗಾಯಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Pickle Health Risks: ಉಪ್ಪಿನಕಾಯಿ ಹೆಚ್ಚು ತಿನ್ನಬಾರದು ಏಕೆ ಗೊತ್ತಾ? ಆರೋಗ್ಯ ತಜ್ಞರ ಸಲಹೆ ಇಲ್ಲಿದೆ – Kannada News | Pickle Health Risks: Understanding Side Effects and Safe Consumption

ಉಪ್ಪಿನಕಾಯಿ ಕೇವಲ ಉಪ್ಪು ಮತ್ತು ಮೆಣಸಿನಕಾಯಿ ಮಾತ್ರವಲ್ಲ. ಅದರ ತಯಾರಿಕೆ ಮತ್ತು ಸಂರಕ್ಷಣೆಯ ಪ್ರಕ್ರಿಯೆಯಲ್ಲಿ ಹಲವು ರಾಸಾಯನಿಕ ಬದಲಾವಣೆಗಳು ನಡೆಯುತ್ತವೆ. ಇವುಗಳಲ್ಲಿ ಕೆಲವು ಸಹಜ ಹಾಗೂ ಅಗತ್ಯವಾಗಿದ್ದರೆ, ಕೆಲವು ಅತಿಯಾದಾಗ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಉಪ್ಪಿನಕಾಯಿಯ ಮುಖ್ಯ ಅಂಶವೇ ಸೋಡಿಯಂ ಕ್ಲೋರೈಡ್ (ಉಪ್ಪು). ಇದು ಸೂಕ್ಷ್ಮಾಣುಗಳ ಬೆಳವಣಿಗೆಯನ್ನು ತಡೆಯುವ ಮೂಲಕ ಆಹಾರವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಉಪ್ಪಿನ ಅತಿಸೇವನೆಯಿಂದ ರಕ್ತದೊತ್ತಡ, ಹೃದಯ ಹಾಗೂ ಕಿಡ್ನಿ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಅದೇ ರೀತಿ ವಿನೆಗರ್ ಅಥವಾ ಹುಳಿ ದ್ರಾವಣದಲ್ಲಿರುವ ಎಸಿಟಿಕ್ ಆಮ್ಲ ಮತ್ತು ನಿಂಬೆಹಣ್ಣಿನ ಸಿಟ್ರಿಕ್ ಆಮ್ಲ ಸಂರಕ್ಷಣೆಗೆ ಸಹಾಯಕವಾದರೂ, ಹೆಚ್ಚು ಆಮ್ಲೀಯತೆ ಜಠರದ ಕೆರಳಿಕೆ ಮತ್ತು ಆಸಿಡ್ ಸಮಸ್ಯೆಗಳಿಗೆ ಕಾರಣವಾಗಬಹುದು.

ಮೆಣಸಿನಕಾಯಿಯ ಖಾರಕ್ಕೆ ಕಾರಣವಾಗುವ ಕ್ಯಾಪ್ಸೈಸಿನ್ ಅಲ್ಪ ಪ್ರಮಾಣದಲ್ಲಿ ಉಪಯುಕ್ತವಾದರೂ, ಹೆಚ್ಚಾದರೆ ಗ್ಯಾಸ್ಟ್ರೈಟಿಸ್ ಹಾಗೂ ಹೊಟ್ಟೆಯ ಒಳಪದರಕ್ಕೆ ಹಾನಿ ಉಂಟುಮಾಡಬಹುದು. ಉಪ್ಪಿನಕಾಯಿಯಲ್ಲಿ ಬಳಸುವ ಎಣ್ಣೆಯಲ್ಲಿರುವ ಕೊಬ್ಬುಗಳು (ಟ್ರೈಗ್ಲಿಸರೈಡ್‌ಗಳು) ಅತಿಯಾದಾಗ ಕೊಲೆಸ್ಟ್ರಾಲ್ ಮತ್ತು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಹಲವು ಉಪ್ಪಿನಕಾಯಿಗಳು ಹುದುಗುವಿಕೆ (ಫರ್ಮೆಂಟೇಶನ್) ಪ್ರಕ್ರಿಯೆ ಮೂಲಕ ತಯಾರಾಗುತ್ತವೆ. ಈ ವೇಳೆ ಲ್ಯಾಕ್ಟಿಕ್ ಆಮ್ಲ ರೂಪುಗೊಳ್ಳುತ್ತದೆ, ಇದು ಸಂರಕ್ಷಣೆಗೆ ಸಹಕಾರಿ. ಆದರೆ ಸರಿಯಾದ ಸ್ವಚ್ಛತೆ ಮತ್ತು ಸಂಗ್ರಹಣೆ ಇಲ್ಲದಿದ್ದರೆ, ಅಪಾಯಕಾರಿ ವಿಷಕಾರಿ ಸಂಯುಕ್ತಗಳು ಕೂಡ ರೂಪುಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ನೀವು ಗರ್ಭಿಣಿಯಾಗಿದ್ದು ವಾಯುಮಾಲಿನ್ಯದಿಂದಾಗುವ ಸಮಸ್ಯೆಗಳಿಂದ ಮಗುವನ್ನು ಕಾಪಾಡಲು ಈ ಸಲಹೆಗಳನ್ನು ಪಾಲಿಸಿ

ಇತ್ತೀಚಿನ ವಾಣಿಜ್ಯ ಉಪ್ಪಿನಕಾಯಿಗಳಲ್ಲಿ ಸೋಡಿಯಂ ಬೆಂಜೋಯೇಟ್, ಪೊಟ್ಯಾಸಿಯಂ ಸೋರ್ಬೇಟ್ ಮುಂತಾದ ಕೃತಕ ಸಂರಕ್ಷಕಗಳು, ಬಣ್ಣಗಳು ಹಾಗೂ ರುಚಿವರ್ಧಕಗಳು ಸೇರಿರುವುದು ಸಾಮಾನ್ಯ. ಇವುಗಳ ದೀರ್ಘಕಾಲೀನ ಸೇವನೆ ಮಕ್ಕಳಲ್ಲಿ ಅಲರ್ಜಿ, ಅತಿಚಟುವಟಿಕೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಅತಿದೊಡ್ಡ ಅಪಾಯವು ತಪ್ಪಾದ ಸಂಗ್ರಹಣೆಯಿಂದ ಉಂಟಾಗುವ ಅಫ್ಲಾಟಾಕ್ಸಿನ್, ಬೊಟುಲಿನಮ್ ಟಾಕ್ಸಿನ್ ಮುಂತಾದ ವಿಷಗಳಿಂದ. ಇವು ಯಕೃತ್ತಿಗೆ ಹಾನಿ ಉಂಟುಮಾಡುವ ಹಾಗೂ ಜೀವಾಪಾಯಕ್ಕೆ ಕಾರಣವಾಗುವಷ್ಟು ಗಂಭೀರವಾಗಿವೆ. ಹೀಗಾಗಿ, ಉಪ್ಪಿನಕಾಯಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದಲ್ಲಮಿತಿ ಅತ್ಯಂತ ಮುಖ್ಯ.

ಲೇಖನ: ಡಾ ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯರು,ಶಿರಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ? – Kannada News | Bengaluru Police Commissioner Seemant Kumar Singh Talks flyover Open And Close On December 31 During New Year Celebration

ಬೆಂಗಳೂರು, ಡಿಸೆಂಬರ್ 26): ಹೊಸವರ್ಷಕ್ಕೆ (New Year 2026) ಕೌಂಟ್‌ಡೌನ್ ಶುರುವಾಗಿದ್ದು, ಬೆಂಗಳೂರಿನಲ್ಲಿ ಖಾಕಿ ಪಡೆ ಫುಲ್ ಅಲರ್ಟ್ ಆಗಿದೆ. ಈಗಾಗಲೇ ನಗರದ ಪ್ರಮುಖ ಪ್ರದೇಶಗಳಲ್ಲಿ ರೌಂಡ್ಸ್ ಮಾಡಿ, ಪರಿಶೀಲನೆ ನಡೆಸಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌ (Seemant Kumar Singh), ಬಳಿಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ್ದು, ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಹಿಸಿದ್ದಾರೆ. ಇನ್ನೂ ಹೊಸ ವರ್ಷಾಚರಣೆ ರಾತ್ರಿ ಬೆಂಗಳೂರಿ ಕೆಲವೆಡೆ ರಸ್ತೆ ನಿರ್ಬಂಧಿಸಲಾಗಿದೆ. ಇನ್ನು ಫ್ಲೈಓವರ್ ಓಪನ್ ಇರುತ್ತಾವಾ ಅಥವಾ ಕ್ಲೋಸ್ ಮಾಡಲಾಗುತ್ತಾ ಎನ್ನುವುದನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಮಾಹಿತಿ ಹಂಚಿಕೊಂಡಿದ್ದಾರೆ ಕೇಳಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆತ್ಮನಿರ್ಭರ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆ ಈ ನ್ಯಾನೋ ಗೊಬ್ಬರ ಕಾರ್ಖಾನೆ! – Kannada News | IFFCO Nano Fertilizer Plant Opens in Bengaluru: Boosts Karnataka Agriculture

ಆತ್ಮನಿರ್ಭರ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆ ಈ ನ್ಯಾನೋ ಗೊಬ್ಬರ ಕಾರ್ಖಾನೆ!

ಬೆಂಗಳೂರು, ಡಿಸೆಂಬರ್ 27: ಗೊಬ್ಬರ ಕ್ಷೇತ್ರದಲ್ಲಿನ ಭಾರತದ ಮುಂಚೂಣಿ ಸಹಕಾರಿ ಸಂಸ್ಥೆಯಾದ ಇಂಡಿಯನ್ ಫಾರ್ಮರ್ಸ್​ ಫರ್ಟಿಲೈಸರ್ ಕೂಪರೇಟಿವ್ ಲಿಮಿಟೆಡ್ (ಇಸ್ಕೋ) ಕರ್ನಾಟಕದ ಬೆಂಗಳೂರು (Bengaluru) ಸಮೀಪದ ದೇವನಹಳ್ಳಿಯಲ್ಲಿ ತನ್ನ ಅತ್ಯಾಧುನಿಕ ನ್ಯಾನೋ ಗೊಬ್ಬರ ಕಾರ್ಖಾನೆಯನ್ನು ಉದ್ಘಾಟಿಸಿದೆ. ಈ ಕಾರ್ಖಾನೆಯನ್ನು ಇನ್ನೋ ಮತ್ತು ಎನ್‌ಸಿಯುಐ ಅಧ್ಯಕ್ಷರಾದ ಶ್ರೀ ದಿಲೀಪ್ ಸಂಘಾಣಿ ಅವರು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ವೇಳೆ ಅವರು ಕಾರ್ಖಾನೆಯ ಸಮಗ್ರ ಪರಿಶೀಲನೆ ನಡೆಸಿ, ನ್ಯಾನೋ ಗೊಬ್ಬರದ ಉತ್ಪಾದನೆ, ಗುಣಮಟ್ಟದ ಮಾನದಂಡಗಳು ಹಾಗೂ ತಾಂತ್ರಿಕ ಸಾಮರ್ಥ್ಯಗಳ ಕುರಿತು ಮಾಹಿತಿ ಪಡೆದಿದ್ದಾರೆ.

12 ಎಕರೆಯಲ್ಲಿ ಸ್ಥಾಪಿತಗೊಂಡಿರುವ ಈ ಅತ್ಯಾಧುನಿಕ ನ್ಯಾನೋ ಗೊಬ್ಬರ ಕಾರ್ಖಾನೆ

ಈ ಸಂದರ್ಭದಲ್ಲಿ ಶ್ರೀ ಸಂಘಾಣಿ ಅವರು ಮಾತನಾಡಿ, ಈ ಕಾರ್ಖಾನೆ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಮಾನ್ಯ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ “ಸಹಕಾರದಿಂದ ಸಮೃದ್ಧಿ” ಎಂಬ ದೃಷ್ಟಿಕೋನವನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

12 ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿತಗೊಂಡಿರುವ ಈ ಅತ್ಯಾಧುನಿಕ ನ್ಯಾನೋ ಗೊಬ್ಬರ ಕಾರ್ಖಾನೆ ಪ್ರತಿದಿನ 2 ಲಕ್ಷ ನ್ಯಾನೋ ಯೂರಿಯಾ ಪ್ಲಸ್ ಬಾಟಲಿಗಳ ಉತ್ಪಾದನೆಗೆ ಸಾಮರ್ಥ್ಯ ಹೊಂದಿದೆ. ದೀರ್ಘಾವಧಿಯಲ್ಲಿ ಇದು ದಕ್ಷಿಣ ಭಾರತದಲ್ಲಿ ಸಾಂಪ್ರದಾಯಿಕ ಯೂರಿಯಾದ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದ್ದು, ಆಮದು ವೆಚ್ಚವನ್ನು ಇಳಿಸುವುದರ ಜೊತೆಗೆ ನಿಖರ ಕೃಷಿಯನ್ನು (ಪ್ರಿಸಿಷನ್ ಫಾರ್ಮಿಂಗ್) ಉತ್ತೇಜಿಸುತ್ತದೆ. ದೇವನಹಳ್ಳಿಯಲ್ಲಿ ಸ್ಥಾಪಿತಗೊಂಡಿರುವ ಈ ಕಾರ್ಖಾನೆ ತಾಂತ್ರಿಕ ಶ್ರೇಷ್ಠತೆಯ ಪ್ರತೀಕವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಪ್ರಗತಿಶೀಲ ಪ್ರಕ್ರಿಯೆಗಳ ಮೂಲಕ ಗೊಬ್ಬರ ಉತ್ಪಾದನೆ ಮಾಡಲಾಗುತ್ತದೆ.

ವಿಜ್ಞಾನಿಗಳೊಂದಿಗೆ ವಿಶೇಷ ಸಂವಾದ

ಉದ್ಘಾಟನೆ ಮತ್ತು ಕಾರ್ಖಾನೆ ಪರಿಶೀಲನೆಯ ನಂತರ ಶ್ರೀ ಸಂಘಾಣಿ ಅವರು ಕಾರ್ಖಾನೆಯ ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಂದಿಗೆ ವಿಶೇಷ ಸಂವಾದ ನಡೆಸಿದರು. ಈ ವೇಳೆ ನ್ಯಾನೋ ಗೊಬ್ಬರಗಳ ಮಹತ್ವ, ಅವುಗಳ ಪಾತ್ರ ಮತ್ತು ಭಾರತದ ಕೃಷಿಯ ಭವಿಷ್ಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ನವೋದ್ಯಮ ಆಧಾರಿತ ಸಹಕಾರಿ ತಂತ್ರಗಳನ್ನು ಬಲಪಡಿಸುವ ಕುರಿತು ಮಾರ್ಗದರ್ಶನ ನೀಡಿದರು.

ಈ ಕಾರ್ಯಕ್ರಮದಲ್ಲಿ ಇಷ್ಟೋ ಉಪಾಧ್ಯಕ್ಷರಾದ ಬಲವೀರಸಿಂಗ್, ಮಾಜಿ ಅಧ್ಯಕ್ಷರಾದ ಕೆ. ಶ್ರೀನಿವಾಸನ್ ಗೌಡ, ವ್ಯವಸ್ಥಾಪಕ ನಿರ್ದೇಶಕರಾದ ಕೆ. ಜೆ. ಪಟೇಲ್, ಪ್ರಲಾದಸಿಂಗ್, ವಿಜಯಶಂಕರ ರೈ, ವಿವೇಕ್ ಕೊಹ್ಲಿ, ಸುಬ್ರಜಿತ್ ಪಾಧಿ, ಮಾರ ಗಂಗಾ ರೆಡ್ಡಿ, ವಾಲ್ಮೀಕಿ ತ್ರಿಪಾಠಿ, ಜಗದೀಪ್ ಸಿಂಗ್ ನಕ್ಕೆ, ಜಯೇಶ್ ರಾಡಾಡಿಯಾ, ಉಮೇಶ್ ತ್ರಿಪಾಠಿ, ಭಾವೇಶ್ ರಾಡಾಡಿಯಾ, ಪ್ರೇಮಚಂದ್ ಮುನ್ನಿ, ಮುಕುಲ್ ಕುಮಾರ್, ನ್ಯಾನೋ ಘಟಕದ ಮುಖ್ಯಸ್ಥ ಸಂಜಯ್ ಕುಲಶ್ರೇಷ್ಠ ಸೇರಿದಂತೆ ನಿರ್ದೇಶಕ ಮಂಡಳಿಯ ಸದಸ್ಯರು ಹಾಗೂ ಅವರ ಕುಟುಂಬದವರು ಉಪಸ್ಥಿತರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಮನ್ನಾ ಬೇಡವೇ ಬೇಡ ಎಂದಿದ್ದ ‘ಧುರಂಧರ್’ ನಿರ್ದೇಶಕ ಕಾರಣ ಏನು? – Kannada News | Why Tamannah Bhatia loose chance in Dhurandhar movie

ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ (Dhurandhar) ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಬಿರುಗಾಳಿ ಎಬ್ಬಿಸಿದೆ. ಸಿನಿಮಾ ಬಿಡುಗಡೆ ಆದ ಕೇವಲ 21 ದಿಗಳಲ್ಲಿ 1000 ಕೋಟಿ ಕಲೆಕ್ಷನ್ ದಾಟಿದೆ. ಗಮನಿಸಬೇಕಾದ ಅಂಶವೆಂದರೆ ‘ಧುರಂಧರ್’ ಪ್ಯಾನ್ ಇಂಡಿಯಾ ಸಿನಿಮಾ ಸಹ ಅಲ್ಲ. ಹಿಂದಿ ಹೊರತಾಗಿ ಬೇರೆ ಯಾವ ಭಾಷೆಯಲ್ಲಿಯೂ ಬಿಡುಗಡೆ ಆಗಿಲ್ಲ. ಹಾಗಿದ್ದರೂ ಸಹ ಗಳಿಕೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ದಾಟುತ್ತಾ ಸಾಗುತ್ತಿದೆ. ಸಿನಿಮಾನಲ್ಲಿ ನಟಿಸಿರುವ ನಟ-ನಟಿಯರು, ಕೆಲಸ ಮಾಡಿರುವ ತಂತ್ರಜ್ಙರಿಗೆ ಒಳ್ಳೆಯ ಗುರುತು, ಗೌರವ ಸಿಗುತ್ತಿದೆ. ಅಂದಹಾಗೆ ನಟಿ ತಮನ್ನಾ ಭಾಟಿಯಾ ಸಹ ‘ಧುರಂಧರ್’ ಸಿನಿಮಾನಲ್ಲಿ ನಟಿಸಬೇಕಿತ್ತು, ಆದರೆ ನಿರ್ದೇಶಕ ಆದಿತ್ಯ ಧರ್ ಕಡ್ಡಾಯವಾಗಿ ತಮನ್ನಾ ಬೇಡವೇ ಬೇಡ ಎಂದುಬಿಟ್ಟರಂತೆ. ಕಾರಣ ಏನು?

‘ಧುರಂಧರ್’ ಸಿನಿಮಾನಲ್ಲಿ ‘ಶರಾರತ್’ ಹೆಸರಿನ ಹಾಡೊಂದಿದೆ. ಆ ಹಾಡಿಗೆ ವಿಜಯ್ ಗಂಗೂಲಿ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ‘ಶರಾರತ್’ ಹಾಡು ಕೇಳಿದ ಕೂಡಲೇ ಈ ಹಾಡಿಗೆ ತಮನ್ನಾ ಭಾಟಿಯಾ ಡ್ಯಾನ್ಸ್ ಮಾಡಿದರೆ ಬಹಳ ಚೆನ್ನಾಗಿ ಇರುತ್ತದೆ ಎಂದು ವಿಜಯ್ ಗಂಗೂಲಿ ಅವರಿಗೆ ಅನಿಸಿತಂತೆ. ಇದೇ ವಿಷಯವನ್ನು ನಿರ್ದೇಶಕ ಆದಿತ್ಯ ಧರ್ ಬಳಿ ವಿಜಯ್ ಹೇಳಿಕೊಂಡಿದ್ದಾರೆ. ಆದರೆ ಆದಿತ್ಯ ಅವರು ಕೂಡಲೇ ‘ತಮನ್ನಾ ಬೇಡ’ ಎಂದು ಬಿಟ್ಟರಂತೆ.

ಆದಿತ್ಯ ಅವರು ತಮನ್ನಾ ಅವರನ್ನು ನಿರಾಕರಿಸಲು ಯಾವುದೇ ವೈಯಕ್ತಿಕ ಕಾರಣ ಇಲ್ಲ. ಆದಿತ್ಯ ಅವರ ಅಭಿಪ್ರಾಯದಂತೆ, ತಮನ್ನಾ ಭಾಟಿಯಾ ಬಹಳ ಜನಪ್ರಿಯ ನಟಿ, ಅವರು ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡರೆ ಆ ಹಾಡು ಹಿಟ್ ಆಗುತ್ತದೆ, ಆ ಹಾಡಿಗಾಗಿ ಜನ ಸಿನಿಮಾಕ್ಕೆ ಬರುವುದು ಸಹ ಇದೆ, ಆದರೆ ಹಾಗೆ ಆಗುವುದು ಆದಿತ್ಯಗೆ ಇಷ್ಟವಿರಲಿಲ್ಲವಂತೆ. ‘ಶರಾರತ್’ ಹಾಡು ಸಿನಿಮಾದಿಂದ ಪ್ರತ್ಯೇಕವಾಗಿದೆ, ಅದೊಂದು ‘ಸೇರಿಸಲಾಗಿರುವ ಐಟಂ ಹಾಡು’ ಎನಿಸಬಾರದು ಎಂಬುದು ಅವರ ಆಲೋಚನೆ ಆಗಿತ್ತಂತೆ.

ಇದನ್ನೂ ಓದಿ:‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ

ತಮನ್ನಾ ಆ ಹಾಡಿನಲ್ಲಿ ನಟಿಸಿದರೆ ಜನ ಕತೆಗಿಂತಲೂ ಹಾಡಿಗೆ ಪ್ರತ್ಯೇಕ ಪ್ರಾಮುಖ್ಯತೆ ನೀಡುತ್ತಾರೆ. ಹಾಡಿನ ಸುತ್ತ ನಡೆಯುತ್ತಿರುವ ಕತೆಗೇ ಜನ ಮಹತ್ವ ನೀಡಬೇಕು, ಹಾಡು ಕತೆಯಿಂದ ಪ್ರತ್ಯೇಕವಾಗಬಾರದು ಎಂಬ ಕಾರಣಕ್ಕೆ ತಮನ್ನಾರನ್ನು ಹಾಕಿಕೊಳ್ಳಲಿಲ್ಲವಂತೆ, ಬದಲಿಗೆ ‘ಶರಾರತ್’ ಹಾಡಿನಲ್ಲಿ ಇಬ್ಬರು ನಟಿಯರನ್ನು ಹಾಕಿಕೊಂಡಿದ್ದಾರೆ. ಅದು ಸಹ ಆದಿತ್ಯ ಅವರದ್ದೇ ಐಡಿಯಾ ಅಂತೆ, ಇಬ್ಬರು ನಟಿಯರು ಇದ್ದರೆ ಒಬ್ಬರ ಮೇಲೆ ಪ್ರೇಕ್ಷಕರ ಗಮನ ನಿಲ್ಲುವುದಿಲ್ಲ ಎಂಬುದು ಅವರ ಆಲೋಚನೆ ಆಗಿತ್ತಂತೆ.

‘ಧುರಂಧರ್’ ಸಿನಿಮಾನಲ್ಲಿ ರಣ್ವೀರ್ ಸಿಂಗ್, ಗೂಢಚಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಅಕ್ಷಯ್ ಕುಮಾರ್, ಅರ್ಜುನ್ ರಾಮ್​​ಪಾಲ್, ಸಂಜಯ್ ದತ್, ಮಾಧವನ್ ಅವರುಗಳು ನಟಿಸಿದ್ದಾರೆ. ಸಿನಿಮಾದ ನಾಯಕಿಯಾಗಿ ಸಾರಾ ಅರ್ಜುನ್ ನಟಿಸಿದ್ದಾರೆ. ಸಿನಿಮಾದ ಸೀಕ್ವೆಲ್ ಮೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.

Source link

‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು? – Kannada News | Sudeep said he and his team removed 9000 piracy links of Mark movie

ಸುದೀಪ್ ನಟನೆಯ ‘ಮಾರ್ಕ್’ (Mark) ಸಿನಿಮಾ ಎರಡು ದಿನದ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಕಾರಣ ಇಂದು (ಡಿಸೆಂಬರ್ 27) ‘ಮಾರ್ಕ್’ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ, ‘ಮಾರ್ಕ್’ ಸಿನಿಮಾ ಗೆಲುವಿಗೆ ಸಹಾಯ ಮಾಡಿದವರಿಗೆ ಧನ್ಯವಾದಗಳನ್ನು ತಿಳಿಸಿತು. ಸುದ್ದಿಗೋಷ್ಠಿಯಲ್ಲಿ ಸಿನಿಮಾಕ್ಕೆ ಕಾಡಿದ ಪೈರಸಿ ಸಮಸ್ಯೆ ಬಗ್ಗೆ ನಟ ಸುದೀಪ್ ಮಾತನಾಡಿದರು. ಕೆಲವೇ ಗಂಟೆಗಳಲ್ಲಿ ತಮ್ಮ ಚಿತ್ರತಂಡ ಎಷ್ಟು ಪೈರಸಿ ಲಿಂಕ್​​ಗಳನ್ನು ತೆಗೆದು ಹಾಕಿದೆ ಎಂಬುದರ ಮಾಹಿತಿಯನ್ನು ನೀಡಿದರು. ಸುದೀಪ್ ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗೆದ್ದ ಇಂಗ್ಲೆಂಡ್ 7ನೇ ಸ್ಥಾನದಲ್ಲಿ… ಸೋತ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿ!

Source link

Exit mobile version