‘ಅವತಾರ್ 3’ ಬಳಿಕ ಬಾಕ್ಸ್ ಆಫೀಸ್​​ನಲ್ಲಿ ಮುಗ್ಗರಿಸಿದ ಮತ್ತೊಂದು ಹಾಲಿವುಡ್ ಸಿನಿಮಾ – Kannada News | Anaconda 2025 movie fail to perform at Indian box office

ಭಾರತದ ಬಾಕ್ಸ್ ಆಫೀಸ್ (Box Office)​​ ವಿದೇಶಿ ಸಿನಿಮಾಗಳ ಪಾಲಿಗೆ ಚಿನ್ನದ ಗಣಿಯಾಗಿವೆ. ಹಾಲಿವುಡ್ ಸಿನಿಮಾಗಳಂತೂ ಭಾರತದಲ್ಲಿ ಮುಗಿಬಿದ್ದು ಸಿನಿಮಾ ಬಿಡುಗಡೆ ಮಾಡುತ್ತಿವೆ. ವಿಶೇಷ ಪ್ರಚಾರವನ್ನು ಸಹ ಮಾಡುತ್ತಿವೆ. ಸಿನಿಮಾ ನಿರ್ಮಾಣ ಹಂತದಲ್ಲಿಯೇ ಭಾರತದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಜನರು ಸಹ ಹಾಲಿವುಡ್ ಸಿನಿಮಾಗಳಿಗೆ ಭರಪೂರ ಪ್ರೀತಿಯನ್ನು ಇಲ್ಲಿಯ ಜನ ನೀಡಿದ್ದಾರೆ. ಆದರೆ ಇತ್ತೀಚೆಗೆ ಬಿಡುಗಡೆ ಆದ ಎರಡು ಹಾಲಿವುಡ್ ಸಿನಿಮಾಗಳ ಒಂದರ ನಂತರ ಇನ್ನೊಂದು ಮಕಾಡೆ ಮಲಿಗವೆ.

ಕಳೆದ ವಾರವಷ್ಟೆ ಬಿಡುಗಡೆ ಆದ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಭಾರಿ ನಿರೀಕ್ಷೆಗಳನ್ನು ಮೂಡಿಸಿತ್ತು. ಸಿನಿಮಾ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿತ್ತು. ಆದರೆ ಸಿನಿಮಾ ನಿರೀಕ್ಷಿತ ಮಟ್ಟದ ಪ್ರದರ್ಶನವನ್ನು ಬಾಕ್ಸ್ ಆಫೀಸ್​​ನಲ್ಲಿ ಕಾಣಲಿಲ್ಲ. ಸಿನಿಮಾ ಈ ವರೆಗೆ ಭಾರತದಲ್ಲಿ 100 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ಆದರೆ ಕಳೆದ ‘ಅವತಾರ್’ ಸಿನಿಮಾಗಳಿಗೆ ಹೋಲಿಸಿದರೆ ಇದು ಭಾರಿ ದೊಡ್ಡ ಗಳಿಕೆ ಅಲ್ಲ.

ಇದೀಗ ‘ಅವತಾರ್ 3’ ಸಿನಿಮಾದ ಬಳಿಕ ಮತ್ತೊಂದು ಹಾಲಿವುಡ್ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಮುಗ್ಗರಿಸಿದೆ. ‘ಅನಕೊಂಡ’ ಸಿನಿಮಾ ಸರಣಿ ವಿಶ್ವದ ಜನಪ್ರಿಯ ಸಿನಿಮಾ ಸರಣಿಗಳಲ್ಲಿ ಒಂದಾಗಿದೆ. ಇದೇ ಸಿನಿಮಾ ಸರಣಿಯ ಆರನೇ ಸಿನಿಮಾ ಎರಡು ದಿನದ ಹಿಂದೆಯಷ್ಟೆ ಭಾರತದಲ್ಲಿ ಬಿಡುಗಡೆ ಆಗಿದೆ. ಮೊದಲ ದಿನ 1.50 ಕೋಟಿ ರೂಪಾಯಿ ಹಣವನ್ನು ಸಿನಿಮಾ ಗಳಿಸಿತ್ತು. ಆದರೆ ಎರಡೇ ದಿನದಲ್ಲೇ ಸಿನಿಮಾ ಮುಗ್ಗರಿಸಿದೆ. ಎರಡನೇ ದಿನ ಒಂದು ಕೋಟಿ ರೂಪಾಯಿ ಹಣವನ್ನೂ ಸಹ ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿಲ್ಲ.

ಇದನ್ನೂ ಓದಿ:ಬಾಕ್ಸ್ ಆಫೀಸ್ ದೂಳಿಪಟ ಮಾಡುತ್ತಿರುವ ‘ಧುರಂಧರ್’, ಮಂಕಾದ ‘ಅವತಾರ್’

ಪೌಲ್ ರುಡ್ ಮತ್ತು ಜಾಕ್ ಬ್ಲಾಕ್ ಅವರುಗಳು ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ಟಾಮ್ ಜಾರ್ಮಿಕನ್ ನಿರ್ದೇಶನ ಮಾಡಿದ್ದಾರೆ. ‘ಅನಕೊಂಡ’ ಸಿನಿಮಾವು ಹಾಸ್ಯದ ಜೊತೆಗೆ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ಈ ಸಿನಿಮಾಕ್ಕೆ ಸುಮಾರು 400 ಕೋಟಿಗೂ ಹೆಚ್ಚು ಮೊತ್ತದ ಬಜೆಟ್ ಹಾಕಲಾಗಿದೆ. ಆದರೆ ಸಿನಿಮಾ ಬಿಡುಗಡೆ ಆಗಿ ಈ ವರೆಗೆ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 80 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ.

ಸಿನಿಮಾ ಸುದ್ದಿಗಳಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನವ ವಿವಾಹಿತೆ ಆತ್ಮಹತ್ಯೆ ಕೇಸ್: ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ! ಗಾನವಿ ಅಮ್ಮ ನೋವಿನ ಮಾತು – Kannada News | Bengaluru Newlywed Woman Death Case: Mother Alleges Harassment by Mother in Law, Reveals Painful Details

ಬೆಂಗಳೂರು, ಡಿಸೆಂಬರ್ 27: ಬೆಂಗಳೂರಿನಲ್ಲಿ ನವ ವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ದೊರೆತಿದೆ. ಗಾನವಿ ಪತಿಯೂ ಆತ್ಮಹತ್ಯೆಗೆ ಶರಣಾಗಿದ್ದು, ಆತನ ತಾಯಿ ಸಹ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಗಾನವಿ ತಾಯಿ ಮಾತನಾಡಿದ್ದು, ಆಕೆಗೆ ಗಂಡ ಮನೆಯಲ್ಲಿ ಬಹಳ ಹಿಂಸೆ ನೀಡಲಾಗುತ್ತಿತ್ತು ಎಂದಿದ್ದಾರೆ.

ಮದುವೆಯಾದ ಒಂದೂವರೆ ತಿಂಗಳಾದರೂ ಗಾನವಿಗೆ ಪತಿಯಿಂದ ಪ್ರೀತಿ ಸಿಕ್ಕಿರಲಿಲ್ಲ. ಅತ್ತೆ ತನ್ನ ಮಗಳನ್ನು ಪತಿಯ ಪಕ್ಕದಲ್ಲಿ ಕುಳಿತುಕೊಳ್ಳಲೂ ಬಿಡುತ್ತಿರಲಿಲ್ಲ. ಸರಿಯಾಗಿ ಊಟ ನೀಡದೆ ಸತಾಯಿಸುತ್ತಿದ್ದರು. ಆದರೂ ಗಾನವಿ ಗಂಡನ ಪ್ರೀತಿಗಾಗಿ ಗಾನವಿ ಹಾತೊರೆಯುತ್ತಿದ್ದಳು. ‘ನನ್ನನ್ನು ವಾಪಸ್ ಕಳುಹಿಸಬೇಡಿ, ನಾನು ಇಲ್ಲೇ ಬದುಕುತ್ತೇನೆ, ನನಗೆ ಪ್ರೀತಿ ಕೊಡಿ ಸಾಕು’ ಎಂದು ಗಾನವಿ ತನ್ನ ಅತ್ತೆಯನ್ನು ಬೇಡಿಕೊಂಡಿದ್ದಳು. ಗ್ರಾಮದಲ್ಲಿ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ವಿಚ್ಛೇದನಕ್ಕೆ ಹಿಂಜರಿಯುತ್ತಿದ್ದಳು ಎಂದು ತಾಯಿ ಹೇಳಿದ್ದಾರೆ. ಗಾನವಿ ಗಂಡ ಸೂರಜ್ ಆತ್ಮಹತ್ಯೆಗೆ ಆತ ಆಕೆಗೆ ಮಾಡಿದ ಮೋಸದ ತಪ್ಪಿತಸ್ಥ ಭಾವನೆಯೇ ಕಾರಣ ಎಂದು ಗಾನವಿ ತಾಯಿ ಆರೋಪಿಸಿದ್ದಾರೆ.

ವಿವರಗಳಿಗೆ ಓದಿ: ನವವಿವಾಹಿತೆ ಸೂಸೈಡ್ ಕೇಸ್​ಗೆ ಬಿಗ್ ಟ್ವಿಸ್ಟ್: ನಾಗಪುರದಲ್ಲಿ ಆತ್ಮಹತ್ಯೆಗೆ ಶರಣಾದ ಗಾನವಿ ಪತಿ ಸೂರಜ್!

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್ – Kannada News | Mark Kannada movie thanks giving press meet LIVE

ಸುದೀಪ್ ನಟನೆಯ ‘ಮಾರ್ಕ್’ (Mark) ಸಿನಿಮಾ ಇದೇ ಗುರುವಾರ (ಡಿಸೆಂಬರ್ 25) ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಮೊದಲೆರಡು ದಿನ ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಹ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಿನಿಮಾ ಬಿಡುಗಡೆಗೆ ಮುಂಚೆ, ‘ಮಾರ್ಕ್’ ಸಿನಿಮಾ ವಿರುದ್ಧ ಸಂಚು ನಡೆದಿತ್ತು, ಸಿನಿಮಾ ಅನ್ನು ಸೋಲಿಸಿಯೇ ಸಿದ್ಧ ಎಂದು ಕೆಲವರು ಸವಾಲು ಹಾಕಿದ್ದರು. ಇದರ ನಡುವೆಯೂ ಸಿನಿಮಾ ಗೆಲುವಿನತ್ತ ದಾಪುಗಾಲು ಹಾಕಿದೆ. ಇದೇ ಕಾರಣಕ್ಕೆ ಸುದೀಪ್ ಸೇರಿದಂತೆ ‘ಮಾರ್ಕ್’ ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿದ್ದು, ಸಿನಿಮಾ ನಿರ್ಮಾಣ ಮತ್ತು ಗೆಲುವಿಗೆ ಕಾರಣರಾದವರಿಗೆ ಧನ್ಯವಾದ ಹೇಳಲಿದೆ. ಕಾರ್ಯಕ್ರಮದ ಲೈವ್ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Ashes 2025: 14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..! – Kannada News | England Won 4th Ashes Test vs Australia

ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯ ಗೆಲ್ಲುವ ಇಂಗ್ಲೆಂಡ್ ತಂಡದ 14 ವರ್ಷಗಳ ಕನಸು ಕೊನೆಗೂ ಈಡೇರಿದೆ. ಮೆಲ್ಬೋರ್ನ್​ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯ ಗೆದ್ದಿದ್ದು 2011 ರಲ್ಲಿ.

2011 ರಲ್ಲಿ ನಡೆದ ಆ್ಯಶಸ್ ಸರಣಿಯ  ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು ಇನ್ನಿಂಗ್ಸ್ ಮತ್ತು 83 ರನ್‌ಗಳಿಂದ ಸೋಲಿಸಿತ್ತು. ಈ ಅಮೋಘ ಗೆಲುವಿನ ನಂತರ ಆಂಗ್ಲ ಪಡೆ ಒಮ್ಮೆಯೂ ಕಾಂಗರೂನಾಡಿನಲ್ಲಿ ಟೆಸ್ಟ್ ಪಂದ್ಯ ಗೆದ್ದಿರಲಿಲ್ಲ ಎಂಬುದೇ ಅಚ್ಚರಿ.

ಈ ಹದಿನಾಲ್ಕು ವರ್ಷಗಳಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾದಲ್ಲಿ 18 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಇಂಗ್ಲೆಂಡ್ 16 ಮ್ಯಾಚ್​ಗಳಲ್ಲಿ ಸೋಲನುಭವಿಸಿದರೆ, 2 ಪಂದ್ಯಗಳನ್ನು ಆಸ್ಟ್ರೇಲಿಯಾ ಡ್ರಾ ಮಾಡಿಕೊಂಡಿತ್ತು. ಅಂದರೆ ಕಳೆದ ಒಂದು ದಶಕದಿಂದ ಇಂಗ್ಲೆಂಡ್ ವಿರುದ್ಧ ಆಸೀಸ್ ಪಡೆ ತವರಿನಲ್ಲಿ ಒಂದೇ ಒಂದು ಪಂದ್ಯದಲ್ಲಿ ಸೋತಿರಲಿಲ್ಲ.

ಇದೀಗ ಆಸ್ಟ್ರೇಲಿಯಾ ತಂಡದ ಈ ಗೆಲುವಿನ ನಾಗಲೋಟಕ್ಕೆ ಇಂಗ್ಲೆಂಡ್ ತಂಡ ಬ್ರೇಕ್ ಹಾಕಿದೆ. ಮೆಲ್ಬೋರ್ನ್​ ಮೈದಾನದಲ್ಲಿ ಆತಿಥೇಯರನ್ನು 4 ವಿಕೆಟ್​ಗಳಿಂದ ಸೋಲಿಸಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ಪಿಚ್​ನಲ್ಲಿ 14 ವರ್ಷಗಳ ಬಳಿಕ ಗೆಲುವಿನ ನಗೆ ಬೀರಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್, ಜೇಕ್ ವೆದರಾಲ್ಡ್, ಮಾರ್ನಸ್ ಲ್ಯಾಬುಶೇನ್, ಸ್ಟೀವ್ ಸ್ಮಿತ್ (ನಾಯಕ), ಉಸ್ಮಾನ್ ಖ್ವಾಜಾ, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್, ಮೈಕೆಲ್ ನೇಸರ್, ಜ್ಯೇ ರಿಚರ್ಡ್ಸನ್.

ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಜೇಕಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್, ವಿಲ್ ಜ್ಯಾಕ್ಸ್, ಬ್ರೈಡನ್ ಕಾರ್ಸ್​, ಗಸ್ ಅಟ್ಕಿನ್ಸನ್, ಜೋಶ್ ಟಂಗ್.

 

 

Source link

ಬೆಂಗಳೂರು: ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಕಿರುಕುಳ ನೀಡಿದ ಮೂವರು ಪುಂಡರು – Kannada News | Bengaluru BTM Layout Harassment: Viral Video Leads to Police Action 

ಬೆಂಗಳೂರು, ಡಿ. 27: ಬೆಂಗಳೂರಿನ ಬಿಟಿಎಂ ಲೇ ಔಟ್ ನಲ್ಲಿ ತಡರಾತ್ರಿ ಯುವತಿಗೆ ಮೂವರು ಪುಂಡರು ಕಿರುಕುಳ ನೀಡಿದ್ದಾರೆ. ಒಂದೇ ಬೈಕ್‌ನಲ್ಲಿದ್ದ ಮೂವರು ಯುವತಿಗೆ ಕಿರುಕುಳ ನೀಡಿಲಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸುಮಾರು ಎರಡು ಕಿಲೋ ರಸ್ತೆಯುದ್ದಕ್ಕೂ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಈ ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಮುಂದೆಯಿಂದ ಹೋಗುತ್ತಿದ್ದ ಯುವತಿಯನ್ನು ಹಿಂದಿನಿಂದ ಬಂದ ಮೂವರು ಒಂದೇ ಬೈಕ್​​ನಲ್ಲಿ ಫಾಲೋ ಮಾಡಿಕೊಂಡು ಬಂದಿದ್ದಾರೆ. ಜತೆಗೆ ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್​​ನಲ್ಲಿ ಓಡಿಸಿದ್ದಾರೆ. ಈ ಪುಂಡರು ಯುವತಿಗೆ ಕಿರುಕುಳ ನೀಡುತ್ತಿರುವುದನ್ನು ಬೈಕ್​​ನ ಹಿಂದೆ ಬರುತ್ತಿದ್ದ ಕಾರು ಚಾಲಕ ವಿಡಿಯೋ ಮಾಡಿದ್ದಾರೆ. ವಿಡಿಯೋವನ್ನು ಎಕ್ಸ್​​​ನಲ್ಲಿ ಹಂಚಿಕೊಂಡು, ಬೆಂಗಳೂರು ಪೊಲೀಸರಿಗೆ ಟ್ಯಾಗ್​ ಮಾಡಿದ್ದಾರೆ. ಇದಕ್ಕೆ ಪೊಲೀಸರು ಕೂಡ ಎಕ್ಸ್​​ ಮೂಲಕವೇ ಬೈಕ್‌ ನಂಬರ್ ಪತ್ತೆ ಮಾಡಿದ್ದು, ಮೂವರನ್ನು ವಿಚಾರಣೆ ಮಾಡೋದಾಗಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ನಿಮ್ಮ ಸಂಬಂಧಿಕರು ಕಸ್ಟಮ್ಸ್‌ ಬಲೆಗೆ ಬಿದ್ದಿದ್ದಾರೆ ಎಂದು ಕರೆ ಬಂದರೆ ಎಚ್ಚರ! ಏರ್​ಪೋರ್ಟ್​ ಕಸ್ಟಮ್ಸ್ ಇಲಾಖೆ ಹೈ ಅಲರ್ಟ್​ – Kannada News | Bengaluru Customs Fraud: Fake Officers Target Public, Customs issues high alert at Bengaluru airport

ಬೆಂಗಳೂರು, ಡಿಸೆಂಬರ್ 27: ಬೆಂಗಳೂರಿನಲ್ಲಿ (Bengaluru) ಕಸ್ಟಮ್ಸ್ ಅಧಿಕಾರಿಗಳಂತೆ ನಟಿಸಿ ಜನರನ್ನು ವಂಚಿಸುವ ವಂಚನಾ ಜಾಲ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆ ಸಾರ್ವಜನಿಕರಿಗೆ ಹೈ ಅಲರ್ಟ್ ನೀಡಿದೆ. ವಂಚಕರ ಜಾಲದಿಂದ ತಪ್ಪಿಸಿಕೊಳ್ಳಲು ಜಾಗರೂಕರಾಗಿರುವುದರ ಜೊತೆಗೆ ವಂಚನೆಗೊಳಗಾದ ಸಮದರ್ಭದಲ್ಲಿ ಸೈಬರ್ ಕ್ರೈಂ ಹೆಲ್ಪ್‌ಲೈನ್ಗೆ ಕರೆ ಮಾಡುವಂತೆ ಕಸ್ಟಮ್ಸ್ ಇಲಾಖೆ ಎಚ್ಚರಿಸಿದೆ.

ಆರ್ಥಿಕವಾಗಿ ಹಿಂದುಳಿದ ವರ್ಗದ ಜನರೇ ಇವರ ಟಾರ್ಗೆಟ್

ಕಸ್ಟಮ್ಸ್ ಅಧಿಕಾರಿಗಳೆಂದು ಹೇಳಿಕೊಂಡು, ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ಕಸ್ಟಮ್ಸ್‌ನಲ್ಲಿ ತಡೆಹಿಡಿದಿದ್ದೇವೆ ಎಂದು ಸುಳ್ಳು ಹೇಳಿ, ಸಮಸ್ಯೆ ಬಗೆಹರಿಸಲು ಹಣ ಪಾವತಿಸಬೇಕು ಎಂದು ಬೆದರಿಸಿ ಹಣ ದೋಚಲಾಗುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ವಂಚಕರು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರನ್ನು ಗುರಿಯಾಗಿಸಿಕೊಂಡು, ಫೋನ್ ಕರೆ, ಸಾಮಾಜಿಕ ಜಾಲತಾಣ ಮತ್ತು ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಭಯ ಸೃಷ್ಟಿಸಿ ವಂಚನೆ ಮಾಡುತ್ತಿದ್ದಾರೆ. ಪ್ರಯಾಣಿಕನೊಬ್ಬ ಕಸ್ಟಮ್ಸ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ, ತಕ್ಷಣ ದಂಡ ಅಥವಾ ಸುಂಕ ಪಾವತಿಸದಿದ್ದರೆ ಜೈಲು ಶಿಕ್ಷೆ ಅಥವಾ ಕಿರುಕುಳ ಎದುರಾಗಲಿದೆ ಎಂದು ಬೆದರಿಸುತ್ತಾರೆ ಎಂದು ಹೇಳಲಾಗಿದೆ.

ವಂಚಕರ ಜಾಲ ಹೇಗಿರುತ್ತೆ ನೋಡಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಸ್ಟಮ್ಸ್ ಕಮಿಷನರ್, ಕಸ್ಟಮ್ಸ್ ಅಧಿಕಾರಿಗಳು ಎಂದಿಗೂ ಫೋನ್, ವಾಟ್ಸಾಪ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಹಣ ಕೇಳುವುದಿಲ್ಲ. ವೈಯಕ್ತಿಕ ಬ್ಯಾಂಕ್ ಖಾತೆ, ಯುಪಿಐ ಅಥವಾ ಡಿಜಿಟಲ್ ವಾಲೆಟ್‌ಗೆ ಹಣ ವರ್ಗಾಯಿಸಲು ಹೇಳುವುದಿಲ್ಲ. ಎಲ್ಲಾ ಸರ್ಕಾರಿ ಪಾವತಿಗಳು ಅಧಿಕೃತ ಕೌಂಟರ್ ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ರಸೀದಿಯೊಂದಿಗೆ ಮಾತ್ರ ನಡೆಯುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.

ವಂಚಕರ ಜಾಲವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಧಿಕಾರಿಗಳು, ಮೊದಲಿಗೆ ಆನ್‌ಲೈನ್‌ನಲ್ಲಿ ಸಂಪರ್ಕಿಸಿ ನಂತರ ಸಂಬಂಧಿಕ ಅಥವಾ ಸ್ನೇಹಿತ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ ಎಂದು ಹೇಳುತ್ತಾರೆ. ಹಣ ವರ್ಗಾವಣೆ ಮಾಡಿದ ತಕ್ಷಣ ಸಂಪರ್ಕ ಕಡಿತಗೊಳಿಸುತ್ತಾರೆ ಎಂದು ವಿವರಿಸಿದ್ದಾರೆ.

ವಂಚನೆಯ ಕರೆಗಳು ಬಂದಲ್ಲಿ ಇಲಾಖೆಯನ್ನೇ ಸಂಪರ್ಕಿಸಿ

ಸುಂಕ ಪಾವತಿ ವಿಚಾರದಲ್ಲಿ ಯಾವುದೇ ಪ್ರಯಾಣಿಕನಿಗೂ ಕಿರುಕುಳ ನೀಡುವುದಿಲ್ಲವೆಂದು ಹೇಳಿರುವ ಕಸ್ಟಮ್ಸ್ ಇಲಾಖೆ, ಎಲ್ಲಾ ಪ್ರಕ್ರಿಯೆಗಳು ಸಿಸಿಟಿವಿ ಮೇಲ್ವಿಚಾರಣೆಯಲ್ಲೇ ನಡೆಯುತ್ತವೆ ಎಂದು ತಿಳಿಸಿದೆ. ಇಂತಹ ವಂಚನೆಯ ಕರೆಗಳು ಬಂದಲ್ಲಿ commrapacc-cusblr@gov.in ಗೆ ಇಮೇಲ್ ಮಾಡುವಂತೆ ಅಥವಾ ಸೈಬರ್ ಕ್ರೈಂ ಹೆಲ್ಪ್‌ಲೈನ್ 1930 ಗೆ ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ವಂಚಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Source link

Vastu for Kitchen: ಮನೆಯಲ್ಲಿ ಮೂರು ಬರ್ನರ್‌ಗಳಿರುವ ಗ್ಯಾಸ್ ಸ್ಟೌವ್ ಬಳಸುತ್ತಿದ್ದೀರಾ? ಹಾಗಿದ್ರೆ ಈ ಸಮಸ್ಯೆ ತಪ್ಪಿದ್ದಲ್ಲ! – Kannada News | Vastu for Kitchen: Why 3 Burner Gas Stoves Harm Home and Prosperity

ಮನೆಯಲ್ಲಿ ಅನಿರೀಕ್ಷಿತವಾಗಿ ಸಮಸ್ಯೆಗಳು, ತೊಂದರೆಗಳು ಎದುರಾದಾಗ, ಅದಕ್ಕೆ ಕಾರಣಗಳನ್ನು ಹುಡುಕುವವರಿದ್ದಾರೆ. ಆದರೆ ಇಂತಹ ಅನೇಕ ಸಮಸ್ಯೆಗಳಿಗೆ ಮನೆಯಲ್ಲಿ ಬಳಸುವ ಮೂರು ಬರ್ನರ್‌ಗಳ ಗ್ಯಾಸ್ ಸ್ಟವ್ ಒಂದು ಪ್ರಮುಖ ಕಾರಣವಾಗಿರಬಹುದು. ವಾಸ್ತು ನಿಯಮಗಳ ಪ್ರಕಾರ, ಒಂದು ಕುಟುಂಬ ಮತ್ತು ಒಂದು ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲು ಕೆಲವು ಪದ್ಧತಿಗಳನ್ನು ಪಾಲಿಸುವುದು ಅನಿವಾರ್ಯ. ಗೃಹಸ್ಥಾಶ್ರಮದಲ್ಲಿ ಅಗ್ನಿಗೆ ಸಂಬಂಧಿಸಿದ ಒಲೆಗಳ ಸಂಖ್ಯೆ ಮಹತ್ವಪೂರ್ಣವಾಗಿದೆ. ಮನೆಯಲ್ಲಿ ಮೂರು ಒಲೆಗಳು ಅಥವಾ ಒಂದೇ ಸ್ಟವ್‌ನಲ್ಲಿ ಮೂರು ಬರ್ನರ್‌ಗಳು ಇರುವುದು ಶಾಸ್ತ್ರಸಮ್ಮತವಲ್ಲ. ಇದಕ್ಕೆ ಬದಲಾಗಿ, ಎರಡು ಅಥವಾ ನಾಲ್ಕು ಒಲೆಗಳಿರುವುದು ಶುಭ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೂರು ಬರ್ನರ್‌ಗಳ ಸ್ಟವ್‌ಗಳು ಜಾಗದ ಉಳಿತಾಯ ಅಥವಾ ಅನುಕೂಲಕ್ಕಾಗಿ ಇರಬಹುದು. ಆದರೆ, ಇದರಿಂದ ಮನೆಯ ಸುಖ-ಶಾಂತಿ ನಾಶವಾಗುತ್ತದೆ. ಮೂರು ಒಲೆಗಳ ಅಗ್ನಿ ಮನೆಯಲ್ಲಿ ಉರಿಯಬಾರದು ಎಂಬುದು ವಾಸ್ತು ನಿಯಮ.

ಮೂರು ಸಂಖ್ಯೆಗೆ ಸಂಬಂಧಿಸಿದಂತೆ ಜಗತ್ತಿನಲ್ಲಿ ಅನೇಕ ಪ್ರಾಮುಖ್ಯತೆಗಳಿವೆ. ಮನೆಯಲ್ಲಿ ಅಗ್ನಿ ಮೂರು ಒಲೆಗಳಲ್ಲಿ ಉರಿಯುವುದರಿಂದ ನಮ್ಮ ಕಾರ್ಯಗಳು ಸಿದ್ಧಿಯಾಗುವುದಿಲ್ಲ ಎಂದು ಹೇಳಲಾಗುತ್ತದೆ. ಇದು ಕೆಲವು ತತ್ವ ನಿಯಮಗಳಿಗೆ ವಿರುದ್ಧವಾಗಿದೆ. ನಮ್ಮ ಪಂಚೇಂದ್ರಿಯಗಳು ರೂಪ, ರಸ, ಗಂಧ ಇತ್ಯಾದಿಗಳನ್ನು ಗ್ರಹಿಸಿ ದೇಹದ ಸಪ್ತಧಾತುಗಳನ್ನು ಚೈತನ್ಯಗೊಳಿಸುತ್ತವೆ. ಚರ್ಮ, ರಕ್ತ, ಮಾಂಸ, ಎಲುಬು, ಮಜ್ಜೆ, ಶುಕ್ಲ ಮತ್ತು ಮೇಧಾ ಈ ಏಳು ಸಪ್ತಧಾತುಗಳು. ಇವುಗಳ ಬೆಳವಣಿಗೆಯು ನಾವು ನೋಡುವ, ಸ್ವೀಕರಿಸುವ ಸಕಾರಾತ್ಮಕ ಶಕ್ತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಮೂರು ಒಲೆಗಳ ಅಗ್ನಿ ನಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು ಸಪ್ತಧಾತುಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಈ ಧಾತುಗಳು ಕ್ಷೀಣಿಸಿದಾಗ, ಅದು ಆರೋಗ್ಯ ಮತ್ತು ಸಂಪತ್ತಿನ ಅವನತಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ

ವಾಸ್ತು ನಿಯಮಗಳು ಮತ್ತು ಗೃಹಸ್ಥಾಶ್ರಮ ಧರ್ಮದ ಪ್ರಕಾರ, ಮೂರು ಒಲೆಗಳು ಮನೆಯಲ್ಲಿ ಇರಬಾರದು. ಈಗಾಗಲೇ ಅಂತಹ ಸ್ಟವ್ ಇದ್ದರೆ, ಅದನ್ನು ತೆಗೆದುಹಾಕಿ, ಬದಲಿಗೆ ಇನ್ನೊಂದು ಬರ್ನರ್ ಇರುವ ಸ್ಟವ್ ಕೊಂಡುಕೊಳ್ಳುವುದು ಅಥವಾ ಇರುವ ಸ್ಟವ್ ಜೊತೆಗೆ ಮತ್ತೊಂದು ಬರ್ನರ್ ಸೇರಿಸಿ ಒಟ್ಟಾರೆ ಬರ್ನರ್‌ಗಳ ಸಂಖ್ಯೆಯನ್ನು ನಾಲ್ಕಕ್ಕೆ ಹೆಚ್ಚಿಸುವುದು ಉತ್ತಮ. ಸಮಸಂಖ್ಯೆಯ ಅಗ್ನಿ ಬರ್ನರ್‌ಗಳು ಮನೆಯನ್ನು ವೃದ್ಧಿಗೊಳಿಸುತ್ತವೆ. ಬೆಸ ಸಂಖ್ಯೆಯವು ಕ್ಷೀಣಿಸುತ್ತವೆ. ಆದ್ದರಿಂದ, ಮೂರು ಬರ್ನರ್‌ಗಳ ಸ್ಟವ್ ಬದಲಾಯಿಸಿ, ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ (ಸಮಸಂಖ್ಯೆ) ಬರ್ನರ್‌ಗಳನ್ನು ಬಳಸುವ ಮೂಲಕ ಮನೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಮತ್ತು ಸುಖವನ್ನು ಅನುಭವಿಸಿ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರು ಅರಮನೆ ಬಳಿ ಭಾರಿ ಭದ್ರತಾ ಲೋಪ? ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾ ಇದ್ದರೂ ಸೆರೆಯಾಗಿಲ್ಲ ಸ್ಫೋಟದ ದೃಶ್ಯ! – Kannada News | Major Security Lapse Near Mysuru Palace? Blast Footage Missing Despite CCTV Cameras

ಮೈಸೂರು, ಡಿಸೆಂಬರ್ 27: ಕ್ರಿಸ್ಮಸ್ ದಿನ ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಮುಂಭಾಗದಲ್ಲಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ಘಟನೆಯಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ. ಬಲೂನು ಮಾರಾಟಗಾರ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಂಜನಗೂಡು ಮೂಲದ ಮಂಜುಳಾ ಹಾಗೂ ಬೆಂಗಳೂರು ಮೂಲದ ಲಕ್ಷ್ಮೀ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದ ಸ್ಥಳದ ಸಮೀಪವೇ ಅಳವಡಿಸಲಾಗಿದ್ದ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾದಲ್ಲಿ ಘಟನೆಯ ಯಾವುದೇ ದೃಶ್ಯ ಸೆರೆಯಾಗದಿರುವುದು ಅಚ್ಚರಿ ಮೂಡಿಸಿದೆ. 360 ಡಿಗ್ರಿ ಕ್ಯಾಮರಾ ಅದಾಗಿದ್ದು, ಘಟನೆ ಸಮಯದಲ್ಲಿ ಬೇರೆ ಭಾಗವನ್ನು ಸೆರೆ ಹಿಡಿಯುತ್ತಿತ್ತು ಎಂದು ಮಾಹಿತಿ ಲಭ್ಯವಾಗಿದೆ. ಅರಮನೆಯ ಭದ್ರತೆಗಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕ್ಯಾಮರಾಗಳನ್ನು ಅಳವಡಿಸಿದ್ದರೂ, ನಿರ್ಣಾಯಕ ಸಮಯದಲ್ಲಿ ದೃಶ್ಯಗಳು ಲಭ್ಯವಾಗದಿರುವುದು ಭದ್ರತಾ ಲೋಪದ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ರಾಜ್ಯ ಗೃಹ ಇಲಾಖೆ ಹಾಗೂ ಮೈಸೂರು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಎನ್ಐಎ ಸಹ ಮಾಹಿತಿ ಕಲೆ ಹಾಕುತ್ತಿದೆ. ಈ ಘಟನೆಯು ಅರಮನೆಯ ಭದ್ರತಾ ವ್ಯವಸ್ಥೆಯ ಬಗ್ಗೆ ಕಳವಳ ಹುಟ್ಟುಹಾಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗದಗ: ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು – Kannada News | Mundargi Incident: 7 Women Brutally Beaten as Child Kidnappers by Mob

ಗದಗ, ಡಿ.27: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಮಕ್ಕಳ‌ ಕಳ್ಳಿಯರು ಎಂದು ಭಾವಿಸಿ 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಸಾರ್ವಜನಿಕರು ಥಳಿಸಿರು ಘಟನೆ ನಡೆದಿದೆ. ಮಕ್ಕಳ‌ ಕಳ್ಳಿಯರು ಎಂದು ಭಾವಿಸಿ ಬಸ್ ನಿಲ್ದಾಣದಲ್ಲಿ ಈ ಮಹಿಳೆಯರಿಗೆ ಹೊಡೆದಿದ್ದಾರೆ. ಈ ಏಳು ಮಹಿಳೆಯರನ್ನು ಧಾರವಾಡ ಜಿಲ್ಲೆ ಅಣ್ಣಿಗೇರಿ‌ ಮೂಲದವರು ಎಂದು ಹೇಳಲಾಗಿದೆ. ಹೇರ್ ಪಿನ್ ಮಾರುತ್ತಿದ್ದ ಅಣ್ಣಿಗೇರಿ‌ ಮೂಲದ ಮಹಿಳೆಯರನ್ನು ಮಕ್ಕಳ ಕಳ್ಳಿಯರು ಎಂದು ಹೇಳಿ ಥಳಿಸಿದ್ದಾರೆ. ಇದೀಗ ಸ್ಥಳೀಯರು ಅಪರಿಚಿತ ಮಹಿಳೆಯರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – Kannada News | You can get all these benefits by waking up during Brahma Muhurta

ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳಬೇಕು (waking up) ಎನ್ನುವ ನಿಯಮವನ್ನು ಬಹಳ ಹಿಂದಿನಿಂದಲೂ ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿದ್ದಾರೆ. ಈ ಅಭ್ಯಾಸ ದೈಹಿಕ, ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲ ಇತರೆ ಕೆಲಸಕ್ಕೂ ತುಂಬಾನೇ ಒಳ್ಳೆಯದು. ಅದರಲ್ಲೂ ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಪ್ರಯೋಜನಗಳು ಇನ್ನೂ ಹೆಚ್ಚಂತೆ. ಹಿಂದೂ ಧರ್ಮದಲ್ಲಿ ಬ್ರಹ್ಮ ಮುಹೂರ್ತವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಬೆಳಿಗ್ಗೆ 4:00 ರಿಂದ 5:30 ರವರೆಗಿನ ಸಮಯವನ್ನು ಬ್ರಹ್ಮ ಮುಹೂರ್ತ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಏಳುವುದರಿಂದ ಶಕ್ತಿ, ಜ್ಞಾನ, ಬುದ್ಧಿವಂತಿಕೆ ಮತ್ತು ಆರೋಗ್ಯ ಲಭಿಸುತ್ತದೆ ಎಂದು ನಂಬಲಾಗಿದೆ. ಹಾಗಿದ್ರೆ ಈ ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋನ ಬನ್ನಿ.

ಬ್ರಹ್ಮ ಮುಹೂರ್ತದಲ್ಲಿ ಏಳುವುದರ ಪ್ರಯೋಜನಗಳೇನು?

ಧಾರ್ಮಿಕ ನಂಬಿಕೆಗಳ ಪ್ರಕಾರ, ಬ್ರಹ್ಮ ಮುಹೂರ್ತದ ಸಮಯದಲ್ಲಿ ಏಳುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ ಮತ್ತು ಈ ಸಮಯದಲ್ಲಿ ಎಚ್ಚರಗೊಳ್ಳುವ ವ್ಯಕ್ತಿಗೆ ದೇವರುಗಳು ಮತ್ತು ದೇವತೆಗಳು ಆಶೀರ್ವಾದ ನೀಡುತ್ತಾರೆ. ಇದಲ್ಲದೆ, ಬ್ರಹ್ಮ ಮುಹೂರ್ತದ ಸಮಯದಲ್ಲಿ ಎಚ್ಚರಗೊಳ್ಳುವ ಅಭ್ಯಾಸವು ಜೀವನದಲ್ಲಿ ಅಪಾರ ಯಶಸ್ಸನ್ನು ತರಲು ಸಹಾಯ ಮಾಡುತ್ತದೆ ಎಂಬ ನಂಬಿಕೆಯಿದೆ.

ವೈಜ್ಞಾನಿಕ ಹಿನ್ನೆಲೆಯಲ್ಲಿ ನೋಡುವುದಾದರೆ, ಬ್ರಹ್ಮಮುಹೂರ್ತದಲ್ಲಿ ಆಮ್ಲಜನಕ ಹೆಚ್ಚಿನ ಮಟ್ಟದಲ್ಲಿರುತ್ತವೆ ಮತ್ತು ಮಾಲಿನ್ಯ ಕಡಿಮೆ ಇರುತ್ತದೆ. ಈ ವಾತಾವರಣವು  ದೇಹವನ್ನು ಚೈತನ್ಯಗೊಳಿಸುತ್ತದೆ ಮತ್ತು ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ. ಅಲ್ಲದೆ ಇದು ಮಾನಸಿಕ ಸ್ಪಷ್ಟತೆ, ಒತ್ತಡ ನಿವಾರಣೆ ಮತ್ತು ಬಲವಾದ ರೋಗನಿರೋಧಕ ವ್ಯವಸ್ಥೆಯಂತಹ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಇನ್ನೂ ಅನೇಕ ಪ್ರಯೋಜನಗಳೂ ಇವೆ. ಅವುಗಳೆಂದರೆ,

ಉತ್ತಮ ಜೀರ್ಣಕ್ರಿಯೆ: ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಳ್ಳುವುದರಿಂದ ದೇಹದ ಸಿರ್ಕಾಡಿಯನ್ ಲಯವು ನಿಯಂತ್ರಿಸಲ್ಪಡುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.

ಶಕ್ತಿ ಮತ್ತು ಚೈತನ್ಯ: ಬ್ರಹ್ಮ ಮುಹೂರ್ತದ ಸಮಯದಲ್ಲಿ ಗಾಳಿಯು ಆಮ್ಲಜನಕದಿಂದ ಸಮೃದ್ಧವಾಗಿದ್ದು, ಈ ಶುದ್ಧ ಗಾಳಿ ದೇಹವನ್ನು ಉಲ್ಲಾಸಗೊಳಿಸುತ್ತದೆ ಮತ್ತು ಚೈತನ್ಯಗೊಳಿಸುತ್ತದೆ. ಇದು ದಿನದ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಉತ್ತಮ ನಿದ್ರೆ: ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಳ್ಳುವುದರಿಂದ ನಿದ್ರೆಯ ಮಾದರಿಗಳು ಕ್ರಮಬದ್ಧವಾಗುತ್ತವೆ, ಇದು ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಉತ್ತಮ ರೋಗನಿರೋಧಕ ಶಕ್ತಿ: ಬ್ರಹ್ಮ ಮುಹೂರ್ತದ ಸಮಯದಲ್ಲಿ ನಿಯಮಿತವಾಗಿ ಏಳುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ವಾತಾವರಣವು ಶುದ್ಧ ಆಮ್ಲಜನಕದಿಂದ ಸಮೃದ್ಧವಾಗಿರುತ್ತದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.

ಮಾನಸಿಕ ಒತ್ತಡದಿಂದ ಮುಕ್ತಿ: ಬ್ರಹ್ಮ ಮುಹೂರ್ತದ ಸಮಯದಲ್ಲಿ ವಾತಾವರಣವು ಶಾಂತ ಮತ್ತು ಶುದ್ಧವಾಗಿದ್ದು, ಇದು ಮನಸ್ಸು ಶಾಂತವಾಗಿರಲು ಅನುವು ಮಾಡಿಕೊಡುತ್ತದೆ. ಅಲ್ಲದೆ  ಈ ಸಮಯ ಧ್ಯಾನ, ಯೋಗ ಮತ್ತು ಪ್ರಾಣಾಯಾಮಕ್ಕೆ ಸೂಕ್ತ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಈ 7 ಆರೋಗ್ಯ ಸಮಸ್ಯೆ ಇರುವವರು ತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬಾರದು ಎಚ್ಚರ!

ಬ್ರಹ್ಮ ಮುಹೂರ್ತದಲ್ಲಿ ಏಳಲು ಈ ಹಂತಗಳನ್ನು ಅನುಸರಿಸಿ:

  • ಬ್ರಹ್ಮ ಮುಹೂರ್ತದ ಸಮಯದಲ್ಲಿ ಎಚ್ಚರಗೊಳ್ಳಲು, ಬೇಗ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಪ್ರತಿದಿನ 7 ಗಂಟೆಗಳ ಕಾಲ ನಿದ್ರೆ ಮಾಡುವ ಗುರಿಯನ್ನು ಹೊಂದಿಸಿ.
  • ಬ್ರಹ್ಮ ಮುಹೂರ್ತದ ಸಮಯದಲ್ಲಿ ಎಚ್ಚರಗೊಳ್ಳಲು, ಭಾರೀ ಭೋಜನವನ್ನು ತಪ್ಪಿಸಿ. ನಿಮ್ಮ ರಾತ್ರಿಯ ಭೋಜನ ಲಘುವಾಗಿರಲಿ.
  • ಬ್ರಹ್ಮ ಮುಹೂರ್ತಕ್ಕೆ 15 ನಿಮಿಷಗಳ ಮೊದಲು ನಿಮ್ಮ ಅಲಾರಂ ಹೊಂದಿಸಿ. ಇದು ನಿಮಗೆ ತಕ್ಷಣ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ. ಮೊದಲಿಗೆ ಒಂದು ಅಥವಾ ಎರಡು ದಿನ ನೀವು ಆಲಸ್ಯ ಅನುಭವಿಸಬಹುದು, ಆದರೆ ನಂತರದ ದಿನಗಳಲ್ಲಿ ನೀವು ಬೇಗನೆ ಎಚ್ಚರಗೊಳ್ಳಲು ಒಗ್ಗಿಕೊಳ್ಳುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version