Headlines

‘ಅದಕ್ಕೂ ನಮಗೂ ಸಂಬಂಧವಿಲ್ಲ’; ‘ಟಾಕ್ಸಿಕ್’ ಟೀಸರ್ ದೂರಿಗೆ ಸೆನ್ಸಾರ್ ಮಂಡಳಿಯ ಪ್ರತಿಕ್ರಿಯೆ – Kannada News | Toxic Teaser Controversy: Censor Board Denies Jurisdiction Over YouTube Content

ಯಶ್ ನಟನೆಯ ‘ಟಾಕ್ಸಿಕ್’ ಟೀಸರ್ (Toxic Teaser) ಸೃಷ್ಟಿಸಿದ ಹಲ್​​ಚಲ್ ಅಷ್ಟಿಷ್ಟಲ್ಲ. ಈ ಸಿನಿಮಾದ ಟೀಸರ್ ನೋಡಿದ ಅನೇಕರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ಟೀಸರ್​​​ನಲ್ಲಿದ್ದ ಬೋಲ್ಡ್​ ದೃಶ್ಯಗಳ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ದರು. ಈ ಸಂಬಂಧ ಸಾಮಾಜಿಕ ಕಾರ್ಯಕರ್ತರು ಹಾಗೂ ಮಹಿಳಾ ಕಮಿಷನ್ ಸೆನ್ಸಾರ್ ಮಂಡಳಿಗೆ ದೂರು ನೀಡಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿತ್ತು. ಆದರೆ, ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಸೆನ್ಸಾರ್ ಮಂಡಳಿ ಸ್ಪಷ್ಟವಾಗಿ ಹೇಳಿದೆ. ಎನ್​ಡಿಟಿವಿ ಮಾಡಿದ ವರದಿ…

Read More

ಯುದ್ಧ ನಿಲ್ಲಿಸಲು ಇರಾನ್​ನ 3 ಷರತ್ತುಗಳು; ಭಾರತದ ಆರ್ಥಿಕತೆ ಮೇಲೇನು ಪರಿಣಾಮ? ಇಲ್ಲಿದೆ ಸಾಧ್ಯಾಸಾಧ್ಯತೆ

ನವದೆಹಲಿ, ಮಾರ್ಚ್ 12: ಪಶ್ಚಿಮ ಏಷ್ಯಾದಲ್ಲಿ (West Asia crisis) ನಡೆಯುತ್ತಿರುವ ಯುದ್ಧ ನಿರೀಕ್ಷೆಮೀರಿ ಮುಂದುವರಿಯುತ್ತಿದೆ. ಇಸ್ರೇಲ್, ಅಮೆರಿಕದ ಜಂಟಿ ದಾಳಿಗಳಿಗೆ ಇರಾನ್ ಪ್ರತಿರೋಧ ಮುಂದುವರಿದಿದೆ. ಪ್ರತಿರೋಧ ಮಾತ್ರವಲ್ಲ, ಇರಾನ್​ನಿಂದ ಮಾರಕವಾದ ಪ್ರತಿದಾಳಿಗಳೂ ಆಗುತ್ತಿವೆ. ಜಾಗತಿಕ ತೈಲ ಮಾರುಕಟ್ಟೆ ಭಾರೀ ವ್ಯತ್ಯಯ ಕಾಣುತ್ತಿದೆ. ಇಡೀ ಜಗತ್ತಿಗೆ ಮಾರಕವಾದ ಈ ಯುದ್ಧವನ್ನು ಆರಂಭಿಸಿದಷ್ಟು ಸುಲಭವಾಗಿ ನಿಲ್ಲಿಸಲು ಆಗುತ್ತಿಲ್ಲ. ಇರಾನ್ ಈ ಯುದ್ಧ ನಿಲ್ಲಿಸುವ ಅವಕಾಶಕ್ಕೆ ಸಿದ್ಧ ಇದೆ. ಆದರೆ, ಮೂರು ಷರತ್ತುಗಳನ್ನು ಹಾಕಿದೆ. ಈ ಷರತ್ತುಗಳು ಹೀಗಿವೆ: ಅಮೆರಿಕ…

Read More

ಬರೋಬ್ಬರಿ 584 ರನ್​ಗಳಿಸಿದ ಜಮ್ಮು-ಕಾಶ್ಮೀರ: ಕರ್ನಾಟಕದ ಗೆಲುವಿಗೆ ಇದೊಂದೇ ದಾರಿ – Kannada News | Jammu and Kashmir Hammered 584 Runs Against Karnataka in The Ranji Final

ಹುಬ್ಬಳ್ಳಿಯ ಕೆಎಸ್​ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಜಮ್ಮು-ಕಾಶ್ಮೀರ ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 584 ರನ್​ಗಳಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಮ್ಮು-ಕಾಶ್ಮೀರ ಪರ ಆರಂಭಿಕನಾಗಿ ಕಣಕ್ಕಿಳಿದ ಯಾವರ್ ಹಸನ್ 88 ರನ್ ಬಾರಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭಂ ಪುಂಡಿರ್ 121 ರನ್​ ಗಳಿಸಿದ್ದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕ ಪರಸ್ ಡೋಗ್ರಾ 70 ರನ್​ಗಳ ಇನಿಂಗ್ಸ್ ಆಡಿದರು. ಮತ್ತೊಂದೆಡೆ ಅಬ್ದುಲ್ ಸಮದ್ 61…

Read More

World Intellectual Property Day 2026: ಬೌದ್ಧಿಕ ಆಸ್ತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ – Kannada News | World Intellectual Property Day 2026: Why celebrate World Intellectual Property Day?

ವಿಶ್ವ ಬೌದ್ಧಿಕ ಆಸ್ತಿ ದಿನImage Credit source: Freepik ಬೌದ್ಧಿಕ ಆಸ್ತಿ (Intellectual Property) ಎಂಬುದು ಮಾನವನ ಬುದ್ಧಿಶಕ್ತಿಯ ಅಮೂರ್ತ ಸೃಷ್ಟಿಯನ್ನು ಒಳಗೊಂಡಿರುವ ಆಸ್ತಿಯ ವರ್ಗವಾಗಿದ್ದು, ಇದು ಬೆಲೆ ಕಟ್ಟಲಾಗದಷ್ಟು ಅಮೂಲ್ಯವಾಗಿದೆ. ಪೇಟೆಂಟ್‌ಗಳು, ಹಕ್ಕುಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು ಮತ್ತು ವಿನ್ಯಾಸಗಳು, ಕೃತಿಸ್ವಾಮ್ಯ ಇವೆಲ್ಲವೂ ಬೌದ್ಧಿಕ ಆಸ್ತಿಗಳಾಗಿದ್ದು, ಲೇಖಕ, ಕಥೆಗಾರ, ವಿಜ್ಞಾನಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಬುದ್ಧಿ ಶಕ್ತಿ ಹಾಗೂ ಸೃಜನಶೀಲತೆಯಿಂದ  ಹೊರ ತರುವ ಕಥೆ, ಸಂಗೀತ, ಪುಸ್ತಕ, ವಿನ್ಯಾಸಗಳನ್ನು ಬೇರೆ ಯಾರು ಕದಿಯದಂತೆ ಈ ಅಮೂಲ್ಯ ಬೌದ್ಧಿಕ…

Read More

ಚಿರಂಜೀವಿ ಸಿನಿಮಾ ನೋಡುವಾಗಲೇ ಥಿಯೇಟರ್​​​ನಲ್ಲಿ ಕುಸಿದು ಬಿದ್ದು ಅಭಿಮಾನಿ ಸಾವು – Kannada News | Chiranjeevi’s ‘Man Shankara Vara Prasad Garu’ Blockbuster: Fan Dies in Theatre Tragedy

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಬ್ಲಾಕ್​​ಬಸ್ಟರ್ ಆಗಿದೆ. ಈ ಸಿನಿಮಾ ಒಳ್ಳೆಯ ಟಾಕ್ ಪಡೆದುಕೊಂಡಿದೆ. ಅಭಿಮಾನಿಗಳು ವಿಂಟೇಜ್ ಬಾಸ್ ಮತ್ತೆ ಬಂದಿದ್ದಾರೆ ಎಂದು ಸಂಭ್ರಮಿಸುತ್ತಿದ್ದಾರೆ. ಚಿರಂಜೀವಿ ಅವರ ಸಿನಿಮಾ ಹಲವು ವರ್ಷಗಳ ಬಳಿಕೆ ಗೆದ್ದಿದೆ. ಈ ಮಧ್ಯೆ ಚಿರಂಜೀವಿ ವಲಯದಲ್ಲಿ ದುಃಖಕರ ಸುದ್ದಿ ಒಂದು ಸಿಕ್ಕಿದೆ. ಈ ಸಿನಿಮಾ ನೋಡಿದ ಅಭಿಮಾನಿ ಥಿಯೇಟರ್​​ನಲ್ಲಿ ಸಾವನಪ್ಪಿದ್ದಾರೆ. ಸೋಲು ಕಾಣದ ಅನಿಲ್ ರವಿಪುಡಿ ಆ ಟ್ರ್ಯಾಕ್ ಅನ್ನು ಮುಂದುವರಿಸುತ್ತಿದ್ದಾರೆ ಮತ್ತು ಒಟ್ಟಾರೆಯಾಗಿ ಅವರು…

Read More

ನಾಳೆಯಿಂದ 2 ದಿನ ಬಂಗಾಳ, ಅಸ್ಸಾಂಗೆ ಪ್ರಧಾನಿ ಮೋದಿ ಭೇಟಿ; ಹಲವು ಯೋಜನೆಗಳಿಗೆ ಚಾಲನೆ – Kannada News | PM Narendra Modi to visit West Bengal and Assam on January 17 and 18 to inaugurate various projects

ನವದೆಹಲಿ, ಜನವರಿ 16: ಜನವರಿ 17 ಮತ್ತು 18ರಂದು ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗೆ ಎರಡು ದಿನಗಳ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಪ್ರಮುಖ ರೈಲು ಮತ್ತು ರಸ್ತೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬೋಡೋ ಸಮುದಾಯದ ಶ್ರೀಮಂತ ಪರಂಪರೆಯನ್ನು ಆಚರಿಸುವ ಐತಿಹಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾದ “ಬಾಗುರುಂಬಾ ದ್ವೌ 2026″ದಲ್ಲಿ ಮೋದಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಶನಿವಾರ ಮಧ್ಯಾಹ್ನ 12.45ರ ಸುಮಾರಿಗೆ ಪಶ್ಚಿಮ ಬಂಗಾಳದ ಮಾಲ್ಡಾಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಮಾಲ್ಡಾ ಪಟ್ಟಣದ…

Read More

ಯಾಣದ ಕಪ್ಪು ಶಿಲೆಗಳಿಗೆ ಈಗ ‘ರಾಷ್ಟ್ರೀಯ ಪಾರಂಪರಿಕ’ ಕಿರೀಟ: ಜಿಎಸ್‌ಐನಿಂದ ಐತಿಹಾಸಿಕ ಘೋಷಣೆ! – Kannada News | Yana Caves Declared National Geo heritage Site by GSI in Uttar Kannada

ಉತ್ತರ ಕನ್ನಡ, ಏಪ್ರಿಲ್ 17: ಜಿಲ್ಲೆಯ ಗೋಕರ್ಣ (Gokarna) ಸಮೀಪದ ಯಾಣ ಗುಹೆಗಳನ್ನು ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ರಾಷ್ಟ್ರೀಯ ಮಹತ್ವದ ಭೂ-ಪಾರಂಪರಿಕ ತಾಣವಾಗಿ ಘೋಷಿಸಿದೆ. ಏಪ್ರಿಲ್ 13 ರಂದು ಹೊರಡಿಸಿದ ಪತ್ರದಲ್ಲಿ ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಜಿಎಸ್‌ಐಯ 176ನೇ ಸ್ಥಾಪನಾ ದಿನಾಚರಣೆಯ ಅಂಗವಾಗಿ ಈ ಘೋಷಣೆ ಮಾಡಲಾಗಿದೆ. ಪತ್ರದಲ್ಲೇನಿದೆ? ಯಾಣಲ್ಲಿನ ಗಮನಾರ್ಹ ಶಿಲಾ ದ್ರವ್ಯರಾಶಿಗಳು 2,700 ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿವೆ. ಅವು ಪೂರ್ವ-ಕೇಂಬ್ರಿಯನ್ ಡೊಲೊಮಿಟಿಕ್ ಸುಣ್ಣದ ಕಲ್ಲುಗಳಿಂದ ಕೂಡಿವೆ. ಲಕ್ಷಾಂತರ ವರ್ಷಗಳಿಂದ…

Read More

ಮಿಂಚಿನ ವೇಗ… ಹೊಸ ಇತಿಹಾಸ ಬರೆದ ಗುರಿಂದರ್ವೀರ್ ಸಿಂಗ್ – Kannada News | Gurindervir singh smashes 100m national record with historic 10 09s

ರಾಂಚಿಯ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದ 2026ರ ನ್ಯಾಷನಲ್ ಸೀನಿಯರ್ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಂಜಾಬ್‌ನ 25 ವರ್ಷದ ಓಟಗಾರ ಗುರಿಂದರ್ವೀರ್ ಸಿಂಗ್ ಕೇವಲ 10.09 ಸೆಕೆಂಡುಗಳಲ್ಲಿ ಗುರಿ ತಲುಪಿ, ಪುರುಷರ 100 ಮೀಟರ್ ಓಟದಲ್ಲಿ ಹೊಸ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಈ ಮೂಲಕ ಭಾರತದ ಇತಿಹಾಸದಲ್ಲೇ 10.10 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಓಡಿದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭರ್ಜರಿ ಪೈಪೋಟಿ: ನ್ಯಾಷನಲ್ ಸೀನಿಯರ್ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ 100…

Read More

ತಪ್ಪು ಮಾಡಿದ್ರೆ ದಂಡ ಹಾಕಿ, ಕೈ ಮಾಡುವ ಹಕ್ಕಿಲ್ಲ: ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಟ್ರಾಫಿಕ್ ಪೊಲೀಸರ ದೌರ್ಜನ್ಯ – Kannada News | Bangalore Police Misconduct: When Can Traffic Cops Use Force? Legal Limits Explained

ಬೆಂಗಳೂರು, ಮೇ.1: ವಾಹನ ತಪಾಸಣೆಯ ಸಂದರ್ಭದಲ್ಲಿ ಸಂಚಾರಿ ಪೊಲೀಸರು ಸಾರ್ವಜನಿಕರ ಮೇಲೆ ಹಲ್ಲೆ ಮಾಡುವ ಅಥವಾ ಅನುಚಿತವಾಗಿ ವರ್ತಿಸುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ. ಆದರೆ, ಭಾರತೀಯ ಮೋಟಾರು ವಾಹನ ಕಾಯ್ದೆ 1988 ರ ಅಡಿಯಲ್ಲಿ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಕಾನ್‌ಸ್ಟೆಬಲ್‌ಗೆ ನಾಗರಿಕರ ಮೇಲೆ ದೈಹಿಕವಾಗಿ ಹಲ್ಲೆ ಮಾಡುವ ಅಧಿಕಾರವಿಲ್ಲ ಎಂಬುದು ಕಾನೂನುಬದ್ಧ ಸತ್ಯ. ಆದರೆ ಬೆಂಗಳೂರಿನಲ್ಲಿ ಪೊಲೀಸರು ಕಾನೂನು ವಿರೋಧವಾಗಿ ನಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಟೋ ಚಾಲಕನೊಬ್ಬನಿಗೆ ಟ್ರಾಫಿಕ್​​ ಪೊಲೀಸರು ಹಲ್ಲೆ ಮಾಡಿದ್ದಾರೆ….

Read More

ನಾಳೆಯ ಹವಾಮಾನ: ರಾಜ್ಯದ ಹಲವೆಡೆ ಚಳಿ, ಇರಲಿದೆ ಮಂಜಿನ ಅಬ್ಬರ – Kannada News | Tomorrow Weather: Severe cold wave expected in South and North Interior Karnataka tomorrow, heavy fog in Bengaluru

ಬೆಂಗಳೂರು, ಡಿಸೆಂಬರ್​​ 23: ರಾಜ್ಯದಾದ್ಯಂತ ನಾಳೆಯೂ ಚಳಿಯ ಪ್ರಭಾವ ಮುಂದುವರಿಯಲಿದ್ದು, ಹಲವು ಜಿಲ್ಲೆಗಳಲ್ಲಿ ತಾಪಮಾನ ಇಳಿಕೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಬೆಳಗಿನ ಜಾವ ತೀವ್ರ ಚಳಿ ಹಾಗೂ ಮಂಜು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳಗಿನ ಸಮಯ ದಟ್ಟ ಮಂಜು ಕಾಣಿಸಿಕೊಲ್ಳುವ ಸಾಧ್ಯತೆ ಇದ್ದು, ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕೆಂದು ಸೂಚಿಸಲಾಗಿದೆ. ದಿನದ ಹೊತ್ತಿನಲ್ಲಿ ಒಳಹವೆ ಇರಲಿದ್ದು, ತಾಪಮಾನ…

Read More