Chikkamagaluru: ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್; ವಿಡಿಯೋ ವೈರಲ್ – Kannada News | Youth Dances With Dog at New Year Party in Chikkamagaluru; Video Goes Viral
ಚಿಕ್ಕಮಗಳೂರು, ಜನವರಿ 01: ಹೊಸ ವರ್ಷದ ಹಿನ್ನೆಲೆ ರಾಜ್ಯಾದ್ಯಂತ ಪಾರ್ಟಿಗಳು ಜೋರಾಗಿಯೇ ನಡೆದಿವೆ. ಅತಿಯಾದ ಮದ್ಯ ಸೇವನೆ ಕಾರಣ ಹಲವರು ರಸ್ತೆಯಲ್ಲಿಯೇ ತೂರಾಟ ಕೂಡ ನಡೆಸಿದ್ದಾರೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುಡಿದ ಮತ್ತಲ್ಲಿದ್ದ ಯುವಕನೋರ್ವ ಬೀದಿ ನಾಯಿ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನ್ಯೂ ಇಯರ್ ಹಿನ್ನೆಲೆ ಕಣತಿ ಗ್ರಾಮದ ಸಂದೀಪ್ ಮತ್ತು ಸ್ನೇಹಿತರು ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಬೀದಿ ನಾಯಿಯ ಮುಂಬದಿ ಕಾಲುಗಳನ್ನು ಹಿಡಿದುಕೊಂಡು ಸಂದೀಪ್ ಡ್ಯಾನ್ಸ್ ಮಾಡಿದ್ದಾರೆ….