ಪದೇ ಪದೇ ಕರೆಂಟ್​​ ತೆಗೆಯುತ್ತಿದ್ದ ಪವರ್​​ ಅಧಿಕಾರಿಗಳಿಗೆ ಶಾಕ್​​ ಕೊಟ್ಟ ಶಾಸಕ – Kannada News | MLA Virendra Jati Disconnects Officials’ Electricity in Haridwar After Power Cuts

ಹರಿದ್ವಾರ, ಡಿ25: ಅಧಿಕಾರಿಗಳು ಜನರನ್ನು ಗೋಳಾಡಿಸುವುದನ್ನು ನೋಡಿರಬಹುದು, ಆದರೆ ಒಬ್ಬ ಜನಪ್ರತಿನಿಧಿಯನ್ನು ಅಧಿಕಾರಿಗಳು ಆಟ ಆಡಿಸುವುದನ್ನು ನೋಡಿರಲು ಸಾಧ್ಯವಿಲ್ಲ. ಶಾಸಕರೊಬ್ಬರು ತಮ್ಮ ಮಾತಿಗೆ ಕಿಮ್ಮತ್ತು ನೀಡದ ಅಧಿಕಾರಿಗಳಿಗೆ ಸರಿಯಾದ ಪಾಠ ಕಳಿಸಿದ್ದಾರೆ. ಉತ್ತರಾಖಂಡದ ಹರಿದ್ವಾರ (Haridwar) ಜಿಲ್ಲೆಯ ಝಬ್ರೆಡಾದ ಕಾಂಗ್ರೆಸ್ ಶಾಸಕ ವೀರೇಂದ್ರ ಜಾತಿ ಅವರು, ಪ್ರತಿದಿನ ತನ್ನ ಏರಿಯಾದಲ್ಲಿ ವಿದ್ಯುತ್ ಕಡಿತದಿಂದ ಬೇಸತ್ತು. ತಾವೇ ವಿದ್ಯುತ್ ಕಂಬ ಹತ್ತಿ ಇಲಾಖೆಯ ಮೂವರು ಅಧಿಕಾರಿಗಳ ಮನೆಯ ವಿದ್ಯುತ್ ಕಡಿತಗೊಳಿಸಿದ್ದಾರೆ. ವಿದ್ಯುತ್ ಕಡಿತದ ಕುರಿತು ವಿದ್ಯುತ್ ಇಲಾಖೆಯು ಶಾಸಕರ ವಿರುದ್ಧ ರೂರ್ಕಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡ ಮೂವರಲ್ಲಿ ವಿದ್ಯುತ್ ಇಲಾಖೆಯ ಮುಖ್ಯ ಎಂಜಿನಿಯರ್ ಕೂಡ ಒಬ್ಬರು ಎಂದು ಹೇಳಲಾಗಿದೆ.

ಶಾಸಕ ವೀರೇಂದ್ರ ಜಾತಿ ತಮ್ಮ ಬೆಂಬಲಿಗರ ಸಹಾಯದಿಂದ ಏಣಿ ಮತ್ತು ಕತ್ತರಿಯನ್ನು ಹಿಡಿದುಕೊಂಡ ಅಧಿಕಾರಿಗಳ ಮನೆಯ ಮುಂದೆ ಇರುವ ವಿದ್ಯುತ್​​ ಕಂಬ ಮುಂದೆ ಬಂದಿದ್ದಾರೆ. ಮೊದಲು ಬೋಟ್ ಕ್ಲಬ್‌ನಲ್ಲಿರುವ ಸೂಪರಿಂಟೆಂಡಿಂಗ್ ಎಂಜಿನಿಯರ್ ವಿವೇಕ್ ರಜಪೂತ್ ಅವರ ಅಧಿಕೃತ ನಿವಾಸದ ಹೊರಗಿನ ವಿದ್ಯುತ್ ಕಂಬವನ್ನು ಹತ್ತಿ ಅವರ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಇದಾದ ನಂತರ, ಶಾಸಕರು ಮುಖ್ಯ ಎಂಜಿನಿಯರ್ ಅನುಪಮ್ ಸಿಂಗ್ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ವಿನೋದ್ ಪಾಂಡೆ ಅವರ ಅಧಿಕೃತ ನಿವಾಸದ ಬಳಿ ಇರುವ ವಿದ್ಯುತ್​​ ಕಂಬ ಹತ್ತಿ ವಿದ್ಯುತ್​​​ ಕಟ್​​ ಮಾಡಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಶಾಸಕರು, “ನಮ್ಮ ಏರಿಯಾದಲ್ಲಿ ದಿನಕ್ಕೆ ಐದರಿಂದ ಎಂಟು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಮತ್ತು ವ್ಯಾಪಾರದಲ್ಲಿ ಗಮನಾರ್ಹ ನಷ್ಟ ಉಂಟಾಗುತ್ತಿದೆ. ವಿದ್ಯುತ್ ಕಡಿತದ ವಿಷಯದ ಬಗ್ಗೆ 10 ದಿನಗಳಿಂದ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ರು, ಯಾವುದೇ ಕ್ರಮ ತೆಗೆದಿಕೊಂಡಿಲ್ಲ. ಈಗ ಅವರ ಮನೆಯಲ್ಲಿ ಒಂದು ಗಂಟೆ ಕರೆಂಟ್​​​ ಇಲ್ಲದಕ್ಕೆ ಹೇಗೆ ನರಳಾಡಿದ್ದಾರೆ. ಪ್ರತಿದಿನ ನಮ್ಮ ಏರಿಯಾದಲ್ಲಿ ಜನ ಗಂಟೆಗಟ್ಟಲೆ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ಘಟನೆಯ ನಂತರ ಮತ್ತೊಂದು ಭಯಾನಕ ಅಪಘಾತ: ಎರಡು ಕಾರಿಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್ಸು, 7 ಮಂದಿ ಸಾವು

ಇನ್ನು ಶಾಸಕರು ಹೀಗೆ ಮಾಡಿದಕ್ಕೆ ಶಾಸಕರ ವಿರುದ್ಧ ಇಲಾಖೆ ನೀಡಿದ ದೂರಿನಲ್ಲಿ, ನಮಗೆ ತಿಳಿಸದೆ, ತಪ್ಪಾಗಿ ವಿದ್ಯುತ್​​ ಕಡಿತ ಮಾಡಿದ್ದಾರೆ. ಸರಿಯಾದ ರೀತಿಯಲ್ಲಿ ಕರೆಂಟ್​​​ ತೆಗೆದಿಲ್ಲ. ಇದು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಇದು ನಿಯಮಗಳ ಉಲ್ಲಂಘನೆ ಮಾತ್ರವಲ್ಲದೆ, ಸರ್ಕಾರಿ ಕೆಲಸದಲ್ಲಿ ನೇರ ಹಸ್ತಕ್ಷೇಪವೂ ಆಗಿದೆ ಎಂದು ಹೇಳಲಾಗಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು – Kannada News | Bigg Boss Kannada new promo: Kavya cried because of Bigg Boss order

ಬಿಗ್​​ಬಾಸ್ (Bigg Boss) ಮನೆಯಲ್ಲಿ ಈ ವಾರ ಫ್ಯಾಮಿಲಿ ವಾರ ಆಗಿದೆ. ಎಲ್ಲ ಸ್ಪರ್ಧಿಗಳ ಪೋಷಕರು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಗಿಲ್ಲಿಗೆ, ಕಾವ್ಯಾ ಮನೆಯವರ ಬಗ್ಗೆ ಭಯ ಇತ್ತು. ಇದೀಗ ಕಾವ್ಯಾ ಮನೆಯವರು ಸಹ ಬಂದಿದ್ದಾರೆ. ಆದರೆ ಮನೆಗೆ ಬಂದವರೇ ಬಿಗ್​​ಬಾಸ್ ನಿಯಮವನ್ನು ಮುರಿದಿದ್ದಾರೆ. ಹೊರಗಿನಿಂದ ಬಂದವರು ಹೊರಗಿನ ವಿಷಯಗಳನ್ನು ಮನೆಯವರ ಬಳಿ ಮಾತನಾಡುವಂತಿಲ್ಲ. ಆದರೆ ಕಾವ್ಯಾ ಅವರ ಸಹೋದರ ಹೊರಗಿನ ವಿಷಯಗಳನ್ನು ಕಾವ್ಯಾ ಬಳಿ ಹೇಳಿದ್ದಾರೆ. ಇದರಿಂದಾಗಿ ಬಿಗ್​​ಬಾಸ್, ಕಾವ್ಯಾ ಅವರ ಕುಟುಂಬದವರನ್ನು ಅವಧಿಗೆ ಮುನ್ನ ಹೊರಗೆ ಕರೆಸಿಕೊಂಡಿದ್ದಾರೆ. ಇದರಿಂದ ಕಾವ್ಯಾ ಕಣ್ಣೀರು ಹಾಕಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

KSRTC ಬಸ್​​ನಲ್ಲಿದ್ದ ಅರ್ಧ ಕೋಟಿ ಹಣ ಕಳವು: ಸಿನೆಮಾ ಸ್ಟೈಲ್​ನಲ್ಲಿ ಆರೋಪಿ ಅರೆಸ್ಟ್​​ – Kannada News | Chikkaballapur KSRTC Bus Theft, MP Gang Member Arrested, 55 Lakh Recovered

ಚಿಕ್ಕಬಳ್ಳಾಪುರ, ಡಿಸೆಂಬರ್​​ 25: ಊಟಕ್ಕೆ ನಿಲ್ಲಿಸಿದ್ದ ವೇಳೆ ಬೆಂಗಳೂರು-ಹೈದರಾಬಾದ್​​ KSRTC ಎಸಿ ಸ್ಲೀಪರ್​​ ಬಸ್​ನಲ್ಲಿದ್ದ 55 ಲಕ್ಷ ರೂ. ಹಣ ಕಳವು ಪ್ರಕರಣ ಸಂಬಂಧ ಹುಡಿಬಂಡೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳು ಎಸ್ಕೇಪ್​​ ಆಗಿದ್ದು, ಕಳುವಾಗಿದ್ದ ಹಣವನ್ನ ಬಂಧಿತನಿಂದ ಜಪ್ತಿ ಮಾಡಲಾಗಿದೆ. ಎಲ್ಲ ಆರೋಪಿಗಳು ಮಧ್ಯಪ್ರದೇಶ ಮೂಲದವರು ಎಂಬುದು ತನಿಳೆ ವೇಳೆ ಬಯಲಾಗಿದೆ.

ಪ್ರಕರಣ ಸಂಬಂಧ ಮಧ್ಯ ಪ್ರದೇಶದಲ್ಲಿ ಆರೋಪಿ ಅಸ್ಲಂ ಖಾನ್ ಎಂಬಾತನನ್ನು ಬಂಧಿಸಲಾಗಿದ್ದು, ಕದ್ದ ಹಣವನ್ನೂ ರಿಕವರಿ ಮಾಡಲಾಗಿದೆ. ಈತನಿಗೆ ಕೃತ್ಯವೆಸಗಲು ಸಹಕಾರ ನೀಡಿದ್ದ ಮಧ್ಯ ಪ್ರದೇಶದ್ದೇ ಮೂಲದವರಾದ ಮನೀರ್ ಖಾನ್, ಅಭ್ಯಾಖಾನ್ ಮತ್ತು ಶೇರು ಪರಾರಿಯಾಗಿದ್ದಾರೆ. ಬಸ್​​ನಲ್ಲಿ ಪ್ರಯಾಣಿಸುವವರ ಬೆಲೆಬಾಳುವ ವಸ್ತು, ಚಿನ್ನಾಭರಣ, ಹಣ ಕಳ್ಳತನ ಮಾಡುವುದೇ ಈ ಗ್ಯಾಂಗ್​​ ಕಾಯಕವಾಗಿತ್ತು. ಕಳ್ಳತನ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರದ ಜಿಲ್ಲೆಯ ಬೀಚಗಾನಹಳ್ಳಿ ಕ್ರಾಸ್ ಬಳಿ ಬಾಡಿಗೆಗೆ ಇವರು ರೂಮ್ ಕೂಡ​​ ಪಡೆದಿದ್ದರು. ಕದ್ದ ಹಣವನ್ನು ಇಲ್ಲೇ ಇಟ್ಟು ಆರೋಪಿಗಳು ಮಧ್ಯಪ್ರದೇಶಕ್ಕೆ ತೆರಳಿದ್ದರು. ಹೀಗಾಗಿ ಹಣ ಸೇಫ್​​ ಆಗಿ ಇತ್ತು ಎನ್ನಲಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ KSRTC ಬಸ್​​ಗೆ ನುಗ್ಗಿ ಬ್ಯಾಗ್​​ ಕದ್ದು ಎಸ್ಕೇಪ್​; ಕಳುವಾಗಿದ್ದು ಅರ್ಧಕೋಟಿ ಹಣ!

ಘಟನೆ ಏನು?

ಇದೇ ತಿಂಗಳ 8ನೇ ತಾರೀಕು ಬೆಂಗಳೂರಿನಿಂದ ಹೈದರಾಬಾದ್​​ಗೆ ಹೊರಟಿದ್ದ KSRTC ಎಸಿ ಸ್ಲೀಪರ್​​ ಐಷಾರಾಮಿ ಬಸ್​​ನಲ್ಲಿ ವೆಂಕಟೇಶ್ವರ್​ ರಾವ್​ ಎಂಬವರು ಪ್ರಯಾಣಿಸುತ್ತಿದ್ದರು. ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಗ್ರಾಮದ ಬಳಿ ಇರುವ ಹೋಟಲ್​​ವೊಂದರಲ್ಲಿ ಪ್ರಯಾಣಿಕರಿಗೆ ಊಟ ಮಾಡಲು ಚಾಲಕ ಬಸ್​​ ನಿಲ್ಲಿಸಿದ್ದ. ಈ ವೇಳೆ ವೆಂಕಟೇಶ್ವರ್​ ರಾವ್ ತಮ್ಮ ಬಳಿ ಇದ್ದ ಹಣದ ಬ್ಯಾಗ್​​ನ ಬಸ್​​ನಲ್ಲೇ ಬಿಟ್ಟು ಊಟಕ್ಕೆ ತೆರಳಿದ್ದರು. ಆದರೆ ಹಿಂದಿರುಗಿ ಬಂದು ನೋಡುವಾಗ ಸೀಟ್​​ನಲ್ಲಿದ್ದ ಬ್ಯಾಗ್​​ ನಾಪತ್ತೆಯಾಗಿತ್ತು. ಕಾರಲ್ಲಿ ಬಂದ ವ್ಯಕ್ತಿ ಸೀದಾ ಬಸ್​​ಗೆ ನುಗ್ಗಿ ಬ್ಯಾಗ್​​ ತೆಗೆದುಕೊಂಡು ಹೋಗಿರುವ ಬಗ್ಗೆ ಸಹ ಪ್ರಯಾಣಿಕರು ಮಾಹಿತಿ ನೀಡಿದ್ದರು. ಘಟನೆ ಬಗ್ಗೆ ವೆಂಕಟೇಶ್ವರ್​ ರಾವ್ ಅವರ ದೂರಿನ ಬೆನ್ನಲ್ಲೇ ಪೊಲೀಸರು ತನಿಖೆಗೆ ಇಳಿದಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಶಿವರಾಜ್ ಕುಮಾರ್ (Shiva Rajkumar), ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ ‘45’ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾ ನೋಡಿದವರೆಲ್ಲ ಶಿವಣ್ಣ ಅವರ ಪಾತ್ರವನ್ನು ಬಹುವಾಗಿ ಕೊಂಡಾಡುತ್ತಿದ್ದಾರೆ. ಶಿವಣ್ಣನ ‘ಶಿವತಾಂಡವ’ವನ್ನು ಕೊಂಡಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿವಣ್ಣ, ತಮ್ಮ ಎಂದಿನ ಸರಳತೆಯಲ್ಲಿ, ‘ನನ್ನ ಪಾತ್ರ ಹಿಟ್ ಆಗಲು ಮುಖ್ಯ ಕಾರಣ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರ ಪಾತ್ರ. ಅವರು ಮೊದಲಾರ್ಧವನ್ನು ಅದ್ಭುತವಾಗಿ ಕ್ಯಾರಿ ಮಾಡಿದ್ದರಿಂದ ಮಾತ್ರವೇ ನನ್ನ ಪಾತ್ರ ಕೊನೆಯಲ್ಲಿ ಶೈನ್ ಆಗಿದೆ’ ಎಂದಿದ್ದಾರೆ. ‘45’ ಸಿನಿಮಾವನ್ನು ಶಿವಣ್ಣ ವಿಶ್ಲೇಷಿಸಿರುವ ವಿಡಿಯೋ ಇಲ್ಲಿದೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ವಿದೇಶದಲ್ಲಿ ವಿಜಯ್ ಅದ್ಧೂರಿ ಆಡಿಯೋ ಲಾಂಚ್: ಕಠಿಣ ನಿಯಮ ಹೇರಿದ ಪೊಲೀಸರು – Kannada News | Jana Nayagan movie audio launch in Malesia police set some rules

ದಳಪತಿ ವಿಜಯ್ (Thalapathy Vijay), ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ಜೊತೆ ಜೊತೆಯಾಗಿ ಸಾಗುತ್ತಿದ್ದಾರೆ. ಆದರೆ ತಾವು ಸಿನಿಮಾ ಪಯಣವನ್ನು ಮುಗಿಸುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಈಗ ಚಿತ್ರೀಕರಣಗೊಳ್ಳುತ್ತಿರುವ ‘ಜನ ನಾಯಗನ್’ ಅವರ ಕೊನೆಯ ಸಿನಿಮಾ ಆಗಲಿದೆಯಂತೆ. ‘ಜನ ನಾಯಗನ್’ ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ. ಸಿನಿಮಾದ ಅದ್ಧೂರಿ ಪ್ರಚಾರಕ್ಕೆ ವಿಜಯ್ ಚಾಲನೆ ನೀಡಲಿದ್ದು, ಸಿನಿಮಾದ ಆಡಿಯೋ ಲಾಂಚ್ ಇವೆಂಟ್ ಅನ್ನು ವಿದೇಶದಲ್ಲಿ ಆಯೋಜಿಸಲಾಗುತ್ತಿದೆ. ಆದರೆ ಕೆಲವು ನಿಯಮಗಳನ್ನು ಅಲ್ಲಿನ ಸ್ಥಳೀಯ ಪೊಲೀಸರು ಹೇರಿದ್ದಾರೆ.

ನೆರೆಯ ರಾಷ್ಟ್ರವಾದ ಮಲೇಷ್ಯಾನಲ್ಲಿ ವಿಜಯ್ ಅವರ ‘ಜನ ನಾಯಗನ್’ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. ಮಲೇಷ್ಯಾನಲ್ಲಿ ಸಾಕಷ್ಟು ತಮಿಳು ಜನರಿದ್ದು, ಮಲೇಷ್ಯಾ, ತಮಿಳರಿಗೆ ಎರಡನೇ ತಮಿಳುನಾಡು ಎಂಬಂತೆ ಆಗಿದೆ. ಇದೇ ಕಾರಣಕ್ಕೆ ವಿಜಯ್ ಅವರು ಇಲ್ಲಿ ಆಡಿಯೋ ಲಾಂಚ್ ಆಯೋಜಿಸಿದ್ದಾರೆ. ಈ ಹಿಂದೆ ಸಹ ಕೆಲವಾರು ತಮಿಳು ಸಿನಿಮಾಗಳ ಕಾರ್ಯಕ್ರಮಗಳು ಮಲೇಷ್ಯಾನಲ್ಲಿ ನಡೆದಿವೆ. ಆದರೆ ಈ ಬಾರಿ ವಿಜಯ್​​ಗೆ ಕೆಲವು ಕಠಿಣ ನಿಯಮಗಳನ್ನು ಸ್ಥಳೀಯ ಪೊಲೀಸರು ಹೇರಿದ್ದಾರೆ.

ಮಲೇಷ್ಯಾದ ರಾಜಧಾನಿ ಕೌಲಾಲಂಪುರದಲ್ಲಿ ‘ಜನ ನಾಯಗನ್’ ಸಿನಿಮಾದ ಆಡಿಯೋ ಲಾಂಚ್ ನಡೆಯಲಿದ್ದು, ಸ್ಥಳೀಯ ಪೊಲೀಸ್ ಆಯುಕ್ತ ಮಾಧ್ಯಮಗಳೊಟ್ಟಿಗೆ ಮಾತನಾಡಿ, ‘ಮನೊರಂಜನಾ ಕಾರ್ಯಕ್ರಮಕ್ಕಾಗಿ ಅನುಮತಿಯನ್ನು ನೀಡಲಾಗಿದ್ದು, ಇದು ರಾಜಕೀಯ ಗೋಷ್ಠಿ ಆಗಿರುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ವಿಜಯ್ ಅವರು ಆಡಿಯೋ ಲಾಂಚ್​​ನಲ್ಲಿ ಯಾವುದೇ ರಾಜಕೀಯ ಸಂಬಂಧಿಸಿದ ವಿಷಯಗಳನ್ನು ಮಾತನಾಡುವಂತಿಲ್ಲ. ಅಲ್ಲದೆ, ಕಾರ್ಯಕ್ರಮಕ್ಕೆ ಹಾಜರಾಗುವ ಜನರ ಸಂಖ್ಯೆಗೂ ಮಿತಿ ಇರಬೇಕು ಎಂದು ಸಹ ಹೇಳಲಾಗಿದೆಯಂತೆ.

ಇದನ್ನೂ ಓದಿ:ಕರೂರು ಘಟನೆಯಿಂದ ‘ಜನ ನಾಯಗನ್’ ರಿಲೀಸ್ ಮುಂದಕ್ಕೆ? ಇಲ್ಲಿದೆ ಹೊಸ ಅಪ್​ಡೇಟ್

‘ಜನ ನಾಯಗನ್’ ಸಿನಿಮಾ ವಿಜಯ್ ಕೊನೆಯ ಸಿನಿಮಾ ಎನ್ನಲಾಗುತ್ತಿದ್ದು, ಅದಾದ ಬಳಿಕ ಸಂಪೂರ್ಣವಾಗಿ ಅವರು ರಾಜಕೀಯದಲ್ಲಿ ತೊಡಗಿಕೊಳ್ಳಲಿದ್ದಾರಂತೆ. ವಿಜಯ್ ಅವರ ರಾಜಕೀಯಕ್ಕೆ ನೆರವಾಗಲೆಂದೇ ಈ ಸಿನಿಮಾ ನಿರ್ಮಿಸಲಾಗುತ್ತಿದ್ದು, ವಿಜಯ್ ಅವರ ರಾಜಕೀಯ ಅಜೆಂಡಾಗಳನ್ನು ಸಿನಿಮಾ ಮೂಲಕ ತೋರಿಸಲಾಗುತ್ತಿದೆ ಎಂಬುದು ಗುಟ್ಟೇನೂ ಅಲ್ಲ. ಸಿನಿಮಾದ ಪ್ರಚಾರದಲ್ಲೂ ವಿಜಯ್ ತಮ್ಮ ರಾಜಕೀಯ ಅಜೆಂಡ ಪ್ರಚಾರ ಮಾಡಲಿದ್ದಾರೆ ಎಂದೇ ಯೋಜಿಸಲಾಗಿತ್ತು, ಆದರೆ ಮಲೇಷ್ಯಾ ಪೊಲೀಸರು ಅದಕ್ಕೆ ತಡೆ ಒಡ್ಡಿದ್ದಾರೆ.

‘ಜನ ನಾಯಗನ್’ ಸಿನಿಮಾವನ್ನು ಕೆವಿಎನ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಇವರು ಕನ್ನಡದ ಕೆಲವಾರು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡುತ್ತಿರುವುದು ಎಚ್ ವಿನೋದ್. ಸಿನಿಮಾದ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಮಲಯಾಳಂ ನಟಿ ಮಮಿತಾ ಬಿಜು, ಪ್ರಿಯಾಮಣಿ, ಪ್ರಕಾಶ್ ರೈ, ಗೌತಮ್ ವಾಸುದೇವ್ ಮೆನನ್ ಅವರುಗಳು ಸಹ ಸಿನಿಮಾನಲ್ಲಿದ್ದಾರೆ. ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಎಚ್ಚರಿಕೆ ಕೊಟ್ಟ ಕೈ ಶಾಸಕನ ವಿಡಿಯೋ ವೈರಲ್ – Kannada News | People will Slap with Slipper: Magadi Congress MLA Balakrishna Warns to tahsildar

ರಾಮನಗರ, (ಡಿಸೆಂಬರ್ 25): ಮಾಗಡಿ (Magadi) ಕಾಂಗ್ರೆಸ್ ಶಾಸಕ ಶಾಸಕ ಹೆಚ್​​​ಸಿ ಬಾಲಕೃಷ್ಣ (MLA HC Balakrishna) ಅವರು ತಹಶೀಲ್ದಾರ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.ಮಾಗಡಿ ತಾಲೂಕು ಪಂಚಾಯಿತಿಯಲ್ಲಿಂದು ಜನರ ಕುಂದುಕೊರತೆ ಆಲಿಸುವ ಸಭೆಯಲ್ಲಿ ತಹಶೀಲ್ದಾರ್ ಡಿ.ಪಿ.ಶರತ್ ಕುಮಾರ್ ಆಕ್ರೋಶಗೊಂಡಿದ್ದು, ಸರಿಯಾಗಿ ಕೆಲಸಮಾಡಿ. ಇಲ್ಲವಾದರೆ ಚಪ್ಪಲಿಯಲ್ಲಿ ಹೊಡೆಸುವೆ ಎಂದು ಬಾಯಿಗೆ ಬಂದಂತೆ ಬೈದಿದ್ದಾರೆ.

ಯಾವ ಅಧಿಕಾರಿ ಸರಿಯಾಗಿ ಕೆಲಸ ಮಾಡಲ್ಲ ಹೆಸರು ಬರೆಯಿರಿ. ತಿಂಗಳಿಗೆ ಒಮ್ಮೆ ಕಂಪ್ಲೆಂಟ್ ಬಾಕ್ಸ್ ಓಪನ್ ಮಾಡೋಣ. ನಾನು ಉಪ ವಿಭಾಗಾಧಿಕಾರಿ ಕರೆಸುತ್ತೇನೆ. ಆಗ ಜನರಿಗೆ ಉತ್ತರ ಹೇಳಿ. ಸರಿಯಾಗಿ ಕೆಲಸಮಾಡಿ, ಇಲ್ಲವಾದರೆ ಚಪ್ಪಲಿಯಲ್ಲಿ ಹೊಡೆಸುವೆ. ನನ್ನ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ರೂ ಸರಿ. ಜನ ಚಪ್ಪಲಿ ತಗೊಂಡೆ ನನಗೆ ಅಥನಾ ನಿನಗೆ ಹೊಡೆಯುತ್ತಾರೆ. ನಿನ್ನ ಕೈಯಲ್ಲಿ ಕೆಲಸ ಮಾಡಿಸಲು ಆಗಲ್ಲವೆಂದ್ರೆ ನನಗೆ ಹೊಡೆಯುತ್ತಾರೆ. ನೀನು ಏನು ಕೆಲಸ ಮಾಡದಿದ್ದರೆ ಜನ ನಿನಗೆ ಹೊಡೆಯುತ್ತಾರೆ. ಮಾತನಾಡದೆ ನಿಮಗೆ ಮುತ್ತಿಕ್ಕುತ್ತಾರಾ? ನಾಚಿಕೆ ಆಗಲ್ವಾ ನಿಮಗೆ ಎಂದು ತರಾಟಗೆ ತೆಗೆದುಕೊಂಡರು.

ಜನರನ್ನು ಯಾಕೆ ಕಚೇರಿಗೆ ಅಲೆಸಿ ಸಾಯಿಸುತ್ತೀರಾ. ಯುವ ಅಧಿಕಾರಿಗಳು ಹೇಗೆ ಇರಬೇಕು. ತಹಶೀಲ್ದಾರ್ ಆದವನು ಶಾಸಕ ಕೂಡ ಆಗಿದ್ದಾರೆ. ಐಎಎಸ್ ಅಧಿಕಾರಿ ಡಿ.ಕೆ.ರವಿ ಮೃತಪಟ್ಟಾಗ ಜನ ಕಣ್ಣೀರಿಟ್ಟರು. ನಿಮಗೆ ಜನ ಅಳುತ್ತಾರಾ, ತೊಲಗಿ ಎಂದು ಶಾಪ ಹಾಕುತ್ತಾರೆ ಎಂದು ಕಿಡಿಕಾರಿದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Optical Illusion: ಈ ಚಿತ್ರದಲ್ಲಿರುವ ಅಣಬೆಯನ್ನು 30 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ – Kannada News | Optical Illusion: Let’s find the hidden mushroom in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (optical illusion) ಸೇರಿದಂತೆ ಇನ್ನಿತ್ತರ ಟ್ರಿಕ್ಕಿ ಒಗಟಿನ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಈ ಒಗಟಿನ ಚಿತ್ರಗಳು ನೋಡುವುದಕ್ಕೆ ಸುಲಭವಾಗಿ ಕಂಡರೂ ಉತ್ತರ ಕಂಡು ಕೊಳ್ಳುವುದು ಸುಲಭವಲ್ಲ. ನೀವು ಈ ಹಿಂದೆ ಇಂತಹ ಒಗಟುಗಳನ್ನು ಬಿಡಿಸುವಲ್ಲಿ ವಿಫಲರಾಗಿದ್ದೀರಾ. ಇದೀಗ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಮತ್ತೊಂದು ಆಪ್ಟಿಕಲ್‌ ಇಲ್ಯೂಷನ್ ಚಿತ್ರವೊಂದಿದೆ. ಈ ಚಿತ್ರದಲ್ಲಿ ಜಾಣತನದಿಂದ ಮರೆಮಾಡಲಾಗಿರುವ ಅಣಬೆಯನ್ನು ಮೂವತ್ತು ಸೆಕೆಂಡುಗಳೊಳಗೆ ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.

ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ

ಇಲ್ಯೂಷನ್ ಚಿತ್ರಗಳು ನಿಮ್ಮನ್ನು ಭ್ರಮೆಯಲ್ಲಿ ಮುಳುಗಿಸಿ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತವೆ. ಈ ಚಿತ್ರವು ನೋಡಲು ಅದೇ ರೀತಿಯಿದೆ. ನೀವು ಈ ಚಿತ್ರದಲ್ಲಿ ಕುರಿ ಮಂದೆಯನ್ನು ಕಾಣಬಹುದು. ಕುರಿಗಳನ್ನು ಒಳಗೊಂಡ ಪ್ರದೇಶದಲ್ಲಿ ಅಣಬೆಯೊಂದಿದೆ. ನೀವು ನಿಮ್ಮ ವೀಕ್ಷಣಾ ಸಾಮರ್ಥ್ಯ ಬಳಸಿ 30 ಸೆಕೆಂಡುಗಳೊಳಗೆ ಈ ಗುಪ್ತವಸ್ತುವನ್ನು ಕಂಡು ಹಿಡಿಯಬೇಕು.

ಇದನ್ನೂ ಓದಿ:ಜಸ್ಟ್ 7 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ನವಿಲನ್ನು ಗುರುತಿಸಬಲ್ಲಿರಾ

ನಿಮ್ಮ ಕಣ್ಣಿಗೆ ಅಣಬೆ ಕಾಣಿಸಿತೇ?

ಈ ಆಪ್ಟಿಕಲ್ ಇಲ್ಯೂಷನ್ ಒಗಟಿನ ಆಟವನ್ನು ಬಿಡಿಸಲು 30 ಸೆಕೆಂಡುಗಳನ್ನು ನೀಡಲಾಗಿದೆ. ಈ ನಿರ್ದಿಷ್ಟ ಸಮಯದೊಳಗೆ ಅಣಬೆಯನ್ನು ಗುರುತಿಸುವುದು ಸಾಧ್ಯವಾದರೆ ನಿಮ್ಮ ವೀಕ್ಷಣಾ ಸಾಮರ್ಥ್ಯ ಅತ್ಯುತ್ತಮವಾಗಿದೆ ಎಂದರ್ಥ. ಒಂದು ವೇಳೆ ಈ ಚಿತ್ರದಲ್ಲಿರುವ ಗುಪ್ತ ವಸ್ತುವನ್ನು ಕಂಡು ಹಿಡಿಯುವುದು ಸಾಧ್ಯವಾಗಿಲ್ಲ ಎಂದಾದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಅಣಬೆ ಎಲ್ಲಿದೆ ಎಂದು ಈ ಕೆಳಗಿನ ಚಿತ್ರದಲ್ಲಿ ನಾವೇ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದು ಬಾಂಗ್ಲಾದೇಶದ 2ನೇ ವಿಮೋಚನೆ: 2024ರ ದಂಗೆಯನ್ನು ಹೊಗಳಿದ ಬಿಎನ್​ಪಿ ನಾಯಕ ತಾರಿಖ್ ರಹಮಾನ್ – Kannada News | Ex Bangla PM Khaleda Zia’s son Tarique Rahman describes 2024 uprising as liberation

ಬಾಂಗ್ಲಾ ಹಂಗಾಮಿ ಪಿಎಂ ಜೊತೆ ತಾರಿಖ್ ರಹಮಾನ್

ಢಾಕಾ, ಡಿಸೆಂಬರ್ 25: ಹದಿನೇಳು ವರ್ಷದ ಹಿಂದೆ ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡು ಬಾಂಗ್ಲಾದೇಶ ಬಿಟ್ಟು ಹೊರದೇಶಕ್ಕೆ ಹೋಗಿದ್ದ ತಾರಿಖ್ ರಹಮಾನ್ ಇದೀಗ ತವರಿಗೆ ವಾಪಸ್ ಬಂದಿದ್ದು, ಚುನಾವಣೆಗೆ ರಹಕಹಳೆಗಳನ್ನು ಮೊಳಗಿಸುತ್ತಿದ್ದಾರೆ. 2024ರಲ್ಲಿ ಶೇಖ್ ಹಸೀನಾ (Sheikh Hasina) ಸರ್ಕಾರ ಪತನಗೊಳ್ಳಲು ಕಾರಣವಾದ ವಿದ್ಯಾರ್ಥಿ ನೇತೃತ್ವದ ಹೋರಾಟ ಹಾಗೂ ದಂಗೆಗಳನ್ನು ತಾರಿಖ್ ರಹಮಾನ್ (Tarique Rahman) ಹೊಗಳಿದ್ಧಾರೆ. ಮಾಜಿ ಬಾಂಗ್ಲಾ ಪ್ರಧಾನಿ ಖಾಲಿದಾ ಜಿಯಾ (Khaleda Zia) ಅವರ ಮಗನಾದ 60 ವರ್ಷದ ತಾರಿಖ್ ರಹಮಾನ್, ಬಾಂಗ್ಲಾಗೆ ಎರಡನೇ ಬಾರಿ ವಿಮೋಚನೆ ಆಗಿದೆ ಎಂದಿದ್ದಾರೆ.

1971ರಲ್ಲಿ ಮೊದಲ ವಿಮೋಚನೆ ಆಯಿತು. ಈಗ 2024ರಲ್ಲಿ ಎರಡನೇ ಬಾರಿ ವಿಮೋಚನೆ ಆಗಿದೆ. 2024ರಲ್ಲಿ ಆಗಿದ್ದು ಜನರ ಹೋರಾಟ. ಇದು ದೇಶದ ಪ್ರಜಾತಾಂತ್ರಿಕ ಆಶಯಗಳನ್ನು ಮರಳಿ ಸ್ಥಾಪಿಸುವ ಪ್ರಯತ್ನವಾಗಿದೆ ಎಂದು ತಾರೀಕ್ ರಹಮಾನ್ ಹೇಳಿದ್ದಾರೆ.

ಇದನ್ನೂ ಓದಿ: ಫಾಕ್ಸ್​ಕಾನ್ ಘಟಕ; ಕರ್ನಾಟಕ ಮಾದರಿ ಎಂದ ರಾಹುಲ್ ಗಾಂಧಿ; ಇದು ಮೇಕ್ ಇನ್ ಇಂಡಿಯಾ ಎಫೆಕ್ಟ್ ಎಂದ ಕೇಂದ್ರ ಸಚಿವ

ಕಳೆದ ವರ್ಷ ಆರಂಭವಾದ ದಂಗೆಗಳ ಬಳಿಕ ಈಗ ಬಾಂಗ್ಲಾದೇಶದಲ್ಲಿ ಬಿಎನ್​ಪಿ ಪಕ್ಷದ ಪರ ಅಲೆಯೇ ಎದ್ದಿದೆ ಎಂದು ಹೇಳಲಾಗುತ್ತಿದೆ. ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಕ್ಷದ ಅಧ್ಯಕ್ಷೆ ಖಾಲಿದಾ ಜಿಯಾಗೆ 80 ವರ್ಷ ವಯಸ್ಸಾಗಿದೆ. ತಮ್ಮ ಮಗ ತಾರಿಖ್ ರಹಮಾನ್​ಗೆ ಪಕ್ಷದ ಚುಕ್ಕಾಣಿ ಬಿಟ್ಟುಕೊಡುವ ನಿರೀಕ್ಷೆ ಇದೆ. ಮುಂದಿನ ವರ್ಷ ನಡೆಯಲಿರುವ ಬಾಂಗ್ಲಾ ಚುನಾವಣೆಯಲ್ಲಿ ಬಿಎನ್​ಪಿ ಗೆಲುವು ಸಾಧಿಸಿದರೆ ತಾರಿಖ್ ರಹಮಾನ್ ಅವರ ನೇತೃತ್ವದಲ್ಲೇ ಸರ್ಕಾರ ರಚನೆಯಾಗಬಹುದು ಎಂದು ಅಲ್ಲಿಯ ರಾಜಕೀಯ ಪಂಡಿತರು ನಂಬಿದ್ದಾರೆ.

ಎಲ್ಲಾ ಸಮುದಾಯ ಮತ್ತು ಜನಾಂಗಗಳಿಗೆ ಸಮಾನ ಆದ್ಯತೆ

ಎಲ್ಲರನ್ನೂ ಒಳಗೊಳ್ಳುವ ಬಾಂಗ್ಲಾದೇಶದ ನಿರ್ಮಾಣ ಆಗಬೇಕು. ಅದರಲ್ಲಿ ಎಲ್ಲಾ ಸಮುದಾಯಗಳು ಹಾಗೂ ಜನಾಂಗಗಳು ಭಾಗಿಯಾಗಬೇಕು. ಏಕತೆ ಮತ್ತು ಸಮಾನತೆಯು ತಮ್ಮ ಪಕ್ಷದ ನೀತಿಯಲ್ಲಿ ಪ್ರಮುಖವಾಗಿರುತ್ತದೆ. ತಮ್ಮ ಪಕ್ಷವ ದೇಶದಲ್ಲಿ ಶಾಂತಿ, ಶಿಸ್ತು ಮತ್ತು ರಾಜಕೀಯ ಸ್ಥಿರತೆ ತರಲು ಅವಿರತವಾಗಿ ಶ್ರಮಿಸುತ್ತದೆ ಎಂದು ತಾರೀಖ್ ರಹಮಾನ್ ವಾಗ್ದಾನ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ಕ್ಷಿಪ್ರವೇಗದಲ್ಲಿ 30,000 ಉದ್ಯೋಗಿಗಳ ನೇಮಕ; ಭಾರತದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ ಐಟಿ ಹೈರಿಂಗ್

ಡಿಸೆಂಬರ್ 12ರಂದು ಹತರಾದ ಬಿಎನ್​ಪಿ ನಾಯಕ ಉಸ್ಮಾನ್ ಹದಿ ಅವರನ್ನು ಇದೇ ವೇಳೆ ತಾರೀಖ್ ಸ್ಮರಿಸಿದ್ದಾರೆ. ಉಸ್ಮಾನ್ ಹದಿ ಅವರು ಪ್ರಜಾತಂತ್ರ ದೇಶದ ಕನಸು ಕಂಡಿದ್ದರು. ಅವರ ಕನಸು ನನಸು ಮಾಡಲು ಬಿಎನ್​ಪಿ ಪಕ್ಷ ಕೆಲಸ ಮಾಡುತ್ತದೆ ಎಂದು ತಾರೀಖ್ ಪ್ರಮಾಣ ಮಾಡಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:11 pm, Thu, 25 December 25

Source link

ಬಿಡುಗಡೆ ಸಿದ್ಧವಾಗಿದೆ ಹೊಸಬರ ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾ ‘ವಿಕಲ್ಪ’ – Kannada News | Psychological thriller Kannada movie Vikalpa getting ready for release

ಹೊಸಬರ ತಂಡದ ‘ವಿಕಲ್ಪ’ ಸಿನಿಮಾ (Vikalpa Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಸೈಕಲಾಜಿಕಲ್‌ ಥ್ರಿಲ್ಲರ್‌ ಕಥಾಹಂದರ ಈ ಸಿನಿಮಾದಲ್ಲಿ ಇದೆ. ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ ತಲ್ಲಣಗಳನ್ನು ಈ ಸಿನಿಮಾದ ಮೂಲಕ ತೆರೆಮೇಲೆ ತರುತ್ತಿದ್ದಾರೆ ಯುವ ನಟ, ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್‌. ಕನ್ನಡ ಚಿತ್ರರಂಗದಲ್ಲಿ ಸೈಕಲಾಜಿಕಲ್‌ ಥ್ರಿಲ್ಲರ್‌ (Psychological Thriller) ಸಿನಿಮಾಗಳ ಸಂಖ್ಯೆ ಕಡಿಮೆ. ಅಂಥ ವಿರಳ ಸಿನಿಮಾಗಳ ಸಾಲಿಗೆ ‘ವಿಕಲ್ಪ’ ಸಿನಿಮಾ ಕೂಡ ಸೇರುತ್ತಿದೆ. ‘ವಿಕಲ್ಪ’ ಎಂದರೆ ವಾಸ್ತವ ಹಾಗೂ ಕಲ್ಪನೆಗಳ ನಡುವಿನ ಒಂದು ಸ್ಥಿತಿ ಎಂದು ಚಿತ್ರತಂಡ ಹೇಳಿದೆ.

ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ ಎಂದೆನಿಸಿದರೂ ಒಂದು ಸಂಪೂರ್ಣ ಥ್ರಿಲ್ಲರ್‌ ಸಿನಿಮಾ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಜೊತೆಗೆ ಹಾಸ್ಯ ಮತ್ತು ಮನರಂಜನೆಗೆ ಹೆಚ್ಚಿನ ಒತ್ತು ನೀಡಿ ಇಡೀ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ‘ಈ ಸಿನಿಮಾದಲ್ಲಿ ಕಥೆಯೆ ಹೀರೋ. ಇಲ್ಲಿ ಪ್ರತಿ ಪಾತ್ರ ಕೂಡ ನೋಡುಗರ ಮನಮುಟ್ಟುತ್ತವೆ’ ಎಂದು ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್ ಅವರು ಹೇಳಿದ್ದಾರೆ.

ಪೃಥ್ವಿರಾಜ್‌ ಪಾಟೀಲ್‌ ಅವರು ಹವ್ಯಾಸಿ ರಂಗಭೂಮಿಯಲ್ಲಿ ಅನುಭವ ಹೊಂದಿದ್ದಾರೆ. ಐಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅವರು ಈಗ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ‘ಸುರೂಸ್‌ ಟಾಕೀಸ್‌’ ಸಂಸ್ಥೆಯ ಅಡಿಯಲ್ಲಿ ಇಂದಿರಾ ಶಿವಸ್ವಾಮಿ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್‌ ಅವರೇ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

ಈ ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ, ಅನೇಕ ನುರಿತ ಮಾನಸಿಕ ವೈದ್ಯರ ಸಲಹೆಯ ಮೇರೆಗೆ ಈ ಸಿನಿಮಾದ ಹಲವು ಸನ್ನಿವೇಶಗಳನ್ನು ಚಿತ್ರಿಸಲಾಗಿದೆ. ಬೆಂಗಳೂರು, ಸಾಗರ, ಶಿರಸಿ, ತೀರ್ಥಹಳ್ಳಿ, ಕುಂದಾಪುರ, ಯಲ್ಲಾಪುರ ಸುತ್ತಮುತ್ತ ‘ವಿಕಲ್ಪ’ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಸಿಂಗಾಪುರ, ನೆದರ್ಲ್ಯಾಂಡ್‌ ಮುಂತಾದ ದೇಶಗಳಲ್ಲೂ ಚಿತ್ರೀಕರಣ ನಡೆದಿದೆ.

ಪೃಥ್ವಿರಾಜ್‌ ಪಾಟೀಲ್‌, ಸಂಧ್ಯಾ ವಿನಾಯಕ್‌, ನಾಗಶ್ರೀ ಹೆಬ್ಬಾರ್‌, ಗಣಪತಿ ವಡ್ಡಿನಗದ್ದೆ, ಸ್ವರೂಪ್‌ ಬಚ್ಚ್‌, ಪೂಜಾ ಬಚ್ಚ್‌, ಡಾ. ಪ್ರಕೃತಿ, ಜಯಂತ್‌ ಡೇವಿಡ್‌, ಮಾಸ್ಟರ್‌ ಆಯುಷ್ ಸಂತೋಷ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಖ್ಯಾತ ನಟಿ ಹರಿಣಿ ಶ್ರೀಕಾಂತ್‌ ಅವರು ಈ ಸಿನಿಮಾದಲ್ಲಿ ವಿಭಿನ್ನ ಹಾಗೂ ವಿಶೇಷವಾದ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಕಲಾವಿದರಾದ ಗಣಪತಿ ಹಿತ್ತಲಕೈ, ಪ್ರಜ್ಞಾ ಗಣಪತಿ, ಗಿರೀಶ್‌ ಹೆಗಡೆ, ಮಾಧವ ಶರ್ಮಾ, ಗಣಪತಿ ಎ.ಆರ್, ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ‘ಡೆವಿಲ್’ ಬಳಿಕ ರೇಟಿಂಗ್ ಕೊಡದಂತೆ ಕೋರ್ಟ್​​ನಿಂದ ಆರ್ಡರ್ ತಂದ ‘45’, ‘ಮಾರ್ಕ್​​’

‘ವಿಕಲ್ಪ’ ಸಿನಿಮಾಗೆ ಮಿಥುನ್‌ ತೀರ್ಥಹಳ್ಳಿ ಸಹ-ನಿರ್ದೇಶನ ಮಾಡಿದ್ದಾರೆ. ಅಭಿರಾಮ್‌ ಗೌಡ ಅವರು ಛಾಯಾಗ್ರಣ ಮಾಡಿದ್ದಾರೆ. ಸುರೇಶ್‌ ಆರುಮುಗಮ್‌ ಅವರ ಸಂಕಲನ, ಸಂವತ್ಸರ ಅವರ ಸಂಗೀತ ಈ ಸಿನಿಮಾಗಿದೆ. ಪೃಥ್ವಿರಾಜ್‌ ಪಾಟಿಲ್‌ ಹಾಗೂ ಕೌಂಡಿನ್ಯ ಕುಡ್ಲುತೋಟ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದಾರ್ಥ್‌ ಬೆಳ್ಮಣ್ಣು, ಸಂವತ್ಸರ, ಇಂಚರಾ, ಶ್ರೀರಂಜಿನಿ ಮುಂತಾದವರು ‘ವಿಕಲ್ಪ’ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಿತ್ರದುರ್ಗ ಬಳಿ ಬಸ್​​ ದುರಂತ: ಮಕ್ಕಳು ನಾಪತ್ತೆ, ಕರುಳು ಹಿಂಡುವಂತಿದೆ ಪೋಷಕರ ಗೋಳಾಟ – Kannada News | Chitradurga Bus Tragedy: Parents Agony Over Missing Daughters Navya and Manasa

ಚಿತ್ರದುರ್ಗ, ಡಿಸೆಂಬರ್​​ 25: ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಸ್ಲೀಪರ್​​ ಬಸ್​​ ಹೊತ್ತಿ ಉರಿದ ಪರಿಣಾಮ ಐವರು ಸಜೀವ ದಹನವಾಗಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಬಸ್​​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. ಘಟನೆ ಬಳಿಕ ಮೂವರು ನಾಪತ್ತೆಯಾಗಿದ್ದು, ಆ ಪೈಕಿ ಈಗ ಒಬ್ಬರ ಪತ್ತೆಯಾಗಿದೆ. ಉಳಿದ ಇಬ್ಬರು ಯುವತಿಯರು ಇನ್ನೂ ಮಿಸ್ಸಿಂಗ್​​ ಹಿನ್ನೆಲೆ
ಅವರ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿ, ತಮ್ಮ ಮಕ್ಕಳನ್ನು ಹುಡುಕುತ್ತಾ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version