ಕರ್ನಾಟಕದಲ್ಲಿ ಸಾಲು ಸಾಲು ಅಗ್ನಿ ದುರಂತ: ಬೆಳೆ ರಕ್ಷಿಸಿಕೊಳ್ಳಲು ಹೋಗಿ ರೈತ ಸಜೀವದಹನ – Kannada News | Fire Incident Today In Karnataka: Farmer dies who try to rescue palm oil crop from fire at Davanagere

ದಾವಣಗೆರೆ, (ಡಿಸೆಂಬರ್ 25): ಚಿತ್ರದುರ್ಗ  (Chitradruga) ಜಿಲ್ಲೆ ಹಿರಿಯೂರಿನ ಗೊರ್ಲತ್ತು ಕ್ರಾಸ್​​​ಬಳಿ ಬಸ್ ಅಗ್ನಿ ದುರಂತದಲ್ಲಿ ಆರು ಜನ ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ 32 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸೀಬರ್ಡ್ ಖಾಸಗಿ ಬಸ್​​ಗೆ ಲಾರಿ ಡಿವೈಡರ್ ಹಾರಿ ಬಂದು ಗುದ್ದಿದೆ. ಇದರಿಂದ ಬಸ್ ಹೊತ್ತಿ ಉರಿದಿದ್ದು, ಆರು ಜನ ಸುಟ್ಟು ಕರಕಲಾಗಿದ್ದಾರೆ. ಈ ಘಟನೆ ಇಡೀ ಕರ್ನಾಟಕವೇ (Karnataka) ಮಮ್ಮಲ ಮರುಗಿದೆ. ಇದರ ನಡುವೆ ದಾವಣಗೆರೆಯಲ್ಲಿ (Davanagere) ಅಗ್ನಿ ದುರಂತ ಸಂಭವಿಸಿದ್ದು, ತಾನು ಬೆಳೆದಿದ್ದ ತಾಳೆ ಬೆಳೆಯನ್ನು ರಕ್ಷಣೆ ಮಾಡಲು ಹೋಗಿ ರೈತ ಸಜೀವ ದಹನವಾಗಿರುವ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಕುರುವ ಗ್ರಾಮದಲ್ಲಿ ನಡೆದಿದೆ,

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುರುವ ಗ್ರಾಮದ ಈಶ್ವರಪ್ಪ (75) ಎನ್ನುವರ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ತಾಳೆ ಮರ ಬೆಳೆಯಲಾಗಿದ್ದು, ಅದ್ಗೇಗೆ ಏನೋ ಏಕಾಏಕಿ ತಾಳಿ ಮರಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಗಾಬರಿಗೊಂಡ ರೈತ ರೈತ ಈಶ್ವರಪ್ಪ ತಾನು ಹಾಕಿದ್ದ ತಾಳೆ ಉಳಿಸಲುಕೊಳ್ಳಲು ಮುಂದಾಗಿದ್ದಾನೆ. ಆದ್ರೆ, ದುರ್ವೈವ ಬೆಂಕಿಯಲ್ಲಿ ತಾಳೆ ಜೊತೆ ರೈತ ಈಶ್ವರಪ್ಪ ಸಹ ಸಜೀವದಹನವಾಗಿದ್ದಾರೆ.

ಇದನ್ನೂ ಓದಿ: Chitradurga Bus Accident: ಮದುವೆಗೂ ಮುನ್ನ ಮಸಣ ಸೇರಿದ ಯುವತಿ; ತಾಯಿ-ಮಗಳು ಅಗ್ನಿಗೆ ಆಹುತಿ

ಶಾರ್ಟ್ ಸರ್ಕ್ಯೂಟ್ ಸುಟ್ಟು ಕರಕಲಾದ ಮನೆ

ಯಾದಗಿರಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಯೊಂದು ಸುಟ್ಟು ಕರಕಲಾಗಿರುವ ಘಟನೆ ಇಂದು (ಡಿಸೆಂಬರ್ 25) ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಐಕೂರು ಗ್ರಾಮದಲ್ಲಿ ನಡೆದಿದೆ. ಎಲ್ಲರೂ ಕೆಲಸಕ್ಕೆ ಹೋದಾಗ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮಹೆಬೂಬ್ ಎನ್ನುವವರಿಗೆ ಸೇರಿದ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ನೋಡು ನೋಡುತ್ತಿದ್ದಂತೆಯೇ ಬೆಂಕಿಯ ಜ್ವಾಲೆ ಮನೆಯಲ್ಲ ವಾಪಿಸಿಕೊಂಡಿದೆ. ಪರಿಣಾಮ ಮನೆಯಲ್ಲಿದ್ದ 2 ಲಕ್ಷ ನಗದು ಹಾಗೂ 30 ಗ್ರಾಂ ಚಿನ್ನ ಸುಟ್ಟು ಕರಲಾಗಿದೆ.

ಪಾಪ ರೈತ ಮಹೆಬೂಬ್ ಅವರು ಹತ್ತಿ ಮಾರಾಟ ಮಾಡಿ ಹಣವನ್ನು ತಂದು ಮನೆಯಲ್ಲಿಟ್ಟಿದ್ದ. ಆದ್ರೆ, ಬೆಂಕಿಯಲ್ಲಿ ಸುಟ್ಟು ಹೋಗಿದೆ. ಜೊತೆಗೆ ದಿನಸಿ ಹಾಗೂ ದಿನ ಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಶಾಮಕದಳ ತಂಡ ದೌಡಾಯಿಸಿ ಬೆಂಕಿ ನಂದಿಸಿದರು.

ರಾಗಿ ಮೆದೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು

ರಾಮನಗರ: ಇನ್ನೊಂದೆಡೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಜಯಪುರ ಗೇಟ್​ ಬಳಿ ಅಗ್ನಿ ಅವಘಡ ಸಂಭವಿಸಿದೆ. ಕಿಡಿಗಡಿಗಳು ಬೇಕಂತಲೇ ರಾಗಿ ಮೆದೆಗೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ. ಇದರಿಂದ ಒಕ್ಕಣೆ ಮಾಡಲು ಹಾಕಲಾಗಿದ್ದ ರಾಗಿ ಮೆದೆ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿ ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.

ಹೀಗೆ ಕರ್ನಾಟಕದದ ನಾನಾ ಭಾಗದಲ್ಲಿ ಸಾಲು ಸಾಲು ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಇದರಿಂದ ಸಾರ್ವಜನಿಕರು ಎಚ್ಚರದಿಂದ ಇರುವುದು ಒಳಿತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜೈಲಲ್ಲಿದ್ದುಕೊಂಡೇ ಜಾಕ್ವೆಲಿನ್​​ಗೆ ಮನೆ ಉಡುಗೊರೆ ಕೊಟ್ಟ ಸುಖೇಶ್? – Kannada News | Sukhesh claims he gifted Jacqueline Fernandez a house in Beverly Hills

ಸುಖೇಶ್ ಚಂದ್ರಶೇಖರ್ (Sukhesh Chandrashekhar), ಭಾರತದ ನಂಬರ್ ಕಾನ್​ಮ್ಯಾನ್ (ಮೋಸಗಾರ) ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾನೆ. ದೇಶದ ಕೆಲವು ಪ್ರಮುಖ ರಾಜಕಾರಣಿಗಳು, ವಿಐಪಿ ವ್ಯಕ್ತಿಗಳು, ಖ್ಯಾತ ಉದ್ಯಮಿಗಳು, ಚಿತ್ರರಂಗದ ಕೆಲವರಿಗೆ ಸಹ ಮೋಸ ಮಾಡಿ ನೂರಾರು ಕೋಟಿ ರೂಪಾಯಿ ಹಣ ಗಳಿಸಿದ್ದಾನೆ ಈ ಆಸಾಮಿ. ಬಾಲಿವುಡ್​​ ನಟಿಯರ ಮೇಲೆ ವಿಶೇಷ ಮೋಹ ಹೊಂದಿದ್ದ ಸುಖೇಶ್, ತನ್ನ ಮೋಸದ ಹಣದ ನೆರವಿನಿಂದ ಹಲವು ನಟಿಯರಿಗೆ ಕೋಟ್ಯಂತರ ಮೌಲ್ಯದ ಉಡುಗೊರೆಗಳನ್ನು ನೀಡುತ್ತಿದ್ದ. ಜಾಕ್ವೆಲಿನ್ ಫರ್ನಾಂಡೀಸ್​ ಅನ್ನು ಗರ್ಲ್​​ಫ್ರೆಂಡ್ ಸಹ ಮಾಡಿಕೊಂಡಿದ್ದ. ಇದೀಗ ಈತ ಜೈಲಿನಲ್ಲಿದ್ದು, ಜೈಲಿನಲ್ಲಿದ್ದುಕೊಂಡೇ ತಾನು ಜಾಕ್ವೆಲಿನ್ ಫರ್ನಾಂಡೀಸ್​​ಗೆ ದುಬಾರಿ ಉಡುಗೊರೆ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾನೆ.

ವಿಶ್ವದ ಟಾಪ್ ಶ್ರೀಮಂತರು, ಹಾಲಿವುಡ್​ ಸೂಪರ್ ಸ್ಟಾರ್​​ಗಳು ನೆಲೆಸಿರುವ ಅಮೆರಿಕದ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್​​ನಲ್ಲಿ ತಾವು ಜಾಕ್ವೆಲಿನ್​​ಗೆ ದುಬಾರಿ ಮನೆಯೊಂದನ್ನು ಕ್ರಿಸ್​​ಮಸ್ ಉಡುಗೊರೆಯಾಗಿ ನೀಡಿರುವುದಾಗಿ ಸುಖೇಶ್ ಹೇಳಿಕೊಂಡಿದ್ದಾನೆ. ಜೈಲಿಂದ ಪತ್ರ ಬರೆದಿರುವ ಸುಖೇಶ್, ಜಾಕ್ವೆಲಿನ್​​ಗೆ ಲವ್ ನೆಸ್ಟ್ (ಪ್ರೀತಿಯ ಗೂಡು) ನೀಡಿರುವುದಾಗಿ ಹೇಳಿಕೊಂಡಿದ್ದಾನೆ.

‘ನಿನಗಾಗಿ ನಾನು ಖರೀದಿಸಿದ್ದ ದುಬಾರಿ ಪ್ರಾಪರ್ಟಿ, ಈ ಮನೆ ನಿರ್ಮಾಣ ಪೂರ್ಣ ಆಗುವುದಿಲ್ಲ ಎಂದು ನೀನು ಅಂದುಕೊಂಡಿದ್ದ ಅದೇ ಪ್ರಾಪರ್ಟಿ ಇದೀಗ ಕಾಮಗಾರಿ ಪೂರ್ಣಗೊಂಡಿದೆ. ಇದು ನಮ್ಮ ಮನೆ ಆಗಲಿದೆ. ಇದನ್ನು ಈ ಕ್ರಿಸ್​​ಮಸ್​​ಗೆ ನಿನಗಾಗಿ ಉಡುಗೊರೆ ನೀಡುತ್ತಿದ್ದೇನೆ’ ಎಂದು ಸುಖೇಶ್ ಚಂದ್ರಶೇಖರ್ ಪತ್ರದಲ್ಲಿ ಹೇಳಿದ್ದಾನೆ. ‘ಈ ಮೊದಲು ನಾವು ಯೋಜನೆ ಹಾಕಿದ್ದಕ್ಕಿಂತಲೂ ದೊಡ್ಡದಾಗಿದೆ ನಮ್ಮ ಈ ಪ್ರಾಪರ್ಟಿ. ನಮ್ಮ ಈ ಹೊಸ ಮನೆಯ ಸುತ್ತ ದೊಡ್ಡ ಗಾಲ್ಫ್ ಕೋರ್ಸ್ ಸಹ ಇದೆ’ ಎಂದಿದ್ದಾನೆ.

ಇದನ್ನೂ ಓದಿ:ಮಹಾ ವಂಚಕ ಸುಖೇಶ್ ಕುರಿತ ಡಾಕ್ಯುಮೆಂಟರಿ, ನಟಿಯಿಂದ ತಕರಾರು?

‘ನಿನ್ನ ಮತ್ತೊಂದು ಆಸೆಯನ್ನು ಪೂರೈಸುವ ಪ್ರಯತ್ನದಲ್ಲಿ ನಾನು ಇದ್ದೀನೆ. ಒಂದು ಐಪಿಎಲ್ ತಂಡದ ಒಡತಿ ಆಗಬೇಕು ಎಂಬುದು ನಿನ್ನ ಆಸೆ ಆಗಿತ್ತು. ನಾನು ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಆದಷ್ಟು ಬೇಗ ಆ ಸರ್ಪ್ರೈಸ್ ಅನ್ನು ಸಹ ನಾನು ನಿನಗೆ ನೀಡಲಿದ್ದೇನೆ’ ಎಂದಿದ್ದಾನೆ ಸುಖೇಶ್.

ಆದರೆ ಸುಖೇಶ್ ಬರೆದಿರುವ ವಿಷಯಗಳು ಸತ್ಯವೊ, ಸುಳ್ಳೊ ತಿಳಿಯದು. ಸುಖೇಶ್​​ಗೆ ಸೇರಿದ ಆಸ್ತಿ, ಕಾರುಗಳು ಬ್ಯಾಂಕ್ ಖಾತೆಗಳನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಸುಖೇಶ್​​ಗೆ ಈ ಹಿಂದೆ ಜೈಲಿನಲ್ಲಿ ನೀಡಲಾಗಿದ್ದ ಎಲ್ಲ ವಿಶೇಷ ಸವಲತ್ತುಗಳನ್ನು ರದ್ದು ಮಾಡಲಾಗಿದೆ. ಆದರೆ ಅದು ಹೇಗೆ ಈತ ಜೈಲಿನಲ್ಲಿದ್ದುಕೊಂಡು ಬೆವರ್ಲಿ ಹಿಲ್​​ನಲ್ಲಿ ಮನೆ ಕಟ್ಟಿಸಿದ ಎಂಬುದು ಅನುಮಾನ.

ಸುಖೇಶ್, ಹಲವು ವರ್ಷಗಳಿಂದ ಜೈಲಿನಲ್ಲಿದ್ದಾನೆ. ಆದರೆ ಜೈಲಿನಲ್ಲಿದ್ದುಕೊಂಡೇ ಹಲವು ವಿಐಪಿಗಳಿಗೆ ಮೋಸ ಮಾಡಿ ನೂರಾರು ಕೋಟಿ ರೂಪಾಯಿ ಹಣ ಗಳಿಕೆ ಮಾಡಿದ್ದ. ಜಾಕ್ವೆಲಿನ್ ಫರ್ನಾಂಡೀಸ್, ನೋರಾ ಫತೇಹಿ ಸೇರಿದಂತೆ ಹಲವು ಬಾಲಿವುಡ್ ನಟಿಯರಿಗೆ ದುಬಾರಿ ಕಾರುಗಳು, ಮನೆಗಳನ್ನು ಉಡುಗೊರೆಯಾಗಿ ನೀಡಿದ್ದ. ಜಾಕ್ವೆಲಿನ್ ಜೊತೆಗೆ ಅತ್ಯಾಪ್ತ ಸಂಬಂಧವನ್ನು ಸುಖೇಶ್ ಹೊಂದಿದ್ದ. ಸುಖೇಶ್ ಜೊತೆಗೆ ಜಾಕ್ವೆಲಿನ್ ಆಪ್ತವಾಗಿರುವ ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಸುಖೇಶ್ನ ವಂಚನೆ ಪ್ರಕರಣದ ತನಿಖಾಧಿಕಾರಿಗಳು ಜಾಕ್ವೆಲಿನ್ ವಿರುದ್ಧವೂ ಎಫ್​​ಐಆರ್ ದಾಖಲಿಸದ್ದು, ವಿಚಾರಣೆ ಚಾಲ್ತಿಯಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ; ದುರುಳರ ಹಿಂಸಾಚಾರಕ್ಕೆ 29 ವರ್ಷದ ಸಾಮ್ರಾಟ್ ಬಲಿ – Kannada News | Bangladesh violence, Amrit Mandal beaten to death, second hindu person killed in a week

ಢಾಕಾ, ಡಿಸೆಂಬರ್ 25: ಬಾಂಗ್ಲಾದೇಶದಲ್ಲಿ ಹಿಂಸಾಚಾರ (Bangladesh violence) ಘಟನೆಗಳು ನಿಲ್ಲುತ್ತಲೇ ಇಲ್ಲ. ರಕ್ತಪಿಪಾಸುಗಳಂತೆ ವರ್ತಿಸುತ್ತಿರುವ ಕೆಲ ಜನರು ಅಲ್ಪಸಂಖ್ಯಾತರನ್ನು ಗುರಿ ಮಾಡಿದಂತೆ ಕಾಣುತ್ತಿದೆ. ಕೆಲ ದಿನಗಳ ಹಿಂದೆ ದೀಪು ಚಂದ್ರದಾಸ್ ಎನ್ನುವ ಹಿಂದೂ ವ್ಯಕ್ತಿಯನ್ನು ಬಲಿಪಡೆದಿದ್ದ ದುರುಳರು ಇದೀಗ ಮತ್ತೊಬ್ಬ ಹಿಂದೂ ಧರ್ಮೀಯನನ್ನು ಕೊಂದಿದ್ದಾರೆ. ರಾಜ್​ಬಾರಿ ಜಿಲ್ಲೆಯಲ್ಲಿ 29 ವರ್ಷದ ಅಮೃತ್ ಮಂಡಲ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಸಾಯಿಸಿದ್ದಾರೆ.

ಈ ಘಟನೆ ನಿನ್ನೆ ಬುಧವಾರ ರಾತ್ರಿ 11 ಗಂಟೆಗೆ ಸಂಭವಿಸಿರುವುದು ಬೆಳಕಿಗೆ ಬಂದಿದೆ. ರಾಜಬರಿ ಜಿಲ್ಲೆಯ ಹೊಸಾಯಿದಂಗ ಓಲ್ಡ್ ಮಾರ್ಕೆಟ್ ಬಳಿ ಜನರ ಗುಂಪೊಂದು ಅಮೃತ್ ಮಂಡಲ್ ಅಲಿಯಾಸ್ ಸಾಮ್ರಾಟ್​ನ ಮೇಲೆ ಹಲ್ಲೆ ಎಸಗಿದೆ. ಪಂಗಶಾ ಠಾಣೆ ಪೊಲೀಸರ ಪ್ರಕಾರ ಅಮೃತ್ ಮಂಡಲ್ ಹೊಸಾಯಿದಂಗ ಗ್ರಾಮದನಾಗಿದ್ದಾನೆ. ಆತ ಒಬ್ಬ ಸುಲಿಗೆಕೋರನಾಗಿದ್ದನೆಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಿದ್ದಾರೆ ಎಂಬುದು ಪೊಲೀಸರು ನೀಡುತ್ತಿರುವ ಮಾಹಿತಿ.

ಇದನ್ನೂ ಓದಿ: ಇದು ಬಾಂಗ್ಲಾದೇಶದ 2ನೇ ವಿಮೋಚನೆ: 2024ರ ದಂಗೆಯನ್ನು ಹೊಗಳಿದ ಬಿಎನ್​ಪಿ ನಾಯಕ ತಾರಿಖ್ ರಹಮಾನ್

ಹಿಂದೆ ಇದೇ ರೀತಿ ಹಲ್ಲೆ ಮಾಡಿ ಸಾಯಿಸಿ ಸುಟ್ಟುಹಾಕಲಾಗಿದ್ದ ದೀಪು ಚಂದ್ರದಾಸ್ ವಿರುದ್ಧವೂ ಹೀಗೇ ಆರೋಪಗಳಿದ್ದುವು. ಆತ ಇಸ್ಲಾಮ್ ಧರ್ಮ ನಿಂದನೆ ಮಾಡಿದ್ದಾನೆಂದು ಸಾಯಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಆ ಆರೋಪ ಸುಳ್ಳೆಂಬುದು ಸಾಬೀತಾಗಿತ್ತು. ಈಗ ಸಾಮ್ರಾಟ್ ಮೇಲೂ ಕೂಡ ಸುಲಿಗೆಯ ಆರೋಪ ಹೊರಿಸಿ, ಕೊಲೆಯನ್ನು ಸಮರ್ಥನೆ ಮಾಡಿಕೊಳ್ಳಲು ಯತ್ನಿಸುತ್ತಿರಬಹುದು.

ಬಾಂಗ್ಲಾದಲ್ಲಿ ದಟ್ಟವಾಗುತ್ತಿದೆ ಭಾರತ ವಿರೋಧಿ ಮನೋಭಾವ

2024ರ ಬಾಂಗ್ಲಾ ದಂಗೆಯ ರೂವಾರಿಯಾಗಿದ್ದ ಮತ್ತು ಭಾರತ ವಿರೋಧಿ ಧೋರಣೆ ಹೊಂದಿದ್ದ ಉಸ್ಮಾನ್ ಹದಿ ಎಂಬಾತನ ಮೇಲೆ ಡಿಸೆಂಬರ್ 12ರಂದು ಗುಂಡಿನ ದಾಳಿ ಮಾಡಲಾಯಿತು. ಕೆಲ ದಿನಗಳ ನಂತರ ಆತ ಸಾವನ್ನಪ್ಪಿದ್ದ. ಅದಾದ ಬಳಿಕ ಬಾಂಗ್ಲಾದೇಶದಲ್ಲಿ ಹಿಂಸಾಚಾರಗಳು ಹೆಚ್ಚುತ್ತಿವೆ. ಭಾರತ ವಿರೋಧಿ ಮನೋಭಾವ ಹೆಚ್ಚುತ್ತಿದೆ. ಭಾರತದ ರಾಜತಾಂತ್ರಿಕ ಕಚೇರಿಗಳನ್ನು ಗುರಿ ಮಾಡಲಾಗುತ್ತಿದೆ. ಹಿಂದೂ ಧರ್ಮೀಯರನ್ನೂ ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆಲಿಗಡ್ ಮುಸ್ಲಿಂ ಯೂನಿವರ್ಸಿಟಿ ಕ್ಯಾಂಪಸ್​ನಲ್ಲೇ ಬೋಧಕ ರಾವ್ ದಾನಿಶ್ ಅಲಿ ಹತ್ಯೆ – Kannada News | Aligarh Muslim University teacher Rao Danish Ali shot dead at campus area

ಘಟನೆ ನಡೆದ ಯೂನಿವರ್ಸಿಟಿ ಕ್ಯಾಂಟೀನ್ ಸ್ಥಳ

ಕಾನಪುರ್, ಡಿಸೆಂಬರ್ 9: ಆಲಿಗಡ್ ಮುಸ್ಲಿಂ ಯೂನಿವರ್ಸಿಟಿಯ (Aligarh Muslim University) ಬೋಧಕರೊಬ್ಬರನ್ನು ಕ್ಯಾಂಪಸ್​ನಲ್ಲೇ ಹತ್ಯೆ ಮಾಡಿದ ಘಟನೆ ನಡೆದಿದೆ. ವಿಶ್ವವಿದ್ಯಾಲಯದ ಎಬಿಕೆ ಸ್ಕೂಲ್​ನಲ್ಲಿ ಬೋಧಕರಾಗಿರುವ ರಾವ್ ದಾನಿಸ್ ಅಲಿಯನ್ನು ಗುಂಡಿಟ್ಟು ಸಾಯಿಸಲಾಗಿದೆ. ಆಲಿಗಡ್​ನಲ್ಲಿರುವ ಯೂನಿವರ್ಸಿಟಿ ಕ್ಯಾಂಪಸ್​ನ ಮೌಲಾನ ಆಜಾದ್ ಲೈಬ್ರರಿ ಪ್ರದೇಶದಲ್ಲಿ ಬುಧವಾರ ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ.

ಈ ಹತ್ಯೆಗೈದ ಹಂತಕರು ಯಾರೆಂದು ಗೊತ್ತಾಗಿಲ್ಲ. ದಾನಿಶ್ ಅಲಿ ಅವರು ತಮ್ಮ ಇಬ್ಬರು ಸಹೋದ್ಯೋಗಿಗಳೊಂದಿಗೆ ಮೌಲಾನ ಆಜಾದ್ ಲೈಬ್ರರಿ ಸಮೀಪದ ಕ್ಯಾಂಟೀನ್​ಗೆ ವಾಕಿಂಗ್​ಗೆ ಹೋಗಿದ್ದರು. ಆಗ ಬೈಕ್​ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ, ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ಘಟನೆಯ ನಂತರ ಮತ್ತೊಂದು ಭಯಾನಕ ಅಪಘಾತ: ಎರಡು ಕಾರಿಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್ಸು, 7 ಮಂದಿ ಸಾವು

ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು, ರಾವ್ ಅಲಿಯನ್ನು ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜಿಗೆ ಕರೆದೊಯ್ದಿದ್ದಾರೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರ ಪ್ರಾಣ ಉಳಿಯಲಿಲ್ಲ. ಇಬ್ಬರು ಅಪರಿಚಿತ ವ್ಯಕ್ತಿಗಳು ಈ ಹತ್ಯೆಗೈದಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.

ಅಲಿಗಡ್ ಪೊಲೀಸರ ಟ್ವೀಟ್

ಯಾವ ಕಾರಣಕ್ಕೆ ಈ ಕೊಲೆ ನಡೆದಿದೆ ಎಂಬುದು ಗೊತ್ತಾಗಿಲ್ಲ. ಸದ್ಯ ಪೊಲೀಸರು ತನಿಖೆ ನಡೆಸತೊಡಗಿದ್ದಾರೆ. ಸುತ್ತಮುತ್ತಲಿನ ಸ್ಥಳದ ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸಲಾಗುತ್ತಿದ್ದು, ಹಂತಕರನ್ನು ಪತ್ತೆ ಮಾಡುವ ಪ್ರಯತ್ನವಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿಯ ಕ್ಯಾಥೆಡ್ರಲ್ ಚರ್ಚ್​ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ – Kannada News | PM Narendra Modi Attends Christmas Prayer at Cathedral Church of the Redemption in Delhi

ನವದೆಹಲಿ, ಡಿಸೆಂಬರ್ 25: ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ದೆಹಲಿಯ ‘ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್‌’ನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಸ್ತುತಿಗೀತೆಗಳು ಮೊಳಗಿದವು. ದೆಹಲಿಯ ಬಿಷಪ್ ಡಾ. ಪಾಲ್ ಸ್ವರೂಪ್ ಪ್ರಧಾನ ಮಂತ್ರಿಯವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕ್ರಿಸ್‌ಮಸ್ ಹೊಸ ಭರವಸೆ ಹಾಗೂ ಎಲ್ಲರಲ್ಲಿ ದಯಾಪರತೆ ಮೂಡಿಸಲಿ. ದಯೆಗೆ ಹಂಚಿಕೆಯ ಬದ್ಧತೆಯನ್ನು ತರಲಿ. ‘ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್‌’ನಲ್ಲಿ ಭಾಗವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಸಂದೇಶದಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.

(ವಿಡಿಯೋ ಕೃಪೆ: ಪ್ರಧಾನಿ ನರೇಂದ್ರ ಮೋದಿ ಅವರ ಎಕ್ಸ್ ಖಾತೆ)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಾರ್ಮಿಕವಾಗಿ ಮಾಜಿ ಸಂಸದ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು? – Kannada News | DK Sureshs Cryptic Post Amidst Karnataka Power Tussle Sparks Debate

ಬೆಂಗಳೂರು, ಡಿಸೆಂಬರ್​​ 25: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಅಧಿಕಾರ ರಾಜಕೀಯದ ನಡುವೆ, ಡಿ.ಕೆ. ಸುರೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಮಾರ್ಮಿಕ ಪೋಸ್ಟ್ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಪಾಟೀಲ ಪುಟ್ಟಪ್ಪನವರ ಹೇಳಿಕೆಯಾದ ‘ಗುರಿಯನ್ನ ಬೇಗ ತಲುಪಬೇಕು ಅನ್ನುವವರು ದಾರಿಯಲ್ಲಿ ವಿಶ್ರಮಿಸುತ್ತಾ ಕುಳಿತುಕೊಳ್ಳಬಾರದು’ ಎಂಬ ವಾಕ್ಯವನ್ನು ಡಿ.ಕೆ. ಸುರೇಶ್ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಯಾರನ್ನು ಉದ್ದೇಶಿಸಿದೆ ಎಂಬ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿಗೆ ಚಿತ್ರಮಂದಿರದಲ್ಲೇ ಅರ್ಜುನ್ ಜನ್ಯ ಉತ್ತರ – Kannada News | 45 Kannada Movie director Arjun Janya reaction to fans funny reviews

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಅವರು ಇದೇ ಮೊದಲ ಬಾರಿಗೆ ‘45’ ಸಿನಿಮಾ (45 Kannada Movie) ಮೂಲಕ ಡೈರೆಕ್ಟರ್ ಆಗಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಮೊದಲ ದಿನ ಸಿನಿಮಾ ನೋಡಿದ ಅಭಿಮಾನಿಗಳು ಬಗೆಬಗೆಯಲ್ಲಿ ವಿಮರ್ಶೆ ತಿಳಿಸಿದ್ದಾರೆ. ‘ಅರ್ಜುನ್ ಜನ್ಯ ಅವರು ಇದು ತಮ್ಮ ಮೊದಲ ಸಿನಿಮಾ ಅಂತ ಸುಳ್ಳು ಹೇಳಿದ್ದಾರೆ. ಮೊದಲ ಸಿನಿಮಾದಲ್ಲಿ ಯಾರೂ ಕೂಡ ಇಷ್ಟು ಚೆನ್ನಾಗಿ ಮಾಡೋಕೆ ಆಗಲ್ಲ. ಮೊದಲ ಸಿನಿಮಾ ಅಂತ ಹೇಳಿದ್ದಕ್ಕೆ ಅವರ ವಿರುದ್ಧ ನಾನು ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ’ ಎಂದು ಅಭಿಮಾನಿಯೊಬ್ಬರು ಹೇಳಿದ್ದರು. ಅದಕ್ಕೆ ಅರ್ಜುನ್ ಜನ್ಯ ಪ್ರತಿಕ್ರಿಯಿಸಿದ್ದಾರೆ. ‘ಆ ವಿಡಿಯೋ ನಾನು ನೋಡಿದೆ. ಅವರು ಬಹಳ ಕ್ಯೂಟ್ ಆಗಿ ಹೇಳಿದ್ದಾರೆ. ಅದಕ್ಕಾಗಿ ಧನ್ಯವಾದಗಳು. ಆ ವಿಮರ್ಶೆಯನ್ನು ಅವರು ತಮಾಷೆಯಾಗಿ ಹೇಳಿರಬಹುದು. ಆದರೆ ಬಹಳ ಸತ್ಯವಾಗಿ ಹೇಳಿದ್ದಾರೆ. ಮೂವರು ಸ್ಟಾರ್ ನಟರು ಇರುವ ಸಿನಿಮಾವನ್ನು ನಾನು ಹೆಂಗೆಂಗೋ ಮಾಡೋಕೆ ಆಗಲ್ಲ. ಬ್ಯಾಲೆನ್ಸ್ ಮಾಡುವ ದೊಡ್ಡ ಜವಾಬ್ದಾರಿ ನನ್ನ ಮೇಲಿತ್ತು’ ಎಂದು ಅರ್ಜುನ್ ಜನ್ಯ ಅವರು ಹೇಳಿದ್ದಾರೆ. ಶಿವರಾಜ್​ಕುಮಾರ್ (Shivarajkumar), ಉಪೇಂದ್ರ, ರಾಜ್ ಬಿ. ಶೆಟ್ಟಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗರ್ಭಿಣಿಯರೇ… ನೀವು ಚಳಿಗಾಲದಲ್ಲಿ ಮಾಡುವ ಈ ಒಂದು ತಪ್ಪು ಮಗುವಿನ ತೂಕದ ಮೇಲೆ ಪರಿಣಾಮ ಬೀರುತ್ತೆ – Kannada News | Stay Warm in Pregnancy: Research on Baby’s Weight Link

ಚಳಿ (Cold) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ವಾತಾವರಣದಲ್ಲಿ, ಗರ್ಭಿಣಿಯರು (Pregnancy) ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಇತ್ತೀಚೆಗೆ ಪ್ರಕಟವಾದ ಅಂತರಾಷ್ಟ್ರೀಯ ಸಂಶೋಧನೆಯೊಂದು ಗರ್ಭಾವಸ್ಥೆಯಲ್ಲಿ ಶೀತಕ್ಕೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಶಿಶುವಿನ ತೂಕದ ಮೇಲೆ ಪರಿಣಾಮ ಬೀರುತ್ತದೆ ಎಂದು ಬಹಿರಂಗಪಡಿಸಿದೆ. ಈ ಸಂಶೋಧನೆಯು ಪಬ್‌ಮೆಡ್‌ನಲ್ಲಿ ಪ್ರಕಟವಾದ ವೈಜ್ಞಾನಿಕ ಅಧ್ಯಯನ ಮತ್ತು ಇತರ ಜಾಗತಿಕ ಆರೋಗ್ಯ ಸಂಸ್ಥೆಗಳ ಡೇಟಾವನ್ನು ಆಧರಿಸಿದ್ದು ಗರ್ಭಿಣಿಯರು ಈ ಕುರಿತು ತಿಳಿಯುವುದು ಅನಿವಾರ್ಯವಾಗಿದೆ. ಹೌದು, ಗರ್ಭಾವಸ್ಥೆಯಲ್ಲಿ ಪರಿಸರದ ಉಷ್ಣತೆಯು ಮಗುವಿನ ದೈಹಿಕ ಬೆಳವಣಿಗೆಗೆ ಸಂಬಂಧಿಸಿದ ಪ್ರಮುಖ ಅಂಶವಾಗಬಹುದು ಎಂದು ಸಂಶೋಧಕರು ಹೇಳುತ್ತಿದ್ದು ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಳಿಯ ವಾತಾವರಣ ಮಗುವಿನ ತೂಕದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಸಂಶೋಧನೆಯ ಪ್ರಕಾರ, ಗರ್ಭಾವಸ್ಥೆಯಲ್ಲಿ ತುಂಬಾ ಚಳಿಯಿದ್ದರೆ, ಕೆಲವು ಸಂದರ್ಭಗಳಲ್ಲಿ, ಜನನದ ಸಮಯದಲ್ಲಿ ಮಗುವಿನ ತೂಕವು ಸಾಮಾನ್ಯಕ್ಕಿಂತ ಕಡಿಮೆಯಿರಬಹುದು. ತಾಪಮಾನದಲ್ಲಿನ ನಿರಂತರ ಕುಸಿತ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಅದರಲ್ಲಿಯೂ ಎರಡನೇ ಮತ್ತು ಮೂರನೇ ತ್ರೈಮಾಸಿಕಗಳಲ್ಲಿ ಹವಾಮಾನದ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಇದು ಎಲ್ಲರಿಗೂ ಒಂದೇ ರೀತಿಯಾಗಿರಬೇಕೆಂದಿಲ್ಲ. ಆದರೆ ಪರಿಸರ, ಆರೋಗ್ಯ ಸ್ಥಿತಿಗಳಂತಹ ಅಂಶಗಳನ್ನು ಅವಲಂಬಿಸಿರುತ್ತದೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ. ದತ್ತಾಂಶದ ಆಧಾರದ ಮೇಲೆ, ಚಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಜನಿಸಿದ ಕೆಲವು ಶಿಶುಗಳು ಸಾಮಾನ್ಯಕ್ಕಿಂತ ಕಡಿಮೆ ತೂಕವನ್ನು ಹೊಂದಿರುವುದು ಕಂಡುಬಂದಿದೆ.

ಮಗುವಿನಲ್ಲಿ ಯಾವ ರೀತಿಯ ಸಮಸ್ಯೆಗಳು ಕಂಡುಬರಬಹುದು?

ಆರ್‌ಎಂಎಲ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಡಾ. ಸಲೋನಿ ಚಡ್ಡಾ ಅವರ ಪ್ರಕಾರ, ಕಡಿಮೆ ಜನನ ತೂಕದೊಂದಿಗೆ ಜನಿಸಿದ ಶಿಶುಗಳು ಆರಂಭದಲ್ಲಿ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು. ಸಂಶೋಧನೆಯ ಪ್ರಕಾರ, ಅಂತಹ ಮಕ್ಕಳು ಸೋಂಕುಗಳಿಗೆ ಹೆಚ್ಚು ಒಳಗಾಗುತ್ತಾರೆ ಮತ್ತು ಅವುಗಳಿಗೆ ವಿಶೇಷ ಆರೈಕೆಯ ಅಗತ್ಯವಿರುತ್ತದೆ. ಅಷ್ಟೇ ಅಲ್ಲ, ಕೆಲವರಲ್ಲಿ ಉಸಿರಾಟದ ತೊಂದರೆ, ದೌರ್ಬಲ್ಯ ಅಥವಾ ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ತೊಂದರೆ ಉಂಟಾಗಬಹುದು. ಕೆಲವು ಸಂದರ್ಭಗಳಲ್ಲಿ, ನಂತರದ ದಿನಗಳಲ್ಲಿ ಬೆಳವಣಿಗೆಯ ಸಮಸ್ಯೆ ಕೂಡ ಕಂಡುಬರಬಹುದು. ಆದರೆ ಸಮಯೋಚಿತ ಆರೈಕೆ ಇಂತಹ ಅಪಾಯಗಳನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೀವು ಗರ್ಭಿಣಿಯಾಗಿದ್ದು ವಾಯುಮಾಲಿನ್ಯದಿಂದಾಗುವ ಸಮಸ್ಯೆಗಳಿಂದ ಮಗುವನ್ನು ಕಾಪಾಡಲು ಈ ಸಲಹೆಗಳನ್ನು ಪಾಲಿಸಿ

ಯಾವ ರೀತಿ ಕಾಳಜಿ ವಹಿಸಬೇಕು?

  • ಚಳಿಗಾಲದಲ್ಲಿ ನಿಮ್ಮ ದೇಹವನ್ನು ಯಾವಾಗಲೂ ಬೆಚ್ಚಗಿಟ್ಟುಕೊಳ್ಳಿ.
  • ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ.
  • ನಿಯಮಿತವಾಗಿ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಿ.
  • ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ಮಾಡುವುದನ್ನು ಮರೆಯಬೇಡಿ.
  • ಶೀತ, ಜ್ವರ ಅಥವಾ ಯಾವುದೇ ಇತರ ಅಸ್ವಸ್ಥತೆಯನ್ನು ನಿರ್ಲಕ್ಷಿಸಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕುಸಿತ: ಉಡುಪಿ-ಮಂಗಳೂರಿನ ಈ ಎಲ್ಲ ಕಾಲೇಜುಗಳು ಕ್ಲೋಸ್​​ – Kannada News | 22 Private Colleges Under Mangaluru University to Shut Down Due to Decline in Student Admissions

ಮಂಗಳೂರು, ಡಿಸೆಂಬರ್​​ 25: ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತ ಹಿನ್ನೆಲೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 22 ಖಾಸಗಿ ಕಾಲೇಜುಗಳನ್ನು ಮುಚ್ಚಲು ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ನಿಗದಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಆಗದ ಕಾರಣ, ಮುಂದಿನ ಶೈಕ್ಷಣಿಕ ವರ್ಷದಿಂದ‌ ಈ ಕಾಲೇಜುಗಳು ಬಂದ್​​ ಆಗಲಿವೆ. ಪ್ರಸಕ್ತ ವರ್ಷದಲ್ಲಿ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣಗೊಳಿಸಲು ಅವಕಾಶ ಇರಲಿದೆ.

ಮುಚ್ಚಲಿರುವ ಕಾಲೇಜುಗಳು:

  1. ಆಬಾ ವುಮೆನ್ಸ್ ಪ್ರಥಮ ದರ್ಜೆ ಕಾಲೇಜು ಸುರತ್ಕಲ್
  2. ಅಂಜುಮನ್ ಪ್ರಥಮ ದರ್ಜೆ ಕಾಲೇಜು, ಮಂಗಳೂರು
  3. ಅಮೃತ ಕಾಲೇಜು, ಪಡೀಲ್
  4. ಸಿಲಿಕಾನ್ ಕಾಲೇಜ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಕೊಂಚಾಡಿ
  5. ಮೊಗ್ಲಿಂಗ್ ಇನ್ಸ್ಟಿಟ್ಯೂಟ್ ಆಫ್ ಜರ್ಮನ್ ಲ್ಯಾಂಗ್ವೇಜ್, ಬಲ್ಮಠ
  6. ಸಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಮಂಗಳೂರು
  7. ರೊಸಾರಿಯೊ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ಬೋಳಾರ
  8. ಕರಾವಳಿ ಕಾಲೇಜ್ ಆಫ್ ಎಜುಕೇಶನ್
  9. ಪ್ರೇಮಕಾಂತಿ ಕಾಲೇಜ್ ಆಫ್ ಎಜುಕೇಶನ್
  10. ಸೇಪಿಯೆನ್ಶಿಯ ಬೆಥನಿ ಪ್ರಥಮ ದರ್ಜೆ ಕಾಲೇಜು, ನೆಲ್ಯಾಡಿ
  11. ಶಾರದಾ ಮಹಿಳಾ ಕಾಲೇಜು, ಸುಳ್ಯ
  12. ರಾಮಕುಂಜೇಶ್ವರ ಕಾಲೇಜು
  13. ಹಝ್ರತ್ ಸಯ್ಯದ್ ಮದನಿ ಮಹಿಳಾ ಕಾಲೇಜು, ಉಳ್ಳಾಲ
  14. ಸೇಂಟ್ ಸೆಬಾಸ್ಟಿಯನ್ ಕಾಲೇಜ್ ಆಫ್ ಕಾಮರ್ಸ್
  15. ಸೇಂಟ್ ಥಾಮಸ್ ಕಾಲೇಜು, ಬೆಳ್ತಂಗಡಿ
  16. ಮಾರ್ ಇವಾನಿಯೋಸ್ ಕಾಲೇಜು, ಕಡಬ
  17. ಮಾಧವ ಪೈ ಕಾಲೇಜು, ಮಣಿಪಾಲ
  18. ಮೂಕಾಂಬಿಕಾ ಪ್ರಥಮ ದರ್ಜೆ ಕಾಲೇಜು, ಬೈಂದೂರು
  19. ವರಸಿದ್ಧಿ ವಿನಾಯಕ ಪ್ರಥಮ ದರ್ಜೆ ಕಾಲೇಜು, ಕುಂದಾಪುರ
  20. ಬಿ.ಡಿ. ಶೆಟ್ಟಿ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್, ಐರೋಡಿ ಉಡುಪಿ
  21. ವಿದ್ಯಾನಿಕೇತನ ಪ್ರಥಮ ದರ್ಜೆ ಕಾಲೇಜು‌, ಕಾಪು
  22. ಕೃಷ್ಣಭಾಯಿ ವಾಸುದೇವ್ ಶೆಣೈ ಸ್ಮಾರಕ ಕಾಲೇಜು, ಕಟಪಾಡಿ

ಇದನ್ನೂ ಓದಿ: ಪೋಷಕರೇ ಗಮನಿಸಿ; ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಇರಲಿ ಎಚ್ಚರ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ತೀವ್ರ ಕೊರತೆ ಉಂಟಾಗಿದ್ದು, ಬಹುತೇಕ ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿ ಕಾರ್ಯ ನಿರ್ವಹಿಸಬೇಕಾದ ಸ್ಥಿತಿ ಉದ್ಭವಿಸಿರುವ ಬಗ್ಗೆ ಇತ್ತೀಚೆಗಷ್ಟೇ ವರದಿಯಾಗಿತ್ತು. ಹಳೆಯ ವಿಶ್ವವಿದ್ಯಾಲಯಗಳು ತೀವ್ರ ಅಧ್ಯಾಪಕರ ಕೊರತೆ ಎದುರಿಸುತ್ತಿದ್ದರೆ, ಹೊಸದಾಗಿ ಸ್ಥಾಪಿತವಾದ ವಿಶ್ವವಿದ್ಯಾಲಯಗಳು ಪರ್ಯಾಪ್ತ ಬೋಧಕರು ಅಥವಾ ಸರ್ಕಾರಿ ಅನುದಾನವಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಹೊಸ ವಿಶ್ವವಿದ್ಯಾಲಯಗಳು ಶುಲ್ಕವನ್ನು ಭಾರಿಯಾಗಿ ಹೆಚ್ಚಿಸಬೇಕಾದ ಪರಿಸ್ಥಿತಿ ಉಂಟಾಗಿ, ವಿದ್ಯಾರ್ಥಿಗಳ ದಾಖಲಾತಿಯೂ ಕಡಿಮೆಯಾಗುತ್ತಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Personality Test: ಕಣ್ಣಿನ ಬಣ್ಣದಿಂದ ತಿಳಿಯಬಹುದು ವ್ಯಕ್ತಿಯ ವ್ಯಕ್ತಿತ್ವದ ರಹಸ್ಯ – Kannada News | Personality Test: Find out what your personality secret is based on your eye color

ವ್ಯಕ್ತಿತ್ವ ಪರೀಕ್ಷೆImage Credit source: vecteezy

ಸಾಮಾನ್ಯವಾಗಿ ನಾವೆಲ್ಲರೂ ನಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು, ಗುಣಸ್ವಭಾವ ಹೇಗಿದೆ ಎಂಬುದನ್ನು ತಿಳಿಯಲು ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಗಿಣಿಶಾಸ್ತ್ರ, ಹಸ್ತಶಾಸ್ತ್ರ ಇತ್ಯಾದಿಗಳನ್ನು ಅವಲಂಬಿಸುತ್ತೇವೆ. ಇದು ಮಾತ್ರವಲ್ಲದೆ ಕಣ್ಣು, ಕಿವಿ, ಮೂಗು, ಹಣೆ, ಪಾದದ ಆಕಾರ, ಕೈಬೆರಳುಗಳ ಆಕಾರ ಮೂಲಕವೂ ಸ್ವತಃ ನಾವೇ ನಮ್ಮ ವ್ಯಕ್ತಿತ್ವ (Personality) ಹೇಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದು. ಅದೇ ರೀತಿ ಕಣ್ಣಿನ ಬಣ್ಣದ ಮೂಲಕವೂ ವ್ಯಕ್ತಿಯ ಸ್ವಭಾವ, ನಡವಳಿಕೆ ಹೇಗಿದೆ ಎಂಬುದನ್ನು ಪರೀಕ್ಷಿಸಬಹುದು. ಬಹುತೇಕರ ಕಣ್ಣಿನ ಬಣ್ಣ ಕಪ್ಪಾಗಿದ್ದರೆ ಇನ್ನೂ ಕೆಲವರ ಕಣ್ಣು ಕಂದು, ನೀಲಿ, ಹಸಿರು ಬಣ್ಣದ್ದಾಗಿರುತ್ತದೆ. ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಕಣ್ಣಿನ ಬಣ್ಣದ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ.

ಕಣ್ಣಿನ ಬಣ್ಣದ ಮೂಲಕ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಿರಿ:

ಕಪ್ಪು ಬಣ್ಣ: ಹೆಚ್ಚಿನ ಜನರು ಕಪ್ಪು ಬಣ್ಣದ ಕಣ್ಣುಗಳನ್ನು ಹೊಂದಿರುತ್ತಾರೆ. ಕಪ್ಪು ಕಣ್ಣುಗಳನ್ನು ಹೊಂದಿರುವ ತುಂಬಾನೇ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಅವರು ತಮ್ಮ ಕೆಲಸದಲ್ಲಿ ಬಹಳ ನುರಿತರು. ಇವರು ಏನೇ ಮಾಡಿದರೂ, ಅದನ್ನು ಪೂರ್ಣ ಹೃದಯದಿಂದ ಮಾಡುತ್ತಾರೆ ಮತ್ತು ತಮ್ಮ ಕೆಲಸವನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲು ಮುಂಚಿತವಾಗಿಯೇ ಯೋಜಿಸುತ್ತಾರೆ. ಇವರು ತಮ್ಮ ಕಠಿಣ ಪರಿಶ್ರಮದ ಮೂಲಕವೇ ಉನ್ನತ ಸ್ಥಾನಕ್ಕೆ ಏರುತ್ತಾರೆ. ಇಷ್ಟು ಮಾತ್ರವಲ್ಲದೆ ಇವರು ತಮ್ಮ ಸಂಗಾತಿಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತಾರೆ. ಮತ್ತು ಇವರು ನಂಬಿಕೆಗೆ ಅರ್ಹರು.

ಕಂದು ಕಣ್ಣುಗಳು: ಕಂದು ಬಣ್ಣದ ಕಣ್ಣುಗಳನ್ನು ಹೊಂದಿರುವ ಜನರು ಸ್ವಾಭಾವಿಕವಾಗಿ ತುಂಬಾ ಒಳ್ಳೆಯವರು. ಅವರಿಗೆ ಜನರನ್ನು ಹೇಗೆ ಆಕರ್ಷಿಸಬೇಕೆಂದು ಬಹಳ ಚೆನ್ನಾಗಿ ತಿಳಿದಿದೆ. ಅಲ್ಲದೆ ಇತರರು ಇವರತ್ತ ಬಲು ಸುಲಭವಾಗಿ ಆಕರ್ಷಿತರಾಗುತ್ತಾರೆ. ಇವರು ಎಲ್ಲಾ ಕಷ್ಟಗಳನ್ನು ಬಹಳ ಬುದ್ಧಿವಂತಿಕೆಯಿಂದ ಎದುರಿಸುತ್ತಾರೆ, ತುಂಬಾ ಸೃಜನಶೀಲರಾದ ಇವರು ಯಾವಾಗಲೂ ಹೊಸ ವಿಷಯಗಳನ್ನು ಕಲಿಯುವಲ್ಲಿ ತುಂಬಾನೇ ಆಸಕ್ತಿಯನ್ನು ಹೊಂದಿರುತ್ತಾರೆ. ಅಲ್ಲದೆ ಇವರು ಜೀವನದಲ್ಲಿ ಪ್ರೀತಿಗೆ ಹೆಚ್ಚಿನ ಮಹತ್ವವನ್ನು ನೀಡುವ ವ್ಯಕ್ತಿಗಳಾಗಿದ್ದಾರೆ.

ಬೂದು ಬಣ್ಣದ ಕಣ್ಣುಗಳು:  ಬೂದು ಬಣ್ಣದ ಕಣ್ಣುಗಳನ್ನು ಹೊಂದಿರುವವರು ತುಂಬಾ ಮುಕ್ತ ಮನಸ್ಸಿನವರು. ಅವರು ತಮ್ಮ ಜೀವನದಲ್ಲಿ ಸ್ವಾತಂತ್ರ್ಯವನ್ನು ಆನಂದಿಸುತ್ತಾರೆ. ಅವರು ತಮ್ಮ ಕುಟುಂಬ ಸದಸ್ಯರೊಂದಿಗೆಯೂ ಇದೇ ರೀತಿಯ ವಾತಾವರಣವನ್ನು ಕಾಯ್ದುಕೊಳ್ಳುತ್ತಾರೆ. ನೇರ ಸ್ವಭಾವದ ವ್ಯಕ್ತಿಗಳಾದ ಇವರು ಯಾರ ಬಗ್ಗೆಯೂ ಬೆನ್ನ ಹಿಂದೆ ಮಾತನಾಡುವುದಿಲ್ಲ.

ನೀಲಿ ಕಣ್ಣುಗಳು: ನೀಲಿ ಬಣ್ಣದ ಕಣ್ಣುಗಳನ್ನು ಹೊಂದಿರುವ ಜನರು ತಮ್ಮ ಜೀವನದಲ್ಲಿ ಸ್ಥಿರತೆಯನ್ನು ಬಯಸುತ್ತಾರೆ ಮತ್ತು ಇತರರಿಗೆ ಸಹಾಯ ಮಾಡಲು ಇಷ್ಟಪಡುವವರಾಗಿರುತ್ತಾರೆ. ಆದರೆ ಕೆಲವೊಮ್ಮೆ, ಇತರರಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ, ಅವರು ತಮ್ಮನ್ನು ತಾವು ಹಾನಿ ಮಾಡಿಕೊಳ್ಳುತ್ತಾರೆ. ಇದರ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು.

ಇದನ್ನೂ ಓದಿ: ನಿಮ್ಮ ಜೀವನದಲ್ಲಿನ ದೊಡ್ಡ ದೌರ್ಬಲ್ಯ ಯಾವುವು ಎಂಬುದನ್ನು ತಿಳಿಸುತ್ತೆ ಚಿತ್ರ

ಹಸಿರು ಕಣ್ಣುಗಳು:  ಹಸಿರು ಕಣ್ಣುಗಳನ್ನು ಹೊಂದಿರುವ ಜನರು ತುಂಬಾ ಕುತೂಹಲ ಸ್ವಭಾವದ ವ್ಯಕ್ತಿಗಳು ಮತ್ತು ಬುದ್ಧಿವಂತರು. ಅವರು ಯಾವಾಗಲೂ ಏನನ್ನಾದರೂ ತಿಳಿದುಕೊಳ್ಳಲು, ರಹಸ್ಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ ಮತ್ತು ತಮ್ಮ ಬುದ್ಧಿವಂತಿಕೆಯಿಂದ ಅದರಲ್ಲಿ ಯಶಸ್ಸನ್ನೂ ಸಹ ಸಾಧಿಸುತ್ತಾರೆ. ಅಲ್ಲದೆ ಇವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಉತ್ಸಾಹವನ್ನು ಹೊಂದಿರುತ್ತಾರೆ. ಜೀವನವನ್ನು ಚೆನ್ನಾಗಿ ಆನಂದಿಸಲು ಬಯಸುವ ವ್ಯಕ್ತಿಗಳು ಇವರು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version