ಪ್ರಧಾನ್ ಅವರನ್ನು ತೆಗೆದುಹಾಕಿ ಪ್ರಧಾನ ಮಂತ್ರಿಯನ್ನು ಉಳಿಸಿಕೊಂಡಿರಿ; ಸಂಸತ್​​ನಲ್ಲಿ ಅಖಿಲೇಶ್ ಯಾದವ್ ವ್ಯಂಗ್ಯ – Kannada News | You removed Pradhan to save Pradhan Mantri Akhilesh Yadav jibe in Parliament Session

ನವದೆಹಲಿ, ಜುಲೈ 28: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ನೀಡಿದ್ದರು. ಈ ಬಗ್ಗೆ ಇಂದು ಲೋಕಸಭಾ ಅಧಿವೇಶನದಲ್ಲಿ ಮಾತನಾಡಿರುವ ಸಮಾಜವಾದಿ ಪಾರ್ಟಿ (SP) ಅಧ್ಯಕ್ಷ ಅಖಿಲೇಶ್ ಯಾದವ್, “ಕೇಂದ್ರ ಸರ್ಕಾರ ಪ್ರಧಾನ್ ಅವರನ್ನು ತೆಗೆದುಹಾಕುವ ಮೂಲಕ ಪ್ರಧಾನ ಮಂತ್ರಿಯನ್ನು ಉಳಿಸಿಕೊಂಡಿದೆ” ಎಂದು ವ್ಯಂಗ್ಯವಾಡಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ವಿಧೇಯಕದ ಕುರಿತು ಲೋಕಸಭೆಯಲ್ಲಿ ನಡೆದ 10 ಗಂಟೆಗಳ ಸುದೀರ್ಘ ಚರ್ಚೆಯ ವೇಳೆ ಮಾತನಾಡಿದ ಅಖಿಲೇಶ್ ಯಾದವ್, “ಧರ್ಮೇಂದ್ರ ಪ್ರಧಾನ್ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಮೂಲಕ ಸರ್ಕಾರವು ತನ್ನ ಪ್ರಧಾನ ಮಂತ್ರಿಯನ್ನು ಉಳಿಸಿಕೊಂಡಿದೆ. ಸರ್ಕಾರವನ್ನು ತಲೆಬಾಗುವಂತೆ ಮಾಡಿದ ಯುವಜನತೆಯ ಮನೋಬಲ ಮತ್ತು ಒಗ್ಗಟ್ಟಿಗೆ ನಾನು ಸಲಾಂ ಹೇಳುತ್ತೇನೆ. ಪ್ರಧಾನ್ ಅವರನ್ನು ಪದಚ್ಯುತಿಗೊಳಿಸಿ ಮಂತ್ರಿಯನ್ನು ಉಳಿಸಿದ್ದಕ್ಕೆ ಬಿಜೆಪಿ ಸಂಸದರು ನಿಟ್ಟುಸಿರು ಬಿಟ್ಟಿದ್ದಾರೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೃತ್ತಿಪರ ಫುಟ್‌ಬಾಲ್ ಆಟಗಾರ ಆಗಲಿದ್ದಾರೆ ಬಾಲಿವುಡ್ ನಟ ಟೈಗರ್ ಶ್ರಾಫ್ – Kannada News | Actor Tiger Shroff All Set To Make Professional Football Debut In Durand Cup

ಬಾಲಿವುಡ್‌ ನಟ ಟೈಗರ್ ಶ್ರಾಫ್ (Tiger Shroff) ಈಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ತಮ್ಮ ಮಾರ್ಷಲ್ ಆರ್ಟ್ಸ್ ಮತ್ತು ಫಿಟ್ನೆಸ್‌ಗೆ ಹೆಸರಾಗಿರುವ ಅವರು ಫುಟ್​​ಬಾಲ್ ಮೈದಾನಕ್ಕೆ ಇಳಿಯುತ್ತಿದ್ದಾರೆ. ಹಾಗಂತ ಅವರು ಫುಟ್​​ಬಾಲ್ ಆಧರಿಸಿ ಸಿನಿಮಾ ಮಾಡುತ್ತಿದ್ದಾರೆ ಎಂದುಕೊಳ್ಳಬೇಡಿ. ಅವರು ಈಗ ವೃತ್ತಿಪರ ಫುಟ್‌ಬಾಲ್‌ ಜಗತ್ತಿಗೆ ಕಾಲಿಡಲಿದ್ದಾರೆ ಎಂಬ ವರದಿಗಳು ಹೇಳಿವೆ. ಪ್ರತಿಷ್ಠಿತ ಡ್ಯುರಾಂಡ್ ಕಪ್ ಟೂರ್ನಿಯಲ್ಲಿ ಅವರು ಮುಂಬೈ ಎಫ್‌ಸಿ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಅವರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಉದ್ಯಮಿ ಅಲಿ ಅಹ್ಮದ್ ಒಡೆತನದ ಮುಂಬೈ ಎಫ್‌ಸಿ ತಂಡದೊಂದಿಗೆ ಟೈಗರ್ ಶ್ರಾಫ್ ತರಬೇತಿ ಪಡೆಯುತ್ತಿದ್ದಾರೆ. ಅವರು ತಂಡದೊಂದಿಗೆ ನಿಯಮಿತವಾಗಿ ಅಭ್ಯಾಸ ಅವಧಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರ ಕ್ರೀಡಾ ಕೌಶಲ್ಯ ಮತ್ತು ಬದ್ಧತೆಗೆ ತರಬೇತುದಾರರು ಫುಲ್ ಫಿದಾ ಆಗಿದ್ದಾರೆ. ಭವಿಷ್ಯದಲ್ಲಿ ಅವರು ತಂಡದ ಖಾಯಂ ಸದಸ್ಯರಾಗುವ ಸಾಧ್ಯತೆಯೂ ಇದೆ.

ಡ್ಯುರಾಂಡ್ ಕಪ್ ಪಂದ್ಯಾವಳಿಗಳಿಗಾಗಿ ಟೈಗರ್ ಶ್ರಾಫ್ ಮತ್ತು ಅವರ ತಂಡ ಜುಲೈ 30ರಂದು ಶಿಲ್ಲಾಂಗ್‌ಗೆ ಪ್ರಯಾಣ ಬೆಳೆಸಲಿದೆ. ನಟ ಅಥವಾ ಕ್ಲಬ್‌ನಿಂದ ಈ ಬಗ್ಗೆ ಇನ್ನು ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಇದನ್ನೂ ಓದಿ: ಅಬ್ಬಾ ಅದು ಹೆಂಗೆ ಫ್ಲಿಪ್ ಮಾಡ್ತಾರೆ ನೋಡಿ ಟೈಗರ್ ಶ್ರಾಫ್

ಟೈಗರ್ ಶ್ರಾಫ್ ಅವರು ಕ್ರಿಕೆಟ್ ಹಾಗೂ ಫುಟ್​​ಬಾಲ್ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಅವರು ಆಟ ಆಡೋದು ಆಗಾಗ ಕಾಣಿಸುತ್ತದೆ. ಈ ವಿಡಿಯೋಗಳು ಆಗಾಗ ವೈರಲ್ ಆಗಿ ಸದ್ದು ಮಾಡುತ್ತವೆ. ಸಿನಿಮಾ ವಿಷಯಕ್ಕೆ ಬಂದರೆ ಟೈಗರ್ ಶ್ರಾಫ್ ಇತ್ತೀಚೆಗೆ ಸಂಜಯ್ ದತ್ ಜೊತೆ ‘ಬಾಗಿ 4’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರು ರಾಮ್ ಮಾಧ್ವಾನಿ ನಿರ್ದೇಶನದ ಹೊಸ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಧರ್ಮ ಪ್ರೊಡಕ್ಷನ್ಸ್ ಸಂಸ್ಥೆಯ ‘ಲಗ್ ಜಾ ಗಲೇ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದೀಗ ಅವರು ಫುಟ್‌ಬಾಲ್ ಮೈದಾನಕ್ಕೆ ಇಳಿಯುತ್ತಿರುವುದು ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಂದು ಸಿಎಂ ಡಿಕೆ ಶಿವಕುಮಾರ್​​ ವಿವಾಹ ವಾರ್ಷಿಕೋತ್ಸವ: ಮದುವೆ ಆಮಂತ್ರಣ ಪತ್ರ ವೈರಲ್​ – Kannada News | Retro Vibes: 1993 Wedding Invitation of Karnataka CM DK Shivakumar Goes Viral on His 33rd Anniversary

ಡಿಕೆಶಿ ಮದುವೆ ಆಮಂತ್ರಣಪತ್ರ ವೈರಲ್​

ಬೆಂಗಳೂರು, ಜುಲೈ 28: ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)​​ ಇಂದು (ಜುಲೈ 28) ವಿವಾಹ ವಾರ್ಷಿಕೋತ್ಸವ (Wedding Anniversary) ಆಚರಿಸಿಕೊಳ್ಳುತ್ತಿದ್ದು, ಉಷಾ ಅವರ ಜೊತೆ ದಾಂಪತ್ಯ ಜೀವನ ಆರಂಭಿಸಿ 33 ವರ್ಷಗಳು ಕಳೆದಿವೆ. ಈ ಶುಭ ಸಂದರ್ಭದಲ್ಲಿ ಸಿಎಂಗೆ ಶುಭಾಶಯದ ಮಹಾಪೂರವೇ ಹರಿದುಬರುತ್ತಿದ್ದು, ಅವರ ಮದುವೆಯ ಆಮಂತ್ರಣ ಪತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​​ ಆಗಿದೆ. ರಾಜಕೀಯ ನಾಯಕರು, ಡಿಕೆಶಿ ಅಭಿಮಾನಿಗಳು ಇದನ್ನು ಹಂಚಿಕೊಳ್ಳುವ ಮೂಲಕ ಶುಭ ಹಾರೈಸುತ್ತಿದ್ದಾರೆ.

ವೈರಲ್​​ ಆದ ಆಮಂತ್ರಣದಲ್ಲಿ ಏನಿದೆ?

27 ಜುಲೈ 1993ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಕೆ ಶಿವಕುಮಾರ್ ಮತ್ತು ಉಷಾ ಅವರ ವಿವಾಹ ಬೆಳಿಗ್ಗೆ 9.45ರಿಂದ 10.25ರ ಕನ್ಯಾ ಲಗ್ನ ಮುಹೂರ್ತದಲ್ಲಿ ನೆರವೇರಿತ್ತು. ಮದುವೆ ಸಂದರ್ಭದಲ್ಲಿಯೇ ಡಿಕೆಶಿ​​ ಅವರು ಸಾತನೂರು ಕ್ಷೇತ್ರದ ಶಾಸಕರಾಗಿದ್ದರು ಎಂಬುದನ್ನು ವಿವಾಹ ಆಮಂತ್ರಣ ಪತ್ರದಲ್ಲಿ ಗಮನಿಸಬಹುದಾಗಿದೆ.

ಇದನ್ನೂ ಓದಿ: ಸಂಪುಟ ವಿಸ್ತರಣೆಗೆ ಇಂದೇ ಗ್ರೀನ್ ಸಿಗ್ನಲ್? ದೆಹಲಿಯಲ್ಲಿ ಡಿಕೆಶಿ, ಸಿದ್ದರಾಮಯ್ಯ, ಹರಿಪ್ರಸಾದ್ ಮಹತ್ವದ ಸಭೆ

ನೆಟ್ಟಿಗರ ಪ್ರತಿಕ್ರಿಯೆ ಏನು?

ವೈರಲ್​​ ಆಗಿರುವ ಡಿಕೆಶಿ ಮದುವೆ ಆಮಂತ್ರಣ ಪತ್ರಿಕೆ ಕಂಡು ನೆಟ್ಟಿಗರು ನಾನಾ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಳೆಯ ನೆನಪುಗಳು ಯಾವಾಗಲೂ ಶ್ರೇಷ್ಠ ಎಂದು ಒಬ್ಬರು ತಿಳಿಸಿದ್ದರೆ, ಮತ್ತೊಬ್ಬರು ಇಂತಹ ನೆನಪುಗಳು ಮಧುರ ಎಂದು ತಿಳಿಸಿದ್ದಾರೆ.

ಡಿಕೆಶಿ ಮತ್ತು ಉಷಾ ದಂಪತಿಗೆ ಐಶ್ವರ್ಯಾ, ಆಭರಣ ಎಂಬ ಇಬ್ಬರು ಪುತ್ರಿಯರು ಹಾಗೂ ಆಕಾಶ್ ಎಂಬ ಒರ್ವ ಪುತ್ರ ಇದ್ದು, ಈ ಪೈಕಿ ಐಶ್ವರ್ಯಾ ಅವರ ವಿವಾಹ ಅದಾಗಲೇ ನೆರವೇರಿದೆ. ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಹಾಗೂ ಮಾಳವಿಕಾ ಕೃಷ್ಣ ಅವರ ಪುತ್ರ (ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಮೊಮ್ಮಗ) ಅಮರ್ತ್ಯ ಹೆಗ್ಡೆ ಅವರೊಂದಿಗೆ 14 ಫೆಬ್ರವರಿ 2021 ರಂದು ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೇ 2026 ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಡಿಕೆಶಿ ತಾತ ಕೂಡ ಆಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:19 pm, Tue, 28 July 26

Source link

ಕಾವೇರಿ ಸಂದಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್: ಆ.3ರಂದು ಕರ್ನಾಟಕ-ತಮಿಳುನಾಡು ಸಿಎಂ ಸಭೆ ನಿಗದಿ – Kannada News | Cauvery water issue: Tamil Nadu CM Vijay to meet Karnataka CM DK Shivakumar on August 3 In Bengaluru

ಬೆಂಗಳೂರು, (ಜುಲೈ 28): ಕಾವೇರಿ ನದಿ ನೀರು ಹಂಚಿಕೆ ವಿವಾದದ (Cauvery River Water Dispute) ನಡುವೆಯೇ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸಂಬಂಧಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಕಾಣಿಸಿಕೊಂಡಿದೆ. ಕಾವೇರಿ ನೀರು ವಿವಾದ ವಿಚಾರವಾಗಿ ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹಾಗೂ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನಡುವಿನ ಸಂದಾನ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ. ಮಳೆ ಕೊರತೆಯ ಕಾರಣ ಜಲಾಶಯಗಳಲ್ಲಿನ ನೀರಿನ ಸಂಗ್ರಹ ತಳ ತಲುತ್ತಿದ್ದು, ಕಾವೇರಿ ನದಿ ನೀರು ಹಂಚಿಕೆ ವಿವಾದದ ಸ್ವರೂಪ ಪಡೆಯುತ್ತಿರುವ ಮಧ್ಯೆಯೇ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ನೇರ ಮಾತುಕತೆಗೆ ಮುಂದಾಗಿದ್ದಾರೆ. ಹೌದು…ಆಗಸ್ಟ್ 3ರ ಮಧ್ಯಾಹ್ನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿದ್ಧತೆ ನಡೆಯುತ್ತಿವೆ. ಸ್ವಚ್ಛತೆ, ಎಸಿ ಕ್ಲೀನಿಂಗ್, ನೆಲಹಾಸು ಬದಲಾವಣೆ ಸೇರಿದಂತೆಉಭಯ ರಾಜ್ಯಗಳ ಬಾವುಟ ಮತ್ತು ಲಾಂಛನಗಳ ಅಳವಡಿಕೆ ಕಾರ್ಯ ನಡೆದಿದೆ. ಇನ್ನು ಈ ಸಭೆಯಲ್ಲಿ ಎರಡೂ ರಾಜ್ಯಗಳ ಸಚಿವರು ಮತ್ತು ಅಧಿಕಾರಿಗಳು ಸೇರಿ ಒಟ್ಟು 25 ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಬರದ ಮಧ್ಯೆ ಕರ್ನಾಟಕಕ್ಕೆ ಬರಸಿಡಿಲು: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ

Source link

Success Story: ಕಿವುಡ ತಂದೆಯ ಕನಸು ನನಸಾಗಿಸಿದ ಮಗ; AI ಎಂಜಿನಿಯರ್ ಆಗಿ 1.06 ಕೋಟಿ ರೂ. ಪ್ಯಾಕೇಜ್ ಪಡೆದ ಅಖಿಲೇಶ್ – Kannada News | From Rural Poverty to Global Tech: Tailor’s Son Akhilesh Secures 1.06 Crore Package as AI Engineer

1.06 ಕೋಟಿ ರೂ. ಪ್ಯಾಕೇಜ್ ಪಡೆದ ಅಖಿಲೇಶ್

ಕಷ್ಟಪಟ್ಟು ದುಡಿಯುವ ಪೋಷಕರ ತ್ಯಾಗ, ಮಕ್ಕಳ ಪರಿಶ್ರಮ ಮತ್ತು ಸರಿಯಾದ ಮಾರ್ಗದರ್ಶನ ಒಂದಾದರೆ ಯಾವುದೇ ಕನಸನ್ನೂ ನನಸಾಗಿಸಬಹುದು ಎಂಬುದಕ್ಕೆ ಆಂಧ್ರ ಪ್ರದೇಶದ ಕಾಕಿನಾಡ ಮೂಲದ ಅಖಿಲೇಶ್ ಉತ್ತಮ ಉದಾಹರಣೆಯಾಗಿದ್ದಾರೆ. ಕಿವುಡ ಮತ್ತು ಮೂಕ ತಂದೆಯ ಮಗನಾದ ಅಖಿಲೇಶ್ ಇದೀಗ ಕೆನಡಾ ಮೂಲದ AI ಕಂಪನಿಯಲ್ಲಿ ವರ್ಷಕ್ಕೆ 1.06 ಕೋಟಿ ರೂ. (CTC) ವೇತನದೊಂದಿಗೆ AI ಎಂಜಿನಿಯರ್ ಆಗಿ ಆಯ್ಕೆಯಾಗಿದ್ದು, ಅವರ ಸಾಧನೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಟೈಲರಿಂಗ್ ವೃತ್ತಿಯಲ್ಲೇ ಮಕ್ಕಳ ಭವಿಷ್ಯ ಕಟ್ಟಿದ ಪೋಷಕರು:

ಕಾಕಿನಾಡ ಜಿಲ್ಲೆಯ ಕುತುಕುಡುಮಿಲ್ಲಿ ಎಂಬ ಸಣ್ಣ ಗ್ರಾಮದ ಗಂಗಾಧರ ರಾವ್ ಮತ್ತು ಮಾಲತಿ ದಂಪತಿ ಅತ್ಯಂತ ಸರಳ ಜೀವನ ನಡೆಸುತ್ತಿದ್ದರು. ಕಿವುಡ ಮತ್ತು ಮೂಕರಾಗಿರುವ ಗಂಗಾಧರ ರಾವ್ ಟೈಲರಿಂಗ್ ವೃತ್ತಿಯ ಮೂಲಕ ಕುಟುಂಬವನ್ನು ಪೋಷಿಸುತ್ತಿದ್ದರು. ಅವರ ಪತ್ನಿ ಮಾಲತಿ ಕೂಡ ಬಟ್ಟೆಗಳಿಗೆ ಕರಕುಶಲ ಕೆಲಸ ಮಾಡಿ ಕುಟುಂಬದ ಆದಾಯಕ್ಕೆ ಕೈಜೋಡಿಸುತ್ತಿದ್ದರು. ಆರ್ಥಿಕ ಸವಾಲುಗಳ ನಡುವೆಯೂ ತಮ್ಮ ಇಬ್ಬರು ಮಕ್ಕಳ ಶಿಕ್ಷಣಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡ ಈ ದಂಪತಿಯ ಪರಿಶ್ರಮಕ್ಕೆ ಇಂದು ಅದ್ಭುತ ಪ್ರತಿಫಲ ದೊರೆತಿದೆ.

ಡೇಟಾ ಸೈನ್ಸ್‌ನಿಂದ AI ಎಂಜಿನಿಯರ್‌ವರೆಗೆ ಯಶಸ್ಸಿನ ಪಯಣ:

ಅಖಿಲೇಶ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೊತಪಲ್ಲಿಯಲ್ಲಿ ಪೂರ್ಣಗೊಳಿಸಿ, ನಂತರ ಖಾಸಗಿ ಕಾಲೇಜಿನಲ್ಲಿ ಪ್ರೌಡ ಶಿಕ್ಷಣ ಮುಗಿಸಿದರು. ಬಳಿಕ ಸುರಂಪಲೆಮ್‌ನ ಆದಿತ್ಯ ವಿಶ್ವವಿದ್ಯಾಲಯದಲ್ಲಿ ಡೇಟಾ ಸೈನ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ವಿದ್ಯಾರ್ಥಿ ಜೀವನದಿಂದಲೇ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಂಡಿದ್ದ ಅವರು ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಕೆನಡಾ ಮೂಲದ QuantRise Tech AI ಕಂಪನಿಯಿಂದ ವರ್ಷಕ್ಕೆ 1.06 ಕೋಟಿ ರೂ. (CTC) ವೇತನದ ಆಫರ್ ಲೆಟರ್ ಪಡೆದರು.

ಮನೆಯಿಂದಲೇ ಕೆಲಸ ಆರಂಭಿಸಿದ ಅಖಿಲೇಶ್:

ವಿಶೇಷವೆಂದರೆ, ಅಖಿಲೇಶ್ ಈಗಾಗಲೇ ಕಂಪನಿಗೆ ಸೇರಿದ್ದು, ಸಂಪೂರ್ಣವಾಗಿ Work From Home (WFH) ಮಾದರಿಯಲ್ಲಿ AI ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದ ಯುವಕ ವಿಶ್ವದರ್ಜೆಯ ತಂತ್ರಜ್ಞಾನ ಕಂಪನಿಯಲ್ಲಿ ಸ್ಥಾನ ಪಡೆದಿರುವುದು ಅನೇಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ.

ಇದನ್ನೂ ಓದಿ: ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

ಅದೇ ವಿಶ್ವವಿದ್ಯಾಲಯದ ಮತ್ತೊಬ್ಬ ವಿದ್ಯಾರ್ಥಿಗೂ 1.06 ಕೋಟಿ ರೂ. ಪ್ಯಾಕೇಜ್:

ಅಖಿಲೇಶ್ ಮಾತ್ರವಲ್ಲ, ಆದಿತ್ಯ ವಿಶ್ವವಿದ್ಯಾಲಯದ ಮತ್ತೊಬ್ಬ ವಿದ್ಯಾರ್ಥಿ ರಾಜೇಶ್ ಕೂಡ ಅದೇ ಕಂಪನಿಯಲ್ಲಿ ವರ್ಷಕ್ಕೆ 1.06 ಕೋಟಿ ರೂ. ವಾರ್ಷಿಕ ವೇತನದೊಂದಿಗೆ ಉದ್ಯೋಗ ಪಡೆದಿದ್ದಾರೆ. ವಿಶ್ವವಿದ್ಯಾಲಯದ ಆಡಳಿತದ ಪ್ರಕಾರ, ಮೊದಲ ವರ್ಷದಂದೇ ವಿದ್ಯಾರ್ಥಿಗಳಿಗೆ ವಿಶೇಷ ಪ್ಲೇಸ್‌ಮೆಂಟ್ ತರಬೇತಿ, ಸಂವಹನ ಕೌಶಲ್ಯ ಅಭಿವೃದ್ಧಿ ಹಾಗೂ ತಾಂತ್ರಿಕ ತರಬೇತಿ ನೀಡಲಾಗುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದ ಉದ್ಯೋಗಗಳಿಗೆ ಅವರನ್ನು ಸಿದ್ಧಗೊಳಿಸಲಾಗುತ್ತಿದೆ.

ಸಾಧನೆ ನೀಡಿದ ಮಹತ್ವದ ಸಂದೇಶ:

ಅಖಿಲೇಶ್ ಅವರ ಯಶಸ್ಸು ಮತ್ತೊಮ್ಮೆ ಒಂದು ಸತ್ಯವನ್ನು ಸಾಬೀತುಪಡಿಸಿದೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಅಥವಾ ಹಿನ್ನೆಲೆ ಯಶಸ್ಸಿಗೆ ಅಡ್ಡಿಯಾಗುವುದಿಲ್ಲ. ಪೋಷಕರ ತ್ಯಾಗ, ನಿರಂತರ ಪರಿಶ್ರಮ, ಉತ್ತಮ ಶಿಕ್ಷಣ ಮತ್ತು ಸರಿಯಾದ ಮಾರ್ಗದರ್ಶನ ಇದ್ದರೆ ಜಾಗತಿಕ ಮಟ್ಟದ ಅವಕಾಶಗಳನ್ನು ಸಾಧಿಸಬಹುದು. ಪ್ರಸ್ತುತ ಅಖಿಲೇಶ್ ಅವರ ಈ ಸಾಧನೆಗೆ ಕುಟುಂಬ ಸದಸ್ಯರು, ಗ್ರಾಮಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸುತ್ತಿದ್ದು, ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಶಹಜಹಾನ್‌ಪುರದಲ್ಲಿ ಕನ್ವರ್ ಯಾತ್ರೆಗಾಗಿ 1,300 ಪೊಲೀಸರ ನಿಯೋಜನೆ, ಮಾಂಸದಂಗಡಿ ಬಂದ್ – Kannada News | 1300 police deployed for Kanwar Yatra 2026 in Shahjahanpur

ಶಹಜಹಾನ್‌ಪುರ, ಜುಲೈ 28: ಉತ್ತರ ಪ್ರದೇಶದ (Uttar Pradesh) ಶಹಜಹಾನ್‌ಪುರದಲ್ಲಿ ಕನ್ವರ್ ಯಾತ್ರೆಯನ್ನು (Kanwar Yatra) ಸುಸೂತ್ರವಾಗಿ ನಡೆಸಲು ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿವಲಿಂಗಕ್ಕೆ ಜಲಾಭಿಷೇಕ ಮಾಡಲು ಗೋಲಾ ಗೋಕರ್ಣನಾಥಕ್ಕೆ ತೆರಳುವ ಮುನ್ನ ಭಕ್ತರು ಪಾಂಚಾಲ ಘಾಟ್‌ನಿಂದ ಗಂಗಾಜಲವನ್ನು ಸಂಗ್ರಹಿಸುತ್ತಾರೆ. ಭಕ್ತಾದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಮಾರ್ಗದಲ್ಲಿ 1,100 ಕಾನ್ಸ್‌ಟೇಬಲ್‌ಗಳು, 210 ಸಬ್-ಇನ್ಸ್‌ಪೆಕ್ಟರ್‌ಗಳು, 17 ಇನ್ಸ್‌ಪೆಕ್ಟರ್‌ಗಳು, 7 ಸರ್ಕಲ್ ಆಫೀಸರ್‌ಗಳು ಮತ್ತು 44 ಮೋಟಾರ್ ಸೈಕಲ್ ಗಸ್ತು ಪಡೆಗಳನ್ನು ನಿಯೋಜಿಸಲಾಗಿದೆ.

ಈ ಬಗ್ಗೆ ಪಿಟಿಐ ವರದಿ ಮಾಡಿದ್ದು, “ಶಹಜಹಾನ್‌ಪುರದಲ್ಲಿ ಕನ್ವರ್ ಮಾರ್ಗವು ಸುಮಾರು 90 ಕಿ.ಮೀನಷ್ಟು ವ್ಯಾಪಿಸಿದೆ. ಈ ಹಾದಿಯುದ್ದಕ್ಕೂ ಸುಮಾರು 100 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅವುಗಳನ್ನು ಜಿಲ್ಲಾ ಕೇಂದ್ರ ಮತ್ತು ಬರೇಲಿ ವಿಭಾಗೀಯ ನಿಯಂತ್ರಣ ಕೊಠಡಿಗಳಿಗೆ ಸಂಪರ್ಕಿಸಲಾಗಿದೆ. ಇದಲ್ಲದೆ, ಮಾರ್ಗದುದ್ದಕ್ಕೂ 500 ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಚಾರ್ ಧಾಮ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತ

ಪೊಲೀಸ್ ಠಾಣೆ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗಿದ್ದು, ಯಾತ್ರಾರ್ಥಿಗಳಿಗೆ ನೆರವಾಗಲು ಮತ್ತು ಪೊಲೀಸರೊಂದಿಗೆ ಸಮನ್ವಯ ಸಾಧಿಸಲು ಮಾರ್ಗ ಮಧ್ಯದ ಗ್ರಾಮಗಳಲ್ಲಿ 120ಕ್ಕೂ ಹೆಚ್ಚು ಸುರಕ್ಷತಾ ಸಮಿತಿಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ವರ್ ಯಾತ್ರೆಯ ಸಮಯದಲ್ಲಿ ಮಾರ್ಗದಲ್ಲಿರುವ ಡಾಬಾಗಳು ಮತ್ತು ಹೋಟೆಲ್‌ಗಳಲ್ಲಿ ಆಹಾರ ತಯಾರಿಕೆ ವೇಳೆ ಬೆಳ್ಳುಳ್ಳಿ ಮತ್ತು ಈರುಳ್ಳಿ ಬಳಸದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ. ಯಾತ್ರಾ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಾಂಸದ ಅಂಗಡಿಗಳು ಮುಚ್ಚಲ್ಪಡುತ್ತವೆ.

ಇದನ್ನೂ ಓದಿ: Amarnath Yatra: ಆರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಚಾರ ಮುಕ್ತ

ತೀರ್ಥಯಾತ್ರೆಯ ಮಾರ್ಗದಲ್ಲಿ ವ್ಯಾಪಕವಾದ ಸ್ವಚ್ಛತೆ, ನಿಯಮಿತ ನೈರ್ಮಲ್ಯ ಮತ್ತು ಸಾಕಷ್ಟು ಕುಡಿಯುವ ನೀರನ್ನು ಒದಗಿಸಲಾಗುವುದು. ಯಾತ್ರಿಕರ ಅನುಕೂಲಕ್ಕಾಗಿ ಪ್ರಮುಖ ಸ್ಥಳಗಳಲ್ಲಿ ಪ್ರತಿ 7ರಿಂದ 8 ಕಿಲೋಮೀಟರ್‌ಗಳಿಗೆ ರಾತ್ರಿ ಆಶ್ರಯಗಳು, ಶೌಚಾಲಯಗಳು, ಸ್ನಾನಗೃಹಗಳು ಮತ್ತು ಬಟ್ಟೆ ಬದಲಾಯಿಸುವ ಕೊಠಡಿಗಳಿಗೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮೀಸಲಾತಿ ಕುರಿತು ಶಿಲ್ಪಾ ಶೆಟ್ಟಿ ನಕಲಿ ಹೇಳಿಕೆ ವೈರಲ್: ‘ಸಂಪೂರ್ಣ ಸುಳ್ಳು’ ಎಂದು ಖಂಡಿಸಿದ ನಟಿ – Kannada News | Shilpa Shetty Slams Fake Reservation Statement Viral Post Clarification

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ನಕಲಿ ಪೋಸ್ಟ್ ಹರಿದಾಡುತ್ತಿದೆ. ಅದನ್ನು ನೋಡಿದ ಅನೇಕರು ಶಿಲ್ಪಾ ಶೆಟ್ಟಿ ಅವರನ್ನು ಕಟುವಾಗಿ ಟೀಕಿಸಲು ಆರಂಭಿಸಿದ್ದಾರೆ. ವೈರಲ್ ಆಗಿರುವ ಪೋಸ್ಟ್​ನಲ್ಲಿ ಶಿಲ್ಪಾ ಶೆಟ್ಟಿ ಅವರು ಜಾತಿ ಆಧಾರಿತ ಮೀಸಲಾತಿ (Reservation) ಬಗ್ಗೆ ವಿರೋಧಿ ನಿಲುವು ಹೊಂದಿದ್ದಾರೆ ಎಂಬುದನ್ನು ಸೂಚಿಸಲಾಗಿದೆ. ಆದರೆ ಅದು ನಕಲಿ ಪೋಸ್ಟ್ ಆಗಿದ್ದು, ಅದರ ವಿರುದ್ಧ ಶಿಲ್ಪಾ ಶೆಟ್ಟಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಪಷ್ಟನೆ ನೀಡಿದ ಶಿಲ್ಪಾ ಶೆಟ್ಟಿ:

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರನ್ನು ಬಳಸಿ ಹರಿಬಿಡಲಾಗಿರುವ ಮೀಸಲಾತಿ ಕುರಿತಾದ ಹೇಳಿಕೆಗಳು ಸಂಪೂರ್ಣವಾಗಿ ಸುಳ್ಳು ಮತ್ತು ಕಲ್ಪಿತ ಎಂದು ಶಿಲ್ಪಾ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ‘ನನ್ನ ಹೆಸರಿನಲ್ಲಿ ಮೀಸಲಾತಿ ಕುರಿತು ಹರಿದಾಡುತ್ತಿರುವ ನಕಲಿ ಹೇಳಿಕೆಗಳನ್ನು ನೋಡಿ ಆಘಾತವಾಗಿದೆ. ಇದು ಸಂಪೂರ್ಣವಾಗಿ ಸುಳ್ಳು ಮತ್ತು ದುರುದ್ದೇಶಪೂರಿತ ಪೋಸ್ಟ್. ಇಂತಹ ಹುಸಿ ಸುದ್ದಿಗಳನ್ನು ಯಾರೂ ನಂಬಬೇಡಿ’ ಎಂದು ಮನವಿ ಮಾಡಿದ್ದಾರೆ.

ವೈರಲ್ ಪೋಸ್ಟ್‌ನಲ್ಲೇನಿತ್ತು?

ಕಳೆದ ಕೆಲವು ದಿನಗಳಿಂದ ಇನ್‌ಸ್ಟಾಗ್ರಾಮ್ ಸ್ಟೋರಿಯ ರೀತಿಯಲ್ಲಿದ್ದ ಸ್ಕ್ರೀನ್‌ಶಾಟ್‌ವೊಂದು ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿತ್ತು. ಅದರಲ್ಲಿ, ‘ಮೀಸಲಾತಿಯನ್ನು ಮುಟ್ಟಬೇಡಿ. ಸಾಮಾನ್ಯ ವರ್ಗದ ವೈದ್ಯರು ಸಾಮಾನ್ಯ ವರ್ಗದ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಿ. ಉಳಿದಂತೆ ಪ್ರತಿಯೊಬ್ಬರೂ ತಮ್ಮ ತಮ್ಮ ಜಾತಿಯ ರೋಗಿಗಳಿಗೆ ಚಿಕಿತ್ಸೆ ನೀಡಲಿ. ಹೀಗೆ ಕೆಲವು ವರ್ಷ ಮಾಡಿದರೆ, ಜನರೇ ಮೀಸಲಾತಿಯನ್ನು ರದ್ದುಗೊಳಿಸಲು ಆಗ್ರಹಿಸುತ್ತಾರೆ. ಮೀಸಲಾತಿಯಿಂದ ಕೌಶಲ್ಯ ಗಳಿಸಲು ಸಾಧ್ಯವಿಲ್ಲ’ ಎಂದು ಬರೆಯಲಾಗಿತ್ತು.

ಇದನ್ನೂ ಓದಿ: 50ನೇ ವಯಸ್ಸಿನಲ್ಲೂ ಶಿಲ್ಪಾ ಶೆಟ್ಟಿ ಫಿಟ್ನೆಸ್; ಇದರ ಹಿಂದಿದೆ ಶಿಸ್ತು, ನಿರಂತರ ಪರಿಶ್ರಮ

ಶಿಲ್ಪಾ ಶೆಟ್ಟಿ ಸಿನಿಮಾ, ಕಿರುತೆರೆ ಶೋ:

ವೃತ್ತಿಜೀವನದ ವಿಚಾರಕ್ಕೆ ಬಂದರೆ, ಶಿಲ್ಪಾ ಶೆಟ್ಟಿ ಇತ್ತೀಚೆಗೆ ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ: ದಿ ಡೆವಿಲ್’ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾದ ಮೂಲಕ ಅವರು ಹಲವು ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದರು. ನಿರೀಕ್ಷಿತ ಮಟ್ಟದಲ್ಲಿ ‘ಕೆಡಿ’ ಹಿಟ್ ಆಗಲಿಲ್ಲ. ಸದ್ಯಕ್ಕೆ ಶಿಲ್ಪಾ ಶೆಟ್ಟಿ ಅವರು ‘ಮಾ ಹೈ ನಾ’ ರಿಯಾಲಿಟಿ ಕುಕಿಂಗ್ ಶೋನಲ್ಲಿ ನಿರೂಪಕಿಯಾಗಿ ಸಕ್ರಿಯರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಪ್ರಧಾನಿ ಸರ್ ನೀವು ತಕ್ಷಣವೇ ಹಸ್ತಕ್ಷೇಪ ಮಾಡಿ’: ಮೇಕೆದಾಟು ಯೋಜನೆ ವಿರೋಧಿಸಿ ವಿಜಯ್ ಮೋದಿಗೆ ಪತ್ರ – Kannada News | Tamil Nadu CM Joseph Vijay Writes To PM Modi Opposing Karnataka Mekedatu Project

ಚೆನ್ನೈ ಜು .28: ಕರ್ನಾಟಕದ ಮೇಕೆದಾಟು ಅಣೆಕಟ್ಟು ಯೋಜನೆಗೆ (Mekedatu Dam Project) ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕೇಂದ್ರ ಸರ್ಕಾರದ ತಕ್ಷಣದ ಹಸ್ತಕ್ಷೇಪಕ್ಕೆ ಆಗ್ರಹಿಸಿದ್ದಾರೆ. ನೆನ್ನೆ ಅಂದರೆ ಜು.27ರಂದು ದೆಹಲಿ ಮುಂಗಾರು ಅಧಿವೇಶದ ವೇಳೆ ಸಂಸತ್ತಿನಲ್ಲಿ ತಮಿಳುನಾಡಿನ ಸಂಸದ ಡಾ. ಅನ್ಬುಮಣಿ ರಾಮದಾಸ್ ಅವರು ಈ ಬಗ್ಗೆ ಕೇಳಿದ ಪ್ರಶ್ನೆಗೆ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಲಿಖಿತ ಉತ್ತರ ನೀಡಿದ್ದು, ಗಡಿಯೊಳಗೆ ನೀರು ಬಳಕೆಗೆ ಕರ್ನಾಟಕಕ್ಕೆ ಪೂರ್ಣ ಅಧಿಕಾರ ಇದೆ. ಸುಪ್ರೀಂಕೋರ್ಟ್​​​​ ತೀರ್ಪಿನಲ್ಲಿ ಎಲ್ಲೂ ಒಪ್ಪಿಗೆ ಪಡೆಯಲು ಹೇಳಿಲ್ಲ ಎಂದು ಹೇಳಿದ್ದಾರೆ. ಮೇಕೆದಾಟು ಯೋಜನೆಗೆ ಕರ್ನಾಟಕವು ತಮಿಳುನಾಡು, ಕೇರಳ ಹಾಗೂ ಪುದುಚೇರಿಯಂತಹ ನೆರೆ ರಾಜ್ಯಗಳ ಪ್ರತ್ಯೇಕ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇದೀಗ ಈ ಬಗ್ಗೆ ಅಸಮಾಧನಗೊಂಡಿರುವ ವಿಜಯ್​​​​, ಈ ಬಗ್ಗೆ ತಕ್ಷಣವೇ ಪ್ರಧಾನಿ ಮೋದಿ ಅವರು ಹಸ್ತಕ್ಷೇಪ ಮಾಡಬೇಕು ಎಂದು ಹೇಳಿದ್ದಾರೆ. ಯೋಜನೆಯಿಂದ ಕೆಳಭಾಗದ ರಾಜ್ಯದ ಹಕ್ಕುಗಳಿಗೆ ಧಕ್ಕೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಧಾನಿಗೆ ಬರೆದ ಪತ್ರದಲ್ಲೇನಿದೆ?

“ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕೆಳಭಾಗದ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ” ಎಂಬ ಕೇಂದ್ರ ಜಲಶಕ್ತಿ ಸಚಿವಾಲಯದ ಹೇಳಿಕೆಯನ್ನು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಕಟುವಾಗಿ ಖಂಡಿಸಿದ್ದಾರೆ. ಆಲಮಟ್ಟಿ ಪ್ರಕರಣದಲ್ಲಿ ಉನ್ನತ ನ್ಯಾಯಾಲಯ ನೀಡಿದ್ದ ತೀರ್ಪನ್ನು ಉಲ್ಲೇಖಿಸಿರುವ ಅವರು, ಕೆಳಭಾಗದ ರಾಜ್ಯಗಳ (Lower Riparian States) ಸ್ಪಷ್ಟ ಸಮ್ಮತಿ ಇಲ್ಲದೆ ಯಾವುದೇ ಮೇಲ್ಭಾಗದ ರಾಜ್ಯವು ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳುವಂತಿಲ್ಲ ಎಂದು ವಾದಿಸಿದ್ದಾರೆ. ಕರ್ನಾಟಕದ ಈ ಪ್ರಸ್ತಾವನೆಯು ಕಾವೇರಿ ನೀರು ವಿವಾದ ನ್ಯಾಯಾಧಿಕರಣದ (CWDT) ಅಂತಿಮ ಆದೇಶ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ.

ಕಾವೇರಿ ತೀರ್ಪಿನ ನಿಯಮ 11 ಮತ್ತು 20ರ ಅಡಿಯಲ್ಲಿ ನದಿ ಜಲಾನಯನ ಪ್ರದೇಶದ ಸಹ-ರಾಜ್ಯಗಳ ಪರಸ್ಪರ ಸಮ್ಮತಿ ಕಡ್ಡಾಯವಾಗಿದೆ. ಮೇಕೆದಾಟು ಯೋಜನೆಯನ್ನು ಕೇವಲ ಒಂದು ಇಂಜಿನಿಯರಿಂಗ್ ಅಥವಾ ಕುಡಿಯುವ ನೀರಿನ ಯೋಜನೆಯಾಗಿ ನೋಡಬಾರದು. ಇದು ಲಕ್ಷಾಂತರ ರೈತರ ಜೀವನಾಧಾರವಾಗಿರುವ ಕಾವೇರಿ ಜಲ ಹಂಚಿಕೆಯ ಸೂಕ್ಷ್ಮ ವಿಷಯವಾಗಿದೆ.

2019ರಲ್ಲಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ವಿಸ್ತೃತ ಯೋಜನಾ ವರದಿಯನ್ನು (DPR) ಕೇಂದ್ರ ಜಲ ಆಯೋಗವು ನಿಯಮಗಳಿಗೆ ಬದ್ಧವಾಗಿರದ ಕಾರಣ ಪರಿಶೀಲನೆಗೆ ವಾಪಸ್ ಕಳುಹಿಸಿದ್ದನ್ನು ತಮಿಳುನಾಡು ಸಿಎಂ ಪತ್ರದಲ್ಲಿ ನೆನಪಿಸಿದ್ದಾರೆ. ಜೊತೆಗೆ, ಪಂಬಾರ್ ಜಲವಿದ್ಯುತ್ ಯೋಜನೆಯ ಹಳೆಯ ತೀರ್ಪಿನ ಉದಾಹರಣೆಯನ್ನು ನೀಡಿದ್ದು, ಯಾವುದೇ ಏಕಪಕ್ಷೀಯ ನಿರ್ಧಾರದಿಂದ ತಮಿಳುನಾಡಿನ ಕೃಷಿ ಹಾಗೂ ನೀರಾವರಿ ವ್ಯವಸ್ಥೆಗೆ ಭಾರಿ ಧಕ್ಕೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ತಮಿಳುನಾಡಿನ ಒಪ್ಪಿಗೆ ಅಗತ್ಯವಿಲ್ಲ ಎಂದ ಕೇಂದ್ರ ಜಲಶಕ್ತಿ ಸಚಿವಾಲಯ

ಮೇಕೆದಾಟು ಡಿಪಿಆರ್ ತಿರಸ್ಕರಿಸಲು ಆಗ್ರಹ:

ಕಾವೇರಿ ನ್ಯಾಯಾಧಿಕರಣದ ಆದೇಶ ಹಾಗೂ ಸುಪ್ರೀಂ ಕೋರ್ಟ್‌ ತೀರ್ಪಿಗೆ ಬದ್ಧವಾಗಿ ಕೆಳಪಾತ್ರದ ರಾಜ್ಯವಾದ ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸಬೇಕು ಎಂದು ಸಿಎಂ ವಿಜಯ್ ಒತ್ತಾಯಿಸಿದ್ದಾರೆ. ಕರ್ನಾಟಕ ಸಲ್ಲಿಸಿರುವ ಮೇಕೆದಾಟು ಯೋಜನೆಯ ಡಿಪಿಆರ್ ಪ್ರಸ್ತಾವನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡದಂತೆ ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ಸಿಡಬ್ಲ್ಯುಸಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅವರು ಪ್ರಧಾನಿ ಮೋದಿಯವರನ್ನು ವಿನಂತಿಸಿದ್ದಾರೆ.

ಸಂಸತ್ತಿನಲ್ಲಿ ಅನ್ಬುಮಣಿ ರಾಮದಾಸ್ ಕೇಳಿದ್ದೇನು?

ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ರೀತಿಯ ರಚನೆಯನ್ನು ನಿರ್ಮಿಸಲು ತಮಿಳುನಾಡು, ಕೇರಳ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳ ಒಪ್ಪಿಗೆಯನ್ನು ಪಡೆಯಬೇಕು ಎಂಬ ಕಾವೇರಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಫೆಬ್ರವರಿ 2018 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿದಿದೆಯೇ? ಪ್ರಸ್ತಾವಿತ ಮೇಕೆದಾಟು ಯೋಜನೆಗೆ ಕರ್ನಾಟಕ ಕೆಳಗಿನ ನದಿ ತೀರ್ಪಿನ ರಾಜ್ಯಗಳ ಒಪ್ಪಿಗೆಯನ್ನು ಪಡೆದಿದೆಯೇ? ಒಪ್ಪಿಗೆ ಪಡೆದಿದ್ದಲ್ಲಿ ಅದರ ವಿವರಗಳು, ಮತ್ತು ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆಯ ಪ್ರಸ್ತುತ ಸ್ಥಿತಿ ಏನು ಎಂದು ಪ್ರಶ್ನಿಸಿದ್ದರು.

ಇದಕ್ಕೆ ಕೇಂದ್ರದ ಉತ್ತರ ಏನು?

ಕಾವೇರಿ ನದಿಗೆ ಅಡ್ಡಲಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮೇಲ್ಭಾಗದ ರಾಜ್ಯವಾದ ಕರ್ನಾಟಕವು ಕೆಳಭಾಗದ ರಾಜ್ಯಗಳ ಅನುಮತಿ ಪಡೆಯುವುದು ಕಡ್ಡಾಯ ಎಂದು 2018ರ ಫೆಬ್ರವರಿ 16ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖವಾಗಿಲ್ಲ. 2007ರ ಕಾವೇರಿ ನೀರು ವಿವಾದ ನ್ಯಾಯಾಧಿಕರಣದ (CWDT) ತೀರ್ಪಿನ 18ನೇ ವಿಧಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದರ ಪ್ರಕಾರ, ನ್ಯಾಯಾಧಿಕರಣದ ಆದೇಶಕ್ಕೆ ಧಕ್ಕೆಯಾಗದಂತೆ ತಮ್ಮ ಗಡಿಭಾಗದ ವ್ಯಾಪ್ತಿಯಲ್ಲಿ ನೀರಿನ ಬಳಕೆ ಅಥವಾ ಸೌಲಭ್ಯವನ್ನು ನಿಯಂತ್ರಿಸುವ ಹಕ್ಕು ಆಯಾ ರಾಜ್ಯಗಳಿಗೆ ಇದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:00 pm, Tue, 28 July 26

Source link

ಟೀಮ್ ಇಂಡಿಯಾಗೆ ಕ್ಲೀನ್ ಸ್ವೀಪ್ ಗೆಲುವು ಅನಿವಾರ್ಯ! – Kannada News | IND vs SL: Clean Sweep Crucial for Team India

ಆಗಸ್ಟ್ 15 ರಿಂದ ಆರಂಭವಾಗಲಿರುವ ಶ್ರೀಲಂಕಾ ಪ್ರವಾಸದ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಟೀಮ್ ಇಂಡಿಯಾ ಪಾಲಿಗೆ ಕೇವಲ ಮತ್ತೊಂದು ದ್ವಿಪಕ್ಷೀಯ ಸರಣಿಯಲ್ಲ. ಇದು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ (WTC) ಫೈನಲ್ ಟಿಕೆಟ್ ನಿರ್ಧರಿಸುವ ಪ್ರಮುಖ ಕೊಂಡಿಯಾಗಿದೆ. ಹೀಗಾಗಿ, ಭಾರತ ತಂಡ ಈ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವುದು ಅನಿವಾರ್ಯವಾಗಿದೆ. ಇದಕ್ಕೆ ಪ್ರಮುಖ ಕಾರಣಗಳೇನು ಎಂಬುದರ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.

WTC ಅಂಕಪಟ್ಟಿ ಮತ್ತು PCT ಲೆಕ್ಕಾಚಾರ:

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯಲ್ಲಿ ಟೀಮ್ ಇಂಡಿಯಾ ಒಟ್ಟು 18 ಪಂದ್ಯಗಳನ್ನಾಡಬೇಕಿದೆ. ಇದರಲ್ಲಿ ಈಗಾಗಲೇ 9 ಮ್ಯಾಚ್​ಗಳನ್ನಾಡಿದೆ. ಇನ್ನುಳಿದಿರುವುದು 9 ಪಂದ್ಯಗಳು ಮಾತ್ರ. ಈ 9 ಪಂದ್ಯಗಳು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ.

ಏಕೆಂದರೆ ಪ್ರಸ್ತುತ WTC ಅಂಕ ಪಟ್ಟಿಯಲ್ಲಿ ಭಾರತ ತಂಡವು 5ನೇ ಸ್ಥಾನದಲ್ಲಿದೆ. ಈ ಐದನೇ ಸ್ಥಾನದಿಂದ ಟಾಪ್-2 ಗೆ ಪ್ರವೇಶಿಸಬೇಕಿದ್ದರೆ 9 ಮ್ಯಾಚ್​ಗಳಲ್ಲಿ 8 ಪಂದ್ಯಗಳಲ್ಲಿ ಗೆಲುವು ದಾಖಲಿಸಲೇಬೇಕು. ಇಲ್ಲಿ ಟೀಮ್ ಇಂಡಿಯಾದ ಎದುರಾಳಿಗಳು ಯಾರೆಂದರೆ…

  • ಶ್ರೀಲಂಕಾ ಪ್ರವಾಸ (ವಿದೇಶಿ ಸರಣಿ): 2 ಟೆಸ್ಟ್ ಪಂದ್ಯಗಳು.
  • ನ್ಯೂಝಿಲೆಂಡ್ ಪ್ರವಾಸ (ವಿದೇಶಿ ಸರಣಿ): 2 ಟೆಸ್ಟ್ ಪಂದ್ಯಗಳು.
  • ಆಸ್ಟ್ರೇಲಿಯಾ ವಿರುದ್ಧ (ತವರಿನ ಸರಣಿ): 5 ಟೆಸ್ಟ್ ಪಂದ್ಯಗಳು.

ಅಂದರೆ ಭಾರತ ತಂಡವು ಮುಂದಿನ 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದರೆ ನೇರವಾಗಿ ಫೈನಲ್​ಗೇರುವುದು ಖಚಿತ. ಒಂದು ವೇಳೆ 7 ಅಥವಾ 6 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಇತರೆ ತಂಡಗಳ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ.

ಬಲಿಷ್ಠ ಎದುರಾಳಿಗಳು:

ಭಾರತ ತಂಡದ ಮುಂದಿನ ಎದುರಾಳಿಗಳು ಶ್ರೀಲಂಕಾ, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ. ಇಲ್ಲಿ ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳಿಗೆ ಹೋಲಿಸಿದರೆ ಶ್ರೀಲಂಕಾ ತಂಡ ದುರ್ಬಲ ಎನ್ನಬಹುದು.

ಹೀಗಾಗಿ ಶ್ರೀಲಂಕಾ ವಿರುದ್ಧ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಫೈನಲ್ ಹಾದಿಯನ್ನು ಸುಗಮಗೊಳಿಸಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ.

ಒಂದು ವೇಳೆ ಭಾರತ 1-0 ಅಂತರದಿಂದ ಗೆದ್ದರೆ ಅಥವಾ ಸರಣಿ ಡ್ರಾವಾದರೆ, ಅಮೂಲ್ಯವಾದ PCT ಅಂಕಗಳನ್ನು ಕಳೆದುಕೊಳ್ಳಬೇಕಾಗುತ್ತದೆ.

ಇದರಿಂದಾಗಿ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ವಿರುದ್ಧದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಬಹುದು. ಇಲ್ಲಿ ಎರಡು ಬಲಿಷ್ಠ ದೇಶಗಳ ವಿರುದ್ಧ ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ 5 ಮ್ಯಾಚ್​ಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ.

ಆದ್ದರಿಂದ ಮುಂಬರುವ ಕಠಿಣ ಸವಾಸಲುಗಳನ್ನು ಎದುರಿಸುವ ಮುನ್ನ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆಯುವುದು ಟೀಮ್ ಇಂಡಿಯಾ ಮುಂದಿನ ದೊಡ್ಡ ಸವಾಲು.

ಇತ್ತ ಮೇಲ್ನೋಟಕ್ಕೆ ಭಾರತ ತಂಡ ಬಲಿಷ್ಠವಾಗಿ ಕಂಡರೂ, ಸಿಂಹಳೀಯರ ನಾಡಿನಲ್ಲಿ ಲಂಕಾ ಪಡೆಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಭಾರತ ಸತತ ಮೂರನೇ ಬಾರಿಗೆ WTC ಫೈನಲ್ ಗೇರಲು ಈ ಸರಣಿಯಲ್ಲಿ 2-0 ಕ್ಲೀನ್ ಸ್ವೀಪ್ ಸಾಧಿಸಲೇಬೇಕಾದ ಒತ್ತಡದಲ್ಲಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್​ಗೆ 14 ಆತಿಥ್ಯ ನಗರಗಳ ಪಟ್ಟಿ ರೆಡಿ!

ಶ್ರೀಲಂಕಾ ವಿರುದ್ಧದ ಈ ಸರಣಿಯ ಪ್ರದರ್ಶನ ಮತ್ತು ಫಲಿತಾಂಶ ಮುಂಬರುವ ಹೈ-ವೋಲ್ಟೇಜ್ ‘ಬಾರ್ಡರ್-ಗವಾಸ್ಕರ್’ ಸರಣಿಗೆ ದಿಕ್ಸೂಚಿಯಾಗುವುದಂತೂ ಖಚಿತ. ಹೀಗಾಗಿ ಟೀಮ್ ಇಂಡಿಯಾ ಲಂಕಾ ಪಡೆಯ ಸವಾಲನ್ನು ಹೇಗೆ ಎದುರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

Source link

Japan Earthquake: ಜಪಾನ್‌ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ, ಕಟ್ಟಡಗಳು ನೆಲಸಮ – Kannada News | Japan Earthquake: 7.1 Magnitude Hits Kumamoto, Tsunami Warning Issued

ಟೋಕಿಯೋ, ಜುಲೈ 28: ಜಪಾನ್‌ನ ದಕ್ಷಿಣ ಮುಖ್ಯ ದ್ವೀಪವಾದ ಕ್ಯುಶುವಿನ ಕುಮಾಮೊಟೊ ಪ್ರಾಂತ್ಯದಲ್ಲಿ ಮಂಗಳವಾರ 7.1 ತೀವ್ರತೆಯ ಪ್ರಬಲ ಭೂಕಂಪ(Earthquake) ಸಂಭವಿಸಿದೆ. ಭೂಕಂಪದ ತೀವ್ರತೆಗೆ ಹಲವು ಕಟ್ಟಡಗಳು ಕುಸಿದು ಬಿದ್ದಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಜಪಾನ್ ಪ್ರಧಾನಿ ಸನೇ ತಕೈಚಿ ಸ್ಪಷ್ಟಪಡಿಸಿದ್ದಾರೆ.

ಭೂಕಂಪದ ಕೇಂದ್ರಬಿಂದು ಸಮುದ್ರ ಮಟ್ಟದಿಂದ 10 ಕಿಲೋಮೀಟರ್ ಆಳದಲ್ಲಿದ್ದು, ಕರಾವಳಿ ತೀರದಲ್ಲಿ 1 ಮೀಟರ್ (3.28 ಅಡಿ) ಎತ್ತರದ ಸುನಾಮಿ ಅಲೆಗಳು ಏಳುವ ಸಾಧ್ಯತೆಯಿರುವುದರಿಂದ ಕರಾವಳಿ ನಿವಾಸಿಗಳಿಗೆ ಎತ್ತರದ ಪ್ರದೇಶಗಳಿಗೆ ತೆರಳಲು ಜಪಾನ್ ಹವಾಮಾನ ಸಂಸ್ಥೆ (JMA) ಸೂಚಿಸಿದೆ. ಜಪಾನ್ ಸರ್ಕಾರವು ಕ್ಯುಶು ದ್ವೀಪದ ಕುಮಾಮೊಟೊ, ನಾಗಸಾಕಿ, ಕಾಗೋಶಿಮಾ, ಫುಕುವೋಕಾ, ಸಾಗಾ, ಓಯಿಟಾ ಮತ್ತು ಮಿಯಾಜಾಕಿ ಪ್ರಾಂತ್ಯಗಳಿಗೆ ತುರ್ತು ಭೂಕಂಪದ ಎಚ್ಚರಿಕೆಯನ್ನು ನೀಡಿದೆ.

ಈ ಪ್ರಬಲ ಭೂಕಂಪನದ ನಂತರ ದೇಶದ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ಅಸಹಜತೆ ಕಂಡುಬಂದಿಲ್ಲ ಎಂದು ಜಪಾನ್ ಪರಮಾಣು ನಿಯಂತ್ರಣ ಪ್ರಾಧಿಕಾರ ಭರವಸೆ ನೀಡಿದೆ. ಆಸ್ತಿ-ಪಾಸ್ತಿ ಹಾನಿಯ ಸ್ಥಿತಿಗತಿಯನ್ನು ಪರಿಶೀಲಿಸಲು ಆದೇಶಿಸಿರುವ ಜಪಾನ್ ಪ್ರಧಾನಿ ಕಚೇರಿಯು, “ಮನುಷ್ಯರ ಜೀವ ಉಳಿಸುವುದೇ ನಮ್ಮ ಮೊದಲ ಆದ್ಯತೆ” ಎಂದು ಅಧಿಕಾರಿಗಳಿಗೆ ತುರ್ತು ಕಾರ್ಯಾಚರಣೆಗೆ ಸೂಚಿಸಿದೆ.

ಮತ್ತಷ್ಟು ಓದಿ: Peru Earthquake: ಪೆರುವಿನಲ್ಲಿ ಅವಳಿ ಭೂಕಂಪ: 6 ಮಂದಿ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ,ಐತಿಹಾಸಿಕ ಚರ್ಚ್ ನೆಲಸಮ

ಸರಣಿ ಭೂಕಂಪಗಳು: ಪೆಸಿಫಿಕ್ ಮಹಾಸಾಗರದ ಅತ್ಯಂತ ಅಪಾಯಕಾರಿ ‘ರಿಂಗ್ ಆಫ್ ಫೈರ್’ ವಲಯದಲ್ಲಿರುವ ಜಪಾನ್‌ನಲ್ಲಿ ಈ ವರ್ಷ ಸರಣಿ ಭೂಕಂಪಗಳು ದಾಖಲಾಗಿವೆ. ಇದೇ ವರ್ಷದ ಏಪ್ರಿಲ್ 20 ರಂದು 7.7 ತೀವ್ರತೆಯ ಭೂಕಂಪ ಸಂಭವಿಸಿತ್ತು ಹಾಗೂ ಜೂನ್ 25 ರಂದು ಉತ್ತರ ಜಪಾನ್‌ನಲ್ಲಿ 7.2 ತೀವ್ರತೆಯ ಕಂಪನ ದಾಖಲಾಗಿತ್ತು.

ವಿಶ್ವದಲ್ಲಿ ಸಂಭವಿಸುವ ಒಟ್ಟು ಭೂಕಂಪಗಳ ಪೈಕಿ ಸುಮಾರು ಶೇಕಡಾ 18 ರಷ್ಟು ಭೂಕಂಪಗಳು ಜಪಾನ್ ಒಂದರಲ್ಲೇ ಸಂಭವಿಸುತ್ತವೆ. ನಾಲ್ಕು ಪ್ರಮುಖ ಟೆಕ್ಟೋನಿಕ್ ಪ್ಲೇಟ್‌ಗಳ ಮೇಲೆ ಜಪಾನ್ ನೆಲೆಸಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ.

2011 ರ ಭೀಕರ ಸುನಾಮಿ ನೆನಪು: 2011 ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ 9.0 ತೀವ್ರತೆಯ ಭೀಕರ ಸಮುದ್ರದಾಳದ ಭೂಕಂಪ ಮತ್ತು ಸುನಾಮಿಯು ಫುಕುಶಿಮಾ ಪರಮಾಣು ಸ್ಥಾವರವನ್ನು ಧ್ವಂಸಗೊಳಿಸಿ, ಸುಮಾರು 18,500 ಕ್ಕೂ ಹೆಚ್ಚು ಜನರ ಸಾವು-ನೋವಿಗೆ ಕಾರಣವಾಗಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:01 pm, Tue, 28 July 26

Source link

Exit mobile version