ಅಲೋಪತಿ ಬಗ್ಗೆ ಅನುಷ್ಕಾ ಶರ್ಮಾ ಪೋಸ್ಟ್, ವೈದ್ಯರಿಂದ ತೀವ್ರ ಟೀಕೆ – Kannada News
ನಟಿ ಅನುಷ್ಕಾ ಶರ್ಮಾ (Anushka Sharma) ಸಿನಿಮಾಗಳಿಂದ ದೂರ ಉಳಿದಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಜವಾಬ್ದಾರಿಯನ್ನು ಸಹ ತಮ್ಮ ಸಹೋದರನಿಗೆ ವಹಿಸಿ, ಪತಿಯೊಟ್ಟಿಗೆ ಆರಾಮವಾಗಿ ಇಂಗ್ಲೆಂಡ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅನುಷ್ಕಾ ಶರ್ಮಾ, ಆಗೊಮ್ಮೆ ಈಗೊಮ್ಮೆ, ಆರೋಗ್ಯ, ಪಾಸಿಟಿವಿಟಿ, ಅಧ್ಯಾತ್ಮದ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆರೋಗ್ಯದ ಬಗ್ಗೆ ಅನುಷ್ಕಾ ಶರ್ಮಾ ಹಂಚಿಕೊಂಡಿದ್ದ ಪೋಸ್ಟ್ ಒಂದಕ್ಕೆ ವೈದ್ಯರುಗಳಿಂದ ತೀವ್ರ ಟೀಕೆ, ವಿಮರ್ಶೆ ವ್ಯಕ್ತವಾಗಿದೆ. ಅನುಷ್ಕಾ ಶರ್ಮಾ ಅವರು ಹೋಮಿಯೋಪತಿಯನ್ನು ಬೆಂಬಲಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು….