VHT ಟೂರ್ನಿಯಲ್ಲಿ ಕಣಕ್ಕಿಳಿದ ವಿರಾಟ್, ರೋಹಿತ್​ಗೆ ಸಿಗುವ ವೇತನ ಎಷ್ಟು ಗೊತ್ತಾ? – Kannada News | How Much Will Virat Kohli, KL Rahul And Rohit Sharma Earn Per Match In Vijay Hazare Trophy?

ಬರೋಬ್ಬರಿ 15 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ. ಅತ್ತ 7 ವರ್ಷಗಳ ನಂತರ ರೋಹಿತ್ ಶರ್ಮಾ ಕೂಡ ದೇಶೀಯ ಅಂಗಳದಲ್ಲಿ ಏಕದಿನ ಪಂದ್ಯವಾಡಿದ್ದಾರೆ. ಇವರೊಂದಿಗೆ ರಿಷಭ್ ಪಂತ್, ಕೆಎಲ್ ರಾಹುಲ್, ಶುಭ್​ಮನ್ ಗಿಲ್ ಕೂಡ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಆಟಗಾರರು ಪ್ರತಿ ಪಂದ್ಯಕ್ಕೆ ವೇತನವನ್ನು ಸಹ ಪಡೆಯಲಿದ್ದಾರೆ.

ಅಂದರೆ ವಿಜಯ ಹಝಾರೆ ಟೂರ್ನಿಯಲ್ಲಿ ಪ್ರತಿ ಮ್ಯಾಚ್​ಗಳಿಗೆ ಇಂತಿಷ್ಟು ಸಂಭಾವನೆ ನಿಗದಿ ಮಾಡಲಾಗಿದೆ. ಅತ್ತ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ಲಕ್ಷಗಳ ರೂ.ನಲ್ಲಿ ವೇತನ ಪಡೆಯುವ ಸ್ಟಾರ್ ಆಟಗಾರರು ದೇಶೀಯ ಅಂಗಳದಲ್ಲಿ ಸಾವಿರಗಳ ರೂಪದಲ್ಲಿ ಸಂಭಾವನೆ ಪಡೆಯಲಿದ್ದಾರೆ.

ವೇತನ ಎಷ್ಟು?

ವಿಜಯ ಹಝಾರೆ ಟೂರ್ನಿಯಲ್ಲಿ ಮೂರು ವಿಭಾಗಗಳಾಗಿ ವೇತನ ನೀಡಲಾಗುತ್ತದೆ. ಅಂದರೆ ಇಲ್ಲಿ ಅನುಭವಿ ಆಟಗಾರರಿಗೆ ಹೆಚ್ಚಿನ ವೇತನ, ಉಳಿದವರಿಗೆ ಕಡಿಮೆ ವೇತನ ನಿಗದಿ ಮಾಡಲಾಗಿದೆ.

  • 1 ರಿಂದ 20 ಪಂದ್ಯಗಳನ್ನಾಡಿದ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 40 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ.
  • 21 ರಿಂದ 40 ಮ್ಯಾಚ್​ಗಳನ್ನಾಡಿರುವ ಆಟಗಾರರು ಪ್ರತಿ ಪಂದ್ಯಕ್ಕೆ 50 ಸಾವಿರ ರೂ. ವೇತನ ಪಡೆಯಲಿದ್ದಾರೆ.
  • 41 ಕ್ಕಿಂತ ಹೆಚ್ಚಿನ ಪಂದ್ಯಗಳನ್ನಾಡಿರುವ ಆಟಗಾರರಿಗೆ ಪ್ರತಿ ಮ್ಯಾಚ್​ಗೆ 60 ಸಾವಿರ ರೂ. ವೇತನ ಸಿಗಲಿದೆ.

ಇದನ್ನೂ ಓದಿ: ಕರ್ನಾಟಕ ತಂಡದ ವಿಶ್ವ ದಾಖಲೆಯ ಚೇಸಿಂಗ್

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವೇತನ ಎಷ್ಟು?

ವಿಜಯ ಹಝಾರೆ ಟೂರ್ನಿಯು ಲಿಸ್ಟ್ ಎ ಕ್ರಿಕೆಟ್ ಟೂರ್ನಿ. ಹೀಗಾಗಿ ಲಿಸ್ಟ್ ಎ ಪಂದ್ಯಗಳ ಅನುಭವವನ್ನು ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ 41 ಕ್ಕಿಂತ ಹೆಚ್ಚಿನ ಏಕದಿನ ಪಂದ್ಯಗಳನ್ನಾಡಿರುವ ಆಟಗಾರರು ಪ್ರತಿ ಮ್ಯಾಚ್​ಗೆ 60 ಸಾವಿರ ರೂ. ವೇತನ ಪಡೆಯಲಿದ್ದಾರೆ.

  • ವಿರಾಟ್ ಕೊಹ್ಲಿ ಲಿಸ್ಟ್​ ಎ ಕ್ರಿಕೆಟ್​ನಲ್ಲಿ 343 ಪಂದ್ಯಗಳನ್ನಾಡಿದ್ದಾರೆ. ಹೀಗಾಗಿ ಅವರು ವಿಜಯ ಹಝಾರೆ ಟೂರ್ನಿಯ ಒಂದು ಪಂದ್ಯಕ್ಕೆ 60 ಸಾವಿರ ರೂ, ವೇತನ ಪಡೆಯಲಿದ್ದಾರೆ.
  • ರೋಹಿತ್ ಶರ್ಮಾ ಲಿಸ್ಟ್ ಎ ಕ್ರಿಕೆಟ್​ನಲ್ಲಿ 351 ಮ್ಯಾಚ್​ಗಳನ್ನಾಡಿರುವ ಕಾರಣ ಅವರಿಗೂ ವಿಜಯ ಹಝಾರೆ ಟೂರ್ನಿಯ ಪ್ರತಿ ಪಂದ್ಯಕ್ಕೆ 60 ಸಾವಿರ ರೂ. ನೀಡಲಾಗುತ್ತದೆ.
  • ಕೆಎಲ್ ರಾಹುಲ್ ಲಿಸ್ಟ್ ಎ ಕ್ರಿಕೆಟ್​ನಲ್ಲಿ 143 ಪಂದ್ಯಗಳನ್ನಾಡಿದ್ದಾರೆ. ಹೀಗಾಗಿ ಅವರು ಸಹ ಒಂದು ಮ್ಯಾಚ್​ಗೆ 60 ಸಾವಿರ ರೂ. ವೇತನ ಪಡೆಯಲಿದ್ದಾರೆ.
  • ಶುಭ್​ಮನ್ ಗಿಲ್ ಈವರೆಗೆ 69 ಲಿಸ್ಟ್ ಎ ಕ್ರಿಕೆಟ್​ನಲ್ಲಿ 69 ಪಂದ್ಯಗಳನ್ನಾಡಿದ್ದು, ಅದರಂತೆ ಪ್ರತಿ ಪಂದ್ಯಕ್ಕೆ 60 ಸಾವಿರ ರೂ. ವೇತನ ಗಿಟ್ಟಿಸಿಕೊಳ್ಳಲಿದ್ದಾರೆ.
  • ರಿಷಭ್ ಪಂತ್ 68 ಲಿಸ್ಟ್ ಎ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಅವರು ಸಹ ಪ್ರತಿ ಮ್ಯಾಚ್​ಗೆ 60 ಸಾವಿರ ರೂ. ವೇತನ ಪಡೆಯಲಿದ್ದಾರೆ.

Source link

‘ಮಾರ್ಕ್’; ‘45’ ಅಬ್ಬರದಲ್ಲಿ ‘ಡೆವಿಲ್​​’ಗೆ ಸಿಕ್ಕ ಚಿತ್ರಮಂದಿರಗಳು ಇಷ್ಟೇನಾ? – Kannada News | Devil Movie Screens Shrink: Mark and 45 Impact Kannada Film Collections

‘ದಿ ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ಅಬ್ಬರದಲ್ಲಿ ರಿಲೀಸ್ ಆಯಿತು. ಸಿನಿಮಾ ರಿಲೀಸ್ ಆಗಿ ಎರಡು ವಾರ ಕಳೆದಿದೆ. ಇಷ್ಟು ದಿನ ಸಿನಿಮಾಗೆ ಕನ್ನಡದಲ್ಲಿ ದೊಡ್ಡ ಸ್ಪರ್ಧೆ ಇರಲಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾಗಿ ಹೋಗಿದೆ. ಚಿತ್ರಕ್ಕೆ ಕನ್ನಡ ಚಿತ್ರಗಳಿಂದಲೇ ಸ್ಪರ್ಧೆ ಏರ್ಪಡುತ್ತಾ ಇವೆ. ಕನ್ನಡದಲ್ಲಿ ಇಂದು (ಡಿಸೆಂಬರ್ 25) ‘ಮಾರ್ಕ್’ (Mark Movie) ಹಾಗೂ ‘45’ ಸಿನಿಮಗಳು ರಿಲೀಸ್ ಆಗಿವೆ. ಇದರಿಂದ ‘ಡೆವಿಲ್’ ಚಿತ್ರಕ್ಕೆ ಸಾಕಷ್ಟು ಹಿನ್ನಡೆ ಉಂಟಾಗಿದೆ. ನೂರಾರು ಶೋಗಳನ್ನು ಈ ಚಿತ್ರಕ್ಕೆ ನೀಡಲಾಗಿತ್ತು. ಈಗ ಅದು ಗಣನೀಯವಾಗಿ ಇಳಿಕೆ ಕಂಡಿದೆ.

ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ಇನ್ನು, ‘45’ ಸಿನಿಮಾ ಕೂಡ ನಿರೀಕ್ಷೆ ಮೂಡಿಸಿದೆ. ಈ ಚಿತ್ರ ಸಾವು ಹಾಗೂ ಬದುಕಿನ ಕಥೆಯನ್ನು ಹೇಳಲಿದೆ. ಈ ಚಿತ್ರದಲ್ಲಿ ಉಪೇಂದ್ರ, ರಾಜ್ ಬಿ ಶೆಟ್ಟಿ ಹಾಗೂ ಶಿವಣ್ಣ ನಟಿಸಿದ್ದಾರೆ.

ಈ ಎರಡೂ ಚಿತ್ರಗಳ ಅಬ್ಬರದಿಂದ ‘ಡೆವಿಲ್’ ಚಿತ್ರಕ್ಕೆ ದೊಡ್ಡ ಹೊಡೆತ ಉಂಟಾಗಿದೆ. ಈ ಸಿನಿಮಾಗೆ ಸಿಕ್ಕ ಶೋಗಳ ಸಂಖ್ಯೆ ಕಡಿಮೆ ಆಗಿದೆ. ಈ ಸಿನಿಮಾಗೆ ಬೆಂಗಳೂರಿನಲ್ಲಿ ಸಿಕ್ಕಿರುವುದು ಕೇವಲ 28 ಶೋಗಳು. ಶೋಗಳ ಸಂಖ್ಯೆಯಲ್ಲಿ ಕುಸಿತ ಕಂಡಿರುವುದರಿಂದ ಸಿನಿಮಾ ಕಲೆಕ್ಷನ್ ಕೂಡ ತೀವ್ರ ಗತಿಯಲ್ಲಿ ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಚಿತ್ರ 20-30 ಲಕ್ಷ ರೂಪಾಯಿ ಗಳಿಕೆ ಮಾಡುತ್ತಿದೆ. ಈಗ ಶೋ ಇಳಿಕೆ ಹಿನ್ನೆಲೆಯಲ್ಲಿ ಸಿನಿಮಾಗೆ ತೊಂದರೆ ಉಂಟಾಗಿದೆ.

ಇದನ್ನೂ ಓದಿ: ಈ ವಾರ ಅಖಾಡಕ್ಕೆ ‘ಮಾರ್ಕ್’, ‘45’: ಇನ್ನೂ ಕಡಿಮೆ ಆಗುತ್ತಾ ‘ದಿ ಡೆವಿಲ್’ ಕಲೆಕ್ಷನ್?

ಬಹುತೇಕ ಚಿತ್ರಮಂದಿರಗಳಿಂದ ‘ಡೆವಿಲ್’ ಸಿನಿಮಾವನ್ನು ತೆಗೆಯಲಾಗಿದೆ. ಸದ್ಯ ಮಾಗಡಿ ರಸ್ತೆಯಲ್ಲಿರುವ ವಿರೇಶ್ ಚಿತ್ರಮಂದಿರ ಹಾಗೂ ಬೆಂಗಳೂರಿನ ಗಾಂಧಿನಗರದಲ್ಲಿರುವ ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ ನಾಲ್ಕು ಆಟಗಳನ್ನು ನೀಡಲಾಗಿದೆ. ಉಳಿದಂತೆ ಮಲ್ಟಿಪ್ಲೆಕ್ಸ್​​ಗಳಲ್ಲಿ ದಿನಕ್ಕೆ ಒಂದು ಅಥವಾ ಎರಡು ಆಟ ನೀಡಲಾಗಿದೆ.ಇದರ ಮಧ್ಯೆಯೂ ಕೆಲವು ಕಡೆಗಳಲ್ಲಿ ಸಿನಿಮಾ ಹೌಸ್​​ಫುಲ್ ಆಗುವ ಲಕ್ಷಣ ಕಾಣಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಗ್ ಬಾಸ್ ಮನೆಗೆ ಬಂತು ಗಿಲ್ಲಿ ಕುಟುಂಬ; ಮಾಡಿದ ಕಂಪ್ಲೇಂಟ್ ಏನು? – Kannada News | Gilli Nata Family Enters to Bigg Boss House Here is what Gilli Mother Complaint

ಬಿಗ್ ಬಾಸ್ ಮನೆಯಲ್ಲಿ ಇಂದಿನ ಎಪಿಸೋಡ್​​ನಲ್ಲಿ ಗಿಲ್ಲಿ ಕುಟುಂಬದವರು ಆಗಮಿಸಿದ್ದಾರೆ. ಅಪ್ಪ-ಅಮ್ಮ ಇಬ್ಬರೂ ಗಿಲ್ಲಿಯನ್ನು ನೋಡಿ ಖಷಿಪಟ್ಟಿದ್ದಾರೆ. ಕೂದಲಿಗೆ ಬಣ್ಣ ಹಾಕಿ ಬರಬೇಕಿತ್ತು ಎಂದು ಗಿಲ್ಲಿ ಅವರು ತಮ್ಮ ತಾಯಿ ಬಳಿ ದೂರಿದರು. ಆಗ ತಾಯಿ, ‘ನೀನೇಕೆ ಕೂದಲನ್ನು ಹೀಗೇ ಬಾಚಿಕೊಳ್ಳದೆ ಇಟ್ಟುಕೊಂಡಿರುವೆ’ ಎಂದು ಪ್ರಶ್ನೆ ಮಾಡಿದರು. ಆ ಬಳಿಕ ಗಿಲ್ಲಿ ತಲೆಗೆ ಎಣ್ಣೆ ಹಾಕಿ ಸ್ನಾನ ಕೂಡ ಮಾಡಿಸಲಾಯಿತು. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Mark Movie First Half Review: ಇಂಟರ್​ವಲ್ ತನಕ ಎಷ್ಟು ಥ್ರಿಲ್ಲಿಂಗ್ ಆಗಿದೆ ‘ಮಾರ್ಕ್’ ಸಿನಿಮಾ? ಫಸ್ಟ್ ಹಾಫ್ ವಿಮರ್ಶೆ ನೋಡಿ – Kannada News | Mark Movie First Half Review Kichcha Sudeep breaks the norm, high action for fans

‘ಮ್ಯಾಕ್ಸ್’ ಯಶಸ್ಸಿನ ಬಳಿಕ ಕಿಚ್ಚ ಸುದೀಪ್ (Kichcha Sudeep) ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ‘ಮಾರ್ಕ್’ ಸಿನಿಮಾ (Mark Movie) ಮಾಡಿದ್ದಾರೆ. ಈ ಕಾಂಬಿನೇಷನ್ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಇಂದು (ಡಿಸೆಂಬರ್ 25) ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ. ಮುಂಜಾನೆಯೇ ಫಸ್ಟ್ ಶೋ ಆರಂಭ ಆಗಿದೆ. ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಿ ಸಂಭ್ರಮಿಸುತ್ತಿದ್ದಾರೆ. ಬಹುಭಾಷೆಯ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮಾಸ್ ಅವತಾರದಲ್ಲಿ ಕಿಚ್ಚ ಸುದೀಪ್ ಅವರು ಮನರಂಜನೆ ನೀಡಿದ್ದಾರೆ. ಸುದೀಪ್ ಜೊತೆ ಯೋಗಿ ಬಾಬು, ಶೈನ್ ಟಾಮ್ ಚಾಕೋ, ಪ್ರತಾಪ್, ಅರ್ಚನಾ ಕೊಟ್ಟಿಗೆ, ರೋಶಿನಿ ಪ್ರಕಾಶ್ ಮುಂತಾದವರು ನಟಿಸಿರುವ ‘ಮಾರ್ಕ್’ ಸಿನಿಮಾದ ಫಸ್ಟ್ ಹಾಫ್ ವಿಮರ್ಶೆ (Mark Movie First Half Review) ಇಲ್ಲಿದೆ..

  1. ಕ್ರೈಮ್ ಥ್ರಿಲ್ಲರ್ ಕಥಾಹಂದರ ‘ಮಾರ್ಕ್’ ಸಿನಿಮಾದಲ್ಲಿ ಇದೆ. ಚಿತ್ರದ ಆರಂಭದಲ್ಲೇ ವಿಲನ್ ಡ್ರ್ಯಾಗನ್ ಮಂಜು ಅವರು ಅಬ್ಬರಿಸಿದ್ದಾರೆ.
  2. ‘ದಾದಾ ಯಾರ್ ಗೊತ್ತಾ’ ಹಾಡು ಸಿನಿಮಾದ ಶುರುವಿನಲ್ಲೇ ಇದೆ. ಈ ಸಾಂಗ್ ಮೂಲಕವೇ ಕಿಚ್ಚ ಸುದೀಪ್ ಅವರು ಮಾಸ್ ಎಂಟ್ರಿ ನೀಡುತ್ತಾರೆ.
  3. ಆ್ಯಕ್ಷನ್ ಇಷ್ಟ ಪಡುವವರಿಗೆ ಮಾರ್ಕ್ ಸಿನಿಮಾದ ಆರಂಭದಲ್ಲೇ ಮನರಂಜನೆ ಇದೆ. ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ.
  4. ಡ್ರಗ್ಸ್ ಮಾಫಿಯಾ, ಮಕ್ಕಳ ಅಪಹರಣ, ರಾಜಕೀಯ, ಫ್ಯಾಮಿಲಿ ಸೆಂಟಿಮೆಂಟ್ ಕೂಡ ಮಾರ್ಕ್ ಸಿನಿಮಾದ ಫಸ್ಟ್ ‌ಹಾಫ್‌ನಲ್ಲಿ ಇದೆ.
  5. ಬಿಡುಗಡೆಗೂ ಮುನ್ನ ವೈರಲ್ ಆದ ‘ಮಸ್ತ್ ಮಲೈಕಾ..’ ಹಾಡು ಸಹ ಈ ಸಿನಿಮಾದ ಮೊದಲಾರ್ಧದಲ್ಲೇ ಇದೆ. ನಿಶ್ವಿಕಾ ನಾಯ್ಡು, ಸುದೀಪ್‌ ಡ್ಯಾನ್ಸ್ ಸೂಪರ್.
  6. ನವೀನ್ ಚಂದ್ರ, ವಿಕ್ರಾಂತ್, ಶೈನ್ ಟಾಮ್ ಚಾಕೋ, ಯೋಗಿ ಬಾಬು, ಗುರು ಸೋಮಸುಂದರಂ ಸೇರಿದಂತೆ ಹಲವರು ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
  7. ಇಂಟರ್‌ವಲ್‌ಗಿಂತ ಮುನ್ನ ಬರುವ ಫೈಟಿಂಗ್ ಸೀನ್ ಅಭಿಮಾನಿಗಳಿಗೆ ಇಷ್ಟ ಆಗುತ್ತದೆ. ಮೊದಲಾರ್ಧದಲ್ಲಿ ಒಟ್ಟು ಮೂರು ಆ್ಯಕ್ಷನ್ ದೃಶ್ಯಗಳಿವೆ.
  8. ಬಹುತೇಕ ‘ಮ್ಯಾಕ್ಸ್’ ಸಿನಿಮಾದ ರೀತಿಯೇ ‘ಮಾರ್ಕ್’ ಚಿತ್ರ ಮೂಡಿಬಂದಿದೆ. ಕೆಲವೇ ಗಂಟೆಗಳಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
  9. ಯಾವುದೇ ವಿಳಂಬ ಇಲ್ಲದೇ ಪಟಪಟನೇ ಕಥೆ ಸಾಗುತ್ತದೆ. ಮುಂದೇನು ಎಂಬ ಕುತೂಹಲ ಈ ಸಿನಿಮಾದ ಪ್ರತಿ ದೃಶ್ಯದಲ್ಲೂ ಮೂಡುತ್ತದೆ.
  10. ಸೆಕೆಂಡ್ ಹಾಫ್ ಮೇಲೆ ನಿರೀಕ್ಷೆ ಮೂಡುವ ರೀತಿಯಲ್ಲಿ ಇಂಟರ್‌ವಲ್ ಎದುರಾಗುತ್ತದೆ. ಸಾಕಷ್ಟು ಟ್ವಿಸ್ಟ್ ಕೂಡ ಮಾರ್ಕ್ ಸಿನಿಮಾದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:20 am, Thu, 25 December 25

Source link

Bengaluru Air Quality Alert: ಬಳ್ಳಾರಿ ಜನರಿಗೆ ಹೈ ಅಲರ್ಟ್​​​ ನೀಡಿದ ತಜ್ಞರು, ರಾಜ್ಯದಲ್ಲಿ ಗಾಳಿಯ ಮಟ್ಟ ಕಳಪೆ – Kannada News | Poor Air in Bengaluru: High AQI, Health Risks & Precautions for Cold

ಬೆಂಗಳೂರು, ಡಿ.25: ಇಂದು ಬೆಂಗಳೂರು (Bengaluru air quality) ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿದೆ ಎಂದು ಹೇಳಲಾಗಿದೆ. ಮುಂದಿನ 7 ದಿನ ಚಳಿ ಮತ್ತು ಮಂಜು ವಾತಾವರಣ ಇರುವ ಕಾರಣ, ಗಾಳಿಯ ಗುಣಮಟ್ಟದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗುವ ಸಾಧ್ಯತೆಗಳು ಇದೆ. ಬೆಂಗಳೂರಿನ ಗಾಳಿಯ ಗುಣಮಟ್ಟ ಅನಾರೋಗ್ಯಕರವಾಗಿದ್ದು, ವಾಯು ಗುಣಮಟ್ಟ ಸೂಚ್ಯಂಕ (AQI) ಪ್ರಕಾರ, ಇಂದು ಗಾಳಿಯ ಗುಣಮಟ್ಟದಲ್ಲಿ ಕೆಟ್ಟ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆಗಳು ಇದೆ ಎಂದು ಹೇಳಲಾಗಿದೆ. ನಗರದ ಸರಾಸರಿ AQI 184 (ಅನಾರೋಗ್ಯಕರ) ಮತ್ತು 221 (ತುಂಬಾ ಅನಾರೋಗ್ಯಕರ/ತೀವ್ರ) ನಡುವೆ ವರದಿಯಾಗಿದೆ . ಇನ್ನು PM2.5 ಮತ್ತು PM10 . PM2.5 ಮಟ್ಟಗಳು 96 µg/m³ ವರೆಗೆ ದಾಖಲಾಗಿದೆ. PM10 ಮಟ್ಟಗಳು ಸುಮಾರು 132 µg/m³ ರಷ್ಟಿವೆ .

ಇನ್ನು ಈ ಗಾಳಿಯ ಗುಣಮಟ್ಟದಲ್ಲಿ ವಾತಾವರಣಕ್ಕೆ ಅನುಗುಣವಾಗಿ ಬದಲಾವಣೆ ಆಗುವ ಸಾಧ್ಯತೆ ಇದೆ. ಇನ್ನು ಬೆಂಗಳೂರಿನ ಭೋಗನಹಳ್ಳಿಯಲ್ಲಿ ಗಾಳಿಗುಣ ಮಟ್ಟ 225 ಇದೆ. ಇನ್ನು ಪಾಮ್ ಮೆಡೋಸ್​​ನಲ್ಲಿ 202, ಮತ್ತು ಬೆಳತ್ತೂರುನಲ್ಲಿ 204, ಅರೆಕೆರೆಯಲ್ಲಿ 194, ಕೃಷ್ಣರಾಜಪುರದಲ್ಲಿ 19 ಹಾಗೂ ಬೊಮ್ಮನಹಳ್ಳಿಯಲ್ಲಿ 187 ಗಾಳಿಯಮಟ್ಟ ಇದೆ. ಪ್ರಸ್ತುತ ಬೆಂಗಳೂರಿನ ಗಾಳಿಯ ಗುಣಮಟ್ಟದ ಸ್ಥಿತಿ ಕೆಟ್ಟಾಗಿದ್ದು, ಆರೋಗ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗುವ ಸಾಧ್ಯತೆ ಇದೆ. ಅದಕ್ಕಾಗಿ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲು ತಜ್ಞರು ಸಲಹೆ ನೀಡಿದ್ದಾರೆ.

ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆಗಳಿರುವ ಜನರು ಹೊರಗೆ ಬರದಂತೆ ಎಚ್ಚರಿಕೆ ನೀಡಿದ್ದಾರೆ. ಆರೋಗ್ಯವಂತ ವ್ಯಕ್ತಿಗಳು ಗಂಟಲಿನಲ್ಲಿ ಕಿರಿಕಿರಿ ಅಥವಾ ಉಸಿರಾಟದ ತೊಂದರೆ ಅನುಭವಿಸಬಹುದು. ಹೆಚ್ಚಿನ ಸಂಚಾರ ಅಥವಾ ಹೆಚ್ಚಿನ ಮಾಲಿನ್ಯ ಪ್ರದೇಶಗಳಲ್ಲಿ ಹೋಗುವ ಮುನ್ನ N95 ಮಾಸ್ಕ್ ಬಳಸಿ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದಟ್ಟ ಮಂಜು ಕವಿದ ವಾತಾವರಣ ಇರಲಿದೆ

ರಾಜ್ಯದಲ್ಲಿ ಗಾಳಿಯ ಗುಣಮಟ್ಟ:

ಬೆಂಗಳೂರು: 186

ಮಂಗಳೂರು: 140

ಮೈಸೂರು: 130

ಬೆಳಗಾವಿ: 156

ಕಲಬುರ್ಗಿ: 97

ಶಿವಮೊಗ್ಗ: 68

ಬಳ್ಳಾರಿ : 210

ಹುಬ್ಬಳ್ಳಿ : 112

ಉಡುಪಿ :108

ವಿಜಯಪುರ: 88

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೂರು ವರ್ಷ, ಐದು ದೊಡ್ಡ ಸಿನಿಮಾ; ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಹಬ್ಬ – Kannada News | Allu Arjun’s 5 Mega Films: Pushpa 3, Atlee, Vanga and More Revealed

ಪುಷ್ಪ ಚಿತ್ರದ ಮೂಲಕ ಜಾಗತಿಕ ಮನ್ನಣೆ ಗಳಿಸಿದ ಅಲ್ಲು ಅರ್ಜುನ್ (Allu Arjun) ಈಗ ತಮ್ಮ ಮುಂದಿನ ಯೋಜನೆಗಳನ್ನು ಬಹಳ ಎಚ್ಚರಿಕೆಯಿಂದ ಯೋಜಿಸುತ್ತಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಬರಲಿರುವ ಅವರ ಐದು ದೊಡ್ಡ ಚಿತ್ರಗಳ ವಿವರಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸುತ್ತಿವೆ. ಬನ್ನಿ ತೆಲುಗಿನಲ್ಲಿ ಮಾತ್ರವಲ್ಲದೆ ಪ್ಯಾನ್-ವರ್ಲ್ಡ್ ಮಟ್ಟದಲ್ಲಿಯೂ ತಮ್ಮ ಶಕ್ತಿಯನ್ನು ತೋರಿಸಲು ಸಿದ್ಧರಾಗಿದ್ದಾರೆ. ಆ ಕ್ರೇಜಿ ಸಿನಿಮಾಗಳು ಯಾವುವು ಎಂದು ನೋಡೋಣ.

ಅಟ್ಲೀ ನಿರ್ದೇಶನದ ಸಿನಿಮಾ (AA22) : ಅಲ್ಲು ಅರ್ಜುನ್ ಪ್ರಸ್ತುತ ಕಾಲಿವುಡ್ ಸ್ಟಾರ್ ನಿರ್ದೇಶಕ ಅಟ್ಲೀ ನಿರ್ದೇಶನದಲ್ಲಿ ಬೃಹತ್ ಪ್ಯಾನ್-ವರ್ಲ್ಡ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ಸುಮಾರು 800 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಈ ಚಿತ್ರದಲ್ಲಿ ಬನ್ನಿ ಹಿಂದೆಂದೂ ಕಾಣದ ರೀತಿಯಲ್ಲಿ ಲುಕ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಲಿವುಡ್ ತಂತ್ರಜ್ಞರ ಮಾರ್ಗದರ್ಶನದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ‘ಅಂಡರ್‌ವಾಟರ್’ ದೃಶ್ಯ ಕೂಡ ಇರಲಿದೆ. ಈ ಚಿತ್ರ 2027 ರ ಬೇಸಿಗೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಸಂದೀಪ್ ರೆಡ್ಡಿ ವಂಗಾ ಜೊತೆ ವೈಲ್ಡ್ ಆಕ್ಷನ್: ‘ಅನಿಮಲ್’ ಚಿತ್ರದ ಮೂಲಕ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಮೂಡಿಸಿದ ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ ಅಲ್ಲು ಅರ್ಜುನ್ ಒಂದು ಚಿತ್ರಕ್ಕೆ ಕಮಿಟ್ ಆಗಿದ್ದಾರೆ. ಅವರಿಬ್ಬರ ಸಂಯೋಜನೆಯ ಘೋಷಣೆಯಾದಾಗಿನಿಂದ, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಗಳಿವೆ. ಪ್ರಸ್ತುತ, ಸಂದೀಪ್ ಪ್ರಭಾಸ್ ಜೊತೆ ‘ಸ್ಪಿರಿಟ್’ ಚಿತ್ರದ ಕೆಲಸದಲ್ಲಿ ನಿರತರಾಗಿದ್ದಾರೆ. ಅದು ಪೂರ್ಣಗೊಂಡ ತಕ್ಷಣ, 2027 ರ ಕೊನೆಯಲ್ಲಿ ಅಥವಾ 2028 ರಲ್ಲಿ ಬನ್ನಿ ಜೊತೆ ಒಂದು ಚಿತ್ರ ಬರುವ ಸಾಧ್ಯತೆಯಿದೆ.

ಪ್ರಶಾಂತ್ ನೀಲ್, ಬೋಯಪತಿ ಶ್ರೀನು: ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಅಲ್ಲು ಅರ್ಜುನ್ ಗಾಗಿ ಒಂದು ಪವರ್‌ಫುಲ್ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ ಎಂಬ ವರದಿಗಳಿವೆ. ಇವರಿಬ್ಬರ ಕಾಂಬೊದಲ್ಲಿನ ಚಿತ್ರವು ಹೈ ವೋಲ್ಟೇಜ್ ಆಕ್ಷನ್ ಡ್ರಾಮಾ ಆಗಲಿದೆ. ಅಲ್ಲದೆ, ‘ಸರೈನೋಡು’ ನಂತಹ ಬ್ಲಾಕ್‌ಬಸ್ಟರ್ ನಂತರ, ಬನ್ನಿ ಬೋಯಪತಿ ಶ್ರೀನು ಅವರೊಂದಿಗೆ ಮತ್ತೊಂದು ಮಾಸ್ ಎಂಟರ್‌ಟೈನರ್ ಮಾಡಲು ಸಿದ್ಧರಿದ್ದಾರೆ. ಈ ಚಿತ್ರ ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬರುವ ಸಾಧ್ಯತೆಯಿದೆ.

ಇದನ್ನೂ ಓದಿ:  ‘ಧುರಂಧರ್’ ಚಿತ್ರವನ್ನು ಹಾಡಿ ಹೊಗಳಿದ ಅಲ್ಲು ಅರ್ಜುನ್

ಪುಷ್ಪ 3 – ದಿ ರಾಂಪೇಜ್..: ಎಲ್ಲಕ್ಕಿಂತ ಹೆಚ್ಚಾಗಿ, ಅಭಿಮಾನಿಗಳು ‘ಪುಷ್ಪ 3’ ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಪುಷ್ಪ 2 ರ ನಂತರ ಈ ಸರಣಿ ಕೊನೆಗೊಳ್ಳುವುದಿಲ್ಲ ಮತ್ತು ಭಾಗ 3 ಕೂಡ ಇರುತ್ತದೆ ಎಂದು ತಂಡದವರು ಈಗಾಗಲೇ ಸುಳಿವು ನೀಡಿದ್ದಾರೆ. ಈ ಚಿತ್ರವನ್ನು 2028ರ ವೇಳೆಗೆ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಸುಕುಮಾರ್ ಅವರ ದೂರದೃಷ್ಟಿಯ ಪ್ರಕಾರ, ಅಂತರರಾಷ್ಟ್ರೀಯ ಕಳ್ಳಸಾಗಣೆ ಸಂದರ್ಭದಲ್ಲಿ ಈ ಮೂರನೇ ಭಾಗವು ಇನ್ನೂ ದೊಡ್ಡದಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಒಂದೇ ಒಂದು ರನ್​​ನೊಂದಿಗೆ ವರ್ಲ್ಡ್​ ರೆಕಾರ್ಡ್ ಮುರಿದ ವಿರಾಟ್ ಕೊಹ್ಲಿ – Kannada News | Virat Kohli Breaks Sachin Tendulkar’s List A Record

ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ (Virat Kohli) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವರ್ಲ್ಡ್​ ರೆಕಾರ್ಡ್ ಮುರಿಯುವ ಮೂಲಕ ಎಂಬುದು ವಿಶೇಷ.

Source link

ನಮ್ಮ ಮೆಟ್ರೋ ಪ್ರಯಾಣಿಕರ ಪಾರ್ಕಿಂಗ್ ಸಮಸ್ಯೆಗೆ ಬೀಳಲಿದೆ ಬ್ರೇಕ್ – Kannada News | Namma Metro Parking Woes to End Soon: DK Shivakumar Directs Officials to Act

ಬೆಂಗಳೂರು, ಡಿಸೆಂಬರ್ 24: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಇರುವ ಬಹು ದೊಡ್ಡ ಸಮಸ್ಯೆ ಎಂದರೆ ಅದು ಪಾರ್ಕಿಂಗ್. ಮೆಟ್ರೋ ಸ್ಟೇಷನ್​​ಗಳ ಬಳಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಮೆಟ್ರೋ ಪ್ರಯಾಣಿಕರು ಸ್ಟೇಷನ್ ಅಕ್ಕಪಕ್ಕದ ರಸ್ತೆಗಳಲ್ಲಿ, ಮನೆಗಳ ಗೇಟ್ ಬಳಿ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದಾರೆ. ಇದರಿಂದ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಸಮಸ್ಯೆ ಎದುರಿಸುವಂತಾಗುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮುಂದಾಗಿದ್ದು, ಮುಂಬರುವ ಮೆಟ್ರೋ ಮಾರ್ಗಗಳಲ್ಲಿ ಬರುವ ಸ್ಟೇಷನ್​ಗಳ ಬಳಿ ಅಕ್ಕಪಕ್ಕದ ಜಾಗವನ್ನು ಖರೀದಿ ಮಾಡಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು, ಮೆಟ್ರೋ ಸ್ಟೇಷನ್​ನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಮಾಡಬೇಕು. ಇದರಿಂದ ಪ್ರಯಾಣಿಕರಿಗೆ ಉಪಯೋಗ ಆಗಲಿದೆ ಎಂದು ಸೂಚನೆ ನೀಡಿದ್ದಾರೆ.

ಡಿಸಿಎಂ ಸೂಚನೆ ಹಿನ್ನೆಲೆ ಬಿಎಂಆರ್​ಸಿಎಲ್ ಅಧಿಕಾರಿಗಳು ಇನ್ಮುಂದೆ ಆರಂಭವಾಗಲಿರುವ ಮೆಟ್ರೋ ಮಾರ್ಗಗಳು ಮತ್ತು ವಿಸ್ತರಣೆ ಆಗಲಿರುವ ಮೆಟ್ರೋ ಮಾರ್ಗಗಳಾದ ಆರೆಂಜ್ ಲೈನ್, ಬ್ಲೂ ಲೈನ್, ರೆಡ್ ಲೈನ್, ಪಿಂಕ್ ಲೈನ್, ಯೆಲ್ಲೋ ಲೈನ್ ಮೆಟ್ರೋ ಸ್ಟೇಷನ್​ಗಳ ಬಳಿ ಮಲ್ಟಿ ಲೆವೆಲ್ ಪಾರ್ಕಿಂಗ್ ನಿರ್ಮಾಣ ಮಾಡಲು ಅಕ್ಕಪಕ್ಕದ ಜಾಗವನ್ನು ಪತ್ತೆ ಮಾಡಲು ಮುಂದಾಗಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ಬಹುಮಹಡಿ ಪಾರ್ಕಿಂಗ್ ಸ್ಲಾಟ್​​ಗಳ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಮೆಟ್ರೋ ಸ್ಟೇಷನ್​ಗಳ ಬಳಿ ಹೆಚ್ಚಿನ ಭೂಮಿ ಸ್ವಾಧೀನ ಮಾಡಿಕೊಳ್ಳಲು ಬಿಎಂಆರ್​ಸಿಎಲ್ ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್: ಇನ್ಮುಂದೆ ರೈಲಿಗೆ ಹೆಚ್ಚು ಹೊತ್ತು ಕಾಯಬೇಕಿಲ್ಲ

ಒಟ್ಟಿನಲ್ಲಿ, ಮೆಟ್ರೋ ಪ್ರಯಾಣಿಕರ ಹಲವು ವರ್ಷಗಳ ಸಮಸ್ಯೆಗೆ ಬ್ರೇಕ್ ಹಾಕಲು ಡಿಸಿಎಂ ಸೂಚನೆ ನೀಡಿದ್ದಾರೆ. ಇದನ್ನು ಬಿಎಂಆರ್​ಸಿಎಲ್ ಅಧಿಕಾರಿಗಳು ಎಷ್ಟರಮಟ್ಟಿಗೆ ಪಾಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಮನೆಯಲ್ಲಿ ಪುರುಷರು ಕಸ ಗುಡಿಸುವುದರಿಂದ ಇದೆ ಅಪಾರ ಲಾಭ; ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | The Spiritual Significance of Men Sweeping the Home; Checkout more details here

ಪುರುಷರು ಮನೆಯಲ್ಲಿ ಕಸ ಗುಡಿಸುವುದರ ಹಿಂದಿನ ಆಧ್ಯಾತ್ಮಿಕ ಮಹತ್ವದ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಸಾಮಾನ್ಯವಾಗಿ ಗೃಹಿಣಿಯನ್ನು ಮನೆಯ ಮಹಾಲಕ್ಷ್ಮಿ ಎಂದು ಪರಿಗಣಿಸಲಾಗುತ್ತದೆ. ಸಮಾಜದಲ್ಲಿ ಒಂದು ಕುಟುಂಬಕ್ಕೆ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನವಾಗಿ ಮುಖ್ಯರು, ಹೇಗೆ ಸೂರ್ಯ-ಚಂದ್ರರು ಅಥವಾ ಎರಡು ಕಣ್ಣುಗಳು ಮುಖ್ಯವೋ ಹಾಗೆಯೇ. ಒಬ್ಬರು ಸಂಪಾದನೆಯ ಜವಾಬ್ದಾರಿ ಹೊತ್ತರೆ, ಮತ್ತೊಬ್ಬರು ಮನೆಯ ನಿರ್ವಹಣೆಯ ಜವಾಬ್ದಾರಿ ಹೊತ್ತಿರುತ್ತಾರೆ. ಆದರೆ, ಮನೆಯ ಸ್ವಚ್ಛತೆ ಕೇವಲ ಹೆಣ್ಣು ಮಕ್ಕಳ ಕರ್ತವ್ಯ ಎಂದು ಭಾವಿಸುವುದು ಸರಿಯಲ್ಲ. ಮನೆಯನ್ನು ಸ್ವಚ್ಛವಾಗಿಡುವುದು ಪುರುಷರ ಜವಾಬ್ದಾರಿಯ ಭಾಗವೂ ಹೌದು.

ಮನೆಯಲ್ಲಿ ಪುರುಷರು ಕಸ ಗುಡಿಸುವುದರಿಂದ ಶುಭ ಫಲಗಳು ಉಂಟಾಗುತ್ತವೆಯೇ ಎಂಬ ಪ್ರಶ್ನೆಗೆ ಶಾಸ್ತ್ರಗಳು ಸಕಾರಾತ್ಮಕ ಉತ್ತರ ನೀಡುತ್ತವೆ. ಪುರುಷರು ಬೆಳಗಿನ ಜಾವದಲ್ಲಿ ಅಥವಾ ಸೂರ್ಯೋದಯದ ಸಮಯದಲ್ಲಿ ಮನೆಯ ಒಳಗಾಗಲಿ ಅಥವಾ ಹೊರಗಾಗಲಿ ಕಸ ಗುಡಿಸುವುದರಿಂದ ಅಪಾರ ಶುಭ ಫಲಗಳು ದೊರೆಯುತ್ತವೆ. ಮನೆಯ ಮುಖ್ಯಸ್ಥರು ಅಥವಾ ಪುರುಷರು ಸ್ವತಃ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಬಡತನ ಬರುವುದಿಲ್ಲ ಎಂದು ನಂಬಲಾಗಿದೆ.

ಇದರ ಜೊತೆಗೆ, ಪುರುಷರು ಮನೆಯಲ್ಲಿ ಕಸ ಗುಡಿಸುವಾಗ, ಕುಟುಂಬದ ಇತರ ಸದಸ್ಯರಾದ ಪತ್ನಿ, ಮಕ್ಕಳು ಮತ್ತು ತಾಯಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ವಿಶೇಷವಾಗಿ ಪತ್ನಿಗೆ ತನ್ನ ಪತಿಯ ಬಗ್ಗೆ ಪ್ರೀತಿ ಮತ್ತು ಮಮತೆ ಹೆಚ್ಚುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ಕಾರ್ಯವು ಕುಟುಂಬಕ್ಕೆ ಬಹಳಷ್ಟು ಶ್ರೇಯಸ್ಸನ್ನು ತರುತ್ತದೆ. ಬಡತನ ನಿವಾರಣೆಯಾಗಿ ಸಂಪತ್ತು ವೃದ್ಧಿಯಾಗುತ್ತದೆ. ಮನೆಯಲ್ಲಿ ಶಾಂತಿ ಬೆಳೆದು, ಕೋಪ ಮತ್ತು ಮನಸ್ತಾಪಗಳು ಕಡಿಮೆಯಾಗುತ್ತವೆ. ಮಹಾಲಕ್ಷ್ಮಿಯ ಕೃಪೆ ಸದಾ ಮನೆಗೆ ಇರುತ್ತದೆ.

ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ

ಒಬ್ಬ ಪುರುಷನು ಮನೆಯನ್ನು ನಿರ್ಲಕ್ಷಿಸಿ, ಎಲ್ಲಿ ಬೇಕೆಂದರಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಸ್ವಚ್ಛತೆ ಕಾಪಾಡದಿದ್ದರೆ, ಆ ಮನೆಗೆ ದಾರಿದ್ರ್ಯ ದೇವತೆ ಆವರಿಸುತ್ತದೆ ಎಂದು ನಂಬಲಾಗಿದೆ. ಹಿಂದೂ ಸನಾತನ ಸಂಸ್ಕೃತಿಯಲ್ಲಿ ಹೇಳಿರುವ ಕೆಲವು ವಿಧಿವಿಧಾನಗಳನ್ನು ಪಾಲಿಸುವುದರಿಂದ ಬಹಳಷ್ಟು ಶುಭ ಫಲಗಳು ದೊರೆಯುತ್ತವೆ. ಮನೆಯ ಸ್ವಚ್ಛತೆಯನ್ನು ಕಾಪಾಡುವುದರಲ್ಲಿ ಪುರುಷರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಈ ಕಾರ್ಯದಿಂದ ಕರ್ಮಗಳು ಸಹ ಕಡಿಮೆಯಾಗುತ್ತವೆ. ಪ್ರತಿದಿನ ಸಾಧ್ಯವಾಗದಿದ್ದರೂ, ಕನಿಷ್ಠ ವಾರಕ್ಕೊಮ್ಮೆಯಾದರೂ ಪುರುಷರು ಮನೆಯಲ್ಲಿ ಕಸ ಗುಡಿಸುವುದು ಆ ಮನೆಗೆ ಅದೃಷ್ಟವನ್ನು ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲ್ಲೆಲ್ಲೂ ‘45’, ‘ಮಾರ್ಕ್’ ಸಿನಿಮಾ ಸಂಭ್ರಮ; ಎರಡು ದೊಡ್ಡ ಚಿತ್ರಕ್ಕೆ ಅದ್ದೂರಿ ಸ್ವಾಗತ – Kannada News | 45 Movie And Devil Movie Releasing today Here is The live video

‘45’ ಸಿನಿಮಾದಲ್ಲಿ ಶಿವರಾಜ್​​ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ.‘ಮಾರ್ಕ್’ ಸಿನಿಮಾದಲ್ಲಿ ಸುದೀಪ್ ಅಭಿನಯಿಸಿದ್ದಾರೆ. ಈ ಎರಡೂ ಚಿತ್ರಗಳು ಇಂದು ರಿಲೀಸ್ ಆಗಿದೆ. ಈ ಸಿನಿಮಾದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಬಗ್ಗೆ ಫ್ಯಾನ್ಸ್ ವಿಮರ್ಶೆ ಏನು? ಸಿನಿಮಾ ನೋಡಿದವರು ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ವಿವರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version