‘45’ ಸಿನಿಮಾ ಪ್ರೀಮಿಯರ್ ಶೋ: ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ಫ್ಯಾನ್ಸ್ ಸಂಭ್ರಮ ನೋಡಿ – Kannada News | 45 Kannada movie fans celebrate in front of theatre during premiere show

ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡಿರುವ ‘45’ ಸಿನಿಮಾ (45 Kannada Movie) ಬಿಡುಗಡೆ ಆಗುತ್ತಿದೆ. ಒಂದು ದಿನ ಮೊದಲೇ ಪ್ರೀಮಿಯರ್ ಶೋ ಮಾಡಲಾಗಿದೆ. ಬೆಂಗಳೂರಿನ ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋ ನಡೆದಿದೆ. ಅಭಿಮಾನಿಗಳು ಭಾರಿ ಉತ್ಸಾಹದಲ್ಲಿ ಬಂದು ಸಿನಿಮಾ ನೋಡುತ್ತಿದ್ದಾರೆ. ಶಿವರಾಜ್​​ಕುಮಾರ್, ರಾಜ್ ಬಿ. ಶೆಟ್ಟಿ, ಉಪೇಂದ್ರ (Upendra) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ಸ್ಟಾರ್ ನಟರ ಅಭಿಮಾನಿಗಳು ಚಿತ್ರಮಂದಿರಗಳ ಎದುರು ಜೋರಾಗಿ ಸಂಭ್ರಮಿಸುತ್ತಿದ್ದಾರೆ. ಈಗಾಗಲೇ ‘45’ ಸಿನಿಮಾ ನೋಡಿದ ಅಭಿಮಾನಿಗಳು ಪಾಸಿಟಿವ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ರಮೇಶ್ ರೆಡ್ಡಿ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ (Arjun Janya) ಅವರ ಚೊಚ್ಚಲ ನಿರ್ದೇಶನಕ್ಕೆ ಜನರಿಂದ ಮೆಚ್ಚುಗೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೂರ್ಣ ಅರಾವಳಿ ರಕ್ಷಣೆ; ಹೊಸ ಮೈನಿಂಗ್ ಲೀಸ್ ಇಲ್ಲ: ಕೇಂದ್ರ ನಿರ್ಧಾರ ಮತ್ತು ಭರವಸೆ – Kannada News | Govt says it will protect entire aravali, won’t give new mining lease

ನವದೆಹಲಿ, ಡಿಸೆಂಬರ್ 24: ಅಮೂಲ್ಯ ನೈಸರ್ಗಿಕ ಸಂಪತ್ತಿರುವ ಅರಾವಳಿ ಪರ್ವತ ಶ್ರೇಣಿಯನ್ನು (Aravali Range) ಸಂಪೂರ್ಣವಾಗಿ ರಕ್ಷಿಸಲು ಬದ್ಧವಾಗಿದ್ದೇವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಅರಾವಳಿ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮೂಲಕ ಈ ಸೂಕ್ಷ್ಮ ಪ್ರದೇಶವನ್ನು ನಾಶ ಮಾಡುವ ಪ್ರಯತ್ನ ನಡೆದಿದೆ ಎನ್ನುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಸ್ಪಷ್ಟನೆ ಕೊಟ್ಟಿದೆ. ಇಂದು ಪತ್ರಿಕಾ ಹೇಳಿಕೆ ಹೊರಡಿಸಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು, ಅರಾವಳಿ ಶ್ರೇಣಿಯಲ್ಲಿ ಯಾವುದೇ ಹೊಸ ಗಣಿಗಳಿಗೆ ಅನುಮತಿ ನೀಡಬಾರದು ಎಂದು ವಿವಿಧ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಭಾರತದಲ್ಲಿ ಪಶ್ಚಿಮ ಘಟ್ಟ, ವಿಂಧ್ಯ, ಕಾರಕೋರಮ್ ಇತ್ಯಾದಿ ಇರುವ ಕೆಲ ಪ್ರಮುಖ ಪರ್ವತ ಶ್ರೇಣಿಗಳಲ್ಲಿ ಅರಾವಳಿಯೂ ಒಂದು. ದೆಹಲಿ ಸಮೀಪ ಶುರುವಾಗುವ ಈ ಪರ್ವತ ಶ್ರೇಣಿಯು ಹರ್ಯಾಣ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯದವರೆಗೂ ಇದೆ. ಇದರ ಹೆಚ್ಚಿನ ಭಾಗವು ರಾಜಸ್ಥಾನದಲ್ಲಿ ಇದೆ.

ಹಲವು ವರ್ಷಗಳಿಂದ ಈ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಕಷ್ಟು ಗಣಿಗಾರಿಕೆಗಳು ನಡೆದಿವೆ. ಇದರಿಂದ ಇಲ್ಲಿಯ ಸೂಕ್ಷ್ಮ ಪರಿಸರಕ್ಕೆ ಧಕ್ಕೆಯಾಗಿದೆ ಎನ್ನುವುದು ಪರಿಸರ ಹೋರಾಟಗಾರರು ಮಾಡುತ್ತಿರುವ ಆರೋಪ.

ಇದನ್ನೂ ಓದಿ: ಸತ್ತ ಆರ್ಥಿಕತೆಯಷ್ಟೇ ಅಲ್ಲ, ಸತ್ತ ಸಮಾಜವೂ ಆಗುತ್ತಿದ್ದೇವೆ: ಉನ್ನಾವೋ ರೇಪ್ ಸಂತ್ರಸ್ತೆ ಭೇಟಿ ಬಳಿಕ ರಾಹುಲ್ ಗಾಂಧಿ ಆಕ್ರೋಶದ ಹೇಳಿಕೆ

ಅರಾವಳಿ ಪರ್ವತ ಶ್ರೇಣಿಯಲ್ಲಿ ಯಾವ್ಯಾವ ಪ್ರದೇಶಗಳಲ್ಲಿ ಮೈನಿಂಗ್ ಅನ್ನು ಸಂಪೂರ್ಣ ನಿಷೇಧಿಸಬೇಕು ಎಂಬುದನ್ನು ಗುರುತಿಸುವಂತೆ ಸರ್ಕಾರವು ಅರಣ್ಯ ಸಂಶೋಧನೆ ಮಂಡಳಿಯಾದ ಐಸಿಎಫ್​ಆರ್​ಇಗೆ ನಿರ್ದೇಶನ ನೀಡಿದೆ. ವಿವಿಧ ಮಾನದಂಡಗಳು ಹಾಗೂ ಅಂಶಗಳ ಆಧಾರದ ಮೇಲೆ ಈ ಸಂಸ್ಥೆಯು ಅರಾವಳಿ ಪ್ರದೇಶವನ್ನು ಅವಲೋಕಿಸಲಿದೆ.

ಹಾಗೆಯೇ, ವೈಜ್ಞಾನಿಕವಾಗಿ ಹಾಗೂ ಸುಸ್ಥಿರವಾಗಿ ಮಾಡಬಹುದಾದ ಗಣಿಗಾರಿಕೆ ಸಾಧ್ಯತೆ ಬಗ್ಗೆ ಐಸಿಎಫ್​ಆರ್​ಇ ಒಂದು ಸಮಗ್ರ ವರದಿ ಮಾಡಲಿದೆ. ಗಣಿಗಾರಿಕೆಯಿಂದ ಏನೇನು ಅನಾಹುತ, ಪರಿಣಾಮಗಳಾಗಬಹುದು, ಇತ್ಯಾದಿ ಎಲ್ಲಾ ರೀತಿಯ ಸಾಧ್ಯಾಸಾಧ್ಯತೆಗಳ ವಿಶ್ಲೇಷಣೆಯು ಈ ವರದಿಯಲ್ಲಿ ಇರುತ್ತದೆ. ಈ ವರದಿಯು ಸಾರ್ವತ್ರಿಕವಾಗಿ ಲಭ್ಯ ಇರುವಂತೆ ಮಾಡಲಾಗುತ್ತದೆ.

ಇದನ್ನೂ ಓದಿ: ದೆಹಲಿ ಮಾಲಿನ್ಯದ ಭೀಕರತೆಯನ್ನು ತೆರೆದಿಟ್ಟ ಸಚಿವ ನಿತಿನ್ ಗಡ್ಕರಿ

ಅರಾವಳಿ ಶ್ರೇಣಿ ಬಗ್ಗೆ ಹೊಸ ವ್ಯಾಖ್ಯಾನ; ಪರಿಸರವಾದಿಗಳಿಗೆ ಬೇಸರ?

ಅರಾವಳಿ ಶ್ರೇಣಿಯಲ್ಲಿ 100 ಮೀಟರ್​ಗಿಂತ ಹೆಚ್ಚು ಎತ್ತರದ ಗುಡ್ಡಗಳನ್ನು ಅರಾವಳಿ ಪರ್ವತ ಎಂದು ಪರಿಗಣಿಸಬಹುದು ಎಂದು ನವೆಂಬರ್ 20ರಂದು ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿತು. ಇದು ಪರಿಸರ ಹೋರಾಟಗಾರರನ್ನು ಆತಂಕಕ್ಕೆ ತಳ್ಳಿದೆ. ಅರಾವಳಿ ಶ್ರೇಣಿಯಲ್ಲಿ 100 ಮೀಟರ್​ಗಿಂತ ಕಡಿಮೆ ಎತ್ತರದ ಹಲವು ಪರ್ವತಗಳಿವೆ. ಅವುಗಳನ್ನು ಅರಾವಳಿ ಶ್ರೇಣಿ ಎಂದು ಪರಿಗಣಿಸದೇ ಅಲ್ಲಿ ಗಣಿಗಾರಿಕೆಗೆ ಸರ್ಕಾರ ಅನುಮತಿಸಬಹುದು ಎಂಬುದು ಪ್ರಮುಖ ತಕರಾರು. ಈ ಹಿನ್ನೆಲೆಯಲ್ಲಿ ಸರ್ಕಾರವು ಇಡೀ ಅರಾವಳಿ ಶ್ರೇಣಿಯನ್ನೇ ರಕ್ಷಿಸುವುದಾಗಿ ಸ್ಪಷ್ಟನೆ ಕೊಟ್ಟಿರುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಣ್ಣ ಬಣ್ಣದ ಕೇಕ್​​ ತಿನ್ನೋ ಮುನ್ನ ಜೋಕೆ: ಯಾಮಾರಿದ್ರೆ ಬರಬಹುದು ಭೀಕರ ಕಾಯಿಲೆ! – Kannada News | Doctors have warned that artificial colors used in cakes can cause severe diseases

ಬೆಂಗಳೂರು, ಡಿಸೆಂಬರ್​​ 24: ಎಲ್ಲೆಡೆಯೂ ಕ್ರಿಸ್ಮಸ್​​ ಮತ್ತು ಹೊಸ ವರ್ಷದ ಸಂಭ್ರಮ ಮಾಡಿದೆ. ಇವುಗಳ ಆಚರಣೆ ವೇಳೆ ಕೇಕ್​​ ಕಟ್​​ ಮಾಡಿ ಸಂಭ್ರಮಿಸೋದು ಮಾಮೂಲು. ಹೀಗಾಗಿಯೇ ಬಗೆ ಬಗೆಯ ಕೇಕ್​​ಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ನಡುವೆ ವೈದ್ಯರು ನೀಡಿರೋ ಅಭಿಪ್ರಾಯ ಬೆಚ್ಚಿ ಬೀಳಿಸುವಂತಿದ್ದು, ನಾವು ತಿನ್ನುವ ರುಚಿ ರುಚಿಯಾದ ಕಲರ್​ ಕಲರ್​ ಕೇಕ್​​ಗಳು ಭೀಕರ ಕಾಯಿಲೆಗೆ ಕಾರಣವಾಗಬಹುದು ಎಂದಿದ್ದಾರೆ.

ಕೇಕ್​ ಅಂದ್ರೆ ದೊಡ್ಡವರಿಂದ ಹಿಡಿದು ಚಿಕ್ಕಮಕ್ಕಳಿಗೂ ಅಚ್ಚುಮೆಚ್ಚು. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವದಿಂದ ಹಿಡಿದು ಯಾವುದೇ ಪಾರ್ಟಿ ಇದ್ದರೂ ಕೇಕ್​​ ಬೇಕೇ ಬೇಕು. ಇದಕ್ಕಾಗಿಯೇ ಇತ್ತೀಚೆಗಂತೂ ಟ್ರಫಲ್, ರೆಡ್​ವೆಲ್​ವೆಟ್, ಚೀಸ್​​ ಕೇಕ್​, ನಟ್ಸ್​ ಕೇಕ್​, ಐರಿಸ್​ ಕೇಕ್ ಸೇರಿ ವೆರೈಟಿ ಕೇಕ್​​ಗಳು ಶಾಪ್​​ಗಳಲ್ಲಿ ಸಿಗುತ್ತವೆ. ಆದ್ರೆ ಇವು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆಘಾತಕಾರಿ ವಿಷಯ ಬಹಿರಂಗವಾಗಿದೆ. ಕಳೆದ ವರ್ಷ ನಡೆದ ಪರೀಕ್ಷೆ ವೇಳೆ ಕೆಲವು ಕೇಕ್ ಸ್ಯಾಂಪಲ್ಸ್ ಅನ್ ಸೇಫ್ ಆಗಿರೋದು ಬಯಲಾಗಿತ್ತು. ಹೀಗಾಗಿ ಈ ಬಾರಿಯೂ ಆಹಾರ ಇಲಾಖೆ ಈ ವೆರೈಟಿ ಕೇಕ್​​ಗಳ ಮೇಲೆ ಕಣ್ಣಿಟ್ಟಿದೆ. ಕೇಕ್​​ಗಳ ತಯಾರಿ ವೇಳೆ ರಾಸಾಯನಿಕಯುಕ್ತ ಬಣ್ಣಗಳ ಬಳಕೆ ತಡೆಗೆ ಕ್ರಮಕ್ಕೆ ಮುಂದಾಗಿದೆ.

ಇದನ್ನೂ ಓದಿ:  ನ್ಯೂ ಇಯರ್ ಹೆಸರಲ್ಲಿ ರೇವ್ ಪಾರ್ಟಿ ಮಾಡಿದ್ರೆ ಹುಷಾರ್! ಬೆಂಗಳೂರಿನಾದ್ಯಂತ ಖಾಕಿ ಸರ್ಪಗಾವಲು

ಕೇಕ್​​ಗಳಲ್ಲಿ ಕೃತಕ ಬಣ್ಣ ಬಳಕೆಯಿಂದ ಏನೆಲ್ಲ ಪರಿಣಾಮ?

  • Allura Red: ಅಲರ್ಜಿ, ಅಸ್ತಮಾ, ಜೀರ್ಣಕ್ರಿಯೆಯಲ್ಲಿ ಸಮಸ್ಯೆ, ತಲೆನೋವು
  • Sunset Yellow FCF: ಅಲರ್ಜಿ, ಮಕ್ಕಳಲ್ಲಿ ಹೈಪರ್ ಆ್ಯಕ್ಟಿವಿಟಿ, ಕ್ರೋಮೋಸೋಮ್ ಡ್ಯಾಮೇಜ್, ಥೈರಾಯ್ಡ್ ಸಮಸ್ಯೆ, ಆನ್‌ಸೈಟಿ ಸಮಸ್ಯೆ
  • Ponceau 4R: ಮಕ್ಕಳ ವರ್ತನೆಯಲ್ಲಿ ಬದಲಾವಣೆ, ಅಲರ್ಜಿ, ಅಸ್ತಮಾ ಸಮಸ್ಯೆ ಸಾಧ್ಯತೆ
  • Tartrazine: ಸ್ಕಿನ್ ರಾಶಸ್, ಶ್ವಾಸಕೋಶದ ಸಮಸ್ಯೆ, ಮೈಗ್ರೇನ್, ಡಿಪ್ರೆಶನ್, ದೃಷ್ಟಿ ಸಂಬಂಧಿತ ಸಮಸ್ಯೆ, ನಿದ್ರಾಹೀನತೆ , ಗ್ಯಾಸ್ಟ್ರಿಕ್ ಸಮಸ್ಯೆ,
  • Carmoisine: ಹೈಪರ್ ಸೆನ್ಸಿಟಿವಿಟಿ, ಚರ್ಮದ ಊತ, ಉಸಿರಾಟದ ಸಮಸ್ಯೆ

ಇನ್ನು ಆಹಾರ ತಜ್ಞರು ರೆಡ್ ವೆಲ್​​ವೆಟ್ , ಬ್ಲ್ಯಾಕ್​​ ಫಾರೆಸ್ಟ್ ಕೇಕ್​​ಗಳ ಬಗ್ಗೆ ಎಚ್ಚರವಹಿಸುವಂತೆ ಸಲಹೆ ನೀಡಿದ್ದಾರೆ. ಈ ಹಿಂದೆ ಇವುಗಳು ಅನ್‌ಸೇಫ್ ಎಂಬುದು ಗೊತ್ತಾಗಿತ್ತು. ಬಣ್ಣ ಬಣ್ಣದ ಕೇಕ್​​ಗಳು ಎಂದು ಯಾಮಾರುವ ಬದಲು, ನೀವು ತಿನ್ನುವ ಕೇಕ್ ಎಷ್ಟು ಸೇಫ್ ಇದೆ ಎಂದು ಯೋಚಿಸಿ ಖರೀದಿಸಿ ಎಂದು ಸಲಹೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸತ್ತ ಆರ್ಥಿಕತೆಯಷ್ಟೇ ಅಲ್ಲ, ಸತ್ತ ಸಮಾಜವೂ ಆಗುತ್ತಿದ್ದೇವೆ: ಉನ್ನಾವೋ ರೇಪ್ ಸಂತ್ರಸ್ತೆ ಭೇಟಿ ಬಳಿಕ ರಾಹುಲ್ ಗಾಂಧಿ ಆಕ್ರೋಶದ ಹೇಳಿಕೆ – Kannada News | Rahul Gandhi express anger over the system, after meeting Unnao rape survivor

ನವದೆಹಲಿ, ಡಿಸೆಂಬರ್ 24: ಉನ್ನಾವೋ ಅತ್ಯಾಚಾರ ಘಟನೆಯ ಸಂತ್ರಸ್ತೆ (Unnao rape survivor) ಇಂದು ಬುಧವಾರ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿ ಮಾಡಿದ್ದಾರೆ. ಅತ್ಯಾಚಾರ ಆರೋಪಿ ಹಾಗೂ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಹೋರಾಡಲು ಒಬ್ಬ ವಕೀಲರನ್ನು ನೇಮಿಸಿಕೊಡುವುದು ಸೇರಿದಂತೆ ಮೂರು ಮನವಿಗಳನ್ನು ಸಂತ್ರಸ್ತ ಬಾಲಕಿಯ ತಾಯಿ ಮಾಡಿದ್ದಾರೆ. ಅಮ್ಮ ಮತ್ತು ಮಗಳ ಭೇಟಿ ಬಳಿಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಹಾಗೂ ದೇಶದ ವ್ಯವಸ್ಥೆ ಬಗ್ಗೆ ಕಿಡಿಕಾರಿದ್ದಾರೆ.

‘ಅತ್ಯಾಚಾರಿಗಳಿಗೆ ಜಾಮೀನು ಸಿಗುತ್ತೆ. ಅತ್ಯಾಚಾರ ಸಂತ್ರಸ್ತರನ್ನು ಕ್ರಿಮಿನಲ್​ಗಳಂತೆ ನಡೆಸಿಕೊಳ್ಳಲಾಗುತ್ತೆ. ಯಾವ ಸೀಮೆಯ ನ್ಯಾಯ ಇದು? ನಾವು ಸತ್ತ ಆರ್ಥಿಕತೆ ಮಾತ್ರ ಆಗುತ್ತಿಲ್ಲ, ಇಂಥ ಅಮಾನವೀಯ ಘಟನೆಗಳು ನಮ್ಮನ್ನು ಸತ್ತ ಸಮಾಜವಾಗಿ ಮಾರ್ಪಡಿಸುತ್ತಿವೆ’ ಎಂದು ರಾಹುಲ್ ಗಾಂಧಿ ತಮ್ಮ ಎಕ್ಸ್​ನಲ್ಲಿ ಸಿಡಿಗುಟ್ಟಿದ್ದಾರೆ.

ಇದನ್ನೂ ಓದಿ: 12,000 ಕೋಟಿ ರೂ ವೆಚ್ಚದಲ್ಲಿ ಡೆಲ್ಲಿ ಮೆಟ್ರೋ ವಿಸ್ತರಣೆ; ಬರಲಿವೆ 13 ಹೊಸ ನಿಲ್ದಾಣಗಳು; ಸಂಪುಟ ಅನುಮೋದನೆ

ಉನ್ನಾವೋದಲ್ಲಿ 2017ರಲ್ಲಿ ಆಗ 17 ವರ್ಷ ವಯಸ್ಸಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಆದ ಆರೋಪ ಇರುವ ಪ್ರಕರಣ ಇದು. ಆಗ ಬಿಜೆಪಿ ನಾಯಕರಾಗಿದ್ದ ಮತ್ತು ಶಾಸಕನೂ ಆಗಿದ್ದ ಕುಲದೀಪ್ ಸಿಂಗ್ ಸೇರಿದಂತೆ ವಿವಿಧ ವ್ಯಕ್ತಿಗಳ ಮೇಲೆ ಆರೋಪ ದಾಖಲಾಗಿತ್ತು. ಕೋರ್ಟ್​ವೊಂದರಲ್ಲೂ ಈತ ದೋಷಿ ಎಂದು ತೀರ್ಪು ನೀಡಲಾಗಿ, ಜೈಲು ಶಿಕ್ಷೆಯಾಗಿತ್ತು. ಈಗ ತನ್ನ ವಿರುದ್ಧದ ತೀರ್ಪನ್ನು ಪ್ರಶ್ನಿಸಿ ಕುಲದೀಗ್ ಸಿಂಗ್ ಸೆಂಗರ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಕೋರ್ಟ್​ನಿಂದ ಅಂತಿಮ ತೀರ್ಪು ಬರುವವರೆಗೂ ಇವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಜೈಲಿಂದ ಬಿಡುಗಡೆ ಮಾಡಿರುವುದನ್ನು ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ತಾಯಿ ಇಬ್ಬರೂ ಬಲವಾಗಿ ವಿರೋಧಿಸುತ್ತಿದ್ದಾರೆ. ಸೆಂಗರ್​ನಿಂದ ತಮ್ಮ ಪ್ರಾಣಕ್ಕೆ ಆಪತ್ತಿದೆ ಎಂದು ಹೇಳುತ್ತಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಲು ತಮ್ಮನ್ನು ಬಿಡುತ್ತಿಲ್ಲ ಎಂದು ಅಮ್ಮ-ಮಗಳು ಅಲವತ್ತುಕೊಳ್ಳುತ್ತಿದ್ಧಾರೆ.

ಇದನ್ನೂ ಓದಿ: ದೆಹಲಿ ಮಾಲಿನ್ಯದ ಭೀಕರತೆಯನ್ನು ತೆರೆದಿಟ್ಟ ಸಚಿವ ನಿತಿನ್ ಗಡ್ಕರಿ

ಇದೇ ವೇಳೆ, ನಿನ್ನೆ ವಿದೇಶದಿಂದ ಭಾರತಕ್ಕೆ ಬಂದ ರಾಹುಲ್ ಗಾಂಧಿ ಅವರನ್ನು ಬಾಲಕಿ ಹಾಗೂ ಆಕೆಯ ತಾಯಿ ಭೇಟಿಯಾಗಿದ್ದಾರೆ. ಸುಪ್ರೀಂಕೋರ್ಟ್​ನಲ್ಲಿ ಸೆಂಗರ್ ವಿರುದ್ಧ ಹೋರಾಡಲು ದೊಡ್ಡ ವಕೀಲರನ್ನು ಕೊಡಬೇಕು; ತಮ್ಮನ್ನು ಕೊಲ್ಲುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಇರಲು ಅವಕಾಶ ಕೊಡಬೇಕು; ಹಾಗು ಮೂರನೆಯದು, ಮಹಿಳೆಯ ಗಂಡನಿಗೆ ಉದ್ಯೋಗ ಒದಗಿಸಬೇಕು. ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ತಾಯಿಯ ಈ ಮೂರು ಬೇಡಿಕೆಗಳಿಗೆ ರಾಹುಲ್ ಗಾಂಧಿ ಒಪ್ಪಿದರೆನ್ನಲಾಗಿದೆ.

ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ಇವರು, ತಾವು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಬಯಸುತ್ತಿರುವುದಾಗಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರೋಹಿತ್, ಕೊಹ್ಲಿಯ ಶತಕಗಳ ಅಬ್ಬರ; ಬಿಸಿಸಿಐ ವಿರುದ್ಧ ಸಿಡಿದೆದ್ದ ಅಭಿಮಾನಿಗಳು – Kannada News | BCCI Blasted: No Live Stream for Rohit Kohli Vijay Hazare Centuries; Fan Anger

ಭಾರತೀಯ ದೇಶೀಯ ಕ್ರಿಕೆಟ್‌ನ ಅತಿದೊಡ್ಡ ಏಕದಿನ ಪಂದ್ಯಾವಳಿ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಡಿಸೆಂಬರ್ 24 ರಿಂದ ಪ್ರಾರಂಭವಾಗಿದೆ. ಈ ಆವೃತ್ತಿಯ ದೊಡ್ಡ ಹೈಲೈಟ್ ಎಂದರೆ ಟೀಂ ಇಂಡಿಯಾದ ಇಬ್ಬರು ದಂತಕಥೆಯ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಬಹಳ ಸಮಯದ ನಂತರ ಈ ಟೂರ್ನಿಯಲ್ಲಿ ಆಡಿದರು. ಈ ಇಬ್ಬರೂ ಸ್ಟಾರ್ ಆಟಗಾರರು ಮೊದಲ ಸುತ್ತಿನಲ್ಲಿ ತಮ್ಮ ರಾಜ್ಯ ತಂಡಗಳಾದ ಮುಂಬೈ ಮತ್ತು ದೆಹಲಿ ಪರ ಅದ್ಭುತ ಪ್ರದರ್ಶನ ನೀಡಿದರು. ಮುಂಬೈ ಪರ ಕಣಕ್ಕಿಳಿದಿದ್ದ ರೋಹಿತ್ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ 155 ರನ್‌ಗಳ ಇನ್ನಿಂಗ್ಸ್ ಆಡಿದರೆ, ಮತ್ತೊಂದೆಡೆ ಡೆಲ್ಲಿ ಪರ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಆಂಧ್ರಪ್ರದೇಶ ವಿರುದ್ಧ ಶತಕ ಸಿಡಿಸಿ ಮಿಂಚಿದರು. ಇವರಿಬ್ಬರ ಈ ಇನ್ನಿಂಗ್ಸ್​ನಿಂದಾಗಿ ಇಬ್ಬರ ತಂಡಗಳು ಸುಲಭ ಗೆಲುವು ದಾಖಲಿಸಿದವು.

ಬಿಸಿಸಿಐ ಮೇಲೆ ಅಭಿಮಾನಿಗಳ ಕೋಪ

ದೇಶಿ ಕ್ರಿಕೆಟ್‌ನ ಇವರಿಬ್ಬರ ಆರ್ಭಟ ಅಭಿಮಾನಿಗಳಿಗೆ ಸಂತಸ ತಂದಿತ್ತಾದರೂ, ಬಿಸಿಸಿಐ ಮಾಡಿದ ಕಳಪೆ ಸಿದ್ಧತೆಗಳು ಅಭಿಮಾನಿಗಳನ್ನು ಕೆರಳಿಸಿದೆ. ವಾಸ್ತವವಾಗಿ ರೋಹಿತ್ ಮತ್ತು ವಿರಾಟ್ ಆಡಿದ ಪಂದ್ಯಗಳ ನೇರ ಪ್ರಸಾರ ಮಾಡಲಾಗಲಿಲ್ಲ ಹಾಗೆಯೇ ಆನ್‌ಲೈನ್ ಸ್ಟ್ರೀಮಿಂಗ್ ಕೂಡ ಇರಲಿಲ್ಲ. ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಆಯ್ದ ಪಂದ್ಯಗಳನ್ನು ಮಾತ್ರ ಪ್ರಸಾರ ಮಾಡಲಾಯಿತು, ಆದರೆ ಸ್ಟಾರ್ ಆಟಗಾರರನ್ನು ಒಳಗೊಂಡ ಪಂದ್ಯಗಳನ್ನು ನಿರ್ಲಕ್ಷಿಸಲಾಯಿತು. ಇದಲ್ಲದೆ, ವಿರಾಟ್ ಕೊಹ್ಲಿ ಆಡಿದ ಪಂದ್ಯಕ್ಕೆ ಅಭಿಮಾನಿಗಳಿಗೆ ಎಂಟ್ರಿ ಇರಲಿಲ್ಲ. ಇತ್ತ ಜೈಪುರದಲ್ಲಿ ರೋಹಿತ್ ಆಡಿದ ಪಂದ್ಯಕ್ಕೆ ಅಭಿಮಾನಿಗಳಿಗೆ ಪ್ರವೇಶವಿತ್ತಾದರೂ, ಗ್ಯಾಲರಿಯಲ್ಲಿ ದೂರದಲ್ಲಿ ಕುಳಿತಿದ್ದ ಅಭಿಮಾನಿಗಳು ಸ್ಕೋರ್ ನವೀಕರಣಗಳನ್ನು ಮಾತ್ರ ಅವಲಂಬಿಸಿದ್ದರು.

ಬಿಸಿಸಿಐನ ಈ ಕಳಪೆ ವ್ಯವಸ್ಥೆಗೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದ್ದರೂ, ಬಿಸಿಸಿಐನ ಇಂತಹ ನಿರ್ಲಕ್ಷ್ಯಕ್ಕಾಗಿ ಅನೇಕರು ಟೀಕಿಸಿದ್ದಾರೆ. ಸ್ಟಾರ್ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸುವಾಗ, ಅವರ ಪಂದ್ಯಗಳನ್ನು ಪ್ರಸಾರ ಮಾಡುವುದು ಮಂಡಳಿಯ ಜವಾಬ್ದಾರಿಯಾಗಿದೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ಇದು ಕ್ರಿಕೆಟ್ ಅನ್ನು ಉತ್ತೇಜಿಸಲು ಮತ್ತು ಯುವ ಆಟಗಾರರಿಗೆ ಸ್ಫೂರ್ತಿ ನೀಡಲು ಒಂದು ಅವಕಾಶವಾಗಿತ್ತು. ಆದರೆ ಬಿಸಿಸಿಐನ ನಿರ್ಲಕ್ಷ ಅಭಿಮಾನಿಗಳು ಕೆರಳುವಂತೆ ಮಾಡಿದೆ.

Vijay Hazare Trophy: 412 ರನ್ ಬೆನ್ನಟ್ಟಿ ಚಾಂಪಿಯನ್ ತಂಡಕ್ಕೆ ಮಣ್ಣು ಮುಕ್ಕಿಸಿದ ಕರ್ನಾಟಕ

ವರ್ಷಗಳ ಬಳಿಕ ದೇಶಿ ಕ್ರಿಕೆಟ್​ನಲ್ಲಿ ರೋಹಿತ್, ಕೊಹ್ಲಿ

ವಾಸ್ತವವಾಗಿ ಬಿಸಿಸಿಐ,ಕೇಂದ್ರೀಯ ಒಪ್ಪಂದಕ್ಕೆ ಒಳಪಡುವ ಪ್ರತಿಯೊಬ್ಬ ಆಟಗಾರರು ದೇಶೀಯ ಪಂದ್ಯಗಳಲ್ಲಿ ಆಡುವುದನ್ನು ಕಡ್ಡಾಯಗೊಳಿಸಿದೆ. ಇದರ ಪರಿಣಾಮವಾಗಿ ರೋಹಿತ್ ಮತ್ತು ವಿರಾಟ್ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಇಬ್ಬರೂ ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಕದಿನ ಸ್ವರೂಪದಲ್ಲಿ ಮಾತ್ರ ಆಡುತ್ತಿದ್ದಾರೆ. ಆದ್ದರಿಂದ ಈ ಪಂದ್ಯಾವಳಿ ಅವರಿಗೆ ಪಂದ್ಯ ಅಭ್ಯಾಸವನ್ನು ಪಡೆಯಲು ಅತ್ಯುತ್ತಮ ಅವಕಾಶವಾಗಿತ್ತು. ಜೈಪುರದಲ್ಲಿ ಮುಂಬೈ ಪರ ಆಡಿದ ರೋಹಿತ್ ಆಕ್ರಮಣಕಾರಿ ಶೈಲಿಯನ್ನು ಪ್ರದರ್ಶಿಸಿದರೆ, ಬೆಂಗಳೂರಿನಲ್ಲಿ ದೆಹಲಿ ಪರ ಆಡಿದ್ದ ವಿರಾಟ್ ಸಂಯಮ ಮತ್ತು ಆಕ್ರಮಣಶೀಲತೆಯ ಆಟ ಪ್ರದರ್ಶಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರ ಅಖಾಡಕ್ಕೆ ‘ಮಾರ್ಕ್’, ‘45’: ಇನ್ನೂ ಕಡಿಮೆ ಆಗುತ್ತಾ ‘ದಿ ಡೆವಿಲ್’ ಕಲೆಕ್ಷನ್? – Kannada News | Mark 45 Vrusshabha and other movie releasing on 25 December 2025

2025ರ ವರ್ಷ ಮುಗಿಯುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳಾದ ‘45’ ಮತ್ತು ‘ಮಾರ್ಕ್’ ಸಿನಿಮಾ (Mark Movie) ಡಿಸೆಂಬರ್ 25ರಂದು ಬಿಡುಗಡೆ ಆಗುತ್ತಿದೆ. ಈಗಾಗಲೇ ‘ದಿ ಡೆವಿಲ್’ (The Devil) ಸಿನಿಮಾ ಡಿಸೆಂಬರ್ 11ರಂದು ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಸ್ಟಾರ್ ನಟರ ಸಿನಿಮಾಗಳೆಲ್ಲ ಒಂದೇ ತಿಂಗಳಲ್ಲಿ ರಿಲೀಸ್ ಆಗಿದ್ದರಿಂದ ಸಹಜವಾಗಿಯೇ ಬಾಕ್ಸ್ ಆಫೀಸ್​ನಲ್ಲಿ ಕ್ಲ್ಯಾಶ್ ಉಂಟಾಗಿದೆ. ಕಿಚ್ಚ ಸುದೀಪ್, ಉಪೇಂದ್ರ, ರಾಜ್ ಬಿ. ಶೆಟ್ಟಿ, ಶಿವರಾಜ್​​ಕುಮಾರ್ ಅಭಿಮಾನಿಗಳಿಗೆ ‘45’ (45 Kannada Movie) ಮತ್ತು ‘ಮಾರ್ಕ್’ ಸಿನಿಮಾಗಳಿಂದ ಮನರಂಜನೆ ಸಿಗಲಿದೆ. ಈ ಎರಡು ಸಿನಿಮಾಗಳ ನಡುವೆ ಪೈಪೋಟಿ ಇದೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್​ ಧರಿಸಿ ‘45’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್​​ಕುಮಾರ್, ರಾಜ್ ಬಿ. ಶೆಟ್ಟಿ ಮತ್ತು ಉಪೇಂದ್ರ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಒಂದು ಫ್ಯಾಂಟಸಿ ಕಥೆಯನ್ನು ಈ ಸಿನಿಮಾದಲ್ಲಿ ಅರ್ಜುನ್ ಜನ್ಯ ಅವರು ಹೇಳಿದ್ದಾರೆ. ಈಗಾಗಲೇ ಪ್ರೀಮಿಯರ್ ಶೋಗಳಿಂದ ಈ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ರಮೇಶ್ ರೆಡ್ಡಿ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

‘ಮಾರ್ಕ್’ ಸಿನಿಮಾಗೆ ಕಾಲಿವುಡ್ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ಮ್ಯಾಕ್ಸ್’ ಸಿನಿಮಾದಿಂದ ಯಶಸ್ಸು ಕಂಡ ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ ‘ಮಾರ್ಕ್’ ಸಿನಿಮಾದಲ್ಲೂ ಮುಂದುವರಿದಿದೆ. ಡಿಸೆಂಬರ್ 25ರಂದು ಮುಂಜಾನೆ 6.30ಕ್ಕೆ ಮೊದಲ ಶೋ ಆರಂಭ ಆಗುತ್ತಿದೆ. ಸಿನಿಮಾ ಹೇಗಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಡಿಸೆಂಬರ್ 25ರಂದು ಕ್ರಿಸ್ಮಸ್ ರಜೆ ಇದೆ. ಅದರಿಂದ ಹೆಚ್ಚಿನ ಸಂಖೆಯ ಪ್ರೇಕ್ಷಕರು ಚಿತ್ರಮಂದಿರಗಳತ್ತ ಹೆಜ್ಜೆ ಹಾಕುವ ನಿರೀಕ್ಷೆ ಇದೆ. ಆ ಬಳಿಕ ವೀಕೆಂಡ್ ಬರಲಿದೆ. ಇದು ಕೂಡ ಈ ಸಿನಿಮಾಗಳಿಗೆ ಪ್ಲಸ್ ಆಗಲಿದೆ. ‘ಮಾರ್ಕ್’ ಮತ್ತು ‘45’ ಸಿನಿಮಾಗಳು ಬೇರೆ ಬೇರೆ ಶೈಲಿಗೆ ಸೇರಿದ ಚಿತ್ರಗಳಾದ್ದರಿಂದ ಪ್ರೇಕ್ಷಕರು ಎರಡೂ ಸಿನಿಮಾ ನೋಡಿ ಎಂಜಾಯ್ ಮಾಡಲಿದ್ದಾರೆ.

ಇದನ್ನೂ ಓದಿ: ಸುದೀಪ್ ‘ಮಾರ್ಕ್’ ಸಿನಿಮಾ ತುಳಿಯಲು ‘ಟಿವಿ9 ಕನ್ನಡ’ ಹೆಸರು ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳು

ದರ್ಶನ್ ಅವರ ‘ದಿ ಡೆವಿಲ್’ ಸಿನಿಮಾ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್ ಮಾಡಿಲ್ಲ. ಮೊದಲ ದಿನ 10 ಕೋಟಿ ರೂಪಾಯಿಯಿಂದ ಆರಂಭ ಆದ ಈ ಸಿನಿಮಾದ ಕಲೆಕ್ಷನ್ ಈಗಾಗಲೇ ಲಕ್ಷಗಳಿಗೆ ಕುಸಿದಿದೆ. ‘45’ ಮತ್ತು ‘ಮಾರ್ಕ್’ ಸಿನಿಮಾದ ಪೈಪೋಟಿಯಿಂದಾಗಿ ‘ದಿ ಡೆವಿಲ್’ ಕಲೆಕ್ಷನ್ ಇನ್ನಷ್ಟು ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಅತ್ತ, ‘ಧುರಂಧರ್’ ಸಿನಿಮಾ ಕೂಡ ಕಠಿಣ ಪೈಪೋಟಿ ನೀಡುತ್ತಿದೆ.

ಮಲಯಾಳಂ ಚಿತ್ರರಂಗದಿಂದ ಮೋಹನ್​ಲಾಲ್ ನಟನೆ ‘ವೃಷಭ’ ಸಿನಿಮಾ ಇದೇ ದಿನ ಬಿಡುಗಡೆ ಆಗುತ್ತಿದೆ. ರಾಗಿಣಿ ದ್ವಿವೇದಿ, ಸಮರ್ಜಿತ್ ಲಂಕೇಶ್ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಸಿನಿಮಾ ಕೂಡ ಡಿ.25ಕ್ಕೆ ತೆರೆಕಾಣುತ್ತಿದೆ. ಈ ಎಲ್ಲ ಸಿನಿಮಾಗಳ ನಡುವೆ ಪೈಪೋಟಿ ಏರ್ಪಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂಗನ ಕಾಯಿಲೆ ಭೀತಿ: ಶಿವಮೊಗ್ಗದ ಬಳಿಕ, ಶಿರಸಿಯಲ್ಲೂ ಲ್ಯಾಬ್​​ ಆರಂಭಕ್ಕೆ ನಿರ್ಧಾರ – Kannada News | New KFD Lab in Sirsi, Karnataka Boosts Fight Against Monkey Fever

ಬೆಂಗಳೂರು, ಡಿಸೆಂಬರ್​​ 24: ಮಂಗನ ಕಾಯಿಲೆ ಭೀತಿ ಹಿನ್ನೆಲೆ ರಾಜ್ಯದಲ್ಲಿ ಶೀಘ್ರದಲ್ಲೇ ಮತ್ತೊಂದು KFD ಪರೀಕ್ಷಾ ಲ್ಯಾಬ್ ತೆರೆಯಲು ನಿರ್ಧರಿಸಲಾಗಿದೆ. ಶಿವಮೊಗ್ಗದಲ್ಲಿ ಒಂದು ಲ್ಯಾಬ್ ಕಾರ್ಯಾಚರಣೆ ಚಾಲ್ತಿಯಲ್ಲಿರುವ ನಡುವೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮತ್ತೊಂದು ಪರೀಕ್ಷಾ ಕೇಂದ್ರ ತೆರೆಯಲು ತಯಾರಿ ನಡೆದಿದೆ. ಮಂಗನ ಕಾಯಿಲೆಯನ್ನು ಗುರುತಿಸಲು ಹಾಗೂ ಸಾವಿನ ಪ್ರಮಾಣ ಶೂನ್ಯಕ್ಕೆ ತರಲು ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

13 ಜನರಲ್ಲಿ ಮಂಗನ ಕಾಯಿಲೆ ಪತ್ತೆ

ಪ್ರತಿವರ್ಷವೂ ಅಕ್ಟೋಬರ್​​ನಿಂದ ಜೂನ್​ವರೆಗೆ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಮಂಗನ ಕಾಯಿಲೆ ಪ್ರಕರಣಗಳು ಕಂಡುಬರುತ್ತವೆ. ಈ ಹಿನ್ನಲೆ ಈಗಾಗಲೇ ಆರೋಗ್ಯ ಇಲಾಖೆಯಿಂದ ಹಲವು ಟೆಸ್ಟ್​ಗಳನ್ನು ನಡೆಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 1,163, ಚಿಕ್ಕಮಗಳೂರು 124, ಉಡುಪಿಯಲ್ಲಿ 12 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 368 ಜನರಿಗೆ ಪರೀಕ್ಷೆ ನಡೆದಿದೆ. ಈ ಪೈಕಿ 13 ಜನರಲ್ಲಿ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಮತ್ತೆ ವಕ್ಕರಿಸಿದ ಮಂಗನ ಕಾಯಿಲೆ; ಕಾಡಿನಂಚಿನ ಜನರಲ್ಲಿ ಆತಂಕ

ಕಳೆದ ವರ್ಷ ಮಂಗನ ಕಾಯಿಲೆಯಿಂದ ಸುಮಾರು 8 ಜನ ಸಾವನ್ನಪ್ಪಿದ್ದರು. ಹೀಗಾಗಿ ಈ ವರ್ಷ ಮುಂಜಾಗೃತೆ ವಹಿಸಿದ್ದೇವೆ. ಇದರಿಂದ ಒಬ್ಬರೂ ಮೃತಪಡಬಾರದು ಎಂಬುದು ನಮ್ಮ ಉದ್ದೇಶವಾಗಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸಲಾಗಿದೆ ಎಂದು ಸಚಿವ ದಿನೇಶ್​​ ಗುಂಡೂರಾವ್​​ ತಿಳಿಸಿದ್ದಾರೆ. ಇದುವರೆಗೆ ಸತ್ತ 87 ಮಂಗಗಳ ಪರೀಕ್ಷೆ ನಡೆಸಲಾಗಿದ್ದು, ಆ ಪೈಕಿ ಯಾವುದರಲ್ಲೂ ಕಾಯಿಲೆ ಪಾಸಿಟಿವ್​​ ಬಂದಿಲ್ಲ. ಅಕ್ಟೋಬರ್, ನವೆಂಬರ್, ಡಿಸೆಂಬರ್​​ನಲ್ಲಿಯವರೆಗೆ ಯಾರೊಬ್ಬರ ಸಾವು ಆಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿಯೇ 12 ಜನರಲ್ಲಿ ಈ ರೋಗ ಕಂಡುಬಂದಿದೆ. ಆ ಪೈಕಿ ಒಂದೇ ಗ್ರಾಮದ 10 ಜನರಿಗೆ ಮಂಗನ ಕಾಯಿಲೆ ವಕ್ಕರಿಸಿರೋದು ಗೊತ್ತಾಗಿದೆ. ಉಳಿದಂತೆ ಚಿಕ್ಕಮಗಳೂರಿನ ಒಬ್ಬರಲ್ಲಿ ಕಾಯಿಲೆ ಪತ್ತೆಯಾಗಿದೆ. ಈ ರೋಗದಿಂದ ಬಳಲುತ್ತಿರುವ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಲಾಗುತ್ತೆ. ವ್ಯಾಕ್ಸಿನ್ ಬಗ್ಗೆ ಕೇಂದ್ರ ಸರ್ಕಾರದ ಜೊತೆಗೆ ಸಂಪರ್ಕದಲ್ಲಿದ್ದು, ಹೊಸ ವ್ಯಾಕ್ಸಿನ್​​ನ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಮುಂದಿನ ವರ್ಷದ ಒಳಗೆ ಅದು ಬಳಕೆಗೆ ಲಭ್ಯ ಆಗಬಹುದು ಎಂದು ಸಚಿವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ನಿಂಬೆ ನೀರು ಕುಡಿಯುವುದು ಒಳ್ಳೆಯದೇ… ಇಲ್ಲಿದೆ ತಜ್ಞರ ಅಭಿಪ್ರಾಯ – Kannada News | Can Lemon Water Control High Blood Pressure? Expert Weighs In

ಅಧಿಕ ರಕ್ತದೊತ್ತಡ (High Blood Pressure) ಸಾಮಾನ್ಯ ಸಮಸ್ಯೆ ಅಲ್ಲವೇ ಅಲ್ಲ. ದೇಹದಲ್ಲಿ ಸದ್ದಿಲ್ಲದೆ ಹೆಚ್ಚಾಗಿ ಬಳಿಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಕ್ರಮೇಣ ಹೃದಯ, ಮೂತ್ರಪಿಂಡ ಮತ್ತು ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಇದಲ್ಲದೆ, ಅಧಿಕ ರಕ್ತದೊತ್ತಡವು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ರಕ್ತದೊತ್ತಡವನ್ನು ನಿಯಂತ್ರಿಸಲು ಕೆಲವರು ನಿಂಬೆ ನೀರು (Lemon Water) ಕುಡಿಯುತ್ತಾರೆ. ಅದರಲ್ಲಿಯೂ ನಿಂಬೆಹಣ್ಣು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ, ಇದು ಆರೋಗ್ಯಕ್ಕೂ ಒಳ್ಳೆಯದು. ಆದರೆ ಇದು ನಿಜವಾಗಿಯೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದೇ… ಈ ಬಗ್ಗೆ ಆರೋಗ್ಯ ತಜ್ಞರ ಅಭಿಪ್ರಾಯವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿಂಬೆ ನೀರು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆಯೇ?

ಎನ್ ಸಿ ಬಿ ಐ ಅಧ್ಯಯನಗಳ ಪ್ರಕಾರ, ನಿಂಬೆ ನೀರು ಅದರ ಸಿಟ್ರಿಕ್ ಆಮ್ಲ ಮತ್ತು ವಿಟಮಿನ್ ಸಿ ಅಂಶದಿಂದಾಗಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇವು ರಕ್ತನಾಳಗಳನ್ನು ಸಡಿಲಗೊಳಿಸುತ್ತವೆ ಮತ್ತು ದೇಹದಲ್ಲಿ ಜಲಸಂಚಯನವನ್ನು ಹೆಚ್ಚಿಸುತ್ತವೆ. ಆದರೆ ಇದು ಚಿಕಿತ್ಸೆಯಲ್ಲ, ಕೇವಲ ಪೋಷಕ ಆಹಾರ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಏಷ್ಯನ್ ಜರ್ನಲ್ ಆಫ್ ನರ್ಸಿಂಗ್ ಎಜುಕೇಶನ್ ಅಂಡ್ ರಿಸರ್ಚ್ – ನ್ಯಾರಿಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ಲೋ ಬಿಪಿ ಹೈ ಬಿಪಿಯಷ್ಟೇ ಅಪಾಯಕಾರಿ! ಇದನ್ನು ನಿಯಂತ್ರಿಸಲು ಈ ಸುಲಭ ಆಹಾರಗಳನ್ನು ಪ್ರಯತ್ನಿಸಿ ನೋಡಿ

ನಿಂಬೆ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು:

ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ: ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಸಿಟ್ರಸ್ ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತವೆ. ಇವು ಉತ್ಕರ್ಷಣ ನಿರೋಧಕ ಮತ್ತು ನಾಳೀಯ ಆರೋಗ್ಯಕ್ಕೆ ಸಂಬಂಧಿಸಿದ ಸಂಯುಕ್ತಗಳಾಗಿವೆ. ಅಷ್ಟೇ ಅಲ್ಲ, ರಕ್ತನಾಳಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಹಾಗಾಗಿ ರಕ್ತ ಪರಿಚಲನೆಗೆ ಅಗತ್ಯವಾಗಿರುತ್ತದೆ.

ಜಲಸಂಚಯನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ: ನಿಂಬೆ ನೀರು ದೇಹದಲ್ಲಿ ಜಲಸಂಚಯನವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡ ಇರುವವರಿಗೆ ಇದು ಬಹಳ ಮುಖ್ಯ. ಅಷ್ಟೇ ಅಲ್ಲ, ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಆದ್ದರಿಂದ, ನಿಮಗೆ ಅಧಿಕ ರಕ್ತದೊತ್ತಡವಿದ್ದರೂ ಸಹ, ನೀವು ಈ ಪಾನೀಯವನ್ನು ನಿಯಮಿತವಾಗಿ ಕುಡಿಯಬಹುದು. ಆದರೆ, ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಬಹಳ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫ್ಯಾನ್ಸ್ ವಾರ್​​ ಬಗ್ಗೆ ನಟ ವಿನೋದ್ ರಾಜ್ ಮಾತು: ವಿಡಿಯೋ – Kannada News | Vinod Raj talks about ongoing Fans war

ಕನ್ನಡ ಚಿತ್ರರಂಗದಲ್ಲಿ (Sandalwood) ಪ್ರಸ್ತುತ ಫ್ಯಾನ್ಸ್ ವಾರ್ ಚರ್ಚೆ ಜೋರಾಗಿ ನಡೆಯುತ್ತಿದೆ. ‘ಮಾರ್ಕ್’ ಸಿನಿಮಾ ಇವೆಂಟ್​​ನಲ್ಲಿ ಸುದೀಪ್ ಅವರು ಪೈರಸಿ ಬಗ್ಗೆ, ಪೈರಸಿ ಮಾಡುವವರ ಬಗ್ಗೆ ಆಡಿದ ಮಾತುಗಳು ಫ್ಯಾನ್ಸ್ ವಾರ್​ಗೆ ನಾಂದಿ ಹಾಡಿದೆ. ದರ್ಶನ್ ಅಭಿಮಾನಿಗಳು ಸುದೀಪ್ ಮತ್ತು ಸುದೀಪ್ ಅಭಿಮಾನಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಮರ ಶುರು ಮಾಡಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಸಹ ದಾವಣಗೆರೆಯಲ್ಲಿ ಆಡಿರುವ ಮಾತುಗಳು ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಿವೆ. ಚಿತ್ರರಂಗದ ಹಿರಿಯ ನಟರಲ್ಲಿ ಒಬ್ಬರಾಗಿರುವ ವಿನೋದ್ ರಾಜ್ ಅವರು ಇದೀಗ ಪ್ರಸ್ತುತ ಚಾಲ್ತಿಯಲ್ಲಿರುವ ಫ್ಯಾನ್ಸ್ ವಾರ್​​ ಬಗ್ಗೆ ಮಾತನಾಡಿದ್ದಾರೆ, ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಪೋಷಕರೇ ಗಮನಿಸಿ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಇರಲಿ ಎಚ್ಚರ; ಕಾರಣ ಇಲ್ಲಿದೆ

ಬೆಂಗಳೂರು, ಡಿಸೆಂಬರ್​​ 24: ನಗರದಲ್ಲಿ 50ಕ್ಕೂ ಹೆಚ್ಚು ಅನಧಿಕೃತ ಶಾಲೆಗಳು ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಶಿಕ್ಷಣ ಸಂಸ್ಥೆಗಳು  ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದು, ಅನಧಿಕೃತವಾಗಿ ಬೋಧನೆ ನಡೆಸುತ್ತಿವೆ. ಇಂತಹ ಶಾಲೆಗಳ ಕುರಿತು ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಡಿಡಿಪಿಐ ಮತ್ತು ಬಿಇಒಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.  ಹೆಣ್ಣೂರು ರಸ್ತೆಯ ಯುರೋಸ್ಕೂಲ್, ಕಿಡ್ಸ್ ಕ್ಯಾಸಲ್ ಪೂರ್ವ ಪ್ರಾಥಮಿಕ ಶಾಲೆ ಸಿಂಗಸಂದ್ರ, ಯರೋ ಸ್ಕೂಲ್ ತಿಪ್ಪಸಂದ್ರ ಗುಂಜೂರು, ಗರೇಭಾವಿಪಾಳ್ಯದ ಅಪೋಲೊ ಕಿಡ್ಸ್ ಪೂರ್ವ ಪ್ರಾಥಮಿಕ ಶಾಲೆ ಸೇರಿದಂತೆ ಹಲವು ನರ್ಸರಿ ಶಾಲೆಗಳಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version