ಕೇರಳ: ಕುಡಿದ ಮತ್ತಿನಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಆಟೋ ನಿಲ್ಲಿಸಿ ಹೋದ ಚಾಲಕ, ವಂದೇ ಭಾರತ್ ರೈಲು ಡಿಕ್ಕಿ – Kannada News | Drunk Auto Driver Leaves Vehicle on Tracks, Vande Bharat Train Collides in Kerala
ತಿರುವನಂತಪುರ, ಡಿಸೆಂಬರ್ 24: ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಆಟೋವನ್ನು ರೈಲ್ವೆ ಹಳಿ ಮೇಲೆ ನಿಲ್ಲಿಸಿದ್ದ ಪರಿಣಾಮ ವಂದೇ ಭಾರತ್(Vande Bharat) ರೈಲು ಡಿಕ್ಕಿ ಹೊಡೆದಿರುವ ಘಟನೆ ಕೇರಳದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಕೇರಳದ ತಿರುವನಂತಪುರಂ ಜಿಲ್ಲೆಯ ಅಕತುಮುರಿ ನಿಲ್ದಾಣದ ಬಳಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಲೋಕೊ ಪೈಲಟ್ ರೈಲ್ವೆ ಹಳಿ ಮೇಲೆ ಆಟೋ ನಿಂತಿರುವುದನ್ನು ಕಂಡು ಬ್ರೇಕ್ ಹಾಕಿದ್ದಾರೆ. ಆದರೂ ರೈಲಿನ ಮುಂಭಾಗ ಆಟೋಗೆ ತಾಗಿದೆ. ಕಾಸರಗೋಡಿನಿಂದ ತಿರುವನಂತಪುರಕ್ಕೆ ಚಲಿಸುತ್ತಿದ್ದ ರೈಲು ರಾತ್ರಿ 10.10 ರ…