Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 11ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ವೃತ್ತಿ ಕ್ಷೇತ್ರದಲ್ಲಿ ಮುಂದಿನ ಯೋಜನೆಗಳ ಬಗ್ಗೆ ಗಂಭೀರ ಚಿಂತನೆ ನಡೆಸುವಿರಿ. ಉದ್ಯೋಗದ ನಿಮಿತ್ತ ಪ್ರಯಾಣದ ಯೋಗವಿದೆ. ನಿಮ್ಮ ಮಾತಿನ ಪ್ರಭಾವದಿಂದ ಅಧಿಕಾರಿ ವರ್ಗದವರ ಮನಸ್ಸು ಗೆಲ್ಲುವಿರಿ. ಸರ್ಕಾರಿ ಕೆಲಸಗಳಲ್ಲಿ ಇದ್ದ ಅಡೆತಡೆಗಳು ದೂರವಾಗಲಿವೆ. ಇದಕ್ಕೆ ಪ್ರಭಾವಿಗಳ ಬೆಂಬಲ ನಿಮಗೆ ದೊರೆಯಲಿದೆ. ಸಂಗಾತಿಯ ಜೊತೆಗೂಡಿ ಭವಿಷ್ಯದ ಆರ್ಥಿಕ ಹೂಡಿಕೆಗಳ ಬಗ್ಗೆ ಚರ್ಚಿಸಲು ಇದು ಸೂಕ್ತ ಸಮಯ. ನಾಯಕತ್ವದ ಗುಣಕ್ಕೆ ಮನ್ನಣೆ ಸಿಗಲಿದೆ….

Read More

ವೈದ್ಯನ ಮನೆಯಲ್ಲಿ ಅಪರೂಪದ ವಿದೇಶಿ ಪ್ರಾಣಿಗಳು ಪತ್ತೆ! 7 ಮಂದಿ ಅಂದರ್ – Kannada News

ವೈದ್ಯನ ಮನೆಯಲ್ಲಿ ಅಪರೂಪದ ವಿದೇಶಿ ಪ್ರಾಣಿಗಳು ಪತ್ತೆ!Image Credit source: cbc ಬೆಂಗಳೂರು, ಜೂನ್ 05: ನಗರದ ಅಕ್ರಮವಾಗಿ ಮತ್ತು ಯಾವುದೇ ಪರವಾನಗಿ ಇಲ್ಲದೆ ವಿದೇಶಿ ಹಾಗೂ ಅತ್ಯಂತ ಅಪರೂಪದ ವನ್ಯಜೀವಿಗಳನ್ನು ಮನೆಯಲ್ಲಿಯೇ ಸಾಕಿದ್ದ ವೈದ್ಯರೊಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ವೈದ್ಯನನ್ನು ಡಾ ರಾಜ್ ಕಮಲ್ ಎಂದು ಗುರುತಿಸಲಾಗಿದ್ದು, ಆತನ ಮನೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಎಕ್ಸೋಟಿಕ್ (Exotic) ಪ್ರಾಣಿ ಮತ್ತು ಪಕ್ಷಿಗಳನ್ನು ರಕ್ಷಿಸಲಾಗಿದೆ. ರಾಜ್ ಸೇರಿದಂತೆ ಇನ್ನೂ 6 ಮಂದಿಯನ್ನು ಈ ಕೇಸ್​ನಲ್ಲಿ…

Read More

ರಸ್ತೆ ಮಧ್ಯೆಯೇ ಕೆಟ್ಟು ನಿಲ್ತಿವೆ ಕೋಟಿ ಕೋಟಿ ಕೊಟ್ಟು ತಂದ ಬಸ್​​ಗಳು: ಚಿಗರಿ ನಿರ್ವಹಣೆಯೇ ಈಗ ಸವಾಲು! – Kannada News | Hubballi Dharwad BRTS Chigari Buses Face Maintenance Crisis, NWKRTC Struggles

ಹುಬ್ಬಳ್ಳಿ, ಜನವರಿ 14: ಹುಬ್ಬಳ್ಳಿ-ಧಾರವಾಡದ ನಡುವೆ ತ್ವರಿತ ಸಂಪರ್ಕ ಒದಗಿಸಯವ ಉದ್ದೇಶದಿಂದ ಆರಂಭವಾಗಿರುವ ಐಷಾರಾಮಿ ಚಿಗರಿ ಬಸ್​​ಗಳ ನಿರ್ವಹಣೆಯೇ ಈಗ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ. ಮಾರ್ಗ ಮಧ್ಯೆಯೇ ಬಸ್​​ಗಳು ಕೆಟ್ಟು ನಿಲ್ಲುತ್ತಿರೋದು ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿರುವ ಜೊತೆಗೆ ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೂ ತಲೆನೋವು ತಂದಿಡುತ್ತಿದೆ. ಕೋಟಿ ಕೋಟಿ ಹಣ ಕೊಟ್ಟು ಖರೀದಿಸಿದ್ದ ಐಷಾರಾಮಿ ಬಸ್​​ಗಳು ಡಕೋಟಾ ಬಸ್​ಗಳಾಗಿ ಮಾರ್ಪಡುತ್ತಿದ್ದು, ಈ ಬಗ್ಗೆ ಅನೇಕ ಬಾರಿ ಸರ್ಕಾರಕ್ಕೆ ಮತ್ತು BRTS…

Read More

ಜಮ್ಮು ಕಾಶ್ಮೀರದ ಎಲ್​ಒಸಿ ಬಳಿ ಆಕಸ್ಮಿಕ ಗ್ರೆನೇಡ್ ಸ್ಫೋಟ; ನಾಲ್ವರು ಭಾರತೀಯ ಯೋಧರಿಗೆ ಗಾಯ – Kannada News | 4 Soldiers Injured In Blast Near LoC in Jammu and Kashmir Rajouri

ಶ್ರೀನಗರ, ಜೂನ್ 16: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (LoC) ಮುಂಚೂಣಿ ಪ್ರದೇಶದಲ್ಲಿ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡು ಭಾರತೀಯ ಸೇನೆಯ ನಾಲ್ವರು ಸೈನಿಕರು ಗಾಯಗೊಂಡಿರುವ ಘಟನೆ ನಡೆದಿದೆ. ರಕ್ಷಣಾ ಇಲಾಖೆಯ ಪ್ರಕಟಣೆಯ ಪ್ರಕಾರ, ಯೋಧರು ಗಡಿ ಭಾಗದಲ್ಲಿ ನಿಯಮಿತ ಗಸ್ತು ಕಾರ್ಯದಲ್ಲಿ ತೊಡಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನ ಗಡಿ ಭಾಗದಲ್ಲಿ ಯೋಧರ ತಂಡವೊಂದು ಕರ್ತವ್ಯದಲ್ಲಿದ್ದಾಗ, ಅವರ ಬಳಿಯಿದ್ದ ಗ್ರೆನೇಡ್‌ವೊಂದು ಆಕಸ್ಮಿಕವಾಗಿ ಸ್ಫೋಟಗೊಂಡಿದೆ. ಈ ಸ್ಫೋಟದ ತೀವ್ರತೆಗೆ ಸ್ಥಳದಲ್ಲಿದ್ದ ನಾಲ್ವರು…

Read More

ಯಾವುದೇ ನಿರ್ದಿಷ್ಟ ಗಡುವಿಲ್ಲ, ಉಕ್ರೇನ್ ಯುದ್ಧ ಕೊನೆಗೊಳಿಸುವತ್ತ ಅಷ್ಟೇ ಗಮನ: ಟ್ರಂಪ್ – Kannada News | Trump Says No Fixed Timeline, Emphasises Ending Ukraine Conflict

ವಾಷಿಂಗ್ಟನ್, ಡಿಸೆಂಬರ್ 29: ಉಕ್ರೇನ್(Ukraine) ಯುದ್ಧ ಕೊನೆಗೊಳಿಸುವ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಜತೆ ಭಾನುವಾರ ಮಾತುಕತೆ ನಡೆಸಿದರು. ಈ ಮಾತುಕತೆ ಬಳಿಕ ಡೊನಾಲ್ಡ್​ ಟ್ರಂಪ್ ಮಾತನಾಡಿ, ಯುದ್ಧ ನಿಲ್ಲಿಸಲು ಯಾವುದೇ ನಿರ್ದಿಷ್ಟ ಗಡುವಿಲ್ಲ, ಉಕ್ರೇನ್ ಯುದ್ಧ ಕೊನೆಗೊಳಿಸುವತ್ತ ಗಮನ ಎಂದು ಹೇಳಿದ್ದಾರೆ. ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸುವ ಕುರಿತು ನಿರ್ಣಾಯಕ ಮಾತುಕತೆಗಾಗಿ ಅಮೆರಿಕದ ಡೊನಾಲ್ಡ್ ಟ್ರಂಪ್ ಭಾನುವಾರ ತಮ್ಮ ಫ್ಲೋರಿಡಾ ಎಸ್ಟೇಟ್‌ಗೆ ಉಕ್ರೇನ್‌ನ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಬರಮಾಡಿಕೊಂಡಿದ್ದರು. ಉಕ್ರೇನ್…

Read More

Karnataka Weather: ಉತ್ತರ ಒಳನಾಡಿನಲ್ಲಿ ಕೆಂಡದಂಥಾ ಬಿಸಿಲು, ದಕ್ಷಿಣದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಬೆಂಗಳೂರು, ಏಪ್ರಿಲ್ 10: ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಇತ್ತೀಚಿನ ಮುನ್ಸೂಚನೆಯಂತೆ, ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಉಷ್ಣ ಅಲೆ (Heat Wave) ಮುಂದುವರಿಯಲಿದೆ. ವಿಜಯನಗರ, ಕಲಬುರಗಿ, ಯಾದಗಿರಿ ಮತ್ತು ಹಾವೇರಿಯಲ್ಲಿಯೂ ಬಿಸಿಲಿನ ಝಳ ಹೆಚ್ಚಾಗಲಿದೆ. ರಾಜ್ಯದಾದ್ಯಂತ ಮುಂದಿನ 5 ದಿನಗಳವರೆಗೆ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಮಟ್ಟದ ಇಳಿಕೆ ಕಂಡುಬರುವುದಿಲ್ಲ. ಬದಲಿಗೆ ಹಂತ ಹಂತವಾಗಿ 2 ಡಿಗ್ರಿ ಸೆಲ್ಶಿಯಸ್​ನಿಂದ 3 ಡಿಗ್ರಿ ಸೆಲ್ಶಿಯಸ್ ವರೆಗೆ…

Read More

ಪದತ್ಯಾಗಕ್ಕೂ ಮುನ್ನವೇ ತಮ್ಮ ಮಹತ್ವದ ಆಸೆ ಈಡೇರಿಸಿಕೊಳ್ಳಲು ಮುಂದಾದ ಸಿದ್ದರಾಮಯ್ಯ

ಬೆಂಗಳೂರು, (ಮೇ 27): ಕರ್ನಾಟಕ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿ ಎನ್ನುವ ದಾಖಲೆಯನ್ನು ಸಿದ್ದರಾಮಯ್ಯ (Siddaramaiah) ಬರೆದಿದ್ದಾರೆ. ಅಲ್ಲದೇ ಅತಿ ಹೆಚ್ಚು ಬಜೆಟ್ ಮಂಡಿಸಿದ ಸಿಎಂ ಎನ್ನುವ ಹೆಗ್ಗಳಿಕೆ ಅವರಿಗಿದೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಹಲವು ಜನರಪರ ಕಾರ್ಯಕ್ರಮಗಳಿಂದ ಜನ ಮನ್ಣಣೆ ಗಳಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಹಿಂದುಳಿದ, ಅಹಿಂದ ವರ್ಗಗಳ ಪರವಾಗಿ ನಿಂತಿದ್ದಾರೆ. ಇದರಿಂದ ಅವರನ್ನ ಅಹಿಂದ ನಾಯಕ ಎಂದು ಕರೆಯಲಾಗುತ್ತೆ. ಅದರಂತೆ ಕಳೆದ 9 ವರ್ಷಗಳಿಂದ ನಿರಂತರವಾಗಿ ಸಂಚಲನ ಸೃಷ್ಟಿಸಿದ್ದ ಕರ್ನಾಟಕ ಜಾತಿಗಣತಿ ವರದಿ…

Read More

Daily Devotional​: ಯುಗಾದಿಯ ಆಚರಣೆ ಹೇಗೆ ಮಾಡಬೇಕು? ಈ ವರ್ಷ ಯಾವೆಲ್ಲ ಬದಲಾವಣೆಗಳು?

ಬೆಂಗಳೂರು, ಮಾ.18: ಭಾರತೀಯ ಸಂಸ್ಕೃತಿಯ ಮಹತ್ವಪೂರ್ಣ ಹಬ್ಬಗಳಲ್ಲಿ ಒಂದಾದ ಯುಗಾದಿ, ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ. ಯುಗಸ್ಯ ಆದಿ ಅಂದರೆ ಯುಗದ ಪ್ರಾರಂಭ ಎಂಬ ಅರ್ಥವನ್ನು ಹೊಂದಿರುವ ಈ ಹಬ್ಬವನ್ನು ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಡಗರದಿಂದ ಆಚರಿಸಲಾಗುತ್ತದೆ. ಪ್ರಕೃತಿಯಲ್ಲಿ ಹೊಸತನ ಮೂಡಿಬರುವ, ಗಿಡಮರಗಳು ಚಿಗುರಿ ಹೂ ಬಿಡುವ, ಕೋಗಿಲೆ ಇಂಪಾಗಿ ಹಾಡುವ ವಸಂತ ಋತುವಿನ ಆಗಮನವೇ ಯುಗಾದಿಯ ಮೂಲ. ಬ್ರಹ್ಮದೇವನು ಸೃಷ್ಟಿಯನ್ನು ಪ್ರಾರಂಭಿಸಿದ ದಿನವೆಂಬ ನಂಬಿಕೆಯೂ ಇದೆ. ಈ ದಿನ ಮನೆಯನ್ನು ಶುದ್ಧಗೊಳಿಸಿ ಮಾವಿನ…

Read More

Vasthu Tips: ಮಲಗುವ ಕೋಣೆಯ ವಾಸ್ತು ದೋಷ; ದಂಪತಿ ನಡುವಿನ ಜಗಳಕ್ಕೆ ಅಟ್ಯಾಚ್ಡ್ ಬಾತ್ರೂಮ್ ಕಾರಣವೇ?

ಮನೆ ಕಟ್ಟುವಾಗ ಮುಖ್ಯದ್ವಾರ ಮತ್ತು ಅಡುಗೆಮನೆಗೆ ನೀಡುವಷ್ಟು ಮಹತ್ವವನ್ನು ಅನೇಕರು ಮಲಗುವ ಕೋಣೆ ಮತ್ತು ಸ್ನಾನಗೃಹದ ವಾಸ್ತುಗೆ ನೀಡುವುದಿಲ್ಲ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆ ಮತ್ತು ಸ್ನಾನಗೃಹದ ದಿಕ್ಕು ಸರಿಯಿಲ್ಲದಿದ್ದರೆ, ಅದು ಮನೆಯ ನೆಮ್ಮದಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ಸ್ನಾನಗೃಹವನ್ನು ‘ರಾಹು’ವಿನ ಪ್ರಭಾವಕ್ಕೆ ಒಳಪಟ್ಟ ಸ್ಥಳ ಮತ್ತು ನೀರಿನ ಅಂಶ ಹೆಚ್ಚಾಗಿರುವ ಜಾಗ ಎಂದು ಪರಿಗಣಿಸಲಾಗುತ್ತದೆ. ಮಲಗುವ ಕೋಣೆಯಲ್ಲಿ ಹಾಸಿಗೆಯ ನೇರ ಎದುರಿಗೆ ಸ್ನಾನಗೃಹದ ಬಾಗಿಲು ಇದ್ದರೆ, ಅಲ್ಲಿಂದ ಹೊರಹೊಮ್ಮುವ ನಕಾರಾತ್ಮಕ…

Read More

ಬೇಸಿಗೆಯ ಧಗೆಯ ನಡುವೆ ಅಡುಗೆಮನೆಯ ನಿರ್ವಹಣೆ ಮತ್ತು ಆಹಾರದ ಸುರಕ್ಷತೆ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

ಬೇಸಿಗೆ ಎಂದರೆ ಬರೀ ಬೆವರುವ ತಾಪಮಾನ ಮಾತ್ರವಲ್ಲ, ಅದು ಅಡುಗೆಮನೆಯ ತಾಳ್ಮೆಯ ಪರೀಕ್ಷೆಯೂ ಹೌದು. ಹೊರಗಿನ ಬಿಸಿಲಿಗೆ ಫ್ರಿಜ್ ಬಾಗಿಲು ತೆರೆದಾಗ ಸಿಗುವ ತಂಪು ಹಿತವೆನಿಸಿದರೂ, ಅಡುಗೆಮನೆಯೊಳಗಿನ ಪದಾರ್ಥಗಳು ಬಾಡದಂತೆ ನೋಡಿಕೊಳ್ಳುವುದು ಒಂದು ದೊಡ್ಡ ಕಲೆ. ಹಿರಿಯರು ಹೇಳುತ್ತಿದ್ದ ಒಂದು ಮಾತು ಇಂದಿಗೂ ಸತ್ಯ— “ಆಹಾರವನ್ನು ಅಡುಗೆ ಮಾಡುವುದು ಎಷ್ಟು ಮುಖ್ಯವೋ, ಅದನ್ನು ಕಾಪಾಡುವುದು ಅಷ್ಟೇ ಮುಖ್ಯ”. ಬೇಸಿಗೆಯ ಈ ದಿನಗಳಲ್ಲಿ ನಿಮ್ಮ ಅಡುಗೆಮನೆಯನ್ನು ತಾಜಾವಾಗಿಡಲು ಇಲ್ಲಿವೆ ಕೆಲವು ಸರಳ ಮತ್ತು ಪ್ರಭಾವಶಾಲಿ ಸೂತ್ರಗಳು. ಯಾವುದನ್ನು ಎಲ್ಲಿಡಬೇಕು?…

Read More