ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು, ಭಾವನಾತ್ಮಕ ಪತ್ರ ಬರೆದ ಪ್ರಧಾನಿ ಮೋದಿ – Kannada News | Thiruvananthapuram BJP Victory: PM Modi’s Emotional Letter to New Mayor

ತಿರುವನಂತಪುರಂ, ಜನವರಿ 01: ಕೇರಳದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಭೇರಿ ಸಾಧಿಸಿ ಮೇಯರ್ ಹುದ್ದೆಗೇರಿದ ಬಿಜೆಪಿ ಮುಖಂಡರಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಹೃದಯ ಪೂರ್ವಕ ಭಾವನಾತ್ಮಕ ಪತ್ರ ಬರೆದಿದ್ದಾರೆ. 2026ರ ಹೊಸ ವರ್ಷದ ಸುಸಂದರ್ಭದಲ್ಲಿ ಮೇಯರ್ ಆಗಿ ನೇಮಕವಾಗಿರುವ ವಿವಿ ರಾಜೇಶ್ ಹಾಗೂ ಉಪ ಮೇಯರ್ ಆಶಾ ಮಾತ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ ಈ ಅಭೂತಪೂರ್ವ ಜಯಕ್ಕೆ ಕಾರಣವಾದ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕೇರಳದ ಜತೆಗಿನ ನಂಟನ್ನು ಸ್ಮರಿಸಿಕೊಂಡಿರುವ ನರೇಂದ್ರ ಮೋದಿ, ತಿರುವನಂತಪುರಂನೊಂದಿಗಿನ ತಮ್ಮ ನೆನಪನ್ನು ಹಂಚಿಕೊಂಡಿದ್ದಾರೆ. ಪದ್ಮನಾಭ ಸ್ವಾಮಿಯ ಅನುಗ್ರಹ ಪಡೆದಿರುವ ನನಗೆ ಕೇರಳದ ಈ ನೆಲಸ ಮೇಲೆ ವಿಶೇಷ ಅಭಿಮಾನವಿದೆ ಎಂದಿದ್ದಾರೆ.

ಹಾಗೆಯೇ ತಿರುವನಂತಪುರ ನಗರವು ಹಲವಾರು ನಾಯಕರು, ಸಮಾಜ ಸುಧಾರಕರು, ಕಲಾವಿದರು, ಕವಿಗಳು, ಸಂಗೀತಗಾರರು , ಸಾಂಸ್ಕೃತಿಕ ಧಿಗ್ಗಜರು, ಸಂತರನ್ನು ಹೊಂದಿರುವ ನಾಡಾಗಿದೆ. ಇಂಥಾ ನಗರವು ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿರುವುದು ಹೆಮ್ಮೆಯ ವಿಚಾರ.

ಮತ್ತಷ್ಟು ಓದಿ: New Year 2026: ವಿಧಾನಸಭಾ ಚುನಾವಣಾ ಕದನ, ಒಂದು ರಾಷ್ಟ್ರ, ಒಂದು ಚುನಾವಣೆ, ಜನಗಣತಿ ಈ ವರ್ಷ ಏನೆಲ್ಲಾ ನಡೀಬಹುದು?

ಈ ಹಿನ್ನೆಲೆಯಲ್ಲಿ ನಗರದ ಅಭಿವೃದ್ಧಿಗೆ ನಮ್ಮ ನಾಯಕತ್ವವು ಶ್ರಮಿಸಲಿದೆ. ನಮ್ಮ ಪಕ್ಷವು ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ರಾಜ್ಯಗಳಲ್ಲಿ ಮಾಡಿರುವ ಅಭಿವೃದ್ಧಿ ಪಥವನ್ನು ಬಯಸಿ ಇಲ್ಲಿಯ ಜನರು ಆಶೀರ್ವಾದ ಮಾಡಿದ್ದಾರೆ ಎಂದುಕೊಂಡಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಮೋದಿ ಬರೆದ ಪತ್ರ

ಕೇರಳ ಹಾಗೂ ದೇಶದ ಅಗಣಿತ ಬಿಜೆಪಿ ಕಾರ್ಯಕರ್ತರ ಪರವಾಗಿ ಈ ಹೆಮ್ಮೆಯ ವಿಚಾರವನ್ನು ಹೇಳಿಕೊಳ್ಳಲು ಖುಷಿಯಾಗುತ್ತದೆ. ತಿರುವನಂತಪುರಂ ಜನತೆಯ ಈ ತೀರ್ಪು ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವ ವಿಚಾರವಾಗಿದೆ ಎಂದು ಮೋದಿ ಹೇಳಿದ್ದಾರೆ.

ದಶಕಗಳ ಕಾಲ ಕೇರಳದಲ್ಲಿನ ಬಿಜೆಪಿ ಕಾರ್ಯಕರ್ತರು ಕಠಿಣ ಹಾದಿಯನ್ನು ಸವೆಸಿ ಬಂದಿದ್ದಾರೆ. ಕೇರಳದ ಎಲ್​ಡಿಎಫ್ ಹಾಗೂ ಯುಡಿಎಫ್ ಮೈತ್ರಿಕೂಟದ ದುರಾಡಳಿವನ್ನು ವರ್ಷಗಳ ಕಾಲ ಇಲ್ಲಿನ ಜನರು ನೋಡಿದ್ದಾರೆ.ಇನ್ನೊಂದೆಡೆ ಕೇರಳದ ಸಂಸ್ಕೃತಿಯನ್ನು ನಾಶಪಡಿಸುವ ಪ್ರಯತ್ನವನ್ನು ಈ ಕೂಡ ಮಾಡುವುದರ ಜತೆಗೆ ದುರಾಡಳಿತ ಹಾಗೂ ಭ್ರಷ್ಟಾಚಾರದ ಮೂಲಕ ರಾಜ್ಯದ ಜನತೆಗೆ ಮೋಸ ಮಾಡಲಾಗಿದೆ.

ಬಿಜೆಪಿ ಸಂಘಟನೆಯ ಮೇಲಿನ ನಿರಂತರ ಹಿಂಸಾಚಾರದ ಬಳಿಕವು ಕಾರ್ಯಕತರ್ರು ಪಕ್ಷಕ್ಕಾಗಿ ಧೈರ್ಯದಿಂದ ಎದೆ ತಟ್ಟಿ ನಿಂತಿದ್ದಾರೆ, ಜನರ ಧ್ವನಿಯಾಗಿ ಪಕ್ಷವ ಬಾವುಟವನ್ನು ಹಿಡಿದು ಧೈರ್ಯದಿಂದ ನಿಂತಿದ್ದಾರೆ ಎಂದು ಮೋದಿ ಕೊಂಡಾಡಿದ್ದಾರೆ. ಇಂದು ಭಾರತ ಮೊದಲು ಎನ್ನುವ ನಮ್ಮ ಸಿದ್ಧಾಂತದೊಂದಿಗೆ ನಿಂತು ಹೋರಾಡಿದ ಹಲವು ಕಾರ್ಯಕರ್ತರು ಇಂದು ನಮ್ಮೊಂದಿಗೆ ಇಲ್ಲ ಆದಾಗ್ಯೂ ಈ ಗೆಲುವು ಅವರಿಗೆ ಖುಷಿ ತರಿಸಲಿದೆ ಎಂದು ಮೋದಿ ಭಾವುಕ ನುಡಿಗಳನ್ನು ಬರೆದಿದ್ದಾರೆ.

ತಿರುವನಂತಪುರಂನ ಈ ಗೆಲುವು ಕೇರಳ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರಲು ಮುನ್ನುಡಿಯಾಗಲಿದೆ , ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಹಾಗೂ ಪಕ್ಷ ಕೆಲಸ ಮುಂದುವರೆಸಲಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:12 pm, Thu, 1 January 26

Source link

Wednesday Donations: ಬುಧವಾರದಂದು ತಪ್ಪಿಯೂ ಈ ವಸ್ತು ದಾನ ಮಾಡಲೇಬೇಡಿ; ಗ್ರಹ ದೋಷಕ್ಕೆ ಕಾರಣವಾಗಬಹುದು! – Kannada News | Wednesday Donations: Avoid These Items to Strengthen Budha Graha

ಸನಾತನ ಧರ್ಮದಲ್ಲಿ, ಪ್ರತಿ ದಿನವೂ ಒಂದೊಂದು ದೇವತೆ ಅಥವಾ ಗ್ರಹಕ್ಕೆ ಮೀಸಲಾಗಿದೆ. ಅದರಂತೆ ಬುಧವಾರ ಗಣೇಶನನ್ನು ಪೂಜಿಸಲಾಗುತ್ತದೆ ಮತ್ತು ಉಪವಾಸ ಆಚರಿಸಲಾಗುತ್ತದೆ. ಈ ದಿನವನ್ನು ಗ್ರಹಗಳ ರಾಜ ಬುಧನಿಗೆ ಸಹ ಮೀಸಲಾದ ದಿನ. ಈ ದಿನದಂದು ಪೂರ್ಣ ವಿಧಿವಿಧಾನಗಳೊಂದಿಗೆ ಗಣೇಶನನ್ನು ಪೂಜಿಸುವ ಪ್ರತಿಯೊಬ್ಬರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ.

ಜಾತಕದಲ್ಲಿ ಬುಧ ಗ್ರಹದ ಸ್ಥಾನವು ಬಲವಾಗಿರಬೇಕಾದರೆ ಬುಧವಾರ ಪೂಜೆ ಮತ್ತು ಪ್ರಾರ್ಥನೆಗಳ ಜೊತೆಗೆ ದಾನವನ್ನು ಸಹ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ದಾನ ಮಾಡಲು ಶುಭವೆಂದು ಪರಿಗಣಿಸಲಾದ ಕೆಲವು ವಿಷಯಗಳಿವೆ, ಆದರೆ ಬುಧವಾರ ದಾನ ಮಾಡುವುದು ಅಶುಭವೆಂದು ಪರಿಗಣಿಸಲಾದ ಕೆಲವು ವಿಷಯಗಳಿವೆ. ಹಾಗಾದರೆ, ಬುಧವಾರ ಯಾವ ವಸ್ತುಗಳನ್ನು ದಾನ ಮಾಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬುಧವಾರ ಈ ವಸ್ತುಗಳನ್ನು ದಾನ ಮಾಡಬೇಡಿ:

ಹೆಸರು ಬೇಳೆ:

ಜ್ಯೋತಿಷ್ಯದಲ್ಲಿ ಬುಧವಾರ ಬುಧ ಗ್ರಹಕ್ಕೆ ಮೀಸಲಾಗಿದೆ. ಆದ್ದರಿಂದ, ಈ ದಿನ ಹೆಸರುಕಾಳು ದಾನ ಮಾಡುವುದನ್ನು ತಪ್ಪಿಸಿ. ಹಸಿರು ಬಣ್ಣವು ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ. ಈ ದಿನ ಹೆಸರುಕಾಳು ದಾನ ಮಾಡುವುದರಿಂದ ನಿಮ್ಮ ಜಾತಕದಲ್ಲಿ ಬುಧ ಗ್ರಹ ದುರ್ಬಲಗೊಳ್ಳಬಹುದು. ಆರ್ಥಿಕ ಸಮಸ್ಯೆಗಳು ಉದ್ಭವಿಸಬಹುದು.

ಇದನ್ನೂ ಓದಿ: ಸಾಮಾನ್ಯ ಜನರು ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಬಾರದು ಯಾಕೆ?

ಅಕ್ಕಿ:

ಜ್ಯೋತಿಷ್ಯದ ಪ್ರಕಾರ, ಅಕ್ಕಿಯು ಚಂದ್ರ ದೇವರಿಗೆ ಸಂಬಂಧಿಸಿದೆ, ಆದ್ದರಿಂದ ಬುಧವಾರದಂದು ಅಕ್ಕಿಯನ್ನು ದಾನ ಮಾಡಬೇಡಿ. ಈ ದಿನ ಅಕ್ಕಿಯನ್ನು ದಾನ ಮಾಡುವುದರಿಂದ ನಿಮ್ಮ ಜನ್ಮ ಕುಂಡಲಿಯಲ್ಲಿ ಚಂದ್ರನ ಸ್ಥಾನ ದುರ್ಬಲಗೊಳ್ಳುತ್ತದೆ. ಇದು ವ್ಯಾಪಾರ ನಷ್ಟದ ಅಪಾಯವನ್ನು ಸಹ ಒಡ್ಡುತ್ತದೆ.

ಕಪ್ಪು ಎಳ್ಳು:

ಜ್ಯೋತಿಷ್ಯದ ಪ್ರಕಾರ, ಬುಧ ಗ್ರಹವು ಬುದ್ಧಿಶಕ್ತಿ, ಮಾತು ಮತ್ತು ವ್ಯವಹಾರಕ್ಕೆ ಕಾರಣ. ಆದ್ದರಿಂದ, ಈ ದಿನ ಕಪ್ಪು ಎಳ್ಳನ್ನು ದಾನ ಮಾಡುವುದನ್ನು ತಪ್ಪಿಸಿ, ಏಕೆಂದರೆ ಅದು ಶನಿ ದೇವರಿಗೆ ಸಂಬಂಧಿಸಿದೆ. ಈ ದಿನ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಬುದ್ಧಿಶಕ್ತಿ, ಮಾತು ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chikkamagaluru: ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​; ವಿಡಿಯೋ ವೈರಲ್​ – Kannada News | Youth Dances With Dog at New Year Party in Chikkamagaluru; Video Goes Viral

ಚಿಕ್ಕಮಗಳೂರು, ಜನವರಿ 01: ಹೊಸ ವರ್ಷದ ಹಿನ್ನೆಲೆ ರಾಜ್ಯಾದ್ಯಂತ ಪಾರ್ಟಿಗಳು ಜೋರಾಗಿಯೇ ನಡೆದಿವೆ. ಅತಿಯಾದ ಮದ್ಯ ಸೇವನೆ ಕಾರಣ ಹಲವರು ರಸ್ತೆಯಲ್ಲಿಯೇ ತೂರಾಟ ಕೂಡ ನಡೆಸಿದ್ದಾರೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುಡಿದ ಮತ್ತಲ್ಲಿದ್ದ ಯುವಕನೋರ್ವ ಬೀದಿ ನಾಯಿ ಜೊತೆ ಡ್ಯಾನ್ಸ್​​ ಮಾಡಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ. ನ್ಯೂ ಇಯರ್​​ ಹಿನ್ನೆಲೆ ಕಣತಿ‌ ಗ್ರಾಮದ ಸಂದೀಪ್ ಮತ್ತು ಸ್ನೇಹಿತರು ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಬೀದಿ ನಾಯಿಯ ಮುಂಬದಿ ಕಾಲುಗಳನ್ನು ಹಿಡಿದುಕೊಂಡು ಸಂದೀಪ್​​ ಡ್ಯಾನ್ಸ್​​ ಮಾಡಿದ್ದಾರೆ. ವಿಡಿಯೋ ನೋಡಿದ ಕೆಲವರು ನಾಯಿ ಜೊತೆಗೆ ಯುವಕನ ಡ್ಯಾನ್ಸ್​​ಗೆ ಖುಷಿ ಪಟ್ಟಿದ್ದರೆ, ಇನ್ನು ಕೆಲವರು ಕುಡಿದ ಮತ್ತಿನಲ್ಲಿ ಬೀದಿ ನಾಯಿಗೆ ಹಿಂಸೆ ನೀಡಲಾಗಿದೆ ಎಂದು ದೂರಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ! ಯಾಕೆ ಗೊತ್ತಾ? – Kannada News | Kogilu Layout Housing Row: BJP Workers Stage Unique Protest in Mandya, Letter to Kerala CM Goes Viral

ಕೇರಳ ಸಿಎಂಗೆ ಮಂಡ್ಯ ಬಿಜೆಪಿ ಕಾರ್ಯಕರ್ತರ ಪತ್ರ

ಮಂಡ್ಯ, ಜನವರಿ 1: ‘ಕೇರಳ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಅವರೇ, ನಮ್ಮ ಜಿಲ್ಲೆ ಹಾಗೂ ರಾಜ್ಯದಲ್ಲಿ ಸಾಕಷ್ಟು ಬಡವರು ಇದ್ದಾರೆ. ದಯವಿಟ್ಟು ಒಂದು ಟ್ವೀಟ್ ಮಾಡಿಬಿಡಿ. ನೀವು ಟ್ವೀಟ್ ಮಾಡಿದರೆ ನಮ್ಮ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮನೆ ಕೊಡುತ್ತಾರೆ’. ಇದು ಮಂಡ್ಯ ಬಿಜೆಪಿ (BJP) ಕಾರ್ಯಕರ್ತರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ಗೆ ಪತ್ರ ಬರೆದು ಮಾಡಿದ ಮನವಿ! ಕೇರಳ ಸಿಎಂ ಎಕ್ಸ್ ಸಂದೇಶದ ಬೆನ್ನಲ್ಲೇ ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ವಾಸವಿದ್ದ ಅಕ್ರಮ ವಲಸಿಗರಿಗೆ ಮನೆ ನೀಡಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಂದಾದ ಬೆನ್ನಲ್ಲೇ ಮಂಡ್ಯದ ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ.

ನಮ್ಮ ಜಿಲ್ಲೆ ಹಾಗೂ ರಾಜ್ಯದಲ್ಲಿ ಸಾಕಷ್ಟು ಬಡವರು ಇದ್ದರೂ ಅವರಿಗೆ ಇನ್ನೂ ಸೂರಿನ ಸೌಲಭ್ಯ ದೊರಕಿಲ್ಲ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನೆ ನೀಡುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಬಡವರ ಪರ ಕಾಳಜಿ ಇಟ್ಟುಕೊಂಡು ಒಂದು ಟ್ವೀಟ್ ಮಾಡಿಕೊಡಬೇಕು ಎಂದು ಕೇರಳ ಸಿಎಂಗೆ ಬರೆದ ಪತ್ರದಲ್ಲಿ ಮಂಡ್ಯ ಬಿಜೆಪಿ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಆ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಮಂಡ್ಯ ಬಿಜೆಪಿ ಕಾರ್ಯಕರ್ತರು ಹೇಳಿದ್ದೇನು? ವಿಡಿಯೋ ನೋಡಿ

ನೀವು ಟ್ವೀಟ್ ಮಾಡಿದ ತಕ್ಷಣ ಅಕ್ರಮ ವಲಸಿಗರಿಗೆ ಮನೆ ನೀಡಲಾಗುತ್ತಿದೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ವಲಸಿಗರಿಗೆ ಮನೆ ನೀಡಲಾಗುತ್ತಿದೆ ಎಂದು ಹೇಳಿ, ಅದೇ ರೀತಿಯಲ್ಲಿ ರಾಜ್ಯದ ಬಡವರಿಗೆ ಸೂರಿನ ವ್ಯವಸ್ಥೆ ಮಾಡಬೇಕೆಂದು ಟ್ವೀಟ್ ಮಾಡಿಕೊಡಿ ಎಂದು ಕೇರಳ ಸಿಎಂಗೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಪಿಣರಾಯಿ ವಿಜಯನ್​ಗೆ ಬರೆದ ಪತ್ರದಲ್ಲೇನಿದೆ?

ಕರ್ನಾಟಕದ ನಿಜವಾದ ವಸತಿ ಹೀನರಿಗೆ ಬಡವರಿಗೆ ಸೂರು ನೀಡಲು ಕರ್ನಾಟಕ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಹಾಗೂ ಡಿ.ಕೆ ಶಿವಕುಮಾರ್ ರವರಿಗೆ ಟ್ವಿಟ್ ಮೂಲಕ ಆದೇಶ ನೀಡುವ ಬಗ್ಗೆ ಮನವಿ ಎಂದಿ ಮೊದಲಿಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮುಂದುವರಿದು, ‘ಮಾನ್ಯರೆ, ತಾವು ಒಂದು ಟ್ವಿಟ್ ಮಾಡಿ ಬೆಂಗಳೂರಿನ ಕೋಗಿಲು ಅಕ್ರಮ ಬಡಾವಣೆಯ ಜನರ ಬಗ್ಗೆ ಮಾನವೀಯತೆಯಿಂದ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಹೇಳಿದ ತಕ್ಷಣ ನಮ್ಮ ಕರ್ನಾಟಕ ಸರ್ಕಾರ ಬೆಚ್ಚಿಬಿದ್ದು ಬಯ್ಯಪ್ಪನ ಹಳ್ಳಿಯಲ್ಲಿ ಹೊಸ ಮನೆ ಕೊಡುತ್ತದೆ ಎಂದರೆ ನಿಮ್ಮ ಶಕ್ತಿ ಏನು ಎಂಬುದು ಕನ್ನಡಿಗರಿಗೆ ಅರ್ಥವಾಗಿದೆ. ನಮ್ಮ ಕರ್ನಾಟಕದಲ್ಲಿ ಪ್ರವಾಹ, ಮಳೆಹಾನಿ, ಭೂಕುಸಿತ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಕ್ಕೆ 14000 ಜನ ಮನೆ ಕಳೆದುಕೊಂಡಿದ್ದಾರೆ. ಸೂರಿಲ್ಲದೆ ಪ್ಲಾಸ್ಟಿಕ್ ಶೆಡ್​​​ಗಳಲ್ಲಿ ವಾಸ ಮಾಡುತ್ತಿದ್ದಾರೆ. ವಿವಿಧ ವಸತಿ ಯೋಜನೆ, ಸೇರಿದಂತೆ ನಿವೇಶನಕ್ಕಾಗಿ ಹಲವಾರು ವರ್ಷದಿಂದ ಸಾವಿರಾರು ಜನರು ಚಾತಕ ಪಕ್ಷಿಯ ರೀತಿ ಕಾಯುತ್ತಿದ್ದಾರೆ. ದಯವಿಟ್ಟು ನಮ್ಮ ರಾಜ್ಯದ ಬಡವರ ಬಗ್ಗೆ ನೀವು ಒಂದು ಟ್ವಿಟ್ ಮಾಡಿ ಹೇಳಿದರೆ ಖಂಡಿತ ನಮ್ಮ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ತಮ್ಮ ಆದೇಶವನ್ನು ಪಾಲಿಸುತ್ತಾರೆ ಅನ್ನೋ ನಂಬಿಕೆ ಇದೆ . ಸಂಪೂರ್ಣ ಕರ್ನಾಟಕದ ಆಡಳಿತ ಚುಕ್ಕಾಣಿಯನ್ನು ನಿಮಗೆ General Power of Attorney ಮಾಡಿಕೊಟ್ಟಿದ್ದಾರೆ ಎಂದು ನಮ್ಮ ರಾಜ್ಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ರಾಮ, ಕೃಷ್ಣ, ಶಿವ, ಪಾರ್ವತಿ, ಪೂಜಿಸುವ ನಮ್ಮ ಬಗ್ಗೆಯೂ ದಯವಿಟ್ಟು ಕರುಣೆಯಿರಲಿ ಎಂದು ತಮ್ಮಲ್ಲಿ ಬೇಡಿಕೊಳ್ಳುತ್ತೇವೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಹೊಸ ವರ್ಷದ ಮರುದಿನವೇ ಕೋಗಿಲು ನಿರಾಶ್ರಿತರಿಗೆ ಮನೆ ಭಾಗ್ಯ: 187 ಮನೆಗಳ ಸರ್ವೆ ಮುಕ್ತಾಯ, ಯಾರಿಗೆ ಸಿಗಲಿದೆ ಸೂರು?

ಈ ಹಿಂದೆ ಬಂಡೀಪುರ ಮಾರ್ಗವಾಗಿ ರಾತ್ರಿ ಸಂಚಾರ ನಿರ್ಬಂಧ ತೆರವುಗೊಳಿಸಿದಾಗ, ನಿಮ್ಮ ರಾಜ್ಯದಲ್ಲಿಆನೆ ಕಾಲ್ತುಳಿತಕ್ಕೆ ನಮ್ಮ ಸರ್ಕಾರ ಪರಿಹಾರ ಕೊಟ್ಟಾಗ, ನಿಮ್ಮ ರಾಜ್ಯದಲ್ಲಿ ಮನೆಕಟ್ಟಿಕೊಡಲು ನಮ್ಮ ಸರ್ಕಾರ ಸರ್ಕಾರ ಹಣಕೊಟ್ಟಗ ಗೊತ್ತಾಯಿತು ನಿಮ್ಮ ಶಕ್ತಿ ಏನೆಂದು. ಹಾಗಾಗಿ ಈ ಕೊಡಲೇ ನಮ ಪರವಾಗಿಯೂ ದನಿ ಎತ್ತಬೇಕೆಂದು ನಿಮ್ಮಲ್ಲಿ ಕಳಕಳಿಯ ಮನವಿ, ಸಾಧ್ಯವಾದರೆ ನಿಮ್ಮ ರಾಜ್ಯದ ಸಂಸದ ಕರ್ನಾಟಕ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವೇಣುಗೋಪಾಲ್ ರವರಿಗೂ ಟ್ವಿಟ್ ಮಾಡಲು ಹೇಳಿ ಎಂದು ಪತ್ರದಲ್ಲಿ ಬಿಜೆಪಿ ಕಾರ್ಯಕರ್ತರು ವ್ಯಂಗ್ಯವಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ, ಹಲವು ಮಂದಿ ಸಾವು – Kannada News | Deadly Explosion Hits Bar in Upscale Swiss Ski Resort

ಸ್ವಿಟ್ಜರ್​ಲ್ಯಾಂಡ್, ಜನವರಿ 01: ಹೊಸ ವರ್ಷದ ಸಂಭ್ರಮದಲ್ಲಿ ಸೂತಕದ ಛಾಯೆ ಮೂಡಿದೆ. ಸ್ವಿಟ್ಜರ್ಲೆಂಡ್‌ನ ಬಾರೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಹಲವು ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಸ್ವಿಸ್ ಪೊಲೀಸರು ಸ್ವಿಸ್ ನಗರದ ಕ್ರಾನ್ಸ್-ಮೊಂಟಾನಾದಲ್ಲಿ ಸಂಭವಿಸಿದೆ ಎಂದು ಹೇಳಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ.

ಸ್ಫೋಟದ ನಂತರ, ಬಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿಯಲ್ಲಿ ಹಲವಾರು ಜನರು ಸಿಲುಕಿಕೊಂಡಿದ್ದಾರೆ. ಸ್ವಿಸ್ ಪೊಲೀಸ್ ರಕ್ಷಣಾ ತಂಡಗಳು ಅವರನ್ನು ಬಾರ್‌ನಿಂದ ಸ್ಥಳಾಂತರಿಸಿ ಆಸ್ಪತ್ರೆಗೆ ಕಳುಹಿಸುವ ಕೆಲಸ ಮಾಡುತ್ತಿದೆ. ಬಾರ್‌ನಲ್ಲಿ ಹೊಸ ವರ್ಷದ ಮುನ್ನಾದಿನದ ಪಾರ್ಟಿ ನಡೆಯುತ್ತಿತ್ತು ಮತ್ತು ಅಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಆ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪೋಸ್ಟ್ ಆಫೀಸ್ ಸ್ಮಾಲ್ ಸೇವಿಂಗ್ ಸ್ಕೀಮ್​ಗಳ ಬಡ್ಡಿದರದಲ್ಲಿ ಇಳಿಕೆ ಇಲ್ಲ; ಇಲ್ಲಿದೆ ಜನವರಿ-ಮಾರ್ಚ್ ಕ್ವಾರ್ಟರ್​ನ ಬಡ್ಡಿದರಗಳ ಪಟ್ಟಿ – Kannada News | Govt announces interest rates for various small savings schemes for Q4, 2026fy

ನವದೆಹಲಿ, ಜನವರಿ 1: ಸಾಮಾನ್ಯ ಜನರು ಅತಿಹೆಚ್ಚಾಗಿ ಬಳಸುವ ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯ ಯೋಜನೆಗಳ (Small Savings Schemes) ಬಡ್ಡಿದರ ಪರಿಷ್ಕರಣೆ ಮಾಡಲಾಗಿದೆ. ಈ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ ಆಗಿರುವ 2026ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಗೆ ಪರಿಷ್ಕೃತ ಬಡ್ಡಿದರ ಪ್ರಕಟಿಸಲಾಗಿದೆ. ಹಣಕಾಸು ಸಚಿವಾಲಯದ ಅಡಿಗೆ ಬರುವ ಆರ್ಥಿಕ ವ್ಯವಹಾರಗಳ ಇಲಾಖೆ ಹೊರಡಿಸಿದ ಪ್ರಕಟಣೆ ಪ್ರಕಾರ, ಈ ಕ್ವಾರ್ಟರ್​ನಲ್ಲಿ ಯಾವುದೇ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಿಗೆ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿಲ್ಲ. ಹಿಂದೆ ಇದ್ದ ದರಗಳೇ ಮುಂದುವರಿಯಲಿವೆ.

ಆರ್​ಬಿಐನ ರಿಪೋ ದರಗಳು ಇಳಿಕೆಯಾದ ಬಳಿಕ ಅನೇಕ ಬ್ಯಾಂಕುಗಳು ತಮ್ಮ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳಿಗೆ ಬಡ್ಡಿದರ ತಗ್ಗಿಸಿವೆ. ಆದರೆ, ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ತಗ್ಗಿಲ್ಲ ಎಂಬುದು ಗಮನಾರ್ಹ.

ಇದನ್ನೂ ಓದಿ: LPG Price: ಕಮರ್ಷಿಯಲ್ ಗ್ಯಾಸ್ ಬೆಲೆ ಭರ್ಜರಿ ಹೆಚ್ಚಳ; 19 ಕಿಲೋ ಸಿಲಿಂಡರ್ ದರ 110.50 ರೂ ಏರಿಕೆ

2026ರ ಜನವರಿಯಿಂದ ಮಾರ್ಚ್​ನ ಕ್ವಾರ್ಟರ್​ನಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ

  1. ಸುಕನ್ಯ ಸಮೃದ್ಧಿ ಸ್ಕೀಮ್: ಬಡ್ಡಿದರ ಶೇ. 8.2
  2. ಪಬ್ಲಿಕ್ ಪ್ರಾವಿಡೆಂಟ್ ಫಂಡ್: ಬಡ್ಡಿದರ ಶೇ. 7.1
  3. ಕಿಸಾನ್ ವಿಕಾಸ್ ಪತ್ರ: ಬಡ್ಡಿದರ ಶೇ. 7.5
  4. ರಾಷ್ಟ್ರೀಯ ಉಳಿತಾಯ ಪತ್ರ (ಎನ್​ಎಸ್​ಸಿ): ಶೇ. 7.7 ಬಡ್ಡಿ
  5. ಮಾಸಿಕ ಆದಾಯ ಯೋಜನೆ (ಎಂಐಎಸ್): ಶೇ. 7.4 ಬಡ್ಡಿ
  6. ಪೋಸ್ಟ್ ಆಫೀಸ್ ಆವರ್ತನ ಠೇವಣಿ (ಆರ್​ಡಿ): ಬಡ್ಡಿದರ ಶೇ. 6.7
  7. ಟೈಮ್ ಡೆಪಾಸಿಟ್: ಬಡ್ಡಿದರ ಶೇ. 6.9ರಿಂದ ಶೇ. 7.5
  8. ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್: ಬಡ್ಡಿದರ ಶೇ. 4
  9. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್​ಸಿಎಸ್​ಎಸ್): ಶೇ. 8.2 ಬಡ್ಡಿ
  10. ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್: ಶೇ. 7.5 ಬಡ್ಡಿ

ಸರ್ಕಾರವು ಪ್ರತೀ ಕ್ವಾರ್ಟರ್​ಗೂ ಬಡ್ಡಿದರ ಪರಿಷ್ಕರಿಸುತ್ತದೆ. 2023-24ರ ಕೊನೆಯ ಕ್ವಾರ್ಟರ್​ನಲ್ಲಿ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿತ್ತು. ಅದಾದ ಬಳಿಕ ಎರಡು ವರ್ಷದಿಂದ ಬದಲಾವಣೆ ಆಗಿಲ್ಲ.

ಇದನ್ನೂ ಓದಿ: ಸಿಮ್ ವೆರಿಫಿಕೇಶನ್​ನಿಂದ ಹಿಡಿದು ಕ್ರೆಡಿಟ್ ಸ್ಕೋರ್​ವರೆಗೆ ಜನವರಿ 1ರಿಂದ ಆಗಲಿರುವ ಪ್ರಮುಖ ಹಣಕಾಸು ನಿಯಮ ಬದಲಾವಣೆಗಳು

ಬಡ್ಡಿದರ ಪರಿಷ್ಕರಣೆಗೆಂದೇ ಒಂದು ಸಮಿತಿ

ಪೋಸ್ಟ್ ಆಫೀಸ್ ಸ್ಕೀಮ್ ಅಥವಾ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಎಷ್ಟು ನಿಗದಿ ಮಾಡಬೇಕೆಂದು ನಿರ್ಧರಿಸಲು ಸರ್ಕಾರ ಒಂದು ಸಮಿತಿಯನ್ನೇ ರಚಿಸಿದೆ. ಶ್ಯಾಮಲಾ ಗೋಪಿನಾಥ್ ನೇತೃತ್ವದ ಸಮಿತಿ ಸಲಹೆ ನೀಡಿರುವ ವಿಧಾನದ ಆಧಾರದ ಮೇಲೆ ಬಡ್ಡಿದರ ಪರಿಷ್ಕರಣೆ ಮಾಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ರಾಜಕೀಯ ಪದೋನ್ನತಿ ಆಸೆ ನನಗೂ ಇದೆ’: ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್ – Kannada News | Karnataka Home Minister G Parameshwar on Political Aspirations, Central Funds for Police, and Jail Security

ಬೆಂಗಳೂರು, ಜ.1: ಡಿಸಿಎಂ ಡಿಕೆ ಶಿವಕುಮಾರ್​ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಸಿಎಂ ಕುರ್ಚಿಗಾಗಿ ಗುದ್ದಾಟ ನಡೆಸುತ್ತಿರುವ ವೇಳೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ಇದೀಗ ತಾವು ಮುಖ್ಯಮಂತ್ರಿಯಾಗಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ಅವರು ಮಾಧ್ಯಮದ ಮುಂದೆ ವ್ಯಕ್ತಪಡಿಸಿದ್ದಾರೆ. “ರಾಜಕೀಯ ಪದೋನ್ನತಿ ಆಸೆ ನನಗೂ ಇದೆ” ಎಂದು ಹೇಳುವ ಮೂಲಕ ತಮ್ಮ ಹೈಕಮಾಂಡ್‌ನ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಆಂಬಿಷನ್ ಇರಬೇಕು ಎಂದು ತಮ್ಮ ಭಾವನೆಯನ್ನು ಅವರು ಹಂಚಿಕೊಂಡಿದ್ದಾರೆ. ತಾನು ಯಾವಾಗಲೂ ಆಶಾವಾದಿಯಾಗಿರಬೇಕು. ರಾಜಕೀಯಕ್ಕೆ ಸೇರುವಾಗ ಎಂಎಲ್‌ಎ ಆಗಿ, ನಂತರ ಮಂತ್ರಿಯಾಗಿ ಮುಂದುವರಿಯುವ ಆಸೆ ಇರುವುದು ಸಹಜ. ಪ್ರತಿಯೊಂದು ಹಂತದಲ್ಲೂ ಎತ್ತರದ ಸ್ಥಾನಕ್ಕೆ ಹೋಗುವ ಆಲೋಚನೆ ಇರುತ್ತದೆ ಎಂದು ಹೇಳಿದ್ದಾರೆ. ಇದರ ಜತೆಗೆ ತಮ್ಮ ಇಲಾಖೆಯ ಬಗ್ಗೆಯೂ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ 30ಕ್ಕೂ ಹೆಚ್ಚು ಡಿಐಜಿಗಳು ಮತ್ತು ಐಜಿಗಳಿಗೆ ಮುಂಬಡ್ತಿ ನೀಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು. ಅವರೆಲ್ಲರೂ ಉತ್ತಮವಾಗಿ ತರಬೇತಿ ಪಡೆದ ಐಪಿಎಸ್ ಅಧಿಕಾರಿಗಳಾಗಿದ್ದು, ರಾಜ್ಯಕ್ಕೆ ಉತ್ತಮ ಸೇವೆ ನೀಡುವ ನಿರೀಕ್ಷೆಯಿದೆ ಎಂದು ಹೇಳಿದರು. ಇಲಾಖೆಯ ಆಧುನೀಕರಣಕ್ಕೆ ಕೇಂದ್ರ ಸರ್ಕಾರದಿಂದ 350 ಕೋಟಿ ರೂಪಾಯಿ ಅನುದಾನ ಮೊದಲ ಬಾರಿಗೆ ಬಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಎಡಿಜಿಪಿ ಮುರುಗನ್ ಅವರ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಬೆಳಗಾವಿ ಜೈಲಿನಲ್ಲಿ ಗಾಂಜಾ ಎಸೆಯುವಂತಹ ಘಟನೆಗಳ ಬಗ್ಗೆ ಡಿಜಿ ಅಲೋಕ್ ಕುಮಾರ್ ಸ್ಥಳ ಪರಿಶೀಲನೆಗೆ ಭೇಟಿ ನೀಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಆದ ಕಲೆಕ್ಷನ್​ ಎಷ್ಟು? – Kannada News | Namma Metro Records Rupees 3 Crore New Year Earnings

ಬೆಂಗಳೂರು, ಜನವರಿ 01: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ನಮ್ಮ ಮೆಟ್ರೋ ಭಾರಿ ಆದಾಯ ಗಳಿಸಿದೆ. ನಿನ್ನೆ ಒಂದೇ ದಿನದಲ್ಲಿ ಮೆಟ್ರೋಗೆ 3 ಕೋಟಿ 8 ಲಕ್ಷ ರೂ. ಆದಾಯ ಹರಿದುಬಂದಿದೆ ಎಂದು ಮೆಟ್ರೋ ಅಂಕಿಅಂಶಗಳು ತಿಳಿಸಿವೆ. ಸುಮಾರು 8,93,903 ಮಂದಿ ಪ್ರಯಾಣಿಕರು ಮೆಟ್ರೋ ಸೇವೆಗಳನ್ನು ಬಳಸಿಕೊಂಡಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆಗೆ ಅನುಕೂಲವಾಗುವಂತೆ ಮೆಟ್ರೋ ಸಂಚಾರ ಸಮಯವನ್ನು ವಿಸ್ತರಿಸಲಾಗಿತ್ತು. ನಿನ್ನೆ ಬೆಳಗ್ಗೆ 5 ಗಂಟೆಯಿಂದ ಇಂದು ಬೆಳಗ್ಗಿನ ಜಾವ 3:10ರವರೆಗೆ ಮೆಟ್ರೋ ಸಂಚಾರ ಸಮಯ ವಿಸ್ತರಿಸಲಾಗಿತ್ತು. ಎಂ.ಜಿ. ರಸ್ತೆ ನಿಲ್ದಾಣ ಹೊರತುಪಡಿಸಿ, ಹಳದಿ, ನೇರಳೆ ಮತ್ತು ಹಸಿರು ಮಾರ್ಗಗಳ ಎಲ್ಲಾ ನಿಲ್ದಾಣಗಳು ಕಾರ್ಯನಿರ್ವಹಿಸಿದ್ದವು. ಪ್ರಮುಖವಾಗಿ ಕೋರಮಂಗಲ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರದಂತಹ ಪ್ರದೇಶಗಳಲ್ಲಿ ಜನರು ಹೊಸ ವರ್ಷಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ಮೆಟ್ರೋಗೆ ಅಧಿಕ ಆದಾಯ ಬಂದಿದೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಮೊಲವನ್ನು ಕಂಡುಹಿಡಿಯಬಲ್ಲಿರಾ – Kannada News | Optical Illusion: Find the hidden rabbit in this picture

ಆಪ್ಟಿಕಲ್‌ ಇಲ್ಯೂಷನ್‌Image Credit source: Social Media

ಮೋಜಿನ ಆಟಗಳ ಎಲ್ಲರಿಗೂ ಇಷ್ಟನೇ. ಆದರೆ ಈ ಆಪ್ಟಿಕಲ್‌ ಇಲ್ಯೂಷನ್ (optical illusion) ಸಂಬಂಧಿತ ಚಿತ್ರಗಳನ್ನು ಬಿಡಿಸುವುದು ಕಷ್ಟಕರ. ಹೀಗಾಗಿ ಇಂತಹ ಚಿತ್ರಗಳತ್ತ ಕಣ್ಣಾಯಿಸಿದರೂ ಮೊದಲ ಪ್ರಯತ್ನದಲ್ಲೇ ವಿಫಲರಾಗುವವರೇ ಹೆಚ್ಚು. ಅದಲ್ಲದೇ, ಒಗಟಿನ ಚಿತ್ರಗಳನ್ನು ಬಿಡಿಸುವಾಗ ಹತ್ತು ಜನರಲ್ಲಿ ಒಬ್ಬರಿಗೆ ಮಾತ್ರ ಕ್ಷಣಾರ್ಧದಲ್ಲಿ ಉತ್ತರ ಹೇಳಲು ಸಾಧ್ಯ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಜಾಣತನದಿಂದ ಮರೆ ಮಾಡಲಾಗಿರುವ ಮೊಲವನ್ನು 15 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದರೆ, ಈ ಚಿತ್ರದತ್ತ ಕಣ್ಣಾಯಿಸಿ.

ಈ ಚಿತ್ರದಲ್ಲಿ ಏನು ಕಾಣಿಸುತ್ತದೆ?

ಇಲ್ಯೂಷನ್ ಚಿತ್ರವು  ನಿಮ್ಮ ಮೆದುಳಿಗೆ ವ್ಯಾಯಾಮ ನೀಡುವುದಲ್ಲದೇ, ನಿಮ್ಮ ದೃಷ್ಟಿ ಸಾಮರ್ಥ್ಯ, ಯೋಚನಾ ಸಾಮರ್ಥ್ಯ ಎಷ್ಟಿದೆ ಪರೀಕ್ಷಿಸುತ್ತದೆ. ಇದೇ ತರಹದ ಚಿತ್ರ ಇದಾಗಿದ್ದು, ಇಲ್ಲಿ ಯುವಕ ಯುವತಿಯರು ಹಾಗೂ ಪುಟಾಣಿಗಳು ಸ್ವಚ್ಛತಾ ಕೆಲಸದಲ್ಲಿ ತೊಡಗಿ ಕೊಂಡಿರುವುದನ್ನು ಕಾಣಬಹುದು. ಕೆಲವರು ಕಸವನ್ನು ಗೋಣಿ ಚೀಲಕ್ಕೆ ತುಂಬಿಸುತ್ತಿದ್ದರೆ,  ಇನ್ನು ಕೆಲವರು ಗುಡಿಸಿ ಸ್ವಚ್ಛಗೊಳಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಇಲ್ಲಿ ಮನೆಯ ಮುದ್ದಿನ ಶ್ವಾನವಿರುವುದನ್ನು ಕಾಣಬಹುದು. ಇದೆಲ್ಲದರ ನಡುವೆ ಮೊಲವೊಂದು ಅಡಗಿ ಕುಳಿತಿದ್ದು, ಈ ಪ್ರಾಣಿ ಎಲ್ಲಿದೆ ಎಂದು ಹುಡುಕುವ ಸವಾಲು ಇಲ್ಲಿದೆ.

ಇದನ್ನೂ ಓದಿ: ಒಣಗಿದ ಎಲೆಗಳ ನಡುವೆ ಅಡಗಿ ಕುಳಿತಿರುವ ಹಾವನ್ನು ಗುರುತಿಸಬಲ್ಲಿರಾ

ಮೊಲವನ್ನು ಗುರುತಿಸಲು ಸಾಧ್ಯವಾಯಿತೇ?

ಕೇವಲ ಹದಿನೈದು ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಮೊಲವನ್ನು ಗುರುತಿಸುವುದು ಅಸಾಧ್ಯ. ಆದರೆ ವೀಕ್ಷಣಾ ಸಾಮರ್ಥ್ಯ ಹೊಂದಿದವರು ಮಾತ್ರ ಈ ಒಗಟನ್ನು ಸಲೀಸಾಗಿ ಈಗಾಗಲೇ ಬಿಡಿಸಲು ಸಾಧ್ಯವಾಗಿದೆ. ನಿಮ್ಮ ಕಣ್ಣಿಗೆ ಮೊಲ ಕಾಣಿಸಿಲ್ಲ ಎಂದಾದರೆ ಟೆನ್ಶನ್ ಮಾಡಿಕೊಳ್ಳಬೇಡಿ, ನಾವೇ ಈ ಮುದ್ದಾದ ಪ್ರಾಣಿ ಎಲ್ಲಿದೆ ಎಂದು ಹೇಳುತ್ತೇವೆ. ಈ ಕೆಳಗಿನ ಫೋಟೋವನ್ನು ನೋಡಿ. ಇಲ್ಲಿ ಮೊಲವನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಹಿ ಸುದ್ದಿ ಹಂಚಿಕೊಂಡ ‘ಸು ಫ್ರಮ್ ಸೋ’ ಭಾನು

Source link

Exit mobile version