Headlines

ಐಪಿಒಗೆ ಮುನ್ನ ಫ್ಲಿಪ್​ಕಾರ್ಟ್ ಗ್ರೂಪ್ ಸಿಎಫ್​ಒ ಸ್ಥಾನ ಬಿಟ್ಟ ಶ್ರೀರಾಮ್ ವೆಂಕಟರಾಮ್

ನವದೆಹಲಿ, ಮಾರ್ಚ್ 20: ಅಮೆರಿಕದ ಎಂಎನ್​ಸಿ ಕಂಪನಿಯಾದ ವಾಲ್ಮಾರ್ಟ್​ನ ಒಡೆತನದ ಫ್ಲಿಪ್​ಕಾರ್ಟ್ ಸಂಸ್ಥೆಯ (Flipkart) ಎಕ್ಸಿಕ್ಯೂಟಿವ್ ಸ್ಥಾನಪಲ್ಲಟವಾಗುತ್ತಿದೆ. ಫ್ಲಿಪ್​ಕಾರ್ಟ್ ಗ್ರೂಪ್ ಚೀಫ್ ಫೈನಾನ್ಷಿಯಲ್ ಆಫೀಸರ್ ಸ್ಥಾನದಿಂದ ಶ್ರೀರಾಮ್ ವೆಂಕಟರಾಮ್ (Sriram Venkatram) ಅವರು ಕೆಳಗಿಳಿಯಲಿದ್ದಾರೆ. ಭಾರತದ ಅತಿದೊಡ್ಡ ಇಕಾಮರ್ಸ್ ಕಂಪನಿಗಳಲ್ಲಿ ಒಂದೆನಿಸಿರುವ ಫ್ಲಿಪ್​ಕಾರ್ಟ್ ಈ ಸಂಗತಿಯನ್ನು ಶುಕ್ರವಾರ ಪ್ರಕಟಿಸಿದೆ. ಶ್ರೀರಾಮ್ ವೆಂಕಟರಾಮ್ ಅವರು 2015ರಲ್ಲಿ ಫ್ಲಿಪ್​ಕಾರ್ಟ್ ಸೇರಿದ್ದರು. ಹಲವು ಮುಂಚೂಣಿ ಹುದ್ದೆಗಳನ್ನು ನಿಭಾಯಿಸುತ್ತಾ ಹೋಗಿದ್ದ ಅವರು 2018ರಲ್ಲಿ ಗ್ರೂಪ್​ನ ಸಿಎಫ್​ಒ ಆಗಿ ಕಂಪನಿಯ ಹಣಕಾಸು ವಿಭಾಗದ ಚುಕ್ಕಾಣಿ…

Read More

ಯಾವ ರಾಶಿಗೆ ಇಂದು ರಾಯರ ಅನುಗ್ರಹ: ತಪ್ಪದೇ ಈ ಸೇವೆಯನ್ನು ಮಾಡಿ

ಬೆಂಗಳೂರು, ಏ.23: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 23 ಏಪ್ರಿಲ್ 2026, ಗುರುವಾರದ ದ್ವಾದಶ ರಾಶಿಗಳ ದೈನಂದಿನ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವನಾಂ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ಸಪ್ತಮಿ, ಪುನರ್ವಸು ನಕ್ಷತ್ರ, ಸುಕರ್ಮ ಯೋಗ ಮತ್ತು ಗರಜಕರಣಗಳಿಂದ ಕೂಡಿರುವ ಈ ದಿನದ ಮಹತ್ವವನ್ನು ಅವರು ವಿವರಿಸಿದ್ದಾರೆ. ಇಂದು ರವಿ ಮೇಷ ರಾಶಿಯಲ್ಲಿ ಮತ್ತು ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ. ಈ ದಿನ ಗಂಗಾ…

Read More

ಮಂಗಳಮುಖಿ ಎಂದು ಗೊತ್ತಿದ್ದರೂ ಪ್ರೀತಿಯಲ್ಲಿ ಬಿದ್ದ ಯುವಕ: ಆಮೇಲಾಗಿದ್ದು ದುರಂತ – Kannada News | Love Turns Tragic in Ballari: Transgender Partner Youth Found Dead, Police Probe Suicide or Murder Angle

ಶೇಖರ್ ಅಲಿಯಾಸ್ ಮಣಿ, ಸುಹಾಸಿನಿImage Credit source: tv9 ಬಳ್ಳಾರಿ, ಫೆಬ್ರವರಿ 18: ಬಳ್ಳಾರಿ (Ballari) ನಗರದ ಕೆಎಂಎಫ್ (KMF) ಡೈರಿ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ಮಂಗಳಮುಖಿ ಮತ್ತು ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮನೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮೃತರನ್ನು ಮಂಗಳಮುಖಿ ಸುಹಾಸಿನಿ (29) ಹಾಗೂ ಶೇಖರ್ ಅಲಿಯಾಸ್ ಮಣಿ (31) ಎಂದು ಗುರುತಿಸಲಾಗಿದೆ. ಶೇಖರ್ ವಿಜಯನಗರ ಜಿಲ್ಲೆಯ…

Read More

Karnataka Budget 2026 Highlights: ಸಿಎಂ ಸಿದ್ದರಾಮಯ್ಯ 3 ಗಂಟೆ 5 ನಿಮಿಷ ಮಂಡಿಸಿದ 2026-27ರ ಬಜೆಟ್​ ಮುಖ್ಯಾಂಶ ಇಲ್ಲಿದೆ

ಬೆಂಗಳೂರು, (ಮಾರ್ಚ್ 06): ಸಿಎಂ ಸಿದ್ದರಾಮಯ್ಯನವರು (Siddaramaiah) 2026-27ನೇ ಸಾಲಿನ  ರಾಜ್ಯದ ಆಯವ್ಯಯ ಮಂಡಿಸಿದ್ದಾರೆ (Karnataka Budget 2026). ಈ ಬಾರಿ ಬಜೆಟ್ ಗಾತ್ರ 4.48 ಲಕ್ಷ ಕೋಟಿ ರೂಪಾಯಿ. ಇದರೊಂದಿಗೆ 2025ನೇ ಸಾಲಿನ ಕರ್ನಾಟಕ ಬಜೆಟ್​​ ಗಿಂತ ಈ ಬಾರಿ 40 ಸಾವಿರ ಕೋಟಿ ರೂ. ಹೆಚ್ಚಳವಾಗಿದೆ. ರೈತರು, ಧಮನಿತರು, ಕಾರ್ಮಿಕ ಪರ ಬಜೆಟ್ ಇದಾಗಿದೆ ಎಂದು ಸಿದ್ದರಾಮಯ್ಯನವರು 3 ಗಂಟೆ 5 ನಿಮಿಷ ಮಂಡಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ 40 ಸಾವಿರ ಕೋಟಿ…

Read More

ಮುಂಬೈ ಇಂಡಿಯನ್ಸ್​ ತಂಡದ ಸೋಲಿನ ಸೀಕ್ರೆಟ್ ಬಿಚ್ಚಿಟ್ಟ ಹಾರ್ದಿಕ್ ಪಾಂಡ್ಯ! – Kannada News | Hardik pandya Post Match interview after MI vs RR Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 69ನೇ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ತಂಡ ಮುಗ್ಗರಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್​ಗಳಲ್ಲಿ 205 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 175 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಕೊನೆಯ ಪಂದ್ಯದಲ್ಲಿ ಮುಂಬೈ ಪಡೆ 30 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ…

Read More

Video: ಮೊದಲ ಬಾರಿಗೆ ಕಡಲ ತೀರಕ್ಕೆ ಭೇಟಿ ನೀಡಿ ಸೌಂದರ್ಯ ಸವಿದ ವೃದ್ಧ ದಂಪತಿ – Kannada News | An elderly couple visited the beach for the first time and enjoyed its beauty.

ನಮ್ಮ ಅಜ್ಜ ಅಜ್ಜಿಯಂದಿರಿಗೆ (grandparents) ಮನೆ ಬಿಟ್ಟರೆ ಪ್ರಪಂಚ ಬೇರೆ ಇಲ್ಲ. ಹೀಗಾಗಿ ಟ್ರಿಪ್, ಟ್ರಕ್ಕಿಂಗ್, ಸುತ್ತಾಟ ಇದ್ಯಾವುದನ್ನು ಎಂಜಾಯ್ ಮಾಡಿದವರೇ ಅಲ್ಲ. ಮಕ್ಕಳು, ಮೊಮ್ಮಕ್ಕಳು ಕರೆದುಕೊಂಡು ಹೋದರಷ್ಟೇ ಅವರ ಹಿಂದೆಯೇ ಪುಟಾಣಿ ಮಕ್ಕಳಂತೆ ಬರುತ್ತಾರೆ. ಇದೀಗ ವೃದ್ಧ ದಂಪತಿ ಮೊದಲ ಬಾರಿಗೆ ಬೀಚ್ (beach) ನೋಡಲು ಬಂದಿದ್ದಾರೆ. ಹೌದು, ಮೊದಲ ಬಾರಿಗೆ ಸಮುದ್ರ ತೀರದಲ್ಲಿ ನಡೆಯುತ್ತಾ, ಅಲೆಗಳನ್ನು ನೋಡುತ್ತಾ ಖುಷಿ ಪಡುತ್ತಿರುವ ವೃದ್ಧ ದಂಪತಿಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ…

Read More

ಚಾಮರಾಜನಗರ: ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ಹೋದ ಪತ್ನಿಗೆ ‘ಸಾಮಾಜಿಕ ಬಹಿಷ್ಕಾರ’! – Kannada News | Inhuman Social Boycott in Chamarajanagar: Kenchamma Fights for Justice Against Elders

ಚಾಮರಾಜನಗರ, ಏ.17: ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡಲು ತವರು ಮನೆಗೆ ಹೋದ ಮಹಿಳೆಗೆ ಗ್ರಾಮದ ಯಜಮಾನರು ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ಅನಿಷ್ಠ ಪದ್ಧತಿಯನ್ನು ಮುಂದುವರಿಸಿದ್ದಾರೆ.ಇದೀಗ ಈ ಬಗ್ಗೆ ಭಾರೀ ಅಕ್ರೋಶ ವ್ಯಕ್ತವಾಗಿದೆ. ಯರಂಬಾಡಿ ಮೂಲದ ಕೆಂಚಮ್ಮ ಎಂಬುವವರು ಹೂಗ್ಯಂ ಗ್ರಾಮದ ರಾಮು ಎಂಬುವವರನ್ನು ವಿವಾಹವಾಗಿದ್ದರು. ಇತ್ತೀಚೆಗೆ ಕೆಂಚಮ್ಮ ಅವರ ತಾಯಿಗೆ ಆರೋಗ್ಯ ಕೈಕೊಟ್ಟ ಕಾರಣ, ಅವರನ್ನು ಉಪಚರಿಸಲು ಕೆಂಚಮ್ಮ ತವರು ಮನೆಗೆ ತೆರಳಿದ್ದರು. ತವರು…

Read More

ಮದುವೆಯಾಗಿ ಆರೇ ತಿಂಗಳಿಗೆ ಮಹಿಳೆ ಸಾವು: ವರದಕ್ಷಿಣೆ ಕಿರುಕುಳ, ಕೊಲೆ ಮಾಡಿ ನೇಣು ಹಾಕಿರುವ ಆರೋಪ – Kannada News | Lucknow Dowry Death: Newlywed Found Dead, Family Alleges Murder and Harassment

ಪತಿಯೊಂದಿಗೆ ಮೃತ ಮಹಿಳೆ ಶ್ವೇತಾ Image Credit source: NDTV ಲಕ್ನೋ, ಮೇ 27: ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ(Dowry)ಗಾಗಿ ಅಮಾಯಕ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈಗ ಲಕ್ನೋದಲ್ಲಿ ಮತ್ತೊಂದು ಮಹಿಳೆಯನ್ನು ಬಲಿ ಪಡೆದಿದೆ. ಮದುವೆಯಾಗಿ ಕೇವಲ ಆರೇ ತಿಂಗಳಿಗೆ ತನ್ನ ಅತ್ತೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕಾರು ಕೊಡಿಸುವಂತೆ ಪತಿ ಮತ್ತು ಆತನ ಕುಟುಂಬದವರು ನಿತ್ಯ ಕಿರುಕುಳ ನೀಡುತ್ತಿದ್ದರು, ಅದೇ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ಶುರುವಾಯ್ತು…

Read More

Daily Devotional: ಕಾಲಾಷ್ಟಮಿಯನ್ನು ಯಾಕೆ ಆಚರಿಸಬೇಕು?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕಾಲಾಷ್ಟಮಿಯನ್ನು ಯಾಕೆ ಆಚರಿಸಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಕಾಲಾಷ್ಟಮಿಯು ಮಹತ್ತರವಾದ ಪ್ರಭಾವವನ್ನು ಬೀರುವ, ಪರಿವರ್ತನೆ ಮತ್ತು ಅದೃಷ್ಟವನ್ನು ತರುವ, ಸಂಕಟಗಳನ್ನು ದೂರಮಾಡುವ ವಿಶೇಷ ಪರ್ವಕಾಲವಾಗಿದೆ. ಪ್ರತಿ ತಿಂಗಳ ಕೃಷ್ಣ ಪಕ್ಷದ ಅಷ್ಟಮಿ ತಿಥಿಯನ್ನು ಕಾಲಾಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನದಂದು ಶಿವನ ಉಗ್ರ ರೂಪವಾದ ಕಾಲಭೈರವನನ್ನು ಆರಾಧಿಸಲಾಗುತ್ತದೆ. ಕಾಲಭೈರವನು ಕಾಲದ ಅಧಿಪತಿಯಾಗಿದ್ದು, ಅತ್ಯಂತ ಬೇಗ ಫಲಿತಾಂಶಗಳನ್ನು ನೀಡುವ ಶಕ್ತಿಯನ್ನು ಹೊಂದಿದ್ದಾನೆ. ಮನೆ ಕಟ್ಟುವ ಕನಸು, ವಿವಾಹ, ಮಕ್ಕಳ ಪ್ರಾಪ್ತಿ, ಆರೋಗ್ಯ…

Read More

ಅವರೇನಾ ಇವರು? ವಿಶ್ವಕಪ್ ಗೆದ್ದ ಬೆನ್ನಲ್ಲೇ ರೈಲು ಹತ್ತಿ ಬಂದ ಶಿವಂ ದುಬೆ!

ಟಿ20 ವಿಶ್ವಕಪ್​ ಗೆದ್ದ ಬಳಿಕ ಟೀಮ್ ಇಂಡಿಯಾ ಆಟಗಾರರು ಅಹಮದಾಬಾದ್​ನ ವಿಮಾನ ನಿಲ್ದಾಣದತ್ತ ಮುಖ ಮಾಡಿದ್ದರು. ಆದರೆ ಶಿವಂ ದುಬೆ ಮಾತ್ರ ರೈಲು ನಿಲ್ದಾಣದತ್ತ ತೆರಳಿದ್ದರು. ಅಷ್ಟೇ ಅಲ್ಲದೆ ಮುಂಜಾನೆ ಟ್ರೈನ್ ಹತ್ತುವ ಮೂಲಕ ಮುಂಬೈಗೆ ಬಂದಿಳಿದಿದ್ದರು. ಅಂದರೆ ವಿಶ್ವಕಪ್ ಗೆದ್ದ ಬಳಿಕ ದುಬೆ ಯಾರಿಗೂ ಗೊತ್ತಾಗದಂತೆ ರೈಲಿನಲ್ಲಿ ಪ್ರಯಾಣಿಸಿರುವುದು ಇದೀಗ ಬಹಿರಂಗವಾಗಿದೆ. ನ್ಯೂಝಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ 96 ರನ್​ಗಳ ಅಮೋಘ ಜಯ ಸಾಧಿಸಿದ ಬಳಿಕ ಟೀಮ್ ಇಂಡಿಯಾ ಆಟಗಾರರು ಸಂಭ್ರಮದಲ್ಲಿದ್ದರು. ಅದರಲ್ಲೂ ಟ್ರೋಫಿಯೊಂದಿಗೆ ಹೋಟೆಲ್…

Read More