ಆಸ್ಕರ್ ರೇಸಿನಲ್ಲಿರುವ ‘ಹೋಮ್​ಬೌಂಡ್​’ಗೆ ಕಾನೂನು ಸಂಕಷ್ಟ – Kannada News | Oscar official entry of India Homebound is in legal trouble

ಭಾರತದಿಂದ ಈ ಬಾರಿ ಆಸ್ಕರ್​​ಗೆ (Oscar) ಅಧಿಕೃತ ಆಯ್ಕೆಯಾಗಿ ಹಿಂದಿ ಸಿನಿಮಾ ‘ಹೋಮ್​​ಬೌಂಡ್’ ಅನ್ನು ಕಳಿಸಲಾಗಿದೆ. ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ‘ಹೋಮ್​​ಬೌಂಡ್’ ಸಿನಿಮಾ ಸ್ಪರ್ಧೆಯಲ್ಲಿದ್ದು, ಈಗಾಗಲೇ ಎರಡು ಹಂತ ದಾಟಿ 15 ಸಿನಿಮಾಗಳ ಪಟ್ಟಿಯಲ್ಲಿ ಶಾರ್ಟ್ ಲಿಸ್ಟ್ ಸಹ ಆಗಿದೆ. ಸಿನಿಮಾ ಆಸ್ಕರ್ ​​ರೇಸಿನಲ್ಲಿ ಒಳ್ಳೆಯ ಪ್ರದರ್ಶನ ಮಾಡುತ್ತಿರುವಾಗಲೇ ಸಿನಿಮಾ ಕಾನೂನು ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಸಿನಿಮಾದ ವಿರುದ್ಧ ಕೃತಿಚೌರ್ಯ ಆರೋಪವನ್ನು ಲೇಖಕಿಯೊಬ್ಬರು ಮಾಡಿದ್ದಾರೆ.

ಪತ್ರಕರ್ತೆ, ಲೇಖಕಿಯೂ ಆಗಿರುವ ಪೂಜಾ ಚಂಗೋಯ್ವಾಲ ಅವರು ‘ಹೋಮ್​​ಬೌಂಡ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಧರ್ಮಾ ಪ್ರೊಡಕ್ಷನ್ ಮತ್ತು ನೆಟ್​ಫ್ಲಿಕ್ಸ್​ ವಿರುದ್ಧ ದಾವೆ ಹೂಡಿದ್ದಾರೆ. ತಮ್ಮ ಕತೆಯೊಂದನ್ನು ಕದ್ದು ಸಿನಿಮಾ ಮಾಡಲಾಗಿದೆ ಎಂದು ಪೂಜಾ ಅವರು ಆರೋಪ ಮಾಡಿದ್ದಾರೆ. ತಮಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದ್ದಾರೆ.

ಪೂಜಾ ಅವರು 2021 ರಲ್ಲಿ ‘ಹೋಮ್​​ಬೌಂಡ್’ ಹೆಸರಿನ ಕತೆಯೊಂದನ್ನು ಬರೆದಿದ್ದರು. ಇದೀಗ ಆಸ್ಕರ್ ರೇಸಿನಲ್ಲಿರುವ ‘ಹೋಮ್​​ಬೌಂಡ್’ ಸಿನಿಮಾವು ತಮ್ಮದೇ ಬರೆದಿರುವ ಕತೆಯನ್ನು ಒಳಗೊಂಡಿದ್ದು, ಕತೆ ಬಳಸುವುದಕ್ಕೆ ನಿರ್ದೇಶಕ ನೀರಜ್ ಗಯ್​​ವಾನ್ ಆಗಲಿ ನಿರ್ಮಾಣ ಸಂಸ್ಥೆಯಾದ ಧರ್ಮಾ ಪ್ರೊಡಕ್ಷನ್ಸ್ ಆಗಲಿ ಅನುಮತಿ ಪಡೆದಿಲ್ಲ ಎಂದು ಅವರು ಆರೋಪಿಸಿದ್ದಾರೆ. ನಿರ್ಮಾಣ ಸಂಸ್ಥೆಗೆ ಈಗಾಗಲೇ ನೊಟೀಸ್ ಅನ್ನು ಸಹ ಕಳಿಸಿದ್ದಾರೆ.

ಇದನ್ನೂ ಓದಿ:ಆಸ್ಕರ್​​ಗೆ ಶಾರ್ಟ್​​ಲಿಸ್ಟ್ ಆದ ಭಾರತೀಯ ಸಿನಿಮಾ ‘ಹೋಮ್​​ಬೌಂಡ್’: ಮುಂದೇನು?

‘ನನ್ನ ಕತೆ ಹಾಗೂ ‘ಹೋಮ್​​ಬೌಂಡ್’ ಸಿನಿಮಾದ ಕತೆ ಎರಡರಲ್ಲೂ ಸಾಕಷ್ಟು ಸಾಮ್ಯತೆ ಇದೆ. ಎರಡೂ ಸಹ ಕೋವಿಡ್ ಪರಿಣಾಮಗಳ ಕುರಿತಾದ ಕತೆಯನ್ನು ಒಳಗೊಂಡಿವೆ. ತಮ್ಮ ಕತೆಯ ಹೆಸರನ್ನೇ ಅನಾಮತ್ತಾಗಿ ಎತ್ತಿಕೊಂಡಿರುವ ಜೊತೆಗೆ, ಸಿನಿಮಾದ ಎರಡನೇ ಭಾಗದಲ್ಲಿ ನನ್ನ ಕತೆಯಲ್ಲಿರುವ ಹಲವು ಸನ್ನಿವೇಶಗಳು, ಪಾತ್ರಗಳು, ಘಟನಾವಳಿಗಳು ಮತ್ತು ಸಂಭಾಷಣೆಗಳನ್ನು ಸಹ ಬಳಸಿಕೊಳ್ಳಲಾಗಿದೆ’ ಎಂದು ಲೇಖಕಿ ಪೂಜಾ ಆರೋಪಿಸಿದ್ದಾರೆ.

ಲೇಖಕಿಯ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಧರ್ಮಾ ಪ್ರೊಡಕ್ಷನ್ಸ್, ‘ಲೇಖಕಿ ಪೂಜಾ ಮಾಡಿರುವ ಆರೋಪಗಳು ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದವು. ನಮ್ಮ ನಿರ್ಮಾಣದ ‘ಹೋಮ್​​ಬೌಂಡ್’ ಸಿನಿಮಾ ನ್ಯೂಯಾರ್ಕ್ ಟೈಮ್ಸ್​​ನಲ್ಲಿ ಬಷರತ್ ಪೀರ್ ಎಂಬುವರು ಬರೆದಿದ್ದ ಆರ್ಟಿಕಲ್​​ ಒಂದನ್ನು ಆಧರಿಸಿದ್ದು, ಆ ಆರ್ಟಿಕಲ್​​ನ ಮಾಹಿತಿಯನ್ನು ಸಿನಿಮಾಕ್ಕೆ ಬಳಸಿಕೊಳ್ಳಲು ನಾವು ಅವಶ್ಯಕ ಅನುಮತಿಗಳನ್ನು ಪಡೆದುಕೊಂಡಿದ್ದೇವೆ ಮತ್ತು ಸಿನಿಮಾನಲ್ಲಿ ಮೂಲ ಲೇಖಕರಿಗೆ ನಾವು ಗೌರವ ಸಹ ಸಲ್ಲಿಸಿದ್ದೇವೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Viral: ತಿಂಗಳಿಗೆ 4 ಲಕ್ಷ ರೂ ಸಂಪಾದನೆ ಮಾಡಿದ್ರೂ ಖುಷಿ ಅನ್ನೋದೇ ಇಲ್ಲ ಎಂದ ಉದ್ಯಮಿ – Kannada News | A man says he is not happy even though he earns 4 lakhs per month

ಕೈ ತುಂಬಾ ಸಂಬಳ ಸಿಗೋ ದುಡಿಮೆ (job) ಹೊಂದಿದ್ದರೂ ಕೆಲವರಿಗೆ ತೃಪ್ತಿ ಅನ್ನೋದೆ ಇರಲ್ಲ. ಜೀವನ ಪರ್ಯಂತ ಕೊರತೆಯೊಂದು ಕಾಡುತ್ತಿರುತ್ತದೆ. ಇಲ್ಲೊಬ್ಬ ಉದ್ಯಮಿಗೂ (Entrepreneur) ಅದೇ ರೀತಿಯಾಗಿದೆ. ತಿಂಗಳಿಗೆ 4 ಲಕ್ಷ ರೂ ಸಂಪಾದಿಸುವ ಉದ್ಯಮಿ ಅತೃಪ್ತರಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಸಲಹೆಯನ್ನು ನೀಡಿದ್ದಾರೆ.

r/Indian_ flex ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ನನಗೀಗ 32 ವರ್ಷ ವಯಸ್ಸು. ತಿಂಗಳಿಗೆ 4.1 ಲಕ್ಷ ಸಂಪಾದಿಸಲು ಕಷ್ಟಪಟ್ಟಿದ್ದೇನೆ ಆದರೆ ಸಂತೋಷವಾಗಿಲ್ಲ. ಎಲ್ಲವೂ ಯಶಸ್ವಿಯಾಗಿರುವಂತೆ ಕಾಣುತ್ತದೆ. ನನಗೆ ಏನು ಸಂತೋಷವಾಗುತ್ತದೆ ಎಂಬುದೇ ತಿಳಿದಿಲ್ಲ. ಯಾವ ಕೆಲಸವು ನನಗೆ ಸಂತೋಷ ಅಥವಾ ತೃಪ್ತಿ ನೀಡುತ್ತಿಲ್ಲ . ಹಣ ಸಂತೋಷ ತರುತ್ತದೆ ಎಂದು ಭಾವಿಸಿದ್ದ ನಾನು ಆ ಉತ್ಸಾಹ ಇಂದು ಕಾಣಿಸುತ್ತಿಲ್ಲ; ಬದಲಾಗಿ, ಬದುಕಿನಲ್ಲಿ ಏನೋ ಕಾಣೆಯಾಗಿದೆ ಎನ್ನುವ ಭಾವನೆ ಕಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ:ಯುವಕನ ಕೈ ಹಿಡಿದ ವಾಕಿಂಗ್ ಕಾಫಿ ಶಾಪ್, ವೈರಲ್ ಆಯ್ತು ದೃಶ್ಯ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೇರೆ ಹವ್ಯಾಸ ಬೆಳೆಸಿಕೊಳ್ಳಿ ಎಂದಿದ್ದಾರೆ. ಇನ್ನೊಬ್ಬರು, ಬೇರೆ ವ್ಯವಹಾರ ಪ್ರಾರಂಭಿಸಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ನಿಮ್ಮ ಪರಿಸ್ಥಿತಿಯಲ್ಲಿ ನಾನಿದ್ದೇವೆ. ನನಗೂ ಆ ಭಾವನೆಯೇ ಬರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಆಸ್ತಿಯನ್ನು ತಾಯಿ ಹೆಸರಿಗೆ ವರ್ಗಾಯಿಸಿದ್ದಕ್ಕಾಗಿ ವಿಚ್ಛೇದಿತ ಪತಿಯನ್ನು ಹಿಗ್ಗಾಮುಗ್ಗ ಥಳಿಸಿದ ಮಹಿಳೆ – Kannada News | Viral Video: Dispute Over Assets Turns Physical After Alimony Claim Rejected

ಆಸ್ತಿಯನ್ನು ತಾಯಿಗೆ ವರ್ಗಾಯಿಸಿದ್ದಕ್ಕಾಗಿ ಕೋಪಗೊಂಡ ಮಹಿಳೆ ಕೌಟುಂಬಿಕ ನ್ಯಾಯಾಲಯದಲ್ಲೇ ವಿಚ್ಛೇದಿತ ಪತಿಗೆ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಇಬ್ಬರಿಗೂ ವಿಚ್ಛೇದನವಾಗಿತ್ತು. ಮಹಿಳೆ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಳು. ಆದರೆ ನ್ಯಾಯಾಲಯ ತಿರಸ್ಕರಿಸಿತ್ತು. ಪತಿ ಅಷ್ಟೂ ಆಸ್ತಿಯನ್ನು ತನ್ನ ತಾಯಿಗೆ ವರ್ಗಾಯಿಸಿದ್ದ, ಅದಕ್ಕೆ ಕೋಪಗೊಂಡ ಮಹಿಳೆ ನ್ಯಾಯಾಲಯದಲ್ಲೇ ಪತಿಗೆ ಹೊಡೆದಿದ್ದಾಳೆ. ಅದರೆ ಪತಿ ಆಕೆಯನ್ನು ನೋಡಿ ನಗುತ್ತಲೇ ಇದ್ದ. ಇದು ವೈರಲ್ ವಿಡಿಯೋ ಆಗಿದ್ದು, ಎಲ್ಲಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗಿಲ್ಲಿ ಬಗ್ಗೆ ಇದ್ದ ದೊಡ್ಡ ಅನುಮಾನ ಕ್ಲಿಯರ್ ಮಾಡಿದ ತಂದೆ-ತಾಯಿ – Kannada News | Bigg Boss Kannada 12: Gilli’s Mom Confirms Natural Behavior in Family Week

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಫ್ಯಾಮಿಲಿ ವೀಕ್ ನಡೆಯುತ್ತಿದೆ. ಎಲ್ಲಾ ಸ್ಪರ್ಧಿಗಳ ಕುಟುಂಬದವರು ಬಂದು ಸ್ಪರ್ಧಿಗಳಿಗೆ ಹೊಸ ಹುರುಪು ನೀಡುತ್ತಿದ್ದಾರೆ. ಗಿಲ್ಲಿ ತಂದೆ ಕುಳ್ಳಯ್ಯ ಹಾಗೂ ತಾಯಿ ಸವಿತಾ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರು ಗಿಲ್ಲಿ ಅಷ್ಟೇ ಎಲ್ಲರನ್ನೂ ನಗಿಸಿದ್ದಾರೆ. ಗಿಲ್ಲಿ ರೀತಿಯೇ ಅವರು ನ್ಯಾಚುರಲ್ ಆಗಿ ಇದ್ದರು. ಗಿಲ್ಲಿ ಕೂಡ ಹೆಚ್ಚು ಎಮೋಷನ್ ತೋರಿಸಿಕೊಳ್ಳದೆ ಅವರನ್ನು ಸ್ವಾಗತಿಸಿಕೊಂಡರು. ಈ ವೇಳೆ ಗಿಲ್ಲಿ ಬಗ್ಗೆ ಒಂದು ಅಚ್ಚರಿಯ ಮಾಹಿತಿಯನ್ನು ಸವಿತಾ ನೀಡಿದ್ದಾರೆ.

ಕುಳ್ಳಯ್ಯ ಅವರು ಒಂದು ದೊಣ್ಣೆ ಹಿಡಿದು ಬಿಗ್ ಬಾಸ್ ಮನೆ ಒಳಗೆ ಬಂದರು. ಅವರು ಗಿಲ್ಲಿಗೆ ಏಟು ಹೊಡೆದಂತೆ ನಟಿಸಿದರು. ಈ ದೊಣ್ಣೆಯನ್ನು ತೆಗೆದುಕೊಂಡು ರಘು ಹಾಗೂ ಕಾವ್ಯಾ ಅವರು ಗಿಲ್ಲಿಗೆ ಹೊಡೆಯುವಾಗ ಅವರ ಮನಸ್ಸಿಗೆ ನೋವಾಯಿತು. ಈ ವೇಳೆ ರಘು ಅವರು, ‘ನಾನು ಗಟ್ಟಿಯಾಗಿ ಹೊಡೆದಿಲ್ಲ’ ಎಂದು ಸ್ಪಷ್ಟನೆ ಕೊಟ್ಟರು.

ಗಿಲ್ಲಿಗೆ ತೆಂಗಿನ ಎಣ್ಣೆಯನ್ನು ತಲೆಗೆ ಹಾಕಿ, ಆ ಬಳಿಕ ಸ್ನಾನ ಮಾಡಿಸಿಕೊಟ್ಟರು ತಾಯಿ ಸವಿತಾ. ಗಿಲ್ಲಿ ತಲೆಗೆ ಎಣ್ಣೆ ಹಚ್ಚುವಾಗ, ‘ನೀನು ಹೊರಗೆ ಹೇಗೆ ಇರ್ತಿದ್ಯೋ ಇಲ್ಲಿಯೂ ಹಾಗೆ ಇರ್ತೀಯಾ. ನನಗೆ ಅದು ಖುಷಿ ಕೊಟ್ಟಿದೆ. ನಿಮ್ಮ ಅಪ್ಪ ತುಂಬಾನೇ ಖುಷಿಯಾದರು’ ಎಂದರು ಸವಿತಾ. ‘ಹೊರಗೆ ಯಾವ ರೀತಿ ಇದೀನೋ ಇಲ್ಲಿಯೂ ಅದೇ ರೀತಿ ಇರಬೇಕು. ಆಗಲೇ ಉತ್ತಮವಾಗಿರುತ್ತದೆ’ ಎಂದರು ಗಿಲ್ಲಿ.

ಈ ಮತುಗಳನ್ನು ಅಶ್ವಿನಿ ಕೇಳಿಸಿಕೊಳ್ಳುತ್ತಿದ್ದರು. ‘ಹೊರಗೂ ಹೀಗೆಯೇ ಇರ್ತಾನಾ? ನಾನೆಲ್ಲೋ ಇಲ್ಲಿ ಮಾತ್ರ ಅವನು ಹಾಗೆ ಆಡೋದು ಎಂದುಕೊಂಡಿದ್ದೆ’ ಎಂದಿದ್ದಾರೆ. ಆಗ ಸವಿತಾ ಅವರು, ‘ಇಲ್ಲ, ಅವನು ಎಲ್ಲ ಕಡೆಗಳಲ್ಲೂ ಹೀಗೆಯೇ ಇರೋದು’ ಎಂದು ಸ್ಪಷ್ಟನೆ ಕೊಟ್ಟರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿರುವಾಗಲೇ ಅಬ್ಬರದಲ್ಲಿ ರಿಲೀಸ್ ಆಯ್ತು ರಘು ನಟನೆಯ ಸಿನಿಮಾ

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ಅನೇಕರು ಭಾವಿಸಿದ್ದು ಇದೆ. ಈಗ ಅವರೆಲ್ಲರಿಗೂ ಸ್ಪಷ್ಟನೆ ಸಿಕ್ಕಂತೆ ಆಗಿದೆ. ಗಿಲ್ಲಿ ಅವರು ನ್ಯಾಚುರಲ್ ಆಗಿದ್ದಾರೆ. ಇದು ಕೆಲವರಿಗೆ ನಾಟಕದ ರೀತಿ ಅನಿಸುತ್ತಿದೆ. ಗಿಲ್ಲಿ ಏನೇ ಮಾಡಿದರೂ ಅದನ್ನು ಕೆಲವರು ಸಹಿಸಿಕೊಳ್ಳುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೆಲಮಂಗಲ: ತಿರುವಿನಲ್ಲಿ ನಿಯಂತ್ರಣ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು, ತಂದೆ-ಮಗ ಸ್ಥಳದಲ್ಲೇ ಸಾವು – Kannada News | Bengaluru Family Car Crash: Software Engineer, Father Dead; 4 Injured

ನೆಲಮಂಗಲ, ಡಿಸೆಂಬರ್ 26: ಗೌರಿಬಿದನೂರಿನಿಂದ ದಾಸರಹಳ್ಳಿಗೆ ಮರಳುತ್ತಿದ್ದ ಒಂದೇ ಕುಟುಂಬದವರು ತೋಟಗೆರೆ ಬಳಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಕ್ರಿಸ್‌ಮಸ್ ಹಬ್ಬದ ನಂತರ ಸಂಜೆ 7:30 ಕ್ಕೆ ಕುಟುಂಬ ಸಮೇತವಾಗಿ ವಾಪಸ್ ಆಗುತ್ತಿದ್ದ ವೇಳೆ ತೋಟಗೆರೆ ಟರ್ನಿಂಗ್ ನಲ್ಲಿ ಕಂಟ್ರೋಲ್ ಸಿಗದೆ  ಕಾರು ಮರಕ್ಕೆ ಡಿಕ್ಕಿಯಾಗಿದ್ದು ಸಾಪ್ಟ್ ವೇರ್ ಇಂಜಿನೀಯರ್ ಹರೀಶ್ (39) ಮತ್ತು ಅವರ ತಂದೆ ವೀರಭದ್ರ (80) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಯಿ ಗೌರಮ್ಮ (62), ಹರೀಶ್ ಪತ್ನಿ ಮೈತ್ರಿ (32), ಮಗಳು ಸಿರಿ (10), ಚಿಕ್ಕಮ್ಮನ ಮಗಳು ವಂದನ (8) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತಪಟ್ಟವರನ್ನು ನೆಲಮಂಗಲ ಸರ್ಕಾರಿ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಮಕ್ಕಳ ಮುಂದೆಯೇ ಪತ್ನಿಗೆ ಬೆಂಕಿ ಹಚ್ಚಿ, ಅದೇ ಬೆಂಕಿಗೆ ಮಗಳ ತಳ್ಳಿದ ಪಾಪಿ ತಂದೆ – Kannada News | Man Arrested After Woman Dies in Suspected Domestic Violence Case in Hyderabad

ಹೈದರಾಬಾದ್, ಡಿಸೆಂಬರ್ 26: ಮಕ್ಕಳ ಮುಂದೆಯೇ ತಂದೆಯೊಬ್ಬ ಪತ್ನಿಗೆ ಬೆಂಕಿ(Fire) ಹಚ್ಚಿದ್ದಲ್ಲದೆ ಅದೇ ಬೆಂಕಿಗೆ ಮಗಳನ್ನೂ ತಳ್ಳಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಪತಿ ಬೆಂಕಿ ಹಚ್ಚಿದ ಪರಿಣಾಮ ಮಹಿಳೆಯೊಬ್ಬರು ಸಜೀವ ದಹನಗೊಂಡಿದ್ದಾರೆ. ಮಗಳನ್ನು ಬೆಂಕಿಗೆ ತಳ್ಳಿ ಪರಾರಿಯಾಗಿದ್ದಾನೆ. ಕ್ರಿಸ್‌ಮಸ್‌ಗೆ ಒಂದು ದಿನ ಮೊದಲು ನಗರದ ನಲ್ಲಕುಂಟಾ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದೆ.
ವೆಂಕಟೇಶ್ ತನ್ನ ಪತ್ನಿ ತ್ರಿವೇಣಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 24 ರಂದು, ಮಕ್ಕಳ ಮುಂದೆಯೇ ತ್ರಿವೇಣಿ ಮೇಲೆ ಹಲ್ಲೆ ನಡೆಸಿ, ನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅವರ ಮಗಳು ತನ್ನ ತಾಯಿಯನ್ನು ಉಳಿಸಲು ಪ್ರಯತ್ನಿಸಿದಾಗ, ಆಕೆಯನ್ನೂ ಬೆಂಕಿಗೆ ತಳ್ಳಿ ಮನೆಯಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಅವರ ಕಿರುಚಾಟ ಕೇಳಿ ನೆರೆಹೊರೆಯವರು ಅವರ ಮನೆಗೆ ಓಡೋಡಿ ಬಂದಿದ್ದರು . ಆ ಹೊತ್ತಿಗೆ, ತೀವ್ರವಾದ ಸುಟ್ಟ ಗಾಯಗಳಿಂದ ತ್ರಿವೇಣಿ ಸಾವನ್ನಪ್ಪಿದ್ದರು. ಸಣ್ಣಪುಟ್ಟ ಗಾಯಗಳೊಂದಿಗೆ ಕೂದಲೆಳೆಯ ಅಂತರದಲ್ಲಿ ಪಾರಾದ ಅವರ ಮಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೆಂಕಟೇಶ್ ಮತ್ತು ತ್ರಿವೇಣಿ ಅವರದು ಪ್ರೇಮ ವಿವಾಹ.

ಮತ್ತಷ್ಟು ಓದಿ: ಕೊಲೆ ಆರೋಪ ಕೋರ್ಟ್​ನಲ್ಲಿ ಸಾಬೀತಾದರೂ ಮಹಿಳೆ ಅಪರಾಧಮುಕ್ತ! ಮಂಗಳೂರಲ್ಲೊಂದು ಅಚ್ಚರಿಯ ತೀರ್ಪು

ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಒಬ್ಬಳು ಮಗಳು ಮತ್ತು ಒಬ್ಬ ಮಗ. ವೆಂಕಟೇಶ್ ತನ್ನ ಹೆಂಡತಿಯ ಬಗ್ಗೆ ಅನುಮಾನ ಬೆಳೆಸಿಕೊಂಡು ಆಗಾಗ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ನಿರಂತರ ಕಿರುಕುಳ ಸಹಿಸಲಾಗದೆ ತ್ರಿವೇಣಿ ಇತ್ತೀಚೆಗೆ ತನ್ನ ಹೆತ್ತವರ ಮನೆಗೆ ಹೋಗಿದ್ದಳು.

ತ್ರಿವೇಣಿ ತನ್ನ ಬಳಿಗೆ ಹಿಂತಿರುಗಿದ ನಂತರ, ವೆಂಕಟೇಶ್ ತಾನು ಬದಲಾಗುತ್ತೇನೆ ಎಂದು ಅವಳನ್ನು ಮನವೊಲಿಸಿ ಮನೆಗೆ ಕರೆದುಕೊಂಡು ಬಂದಿದ್ದ ನಂತರ ಈ ಅಪರಾಧ ನಡೆದಿದೆ ಎನ್ನಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ವೆಂಕಟೇಶ್ ನನ್ನು ಹಿಡಿಯಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಈ ಘಟನೆಯು ಪ್ರದೇಶದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಕೌಟುಂಬಿಕ ಹಿಂಸಾಚಾರ ಮತ್ತು ಪತಿ ಅಥವಾ ಪತ್ನಿ ನಡುವಿನ ಮನಸ್ತಾಪಗಳು, ಅಪನಂಬಿಕೆಯಿಂದ ನಡೆಯುವ ಅಪರಾಧಗಳ ಬಗ್ಗೆ ಕಳವಳ ವ್ಯಕ್ತವಾಗಿದೆ.

ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:20 pm, Fri, 26 December 25

Source link

ಚಿಕ್ಕಬಳ್ಳಾಪುರ ದುರಂತ: ಮೃತರ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ – Kannada News | Chikkaballapur Tragedy: CM Siddaramaiah Announces Rs 5 Lakh Compensation for Victims’ Families

ಮೃತರ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ, ಡಿಸೆಂಬರ್ 26: ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಅಜ್ಜವಾರ ಗೇಟ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaih) ಅವರು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲು ಸೂಚನೆ ನೀಡಿದ್ದಾರೆ. ಪರಿಹಾರ ವಿತರಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದ್ದಾರೆ. ಗುರುವಾರ ರಾತ್ರಿ ಅಜ್ಜವಾರ ಗೇಟ್ ಸಮೀಪ ಟಿಪ್ಪರ್ ಲಾರಿ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ತೀವ್ರತೆಗೆ ಬೈಕ್‌ನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರನ್ನು ಮನೋಜ್, ನರಸಿಂಹಮೂರ್ತಿ, ನಂದೀಶ್ ಹಾಗೂ ಅರುಣ್ ಎಂದು ಗುರುತಿಸಲಾಗಿದೆ. ಎಲ್ಲರೂ ಅಜ್ಜವಾರ ಗ್ರಾಮದ ನಿವಾಸಿಗಳಾಗಿದ್ದು, ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಈ ದುರ್ಘಟನೆ ವಿಷಯವನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದರು. ಮೃತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಅವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಿಎಂ ಪರಿಹಾರ ಘೋಷಣೆ ಮಾಡಿದ್ದಾರೆ.

ಮೃತರ ಪೈಕಿ ನರಸಿಂಹ ಅವರ ವಿವಾಹ ಕೆಲ ತಿಂಗಳ ಹಿಂದಷ್ಟೇ ನಡೆದಿತ್ತು. ಪ್ರೀತಿಸಿ ಮದುವೆಯಾಗಿದ್ದ ಯುವತಿ, ಮದುವೆಯಾದ ಆರು ತಿಂಗಳೊಳಗೇ ವಿಧಿಯಾಟಕ್ಕೆ ಗಂಡನನ್ನು ಕಳೆದುಕೊಂಡಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.

ಇದನ್ನೂ ಓದಿ: ಹಠಕ್ಕೆ ಬಿದ್ದು ಮದುವೆಯಾಗಿದ್ದ ಯುವತಿ: ಆರೇ ತಿಂಗಳಲ್ಲಿ ಪತಿ ದಾರುಣ ಸಾವು

ಚಿತ್ರದುರ್ಗದಲ್ಲಿ ನಡೆದ ಬಸ್ ದುರಂತದ ಆಘಾತ ಕಹಿ ನೆನಪು ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ. ಚಿತ್ರದುರ್ಗ ಬಸ್ ಅಪಘಾತದಲ್ಲಿ ಈಗಾಗಲೇ 7 ಮಂದಿ ಮೃತಪಟ್ಟಿದ್ದು, ಸರಣಿ ಅಪಘಾತಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇನ್ಫೋಸಿಸ್​ನಲ್ಲಿ ಭರ್ಜರಿ ಸಂಬಳ; ಎಂಟ್ರಿ ಲೆವೆಲ್​ನಲ್ಲೇ 21 ಲಕ್ಷ ರೂ ಸ್ಯಾಲರಿ ಆಫರ್ – Kannada News | Infosys giving big salaries to freshers, offering upto Rs 21 lakh per annum package for specialized roles

ಬೆಂಗಳೂರು, ಡಿಸೆಂಬರ್ 26: ಐಟಿ ಸರ್ವಿಸಸ್ ಸಂಸ್ಥೆಯಾದ ಇನ್ಫೋಸಿಸ್ (Infosys) ತನ್ನಲ್ಲಿ ಎಂಟ್ರಿ ಲೆವೆಲ್ ಸಂಬಳದ ಮಟ್ಟವನ್ನು ಹೆಚ್ಚಿಸಿದೆ. ಹೊಸಬರಿಗೆ ಈ ಕಂಪನಿ 21 ಲಕ್ಷ ರೂವರೆಗೂ ವಾರ್ಷಿಕ ಪ್ಯಾಕೇಜ್ ಆಫರ್ ಮಾಡುತ್ತಿದೆ. ಇದು ವಿಶೇಷ ಟೆಕ್ನಾಲಜಿ ವಿಭಾಗದಲ್ಲಿ (Specialized technology roles) ನೇಮಕವಾಗುವ ಹೊಸ ಉದ್ಯೋಗಿಗಳಿಗೆ ಇನ್ಫೋಸಿಸ್ ಮಾಡುತ್ತಿರುವ ಭರ್ಜರಿ ಆಫರ್ ಆಗಿದೆ. ಐಟಿ ಸೆಕ್ಟರ್​ನಲ್ಲಿ ಅಷ್ಟೇನೂ ದೊಡ್ಡ ಮೊತ್ತದ ಸಂಬಳ ಕೊಡದ ಇನ್ಫೋಸಿಸ್ ಈಗ ಹೊಸ ಬಾರ್ ಸೆಟ್ ಮಾಡಿದೆ.

ಎಐ ಅಳವಡಿಕೆ ಹೆಚ್ಚಿಸಲು ಹಾಗೂ ಡಿಜಿಟಲ್ ಪ್ರತಿಭೆಗಳನ್ನು ಆಕರ್ಷಿಸಲು ಇನ್ಫೋಸಿಸ್ ತನ್ನ ಆರಂಭಿಕ ಹಂತದ ಸಂಬಳದ ಮಟ್ಟ ಹೆಚ್ಚಿಸಿರಬಹುದು. ಇನ್ಫೋಸಿಸ್ ಸೇರಿದಂತೆ ಹೆಚ್ಚಿನ ಐಟಿ ಕಂಪನಿಗಳು ಫ್ರೆಶರ್​ಗಳನ್ನು ನೇಮಕ ಮಾಡಿಕೊಳ್ಳಲು ಯೂನಿವರ್ಸಿಟಿ ಕ್ಯಾಂಪಸ್​ಗಳಲ್ಲಿ ಸಂದರ್ಶನ ನಡೆಸುತ್ತವೆ. ಆದರೆ, ಮನಿಕಂಟ್ರೋಲ್​ನಲ್ಲಿ ಗುರುವಾರ (ಡಿ. 25) ಬಂದ ವರದಿ ಪ್ರಕಾರ ಇನ್ಫೋಸಿಸ್ ಸಂಸ್ಥೆ ಆಫ್-ಕ್ಯಾಂಪಸ್ ನೇಮಕಾತಿ ಮಾಡಲು ಸಜ್ಜಾಗಿದೆ. ಅಂದರೆ, ಕಾಲೇಜು ಕ್ಯಾಂಪಸ್ಗಳಲ್ಲಿ ರೆಕ್ರ್ಯುಟ್ಮೆಂಟ್ ಡ್ರೈವ್ ಮಾಡದೇ ಹೋಗಬಹುದು.

ಇದನ್ನೂ ಓದಿ: ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣ ಎಷ್ಟು ಗೊತ್ತಾ? ಅನ್​ಕ್ಲೇಮ್ಡ್ ಡೆಪಾಸಿಟ್ ಮರಳಿಪಡೆಯುವುದು ಹೇಗೆ?

ಸ್ಪೆಷಲೈಸ್ಡ್ ಹುದ್ದೆಗಳಿಗೆ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳನ್ನು 7 ಲಕ್ಷ ರೂನಿಂದ 21 ಲಕ್ಷ ರೂವರೆಗಿನ ಸಂಬಳಕ್ಕೆ ನೇಮಕ ಮಾಡಿಕೊಳ್ಳಲು ಇನ್ಫೋಸಿಸ್ ಯೋಜಿಸಿದೆ. ಸದ್ಯ ಭಾರತದ ಬೇರಾವ ಐಟಿ ಕಂಪನಿಯೂ ಫ್ರೆಷರ್​ಗೆ 21 ಲಕ್ಷ ರೂ ಪ್ಯಾಕೇಜ್ ಕೊಡುತ್ತಿಲ್ಲ. ಕಳೆದ ಹಲವು ವರ್ಷಗಳಿಂದ ಐಟಿ ಸೆಕ್ಟರ್ನಲ್ಲಿ ಎಂಟ್ರಿ ಲೆವೆಲ್​ನವರಿಗೆ ಸಂಬಳವು ನಿಂತ ನೀರಂತಿದೆ.

ವಿವಿಧ ಹುದ್ದೆಗಳಿಗೆ ವಿವಿಧ ಮಟ್ಟದ ಸಂಬಳ

  • ಸ್ಪೆಷಲಿಸ್ಟ್ ಪ್ರೋಗ್ರಾಮರ್ ಎಲ್3 (ಟ್​ರೈನೀ): ವರ್ಷಕ್ಕೆ 21 ಲಕ್ಷ ರೂ ಸಂಬಳ
  • ಸ್ಪೆಷಲಿಸ್ಟ್ ಪ್ರೋಗ್ರಾಮರ್ ಎಲ್2 (ಟ್ರೈನೀ): 16 ಲಕ್ಷ ರೂ ಸಂಬಳ
  • ಸ್ಪೆಷಲಿಸ್ಟ್ ಪ್ರೋಗ್ರಾಮರ್ ಎಲ್1 (ಟ್ರೈನೀ): 11 ಲಕ್ಷ ರೂ ಸಂಬಳ
  • ಡಿಜಿಟಲ್ ಸ್ಪೆಷಲಿಸ್ಟ್ ಎಂಜಿನಿಯರ್ (ಟ್ರೈನೀ): 7 ಲಕ್ಷ ರೂ ಸಂಬಳ

ಭಾರತದ ಐಟಿ ಕ್ಷೇತ್ರದ ಕಂಪನಿಗಳಲ್ಲಿ ಉನ್ನತ ಮಟ್ಟದಲ್ಲಿ ಸಂಬಳ ಗಣನೀಯ ಹೆಚ್ಚಳವಾದರೆ, ಕೆಳ ಮಟ್ಟದಲ್ಲಿ ಹೆಚ್ಚಳ ಪ್ರಮಾಣ ಕಡಿಮೆ. ಸರಾಸರಿ ಸಿಇಒ ಸಂಬಳ ಹತ್ತು ವರ್ಷದಲ್ಲಿ ಬಹುತೇಕ ಹತ್ತು ಪಟ್ಟು ಹೆಚ್ಚಿದೆ. ಅದೇ ಹೊಸಬರಿಗೆ ಎಂಟ್ರಿ ಲೆವೆಲ್ ಸಂಬಳ ಹತ್ತು ವರ್ಷದಲ್ಲಿ ಏರಿಕೆ ಆಗಿರುವುದು ಶೇ. 45 ಮಾತ್ರ. 2012ರಲ್ಲಿ ಎಂಟ್ರಿಲ್ ಲೆವೆಲ್ ಸಂಬಳ 2.45 ಲಕ್ಷ ರೂ ಇತ್ತು. 2022ರಲ್ಲಿ ಇದು 3.55 ಲಕ್ಷ ರೂ ಇದೆ. ಇತ್ತೀಚೆಗೆ, ಟಿಸಿಎಸ್, ಎಚ್​ಸಿಎಲ್, ವಿಪ್ರೋ ಕಂಪನಿಗಳೂ ಹೆಚ್ಚಿನ ಸಂಬಳ ಕೊಡುತ್ತಿದೆ. ಈಗ ಇನ್ಫೋಸಿಸ್ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ.

ಇದನ್ನೂ ಓದಿ: ಬರಲಿವೆ ಹೊಸ ಏರ್ಲೈನ್ಸ್; ಶಂಖ್ ಏರ್ ಆಯ್ತು, ಈಗ ಅಲ್ ಹಿಂದ್ ಏರ್ ಮತ್ತು ಫ್ಲೈ ಎಕ್ಸ್​ಪ್ರೆಸ್​ಗೂ ಸಿಕ್ಕಿತು ಎನ್​ಒಸಿ

ಇನ್ಫೋಸಿಸ್ ಎಷ್ಟು ಹೊಸಬರನ್ನು ನೇಮಕ ಮಾಡಿಕೊಳ್ಳುತ್ತದೆ?

ಇನ್ಫೋಸಿಸ್ ಈ ಹಣಕಾಸು ವರ್ಷದಲ್ಲಿ 2025-26) 20,000 ಫ್ರೆಶರ್ಸ್ ಅನ್ನು ನೇಮಕ ಮಾಡಿಕೊಳ್ಳುವ ಗುರಿ ಹೊಂದಿದೆ. ಈಗಾಗಲೇ ಈ ವರ್ಷ 12,000 ಮಂದಿಯನ್ನು ರೆಕ್ರೂಟ್ ಮಾಡಿದೆ. ಮಾರ್ಚ್ 31ರಷ್ಟರಲ್ಲಿ ಇನ್ನಷ್ಟು 8,000 ಮಂದಿಯನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಯುವಕನ ಕೈ ಹಿಡಿದ ವಾಕಿಂಗ್ ಕಾಫಿ ಶಾಪ್, ವೈರಲ್ ಆಯ್ತು ದೃಶ್ಯ – Kannada News | A young man who makes coffee and serves it to customers as he walks

ಬದುಕೇ (life) ಹಾಗೆ, ಮೂರು ಹೊತ್ತಿನ ತುತ್ತಿಗಾಗಿ ಒಬ್ಬರದ್ದು ಒಂದೊಂದು ರೀತಿಯ ಹೋರಾಟ. ಕೆಲವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸಿದರೆ, ಇನ್ನು ಕೆಲವರು ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡು ಅದರಲ್ಲಿ ಬರುವ ಹಣವನ್ನು ಜೀವನಕ್ಕಾಗಿ ನೆಚ್ಚಿಕೊಳ್ಳುತ್ತಾರೆ. ಆದರೆ ಈ ಯುವಕ (young boy) ತನ್ನ ಬುದ್ದಿವಂತಿಕೆಯನ್ನು ಬಳಸಿಕೊಂಡಿದ್ದಾನೆ. ಗೂಡಂಗಡಿ ಇಟ್ಟುಕೊಳ್ಳದೇ, ನಡೆದುಕೊಂಡು ಹೋಗಿಯೇ ಕಾಫಿ ತಯಾರಿಸಿ ಗ್ರಾಹಕರಿಗೆ ನೀಡುವ ಮೂಲಕ ತನ್ನ ಅಲ್ಪ ದುಡಿಮೆಯಲ್ಲಿ ಖುಷಿ ಕಾಣುತ್ತಿದ್ದಾನೆ. ಈ ಯುವಕನ ವಿಡಿಯೋ ವೈರಲ್ ಆಗುತ್ತಿದ್ದಂತೆ ಸರಳವಾದ ಉಪಾಯವನ್ನು ಮೆಚ್ಚಿಕೊಂಡಿದ್ದಾರೆ.

Sourceofkhaddo ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವಕನು ಲೈಫ್ ಜಾಕೆಟ್ ಮಾದರಿಯ ಜಾಕೆಟ್‌ ಧರಿಸಿದ್ದಾನೆ. ಈ ಜಾಕೆಟ್‌ನಲ್ಲಿ ಕಾಫಿ ಮಾಡಲು ಬೇಕಾದ ಕಾಫಿ ಪುಡಿ, ಸಕ್ಕರೆ, ಹಾಲು ಸೇರಿದಂತೆ ಪೇಪರ್ ಗ್ಲಾಸ್‌ನ್ನು ಇಟ್ಟುಕೊಂಡಿರುವುದನ್ನು ನೋಡಬಹುದು. ಓಡಾಡಿಕೊಂಡೇ ಕಾಫಿ ತಯಾರಿಸಿ ಗ್ರಾಹಕರಿಗೆ ನೀಡುತ್ತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕೋವಿಡ್ ತಂದ ಸಂಕಷ್ಟ; ರ‍್ಯಾಪಿಡೋ ಚಾಲಕನಾಗಿ ಬದುಕು ಕಟ್ಟಿಕೊಂಡ ಉದ್ಯಮಿ

ಈ ವಿಡಿಯೋ 6.4 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಕೆಲಸ ಇಲ್ಲವೆಂದು ಕೂರುವ ಬದಲು, ಈ ಸ್ವಂತ ದುಡಿಮೆ ಬದುಕಿಗೆ ನೆರವಾಗುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಕಾಫಿ ತಯಾರಿಸುವ ರೀತಿ ನೋಡಿದ್ರೆ ಕಾಫಿ ಕುಡಿಯಬೇಕೆನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಿಜಕ್ಕೂ ಒಳ್ಳೆಯ ಐಡಿಯಾ, ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ – Kannada News | Panic Aboard Varanasi Lucknow Intercity After Passenger Turns Violent

ಅಮೇಥಿ, ಡಿಸೆಂಬರ್ 26: ಬನಾರಸ್-ಲಕ್ನೋ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಪ್ರಯಾಣಿಕರೊಬ್ಬರು ಘಟನೆಯ ವಿಡಿಯೋವನ್ನು ರೆಕಾರ್ಡ್​ ಮಾಡಿದ್ದಾರೆ.ಹತ್ತಿರದ ಪ್ರಯಾಣಿಕರು ಭಯದಿಂದ ನೋಡುತ್ತಿರುವಾಗ ಯುವಕರು ಪರಸ್ಪರ ಒದೆಯುವುದು ಮತ್ತು ಗುದ್ದಾಡುವುದನ್ನು ತೋರಿಸಲಾಗಿದೆ. ರೈಲು ಹತ್ತುವುದು ಮತ್ತು ಸೀಟು ಲಭ್ಯತೆಯ ಬಗ್ಗೆ ಸಂಘರ್ಷ ಪ್ರಾರಂಭವಾಯಿತು ಎಂದು ವರದಿಯಾಗಿದೆ, ಇದು ಬೇಗನೆ ದೈಹಿಕ ಹಿಂಸೆಗೆ ತಿರುಗಿತು.

ಘಟನೆ ನಡೆದಾಗ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಇನ್ನೂ ಅಮೇಥಿ ರೈಲು ನಿಲ್ದಾಣದಲ್ಲಿತ್ತು, ಇದು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿತು. ಲಿಖಿತ ದೂರಿನ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರಿ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version